ಗೋಕಾಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding sa:गोकाक
೮೧ ನೇ ಸಾಲು: ೮೧ ನೇ ಸಾಲು:
[[ms:Gokak]]
[[ms:Gokak]]
[[new:गोकक]]
[[new:गोकक]]
[[sa:गोकाक]]
[[vi:Gokak]]
[[vi:Gokak]]
[[zh:戈卡克]]
[[zh:戈卡克]]

೨೦:೦೬, ೫ ಫೆಬ್ರವರಿ ೨೦೧೩ ನಂತೆ ಪರಿಷ್ಕರಣೆ

ಈ ಲೇಖನ ಗೋಕಾಕ ಊರಿನ ಬಗೆಗಿದೆ. ಸಾಹಿತಿ ಗೋಕಾಕರ ಬಗ್ಯೆ ಲೇಖನಕ್ಕೆ ವಿನಾಯಕ ಕೃಷ್ಣ ಗೋಕಾಕ ಪುಟ ನೋಡಿ
ಗೋಕಾಕ

ಗೋಕಾಕ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಳಗಾವಿ
ನಿರ್ದೇಶಾಂಕಗಳು 16.1667° N 74.8333° E
ವಿಸ್ತಾರ 33.05 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
67170
 - 2032.38/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 591 307
 - +08332
 - ಕ ೪೯

ಗೋಕಾಕ್ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಈ ಜಿಲ್ಲೆಯಲ್ಲಿ ಸುಪ್ರಸಿದ್ಧ ಗೋಕಾಕ ಜಲಪಾತವಿದೆ. ಈ ಜಲಪಾತದಡಿಯಲ್ಲಿ ವಿದ್ಯುತ್ಚಕ್ತಿಯನ್ನು ಉತ್ಪಾದಿಸಲಾಗುತ್ತದೆ.ಗೋಕಾಕ ನಗರವು ಮೂಲತ: ಒಂದು ವಾಣಿಜ್ಯ ನಗರವಾಗಿದೆ. ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯು ಬೆಲ್ಲ , ಗೋವಿನ ಜೊಳ ಮತ್ತು ಹತ್ತಿಯ ವ್ಯಾಪಾರಕ್ಕೆ ಹೆಸರುವಾಸಿಯಾಗಿದೆ. ಇತ್ತಿಚಿಗೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಕೈಗಾರಿಕಾ ನಗರವಾಗಿಯೂ ಗುರುತಿಸಿಕೊಂಡಿದೆ. ಇಲ್ಲಿ ಮುಖ್ಯವಾಗಿ ಜವಳಿ, ಸಕ್ಕರೆ, ಮತ್ತು ಗೊವಿನ ಜೊಳ ಸಂಸ್ಕರಣೆ, ಮತ್ತು ಸಿಮೆಂಟ್ ಕೈಗಾರಿಕೆಗಳು ನೆಲೆಗೊಂಡಿವೆ. ಬೆಳಗಾವಿ ಜಿಲ್ಲೆಯಲ್ಲಿ ಬೆಳಗಾವಿ ನಗರವನ್ನು ಹೊರತುಪಡಿಸಿ ಇದೆ ಅತ್ಯಂತ ಜನನಿಬಿಡ ಹಾಗೂ ದೊಡ್ಡ ನಗರವಾಗಿದೆ.

ಇತಿಹಾಸ

ಗೋಕಾಕ್ ನಗರವು ಐತಿಹಾಸಿಕವಾಗಿಯೂ ಪ್ರಾಮುಖ್ಯತೆ ಪಡೆದ ಸ್ಥಳವಾಗಿದೆ. ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದಾರೆ. ತದನಂತರ ಮೊಘಲರ್ ಆಡಳಿತದಲ್ಲಿ ಬಿಜಾಪುರ ಸುಲ್ತಾನರು ಗೋಕಾಕ್ ಕೋಟೆಯನ್ನು ವಶಪಡಿಸಿಕೊಂಡರು. ಬಳಿಕ ಸವಣೂರಿನ ನವಾಬರು ಇದನ್ನು ಜಹಗೀರಾಗಿ ಪಡೆದುಕೊಂಡರು. ಇದಲ್ಲದೆ ಆಯಕಟ್ಟಿನ ಸ್ಥಳವಾಗಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶ ಕೆಲಕಾಲ ಜಮಖಂಡಿ ಸಂಸ್ಥಾನ, ಕಿತ್ತೂರು ಸಂಸ್ಥಾನ ಹಾಗೂ ಮರಾಠಾ ಪೆಶ್ವೆಗಳ ಆಡಳಿತಕ್ಕೂ ಒಳಪಟ್ಟಿತ್ತು. ನಂತರದ ಬ್ರಿಟಿಷ್ ಆಡಳಿತಾವಧಿಯಲ್ಲಿ ಬೆಳಗಾಂ ಜಿಲ್ಲೆಯ ಉಪವಿಭಾಗದ ಕೇಂದ್ರವಾಗಿತ್ತು. ೧೯೫೬ರಲ್ಲಿ ರಾಜ್ಯ ಪುನರ್ವಿಂಗಡನೆಯಾದಾಗ ಮುಂಬೈ ಸರ್ಕಾರದಿಂದ ಬೇರ್ಪಟ್ಟು ಕರ್ನಾಟಕದೊಂದಿಗೆ ಸೇರಿಸಲ್ಪಟ್ಟಿತು.

