ಬಾಲಕಾರ್ಮಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು bot: removed {{link FA}}, now given by wikidata.
೧೮೩ ನೇ ಸಾಲು: ೧೮೩ ನೇ ಸಾಲು:
* ಆಗೆಂದ್ರ ಭುಕುಥ್ (2008) 'ದೆಫೈನಿಂಗ್ ಚೈಲ್ಡ್ ಲೇಬರ್: ಎ ಕಾನ್ಟ್ರೋವೆರ್ಸಿಯಲ್ ಡಿಬೇಟ್' [http://www.tandf.co.uk/journals/titles/09614524.asp ''ಡೆವಲಪ್ಮೆಂಟ್ ಇನ್ ಪ್ರಾಕ್ಟೀಸ್'' ] 18, 385-394
* ಆಗೆಂದ್ರ ಭುಕುಥ್ (2008) 'ದೆಫೈನಿಂಗ್ ಚೈಲ್ಡ್ ಲೇಬರ್: ಎ ಕಾನ್ಟ್ರೋವೆರ್ಸಿಯಲ್ ಡಿಬೇಟ್' [http://www.tandf.co.uk/journals/titles/09614524.asp ''ಡೆವಲಪ್ಮೆಂಟ್ ಇನ್ ಪ್ರಾಕ್ಟೀಸ್'' ] 18, 385-394
* ಮಾರ್ಟಿನ್ ರವಲ್ಲಿಯನ್ ಅಂಡ್ ಕ್ವೇನ್ಟಿನ್ ವೊಡೊನ್ (2000) 'ಡಸ್ ಚೈಲ್ಡ್ ಲೇಬರ್ ಡಿಸ್ಪ್ಲೇಸ್ ಸ್ಕೂಲಿಂಗ್? ಎವಿಡೆನ್ಸ್ ಆನ್ ಬಿಹೇವಿಯೋರಲ್ ರೆಸ್ಪಾನ್ಸೆಸ್ ಟು ಆನ್ ಎನ್ರೋಲ್ಮೆಂಟ್ ಸಬ್ಸಿಡಿ' [http://www.wiley.com/bw/journal.asp?ref=0013-0133 ''ಎಕನಾಮಿಕ್ ಜರ್ನಲ್'' ] 110, C158-C175
* ಮಾರ್ಟಿನ್ ರವಲ್ಲಿಯನ್ ಅಂಡ್ ಕ್ವೇನ್ಟಿನ್ ವೊಡೊನ್ (2000) 'ಡಸ್ ಚೈಲ್ಡ್ ಲೇಬರ್ ಡಿಸ್ಪ್ಲೇಸ್ ಸ್ಕೂಲಿಂಗ್? ಎವಿಡೆನ್ಸ್ ಆನ್ ಬಿಹೇವಿಯೋರಲ್ ರೆಸ್ಪಾನ್ಸೆಸ್ ಟು ಆನ್ ಎನ್ರೋಲ್ಮೆಂಟ್ ಸಬ್ಸಿಡಿ' [http://www.wiley.com/bw/journal.asp?ref=0013-0133 ''ಎಕನಾಮಿಕ್ ಜರ್ನಲ್'' ] 110, C158-C175




== ಹೊರಗಿನ ಕೊಂಡಿಗಳು ==
== ಹೊರಗಿನ ಕೊಂಡಿಗಳು ==

೧೪:೩೮, ೨೪ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ

19 ಶತಮಾನದ ಪೂರ್ವಾರ್ಧದಲ್ಲಿ ಬ್ರಿಟನ್ ನಲ್ಲಿ ಬಾಲಕಾರ್ಮಿಕರ ವಿರುದ್ಧದ ಮೊದಲನೆಯ ಸಾಮಾನ್ಯ ಕಾಯಿದೆ ಮತ್ತು ಕಾರ್ಖಾನೆಗಳ ಕಾಯಿದೆಯನ್ನು ಜಾರಿಗೊಳಿಸಲಾಯಿತು.9 ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಕೆಲಸ ಮಾಡಲು ಬಿಡುತ್ತಿರಲ್ಲಿಲ್ಲ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ದಿನವೊಂದಕ್ಕೆ ದುಡಿಮೆಯನ್ನು 12 ಘಂಟೆಗಳಿಗೆ ಮಿತಿಗೊಳಿಸಲಾಯಿತು.[೧]


ಮಕ್ಕಳ ದಿನನಿತ್ಯದ ಹಾಗು ದೀರ್ಘಾವಧಿ ದುಡಿಮೆಯ ಉದ್ಯೋಗವನ್ನು ಬಾಲ ಕಾರ್ಮಿಕ (ಯು. ಯಸ್ ಬಾಲ ಕಾರ್ಮಿಕ ) ಎಂದು ಕರೆಯಲಾಗುತ್ತದೆ. ಈ ಅಭ್ಯಾಸವನ್ನು ಹಲವು ಅಂತರರಾಷ್ಟ್ರೀಯ ಸಂಘಗಳು ಶೋಷಣೀಯ ಎಂದು ಪರಿಗಣಿಸಿವೆ ಮತ್ತು ಹಲವಾರು ದೇಶಗಳಲ್ಲಿ ಈ ಪದ್ಧತಿ ಕಾಯಿದೆಗೆ ವಿರೋಧವಾದದ್ದು. ಇತಿಹಾಸದಲ್ಲಿ ಬಾಲ ಕಾರ್ಮಿಕ ಪದ್ದತಿಯು ವಿವಿಧ ಅರ್ಥಗಳಲ್ಲಿ ಉಪಯೋಗಿಸಲ್ಪಟ್ಟಿದೆ, ವಿಶ್ವಾದ್ಯಂತ ಶೈಕ್ಷಣಿಕ ಪದ್ದತಿಯ ಆಗಮನದಿಂದ, ಕೈಗಾರಿಕಾ ಕ್ರಾಂತಿಯಲ್ಲಿ ದುಡಿಮೆಯ ಸ್ಥಿತಿಯ ಬದಲಾವಣೆಯಿಂದ, ಮತ್ತು ಕಾರ್ಮಿಕರ ಹಾಗು ಮಕ್ಕಳ ಹಕ್ಕುಗಳುಎಂಬ ಕಲ್ಪನೆಯ ಉದಯದಿಂದ, ಈ ಪದ್ದತಿಯು ಸಾರ್ವಜನಿಕ ವಿವಾದಕ್ಕೆ ಒಳಪಟ್ಟಿತು.


ಕೆಲವು ಮುಂದುವರಿದ ದೇಶಗಳಲ್ಲಿ, ನಿಗದಿತ ವಯಸ್ಸಿಗಿಂತ ಕೆಳ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶೋಷಣೀಯ ಅಥವಾ ಸಮಂಜಸವಲ್ಲ ಎಂದು ಪರಿಗಣಿಸಿವೆ.(ಮನೆಗೆಲಸ ಅಥವಾ ಶಾಲೆಗೆ ಸಂಭಂಧಿಸಿದ ಕೆಲಸಗಳನ್ನು ಹೊರತುಪಡಿಸಿ).[೨] ಉದ್ಯೋಗಿಯೊಬ್ಬನು ನಿಗದಿತ ಕೆಳವಯಸ್ಸಿನ ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ಳುವುದನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಈ ನಿಗದಿತ ಕಿರಿ ವಯಸ್ಸು ದೇಶ ಮತ್ತು ಕೆಲಸದ ವಿವಿಧ ಮಾದರಿಯ ಮೇಲೆ ಅವಲಂಬಿತವಾಗಿದೆ. 1973ರ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕಿರಿ ವಯಸ್ಸಿನ ಪದ್ಧತಿಯನ್ನು, ಅಂದರೆ ಸುಮಾರು 14ರಿಂದ 16ರ ವಯಸ್ಸಿನ ಒಳಗಿನ ಮಕ್ಕಳನ್ನು ಸ್ವಾಧೀನಕ್ಕೆ ಒಳಪಡಿಸಿಕೊಳ್ಳಬಹುದೆಂಬ ನೀತಿಯನ್ನು ಅಮೆರಿಕಾವು ಅಳವಡಿಸಿಕೊಂಡಿದೆ. ಅಮೆರಿಕಾದ ಬಾಲ ಕಾರ್ಮಿಕ ಕಾಯಿದೆಗಳು, ಪೋಷಕರ ಸಹಕಾರವಿಲ್ಲದೆ ಮತ್ತು ಯಾವುದೇ ನಿರ್ಬಂಧವಿಲ್ಲದೆ ಉದ್ಯಮದಲ್ಲಿ ದುಡಿಯುವ ಕಿರಿ ನಿಗದಿತ ವಯಸ್ಸನ್ನು 16ಎಂದು ಪರಿಗಣಿಸಿವೆ.


ವಿಶ್ವ ಬ್ಯಾಂಕ್[೩] ವರದಿಯ ಪ್ರಕಾರ, ಪ್ರಪಂಚದಲ್ಲಿ 1960ರಿಂದ 2003ರ ಮಧ್ಯದಲ್ಲಿ ಬಾಲ ಕಾರ್ಮಿಕ ಘಟನೆಗಳು ಶೇಕಡಾ 25ರಿಂದ 10ಕ್ಕೆ ಇಳಿದಿವೆ.


ಐತಿಹಾಸಿಕ

ಬಾಲ ಕಾರ್ಮಿಕ, ನ್ಯೂ ಜರ್ಸಿ, 1910


ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಮಕ್ಕಳನ್ನು, ಅತ್ಯಂತ ಕಿರಿ ವಯಸ್ಸಾದ 4 ವರ್ಷದವರನ್ನೂ, ಕಾರ್ಖಾನೆಗಳ ಅಪಾಯಕಾರಿ ಹಾಗು ಮಾರಕ ದುಡಿಮೆಯ ಸ್ಥಿತಿಗಳಲ್ಲಿ[೪] ದುಡಿಸಿಕೊಳ್ಳಲಾಗಿತ್ತು. ಈ ತಿಳುವಳಿಕೆಯ ಆಧಾರದಮೇಲೆ ಮಕ್ಕಳನ್ನು ಕಾರ್ಮಿಕರನ್ನಾಗಿ ಉಪಯೋಗಿಸಿಕೊಳ್ಳುವುದನ್ನು, ಕೆಲವು ಶ್ರೀಮಂತ ರಾಷ್ಟ್ರಗಳು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ಬಹಿಷ್ಕರಿಸಿವೆ, ಹಾಗಿದ್ದಾಗ್ಯೂ ಕೆಲವು ಬಡ ರಾಷ್ಟ್ರಗಳು ಬಾಲ ಕಾರ್ಮಿಕ ಪದ್ದತಿಯನ್ನು ಸಹಿಸಿದೆ ಮತ್ತು ಒಪ್ಪಿಕೊಂಡಿದೆ.


ಕಾರ್ಖಾನೆಗಳಲ್ಲಿ ಮತ್ತು ಗಣಿಗಳಲ್ಲಿ ಚಿಕ್ಕ ಮಕ್ಕಳನ್ನು, ಚಿಮಣಿಯನ್ನು ಶುದ್ಧೀಕರಿಸುವ[೫] ಕೆಲಸಗಳಲ್ಲಿ ತೊಡಗಿಸಿದ್ದರಿಂದ ವಿಕ್ಟೋರಿಯಾ ಯುಗವು ಅಪಕೀರ್ತಿಗೆ ಒಳಗಾಯಿತು. ಕೈಗಾರಿಕಾ ಕ್ರಾಂತಿಯ ಕಾಲದಲ್ಲಿನ ಆರ್ಥಿಕ ಸಂಕಷ್ಟದಿಂದಾಗಿ ಬಾಲ ಕಾರ್ಮಿಕ ಪದ್ದತಿಯು ಪ್ರಮುಖ ಪಾತ್ರವನ್ನು ವಹಿಸಿತು, ಉದಾಹರಣೆಗಾಗಿ ಚಾರ್ಲ್ಸ್ ಡಿಕೆನ್ಸ್ ತನ್ನ ಕುಟುಂಬದ ಸಾಲದ ಭಾದೆಯಿಂದಾಗಿ ತನ್ನ 12ನೇ ವಯಸ್ಸಿನಲ್ಲಿ ಬ್ಲ್ಯಾಕಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದನು. ಬಡ ಕುಟುಂಬದಲ್ಲಿನ ಮಕ್ಕಳು ಕುಟುಂಬದ ಖರ್ಚು ನಿರ್ವಹಣೆಗಾಗಿ ಸಹಾಯ ಮಾದಬೇಕಾಗಿದ್ದರಿಂದ, ಅಪಾಯಕಾರಿ ಕೆಲಸಗಳಲ್ಲಿ ದೀರ್ಘಾವಧಿವರೆಗೆ ಕಡಿಮೆ ವೇತನಕ್ಕಾಗಿ[೬] ದುಡಿಯುತ್ತಿದ್ದರು.


1909 ರಲ್ಲಿ ನ್ಯೂ ಯಾರ್ಕ್ ಸಿಟಿಯ ಲೇಬರ್ ಡೇ ಪರೇಡ್ ನಲ್ಲಿ ಇಬ್ಬರು ಹುಡುಗಿಯರು ಬಾಲಕಾರ್ಮಿಕ ಪದ್ದತಿಯನ್ನು ವಿರೋಧಿಸಿದರು (ಅದನ್ನು ಮಕ್ಕಳ ಗುಲಾಮಗಿರಿ ಎಂದು ಕರೆದು).


