ಸದಸ್ಯ:Keerthi 340/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೩೧ ನೇ ಸಾಲು: ೩೧ ನೇ ಸಾಲು:
ವಿಜ್ಞಾನ ಇತಿಹಾಸದ ದೃಷ್ಟಿಯಲ್ಲಿ ಇದನ್ನು ಒಂದು ಮಹತ್ವದ ಮೈಲಿಗಲ್ಲೆಂದು ಮೆಚ್ಚಲೇ ಬೇಕು ಏಕೆಂದರೆ , ಮನುಷ್ಯ ಭೂಮಿಯಮೇಲಿದ್ದೇ ಕೋಟ್ಯಂತರ ಮೈಲಿ ದೂರದಲ್ಲಿರುವ , ಅಷ್ಟೊಂದು ಬಿಸಿ ಇರುವ ಸೂರ್ಯನ ಮೇಲ್ಮೈ ತಾಪವನ್ನು ಅಳೆಯಲು ಸಾಧ್ಯವಾಯಿತು.
ವಿಜ್ಞಾನ ಇತಿಹಾಸದ ದೃಷ್ಟಿಯಲ್ಲಿ ಇದನ್ನು ಒಂದು ಮಹತ್ವದ ಮೈಲಿಗಲ್ಲೆಂದು ಮೆಚ್ಚಲೇ ಬೇಕು ಏಕೆಂದರೆ , ಮನುಷ್ಯ ಭೂಮಿಯಮೇಲಿದ್ದೇ ಕೋಟ್ಯಂತರ ಮೈಲಿ ದೂರದಲ್ಲಿರುವ , ಅಷ್ಟೊಂದು ಬಿಸಿ ಇರುವ ಸೂರ್ಯನ ಮೇಲ್ಮೈ ತಾಪವನ್ನು ಅಳೆಯಲು ಸಾಧ್ಯವಾಯಿತು.

ಉಷ್ಣ ಹರಿಯುವ ದಿಕ್ಕು ; ಅಧಿಕ ತಾಪದ ಕಾಯದಿಂದ ಕಡಿಮೆ ತಾಪದ ಕಾಯಕ್ಕೆ ಉಷ್ಣ ಹರಿಯುತ್ತದೆ.ಬೆಂಕಿಯ ತಾಪ ಅಧಿಕವಾಗಿರುತ್ತದೆ . ಐಸ್ರ್ಕೇಮ್ ತಾಪ ಕಡಿಮೆ ಇರುತ್ತದೆ . ರೋಗಿಯ ದೇಹದ ತಾಪವನ್ನು ನರ್ಸ್ ಅಳೆಯುತ್ತಾಳೆ. ಹವಾಮಾನ ತಜ್ಞರು ದಿನದ ಗರಿಷ್ಟ ಹಾಗೂ ಕನಿಷ್ಟ ತಾಪಗಳನ್ನು ವರದಿ ಮಾಡುತ್ತಾರೆ . ಹೀಗೆ ದಿನಬಳಕೆಯಲ್ಲಿ ತಾಪದ ಬಗ್ಗೆ ಅನೇಕ ರೀತಿ ಉಲ್ಲೇಖನಗಳಿದ್ದರೂ ಅದರ ನಿಜವಾದ ಅರ್ಥ ಏನೆಂಬುದು ಸ್ಪಷ್ಟವಾಗಿಲ್ಲದೇ ಇರಬಹುದು . ಸಾಮಾನ್ಯವಾಗಿ ತಾಪ ಎಂದರೆ ಕಾಯದಲ್ಲಿ "ಎಷ್ಟು ಉಷ್ಣ ಅಡಗಿದೆ"ಎಂಬುದರ ಅಳತೆ ಎಂದು ಹೇಳುತ್ತೇವೆ . ಆದರೆ,ಇದೊಂದು ತಪ್ಪು ಗ್ರಹಿಕೆ .
ಉಷ್ಣ ಹರಿಯುವ ದಿಕ್ಕು ; ಅಧಿಕ ತಾಪದ ಕಾಯದಿಂದ ಕಡಿಮೆ ತಾಪದ ಕಾಯಕ್ಕೆ ಉಷ್ಣ ಹರಿಯುತ್ತದೆ.

