ಗಿರೀಶ್ ರಾವ್ ಹತ್ವಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೧೯ ನೇ ಸಾಲು: ೧೯ ನೇ ಸಾಲು:


==ಜೋಗಿ==
==ಜೋಗಿ==

ಕತೆಗಾರ, ಕಾದಂಬರಿಕಾರ, ಅಂಕಣಕಾರ, ಪತ್ರಕರ್ತ ಜೋಗಿ ಅವರ ಪೂರ್ತಿ ಹೆಸರು ಗಿರೀಶ್ ರಾವ್ ಎಚ್. ಕಾವ್ಯನಾಮ ಜೋಗಿ. ಜೋಗಿ ಎಂಬುದು ಅವರ ಪತ್ನಿ ಜ್ಯೋತಿ ಮತ್ತು ಗಿರೀಶ್ ಎಂಬ ಎರಡು ಹೆಸರುಗಳ ಮೊದಲ ಪದ ಸೇರಿ ಆದದ್ದು. ಒಂಬತ್ತು ಕಾದಂಬರಿ, ಎಂಟು ಸಣ್ಣಕಥಾ ಸಂಕಲನ, ಹನ್ನೊಂದು ಅಂಕಣಬರಹಗಳ ಸಂಕಲನ, ಹಲಗೆ ಬಳಪ ಎಂಬ ತರುಣ ಬರಹಗಾರರ ಕೈಪಿಡಿ ಮತ್ತು ಒಂದು ವ್ಯಕ್ತಿಚಿತ್ರ ಬರೆದಿರುವ ಜೋಗಿ ಸದ್ಯ ಉದಯವಾಣಿ ದಿನಪತ್ರಿಕೆಯ ಪುರವಣಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ.


==ಹಿನ್ನೆಲೆ ಹಾಗು ಆರಂಭಿಕ ಜೀವನ==
==ಹಿನ್ನೆಲೆ ಹಾಗು ಆರಂಭಿಕ ಜೀವನ==

೨೧:೨೨, ೨೯ ಮೇ ೨೦೧೩ ನಂತೆ ಪರಿಷ್ಕರಣೆ

ಗಿರೀಶ್ ರಾವ್ ಹತ್ವಾರ್ (ಜೋಗಿ)
ಜೋಗಿ
ಜನನನವೆಂಬರ 16, 1965
ಮೈಸೂರು
ಕಾವ್ಯನಾಮಜೋಗಿ
ವೃತ್ತಿಪತ್ರಕರ್ತ, ಲೇಖಕ
ರಾಷ್ಟ್ರೀಯತೆಭಾರತೀಯ
ಕಾಲ(1986 - )
ಪ್ರಕಾರ/ಶೈಲಿಕಥೆ, ಕವನ, ಕಾದಂಬರಿ, ಅಂಕಣ, ವಿಮರ್ಶೆ
ವಿಷಯಕರ್ನಾಟಕ, ಗ್ರಾಮಜೀವನ, ಆಧ್ಯಾತ್ಮ, ನಗರ ಜೀವನ
ಸಾಹಿತ್ಯ ಚಳುವಳಿನವ್ಯೋತ್ತರ

ಖ್ಯಾತ ಲೇಖಕ ಗಿರೀಶ್ ರಾವ್ ಹತ್ವಾರ್ ಅವರು ಜೋಗಿ ಎಂಬ ಹೆಸರಿನಿಂದ ಹೆಚ್ಚು ಜನಪ್ರಿಯರಾಗಿದ್ದಾರೆ.

ಜೋಗಿ

ಹಿನ್ನೆಲೆ ಹಾಗು ಆರಂಭಿಕ ಜೀವನ

ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ 16, 1965. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು. ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು.

18ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ, ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ . ಬೆಂಗಳೂರಿಗೆ 1989ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್‌ಕೆ. ಹಾಯ್ ಬೆಂಗಳೂರು ಪತ್ರಿಕೆಗೆ ರವಿ ಕಾಣದ್ದು ಅಂಕಣ ಬರೆಯುವುದಕ್ಕೆ ಮೊದಲೇ, ಜೋಗಿ ಕನ್ನಡಪ್ರಭ ಪತ್ರಿಕೆಗೆ ಬಾಲಿವುಡ್ ಘಾಸಿಪ್ ಎಂಬ ಅಂಕಣ ಬರೆಯುತ್ತಿದ್ದರು.