ಚಿಮಣಿಯನ್ನು ಶುದ್ದೀಕರಿಸಲು ಚುರುಕಾದ ಹುಡುಗರನ್ನು; ಯಂತ್ರಗಳ ಕೆಳಗಿನಿಂದ ಹತ್ತಿಯ ಉಂಡೆಗಳನ್ನು ತರಲು ಚಿಕ್ಕ ಮಕ್ಕಳನ್ನು; ಮತ್ತು ಕಲ್ಲಿದ್ದಲು ಗಣಿಗಳಲ್ಲಿ ವಯಸ್ಕರಿಗೆ ತೆವಳಿ ಹೋಗಲು ಸಾಧ್ಯವಾಗದ, ಕಿರಿದಾದ ಸುರಂಗ ಮಾರ್ಗಗಳಲ್ಲಿ ತೆವಳಿ ಕೆಲಸ ಮಾಡಲು ಮಕ್ಕಳನ್ನು ಉಪಯೋಗಿಸಿಕೊಳ್ಳುತ್ತಿದ್ದರು. ಮಕ್ಕಳು ಸಂದೇಶವಾಹಕರಾಗಿ, ಗುಡಿಸುವವರಾಗಿ, ಬೂಟ್ ಪಾಲಿಶ್ ಮಾಡುವವರಾಗಿ, ಅಥವಾ ಹೂವು, ಕಡ್ಡಿ ಪೆಟ್ಟಿಗೆ ಮತ್ತು ಇತರೆ ಚಿಲ್ಲರೆ ಸರಕುಗಳನ್ನು[೬] ಮಾರುವ ಕೆಲಸವನ್ನು ಮಾಡುತ್ತಿದ್ದರು. ಗೌರವಾನ್ವಿತ ವೃತ್ತಿಗಳಾದ ಮನೆಯಾಳು ಅಥವಾ ಕಟ್ಟಡದ ನಿರ್ಮಾಣಗಳಲ್ಲಿ ಕೆಲವು ಮಕ್ಕಳು ಉದ್ಯೋಗಾರ್ಥಿಗಳಾಗಿ ಕೆಲಸಕ್ಕೆ ಸೇರಿದರು. (18ನೇ ಶತಮಾನದ ಮಧ್ಯದಲ್ಲಿ ಲಂಡನ್ನಿನಲ್ಲಿ ಸುಮಾರು 120,000ಕ್ಕೂ ಮೇಲ್ಪಟ್ಟು ಮನೆ ಕೆಲಸದಾಳುಗಳಿದ್ದರು). ಕೆಲಸದ ಅವಧಿಯು ದೀರ್ಘವಾಗಿತ್ತು: ಕಟ್ಟಡ ನಿರ್ಮಾಣದವರು ಬೇಸಿಗೆಯಲ್ಲಿ ವಾರಕ್ಕೆ 64 ತಾಸು ಮತ್ತು ಚಳಿಗಾಲದಲ್ಲಿ 52 ತಾಸು ದುಡಿದರೆ, ಮನೆಕೆಲಸದಾಳುಗಳು ವಾರಕ್ಕೆ 80 ತಾಸುಗಳಷ್ಟು ದುಡಿಯುತ್ತಿದ್ದರು.


ಬರ್ಟ್ರಾಂಡ್ ರಸ್ಸಲ್ ಹೀಗೆ ಬರೆಯುತ್ತಾರೆ:[೭]

The industrial revolution caused unspeakable misery both on England and in America. ... In the Lancashire cotton mills (from which Marx and Engels derived their livelihood), children worked from 12 to 16 hours a day; they often began working at the age of six or seven. Children had to be beaten to keep them from falling asleep while at work; in spite of this, many failed to keep awake and were mutilated or killed. Parents had to submit to the infliction of these atrocities upon their children, because they themselves were in a desperate plight. Craftsmen had been thrown out of work by the machines; rural labourers were compelled to migrate to the towns by the Enclosure Acts, which used Parliament to make landowners richer by making peasants destitute; trade unions were illegal until 1824; the government employed agents provocateurs to try to get revolutionary sentiments out of wage-earners, who were then deported or hanged. Such was the first effect of machinery in England.


ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಮಕ್ಕಳು ವೇಶ್ಯಾ ವೃತ್ತಿಯಲ್ಲೂ[೮] ದುಡಿಯುತ್ತಿದ್ಧರು. ಮಕ್ಕಳು 3ನೇ ವಯಸ್ಸಿನಲ್ಲಿರುವಾಗಲೇ ಅವರನ್ನು ಕೆಲಸಕ್ಕೆ ಹಾಕಲಾಗುತ್ತಿತ್ತು. ಕಲ್ಲಿದ್ದಲು ಗಣಿಗಳಲ್ಲಿ ಮಕ್ಕಳು ತಮ್ಮ 5ನೇ ವಯಸ್ಸಿಗೆ ದುಡಿಯಲು ಪ್ರಾರಂಭಿಸಿ, ಸಾಮಾನ್ಯವಾಗಿ ತಮ್ಮ 25ನೇ ವಯಸ್ಸಿನಲ್ಲಿ ಮರಣಹೊಂದುತ್ತಿದ್ದರು. ಕೆಲವು ಮಕ್ಕಳು (ಮತ್ತು ವಯಸ್ಕರು) ದಿನಕ್ಕೆ 16 ಗಂಟೆಗಳಕಾಲ ದುಡಿಯುತ್ತಿದ್ದರು. 1802 ಮತ್ತ್ತು1819ರ ಅವಧಿಯ ವೇಳೆಗಾಗಲೇ ಕಾರ್ಖಾನೆ ಕಾಯಿದೆಗಳು ಕಾರ್ಖಾನೆಗಳಲ್ಲಿ ಮತ್ತು ಹತ್ತಿಗಿರಣಿಗಳಲ್ಲಿ ದಬ್ಬಾಳಿಕೆಗೊಳಗಾದ ಬಡಮಕ್ಕಳ ಕೆಲಸದ ಅವಧಿಯನ್ನು ದಿನಕ್ಕೆ 12 ಗಂಟೆಗಳಿಗೆ ಮಿತಿಗೊಳಿಸುವುದನ್ನು ಜಾರಿಗೆ ತಂದಿತು. ಈ ಕಾಯಿದೆಗಳು ಹೆಚ್ಚಾಗಿ ಪರಿಣಾಮಕಾರಿಯಾಗಲಿಲ್ಲ. ಆಮೂಲಾಗ್ರ ಪ್ರತಿರೋಧದಿಂದಾಗಿ, ಉದಾಹರಣೆಗೆ 1831 ರ "ಶಾರ್ಟ್ ಟೈಮ್ ಕಮಿಟಿ", 1833ರಲ್ಲಿ ರಾಯಲ್ ಕಮಿಷನ್ ನ ಶಿಫಾರಸ್ಸಿನ ಮೇರೆಗೆ, 11-18ರ ಒಳಗಿನ ಮಕ್ಕಳು ದಿನಕ್ಕೆ ಗರಿಷ್ಟ 12 ತಾಸುಗಳ ಕಾಲ ಕೆಲಸ ಮಾಡಬೇಕು, 9-11ರ ಒಳಗಿನ ಮಕ್ಕಳು ಗರಿಷ್ಟ 8 ಘಂಟೆಗಳ ಕಾಲ ದುಡಿಯಬೇಕು ಮತ್ತು 9 ವರ್ಷದ ಒಳಗಿನ ಮಕ್ಕಳು ಕೆಲಸವನ್ನೇ ಮಾಡಬಾರದೆಂಬ ಕಾಯಿದೆಯನ್ನು ಜಾರಿಗೊಳಿಸಿತು. ಈ ಕಾಯಿದೆಯು ಕೇವಲ ಬಟ್ಟೆ ಕಾರ್ಖಾನೆಗಳಿಗೆ ಮಾತ್ರ ಅನ್ವಯವಾಗಿದ್ದು, ಮುಂದೆ ಮತ್ತೆ ಪ್ರತಿರೋಧದಿಂದಾಗಿ, 1847ರ ಮತ್ತೊಂದು ಕಾಯಿದೆಯ ಪ್ರಕಾರ ಮಕ್ಕಳು ಮತ್ತು ವಯಸ್ಕರಿಗೆ ದಿನಕ್ಕೆ 10 ಘಂಟೆಗಳ ಕಾಲ ದುಡಿಯುವುದನ್ನು ಮಿತಿಗೊಳಿಸಲಾಯಿತು.[೮]


1900ರ ವೇಳೆಗೆ, 1.7 ಮಿಲಿಯನ್ ಬಾಲಕಾರ್ಮಿಕರುಗಳು ತಮ್ಮ 15ನೇ[೯] ವಯಸ್ಸಿಗಿಂತ ಮುಂಚೆಯೇ ಅಮೆರಿಕಾದ ಕಾರ್ಖಾನೆಗಳಲ್ಲಿ ಇದ್ದರೆಂದು ವರದಿಯಾಗಿದೆ. 1910ರಲ್ಲಿ 15 ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಕಾರ್ಖಾನೆಗಳಲ್ಲಿ ಕೂಲಿಗಾಗಿ ದುಡಿಯುವವರ ಸಂಖ್ಯೆಯು 2 ಮಿಲಿಯನ್ ಗೆ ಏರಿತು.[೧೦]


ಇತ್ತೀಚಿನ ದಿನ

2006ರಲ್ಲಿ ವಿಯಟ್ನಾಂ ನ ಹೋ ಚಿ ಮಿನ್ಹ್ ಸಿಟಿಯಲ್ಲಿ ಚಿಕ್ಕ ಹುಡುಗನೊಬ್ಬ ಕಸಗಳನ್ನು ಪುನರಾವರ್ತಿಸುತ್ತಿದ್ದನು.


ಬಾಲ ಕಾರ್ಮಿಕ ಪದ್ಧತಿಯು ಪ್ರಪಂಚದ ಕೆಲವು ಭಾಗಗಳಲ್ಲಿ ಇಂದಿಗೂ ಸಾಮಾನ್ಯವಾಗಿದೆ, ಅವುಗಳಲ್ಲಿ ಕಾರ್ಖಾನೆ ಕೆಲಸ, ಗಣಿಗಾರಿಕೆ,[೧೧] ವೇಶ್ಯಾವೃತ್ತಿ, ಕಲ್ಲು ಒಡೆಯುವ ಕೆಲಸ, ಕೃಷಿ-ಬೇಸಾಯ, ವ್ಯವಹಾರಗಳಲ್ಲಿ ಪೋಷಕರಿಗೆ ಸಹಾಯ ಮಾಡುವುದು, ತಮ್ಮದೇ ಸ್ವಂತ ಸಣ್ಣ ವ್ಯವಹಾರವನ್ನು ಹೊಂದಿರುವುದು (ಉದಾಹರಣೆಗಾಗಿ ಆಹಾರ ಪದಾರ್ಥಗಳನ್ನು ಮಾರುವುದು), ಅಥವಾ ವಿಲಕ್ಷಣ ಕೆಲಸಗಳನ್ನು ಮಾಡುವುದೂ ಸಹ ಸೇರಿದೆ. ಕೆಲವು ಮಕ್ಕಳು ಪ್ರವಾಸಿಗರಿಗೆ ಮಾರ್ಗದರ್ಶಿಗಳಾಗಿ, ಕೆಲವೊಮ್ಮೆ ಇದರ ಜೊತೆಗೆ ಅಂಗಡಿ ಮತ್ತು ಉಪಹಾರ ಗೃಹಗಳಗಳಿಗೆ ಕೊಂಡೊಯ್ದು ವ್ಯವಹಾರಗಳಲ್ಲಿ ಸಹಕರಿಸುತ್ತಾರೆ. (ಅಲ್ಲಿ ಅವರು ಸೇವಕರಾಗಿಯೂ ದುಡಿಯುತ್ತಿರಬಹುದು). ಕೆಲವು ಮಕ್ಕಳನ್ನು ಬಲಾತ್ಕರಿಸಿ ಒಂದೇ ಮಾದರಿಯ ತ್ರಾಸದಾಯಕ ಕೆಲಸವನ್ನು ಮಾಡಿಸುತ್ತಿದ್ದರು: ಅವುಗಳಲ್ಲಿ ಪೆಟ್ಟಿಗೆಗಳನ್ನು ಜೋಡಿಸುವುದು, ಬೂಟುಗಳಿಗೆ ಪಾಲಿಶ್ ಮಾಡುವುದು, ಅಂಗಡಿಯ ಅವಶ್ಯಕ ವಸ್ತುಗಳನ್ನು ಶೇಖರಿಸಿಡುವುದು ಅಥವಾ ಶುದ್ಧೀಕರಿಸುವುದು. ಆದಾಗ್ಯೂ, ಕಾರ್ಖಾನೆಗಳು ಮತ್ತು ಸ್ವೆಟ್ ಶಾಪ್ಸ್ ಗಳಿಗಿಂತ ಹೆಚ್ಚಾಗಿ ಬಾಲಕಾರ್ಮಿಕ ಪದ್ದತಿಯು ವಿದ್ಯುಕ್ತವಲ್ಲದ ಸ್ಥಳಗಳಲ್ಲಿ ಕಂಡುಬರುತ್ತದೆ, ಅದೆಂದರೆ "ಬೀದಿಗಳಲ್ಲಿ ಹಲವಾರು ವಸ್ತುಗಳನ್ನು ಮಾರುವುದು, ಬೇಸಾಯದಲ್ಲಿ ದುಡಿಯುವುದು ಅಥವಾ ಮಕ್ಕಳನ್ನು ಗೋಪ್ಯವಾಗಿ ಮನೆಗಳಲ್ಲಿ-ಕಾರ್ಮಿಕ ಉದ್ಯೋಗಸ್ಥ ವಿಚಾರಣಾಧಿಕಾರಿಯಿಂದ ಹಾಗು ಮಾಧ್ಯಮಗಳ ವಿಮರ್ಶೆಯಿಂದ ದೂರವಿರಿಸಲಾಗಿತ್ತು. ಮತ್ತು ಎಲ್ಲಾ ಕೆಲಸಗಳನ್ನು ಅವರು ಎಲ್ಲಾ ಋತುಗಳಲ್ಲಿಯೂ ಮಾಡುತ್ತಿದ್ದರು; ಮತ್ತು ಅವರು ಕನಿಷ್ಠ ವೇತನಕ್ಕಾಗಿ ದುಡಿಯುತ್ತಿದ್ದರು. ಎಲ್ಲಿಯವರೆಗೆ ಕುಟುಂಬದಲ್ಲಿ ಬಡತನವಿರುತ್ತದೋ ಅಲ್ಲಿಯವರೆಗೂ ಬಾಲಕಾರ್ಮಿಕ ಪದ್ದತಿಯು ಇರುತ್ತದೆ.[೧೨]


