ಎಸ್.ಎಂ.ಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding az:Somanahalli Mallaya Krişna
ಚು Bot: Migrating 11 interwiki links, now provided by Wikidata on d:q58292 (translate me)
೪೭ ನೇ ಸಾಲು: ೪೭ ನೇ ಸಾಲು:


[[az:Somanahalli Mallaya Krişna]]
[[az:Somanahalli Mallaya Krişna]]
[[de:S. M. Krishna]]
[[en:S. M. Krishna]]
[[fa:مالایی کریشنا]]
[[fi:S. M. Krishna]]
[[gu:એસ. એમ. કૃષ્ણ]]
[[ml:എസ്.എം. കൃഷ്ണ]]
[[mr:एस.एम. कृष्णा]]
[[ru:Кришна, Соманахалли Маллайя]]
[[sv:S. M. Krishna]]
[[sv:S. M. Krishna]]
[[ta:சோ. ம. கிருசுணா]]
[[te:ఎస్.ఎమ్. కృష్ణ]]
[[zh:索玛纳哈利·马雷阿·克里希纳]]

೨೩:೧೬, ೭ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ
ಎಸ್.ಎಂ.ಕೃಷ್ಣ


ಪ್ರಸಕ್ತ
ಅಧಿಕಾರ ಪ್ರಾರಂಭ 
೨೩ ಮೇ ೨೦೦೯
ಪೂರ್ವಾಧಿಕಾರಿ ಪ್ರಣಬ್ ಮುಖೆರ್ಜೀ

ಅಧಿಕಾರದ ಅವಧಿ
೧೨ ಡಿಸೆಂಬರ್ ೨೦೦೪ – ೫ ಮಾರ್ಚ್ ೨೦೦೮
ಪೂರ್ವಾಧಿಕಾರಿ ಮೊಹಮ್ಮದ್ ಫಜಲ್
ಉತ್ತರಾಧಿಕಾರಿ ಎಸ್. ಸಿ. ಜಮೀರ್

ಅಧಿಕಾರದ ಅವಧಿ
೧೧ ಅಕ್ಟೋಬರ್ ೧೯೯೯ – ೨೮ ಮೇ ೨೦೦೪
ಪೂರ್ವಾಧಿಕಾರಿ ಜೆ ಹೆಚ್ ಪಟೇಲ್
ಉತ್ತರಾಧಿಕಾರಿ ಧರಂ ಸಿಂಗ್

ಜನನ (1932-05-01) ೧ ಮೇ ೧೯೩೨ (ವಯಸ್ಸು ೯೧)
ರಾಜಕೀಯ ಪಕ್ಷ ಕಾಂಗ್ರೆಸ್
ಜೀವನಸಂಗಾತಿ ಪ್ರೇಮಾ ಕೃಷ್ಣ

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಜನನ:೧೯೩೨) ೧೯೯೯ ರಿಂದ ೨೦೦೪ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು ಪ್ರಸ್ತಕವಾಗಿ ಕೇಂದ್ರ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು. ಇವರು ಕಾಂಗ್ರೆಸ್ ಪಕ್ಷದ ಸದಸ್ಯರು.

ವಿದ್ಯಾಭ್ಯಾಸ

ಎಸ್ ಎಂ ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಇದರ ನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿ ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದರು.

ರಾಜಕೀಯ ಜೀವನ

ಭಾರತಕ್ಕೆ ಮರಳಿದ ನಂತರ ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ವಿಧಾನ ಸಭೆಗೆ ಮೊದಲ ಬಾರಿ ೧೯೬೨ ರಲ್ಲಿ ಚುನಾಯಿತರಾದರು. ೧೯೬೮ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೭೧ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ ೧೯೭೨ ರಲ್ಲಿ ಕರ್ನಾಟಕವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. ೧೯೮೩ರಲ್ಲು ಉದ್ಯಮ ಖಾತೆ ಮತ್ತು ೧೯೮೪ ರಲ್ಲಿ ವಿತ್ತ ಖಾತೆಯ ಸಚಿವರಾದರು. ೧೯೮೯ ರಿಂದ ೧೯೯೨ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. ೧೯೯೨ ರಿಂದ ೧೯೯೪ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. ೧೯೯೬ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, ೧೯೯೯ ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ೧೯೯೯ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು. ವಿದೇಶಗಳಲ್ಲಿ ಎರಡು ಬಾರಿ (ವಿಶ್ವಸಂಸ್ಥೆಯಲ್ಲಿ ಒಮ್ಮೆ, ಮತ್ತು ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ) ಭಾರತವನ್ನು ಪ್ರತಿನಿಧಿಸಿದ್ದಾರೆ.