ನಗರಾಡಳಿತ

ಗೋಕಾಕ್ ನಗರಸಭೆಯು ೧೮೫೩ ರಲ್ಲಿ ಸ್ಥಾಪನೆಗೊಂಡಿದೆ. ಆಗಿನ ಮುಂಬಯಿ ಸರ್ಕಾರ ( ಸದರ್ನ ಪಾಟ್ ಅಫ್ ಮಹಾರಾಷ್ಟ್ರ)ದಲ್ಲಿ ಪುಣೆ ಹಾಗು ಗೋಕಾಕ್ ದಲ್ಲಿ ಎಕಕಾಲಕ್ಕೆ ಈ ಮುನ್ಸಿಪಾಲ್ಟಿಗಳು ಅಸ್ತಿತ್ವಕ್ಕೆ ಬಂದಿವೆ. ಹೀಗಾಗಿ ಇದು ಕರ್ನಾಟಕದ ಹಳೆಯ ಮುನ್ಸಿಪಾಲ್ಟಿಗಳ ಪೈಕಿ ಒಂದೆನಿಸಿದೆ. ಈ ಹಿಂದೆ ಪುರಸಭೆ ಸ್ಥಾನ ಹೊಂದಿದ್ದ ಈ ಸ್ಥಳೀಯಾಡಳಿತವನ್ನು ಕರ್ನಾಟಕ ರಾಜ್ಯ ಸರ್ಕಾರ ೧೯೯೫ ರಲ್ಲಿ ನಗರಸಭೆಯಾಗಿ ಪರಿವರ್ತಿಸಿದೆ. ಒಟ್ಟು ೩೧ ಸದಸ್ಯರು ನಗರದ ವಿವಿಧ ವಾರ್ಡಗಳನ್ನು ಪ್ರತಿನಿಧಿಸುತ್ತಾರೆ.