ಯೂನಿಸೆಫ್ನ ಪ್ರಕಾರ, ಪ್ರಪಂಚದಾದ್ಯಂತ 5 ರಿಂದ 14 ವಯಸ್ಸಿನ ಒಳಗಿನ ಬಾಲಕಾರ್ಮಿಕರು ಸುಮಾರು 158 ಮಿಲಿಯನ್ ಗಳಷ್ಟು ಇದ್ದಾರೆಂದು ಅಂದಾಜು ಮಾಡಲಾಗಿದೆ, ಮನೆಗೆಲಸದ ಸೇವಕರನ್ನು ಹೊರತುಪಡಿಸಿ.[೧೩] ಯುನೈಟೆಡ್ ನೇಷನ್ಸ್ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಬಾಲಕಾರ್ಮಿಕ ಪದ್ದತಿಯನ್ನು ಶೋಷಣೀಯ[೧೪][೧೫] ಎಂದು ಪರಿಗಣಿಸಿ, ಯುಏನ್ ನ ಕರಾರಿನಂತೆ ಮಕ್ಕಳ ಹಕ್ಕುಗಳ ಒಪ್ಪಂದದ 32ನೇ ನಿಬಂಧನೆಯಲ್ಲಿ:

... ಅರ್ಥಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವುದು ಮತ್ತು ಅವರು ನಿರ್ವಹಿಸುವ ಯಾವುದೇ ಕೆಲಸ ಅಪಾಯಕಾರಿಯಾಗಿದ್ದಲ್ಲಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾದಲ್ಲಿ, ಮಕ್ಕಳ ಆರೋಗ್ಯಕ್ಕೆ ತೊಂದರೆಯಾದಲ್ಲಿ,ಅಥವಾ ಮಕ್ಕಳ ದೈಹಿಕ,ಮಾನಸಿಕ,ಆಧ್ಯಾತ್ಮಿಕ,ನೈತಿಕ,ಅಥವಾ ಸಾಮಾಜಿಕ ಬೆಳವಣಿಗೆಯು ಮಕ್ಕಳ ಹಕ್ಕುಗಳೆಂದು ರಾಷ್ಟ್ರಗಳು ಗುರುತಿಸಿವೆ. ಹಾಗಿದ್ದಾಗ್ಯೂ ಪ್ರಪಂಚದಾದ್ಯಂತ ಸುಮಾರು 250 ಮಿಲಿಯನ್ ಮಕ್ಕಳು ದುಡಿಯುತ್ತಿದ್ದಾರೆಂದು[೧೫] ಅಂದಾಜು ಮಾಡಲಾಗಿದೆ.


1990 ದಶಕದಲ್ಲಿ ವಿಶ್ವದಲ್ಲಿನ ಪ್ರತಿ ರಾಷ್ಟ್ರವು ಸೋಮಾಲಿಯ ಮತ್ತು ಯುನೈಟೆಡ್ ಸ್ಟೇಟ್ ಗಳನ್ನು ಹೊರತುಪಡಿಸಿ, ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ, ಅಥವಾ ಸಿ ಆರ್ ಸಿ ಗೆ ಸಹಿ ಹಾಕಿದವು. ಹಾಗಿದ್ದಾಗ್ಯೂ ಯುನೈಟೆಡ್ ನೇಶನ್ ಫೌಂಡೇಶನ್ನ ಪ್ರಕಾರ 2002 ರಲ್ಲಿ ಸೋಮಾಲಿಯ ಒಪ್ಪಂದಕ್ಕೆ ಸಹಿ ಹಾಕಿತು. ಸೋಮಾಲಿಯ ಸರ್ಕಾರವನ್ನು ಹೊಂದಿಲ್ಲದ ಕಾರಣಕ್ಕಾಗಿ, ಒಪ್ಪಂದಕ್ಕೆ[೧೬] ಸಹಿ ಹಾಕುವುದು ವಿಳಂಬವಾಯಿತು. ಕಾನೂನುಬಾಹಿರ ಬಾಲಕಾರ್ಮಿಕ ಪದ್ದತಿಯನ್ನು ನಿಷೇಧಿಸುವುದಕ್ಕಾಗಿ ಸಿ ಆರ್ ಸಿ ಯು, ಹೆಚ್ಚು ಬಲಯುತವಾದ[ಸೂಕ್ತ ಉಲ್ಲೇಖನ ಬೇಕು],ಅತ್ಯಂತ ಅನುರೂಪವಾದ[ಸೂಕ್ತ ಉಲ್ಲೇಖನ ಬೇಕು] ಅಂತರರಾಷ್ಟ್ರೀಯ ಕಾಯಿದೆಯನ್ನು ಒದಗಿಸಿತು.ಆದಾಗ್ಯೂ ಬಾಲಕಾರ್ಮಿಕ ಪದ್ದತಿಯನ್ನು ಕಾನೂನುಬಾಹಿರವನ್ನಾಗಿ ಮಾಡಲಾಗಲಿಲ್ಲ.

ಗಾಂಬಿಯಾದ ಹುಡುಗನೊಬ್ಬ ಟೈರನ್ನು ರಿಪೇರಿ ಮಾಡುತ್ತಿದ್ದನು.

ಬಡ ಕುಟುಂಬಗಳು ಜೀವನದ ಉಳಿವಿಗಾಗಿ ಅವರ ಮಕ್ಕಳ ಕೂಲಿಯನ್ನೇ ಅವಲಂಬಿಸಿವೆ, ಕೆಲವು ವೇಳೆ ಅದೊಂದೇ ಅವರ ಆದಾಯವೂ ಆಗಿದೆ. ಈ ರೀತಿಯ ಕೆಲಸಗಳು ಸಾಮಾನ್ಯವಾಗಿ ಕೈಗಾರಿಕಾ ವಲಯದಲ್ಲಿ ಯಾವಾಗಲೂ ಇಲ್ಲದಿರುವುದರಿಂದ, ಇದನ್ನು ಗೋಪ್ಯವಾಗಿ ಇಡಲಾಗಿದೆ. ಬಾಲಕಾರ್ಮಿಕ ಪದ್ದತಿಯು ಬೇಸಾಯದಲ್ಲಿ ಹಾಗು ಪಟ್ಟಣದ ಸಾಂಪ್ರದಾಯಿಕವಲ್ಲದ ವಲಯಗಳಲ್ಲಿ ಕಾಣಬಹುದಿತ್ತು; ಮಕ್ಕಳಿಂದ ಮನೆಗೆಲಸ ಮಾಡಿಸುವುದೂ ಮುಖ್ಯವಾಗಿತ್ತು. ಮಕ್ಕಳ ಒಳಿತಿಗಾಗಿ, ಬಾಲಕಾರ್ಮಿಕ ಪದ್ದತಿಯನ್ನು ನಿಷೇಧಿಸುವುದರಿಂದ ಎರಡು ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಅವು ಮಕ್ಕಳಿಗೆ ಅಲ್ಪಾವಧಿಯ ಆದಾಯ ಹಾಗು ದೀರ್ಘಾವಧಿಯ ಆದಾಯವನ್ನು ಒದಗಿಸುವುದು. ಅದಾಗ್ಯೂ ಕೆಲವು ಯುವ ಹಕ್ಕುಗಳ ಗುಂಪುಗಳು, ನಿಗದಿತ ವಯಸ್ಸಿಗಿಂತ ಕೆಳ ವಯಸ್ಸಿನವರನ್ನು ದುಡಿಸಿಕೊಳ್ಳುವುದು ನಿಷೇಧವೆಂದು, ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯೆಂದೂ ಹಾಗು ಮಕ್ಕಳ ಆಯ್ಕೆಗಳನ್ನು ಕಡಿಮೆಗೊಳಿಸುವುದು ಎಂದು ಅಭಿಪ್ರಾಯಪಟ್ಟಿದೆ. ಇದಲ್ಲದೆ ಮಕ್ಕಳು ಹಣ-ಕಾಸು ಇರುವವರ ಚಪಲಕ್ಕೆ ಒಳಗಾಗುವ ಸಾಧ್ಯತೆಗಳಿವೆ.[ಸೂಕ್ತ ಉಲ್ಲೇಖನ ಬೇಕು]


ಇತ್ತೀಚಿನ ಪತ್ರಿಕೆಗಳಲ್ಲಿ ಬಸು ಮತ್ತು ವ್ಯಾನ್(1998)[೧೭] ಬಾಲಕಾರ್ಮಿಕ ಪದ್ದತಿಗೆ ತಂದೆತಾಯಿಗಳ ಬಡತನವೇ ಪ್ರಾಥಮಿಕ ಕಾರಣ ಎಂದು ವಾದಿಸಿದ್ದಾರೆ. ಹೀಗಿರುವಾಗ, ಅವರು ಬಾಲಕಾರ್ಮಿಕ ಪದ್ದತಿಗೆ ವಿರೋಧವಾಗಿ ಕಾನೂನು ಉಪಯೋಗಿಸುವುದನ್ನು ಬಹಿಷ್ಕರಿಸಲಾಗಿದೆ ಎಂದು ಎಚ್ಚರಿಕೆಯಿತ್ತರು, ವಯಸ್ಕರ ವೇತನದ ಹೆಚ್ಚಳ ಮತ್ತು ಬಡಮಕ್ಕಳ ಕುಟುಂಬಕ್ಕೆ ಯಥೋಚಿತ ಪ್ರತಿಫಲ ದೊರಕದಿದ್ದಾಗ ಮಾತ್ರ, ಬಾಲಕಾರ್ಮಿಕ ಪದ್ದತಿಯ ಬಹಿಷ್ಕರಣೆಯ ಕಾನೂನನ್ನು ಉಪಯೋಗಿಸಿಕ್ಕೊಳ್ಳಬಹುದು ಎಂದು ವಾದಿಸಿದರು. ಬಾಲಕಾರ್ಮಿಕ ಪದ್ದತಿಯನ್ನು, ಇನ್ನೂ ವ್ಯಾಪಕವಾಗಿ ಇಂದಿಗೂ, ಹಲವು ರಾಷ್ಟ್ರಗಳಲ್ಲಿ ಇಂಡಿಯಾ ಮತ್ತು ಬಾಂಗ್ಲಾದೇಶ್ಗಳೂ ಸೇರಿದಂತೆ ಉಪಯೋಗಿಸಿಕ್ಕೊಳ್ಳುತ್ತಿವೆ. ಸಿಎಸಿಎಲ್ ನ ಅಂದಾಜಿನಂತೆ ಸುಮಾರು 70 ರಿಂದ 80 ಮಿಲಿಯನ್ ಬಾಲಕಾರ್ಮಿಕರುಗಳು ಭಾರತದಲ್ಲಿ[೧೮] ಇದ್ದಾರೆ.


ಬಾಲಕಾರ್ಮಿಕ ಪದ್ದತಿಯು ಲೆಕ್ಕಾಚಾರದ ಪ್ರಕಾರ ಏಷ್ಯಾ ಖಂಡದಲ್ಲಿ ಶೇಕಡಾ 22 ರಷ್ಟು, ಆಫ್ರಿಕಾದಲ್ಲಿ ಶೇಕಡಾ 32 ರಷ್ಟು, ಲ್ಯಾಟಿನ್ ಅಮೆರಿಕಾದಲ್ಲಿ ಶೇಕಡಾ 17 ರಷ್ಟು, ಅಮೇರಿಕಾ, ಕೆನಡಾ, ಯುರೋಪ್ ಮತ್ತು ಇತರ ಶ್ರೀಮಂತ ರಾಷ್ಟ್ರಗಳಲ್ಲಿ ಶೇಕಡಾ 1 ರಷ್ಟು ಇದೆ. ಬಾಲಕಾರ್ಮಿಕರ ಪ್ರಮಾಣಗಳು ರಾಷ್ಟ್ರಗಳಲ್ಲಿ ಮತ್ತು ಅ ರಾಷ್ಟ್ರಗಳ ಒಳಗಿನ ಪ್ರಾಂತ್ಯಗಳಲ್ಲಿ ವ್ಯತ್ಯಾಸವಾಗುತ್ತಾ ಹೋಗುತ್ತದೆ.

