ಮಹಾದೇವಿ ವರ್ಮಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
translated from en
( ಯಾವುದೇ ವ್ಯತ್ಯಾಸವಿಲ್ಲ )

೧೦:೫೦, ೧ ಡಿಸೆಂಬರ್ ೨೦೦೬ ನಂತೆ ಪರಿಷ್ಕರಣೆ

ಮಹಾದೇವಿ ವರ್ಮಾ (1907 - 11 ಸೆಪ್ಟೆಂಬರ್ 1987) ಹಿಂದಿ ಭಾಷೆಯ ಪ್ರಸಿದ್ಧ ಕವಾಯಿತ್ರಿ. "ಆಧುನಿಕ ಮೀರಾ" ಎಂದು ಖ್ಯಾತರಾಗಿದ್ದ ಇವರು 1982 ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು.

ಜೀವನ

ಉತ್ತರ ಪ್ರದೇಶಡ ಫಾರುಖಾಬಾದ್ ನಲ್ಲಿ ವಕೀಲರ ಕುಟುಂಬದಲ್ಲಿ ಇವರು ಜನಿಸಿದರು. ಮಧ್ಯಪ್ರದೇಶದ ಜಬಲ್ ಪುರದಲ್ಲಿ ವಿದ್ಯಾಭ್ಯಾಸ ಪಡೆದರು. ಸಣ್ಣ ವಯಸ್ಸಿನಲ್ಲಿಯೇ ವಿವಾಹವಾದರೂ ಸಂಸಾರ ಜೀವನದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಬೌದ್ಧ ಧರ್ಮದ ಬೋಧನೆಗಳಿಂದ ಆಕರ್ಷಿತರಾದ ಇವರು ಬೌದ್ಧ ಸನ್ಯಾಸಿನಿಯಾಗಲೂ ಅಸಫಲ ಯತ್ನ ನಡೆಸಿದರು.

ಇವರ ಪತಿಯ ತಂದೆಯ ಮರಣ ಗಾಢ ಪರಿಣಾಮ ಬೀರೀತು. ಹೆಚ್ಚು ಓದಲು ನಿರ್ಧರಿಸಿದ ಮಹಾದೇವಿ ವರ್ಮಾ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಸಂಸ್ಕೃತ ಎಂ.ಎ ಪದವಿ ಪಡೆದರು. ನಂತರ ಅಲಹಾಬಾದ್ ಮಹಿಳಾ ವಿದ್ಯಾಪೀಥದ ಪ್ರಾಂಶುಪಾಲರಾಗಿ ಕೊನೆಗೆ ಅಲ್ಲಿಯ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದರು.

ಸಾಹಿತ್ಯ

ಹಿಂದಿ ಸಾಹಿತ್ಯದ "ಛಾಯಾವಾದಿ" ಪ್ರಕಾರದ ಮುಖ್ಯ ಲೇಖಕಿಯರಲ್ಲಿ ಒಬ್ಬರಾಗಿ ಮಹಾದೇವಿ ವರ್ಮಾ ಪ್ರಸಿದ್ಧರಾಗಿದ್ದಾರೆ. ಈ ಪ್ರಕಾರದ ಇತರ ಪ್ರಮುಖ ಲೇಖಕರೆಂದರೆ ಸುಮಿತ್ರಾ ನಂದನ ಪಂತ್, ಸೂರ್ಯಕಾಂತ್ ತ್ರಿಪಾತಿ, ಮೊದಲಾದವರು. ಮಹಾದೇವಿ ವರ್ಮಾ ಅವರ ಪ್ರಸಿದ್ಧ ಪುಸ್ತಕಗಳಲ್ಲಿ ಕೆಲವೆಂದರೆ "ಅತೀತ ಕೆ ಚಲಚಿತ್ರ" (ಅತೀತದ ಚಲನಚಿತ್ರ) ಮತ್ತು "ಸ್ಮೃತಿ ಕೆ ರೇಖಾಯೆ" (ನೆನಪಿನ ಗೆರೆಗಳು). ಅವರ ಕವನ ಸಂಕಲನಗಳಲ್ಲಿ ಪ್ರಸಿದ್ಧವಾದದ್ದು "ದೀಪ ಶಿಖಾ".