ಅದನ್ನು ಸ್ಪಷ್ಟಪಡಿಸಲು ಭೌತವಿಜ್ಞಾನಕ್ಕೆ ಬಹಳಷ್ಟು ಕಾಲವೇ ಬೇಕಾಯಿತು . ಹದಿನೇಳನೇ ಶತಮಾನದ ಉತ್ತರಾರ್ಧದಲ್ಲಿ ಮಾತ್ರವೇ ಥರ್ಮೋಮೀಟರ್ಗಳನ್ನು ವೃದ್ಧಿಪಡಿಸಲು ಸಾಧ್ಯವಾದುದರಿಂದ ನೀರು ಗಡ್ಡೆಯಾಗುವ ಮತ್ತು ಕುದಿಯುವ ಪ್ರಕ್ರಿಯೆಗಳ ತಾಪವನ್ನು ನಿರ್ದಿಷ್ಟವಾಗಿ ಅಳೆಯಲು ಸಾಧ್ಯವಾಯಿತು . ನೀರು ,ಆಲ್ಕೋಹಾಲ್ ,ಪಾದರಸ ಇವುಗಳನ್ನು ಥರ್ಮೋಮೀಟರ್ಗಳಲ್ಲಿ ಬಳಸಬಹುದು.

ಕಾಯದ ತಾಪ ಅದರ ಉಷ್ಣತಾಸ್ಥಿತಿಯನ್ನು ಪ್ರತಿನಿಧಿಸುತ್ತದೆ ;

ಅದು ಆ ಕಾಯದಿಂದ ಅಥವಾ ಆ ಕಾಯಕ್ಕೆ ಉಷ್ಣಶಕ್ತಿ ಹರಿಯುವ ದಿಕ್ಕನ್ನು ನಿರ್ಧರಿಸುತ್ತದೆ .ಹಾಗಾಗಿ , ಇತರ ಕಾಯಗಳೊಂದಿಗೆ ಹೋಲಿಸಿದಾಗ ಮಾತ್ರ ತಾಪ ಎಂಬುದಕ್ಕೆ ಅರ್ಥವಿದೆ .ನೀರು ಹರಿಯವ ದಿಕ್ಕನ್ನು ಅದರ ಒತ್ತಡ ನಿರ್ಧರಿಸುವಂತೆ -ಯಾವಾಗಲೂ ಅಧಿಕ ಒತ್ತಡದಿಂದ ಕಡಿಮೆ ಒತ್ತಡದೆಡೆಗೆ .

ನಾವು ಯಾವುದೇ ಕಾಯವನ್ನು ಸ್ಪರ್ಷಿಸಿದಾಗ ಅದು ಬಿಸಿ ಎನಿಸಿದರೆ ಆ ಕಾಯದಿಂದ ನಮ್ಮ ದೇಹಕ್ಕೆ ಉಷ್ಣಶಕ್ತಿ ಹರಿದಿದೆ . ಆಗ ಆ ಕಾಯದ ತಾಪ ನಮ್ಮ ದೇಹದ ತಾಪಕ್ಕಿಂತ ಅಧಿಕವಾಗಿದೆ ಎಂದು ಹೇಳುತ್ತೇವೆ . ಕಾಯದ ತಾಪ ನಮ್ಮ ದೇಹದ ತಾಪಕ್ಕಿಂತ ಕಡಿಮೆ ಇದ್ದಾಗ ಉಷ್ಣಶಕ್ತಿ ನಮ್ಮ ದೇಹದಿಂದ ಅದಕ್ಕೆ ಹರಿಯುತ್ತದೆ .ಈ ರೀತಿಯ ಶಕ್ತಿ ಹರಿಯುವಿಕೇಯೇ ಉಷ್ಣ. ಅದು ಯಾವಾಗಲೂ ಬಿಸಿ ಕಾಯದಿಂದ ತಣ್ಣಗಿನ ಕಾಯಕ್ಕೆ ಹರಿಯುತ್ತದೆ . ಅದು ಹೀಗೇ ಏಕೆ ? ತಣ್ಣಗಿರುವ ಕಾಯದಿಂದ ಬಿಸಿ ಕಾಯದೆಡೆಗೆ ಯಾಕೆ ಹರಿಯಬಾರದು ? ಉದಾಹರಣೆಗೆ , ಸಂಪತ್ತನ್ನು ತೆಗೆದುಕೊಳ್ಳಿ. ಅದು ಯಾವಾಗಲೂ ಶ್ರೀಮಂತರಿಂದ ಬಡವರ ಕಡೆಗೆ ಮಾತ್ರ ಹರಿಯುತ್ತದೆಯೆ ?