ಬಾಲಕಾರ್ಮಿಕರ ಇತ್ತೀಚಿನ ಘಟನೆಗಳು

ಮೇ 2008ರ ಮೊರ್ರೋಕ್ಕೋದ ಐತ್ ಬೆನ್ಹಾದ್ದೌನಲ್ಲಿ ಮಗ್ಗದಲ್ಲಿ ಯುವ ಹುಡುಗಿಯು ಕೆಲಸ ಮಾಡುತ್ತಿದ್ದಳು.


ಬಿಬಿಸಿಯ ಇತ್ತೀಚಿನ ವರದಿಯಂತೆ[೧೯] ಪ್ರಿಮಾರ್ಕ್ ತನ್ನ ಬಟ್ಟೆ ಉತ್ಪಾದನೆಯಲ್ಲಿ ಬಾಲಕಾರ್ಮಿಕರನ್ನು ಬಳಸಿಕೊಂಡಿದೆ. ವಿಶೇಷವಾಗಿ £4.00 ಮೌಲ್ಯದ ಕೈ ಕಸೂತಿಯ ಶರ್ಟ್ಗಳನ್ನೂ ಪ್ರಾರಂಭದ ಗುರಿಯನ್ನಾಗಿ ಇಟ್ಟುಕೊಂಡ ಡಾಕ್ಯುಮೆಂಟರಿಯನ್ನು ಬಿಬಿಸಿ ಪನೋರಮ (ಟಿ.ವಿ.ಸರಣಿಯ) ಕಾರ್ಯಕ್ರಮವು ನಿರ್ಮಿಸಿತು. ಈ ಕಾರ್ಯಕ್ರಮವು, ಗ್ರಾಹಕರನ್ನು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುವಂತಿತ್ತು. "ಈ ಕೈ ಕಸೂತಿಯ ಮೇಲಂಗಿಗೆ ನಾನು ಕೇವಲ £4 ಕೊಡಬೇಕೆ?, ಈ ವಸ್ತುವು ಕೈಯಲ್ಲಿ ತಯಾರಿಸಿದಂತೆ ಕಾಣುತ್ತದೆ. ಯಾರು ಇಷ್ಟು ಕಡಿಮೆ ಬೆಲೆಗೆ ಇದನ್ನು ತಯಾರಿಸಿದರು?", ಇದರ ಜೊತೆಗೆ ಮಕ್ಕಳ ಶೋಷಣೆಯು ಪ್ರಚಲಿತವಾಗಿರುವ ರಾಷ್ಟ್ರಗಳಲ್ಲಿನ ಕಾರ್ಖಾನೆಗಳಲ್ಲಿ ಬಾಲಕಾರ್ಮಿಕ ಪದ್ದತಿಯ ಉಗ್ರತೆಯನ್ನು ಹೊರಗೆಡಹುದಾಗಿತ್ತು. ಈ ಕಾರ್ಯಕ್ರಮದ ಪರಿಣಾಮವಾಗಿ ಪ್ರಿಮಾರ್ಕ್ ಸಂಭಂದಪಟ್ಟ ಕಂಪನಿಗಳನ್ನು ಉದ್ಯೋಗದಿಂದ ತೆಗೆದುಹಾಕುವುದರ ಜೊತೆಗೆ ಅವುಗಳ ಮೇಲೆ ಕ್ರಮವನ್ನೂ ಜರುಗಿಸಿ, ಅವುಗಳಿಗೆ ಒದಗಿಸುವವರ ರೀತಿರಿವಾಜುಗಳನ್ನು ಪರಿಶೀಲಿಸಿತು.


ಫೈರ್ಸ್ಟೋನ್ ಟಯರ್ ಅಂಡ್ ರಬ್ಬರ್ ಕಂಪನಿಯು ಲೈಬೀರಿಯದಲ್ಲಿ ಲೋಹ ತಯಾರಿಕಾ ಕೇಂದ್ರವನ್ನು ನಡೆಸುತ್ತಿದ್ದು, ವಿಶ್ವದಾದ್ಯಂತ ನಡೆಯುತ್ತಿರುವ ಸ್ಟಾಪ್ ಫೈರ್ಸ್ಟೋನ್ ಎಂಬ ಆಂದೋಲನವು ಈ ತಯಾರಿಕಾ ಕೇಂದ್ರದ ಮೇಲೆ ಕೇಂದ್ರೀಕರಿಸಿದೆ. ತಯಾರಿಕಾ ಕೇಂದ್ರದಲ್ಲಿನ ಕೆಲಸಗಾರರಿಂದ ಅತಿ ಹೆಚ್ಚು ಉತ್ಪಾದನಾ ಭಾಗಗಳ ನಿರೀಕ್ಷೆ ಇತ್ತು, ಇದನ್ನು ಈಡೇರಿಸದಿದ್ದಲ್ಲಿ ಅವರ ವೇತನವನ್ನು ಅರ್ಧ ಭಾಗಕ್ಕೆ ಇಳಿಸಲಾಗುತ್ತಿತ್ತು, ಆದುದರಿಂದ ಹಲವಾರು ಕೆಲಸಗಾರರು ತಮ್ಮ ಮಕ್ಕಳನ್ನು ಕೆಲಸಕ್ಕೆ ಕೊಂಡೊಯ್ಯುತ್ತಿದ್ದರು. ತಯಾರಿಕಾ ಕೇಂದ್ರದಲ್ಲಿ ಈ ಮೊದಲೇ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಪೋಷಕರು ಮತ್ತು ಅವರ ಮಕ್ಕಳು ಈಗ ಬಾಲಕಾರ್ಮಿಕರಾಗಿ ದುಡಿಯುತ್ತಿರುವವರ ಪರವಾಗಿ ಅಂತರರಾಷ್ಟ್ರೀಯ ಕಾರ್ಮಿಕ ಹಕ್ಕುಗಳ ನಿಧಿಯು ಫೈರ್ಸ್ಟೋನ್ ವಿರುದ್ದ (ಅಂತರರಾಷ್ಟ್ರೀಯ ಕಾರ್ಮಿಕ ಹಕ್ಕುಗಳ ನಿಧಿ ವಿ.ಎಸ್ ಫೈರ್ಸ್ಟೋನ್ ಟಯರ್ ಅಂಡ್ ರಬ್ಬರ್ ಕಂಪನಿ) ದಾವೆಯನ್ನು ನವಂಬರ್ 2005ನಲ್ಲಿ ಹಾಕಿತು. ಇಂಡಿಯಾನದ ಇಂಡಿಯಾನಾಪೊಲಿಸ್ ನಲ್ಲಿ 2007ರ ಜೂನ್ 26ರಂದು, ಈ ದಾವೆಯ ನ್ಯಾಯಾಧಿಪತಿಯು ಫೈರ್ಸ್ಟೋನ್ ನ ದಾವೆಯನ್ನು ವಜಾ ಮಾಡುವ ಬೇಡಿಕೆಯನ್ನು ನಿಷ್ಕ್ರಿಯಗೊಳಿಸಿ ಮತ್ತು ಬಾಲಕಾರ್ಮಿಕರ ಹಕ್ಕುಬಾಧ್ಯತೆಗಳಿಗಾಗಿ ದಾವೆಯನ್ನು ಮುಂದೂಡಿಸಿದರು.


2005 ರ ನವಂಬರ್ 21 ರಲ್ಲಿ, ಭಾರತೀಯ ಎನ್ ಜಿ ಓ ದ ಚುರುಕು ಪ್ರತಿಪಾದಕನಾದ ಜುನ್ನೆದ್ ಖಾನ್, ಕಾರ್ಮಿಕ ಸಂಘದ ಮತ್ತು ಏನ್ ಜಿ ಓ ಪ್ರಥಮದ ಸಹಾಯದಿಂದ ರಾಷ್ಟ್ರದಲ್ಲೇ ಅತಿ ದೊಡ್ಡ ಧಾಳಿಯನ್ನು ಭಾರತದ ರಾಜಧಾನಿಯಾದ ನವ ದೆಹಲಿಯ ಪೂರ್ವ ಭಾಗದಲ್ಲಿ ನಡೆಸಿ ಬಾಲಕಾರ್ಮಿಕಾರನ್ನು ಕಾಪಾಡಿದನು. ಈ ಧಾಳಿಯ ಫಲಿತಾಂಶವಾಗಿ, ಸಿಲಾಂಪುರ್ ನ ಜನಸಂದಣಿಯಿರುವ ಹೊಲಗೇರಿಯ ಜಾಗದಲ್ಲಿ ಕಾನೂನುಬಾಹಿರವಾಗಿ ನಡೆಸುಯುತ್ತಿದ್ದ ಸುಮಾರು 100 ಕಸೂತಿ ಕಾರ್ಖಾನೆಗಳಲ್ಲಿನ 480 ಮಕ್ಕಳನ್ನು ಕಾಪಾಡಲಾಯಿತು. ಮುಂದಿನ ಕೆಲವು ವಾರಗಳಲ್ಲಿ, ಸರ್ಕಾರ, ಮಾಧ್ಯಮ ಮತ್ತು ಏನ್ ಜಿ ಓ ಗಳು ಆವೇಶಕ್ಕೊಳಗಾಗಿ, ವಿಫುಲ ಸಂಖ್ಯೆಯಲ್ಲಿ ಸಣ್ಣ ಹುಡುಗರಲ್ಲಿ ಅತಿ ಸಣ್ಣ ವಯಸ್ಸಿನ 5-6 ವರ್ಷದವರನ್ನು ಗುಲಾಮಗಿರಿಯಿಂದ ಬಿಡುಗಡೆ ಮಾಡಿದರು. ಈ ರಕ್ಷಣಾ ಕಾರ್ಯಕ್ರಿಯೆ, ವಿಶ್ವದ ಕಣ್ಣನ್ನು ತೆರೆಸಿ ಪ್ರಪಂಚದಾದ್ಯಂತ ಅತಿ ದೊಡ್ಡ ಪ್ರಜಾಪ್ರಭುತ್ವದ ಕೆಳಗೇ ಬಾಲಕಾರ್ಮಿಕ ಪದ್ದತಿಯು ನಡೆಯುತ್ತಿದ್ದುದ್ದನ್ನು ತೋರಿಸಿತು.


ಕಸೂತಿ ಕಾರ್ಖಾನೆಯಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕರ ಸುದ್ದಿಯನ್ನು, 2007 ಅಕ್ಟೋಬರ್ 28 ರ ಸಂಡೆ ಅಬ್ಸರ್ವರ್ ನಲ್ಲಿ ಬಹಿರಂಗಗೊಳಿಸಿದ ನಂತರ, ಬಿಬಿಎನ ಪ್ರತಿಪಾದಕರು ಕಾರ್ಯಾರಂಭ ಮಾಡಿದರು. ಗ್ಯಾಪ್ ಇನ್ಕ್. ಒಪ್ಪಿಕೊಂಡ ಹೇಳಿಕೆಯೊಂದರಲ್ಲಿ ,ಗ್ಯಾಪ್ ಕಿಡ್ಸ್ ಬ್ಲೌಸಸ್ ನ ಉತ್ಪಾದನೆಯಲ್ಲಿ ಬಾಲಕಾರ್ಮಿಕರು ದುಡಿಯುವುದು ಮತ್ತು ಮಾರುಕಟ್ಟೆಯಿಂದ[೨೦][೨೧] ಮಕ್ಕಳು ತಯಾರಿಸಿದ ಉತ್ಪನ್ನಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಹೇಳಿಕೆ ನೀಡಿತು. ಉತ್ತಮ ದರ್ಜೆಯ ಫ್ಯಾಶನ್ ನಲ್ಲಿ ಬಾಲಕಾರ್ಮಿಕರು ದುಡಿಯುತ್ತಿರುವುದು ಕರಾರುವಕ್ಕಾಗಿದ್ದರೂ ಹಾಗು ಅದಕ್ಕೆ ಸಂಭಂದಿಸಿದ ಜನರಿಂದ/ಪಕ್ಷಗಳಿಂದ ಒಪ್ಪಿಗೆಯಾಗಿದ್ದರೂ, ಎಸ್ ಡಿ ಎಂ ನಿಂದ ಈ ಮಕ್ಕಳು ಗುಲಾಮಗಿರಿ ಅಥವಾ ದಾಸ್ಯತನದಲ್ಲಿ ದುಡಿಯುತ್ತಿದಾರೆಂಬುದನ್ನು ಗುರುತಿಸಲಾಗಲ್ಲಿಲ್ಲ.


ವ್ಯಾಕುಲತೆ ಮತ್ತು ನಿರಾಶದಾಯಕವಾದ ಈ ಒಳಸಂಚನ್ನು ಮೇಲ್ವಿಚಾರಕರಾದ ನ್ಯಾಯವಾದಿ, ಬಿಬಿಎ ಸಂಸ್ಥಾಪಕರಾದ ಹಾಗು ಗ್ಲೋಬಲ್ ಮಾರ್ಚ್ ಎಗೈನ್ಸ್ಟ್ ಚೈಲ್ಡ್ ಲೇಬರ್ ನ ಮುಖ್ಯಸ್ಥನೂ ಆದ ಕೈಲಾಶ್ ಸತ್ಯಾರ್ಥಿ, ದೆಹಲಿ ಹೈಕೋರ್ಟ್ ನ ಗೌರವಾನ್ವಿತ ಮುಖ್ಯ ನ್ಯಾಯಾಧಿಪತಿಯ ಬಳಿ ಪತ್ರದ ಮುಖಾಂತರ ರಾತ್ರಿ 11.00 ಗಂಟೆಗೆ[೨೨] ಅರಿಕೆ ಮಾಡಿಕೊಂಡರು. ಗೌರವಾನ್ವಿತ ಮುಖ್ಯ ನ್ಯಾಯಾಧಿಪತಿಯಿಂದ ಬಂದ ಈ ತೀರ್ಪು, ಸರ್ಕಾರ ಭಾರತದಲ್ಲಿನ ಸ್ವೆಟ್ ಶಾಪ್ಸ್ ನ ಬಾಲಕಾರ್ಮಿಕ ಪದ್ದತಿಯ ವಿರುದ್ದ ಅತೀವ ಅವನತಿಯ ಸ್ಥಾನ ಹೊಂದಿದ್ದು, ಮತ್ತು ಮಕ್ಕಳ ಹಕ್ಕುಗಳ ಸಂಘಗಳ[೨೩] ವಿರುದ್ಧ 'ಪ್ರತಿಪಾದಕ ದಾವೆಗಳನ್ನು' ಹಾಕುವುದಾಗಿ ಬೆದರಿಸಿದ ಸಮಯದಲ್ಲಿ ಬಂದಿತು.


