ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೨೪ ನೇ ಸಾಲು: ೨೪ ನೇ ಸಾಲು:
(ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ಎಂಟು ಮತ್ತು ಒಂಬತ್ತನೇ ಪುಟದಿಂದ.'ನಮನ" )
(ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ಎಂಟು ಮತ್ತು ಒಂಬತ್ತನೇ ಪುಟದಿಂದ.'ನಮನ" )

== "ಷಾ ಚಮನ್‍ಮಲ್ ಡುಂಗಾಜಿ"" ==
ಕನ್ನಡ ಚಿತ್ರ ರಂಗದ ಇತಿಹಾಸದಲ್ಲಿ "ಷಾ ಚಮನ್‍ಮಲ್ ಡುಂಗಾಜಿ" ಪಾತ್ರ ಅತ್ಯಂತ ಮಹತ್ವದ್ದು ."ಷಾ ಚಮನ್‍ಮಲ್ ಡುಂಗಾಜಿ" ಮೂಲತಃ ರಾಜಸ್ತಾಸನದವರು, ವ್ಯಾಪರಕ್ಕೆಂದು ೧೯೦೩ ರಲ್ಲಿ ಬೆಂಗಳೂರಿಗೆ ಆಗಮಿಸಿದರು ಇಲ್ಲಿನ ಅಂದರೆ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಪಾತ್ರೆಗಳ ವ್ಯಾಪಾರ ಆರಂಭಿಸಿದರು. ಇಂದಿಗೂ ಬೆಂಗಳೂರಿನಲ್ಲಿರುವ ಆದಿನಾಥ ಜೈನಶ್ವೇತಾಂಬರ ದೇವಾಸ್ಥಾನವನ್ನು೧೯೧೮ ರಲ್ಲಿ ನಿರ್ಮಿಸಿದಾತ ಹಾಗೂ ಅಂದಿನಿಂದ ತನ್ನ ಜೀವನ ಪರ್ಯಂತ ಜೈನಶ್ವೇತಾಂಬರ ಸಂಘಕ್ಕೆ ಅಧ್ಯಕ್ಷರಾಗಿ ಕೆಲಸ ಕಾರ್ಯಗಳನ್ನು ಖುದ್ದಾಗಿ ನಿಂತು ಮಾಡಿರುವ ಹೆಸರು ಇವರದ್ದು,ಇವರ ಹಿರಿಮೆ ಇಷ್ಟೇ ಅಲ್ಲ ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿಯೂ ಸಹಾಯ ಮಾಡಲು ಸಧಾ ಮುಂದೆ ಬರುತ್ತಿದ್ದರು. ಇವರು ಬೆಂಗಳೂರಿನ "ಪ್ರಾಣಿದಯಾ ಪ್ರಚಾರಕ ಸಂಘದ ಅಧ್ಯಕ್ಷರು" ಸಹ ಆಗಿದ್ದರು. ಷಾ ಚಮನ್‍ಮಲ್ ಡುಂಗಾಜಿ ಅವರು ಪ್ರಾಣಿಮೇಲಿನ ಅತೀ ಪ್ರೀತಿಯನ್ನು ಮೆರೆದ ಸಂಗತಿಯೊಂದಿದೆ - ಪ್ರಾಣಿಗಳನ್ನು ಉತ್ಸವಗಳಲ್ಲಿ ಬಲಿಯನ್ನು ನೀಡುತ್ತಿದ್ದ ಕಾಲವದು, ಅದನ್ನು ತಡೆಯಲೆಂದು ಇದರ ವಿರುದ್ಧವಾಗಿ "ಪ್ರಾಣಿಬಲಿ" ನಾಶ ಪ್ರಚಾರವನ್ನು ಮಾಡಲು ಪ್ರಾರಂಭಿಸಿದರು, ಇವರ ಪ್ರಚಾರ ವ್ಯರ್ಥವಾಗಲಿಲ್ಲ ಈ ಕಾರ್ಯವನ್ನು ಜನರು ಸಂಪೂರ್ಣವಾಗಿ ನಿಲ್ಲಿಸಿದರು. ಹಾಗೂ ನೂರಾರು ಪ್ರಾಣಿಗಳ ಜೀವ ಉಳಿಸಿದ ಕೀರ್ತಿ ಷಾ ಚಮನ್‍ಮಲ್ ಡುಂಗಾಜಿ ಅವರದ್ದಾಗಿತ್ತು.

