ಸದಸ್ಯ:Anivaasi/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: {{Infobox person | name = ಎಸ್. ರಾಮಚಂದ್ರ | image = thumb | birth_date = {{birth date|1948|11|16|}} | birth_p...
( ಯಾವುದೇ ವ್ಯತ್ಯಾಸವಿಲ್ಲ )

೧೭:೦೭, ೨ ಜೂನ್ ೨೦೧೫ ನಂತೆ ಪರಿಷ್ಕರಣೆ

ಎಸ್. ರಾಮಚಂದ್ರ
ಜನನ(೧೯೪೮-೧೧-೧೬)೧೬ ನವೆಂಬರ್ ೧೯೪೮
ಮರಣಜನವರಿ 10, 2011(2011-01-10)
ಉದ್ಯೋಗಛಾಯಾಗ್ರಾಹಕ

ಹೊಸ ಅಲೆಯ ಸಿನಿಮಾಗಳ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದ ಕನ್ನಡ ಚಿತ್ರರಂಗ ದ ಪ್ರಸಿದ್ಧ ಹಿರಿಯ ಛಾಯಾಗ್ರಾಹಕ 'ಎಸ್.ರಾಮಚಂದ್ರ ಐತಾಳ್'ಹುಟ್ಟಿದ್ದು ಉಡುಪಿ ಜಿಲ್ಲೆಕೋಟಾದಲ್ಲಿ. ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗ ಪ್ರವೇಶಿಸಿದ ರಾಮಚಂದ್ರ ಅವರು 75ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.ವೀಕ್ಷಕರು ಅಚ್ಚರಿ ಪಡುವಂಥ ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದ ಕಲಾತ್ಮಕ ಛಾಯಾಗ್ರಾಹಕ.ರಾಮಚಂದ್ರ ಅವರ ಛಾಯಾಗ್ರಹಣಕ್ಕೆ ಅಂಥದೊಂದು ಶಕ್ತಿ ಇತ್ತು.ಸಹಜವಾಗಿ ಚಿತ್ರೀಕರಿಸಬೇಕಿದ್ದ ದೃಶ್ಯವೊಂದನ್ನು ವಿಶೇಷವಾದ ರೀತಿಯಲ್ಲಿ, ಇದನ್ನು ಹೀಗೂ ಸೆರೆಹಿಡಿಯಬಹುದೇ ಎಂದು ಬೆರಗಾಗುವ ರೀತಿಯಲ್ಲಿ ಚಿತ್ರಿಸಿಕೊಡುವ ಮಾಂತ್ರಿಕತೆ ಇತ್ತು. ಕಲಾತ್ಮಕ ಚಿತ್ರಗಳ ಪರಂಪರೆ ಕನ್ನಡದಲ್ಲಿ ಮಹತ್ವದ ಸ್ಥಾನ ಪಡೆಯುವಲ್ಲಿ ಅವರ ಅಮೂಲ್ಯ ಕೊಡುಗೆ ಇತ್ತು.ರಾಮಚಂದ್ರರವರು ಪೂನಾ ಫಿಲ್ಮ್ ಇನ್‌ಸಿrಟ್ಯೂಟ್‌ನ ಕೊಡುಗೆ. ಅಲ್ಲಿ ಅವರು ಛಾಯಾಗ್ರಹಣದ ವ್ಯಾಸಂಗ ಮಾಡಿದರು. ಅಲ್ಲಿಂದ ಬಂದ ನಂತರ ಅವರು ಗಿರೀಶ್‌ ಕಾರ್ನಾಡರ 'ವಂಶವೃಕ್ಷ' ಚಿತ್ರಕ್ಕೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು. 1972 ರಲ್ಲಿ ತೆರೆಕಂಡ 'ಸಂಕಲ್ಪ' ಚಿತ್ರ ರಾಮಚಂದ್ರರನ್ನೂ ನಾಡಿಗೆ ಪರಿಚಯಿಸಿತು. ಆ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕ ರಾಗಿ ಅವರು ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡರು,ಅವರು ಛಾಯಾಗ್ರಹಣ ಮಾಡಿದ ಬಹುತೇಕ ಚಿತ್ರಗಳು ಕಲಾತ್ಮಕ ಚಿತ್ರಗಳಾಗಿದ್ದವು. ಅದು ಅವರಿಗಿರುವ ಹೆಗ್ಗಳಿಕೆಯೂ ಹೌದು. ದೈಹಿಕ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಅವರು ಸಾಧನೆಯ ಶಿಖರವೇರಿದರು. 