ಇದರೊಂದಿಗೆ ಸಮಾನಾಂತರ ಬೆಳೆವಣಿಗೆಯಾಗಿ, ಗ್ಲೋಬಲ್ ಮಾರ್ಚ್ ಎಗೈನ್ಸ್ಟ್ ಚೈಲ್ಡ್ ಲೇಬರ್ ಮತ್ತು ಬಿಬಿಎ ಒಟ್ಟಾಗಿ ಗ್ಯಾಪ್ ಇನ್ಕ್. ಮತ್ತು ಇತರ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಇದರಿಂದ ಬಾಲಕಾರ್ಮಿಕರನ್ನು ಕಾರ್ಖಾನೆ ಮತ್ತು ಸ್ವೆಟ್ ಶಾಪ್ಸ್ ಗೆ ಕಾಲಿಡುವುದನ್ನು ತಪ್ಪಿಸಲು ಧನಾತ್ಮಕ ಯೋಜನೆಗಳನ್ನು ರಚಿಸುತ್ತಿದ್ದಾರೆ, ಕೆಲಸದ ಸ್ಥಳ ಹಾಗು ಸ್ಥಿತಿಯನ್ನು ಗಮನಿಸಲು ಹಾಗು ಕೆಲಸಗಾರರ ಪರಿಹಾರೋಪಾಯಕ್ಕೆ ವಿಧಿನಿಯಮವನ್ನು ರಚಿಸುತ್ತಿದ್ದಾರೆ. ಗ್ಯಾಪ್ ಇನ್ಕ್. ನ ಹಿರಿಯ ಉಪ ರಾಷ್ಟ್ರಾಧ್ಯಕ್ಷರಾದ ಡ್ಯಾನ್ ಹೆಂಕ್ಲ್ ಹೇಳಿಕೆಯೊಂದರಲ್ಲಿ: "ನಾವು ಏಕಪ್ರಕಾರದ ಬೆಳೆವಣಿಗೆಯನ್ನು ಕಾಣುತ್ತಿದ್ದೇವೆ, ಮತ್ತು ಇಂದು ಮಕ್ಕಳು ಸ್ಥಳೀಯ ಸರ್ಕಾರದ ಹತೋಟಿ ಮತ್ತು ರಕ್ಷಣೆಯಲ್ಲಿದೆ. ನಮ್ಮ ಕಾರ್ಯನೀತಿಯು ಬಯಸುವಂತೆ, ಮಾರುವವನು ನಾವು ಯಾರಿಗೆ ಮೊದಲು ಕೆಲಸವನ್ನು ವಹಿಸಿರುತ್ತೇವೋ ಅವರೇ ಮಕ್ಕಳ ಅಗತ್ಯತೆಗಳನ್ನು ಒದಗಿಸಬೇಕಾಗುತ್ತದೆ. ಅದೆಂದರೆ,ಮಕ್ಕಳ ಶಾಲೆ, ಕೆಲಸದ ತರಬೇತಿ, ಚಾಲ್ತಿಯಲ್ಲಿರುವ ವೇತನ ಮತ್ತು ಕಾನೂನುರೀತ್ಯ ದುಡಿಯುವ ವಯಸ್ಸು ಬಂದಕೂಡಲೇ ಕೆಲಸ ಒದಗಿಸುವ ಭರವಸೆಯನ್ನು ನೀಡುವುದು. ಈ ಸೌಲಭ್ಯಗಳನ್ನೆಲ್ಲಾ ನಮ್ಮ ಪ್ರತಿನಿಧಿ ಈಡೇರಿಸುತ್ತಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಗ್ಲೋಬಲ್ ಮಾರ್ಚ್ ಮತ್ತು ಸ್ಥಳೀಯ ಸರ್ಕಾರಗಳ ಜೊತೆಗೂಡಿ ನಾವು ಮೇಲ್ವಿಚಾರಣೆ ಮಾಡುತ್ತೇವೆ." [೨೪][೨೫]


ಅಕ್ಟೋಬರ್ 28 ರಂದು ಗ್ಯಾಪ್ ನಾರ್ತ್ ಅಮೆರಿಕಾದ ಅಧ್ಯಕ್ಷ ಜೋ ಈಸ್ಟ್-ಮ್ಯಾನ್, ಪ್ರತಿಕ್ರಿಯಿಸಿ "ನಾವು ಖಂಡಿತವಾಗಿ ಬಾಲಕಾರ್ಮಿಕರನ್ನು ನಿಷೇಧ ಮಾಡಿದ್ದೇವೆ. ಇದು ನಮಗೆ ಮಾತುಕತೆಗೆ ಸಂಬಂಧಿಸಿದ್ದಲ್ಲ - ಈ ಆಪಾದನೆ ನಮಗೆ ಸಂಬಂಧಿಸಿದ್ದು ಎಂದು ಹೇಳುವ ಆರೋಪ ನಮಗೆ ಅತೀವ ಬೇಸರವಾಗಿದೆ. ನಾವು ಈ ಹಿಂದೆ ನಿರೂಪಿಸಿದಂತೆ, ಗ್ಯಾಪ್ ಇಂತಹ ಕಠಿಣ ಆಕ್ಷೇಪಣೆಯನ್ನು ನೇರವಾಗಿ ಉದ್ದೇಶಿಸಿರುವ ಇತಿಹಾಸವನ್ನು ಹೊಂದಿದ್ದು, ಈ ಪರಿಸ್ಥಿತಿಯನ್ನು ಹೀಗೆಯೇ ನೇರವಾಗಿ ಉದ್ದೇಶಿಸುವುದು ಸೂಕ್ತ, ಇದಕ್ಕೆ ಹೊರತಾದುದೇನು ಅಲ್ಲ.

2006 ರಂದು ಗ್ಯಾಪ್ ಇನ್ಕ್. ನಿಯಮ ಉಲ್ಲಂಘನೆಯ ಕಾರಣದಿಂದಾಗಿ 23 ಕಾರ್ಖಾನೆಗಳೊಂದಿಗೆ ವ್ಯವಹಾರವನ್ನು ನಿಲ್ಲಿಸಿತು. ಪ್ರಪಂಚಾದದ್ಯಂತ ನಮ್ಮ ಮಾರಾಟದವನು ಗುಣನಿಯಮಗಳನ್ನು ಅನ್ಗೀಕರಿಸಿದ್ದಾರೋ ಎಂಬುದನ್ನು ಖಚಿತಪಡಿಸಕೊಳ್ಳಲು ಪ್ರಪಂಚಾದದ್ಯಂತ 90 ಜನರನ್ನು ಕೆಲಸಕ್ಕಿರಿಸಿದರು.  ಈ ಪರಿಸ್ಥಿತಿಯ ಬಗ್ಗೆ ನಾವು ಯಾವಾಗ ಎಚ್ಚೆತ್ತೆವೋ ಆಗ ನಾವು ಕೆಲಸ ಕೊಡುವುದನ್ನು ಮತ್ತು ಅಂಗಡಿಗಳಿಂದ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿದೆವು. ಕಂಪನಿಯ ಉತ್ಪನ್ನಗಳನ್ನು ಉತ್ಪಾದಿಸುವ ಕಾರ್ಖಾನೆಗಳಲ್ಲಿರುವ ಬಾಲಕಾರ್ಮಿಕರ ಖಂಡಿತವಾಗಿ ನಾವು ನಿಷೇಧದ ಉಲ್ಲಂಘನೆಯು ಬಹಳ ಅಪರೂಪ, ಇದಕ್ಕಾಗಿ ಪ್ರಾಂಥ್ಯಗಳಲ್ಲಿರುವ ನಮ್ಮ ಸರಕು ಒದಗಿಸುವವರನ್ನು ತಕ್ಷಣ ಮಾತುಕತೆಗೆ ಕರೆದು ಅವರಿಗೆ ಮತ್ತೆ ನಮ್ಮ ರೀತಿ-ನೀತಿಗಳ[೨೬] ಬಗ್ಗೆ ಬಲಪಡಿಸುವುದಾಗಿತ್ತು".


ಆಗಸ್ಟ್ 2008ರ ಆರಂಭದಲ್ಲಿ ಐಯೊವದ ಕಾರ್ಮಿಕ ಕಮಿಷನರ್ ಡೇವಿಡ್ ನೀಲ್ ರವರ ಪ್ರಕಟಣೆಯಂತೆ ಅವರ ಇಲಾಖೆ ಕಂಡುಹಿಡಿದಂತೆ, ಪೋಸ್ಟ್-ವಿಲ್ಮಾಂಸಗಳನ್ನು ಚೀಲಗಳಲ್ಲಿ ತುಂಬುವ(ಕಸಾಯಖಾನೆ) ಕ್ರಮಬದ್ಧವಾದ ಕಂಪನಿಯಾದ ಅಗ್ರಿಪ್ರೋಸೆಸ್ಸರ್ಸ್, ಇತ್ತೀಚಿಗೆ ವಲಸೆ ಮತ್ತು ತೆರಿಗೆ ಪ್ರವರ್ತನ ಇಲಾಖೆಯಿಂದ ಧಾಳಿಗೊಳಗಾಗಿದ್ದರೂ, 57 ಮಂದಿ ಕಿರಿ ವಯಸ್ಸಿನ ಕೆಲಸಗಾರರನ್ನು, ಅವರಲ್ಲಿ ಕೆಲವರು 14 ವರ್ಷದಸ್ಟು ಎಳೆಯರನ್ನು ಇಟ್ಟುಕೊಂಡಿದ್ದು, ಆ ರಾಜ್ಯದ ಮಾಂಸಗಳನ್ನು ಚೀಲಗಳಲ್ಲಿ ತುಂಬುವವರು 18 ವರ್ಷಕ್ಕಿಂತ ಹೆಚ್ಚಾಗಿರಬೇಕು ಎಂಬ ಕಾನೂನಿನ ಉಲ್ಲಂಘನೆ ಮಾಡಿತು. ನೀಲ್ ಹೇಳಿಕೆಯ ಪ್ರಕಾರ, ಈ ದಾವೆಯನ್ನು ರಾಜ್ಯದ ಮುಖ್ಯ ನ್ಯಾಯಾವಾದಿಯ ಕೈಗೆ ಒಪ್ಪಿಸಿ ಕಾನೂನು ರೀತ್ಯ ಕ್ರಮ ಜರುಗಿಸಲು, ನಮೂದಿಸಿರುವ ಪ್ರಕಾರ "ಐಯೋವ ಬಾಲಕಾರ್ಮಿಕರ ಕಾನೂನಿನ ಪ್ರತೀ ಅಂಶವು ವಾಸ್ತವವಾಗಿ ಅಲೌಕಿಕ ಉಲ್ಲಂಘನೆಯಾಗಿದೆ" ಎಂದು ವಿಚಾರಣೆಯ ನಂತರ ತನ್ನ ಇಲಾಖೆ ಕಂಡುಹಿಡಿದಿದೆ.[೨೭] ಈ ಆಪಾದನೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲವಾಗಿದೆ ಎಂದು ಅಗ್ರಿಪ್ರೋಸೆಸ್ಸರ್ಸ್ ಪ್ರತಿಪಾದಿಸಿತು.


1997 ರಲ್ಲಿ ಸಂಶೋಧನೆಯು ಸೂಚಿಸಿದಂತೆ, ಭಾರತದಲ್ಲಿನ ಕಾಂಚಿಪುರಂ ಜಿಲ್ಲೆಯ ರೇಷ್ಮೆ ನೇಯುವ/ಮಗ್ಗದ ಕಾರ್ಖಾನೆಯಲ್ಲಿ ಬಾಲಕಾರ್ಮಿಕರುಗಳು 40,000 ಸಂಖ್ಯೆಯನ್ನು ಮೀರಿದ್ದಾರೆ. ಈ ಸಂಖ್ಯೆಯು ,ಮಗ್ಗದ ಮಾಲೀಕರಿಗಾಗಿ ದಾಸ್ಯತನದಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನೂ ಒಳಗೊಂಡಿದೆ. ಶೈಕ್ಷಣಿಕ ಬೆಳವಣಿಗೆಗಾಗಿ ಹಳ್ಳಿಗಾಡಿನ ಸಂಸ್ಥೆಯು ಬಾಲಕಾರ್ಮಿಕರ ಸ್ಥಿತಿಯನ್ನು ಉತ್ತಮಪಡಿಸಲು ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡಿತು. ಸಹಕಾರಿಯಾಗಿ ಕೆಲಸ ಮಾಡುತ್ತಾ, 2007 ರ ವೇಳೆಗೆ ರೈಡ್ ಬಾಲಕಾರ್ಮಿಕರನ್ನು 4000 ಕ್ಕಿಂತ ಕಡಿಮೆಗೊಳಿಸಿತು.