ಉಷ್ಣ ಮತ್ತು ಕೆಲಸ ; ಉಷ್ಣಗತಿವಿಜ್ಞಾನದ ( ) ಮೊದಲನೇ ನಿಯಮ ; ಉಷ್ಣಶಕ್ತಿ ಹಾಗೂ ಯಾಂತ್ರಿಕಶಕ್ತಿ ( ) ಅಂತರಪರಿವರ್ತನೆ ಯಾಗುತ್ತವೆ.

ಚಲನೆಯಂತೆ ಉಷ್ಣವೂ ಶಕ್ತಿಯ ಒಂದು ರೂಪ ಪ್ರಾನ್ಸಿನಲ್ಲಿ ಚಲಾವಣೆಯಲ್ಲಿರುವ ಹಣ ಫ್ರಾಂಕ್ ಭಾರತದಲ್ಲಿ ಅದು ರೂಪಾಯಿ ಅದೇ ರೀತಿ ಒಂದೊಂದು ಮಾನಗಳಿವೆ (units)ಉಷ್ಣಶಕ್ತಿ ಅಳೆಯಲು ಕೆಲೊರಿ ಯಾಂತ್ರಿಕಶಕ್ತಿ (ಚಲನಶಕ್ತಿ ಪೊಟೆನ್ಶಲ್ ಎನರ್ಜಿ ) ಅಳೆಯಲು ಜೌಲ್

೧೩:೨೪, ೩೦ ಜನವರಿ ೨೦೧೫ ನಂತೆ ಪರಿಷ್ಕರಣೆ

ಉಷ್ಣದ ಸ್ವರೂಪ ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಬೇಸಿಗೆಯ ಸೆಖೆ ಅಸಹನೀಯವಾಗಿರುತ್ತದೆ . ನಿಷ್ಟುರ ಸೂರ್ಯ ಉಗ್ರ ಕಿರಣಗಳನ್ನು ಉಗುಳುತ್ತಿರುತ್ತಾನೆ .ನಾವು ಬೆವರು ಸುರಿಸುತ್ತಾ ನೆರಳಿನೆಡೆಗೆ ಓಡುತ್ತೇವೆ. ಆದರೆ , ಅಂತಹ ಪ್ರದೇಶಗಳಲ್ಲಿಯೂ ಜನ ವಾಸ ಮಾಡುತ್ತಾರೆ.

ಆದರೆ, ಎಲ್ಲಿ ಬೆಚ್ಚಗಿನ ಬಿಸಿಲು ಇಲ್ಲವೋ ಅಲ್ಲಿ ಕೊರೆಯುವ ಚಳಿಯಿಂದ ಮೈ ನಡುಗುತ್ತಾ ಜಡ್ದುಗಟ್ಟುತ್ತದೆ. ಆದ್ದರಿಂದಲ್ಲೇ ಸದಾಕಾಲವೂ ಹಿಮ , ಮಂಜಿನಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಜನವಸತಿ ಇರುವುದಿಲ್ಲ . ಅಷ್ಟೇ ಏಕೆ . ಆ ಭೀಕರ ವಾತಾವರಣದಲ್ಲಿ ಗಿಡಮರಗಳೂ ಬೆಳೆಯಲಾರವು.

ನಮ್ಮ ಬದುಕಿಗೆ ಉಷ್ಣ ಎಷ್ಟು ಮುಖ್ಯ ಎಂಬುದು ಇದರಿಂದ ಅರಿವಾಗುತ್ತವೆ . ಅಡುಗೆ ಮಾಡಲೂ ಶಾಖ ಬೇಕು . ಬೆಚ್ಚಗಿದ್ದಾಗ ಬಹಳ ಹಿತ ಹಾಗೂ ನೆಮ್ಮದಿಯಾಗಿರುತ್ತದೆ. ಚಳಿಗಾಲದಲ್ಲಿ ಒಲೆಯ ಮುಂದೆ ಕುಳಿತು ಅಥವಾ ದಪ್ಪ ಕಂಬಳಿ ಹೊದ್ದು ಬೆಚ್ಚಗಿರುವುದು ಅತ್ಯಂತ ಮುದ ನೀಡುತ್ತದಲ್ಲವೆ?

