ಜೋಸೆಫ್ ಎರ್ಲಾಂಗರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: ಎರ್ಲಾಂಗರ್, ಜೋಸೆಫ್: 1874-1965. ನರಗಳ ನಿಜಗೆಲಸಗಳ ವ್ಯತ್ಯಾಸ ತೋರಿಕೆಯ ಕೃತಿಗಾಗಿ...
( ಯಾವುದೇ ವ್ಯತ್ಯಾಸವಿಲ್ಲ )

೦೫:೧೮, ೮ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ

ಎರ್ಲಾಂಗರ್, ಜೋಸೆಫ್: 1874-1965. ನರಗಳ ನಿಜಗೆಲಸಗಳ ವ್ಯತ್ಯಾಸ ತೋರಿಕೆಯ ಕೃತಿಗಾಗಿ ಗ್ಯಾಸರ್ನೊಂದಿಗೆ ಕ್ಯಾಥೋಡ್ರೇ ಆಸಿಲೋಗ್ರಾಫ್ ಅಳವಡಿಕೆ ಗಾಗಿ (ನೋಡಿ- ಗ್ಯಾಸರ್,-ಹರ್ಬರ್ಟ್-ಸ್ಪೆನ್ಸರ್) ನೊಬೆಲ್ ಬಹುಮಾನ ಪಡೆದ (1944) ಅಂಗಕ್ರಿಯಾ ವಿಜ್ಞಾನಿ. ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಹುಟ್ಟಿ, ಜಾನ್ ಹಾಪ್ಕಿನ್ಸ್‌ ವಿಶ್ವವಿದ್ಯಾಲಯದ ವೈದ್ಯಶಾಲೆಯಲ್ಲಿ ಎಂ.ಡಿ ಪದವೀಧರನಾಗಿ (1899) ಅಂಗಕ್ರಿಯಾ ಪಟು ವಿಲಿಯಂ ಹೊವೆಲ್ನೊಂದಿಗೆ ಸೇರಿದ. ರಕ್ತದ ಒತ್ತಡವನ್ನು ಗೆರೆಚಿತ್ರದಲ್ಲಿ ಗುರುತಿಸುವುದನ್ನೂ ಗುಂಡಿಗೆಯಲ್ಲಿ ನರಗಳಲ್ಲಿನ ಸಾಗಣೆಯನ್ನೂ ಕಂಡುಹಿಡಿದು ಬೆಳಕಿಗೆ ಬಂದ. 1906ವರೆಗೆ ಜಾನ್ಸ್‌ ಹಾಪ್ಕಿನ್ಸ್‌ ಆಸ್ಪತ್ರೆಯ ವೈದ್ಯಶಾಲೆಯಲ್ಲಿ ಕೆಲಸಮಾಡಿ, ಮುಂದೆ ಹೊಸದಾಗಿ ಸ್ಥಾಪಿತವಾದ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದ ವೈದ್ಯಶಾಲೆಯ ಅಂಗಕ್ರಿಯಾ ಪ್ರಾಧ್ಯಾಪಕನಾಗಿ ನೇಮಕಗೊಂಡ ಮುಂದೆ 1910ರಿಂದ ಮೊದಲಾಗಿ 1946ರಲ್ಲಿ ನಿವೃತ್ತನಾಗುವ ತನಕ ವಾಷಿಂಗ್ಟನ್ ವಿಶ್ವವಿದ್ಯಾಲಯಗಳಲ್ಲೂ ಅಂಗಕ್ರಿಯಾವಿಜ್ಞಾನದ ಪ್ರಾಧ್ಯಾಪಕನಾಗಿದ್ದ. ನಾಡಿಯನ್ನು ಕಿವಿಯಿಂದಾಲಿಸಿ ರಕ್ತದ ಒತ್ತಡವನ್ನು ತೋಳಿನಲ್ಲಿ ಅಳೆವ ವಿಧಾನಗಳಲ್ಲಿ ಸದ್ದು ಹುಟ್ಟುವುದರ ತಂತ್ರವನ್ನು ಆಳವಾಗಿ ಪರಿಶೋಧಿಸಿ, ರಕ್ತ ಪರಿಚಲನೆಯ ಅಭ್ಯಾಸದಲ್ಲಿ ಆಸಕ್ತನಾಗಿದ್ದ. ವಿದ್ಯುನ್ಮಾನ (ಎಲೆಕ್ಟ್ರಾನಿಕ್) ವಿಧಾನಗಳು ಬೆಳಕಿಗೆ ಬಂದುದರಿಂದ ನರಗಳ ಕೆಲಸಗಳಲ್ಲಿ ವಿಶೇಷ ಆಸಕ್ತನಾಗಿದ್ದುದರಿಂದಲೇ ನೊಬೆಲ್ ಬಹುಮಾನ ಬಂದದ್ದು. ಚೋದಿಸುವಷ್ಟು ಬಲವಿಲ್ಲದ ಆವೇಗ (ಸ್ಟಿಮುಲಸ್) ಬಂದಾಗ ನರಗಳಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸಿ ವಿವರಿಸಿದ. ಮಜ್ಜಿಕಗೂಡಿನ (ಮಯಲಿನೇಟೆಡ್) ನರ ತಂತುಗಳಲ್ಲಿ ಆವೇಗದ ಸಾಗಣೆ ಒಂದೇ ಸಮನಾಗಿರದೆ ಹೆಜ್ಜೆ ಹೆಜ್ಜೆಗಳಲ್ಲಿರುವುವೆಂಬ ಇಂದಿನ ಕಲ್ಪನೆಗೆ ಮೂಲವಾದ ಮೊತ್ತಮೊದಲ ಪ್ರಯೋಗಗಳನ್ನು ಎರ್ಲಾಂಗ್ ನಡೆಸಿದ.

ಎರ್ಲಾಂಗರ್ನ ಸಾಧನೆಗಾಗಿ ಕ್ಯಾಲಿಫೋರ್ನಿಯ ವಿಸ್ಕಾನ್ಸಿನ್, ಪೆನ್ಸಿಲ್ವೇನಿಯ ಮತ್ತು ಮಿಚಗನ್ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಿದವು. (ಡಿ.ಎಸ್.ಎನ್.)