ಬೆಂಗಳೂರು ಜೀವನ

ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿ ಕಾಣದ್ದು ಅಂಕಣ ಬರೆಯುತ್ತಿದ್ದಾಗ, ಜೋಗಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಪತ್ರಿಕೋದ್ಯಮದ ಸೆಳೆತಕ್ಕೆ ಸಿಕ್ಕು ಹಾಯ್ ಬೆಂಗಳೂರು ಪತ್ರಿಕೆಯ ಸಹಾಯಕ ಸಂಪಾದಕರಾಗಿ ರವಿ ಬೆಳಗೆರೆಯ ಬಳಗ ಸೇರಿಕೊಂಡರು. ಅಚ್ಚರಿ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದರು. ಕಳೆದ ಹದಿನೇಳು ವರುಷಗಳಿಂದ ಹಾಯ್ ಬೆಂಗಳೂರು ಪತ್ರಿಕೆಗೆ ಸತತವಾಗಿ ಅಂಕಣ ಬರೆಯುತ್ತಾ ಬಂದವರು ಜೋಗಿ. ಜೋಗಿ, ಜಾನಕಿ, ಗಿರೀಶ್ ರಾವ್ ಹತ್ವಾರ್, ಎಚ್ ಗಿರೀಶ ರಾವ್, ಸತ್ಯವ್ರತ ಹೊಸಬೆಟ್ಟು ಹೀಗೆ ಅನೇಕ ಕಾವ್ಯನಾಮಗಳಲ್ಲಿ ಬರೆಯುತ್ತಿರುವ ಜೋಗಿ, ಕನ್ನಡಪ್ರಭ ಪತ್ರಿಕೆಯಲ್ಲಿ ಸಹ ಪುರವಣಿ ಸಂಪಾದಕರಾಗಿ ಕೆಲಸ ಮಾಡಿದವರು. ತಮ್ಮ ಚುರುಕಾದ ಚಲನಚಿತ್ರ ವಿಮರ್ಶೆಗಳಿಂದ, ಪುಸ್ತಕ ವಿಮರ್ಶೆಯಿಂದ ಗಮನ ಸೆಳೆದರು. ಅದರ ಜೊತೆಗೇ ಕತೆಗಾರರಾಗಿಯೂ ಹೊರಹೊಮ್ಮಿದ ಅವರು, ಕ್ರಮೇಣ ಕಾದಂಬರಿಗಳತ್ತ ಹೊರಳಿದರು. ಈಗ ಬರೆಯುತ್ತಿರುವ ಕಾದಂಬರಿಕಾರರ ಪಟ್ಟಿಯಲ್ಲಿ ಜೋಗಿ ಅವರದ್ದು ಜನಪ್ರಿಯ ಹೆಸರು.

ಪತ್ರಿಕೋದ್ಯಮ ಮತ್ತು ಸಾಹಿತ್ಯದ ಜೊತೆಗೇ ಜೋಗಿ ಕಿರುತೆರೆ ಧಾರವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ. ಶಕ್ತಿ, ಯಶವಂತ ಚಿತ್ತಾಲರ ಶಿಕಾರಿ, ಬೆಳ್ಳಿತೆರೆ, ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಬಂದೇಬರತಾವ ಕಾಲ, ಶುಭಮಂಗಳ- ಅವರು ಸಂಭಾಷಗೆ ಬರೆದ ಕೆಲವು ಧಾರಾನಾಹಿಗಳು. ಧಾರಾವಾಹಿಗಳಿಗೆ ಶೀರ್ಷಿಕೆ ಗೀತೆಗಳನ್ನೂ ಬರೆದ ಜೋಗಿ, ಅನಂತಮೂರ್ತಿಯವರ ಮೌನಿ ಕತೆಯನ್ನು ತೆರೆಗೆ ಅಳವಡಿಸುವಲ್ಲಿ ಚಿತ್ರಕತೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ಅವರದೇ ಕತೆ ಕಾಡಬೆಳದಿಂಗಳು ಚಿತ್ರವಾಗಿದೆ. ಅದಕ್ಕೆ ರಾಜ್ಯ ಸರ್ಕಾರದ ಅತ್ಯುತ್ತಮ ಕತೆ ಪ್ರಶಸ್ತಿಯೂ ಲಭಿಸಿದೆ.