ಷಾ ಚಮನ್‍ಮಲ್ ಡುಂಗಾಜಿ ಘನತೆ ಗೌರವವನ್ನು ಕಂಡ ಮೈಸೂರು ವಿಶ್ವವಿದ್ಯಾನಿಲಯ ೧೯೨೫ ರಿಂದ ಇಂದಿನವರೆಗೂ ಕಾಮರ್ಸ್ ವಿಷಯದಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಷಾ ಚಮನ್‍ಮಲ್ ಡುಂಗಾಜಿ ಪರವಾಗಿ ಚಿನ್ನದ ಪದಕವನ್ನು ನೀಡುತ್ತಾ ಬಂದಿದ್ದಾರೆ.ಧಾರ್ಮಿಕ, ಸಾಮಾಜಿಕ ವಿಷ್ಯಗಳಲ್ಲದೆ ೧೯೨೯ ರಲ್ಲಿ ಶ್ರೀ ಸೌತ್ ಇಂಡಿಯಾ ಫಿಲ್ಮ್ ಕಂಪೆನಿ ಎಂಬ ಹೆಸರಿನಲ್ಲಿ ವಿತರಕ ಆಫಿಸ್ (ಡಿಸ್ಟಿಬ್ಯೂಷನ್ ಆಫಿಸ್)ವೊಂದನ್ನು ಪ್ರಾರಂಭಿಸಿದರು ಸುಮಾರು ೫೦-೬೦ ಚಿತ್ರಗಳನ್ನು ವಿತರಣೆ ಮಾಡುತ್ತಿದ್ದರು."ಷಾ ಚಮನ್‍ಮಲ್ ಡುಂಗಾಜಿ" ಅವರು ನಾವು ಮೈಸೂರು ದೇಶದಲ್ಲಿ ಇದ್ದೇವೆ, ಇಲ್ಲಿನ ಮಾತೃಭಾಷೆಯಾದ ಕನ್ನಡದಲ್ಲಿ ಚಿತ್ರವನ್ನೇಕೆ ಮಾಡಬಾರದೆಂಬ ಪ್ರಶ್ನೆ ತಮ್ಮ ಮನಸಿನಲ್ಲಿ ಮೂಡಿಬಂದಾಗ ಪೂರ್ವಾಪರ ಎಲ್ಲವನ್ನೂ ಯೋಚಿಸಿ ಮನಸ್ಸು ನುಡಿದಂತೆ ೧೯೩೨ ರಲ್ಲಿ "ಸೌತ್ ಇಂಡಿಯನ್ ಮೋವಿ ಟೋನ್" ಎಂಬ ಸಂಸ್ಥೆಯನ್ನು ಸ್ಥಾಪಿಸಿ ನಂತರ ಕನ್ನಡದ ಮೊದಲ ವಾಕ್ಚಿತ್ರವಾದ "ಸತಿ ಸುಲೋಚನಾ" ಚಿತ್ರವನ್ನು ನಿರ್ಮಿಸಲು ಮುಂದಾದರಂತೆ."ನಮನ"

[[Category:ಕನ್ನಡ ಸಿನೆಮಾ|*]]
[[Category:ಕನ್ನಡ ಸಿನೆಮಾ|*]]