ಬೆಂಕಿ ಸುಡಬಲ್ಲದು ಹಾಗೂ ಕೊಲ್ಲಬಲ್ಲದು . ಅದೇ ಬೆಂಕಿ ಅನ್ನವನ್ನೂ ಬೇಯಿಸುತ್ತದೆ . ಶೀತದಿಂದ ಮೈ ಬಿರಿಯುತ್ತದೆ . ಶವದ ಮೈ ಶೀತ . ಆದರೆ ,ಆದೇ ಐಸ್-ಕ್ರಿಮ್ ತಂಪು ಪಾನೀಯ ಮುಂತಾದ ರೂಪಗಳಲ್ಲಿ ಶೀತ ಹಿತಕರವಾಗಿರಬಹುದು . ಹವಾನಿಯಂತ್ರಣ ಕೊಠಡಿಯಲ್ಲಿನ ತಂಪು ಆಹ್ಲಾದಕರ .

ಮನುಷ್ಯನ ದೇಹದ ಸಾಮಾನ್ಯ ಚಟುವಟಿಕೆಗಳಿಗೆ ಉಷ್ಣ ಅವಶ್ಯಕ ಉಷ್ಣವೇ ಜೀವನದ ಮೂಲ .ಈ ಸತ್ಯದ ಅರಿವು ಬಹಳ ಹಿಂದೆಯೇ ಉಂಟಾಗಿತ್ತು . ಊಟ ,ಊಸಿರಟ , ಅಷ್ಟೇ ಏಕೆ ಸಂತಾನೋತ್ಪತ್ತಿಯಲ್ಲಿಯೂ ಉಷ್ಣದ ಪಾತ್ರ ತೋರಿಬರುತ್ತದೆ .

ಉಷ್ಣ , ಶೀತ ಇವುಗಳನ್ನು ಅನುಭವಿಸುವುದರಿಂದಷ್ಣೇ ನಮಗೆ ತೃಪ್ತಿ ಇಲ್ಲ . ಈ ಸಂವೇದನೆಗಳ ಮೂಲವೇನು ಎಂಬುದನ್ನೂ ನಾವು ತಿಳಿಯಬೇಕು . ವಾಸ್ತವ ಜಗತ್ತಿನ ಈ ಸತ್ಯವನ್ನು ಮತ್ತಷ್ಟು ಶೋಧಿಸಬೇಕೆಂದು ಬಯಸುತ್ತೇವೆ.

ಉಷ್ಣ ಕಿರಣ : ಉಷ್ಣ ಕಿರಣಗಳು ಮತ್ತು ಬೆಳಕಿನ ಕಿರಣಗಳು ಎರಡು ಒಂದೇ ಬಗೆ.