ಚಾಕೋಲೆಟ್ ತಯಾರಿಕೆಯಲ್ಲಿ ಉಪಯೋಗಿಸುವ ಕೋಕೋ ಪೌಡರ್ ಉತ್ಪಾದನೆಯಲ್ಲೂ ಬಾಲಕಾರ್ಮಿಕರನ್ನು ಉಪಯೋಗಿಸಿಕೊಳ್ಳಲಾಗುತ್ತಿತ್ತು. ಕೋಕೋನ ಅರ್ಥಶಾಸ್ತ್ರವನ್ನು ನೋಡಿ.


ಡಿಸೆಂಬರ್ 2009ರಂದು ಯುಕೆ ನಲ್ಲಿಯ ಚಳುವಳಿಗಾರರು, ಎರಡು ಅತ್ಯುತ್ತಮ ಅಗ್ರ ಚಿಲ್ಲರೆ ವ್ಯಾಪಾರಿಗಳನ್ನು, ಮಕ್ಕಳು ಕೀಳಲ್ಪಟ್ಟ ಹತ್ತಿಯಿಂದ ತಯಾರಿಸಿದ ಬಟ್ಟೆಗಳ ಮಾರಾಟವನ್ನು ನಿಲ್ಲಿಸುವಂತೆ ಹೇಳಿದರು. ಬಾಂಗ್ಲಾದೇಶದಲ್ಲಿ ಹಚ್ & ಎಂ ಮತ್ತು ಜಾರ ಹತ್ತಿ ಒದಗಿಸುವವರನ್ನು ಉಪಯೋಗಿಸಿವೆ ಎಂದು ಆಂಟಿ-ಸ್ಲೇವರಿ ಇಂಟರ್ನ್ಯಾಷನಲ್ ಮತ್ತು ಎನ್ವಿರೋನ್ಮೆಂಟಲ್ ಜಸ್ಟೀಸ್ ಫೌಂಡೇಶನ್ (ಇಜೆಎಫ್) ಆರೋಪಿಸಿದೆ. ಅವರ ಹಲವಾರು ಕಚ್ಚಾ ವಸ್ತು ಮೂಲತಃ ಉಜ್ಬೇಕಿಸ್ಥಾನದಿಂದ ಬಂದಿರಬಹುದೆಂದು ಸಂದೇಹಪಟ್ಟಿದೆ, ಅಲ್ಲಿನ ಹೊಲಗಳಲ್ಲಿ 10 ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳಲು ಬಲಾತ್ಕರಿಸಲಾಗುತ್ತದೆ. ಉಜ್ಬೆಕ್ ಹತ್ತಿಯ ಉಪಯೋಗವನ್ನು ನಿಷೇಧಿಸಲು ಮತ್ತು ಕಚ್ಚಾ ವಸ್ತುಗಳ ಮೂಲದ ಧಾರ್ಮಿಕ ಜವಾಬ್ದಾರಿಯನ್ನು ಖಚಿತ ಪಡಿಸಿಕೊಳ್ಳಲು "ಟ್ರಾಕ್ ಅಂಡ್ ಟ್ರೇಸ್" ವ್ಯವಸ್ಥೆಯನ್ನು ಬಳಸಲೂ ಪ್ರತಿಪಾದಕರು ಕರೆ ನೀಡಿದ್ದಾರೆ.


ಹಚ್ & ಎಂ ಹೇಳಿಕೆಯಂತೆ ಉಜ್ಬೆಕ್ ಹತ್ತಿಯ ಉಪಯೋಗವನ್ನು "ತಳ್ಳಿ ಹಾಕುವುದು" ಮತ್ತು ಬಾಲಕಾರ್ಮಿಕರನ್ನು "ಒಪ್ಪಿಕೊಳ್ಳದಿರುವುದು", ಆದರೂ ತಮ್ಮ ಯಾವುದೇ ಉತ್ಪನ್ನಗಳಲ್ಲಿ ಉಜ್ಬೇಕಿನ ಹತ್ತಿಯನ್ನು ಉಪಯೋಗಿಸಿಲ್ಲ ಎಂಬುದನ್ನು ಖಚಿತ ಪಡಿಸಲು "ಯಾವುದೇ ಸಕಾರಣ ವಿಧಾನವನ್ನು" ಹೊಂದಿಲ್ಲ ಎಂದು ಒಪ್ಪಿಕೊಂಡಿದೆ. ಇನ್ಡಿಟೆಕ್ಷ್, ಜಾರದ ಮಾಲಿಕರ ಹೇಳಿಕೆಯಂತೆ ಅವರ ಗುಣ ನಿಯಮ ಶಾಸ್ತ್ರದ ಪ್ರಕಾರ ಬಾಲಕಾರ್ಮಿಕರನ್ನು ನಿಷೇಧಿಸಿದೆ[೨೮].


ಬಾಲಕಾರ್ಮಿಕರ ರಕ್ಷಣೆ

1940ರ ಅಕ್ಟೋಬರ್ ನಲ್ಲಿ ಮೇನ್ ನ ಜಮೀನಿನಲ್ಲಿ ಮಕ್ಕಳು ಕೆಲಸ ಮಾಡುತ್ತಿದ್ದರು.


ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಬಾಲ ಕಾರ್ಮಿಕರಿಂದ ತಯಾರಿಸಲ್ಪಟ್ಟ ಅಥವಾ ಜೋಡಿಸಲ್ಪಟ್ಟ ಉತ್ಪಾದನೆಗಳನ್ನು ಕೊಂಡುಕೊಳ್ಳುವ ಸಾರ್ವಜನಿಕರ ನೈತಿಕತೆಯನ್ನು ಪ್ರಶ್ನಿಸುವಂತಿದೆ. ಆದಾಗ್ಯೂ, ಬೇರೆಯವರು ಬಾಲಕಾರ್ಮಿಕರಿಂದ ತಯಾರಿಸಲ್ಪಟ್ಟ ಉತ್ಪಾದನೆಗಳನ್ನು ಬಹಿಷ್ಕರಿಸುವುದರಿಂದ ಮಕ್ಕಳುನ್ನು ಮತ್ತಷ್ಟು ಅಪಾಯಕರವಾದ ವೇಶ್ಯಾವಾಟಿಕೆ ಅಥವಾ ಶ್ರಮದಾಯಕವಾದ ಬೇಸಾಯ ವೃತ್ತಿಗಳಿಗೆ ಬಲವಂತವಾಗಿ ತಳ್ಳಿದಂತಾಗುತ್ತದೆ ಎಂದು ಕಾಳಜಿ ಪಟ್ಟಿದ್ದಾರೆ. ಉದಾಹರಣೆಗಾಗಿ, ಯುನಿಸೆಫ್ ಅಧ್ಯಯನ ಕಂಡುಕೊಂಡಂತೆ ಯುಎಸ್ ನಲ್ಲಿ ಚೈಲ್ಡ್ ಲೇಬರ್ ಡಿಟರೆನ್ಸ್ ಆಕ್ಟ್ ಅನ್ನು ಜಾರಿಗೆ ತಂದ ನಂತರ, ಬಾಂಗ್ಲಾದೇಶದ ಸಿದ್ಧ ಉಡುಪುಗಳ ಕೈಗಾರಿಕೆಯಲ್ಲಿ ಕೆಲಸದಲ್ಲಿ ತೊಡಗಿರುವ ಸುಮಾರು 50,000 ಮಕ್ಕಳನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಇದರಿಂದಾಗಿ ಹಲವು ಮಕ್ಕಳು "ಕಲ್ಲು-ಒಡೆಯುವ ಕೆಲಸ, ಬೀದಿ-ಜಗಳ ಮತ್ತು ವೇಶ್ಯಾವಾಟಿಕೆ" ಕೆಲಸಗಳನ್ನು ಅವಲಂಭಿಸಬೇಕಾಗಿ, ಈ ಕೆಲಸಗಳು, ಸಿದ್ಧ ಉಡುಪುಗಳ ಉತ್ಪಾದನೆಗಿಂತ "ಹೆಚ್ಚು ಅಪಾಯಕಾರಿಯಾದದ್ದು ಮತ್ತು ಶೋಷಣೀಯವಾದದ್ದು". ಈ ಅಧ್ಯಯನವು, ಬಹಿಷ್ಕಾರವು "ಧೀರ್ಘಾವದಿಯ ಪ್ರಭಾವದಿಂದೊಳಗೂಡಿದ ಮೊಂಡು ಸಲಕರಣೆ, ಅದು ಕೆಲಸದಲ್ಲಿ ತೊಡಗಿರುವ ಮಕ್ಕಳಿಗೆ ಸಹಾಯ ಮಾಡುವುದಕ್ಕಿಂತ ನಿಜವಾಗಿ ತೊಂದರೆಯನ್ನು ಉಂಟುಮಾಡುತ್ತದೆ"[೧೨] ಎಂದು ಸೂಚಿಸಿತು.


ಮಿಲ್ಟನ್ ಫ್ರೈಡ್-ಮ್ಯಾನ್ನ ಪ್ರಕಾರ ಕೈಗಾರಿಕಾ ಕ್ರಾಂತಿಗೆ ಮೊದಲು ವಾಸ್ತವವಾಗಿ ಎಲ್ಲ ಮಕ್ಕಳು ಬೇಸಾಯದಲ್ಲಿ ದುಡಿಯುತ್ತಿದ್ದರು. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಹಲವು ಮಕ್ಕಳು ಹೊಲದ ಕೆಲಸದಿಂದ ಕಾರ್ಖಾನೆ ಕೆಲಸಕ್ಕೆ ಬಂದರು. ಮುಂದೆ ಅವರ ವೇತನದ ಹೆಚ್ಚಳದಿಂದ ಪೋಷಕರು ಅವರ ಮಕ್ಕಳನ್ನು ಕೆಲಸಕ್ಕೆ ಕಳುಹಿಸುವ ಬದಲು ಶಾಲೆಗಳಿಗೆ ಕಳುಹಿಸುವುದು ಸಾಧ್ಯವಾಯಿತು, ಇದರ ಪರಿಣಾಮವಾಗಿ ಕಾನೂನು ವಿಧಿಸುವ[೨೯] ಮೊದಲು ಮತ್ತು ನಂತರ ಬಾಲ ಕಾರ್ಮಿಕ ಪದ್ಧತಿ ಕ್ಷೀಣಿಸುತ್ತಾ ಬಂದಿತು.


ಆಸ್ಟ್ರಿಯನ್ ಶಾಲೆಯ ಅರ್ಥಶಾಸ್ತ್ರಜ್ಞ ಮುರ್ರೆ ರೋತ್ಬಾರ್ಡ್ಕೂಡ ಬಾಲಕಾರ್ಮಿಕ ಪದ್ದತಿಯನ್ನು ಪ್ರತಿಪಾದಿಸುತ್ತಾ, ಬ್ರಿಟಿಷ್ ಮತ್ತು ಅಮೆರಿಕಾದ ಮಕ್ಕಳು ಕೈಗಾರಿಕಾ ಕ್ರಾಂತಿಯ ಮೊದಲು ಮತ್ತು ನಂತರ ಬದುಕುತ್ತಿದ್ದು, ಹೇಳಲಸಾಧ್ಯವಾದಸ್ಟು ಹೀನ ಪರಿಸ್ಥಿತಿಯನ್ನು ಸಹಿಸಿದರು, ಅಲ್ಲಿ ಅವರಿಗೆ ಕೆಲಸ ಇಲ್ಲದ್ದಿದ್ದಾಗ ಅವರು "ಸ್ವಇಚ್ಛೆ ಮತ್ತು ಸಂತೋಷದಿಂದ" ಕಾರ್ಖಾನೆಗಳಿಗೆ[೩೦] ಕೆಲಸಕ್ಕೆ ಹೋಗುತ್ತಿದ್ದರು.