೨೦:೪೬, ೭ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಕನ್ನಡ ಚಿತ್ರರಂಗವು ಕರ್ನಾಟಕದಲ್ಲಿ ರಚಿಸಲಾಗುವ ಚಲನಚಿತ್ರಗಳನ್ನು ಒಳಗೊಂಡಿದೆ.ಕನ್ನಡ ಚಿತ್ರರಂಗವು ಮೂಲತಹ ರಂಗಭೂಮಿಯನ್ನು ಅವಲಂಬಿಸಿ ಆರಂಭವಾಯಿತು ಪ್ರಮುಖವಾಗಿ ಕನ್ನಡ ಚಿತ್ರಗಳು ಮತ್ತು ಕೆಲವು ತುಳು ಹಾಗು ಕೊಂಕಣಿ ಭಾಷೆಗಳ ಚಿತ್ರಗಳು ಈ ಚಿತ್ರರಂಗಕ್ಕೆ ಸೇರುತ್ತವೆ. ೧೯೩೪ರಲ್ಲಿ ತೆರೆ ಕಂಡ "ಸತಿ ಸುಲೋಚನ" ಮೊದಲ ಕನ್ನಡ ಚಿತ್ರ.ಕನ್ನಡ ಮೊದಲ ವರ್ಣಮಯ ಚಿತ್ರ ‘ಅಮರಶಿಲ್ಪಿ ಜಕ್ಕಣಾಚಾರಿ’. "ಮೂರು ದಾರಿಗಳು"ಇದು ಕನ್ನಡ ಚಿತ್ರರಂಗದ ಕೊನೆಯ ಕಪ್ಪುಬಿಳುಪು ಚಲನಚಿತ್ರ.೧೯೫೪ರಲ್ಲಿ ಬಿಡುಗಡೆ ಹೊಂದಿದ "ಬೇಡರ ಕಣ್ಣಪ್ಪ" ಈ ಚಿತ್ರರಂಗದ ಪ್ರಮುಖ ನಟರಾದ ರಾಜಕುಮಾರ್ ಅವರ ಮೊದಲ ಚಿತ್ರ.

ಕರ್ನಾಟಕದಲ್ಲಿ ‘ವಸಂತಸೇನಾ ಚಿತ್ರಕ್ಕೆ ಮೊದಲು ಮೂಕಿ ಚಿತ್ರಗಳು ತಯಾರಾಗಿದ್ದವು. ಆದರೆ ಅವು ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಕಥಾ ಚಿತ್ರಗಳಲ್ಲ. ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳನ್ನು ಚಿತ್ರಿಸಿ ಸಿನಿಮಾ ಮಾಡಿ ತೋರಿಸುತ್ತಿದ್ದರು. ‘ವಸಂತ ಸೇನಾ ಚಿತ್ರವು ಲೊಕೇಷನ್ ಮತ್ತು ಸ್ಟುಡಿಯೋಗಳಲ್ಲಿ ಚಿತ್ರಿಸಿ ಸಂಕಲನಗೊಂಡ ಚಿತ್ರ. ಬಳಿಕ ತಯಾರಾದ ಮೂಕಿ ಚಿತ್ರಗಳು ಇದರ ಪರಂಪರೆಗೆ ಸೇರಿದಂಥವು.

ಕನ್ನಡ ನೆಲದಲ್ಲಿ ಮೂಕಿ ಚಿತ್ರಗಳು ಯುಗವು ೧೯೨೧ರಿಂದ ಆರಂಭವಾಗಿರುವುದನ್ನು ಚಲನಚಿತ್ರ ಇತಿಹಾಸಕಾರ ಗಂಗಾಧರ ಮೊದಲಿಯಾರ್ ಗುರುತಿಸಿದ್ದಾರೆ. ೧೯೨೧ರಿಂದ ೧೯೩೩ರವರೆಗೆ ಸುಮಾರು ೧೭೫ ಚಿತ್ರಗಳು ತಯಾರಾಗಿರಬಹುದೆಂದು ತರ್ಕಿಸಿ ಲಭ್ಯವಿರುವ ೫೪ ಚಿತ್ರಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ. ಮೈಸೂರಿನ ಅಂದಿನ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಅರಮನೆಯಲ್ಲಿ ಪ್ರದರ್ಶನವಾದ ಎ.ವಿ. ವರದಾಚಾರ್ಯರು ಅಭಿನಯಿಸಿದ್ದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ನಾಟಕ ನಿರುಪಮಾ (೧೯೨೧)ವನ್ನು ಕೈಯಲ್ಲಿ ಸುತ್ತುವ ಕ್ಯಾಮೆರಾದಿಂದ (ಕ್ರಾಂಕಿಂಗ್ ಮಿಷಿನ್) ಚಿತ್ರೀಕರಿಸಿದ್ದರಂತೆ. ಹಾಗಾಗಿ ಎ.ವಿ. ವರದಾಚಾರ್ಯರು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ. ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ನಿರ್ಮಾಪಕ. ೧೯೨೫ರಲ್ಲಿ ಗುಬ್ಬಿ ಚನ್ನಬಸವೇಶ್ವರ ಕಂಪನಿಯು ತರೀಕೆರೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಮಹಾತ್ಮಾ ಕಬೀರ್ ಚಿತ್ರವನ್ನು ಚಿತ್ರೀಕರಿಸಿ ಸಿನಿಮಾ ಮಾಡಿತು. ನಾಯಕ ಕಬೀರನ ಪಾತ್ರವನ್ನು ಅಭಿನವ ಶಿರೋಮಣಿ ಸಿ.ಬಿ. ಮಲ್ಲಪ್ಪನವರು ವಹಿಸಿದ್ದರು.