ಬಿಸಿನೀರಿನ ಬುಗ್ಗೆ ಬೆಳಕನ್ನು ಉತ್ಪತ್ತಿ ಮಾಡಲಾರದು . ಮಿನುಗುವ ರಂಜಕ ಮುಟ್ಟಲು ತಂಪು . ರಸ್ತೆಯ ಮೇಲಿರುವ ಕಾದ ಕಲ್ಲು ಬೆಳಕನ್ನು ನೀಡಲಾರದು . ಪೂರ್ಣಿಮೆಯ ಚಂದ್ರ ಪ್ರಜ್ವಲಿಸುವಾಗಲೂ ಸೆಖೆಯಾಗುವುದಿಲ್ಲ . ಬೆಳಕು ಮತ್ತು ಶಾಖ ಎರಡೂ ಸಹಜವಾಗಿಯೇ ವಿಭಿನ್ನ ರೂಪದ ಕಿರಣಗಳೆಂದು ಇವೆಲ್ಲವೂ ಸೂಚಿಸುತ್ತವೆ . ಆದಾಗ್ಯೂ ಬೆಳಕನ್ನು ಕೊಡುವ ಸೂರ್ಯನೇ ಶಾಖವನ್ನೂ ಕೊಡುತ್ತಾನೆ. ಸಾಖ ಕೊಡುವ ಬೆಂಕಿ ಕೊಠಡಿನ್ನೂ ಬೆಳಗುತ್ತದೆ . ವೋಂಬತ್ತಿಯ ಜ್ವಾಲೆ ಬೆಳಕು ಮತ್ತು ಶಾಖ ಎರಡನ್ನೂ ಉತ್ಪತ್ತಿ ಮಾಡುತ್ತದೆ . ಇವೆಲ್ಲದರ ಆಧಾರದ ಮೇಲೆ ಉಷ್ಣ ಮತ್ತು ಬೆಳಕು ಇವುಗಳ ನಡುವೆ ನಿಕಟ ಸಂಬಂಧವಿದೆ ಎಂದು ತೀರ್ಮಾನಿಸಬಹುದು . ಆದರೆ, ಉಷ್ಣ-ಬೆಳ್ಕುಗಳ ನಡುವಿನ ಸಂಬಂಧ ಚಾಣಾಕ್ಷ ವೀಕ್ಷಕರ ಅರಿವಿಗೂ ಬಹಳ ಕಾಲದವರೆಗೆ ಬಂದೇ ಇರಲಿಲ್ಲ . ಸಂಗೀತಗಾರ -ಖಗೋಳತಜ್ಞ wilhelm Hershel ಎಂಬಾತ ೧೮೦೦ ರಲ್ಲಿ ಸೂರ್ಯನ ಬೆಳಕನ್ನು ಸೋಸಕಗಳ (filter)ಮೂಲಕ ವಿಶ್ಲೇಷಿಸುತ್ತಿದ್ದಾಗ ಸೋಸಕಗಳು ಬಿಸಿಯಾಗುತ್ತಿದ್ದುದನ್ನು ಗಮನಿಸಿ ಸೂರ್ಯನ ಬೆಳಕಿನಲ್ಲಿ ಶಾಖ ಉತ್ಪತ್ತಿ ಮಾಡುವ ಕಿರಣಗಳೂ ಇರಬೇಕೆಂದು ತೀರ್ಮಾನಿಸಿದನು.

ಹರ್ಷೆಲ್ ನ ಆ ಪ್ರಯೋಗಗಳು ಬಹಳ ಸ್ವಾರಸ್ಯಕರವಾಗಿತ್ತು . ಸೂರ್ಯನ ಬೆಳಕು ಕಾಮನಬಿಲ್ಲಿನ ಏಳು ಬಣ್ಣದ ಬೆಳಕುಗಳಿಂದ ಸಂಯೋಜಿತವಾಗಿದೆ ಯಷ್ಟೆ. ಆ ಪ್ರತಿಯೊದು ಬಣ್ಣದ ಬೆಳಕಿನಲ್ಲಿಯೂ ಎಷ್ಟು ಶಾಖವಿರುತ್ತದೆ ಎಂದು ಆತ ತಿಳಿಯಬಯಸಿದ. ಅದಕ್ಕಾಗಿ ಸೂರ್ಯನ ಬೆಳಕನ್ನು ಒಂದು ಪ್ರಿಸ್ಮ್ ಮೂಲಕ ಹಾಯಿಸಿ ಹೊರಬರುವ ಒಂದೊಂದು ನೀಲಿಯಿಂದ ಕೆಂಪು ಬಣ್ಣದ ವರೆಗೆ ಶಾಖ ಹೆಚ್ಚುತ್ತದೆಂದು ತೋರಿತು.

ಆದರೆ , ಹರ್ಷೆಲ್ ಅಷ್ಟಕ್ಕೇ ಪ್ರಯೋಗ ನಿಲ್ಲಿಸಲಿಲ್ಲ . ಕೆಂಪು ಬೆಳಕನ್ನು ದಾಟಿ ಪಕ್ಕದಲ್ಲಿ ಥರ್ಮಾಮೀಟರ್ ಇಟ್ಟ. ಆಶ್ಚರ್ಯ. ಯಾವ ಬಣ್ಣದ ಬೆಳಕೂ ಇಲ್ಲದ . ಆ ಭಾಗದಲ್ಲಿ ಇತರ ಬಣ್ಣಗಳಿಗಿಂತಲೂ ಹೆಚ್ಚಿನ ಶಾಖವಿದ್ದುದು ತೋರಿಬಂತು . ಅಗೋಚರವಾದ ಆಕಿರಣಗಳಿಗೆ ಕ್ಯಾಲೊರಿಫಿಕ್ ಎಂದರೆ ಶಾಖ ಎಂದು ಅರ್ಥ . ಅದೇ ಜಾಡನ್ನು ಹಿಡಿದು ಎನ್ನೂ ಅನೇಕ ಪ್ರಯೋಗಗಳನ್ನು ಮಾಡಿ ಕ್ಯಾಲೊರಿಫಿಕ್ ಕಿರಣಗಳೂ ಗೋಚರ ಬೆಳಕಿನ ಕಿರಣಗಳಂತೆ ಪ್ರತಿಫಲನ . ವಕ್ರೀಭವನ ಮುಂತಾದ ಎಲ್ಲ ಗುಣಗಳನ್ನೂ ಪ್ರದರ್ಶಿಸುತ್ತವೆಂದು ದೃಡಪಡಿಸಿಕೊಂಡನು . ಹಾಗಾಗಿ, ಅಗೋಚರ ಬೆಳಕೂ ಇದೆ ಎಂಬುದು ಮೊದಲ ಬಾರಿಗೆ ಆತನ ಪ್ರಯೋಗಗಳಿಂದ ತಿಳಿದುಬಂದಿತು. ಮುಂದೆ ಅವಕ್ಕೆ ಅವಕೆಂಪು (Infrared) ಅಥವಾ "ಉಷ್ಣಕಿರಣ"ಗಳೆಂದು ಹೆಸರಾಯಿತು.