ಆದಾಗ್ಯೂ ಬ್ರಿಟಿಷ್ ಇತಿಹಾಸಜ್ಞ ಮತ್ತು ಸಮಾಜವಾದಿ ಇ.ಪಿ ಥಾಮ್ಸನ್ ಮನೆ ಕೆಲಸದ ಮಕ್ಕಳು ಮತ್ತು ಕೂಲಿಗಾಗಿ(ವೇತನ) ದುಡಿಯುವ ದೊಡ್ಡ ಮಾರುಕಟ್ಟೆಗಳಲ್ಲಿ[೪] ಮಕ್ಕಳ ಭಾಗವಹಿಸುವಿಕೆಯ ಮಧ್ಯೆ ಗುಣಾತ್ಮಕ ವ್ಯತ್ಯಾಸವನ್ನು ದಿ ಮೇಕಿಂಗ್ ಆಫ್ ದಿ ಇಂಗ್ಲಿಷ್ ವರ್ಕಿಂಗ್ ಕ್ಲಾಸ್ನಲ್ಲಿ ಮಾಡಿ ತೋರಿಸಲಾಗಿದೆ. ಮುಂದೆ, ಕೈಗಾರಿಕಾ ಕ್ರಾಂತಿಯಲ್ಲಿನ ಅನುಭವದ ಉಪಯೋಗದಿಂದ, ಪ್ರಚಲಿತ ಆಶಯಗಳ ಮೇಲೆ ಭವಿಷ್ಯವನ್ನು ರೂಪಿಸುವುದು ಪ್ರಶ್ನಾರ್ಥಕವಾಗಿದೆ. ಅರ್ಥಶಾಸ್ತ್ರ ಇತಿಹಾಸಜ್ಞ ಹ್ಯುಗ್ಹ್ ಕನ್ನಿಂಗ್ಹ್ಯಾಮ್,ಚಿಲ್ಡ್ರನ್ ಅಂಡ್ ಚೈಲ್ಡ್ ಹುಡ್ ಇನ್ ವೆಸ್ಟೆರ್ನ್ ಸೊಸೈಟಿ ಸಿನ್ಸ್ 1500 ರ ಗ್ರಂಥ ಕರ್ತನು ಹೇಳುವುದೇನೆಂದರೆ:

"50 ವರ್ಷಗಳ ಹಿಂದೆ, ಮುಂದುವರಿದ ರಾಷ್ಟ್ರಗಳಲ್ಲಿ 19ನೇ ಕೊನೆಯ ಮತ್ತು 20ನೇ ಶತಮಾನದ ಆರಂಭದಲ್ಲಿ ಬಾಲಕಾರ್ಮಿಕ ಪದ್ದತಿಯು ಕ್ಷೀಣಿಸಿದ್ದರಿಂದ, ವಿಶ್ವದ ಇತರ ಭಾಗಗಳಲ್ಲಿ ಇದೇ ಮಾದರಿಯ ಕ್ಷೀಣಿಕೆಯು ಕಂಡುಬರುತ್ತದೆ ಎಂದು ನಂಬಲಾಗಿತ್ತು. ಇದರ ವಿಫಲತೆಯಿಂದಾಗಿ, ಪ್ರಪಂಚ ಮುಂದುವರೆದಿದ್ದರೂ ಇದರ ಪುನರ್ಜನ್ಮವು, ಯಾವುದೇ ಅರ್ಥಿಕ ಸ್ಥಿತಿಯಲ್ಲಿರುವ ರಾಷ್ಟ್ರ ಅಥವಾ ಪ್ರಪಂಚದಲ್ಲಿ ತನ್ನ ಪಾತ್ರವನ್ನು ವಹಿಸುವುದರೊಂದಿಗೆ ಇದನ್ನು ಪ್ರಶ್ನಿಸುವಂತಾಯಿತು." [೨೯]


ಹೌಸ್ಟನ್ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆದ ಥಾಮಸ್ ಡಿಗ್ರೆಗೊರಿ ಎಂಬುವವರ ಪ್ರಕಾರ, ಕ್ಯಾಟೋ ಸಂಸ್ಥೆಯು ಪ್ರಕಟಿಸಿದ ಲೇಖನವೊಂದರಲ್ಲಿ, ವಾಷಿಂಗ್ಟನ್ ಡಿ.ಸಿ ಯಲ್ಲಿರುವ ಒಂದು ಲಿಬರ್ಟೇರಿಯನ್ ಸಂಶೋಧನಾ ಸಂಸ್ಥೆಯು ಸ್ಪಸ್ಟಪಡಿಸುವುದೇನೆಂದರೆ, "ತಾಂತ್ರಿಕವಾದ ಮತ್ತು ಆರ್ಥಿಕವಾದ ಬದಲಾವಣೆಗಳ ಸಲಕರಣೆಗಳನ್ನು ಜಾರಿಗೊಳಿಸುವುದರಿಂದ ಮಕ್ಕಳನ್ನು ಕೆಲಸದ ಸ್ಥಳದಿಂದ ಹೊರಗೆ ತರುವುದು ಮತ್ತು ಅವರನ್ನು ಶಾಲೆಗೆ ಕಳುಹಿಸುವುದು. ಆಗ ಅವರು ಜವಾಬ್ದಾರಿಯುತ ವಯಸ್ಕರಾಗಿ ಬೆಳೆಯಬಹುದು ಮತ್ತು ಹೆಚ್ಚು ದಿನ ಆರೋಗ್ಯವಾಗಿ ಬದುಕಬಹುದು. ಹೀಗಿದ್ದಾಗ್ಯೂ, 19ನೇ ಶತಮಾನದ ಕೊನೆಯವರೆಗೆ ಬಾಲಕಾರ್ಮಿಕ ಪದ್ದತಿಯು ಹೇಗೆ ನಮ್ಮಲ್ಲಿ ಪಾರಂಪರಿಕವಾಗಿತ್ತೋ, ಹಾಗೆಯೇ ಬಾಂಗ್ಲಾದೇಶ ಮುಂತಾದ ಬಡ ರಾಷ್ಟ್ರಗಳಲ್ಲಿ, ದುಡಿಯುವ ಮಕ್ಕಳು ಹಲವಾರು ಕುಟುಂಬಗಳ ಉಳಿವಿಗಾಗಿ ಮುಖ್ಯವಾಗಿರುತ್ತಾರೆ. ಆದುದರಿಂದ, ಬಾಲ ಕಾರ್ಮಿಕ ಪದ್ದತಿಯನ್ನು ಕೊನೆಗೊಳಿಸಲು ಹೋರಾಡುವುದು ಹೇಗೆ ಅವಶ್ಯಕವಾಗಿದೆಯೋ, ಇದನ್ನು ಸಾಧಿಸಲು ವಿವಿಧ ಮಾರ್ಗಗಳ ಅವಶ್ಯಕತೆ ಇದೆ, ಮತ್ತು ದುಃಖದ ಸಂಗತಿಯೆಂದರೆ ಇದನ್ನು ಸಾಧಿಸಲು ಹಲವಾರು ರಾಜಕೀಯ ಅಡ್ಡಿಗಳಿವೆ.[೩೧]


ಲಾರೆನ್ಸ್ ರೀಡ್, ಫೌನ್ಡೇಶನ್ ಫಾರ್ ಎಕನೋಮಿಕ್ ಎಜುಕೇಶನ್ನ ಅಧ್ಯಕ್ಷ ವಾದಿಸುವುದೇನೆಂದರೆ, ಕೈಗಾರಿಕಾ ಕ್ರಾಂತಿಯ ಆರಂಭದ ವೇಳೆಯಲ್ಲಿ ಬಾಲಕಾರ್ಮಿಕರ ನಿಷ್ಕಾರುಣ್ಯ ಸ್ಥಿತಿಯು ಹೆಸರುವಾಸಿಯಾಗಿದ್ದು, ಇದು "ಅಪ್ರೆಂಟಿಸ್ ಮಕ್ಕಳಿ"ಗಷ್ಟೇ ಸೀಮಿತವಾಗಿದ್ದು (ಯಾರನ್ನು ದುಡಿಯಲು ಬಲಾತ್ಕಾರಿಸಿತ್ತಿದ್ದರೋ, ಅವರನ್ನು ಸರ್ಕಾರಿ-ಸ್ವಾಮ್ಯದ ವರ್ಕ್ ಹೌಸ್ಗಳಲ್ಲಿ ನಿಜವಾಗಿಯೂ ಗುಲಾಮರನ್ನಾಗಿ ಮಾರುತ್ತಿದ್ದರು) ಮತ್ತು "ಫ್ರೀ-ವರ್ಕ್ ಮಕ್ಕಳಿ"ಗೆ ಸಂಭಂಧಿಸಿದಲ್ಲ (ಯಾರು ಸ್ವ-ಇಚ್ಚೆಯಿಂದ ಕೆಲಸ ಮಾಡುವರೋ). ಆದುದರಿಂದ ಸರ್ಕಾರ ಮತ್ತು ರಾಜ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಆಕ್ಷೇಪಣೆಯೇ ಹೊರತು ಲೈಸೆಜ್ -ಫೈರೆ ಬಂಡವಾಳಶಾಹಿಯದ್ದಲ್ಲ. ಅವನು ಮುಂದೆಯೂ ವಾದಿಸುತ್ತಾ, ಸ್ವ-ಇಚ್ಚೆಯಿಂದ ದುಡಿಯುವ ಮಕ್ಕಳ ಕೆಲಸದ ಸ್ಥಿತಿಯು ಮಾದರಿಗೆ ದೂರವಾಗಿದ್ದರೂ, ಅವು ಮನಸ್ಸಿಗೆ ಬಂದಂತ ಉತ್ಪ್ರೇಕ್ಷೆಯಂತಹ "ಅಧಿಕಾರಯುಕ್ತ" ಮೂಲವಾದ ಸ್ಯಾಡ್ಲೆರ್ ವರದಿಯ ಈ ವಿಚಾರವು ಬಂಡವಾಳಶಾಹಿ-ವಿರೋಧಿ ಫ್ರೈದ್ರಿಚ್ ಏಂಜಲ್ಸ್ಗೂ ಸಹ ಒಪ್ಪಿಗೆಯಾಗಿದೆ.[೩೨]


ಬಾಲಕಾರ್ಮಿಕ ಪದ್ದತಿಯ ವಿರುದ್ದದ ಪ್ರಯತ್ನಗಳು

ಬಾಲಕಾರ್ಮಿಕ ಪದ್ಧತಿಯ ತೊಡೆದುಹಾಕುವಿಕೆಯ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು, 1992ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ಸಂಘವು ಇಂಟರ್ನಾಷನಲ್ ಪ್ರೋಗ್ರಾಮ್ ಆನ್ ದಿ ಎಲಿಮಿನೇಶನ್ ಆಫ್ ಚೈಲ್ಡ್ ಲೇಬರ್(ಐಪಿಇಸಿ) ಎಂಬ ಕಾರ್ಯಕ್ರಮವನ್ನು ಹುಟ್ಟುಹಾಕಿದ್ದು, ಈ ನಿಷೇಧದ ಬೆಳವಣಿಗೆಯು ರಾಷ್ಟ್ರಗಳಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವನ್ನು ಬಲಪಡಿಸುವುದರಿಂದ ಮತ್ತು ಬಾಲಕಾರ್ಮಿಕ ಪದ್ದತಿಯ ವಿರುದ್ದ ವಿಶ್ವಾದ್ಯಂತ ಆಂದೋಲನವನ್ನು ಪ್ರೋತ್ಸಾಹಿಸುವುದರಿಂದ ಸಾಧಿಸುವುದಾಗಿತ್ತು. ಐಪಿಇಸಿ ಸಧ್ಯದಲ್ಲಿ 88 ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 2008ರಲ್ಲಿ ತಾಂತ್ರಿಕ ಸಹಕಾರ ಯೋಜನೆಯ ವಾರ್ಷಿಕ ಖರ್ಚು ವೆಚ್ಚ 61 ಮಿಲಿಯನ್ ಯು.ಎಸ್ ಡಾಲರ್ಸ್ ಅನ್ನು ಮೀರಿದೆ. ಇದು ವಿಶ್ವಮಟ್ಟದ ಬೃಹತ್ ಕಾರ್ಯಕ್ರಮವಾಗಿದ್ದು, ಐಎಲ್ಓ ನ ದೊಡ್ಡದಾದ ಏಕಮಾತ್ರ ಆರ್ಥಿಕ ವ್ಯವಹಾರಗಳ ಕಾರ್ಯಕ್ರಮವಾಗಿದೆ.


ಮುಂದಿನ ಕೆಲವು ವರ್ಷಗಳಲ್ಲಿ, ಐಪಿಇಸಿ ನ ಜೊತೆಗಾರರು ಸಂಖ್ಯೆ ಮತ್ತು ಶ್ರೇಣಿಗಳಲ್ಲಿ ವಿಸ್ತಾರಗೊಂಡಿದ್ದು, ಈಗ ಅವರೊಂದಿಗೆ ಕೆಲಸಗಾರರು ಮತ್ತು ಒಡೆಯರ ಸಂಸ್ಥೆಯು, ಇತರ ಅಂತರರಾಷ್ಟ್ರೀಯ ಮತ್ತು ಸರ್ಕಾರಿ ಪ್ರತಿನಿಧಿಗಳು, ಖಾಸಗಿ ವ್ಯವಹಾರಗಳು, ಸಾಮಾಜಿಕ ಆಧಾರದ ಸಂಘ ಸಂಸ್ಥೆಗಳು, ಏನ್ ಜಿ ಓ ಗಳು, ಮಾಧ್ಯಮದವರು, ರಾಜ್ಯ ಕಾರ್ಯಾಚರಣೆಯ ಜನರು, ನ್ಯಾಯಾಧೀಶರ ಸಮೂಹ, ವಿಶ್ವವಿದ್ಯಾನಿಲಯಗಳು, ಧಾರ್ಮಿಕ ಗುಂಪುಗಳು ಮತ್ತು ಮಕ್ಕಳು ಹಾಗು ಅವರ ಕುಟುಂಬಗಳು.


