ಜೇವರ್ಗಿ (ತಾಲ್ಲೂಕು): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
ಕಲ್ಬುರ್ಗಿ ಜಿಲ್ಲೆಯ ಒಂದು ತಾಲೊಕ್ಕು ಕೇಂದ್ರ,
[[ಕಲ್ಬುರ್ಗಿ ಜಿಲ್ಲೆ]] ಯ ಒಂದು ತಾಲೊಕ್ಕು ಕೇಂದ್ರ,
==ಭೌಗೋಳಿಕ==
==ಭೌಗೋಳಿಕ==
ಸಮುದ್ರ ಮಟ್ಟದಿಂದ ೩೯೩ಮೀಟರ್ ಎತ್ತರದಲ್ಲಿ ಇದೆ, ೪.೨೫ ಕಿಮೀ ವಿಸ್ತೀರ್ಣ ಹೊಂದಿದೆ. ಭೀಮ ಹೊಳೆಯು ಈ ತಾಲೋಕಿನಲ್ಲಿ ಹರಿಯುವುದು. ೨೦೧೦ರ ಬೇಸಿಗೆಯಲ್ಲಿ ೪೬ಡಿಗ್ರಿ ಬಿಸಿ ಇಲ್ಲಿ ಇತ್ತು.
ಸಮುದ್ರ ಮಟ್ಟದಿಂದ ೩೯೩ಮೀಟರ್ ಎತ್ತರದಲ್ಲಿ ಇದೆ, ೪.೨೫ ಕಿಮೀ ವಿಸ್ತೀರ್ಣ ಹೊಂದಿದೆ. ಭೀಮ ಹೊಳೆಯು ಈ ತಾಲೋಕಿನಲ್ಲಿ ಹರಿಯುವುದು. ೨೦೧೦ರ ಬೇಸಿಗೆಯಲ್ಲಿ ೪೬ಡಿಗ್ರಿ ಬಿಸಿ ಇಲ್ಲಿ ಇತ್ತು.

೧೯:೫೪, ೨೫ ಫೆಬ್ರವರಿ ೨೦೧೫ ನಂತೆ ಪರಿಷ್ಕರಣೆ

ಕಲ್ಬುರ್ಗಿ ಜಿಲ್ಲೆ ಯ ಒಂದು ತಾಲೊಕ್ಕು ಕೇಂದ್ರ,

ಭೌಗೋಳಿಕ

ಸಮುದ್ರ ಮಟ್ಟದಿಂದ ೩೯೩ಮೀಟರ್ ಎತ್ತರದಲ್ಲಿ ಇದೆ, ೪.೨೫ ಕಿಮೀ ವಿಸ್ತೀರ್ಣ ಹೊಂದಿದೆ. ಭೀಮ ಹೊಳೆಯು ಈ ತಾಲೋಕಿನಲ್ಲಿ ಹರಿಯುವುದು. ೨೦೧೦ರ ಬೇಸಿಗೆಯಲ್ಲಿ ೪೬ಡಿಗ್ರಿ ಬಿಸಿ ಇಲ್ಲಿ ಇತ್ತು.

ಮಂದಿ ಸಂಖೆ

೨೦೦೧ರ ಜನಗಣತಿ ಪ್ರಕಾರ ಇಲ್ಲಿ ೧೯೧೭೪ಮಂದಿಗಳು ವಾಸವಿದ್ದರು.

ಜೀವರ್ಗಿ ತಾಲೂಕಿನ ಪ್ರೇಕ್ಷಣೀಯ ಸ್ಥಳಗಳು

ಕಡಕೋಳ ಮಡಿವಾಲೇಶ್ವರ ಮಠ

ತಾ. ಜೇವರ್ಗಿ ದೂರ ೪೬ ಕಿ.ಮೀ.