ಮೂಕಿ ಚಿತ್ರಗಳ ತಯಾರಿಕೆಗೆ ಆಗ ಮುಂಬೈ ಕೇಂದ್ರವಾಗಿತ್ತು. ಅಲ್ಲಿನ ಶಾರದಾ ಫಿಲಂ ಕಂಪನಿಯ ಪಾಲುದಾರರಲ್ಲೊಬ್ಬರಾದ ಹರಿಭಾಯ್ ಆರ್. ದೇಸಾಯಿ ಅವರು ೧೯೨೮ರಲ್ಲಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ಸೂರ್ಯ ಫಿಲಂ ಕಂಪನಿ ಸ್ಟುಡಿಯೋಸ್ ಸ್ಥಾಪಿಸಿ ೧೯೩೩ರವರೆಗೆ ಅಂದಾಜು ೪೦ ಚಿತ್ರಗಳನ್ನು ನಿರ್ಮಿಸಿದರೆಂದು ದಾಖಲಾಗಿದೆ. ಕನ್ನಡ ವಾಕ್ಚಿತ್ರದ ಮೊದಲ ನಾಯಕಿ ಲಕ್ಷ್ಮೀಬಾಯಿ ಅವರ ವೃತ್ತಿ ಬದುಕು ಆರಂಭವಾದದ್ದೇ ಸೂರ್ಯ ಫಿಲಂ ಕಂಪನಿಯ ಮೂಕಿ ಚಿತ್ರಗಳ ಮೂಲಕ.ಸಂಸ್ಥೆ ನಿರ್ಮಿಸಿದ ೪೦ ಚಿತ್ರಗಳ ಪೈಕಿ ಲಕ್ಷ್ಮೀಬಾಯಿಯವರು ಹದಿನೈದು ಚಿತ್ರಗಳಲ್ಲಿ ನಾಯಕಿಯಾಗಿ ‘ಸೂರ್ಯಸ್ಟಾರ್ ಎಂದೇ ಪ್ರಸಿದ್ಧರಾಗಿದ್ದರು. ಅವರು ಅಭಿನಯಿಸಿದ ಮೊದಲ ಮೂಕಿ ಚಿತ್ರ ರಾಜ ಹೃದಯ ಅವರಿಗೆ ಹಣ-ಕೀರ್ತಿ ತಂದು ಕೊಟ್ಟಿತು. ಅದರ ಯಶಸ್ಸು ಮುಂದಿನ ಚಿತ್ರಗಳಲ್ಲಿ ನಾಯಕಿಯ ಪಾತ್ರ ವಹಿಸುವಂತೆ ಮಾಡಿತು. ಜೊತೆಗೆ ಅವರ ಸೋದರಿ ಕಮಲಾಬಾಯಿಯವರೂ ಮೂಕಿ ಚಿತ್ರಗಳ ತಾರೆಯಾದರು. ಬಗೆಬಗೆಯ ಪ್ರಚಾರ ತಂತ್ರಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಸೂರ್ಯ ಕಂಪನಿಯ ನಿರ್ಮಾಣದ ಚಿತ್ರಗಳಿಗೆ ಮಾತಿಲ್ಲದ ಕಾರಣಕ್ಕಾಗಿಯೇ ಭಾರತದಾದ್ಯಂತ ಬೇಡಿಕೆಯಿತ್ತು.