ಐಪಿಇಸಿಯಾ ಬಾಲಕಾರ್ಮಿಕ ಪದ್ದತಿಯ ತೊಡೆದುಹಾಕುವಿಕೆಯ ಕೆಲಸವು, ಐಎಲ್ಓ ನ ಯೋಗ್ಯ ಕಾರ್ಯಕ್ರಮದ ಮುಖ್ಯ ರೂಪವಾಗಿದೆ. ಬಾಲಕಾರ್ಮಿಕ ಪದ್ದತಿಯು ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಬೇಕಾಗಿರುವ ಕೌಶಲ್ಯ ಮತ್ತು ವಿಧ್ಯಾಭ್ಯಾಸಕ್ಕೆ ಅಡ್ಡಿಯನ್ನುಂಟು ಮಾಡುವುದರ ಜೊತೆಗೆ, ನಿರಂತರ ದಾರಿದ್ರ್ಯ ಹಾಗು ಸ್ಪರ್ಧಾತ್ಮಕತೆ, ಉತ್ಪಾದಕತೆ ಮತ್ತು ಆದಾಯದ ಸಂಭವನೀಯತೆಯ ನಷ್ಟವು ರಾಷ್ಟ್ರದ ಆರ್ಥಿಕ ಪ್ರಗತಿಗೆ ಅಡ್ಡಿಯುಂಟು ಮಾಡುತ್ತದೆ. ಬಾಲಕಾರ್ಮಿಕ ಪದ್ದತಿಯಿಂದ ಮಕ್ಕಳನ್ನು ತೆಗೆದು ಹಾಕುವುದು, ಅವರಿಗೆ ವಿಧ್ಯಾಭ್ಯಾಸ ಒದಗಿಸುವುದು ಮತ್ತು ಅವರ ಕುಟುಂಬಗಳಿಗೆ ನೆರವಾಗುತ್ತಾ, ತರಬೇತಿ ಮತ್ತು ಉದ್ಯೋಗದ ಅವಕಾಶಗಳನ್ನು ನೇರವಾಗಿ ಕೊಡುವುದರಿಂದ, ವಯಸ್ಕರಿಗೆ ಯೋಗ್ಯವಾದ ಕೆಲಸ ಕೊಡುವುದನ್ನು ರಚಿಸಿದಂತಾಗುತ್ತದೆ.[೩೩]


ಇವನ್ನೂ ಗಮನಿಸಿ


ಅಂತರರಾಷ್ಟ್ರೀಯ ಒಡಂಬಡಿಕೆ/ಸಭೆ ಮತ್ತು ಇತರ ಉಪಕರಣಗಳು:


ಟಿಪ್ಪಣಿಗಳು

  1. ದಿ ಲೈಫ್ ಆಫ್ ಇನ್ದುಸ್ಟ್ರಿಯಲ್ ವರ್ಕರ್ ಇನ್ ನೈನ್ಟೀಂತ್ ಸೆಂಚುರಿ ಇಂಗ್ಲಂಡ್ ಲೌರ ಡೆಲ್ ಕೋಲ್, ಪಶ್ಚಿಮ ವರ್ಜೀನಿಯಾ ವಿಶ್ವವಿದ್ಯಾನಿಲಯ
  2. "Ratification of the Convention on the Rights of the Child". Office of the United Nations High Commissioner for Human Rights. Retrieved 2006-10-05.
  3. ನಾರ್ಬರ್ಗ್, ಜೋಹನ್ (2007), ವಾರ್ಲ್ದೆನ್ಸ್ ವಲ್ಫಾರ್ದ್ (ಸ್ಟಾಕ್ಹೊಲ್ಮ್: ಸ್ವೀಡೆನ್ ನ ಸರ್ಕಾರಿ ಕಛೇರಿಗಳು), ಪು. 58
  4. ೪.೦ ೪.೧ ಇ.ಪಿ ಥಾಮ್ಸನ್, ದಿ ಮೇಕಿಂಗ್ ಆಫ್ ದಿ ಬ್ರಿಟೀಷ್ ವರ್ಕಿಂಗ್ ಕ್ಲಾಸ್ , (ಪೆಂಗ್ವಿನ್, 1968), ಪಿಪಿ. 366-7
  5. ಲೌರಾ ಡೆಲ್ ಕಾಲ್, ಪಶ್ಚಿಮ ವರ್ಜೀನಿಯಾದ ವಿಶ್ವವಿದ್ಯಾನಿಲಯ, ದಿ ಲೈಫ್ ಆಫ್ ದಿ ಇನ್ದುಸ್ತ್ರಿಅಲ್ ವರ್ಕರ್ ಇನ್ ದಿ ನೈನ್ಟೀಂತ್ ಸೆಂಚುರಿ ಇಂಗ್ಲಂಡ್
  6. ೬.೦ ೬.೧ ಬಾರ್ಬರ ಡೇನಿಯಲ್ಸ್, ಪಾವರ್ಟಿ ಅಂಡ್ ಫ್ಯಾಮಿಲೀಸ್ ಇನ್ ದಿ ವಿಕ್ಟೋರಿಯನ್ ಎರ
  7. ಬೇರ್ತ್ರಾನ್ಡ್ ರಸ್ಸಲ್, ದಿ ಇಮ್ಪಾಕ್ಟ್ ಆಫ್ ಸೈನ್ಸ್ ಆನ್ ಸೊಸೈಟಿ, ಪು. 31.
  8. ೮.೦ ೮.೧ ಲೇಬರ್ ಡೇವಿಡ್ ಕೋಡಿ, ಹಾರ್ಟ್ವಿಕ್ ಕಾಲೇಜ್
  9. [79] ^ "ದಿ ಇಂಡಸ್ಟ್ರಿಯಲ್ ರಿವಾಲ್ಯೂಷನ್". ಶಿಕ್ಷಕರ ವೆಬ್ ಇನ್‌ಸ್ಟಿಟ್ಯೂಟ್
  10. [78] ^ "ಫೋಟೋಗ್ರಾಫ್ಸ್ ಆಫ್ ಲೆವಿಸ್ ಹೈನ್:ಡಾಕ್ಯುಮೆಂಟೇಷನ್ ಆಫ್ ಚೈಲ್ಡ್ ಲೇಬರ್ ". U.S. ರಾಷ್ಟ್ರೀಯ ಪತ್ರಾಗಾರಗಳು ಮತ್ತು ದಾಖಲೆಗಳ ಆಡಳಿತ.
  11. "Child labour in Kyrgyz coal mines". BBC News. 2007-08-24. Retrieved 2007-08-25.
  12. ೧೨.೦ ೧೨.೧ "The State of the World's Children 1997". UNICEF. Retrieved 2007-04-15. ಉಲ್ಲೇಖ ದೋಷ: Invalid <ref> tag; name "unicef" defined multiple times with different content
  13. ಆಫ್ಫಿರ್ಮಿಂಗ್ ರೈಟ್ಸ್ , ಯೂನಿಸೆಫ್
  14. "Worst Forms of Child Labor Recommendation, 1999". International Labour Organization. Retrieved 2006-10-05.
  15. ೧೫.೦ ೧೫.೧ "Convention on the Rights of the Child". United Nations. Retrieved 2006-10-05.
  16. Unwire.org
  17. ಬಾಸು, ಕೌಶಿಕ್ ಅಂಡ್ ವ್ಯಾನ್, ಫಾನ್ ಹೋಆಂಗ್ , 1998. 'ದಿ ಎಕನಾಮಿಕ್ಸ್ ಆಫ್ ಚೈಲ್ಡ್ ಲೇಬರ್', ಅಮೇರಿಕನ್ ಎಕನಾಮಿಕ್ ರಿವ್ಯೂ , 88(3),412-427
  18. ಚೈಲ್ಡ್ ಲೇಬರ್ ಇನ್ ಇಂಡಿಯಾ ಬೈ ಸಬಾ ಸಯೀದ್
  19. ಬಿಬಿಸಿ ವಾರ್ತೆ
  20. Globalmarch.org
  21. Globalmarch.org
  22. Globalmarch.org
  23. Globalmarch.org
  24. Globalmarch.org
  25. Globalmarch.org
  26. ಗ್ಯಾಪ್ ಇನ್ಕ್. - ಮೀಡಿಯ - ಪ್ರೆಸ್ ರಿಲೀಸೆಸ್
  27. ಇನ್ಕ್ವೈರೀ ಫೈನ್ಡಸ್ ಅಂದರೆಜ್ ವರ್ಕರ್ಸ್ ಅಟ್ ಮೀಟ್ ಪ್ಲಾಂಟ್
  28. "ಸ್ಟೋರ್ಸ್ ಅರ್ಜ್ದ್ ಟು ಸ್ಟಾಪ್ ಯೂಸಿಂಗ್ ಚೈಲ್ಡ್ ಲೇಬರ್ ಕಾಟ್ಟನ್"
  29. ೨೯.೦ ೨೯.೧ ಹ್ಯೂಗ್ಹ್ ಕನ್ನಿಂಘಾಂ, "ದಿ ಎಮ್ಪ್ಲಾಯ್ಮೆಂಟ್ ಅಂಡ್ ಅನ್-ಎಮ್ಪ್ಲಾಯ್ಮೆಂಟ್ ಆಫ್ ಚಿಲ್ಡ್ರನ್ ಇನ್ ಇಂಗ್ಲೆಂಡ್ c.1680-1851." ಪಾಸ್ಟ್ ಅಂಡ್ ಪ್ರೆಸೆಂಟ್ . ಫೆಬ್., 1990 ಉಲ್ಲೇಖ ದೋಷ: Invalid <ref> tag; name "cunningham" defined multiple times with different content
  30. ಮುರ್ರೆ ರಾತ್ಬಾರ್ಡ್, ಡೌನ್ ವಿಥ್ ಪ್ರಿಮಿತೀವಿಸ್ಮ್: ಎ ಥರೋ ಕ್ರಿಟಿಕ್ ಆಫ್ ಪೋಲನ್ಯಿ ಲುಡ್ವಿಗ್ ವೊನ್ ಮಿಸೆಸ್ ಇನ್ಸ್ಟಿಟ್ಯುಟ್,ಜೂನ್ 1961 ಲೇಖನದ ಮರುಪ್ರಕಟನೆ.]
  31. ಡಿಗ್ರೆಗೊರಿ, ಥಾಮಸ್ ಆರ್., "ಚೈಲ್ಡ್ ಲೇಬರ್ ಆರ್ ಚೈಲ್ಡ್ ಪ್ರೋಸ್ಟಿಟ್ಯೂಷನ್" ಕ್ಯಾಟೋ ಇನ್ಸ್‌ಟಿಟ್ಯೂಟ್
  32. ರೀಡ್, ಲಾರೆನ್ಸ್, "ಚೈಲ್ಡ್ ಲೇಬರ್ ಅಂಡ್ ದಿ ಬ್ರಿಟೀಷ್ ಇನ್ದುಸ್ಟ್ರಿಯಲ್ ರೆವಲ್ಯೂಷನ್" ದಿ ಫ್ರೀಮ್ಯಾನ್
  33. Ilo.org


ಹೆಚ್ಚಿನ ಓದಿಗೆ

ಬಾಲಕಾರ್ಮಿಕ ಪದ್ದತಿಯ ಮೇಲೆ ಆಯ್ದ ಪ್ರಭುದ್ಧ ಲೇಖನಗಳು

  • ಜೀನ್-ಮಾರಿ ಬಲಂಡ್ ಅಂಡ್ ಜೇಮ್ಸ್ ಎ. ರಾಬಿನ್ಸನ್ (2000) 'ಇಸ್ ಚೈಲ್ಡ್ ಲೇಬರ್ ಇನ್ ಎಫ್ಫಿಸಿಯಂಟ್?' ಜರ್ನಲ್ ಆಫ್ ಪೊಲಿಟಿಕಲ್ ಎಕಾನಮಿ 108, 663-679
  • ಕೌಶಿಕ್ ಬಸು ಅಂಡ್ ಹೋಮ ಜರ್ಘಮೀ (2009) 'ಇಸ್ ಪ್ರಾಡಕ್ಟ್ ಬಾಯ್ಕಾಟ್ ಅ ಗುಡ್ ಐಡಿಯಾ ಫಾರ್ ಕಂಟ್ರೋಲ್ಲಿಂಗ್ ಚೈಲ್ಡ್ ಲೇಬರ್? ಎ ತಿಯೊರೆಟಿಕಲ್ ಇನ್ವೆಸ್ಟಿಗೇಷನ್' ಜರ್ನಲ್ ಆಫ್ ಡೆವಲಪ್ಮೆಂಟ್ ಎಕಾನಮಿಕ್ಸ್ 88, 217-220
  • ಆಗೆಂದ್ರ ಭುಕುಥ್ (2008) 'ದೆಫೈನಿಂಗ್ ಚೈಲ್ಡ್ ಲೇಬರ್: ಎ ಕಾನ್ಟ್ರೋವೆರ್ಸಿಯಲ್ ಡಿಬೇಟ್' ಡೆವಲಪ್ಮೆಂಟ್ ಇನ್ ಪ್ರಾಕ್ಟೀಸ್ 18, 385-394
  • ಮಾರ್ಟಿನ್ ರವಲ್ಲಿಯನ್ ಅಂಡ್ ಕ್ವೇನ್ಟಿನ್ ವೊಡೊನ್ (2000) 'ಡಸ್ ಚೈಲ್ಡ್ ಲೇಬರ್ ಡಿಸ್ಪ್ಲೇಸ್ ಸ್ಕೂಲಿಂಗ್? ಎವಿಡೆನ್ಸ್ ಆನ್ ಬಿಹೇವಿಯೋರಲ್ ರೆಸ್ಪಾನ್ಸೆಸ್ ಟು ಆನ್ ಎನ್ರೋಲ್ಮೆಂಟ್ ಸಬ್ಸಿಡಿ' ಎಕನಾಮಿಕ್ ಜರ್ನಲ್ 110, C158-C175

ಹೊರಗಿನ ಕೊಂಡಿಗಳು

ವಜ್ರ ಕೈಗಾರಿಕೆಯಲ್ಲಿನ ಬಾಲ ಕಾರ್ಮಿಕ ಪದ್ಧತಿ