ತಾಲೂಕಾ ಕೇಂದ್ರ ಜೇವರ್ಗಿಯಿಂದ ನೈಋತ್ಯಕ್ಕೆ ೪೬ ಕಿ.ಮೀ. ಯಡ್ರಾಮಿಯಿಂದ ವಾಯುವ್ಯಕ್ಕೆ ೬ ಕಿ.ಮೀ. ಚಿಣಗೇರಿ ಹೊಳೆಯ ಎಡದಂಡೆಯ ಮೇಲಿರುವ ಧಾರ್ಮಿಕ ಕೇಂದ್ರಮಾಗಿದೆ. ಶರಣ ಬಸವೇಶ್ವರರ ಸಮಕಾಲೀನರಾದ ಕಡಕೋಳ ಮಡಿವಾಳಪ್ಪನವರ ಮಠದಿಂದಾಗಿ ಈ ಊರು ಪ್ರಸಿದ್ಧವಾಗಿದೆ. ಕಲ್ಬುರ್ಗಿ ತಾಲೂಕಿನ ಬಿದನೂರಿನಲ್ಲಿ ಜನಿಸಿದ ಮಡಿವಾಳಪ್ಪ ಶರಣ ಬಸವೇಶ್ವರರ ಪ್ರಭಾವದಿಂದ ಅರಳಗುಂಡಿಗೆಯಲ್ಲಿ ಸ್ವಲ್ಪಕಾಲ ಇದ್ದು ನಂತರ ಕಾರಣಾಂತರದಿಂದ ಕಡಕೋಳಕ್ಕೆ ಬಂದು ನೆಲೆಸಿ ಅಲ್ಲೆ ಐಕ್ಯರಾದರು. ಇವರ ಸಮಾಧಿಯು ಇಲ್ಲಿದ್ದು ಮಡಿವಾಳಪ್ಪ ಮಠವೆಂದು ರೂಡಿಯಲ್ಲಿದೆ. ಮಡಿವಾಳೇಶ್ವರ ಮಠ ಪ್ರಾಚೀನ ಕಟ್ಟಡವಾಗಿದ್ದು ವಿಶಾಲವಾದ ಪ್ರಾಕಾರದಲ್ಲಿರುವ ಗುಡಿಯಲ್ಲಿ ವೇದಿಕೆಯ ಮೇಲೆ ಮಡಿವಾಳಪ್ಪ ಹಾಗೂ ಶಿಷ್ಯನ ಗದ್ದುಗೆಯು ಇರುವ ಭೀಮಾಶಂಕರನ ಗುಡಿ ಇದೆ. ವಚನಕಾರರಾಗಿದ್ದ ಮಡಿವಾಳಪ್ಪನವರು “ಕೈವಲ್ಯ ವಾಕ್ಯಾಮೃತ” ಎಂಬ ವಚನ ಕೃತಿಯನ್ನು ರಚಿಸಿದ್ದು ಹಲವಾರು ತತ್ವ ಪದಗಳನ್ನು ರಚಿಸಿದ್ದಾರೆ.

ಮಳ್ಳಿ

ತಾ. ಜೇವರ್ಗಿ ದೂರ ೫೦ ಕಿ.ಮೀ. ತಾಲೂಕಾ ಕೇಂದ್ರ ಜೇವರ್ಗಿಯಿಂದ ನೈಋತ್ಯಕ್ಕೆ ೫೦ ಕಿ.ಮೀ. ದೂರದಲ್ಲಿರುವ ಮಳ್ಳಿಯು ನೆರೆಯ ಕುಳಗೇರಿ ಗ್ರಾಮದ ಶಾಸನದಲ್ಲಿ “ಮಣಳಿ” ಎಂದೇ ಪ್ರಖ್ಯಾತವಾದ ಈ ಗ್ರಾಮ ಚೌಡೇಶ್ವರಿಯ ಜಾತ್ರೆಯಿಂದಾಗಿ ಮಹತ್ವ ಪಡೆದಿದೆ. ಊರಿನಲ್ಲಿ ಚದುರಿಕೊಂಡಿರುವ ಅವಶೇಷಗಳ ಆಧಾರದ ಮೇಲೆ ಇದರ ಪ್ರಾಚೀನತೆಯನ್ನು ಸುಮಾರು ೧೦-೧೧ನೇ ಶತಮಾನ ಎಂದು ಗುತುತಿಸಬಹುದಾಗಿದೆ. ಮೊದಲ ದಿನ ಚೌಡೇಶ್ವರಿಯ ಎರಡು ಬೆಳ್ಳಿಯ ಮುಖವಾಡಗಳನ್ನು ಪೂಜಿಸಿ ರಾತ್ರಿ ಊರಲ್ಲಿ ಮೆರೆಸುತ್ತಾರೆ. ಎರಡನೆಯ ದಿನ ಜಾತ್ರೆಯಲ್ಲಿ ದೇವಿಯರ ಮುಖವಾಡವನ್ನು ಧರಿಸಿ ಬಡಿಗೆಯಾಟ ಆಡುವರು. ಶಿವರಾತ್ರಿ ಹಬ್ಬದೊಂದಿಗೆ ಜಾಗರಣೆಗೆ ಹೊಂದಿಕೊಳ್ಳುವಂತೆ ಊರಲ್ಲಿ ಹನುಮಂತ, ಚೌಡಮ್ಮ, ಮರಗಮ್ಮನ ಗುಡಿಗಳಿದ್ದು. ಗಾಂಧೀಜಿಗೆಂದೇ ನಿರ್ಮಿಸಿದ ಗಾಂಧೀಗುಡಿ ಇರುವುದು ವಿಶಿಷ್ಟವಾಗಿದೆ. ಅಲ್ಲದೆ ಇಲ್ಲಿರುವ ಸಕ್ಕರೆ ಕಾರ್ಖಾನೆಯು ಪ್ರಸಿದ್ಧವಾಗಿದೆ.