ಹತ್ತೊಂಬತ್ತನೇ ಶತಮಾನದ ಮೊದಲ ದಶಕದ ವೇಳೆಗೆ ಕ್ಯಾಲೋರಿಫಿಕ್ ಕಿರಣಗಳೂ ಮತ್ತು ಬೆಳಕು ಮೂಲತಃ ಒಂದೇ ಬಗೆ (ವಿದ್ಯು ತ್ಕಾಂತ್ತಿಯ ಅಲೆಗಳು ) ಎಂದು ಭೌತವಿಜ್ಞಾನಿಗಳು ಅರ್ಥಮಾಡಿಕೊಂಡು ವಿಶ್ವದಲ್ಲಿ ಸರ್ವವ್ಯಾಪಿಯಾದ ಈಥರ್ ಎಂಬ ಮಾಧ್ಯಮದ ಮೂಲಕ ಕಂಪನ ರೂಪದಲ್ಲಿ ಅವು ಪ್ರಸರಿಸುತವೆ ಎಂದು ಚಿತ್ರಿಸಿಕೊಂಡಿದ್ದರು . ಉಷ್ಣ ಕಿರಣ ಮತ್ತು ಬೆಳಕಿನ ಕಿರಣ ಇವುಗಳ ನಡುವಿನ ವ್ಯತ್ಯಾಸ ಕೇವಲ ಅವುಗಳ ತರಂಗಾಂತರದಲ್ಲಿ (Wave length) ಎಂಬುದು ಹತ್ತೋಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಮಾತ್ರವೇ ಸ್ಪಷ್ಟವಾಯಿತು. ಉಷ್ಣಕಿರಣಗಳ ತರಂಗಾಂತರ ಬೆಳಕಿನ ತರಂಗಾಂತರಗಳಿಗಿಂತ ದೀರ್ಘ. ಇದರಿಂದ ನಮಗೆ ತಿಳಿದುಬರುವುದೇನೆಂದರೆ ನಮ್ಮ ಇಂದ್ರಿಯಗಳು ವಿದ್ಯುತ್ ಕಾಂತೀಯ ತರಂಗಗಳಿಗೆ ಅವುಗಳ ತರಂಗಾಂತರಗಳಿಗೆ ಅನುಗುಣವಾಗಿ ಸ್ಪಂದಿಸುತ್ತವೆ ಎಂಬುದು.

ಸೂರ್ಯನ ತಾಪ : ಸುರ್ಯ ಮತ್ತು ಇತರ ಖಗೋಳ ಕಾಯಗಳ ತಾಪವನ್ನು ಭೂಮಿಯಿಂದಲೇ ಅಳೆಯಬಹುದು .