ಸೂರ್ಯ ಫಿಲಂ ಕಂಪನಿಯ ಯಶಸ್ಸು ಮತ್ತು ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರ ಒತ್ತಾಸೆಯಿಂದ ಗುಬ್ಬಿ ವೀರಣ್ಣನವರು ಕರ್ನಾಟಕ ಪಿಕ್ಚರ್ಸ್ ಕಾರ್ಪೊರೇಷನ್ ಸಂಸ್ಥೆಯನ್ನು ಹುಟ್ಟು ಹಾಕಿ ಹಿಸ್ ಲವ್ ಅಫೇರ್ (೧೯೩೬), ಸಾಂಗ್ ಆಫ್ ಲೈಫ್ (೧೯೩೧) ಮತ್ತು ಹರಿಮಾಯ (೧೯೮೦) ಎಂಬ ಮೂರು ಚಿತ್ರಗಳನ್ನು ನಿರ್ಮಿಸಿದರು. ಆದರೆ ವೀರಣ್ಣನವರ ಪಾಲಿಗೆ ಮೂಕಿ ಚಿತ್ರ ನಿರ್ಮಾಣ ಒಂದು ದುಸ್ಸಾಹಸವಾಗಿತ್ತು.

ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮಕಾರಂತ ಅವರೂ ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು ಮತ್ತೊಂದು ಸಾಹಸ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (೧೯೩೦) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (೧೯೩೧) ಎಂಬ ಚಿತ್ರವನ್ನು ಸಹ ನಿರ್ಮಿಸಿದರು.

ಕನ್ನಡದ ಮೊದಲ ಮಾತನಾಡುವ ಚಿತ್ರ ಸತಿ ಸುಲೋಚನ ಬಿಡುಗಡೆಯ ವೇಳೆಗೆ ಮೂಕಿ ಯುಗ ಅಂತ್ಯ ಕಂಡಿತು,"ವಸಂತಸೇನಾ" ಮೂಕಿ ಚಿತ್ರದಲ್ಲಿ ಅಭಿನಯಿಸಿದ್ದ ಅಜ್ಜಂಪುರ ಸೀತಾರಾಂ ಅವರೇ ಉದಯರವಿ ಪ್ರಕಾಶನದ ಕುವೆಂಪು ಅವರ ಎಲ್ಲ ಕೃತಿಗಳ ರಕ್ಷಾಪುಟಗಳಲ್ಲಿರುವ ಜೋಡಿ ಕಾಜಾಣ ಚಿತ್ರ ರಚಿಸಿದವರು. ಚಿತ್ರದ sಥಿಟಿoಠಿsis ಬರೆದ ಐರಿಶ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರೇ ಕುವೆಂಪು ಅವರಿಗೆ ಕನ್ನಡದಲ್ಲಿ ಬರೆಯಲು ದೀಕ್ಷೆ ನೀಡಿದವರು.