1977ರಲ್ಲಿ ತೆರೆಕಂಡ 'ಋಷ್ಯ ಶೃಂಗ' ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು.'ಸಾವಿತ್ರಿ', 'ಚೋಮನ ದುಡಿ', 'ಪಲ್ಲವಿ', 'ಹುಲಿ ಹೆಬ್ಬುಲಿ', 'ಮನೆ', 'ಗೀಜಗನ ಗೂಡು', 'ಗ್ರಹಣ', 'ಸಂತ ಶಿಶುನಾಳ ಷರೀಫ‌', 'ಹೊಂಬಿಸಿಲು', 'ಪರಸಂಗದ ಗೆಂಡೆತಿಮ್ಮ', 'ದೇವೀರಿ', 'ವಿಮುಕ್ತಿ', 'ಮುಖಪುಟ', 'ಕ್ರೌರ್ಯ', 'ಹಸೀನಾ', 'ಗುಲಾಬಿ ಟಾಕೀಸ್‌', 'ಘಟಶ್ರಾದ್ಧ' ಮತ್ತು 'ಅನ್ವೇಷಣೆ' ಸೇರಿದಂತೆ ಸುಮಾರು 75 ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.೧೯೭೭ರಲ್ಲಿ ರಾಷ್ಟ್ರಪ್ರಶಸ್ತಿ: ೧೯೭೭ರಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಛಾಯಾಗ್ರಾಹಕ (ಚಂದ್ರಶೇಖರ ಕಂಬಾರರ ‘ಋಷ್ಯಶೃಂಗ’) ಪ್ರಶಸ್ತಿ, ಐದು ಬಾರಿ ರಾಜ್ಯಪ್ರಶಸ್ತಿ, ೨೦೦೪ರಲ್ಲಿ ಜೀವ ಮಾನ ಸಾಧನೆಗಾಗಿ ಸಂದ ಗೌರವಗಳು ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ರಾಮಚಂದ್ರ ಅವರು ಪಾತ್ರರಾಗಿದ್ದಾರೆ. ಕಲಾತ್ಮಕ ಚಿತ್ರಗಳೆಂದರೆ ಅಲ್ಲಿ ಎಸ್.ರಾಮಚಂದ್ರ ಇರಲೇಬೇಕು ಎಂಬಷ್ಟು ಅವರು ಆ ಚಿತ್ರಗಳ ಪಾಲಾಗಿದ್ದರು. ಸದಾಶಿವ ಶೆಣೈ ನಿರ್ದೇಶನದ 'ಪ್ರಾರ್ಥನಾ' ಅವರ 75ನೆ ಚಿತ್ರ.ಕನ್ನಡ ಚಿತ್ರಗಳಲ್ಲದೆ, ಅವರು ಹಿಂದಿ ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದು ವಿಶೇಷ. ಹಿಂದಿಯ 'ಯಾದೇ', 'ರಾಕಿ', 'ಪರದೇಸಿ' ಹಾಗೂ 'ಪರ್ವಾನಿ' ಸೇರಿದಂತೆ ಹಲವು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದರು. ಶಂಕರ್ ನಾಗ್ ನಿರ್ದೇಶನದ ಹಿಂದಿಯ 'ಮಾಲ್ಗುಡಿ ಡೇಸ್‌' ಧಾರಾವಾಹಿಗೂ ರಾಮಚಂದ್ರ ಕ್ಯಾಮರಾ ಹಿಡಿದಿದ್ದರು.ನಿರ್ದೇಶಕ ರಾಮದಾಸ್‌ನಾಯ್ಡು ನಿರ್ದೇಶನದ 'ಹೆಜ್ಜೆಗಳು' ರಾಮಚಂದ್ರ ಅವರು ಕ್ಯಾಮರಾ ಹಿಡಿದ ಕೊನೆಯ ಚಿತ್ರ. ಇವರು ೧೦.೦೧.೨೦೧೧ ರಂದು ನಿದನರಾದರು.ಪತ್ಮಿಯ ಹೆಸರು ಮೀನಾಕ್ಷಿ, ಪುತ್ರಿಯರು ಚೈತ್ರಾ ಮತ್ತು ವರ್ಷಾ. [೧]

  1. ೧.೦ ೧.೧ Award winning cameraman S.Ramachandra dead