ಸೂರ್ಯನ ಮೇಲ್ಮೈ ತಾಪ (Temperature) ಸುಮಾರು ೫೫೦೦ ಡಿಗ್ರಿ ಸೆಲ್ಸಿಯಸ್ ಎಂದು ಪಠ್ಯಪುಸ್ತುಕಗಳು ದಾಖಲಿಸುತ್ತವೆ . ಆದರೆ, ಅದನ್ನು ಆಳೆದದ್ದ ಹೇಗೆ ? ಆಧುನಿಕ ಜ್ಞಾನವನ್ನು ಪ್ರಾಯೋಗಿಕ, ಪರಿಮಾಣಾತ್ಮಕ ಹಾಗೂ ಸೈದ್ಧಾಂತಿಕ ವಿಶ್ಲೇಷಣೆಗಳಿಂದ ಹೇಗೆ ಪಡೆಯಬಹುದು ಎಂಬುದಕ್ಕೆ ಕೊಡಬಹುದಾದ ಅನೇಕ ಉದಾಹರಣೆಗಳಲ್ಲಿ ಇದೂ ಒಂದು . ಯಾವುದೇ ಕಾಯದಿಂದ ಹೊಮ್ಮುವ ಉಷ್ಣಕಿರಣಗಳ ತೀವ್ರತೆ ಆ ಕಾಯದ ಮೇಲ್ಮೈ ತಾಪವನ್ನು ಕೆಲವು ನಿರ್ದಿಷ್ಟ ರೀತಿಗಳಲ್ಲಿ ಅವಲಂಬಿಸಿರುತ್ತದೆ ಎಂಬುದು ಹತ್ತೊಂಬತ್ತನೇ ಶತಮಾನದ ಅಂತಿಮ ದಶಕಗಳಲ್ಲಿ ನಡೆದ ಪರಿಮಾಣಾತ್ಮಕ ಹಾಗೂ ಪ್ರಾಯೋಗಿಕ ಅಧ್ಯಯನಗಳಿಂದ ಸ್ಪೆಷ್ಟವಾಯಿತು. ಅದೊಂದು ಅತ್ಯಂತ ಮಹತ್ವದ ಆವಿಷ್ಕಾರವಾಗಿತ್ತು . ಏಕೆಂದರೆ ಅದನ್ನು ಬಳಸಿ ನಮ್ಮಿಂದ ಅತಿ ದೂರವಿರುವ ಹಾಗೂ ಮುಟ್ಟಲು ಸಾಧ್ಯವಿಲ್ಲದ ಕಾಯಗಳ ತಾಪವನ್ನು ಅಳೆಯಲು ಸಾಧ್ಯವಾಗಿದೆ.

ಇದಕ್ಕೂ ಮೊದಲು ೧೮೩೦ ಸುಮಾರಿನಲ್ಲಿ Claude pouillet ಎಂಬಾತ Pyrheliometer ಎಂಬ ಉಪಕರಣವನ್ನು ತಯಾರಿಸಿದ್ದನು ವಿಕಿರಣದ ಬಗ್ಗೆ ಸೈದ್ಧಾಂತಿಕ ಚೌಕಟ್ಟು ಸಿದ್ಧವಾಗುವುದಕ್ಕೆ ಮೊದಲೇ ಆತ ಆ ಉಪಕರಣವನ್ನು ಬಳಸಿ ಸೂರ್ಯನಿಂದ ಭೂಮಿಯನ್ನು ತಲಪುವ ಉಷ್ಣಕಿರಣಗಳನ್ನು ಅಳೆದು ಸೂರ್ಯನ ಮೇಲ್ಮೈ ತಾಪ ಸುಮಾರು ೧೮೦೦ ಡಿಗ್ರಿ ಸೆಲ್ಸಿಯಸ್ ಎಂದು ಲೆಕ್ಕಹಾಕಿದ್ದನು ಅನಂತರ ಮತ್ತೆ ಕೆಲವರು ಅದನ್ನು ಒಂದು ಸಾವಿರದಿಂದ ಹತ್ತು ಸಾವಿರ ಡಿಗ್ರಿ ಸೆಲ್ಸಿಯಸ್ ಎಂದು ಅಂದಾಜು ಮಾಡಿದ್ದರು . ಕೊನೆಗೆ Josef stefan ನು ಹಿಂದಿನ ಅನೇಕ ಪ್ರಯೋಗಗಳಿಂದ ದೊರೆತ ಮಾಹಿತಿ ಮತ್ತು ತನ್ನದೇ ಸೂತ್ರದ ಆಧಾರದ ಮೇಲೆ ಸೂರ್ಯನ ಮೇಲ್ಮೈ ತಾಪ ಸುಮಾರು ೬೦೦೦ ಡಿಗ್ರಿ ಸೆಲ್ಸಿಯಸ್ ಎಂದು ನಿಖರವಾ ಗಿ ಲೆಕ್ಕಹಾಕಿದನು.