ಲೇಖಕ

ಮಯೂರ, ತರಂಗ, ತುಷಾರ, ಸುಧಾ, ಕನ್ನಡಪ್ರಭ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕತೆಗಳನ್ನು ಪ್ರಕಟಿಸಿದ ಜೋಗಿ, ಲಂಕೇಶ್ ಪತ್ರಿಕೆಗೆ ಎಚ್.ಗಿರೀಶ ಹೆಸರಲ್ಲಿ ಪ್ರಬಂಧಗಳನ್ನು ಬರೆಯುತ್ತಿದ್ದರು. ಅನಾಮಧೇಯ ಹೆಸರಲ್ಲಿ ಪುಸ್ತಕ ವಿಮರ್ಶೆ ಮಾಡುತ್ತಿದ್ದರು. ಕನ್ನಡದ ಹಿರಿಕಿರಿಯ ಲೇಖಕರ ಸ್ನೇಹ, ಚಿತ್ರರಂಗದ ನಟನಟಿಯರ ಗೆಳೆತನ ಮತ್ತು ಅಸಂಖ್ಯಾತ ಗೆಳೆಯರ ಬಳಗ ಹೊಂದಿರುವ ಜೋಗಿ, ಬ್ಲಾಗ್ ಬರಹಗಳಲ್ಲ ಮುಂಚೂಣಿಯಲ್ಲಿದ್ದಾರೆ. ಸದ್ಯ ಮಣಿಪಾಲ ಸಮೂಹದ ರೂಪತಾರ ಪತ್ರಿಕೆಯ ರೂವಾರಿಯಾಗಿದ್ದಾರೆ. ಉದಯವಾಣಿ ಪತ್ರಿಕೆಯ ಪುರವಣಿ ಸಂಪಾದಕರಾಗಿ ದುಡಿಯುತ್ತಿದ್ದರು. ಪ್ರವಾಸ ಪ್ರೇಮಿಯಾದ ಜೋಗಿ ಅಮೆರಿಕಾ, ಶ್ರೀಲಂಕಾ, ನೇಪಾಳ, ಥೈಲ್ಯಾಂಡ್, ಸಿಂಗಾಪೂರ್, ಮಲೇಷಿಯಾ- ಮುಂತಾದ ದೇಶಗಳನ್ನು ಸುತ್ತಾಡಿದ್ದಾರೆ.

ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ತಾಯಿ ಶಾರದೆ ಮತ್ತು ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.


ಜೋಗಿ ಕೃತಿ ಮಾಲೆ

ಕಾದಂಬರಿ

  1. ನದಿಯ ನೆನಪಿನ ಹಂಗು
  2. ಯಾಮಿನಿ
  3. ಚಿಟ್ಟೆ ಹೆಜ್ಜೆ ಜಾಡು
  4. ಹಿಟ್ ವಿಕೆಟ್
  5. ಊರ್ಮಿಳಾ
  6. ಮಾಯಾಕಿನ್ನರಿ
  7. ಗುರುವಾಯನಕೆರೆ
  8. ದೇವರ ಹುಚ್ಚು
  9. ಚಿಕ್ಕಪ್ಪ

ಕಥಾಸಂಕಲನ

  1. ಸೀಳುನಾಲಿಗೆ
  2. ಜೋಗಿ ಕತೆಗಳು
  3. ಕಾಡು ಹಾದಿಯ ಕತೆಗಳು
  4. ರಾಯಭಾಗದ ರಹಸ್ಯ ರಾತ್ರಿ
  5. ಜರಾಸಂಧ
  6. ಸೂಫಿ ಕತೆಗಳು
  7. ಕಥಾ ಸಮಯ
  8. ಫೇಸ್ ಬುಕ್ ಡಾಟ್ ಕಾಮ್-ಮಾನಸಜೋಶಿ

ಅಂಕಣ ಸಾಹಿತ್ಯ

  1. ಬಾಲಿವುಡ್ ಘಾಸಿಪ್
  2. ರವಿ ಕಾಣದ್ದು- ರವಿ ಕಂಡದ್ದು
  3. ಜಾನಕೀ ಕಾಲಂ-1
  4. ಜಾನಕೀ ಕಾಲಂ -2
  5. ರವಿ ಕಾಣದ್ದು
  6. ಜೋಗಿ ಮನೆ
  7. ಜೋಗಿ ಕಾಲಂ
  8. ರೂಪರೇಖೆ
  9. ಸೀಕ್ರೆಟ್ ಡೈರಿ
  10. ಮಹಾನಗರ
  11. ನೋಟ್ ಬುಕ್

ಇತರ ಕೃತಿಗಳು

  1. ಹಲಗೆ ಬಳಪ (ಹೊಸ ಬರಹಗಾರರಿಗೆ ಪಾಠ)
  2. ಎಂ. ರಂಗರಾವ್ (ವ್ಯಕ್ತಿ ಚಿತ್ರ)