ಮೃಚ್ಛಕಟಿಕಂ ನಾಟಕವು ಪಾಶ್ಚಾತ್ಯರ ಗಮನ ಸೆಳೆದದ್ದು ಇತ್ತೀಚೆಗೆ ಅದು ಫ್ರೆಂಚ್, ಗ್ರೀಕ್ ಮತ್ತು ಇಂಗ್ಲೀಷ್ ಭಾಷೆಗೆ ಅನುವಾದಗೊಂಡು ರಂಗದ ಮೇಲೂ ಯಶಸ್ವಿಯಾಗಿದೆ. ನಿರ್ದೇಶಕ ಬಾಜ್ ಲಹರ್‌ಮನ್‌ರವರು ೨೦೦೧ರಲ್ಲಿ ‘ಮೌಲಿನ್ ರೋಗ್’ ಎಂಬ ಚಲನಚಿತ್ರ ತಯಾರಿಸಿದ್ದರು. ಎಂಟು ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನ ಪಡೆದಿದ್ದ ಆ ಚಿತ್ರ ಅಂತಿಮವಾಗಿ ಎರಡು ಪ್ರಶಸ್ತಿ ಗಳಿಸಿತು. ‘ಮೌಲಿನ್ ರೋಗ್’ ಎನ್ನುವುದು ಜೋಸೆಫ್ ಒಲರ್ ಎಂಬಾತ ಪ್ಯಾರಿಸ್ಸಿನ ‘ಕೆಂಪುದೀಪ’ದ ತಾಣ ಎಂದೇ ಹೆಸರಾದ ಪಿಕಲ್ಲೆಯಲ್ಲಿ ೧೮೮೯ರಲ್ಲಿ ನಿರ್ಮಿಸಿದ ಅಮೋದ ತಾಣ. ಅದು ಮುಖ್ಯವಾಗಿ ಕಲಾವಿದರು, ಶ್ರೀಮಂತರ ಕಾಮತೃµಯನ್ನು ತಣಿಸುವ, ಕುಡಿತ, ಮೋಜಿನ ಕೇಂದ್ರ. ತನ್ನ ಕೃತಿಗೆ ಸ್ಫೂರ್ತಿಯನ್ನು ಹುಡುಕಿ ಮೌಲಿನ್ ರೋಗ್‌ಗೆ ಬರುವ ಬ್ರಿಟನ್‌ನ ಲೇಖಕ ಕ್ರಿಶ್ಚಿಯನ್ ಮತ್ತು ಕ್ಯಾಬರೆ ನರ್ತಕಿ ಸ್ಯಾಟಿನ್ ನಡುವಿನ ಪ್ರಣಯದ ಕತೆಯನ್ನು ‘ಮೌಲಿನ್ ರೋಗ್’ ಚಿತ್ರವು ನಿರೂಪಿಸುತ್ತದೆ. ಜೊತೆಗೆ ಸ್ಯಾಟಿನ್‌ಳನ್ನು ಬೆನ್ನು ಹತ್ತುವ ತಿಕ್ಕಲ ಡ್ಯೂಕ್‌ನ ಕಥೆಯೂ ಇದೆ. ಸ್ಯಾಟಿನ್ ಪಾತ್ರವನ್ನು ಪ್ರಸಿದ್ಧ ಹಾಲಿವುಡ್ ನಟಿ ನಿಕೋಲೆ ಕಿಡ್ಮನ್ ವಹಿಸಿದ್ದಾಳೆ. ಅದೇ ಚಿತ್ರದಲ್ಲಿ ಮತ್ತೊಂದು ಚಿತ್ರದ ಕತೆಯೂ ಅಡಕಗೊಂಡಿದೆ. ‘ಸ್ಪೆಕ್ಟಾಕ್ಯುಲರ್ ಸ್ಪೆಕ್ಟಾಕ್ಯುಲರ್’ ಎಂಬ ನಾಟಕದ ಆ ಕತೆಯು ‘ಮೃಚ್ಛಕಟಿಕಂ’ ನಾಟಕದ ಸಂಕ್ಷಿಪ್ತ ರೂಪ!

‘ಮೃಚ್ಛಕಟಿಕಂ’ ನಾಟಕಕ್ಕೂ ಕರ್ನಾಟಕಕ್ಕೂ ವಿಚಿತ್ರ • ಸಂಬಂಧವಿರುವ ಹಾಗೆ ಕಾಣುತ್ತದೆ. ಇದೇ ಕೃತಿಯನ್ನು ಆಧರಿಸಿ ಹಿಂದೀ ನಟ ಶಶಿಕಪೂರ್ ಅವರು ‘ಉತ್ಸವ್’ (೧೯೮೪) ಚಿತ್ರ ನಿರ್ಮಿಸಿದ್ದರು. ನಿರ್ದೇಶಕರು ನಮ್ಮ ನಾಟಕಕಾರರೇ ಆದ ಗಿರೀಶ್ ಕಾರ್ನಾಡ್. ಇಲ್ಲಿ ಮುಖ್ಯ ಕತೆಯ ಜೊತೆಗೆ ವಾತ್ಸಾಯನನ ಪಾತ್ರವನ್ನೂ ಅಳವಡಿಸಿದ್ದರು. ಕಾಮಸೂತ್ರ ರಚಿಸಿದ ವಾತ್ಸಾಯನ ತನ್ನ ಕೃತಿಗಾಗಿ ‘ನಗರವಧು’ಗಳ, ಮುಖ್ಯವಾಗಿ ‘ವಸಂತಸೇನೆ’ಯು ನೀಡುವ ಶೃಂಗಾರಕಲೆಯ ಶಿಕ್ಷಣವನ್ನು ದಾಖಲು ಮಾಡಿಕೊಳ್ಳುತ್ತಾನೆ. ಶೃಂಗಾರ ಮತ್ತು ಹಾಸ್ಯರಸಕ್ಕೆ ಒತ್ತು ನೀಡಿದ ನಿರ್ದೇಶಕರು ವಸಂತಸೇನೆಯ ಸೌಂದರ್ಯವನ್ನು ಕಲಾತ್ಮಕವಾಗಿ ಅನಾವರಣಗೊಳಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅರಂಗೇಟ್ರಂ ಮಾಡಿದ ನಟಿ ರೇಖಾ ಈ ಚಿತ್ರದಲ್ಲಿ ವಸಂತಸೇನೆಯಾಗಿ ತನ್ನ ಮಾದಕತೆಯಿಂದ ಸೆಳೆದರೆ, ಚಾರುದತ್ತ(ಶೇಖರ್ ಸುಮನ್)ನ ಮಗ ರೋಹಸೇನನ ಪಾತ್ರದಲ್ಲಿ ಮಾಸ್ಟರ್ ಮಂಜುನಾಥ್ ಮುದ್ದಾಗಿ ನಟಿಸಿದ್ದಾರೆ.

ಈ ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದದ್ದು • ಕರ್ನಾಟಕದಲ್ಲಿ- ಬೆಂಗಳೂರು, ಕುಂದಾಪುರದ ಮರವಂತೆ, ಕೊಳಕೆಬೈಲು, ಚಿಕ್ಕಮಗಳೂರಿನ ತನ್ನೂಡಿ ಮುಂತಾದ ರಮ್ಯ ಪ್ರದೇಶಗಳಲ್ಲಿ. ಆ ಕಾಲದ ಪರಿಸರವನ್ನು ನಿರ್ಮಿಸಲು ಕಾರ್ನಾಡರು ಸ್ಥಳೀಯ ಪರಿಕರಗಳನ್ನೇ ಬಳಸಿದ್ದಾರೆ. ದಕ್ಷಿಣ ಕನ್ನಡದ ಪುರಾತನ ಮನೆಗಳ ಕಲಾತ್ಮಕ ಕೆತ್ತನೆಯ ಕಂಬಗಳು, ಹಜಾರಗಳು, ಹಸಿರುಕ್ಕುವ ಬಯಲು, ಒಲೆ, ಮಡಿಕೆ, ಕುಡಿಕೆ ಇತ್ಯಾದಿಗಳಲ್ಲಿ ಕನ್ನಡ ಸಂಸ್ಕೃತಿಯ ಮುದ್ರೆಯಿದೆ.

ಎರಡನೆಯ ಮಹಾ ಯುದ್ದದ ಕಾಲದಲ್ಲಿ ಎಲ್ಲೆಲ್ಲೂ ಕೊರತೆ ಹಣ,ಕಚ್ಹಾವಸ್ತುಗಳ ಅಭಾವ.ಯಾವುದೇ ಚಿತ್ರ ಹನ್ನೊಂದು ಸಾವಿರ ಅಡಿಗಲಿಗಿಂತಲೂ ಉದ್ದವಿರಬಾರದೆಂದು ಸರ್ಕಾರ ನಿಷೇಧ ಹೇರಿತ್ತು.

(ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ಎಂಟು ಮತ್ತು ಒಂಬತ್ತನೇ ಪುಟದಿಂದ.'ನಮನ" )

"ಷಾ ಚಮನ್‍ಮಲ್ ಡುಂಗಾಜಿ""