ಗೋಕಾಕ್ ವಿಶೇಷತೆ

ಗೋಕಾಕ್ ಪಟ್ಟಣವು ಹಲವಾರು ವೈವಿದ್ಯಮಯ ವಿಷಯಗಳಿಗಾಗಿ ನಾಡಿನಲ್ಲಿ ಹೆಸರು ಮಾಡಿದೆ. ಕಟ್ಟಿಗೆಯ ಹಣ್ಣಿನ ಫಲಕ, ಗೊಂಬೆ ಮುಂತಾದ ಕರಕುಶಲ ವಸ್ತುಗಳು ಇಲ್ಲಿ ತಯಾರಾಗುತ್ತವೆ. ಇನ್ನು ಪ್ರಸಿದ್ದ ಸಿಹಿ ತಿನಿಸು 'ಕರದಂಟು' ಸಹ ಇಲ್ಲಿಯೇ ರೆಡಿಯಾಗುತ್ತದೆ. ಜೊತೆಗೆ ಇತ್ತಿಚಿಗೆ ಲಡಗಿ ಲಾಡು (ಉಂಡಿ] ಸಹ ತಯಾರಿಸಲಾಗುತ್ತಿದ್ದು ಈ ಎರಡು ಸಿಹಿ ತಿನಿಸುಗಳು ಲೋಕ ಪ್ರಸಿದ್ದವಾಗಿವೆ. ಸಾಗರದಾಚೆಗೂ ಇವು ತಮ್ಮ ಕಂಪನ್ನು ಬೀರಿವೆ. ಇನ್ನು ಪಟ್ಟಣ ಜಿಲ್ಲಾ ಕೇಂದ್ರವಾಗುವತ್ತ ದಾಪುಗಾಲಿಟ್ಟಿದೆ. ಈ ಹಿಂದೆ ಸರ್ಕಾರ ನೇಮಿಸಿದ್ದ ಹುಂಡೇಕಾರ್ ಸಮಿತಿ , ಗದ್ದಿಗೌಡರ ಸಮಿತಿಗಳು ನಗರವನ್ನು ಜಿಲ್ಲಾ ಕೇಂದ್ರಕ್ಕೆ ಶಿಫಾರಸ್ಸು ಮಾಡಿವೆ. ಆದ್ರೆ ಬೆಳಗಾವಿ ಗಡಿ ವಿವಾದ ಇದಕ್ಕೆ ಅಡ್ಡಿಯಾಗಿದೆ. ವಿಚಿತ್ರ ಅಂದ್ರೆ ಗೋಕಾಕ್ ನಗರ ಆಯಕಟ್ಟಿನ ಸ್ಥಾನದಲ್ಲಿದ್ದರೂ ಸರ್ಕಾರ ಜಿಲ್ಲಾ ವಿಂಗಡನೆಗೆ ಮೀನಮೇಷ ಎಣಿಸುತ್ತಿದೆ. ಇನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಇಲ್ಲಿಯ ಕೊಡುಗೆ ಅಪಾರ. ಕನ್ನಡದ ಖ್ಯಾತ ಸಾಹಿತಿಗಳಾದ ಡಾ. ಚಂದ್ರಶೇಖರ ಕಂಬಾರ , ಕೃಷ್ಣಮೂರ್ತಿ ಪುರಾಣಿಕ, ಬೇಟಗೇರಿ ಕೃಷ್ಣಶರ್ಮ, ಬಸವರಾಜ್‌ ಕಟ್ಟಿಮನಿ, ಪ್ರೊ.ಕೆ.ಜಿ.ಕುಂದಣಗಾರ್, ಮುಂತಾದ ಹಿರಿಕರು ಈ ಗೋಕಾವಿ ನಾಡಿಗೆ ಸೇರಿದವರಾಗಿದ್ದಾರೆ.

ರೈಲು ನಿಲ್ದಾಣ

ಗೊಕಾಕ್ ರೈಲು ನಿಲ್ದಾಣವು ಪಟ್ಟಣ ದಿಂದ ೧೦ ಕಿ.ಮಿ ಅಂತರದಲ್ಲಿ ಇದೆ...ಇದು ಬೆಳಗಾವಿ ಜಿಲ್ಲೆಯ ೫ನೇ ದೊಡ್ಡ ನಿಲ್ದ್ದಾಣ. ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದಲ್ಲಿ ಈ ರೈಲು ನಿಲ್ದಾಣವು ಬರುತ್ತದೆ. ಈ ನಿಲ್ದಾಣದ ಪಕ್ಕದಲ್ಲಿ ಕೊಣ್ಣೂರು ಎಂಬ ಉಪ ನಗರವು ಬರುತ್ತದೆ. ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಇರುವುದರಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತದೆ.ನಿಲ್ದಾಣದ ಉತ್ತರಕ್ಕೆ ಘಟಪ್ರಭಾ ಮತ್ತು ದಕ್ಶಿಣಕ್ಕೆ ಪಾಶ್ಚಪೂರ ರೈಲು ನಿಲ್ದಾಣಗಳು ಬರುತ್ತವೆ.ಇದನ್ನು ಗೋಕಾಕ್ ರೋಡ್ ನಿಲ್ದಾಣವೆಂದು ಕರೆಯುತ್ತಾರೆ.ಪ್ರೆಕ್ಶಣಿಯ ಸ್ಥಳಗಳಾದ ಗೊಕಾಕ್ ಜಲಪಾತ, ಗೊಡಚನಮಲ್ಕಿ ಜಲಪಾತ, ಘಟಪ್ರಭಾ ಪಕ್ಶಿದಾಮ, ದುಪದಾಳ ಹಾಗು ಹಿಡಕಲ್ ಜಲಾಶಯ, ಯೊಗಿಕೊಳ್ಳ ನಿಸರ್ಗದಾಮ ( ಗೊಕಾಕ್ ನವಿಲುದಾಮ) ಮುಂತಾದ ಸ್ಥಳಗಳಿಗೆ ಹೋಗುವವರು ಇಲ್ಲಿ ಇಳಿಯಬಹುದಾಗಿದೆ.


[ಬದಲಾಯಿಸಿ] ನಿಲುಗಡೆ ಇರುವ ರೈಲುಗಳು: ಮಿರಜ್ - ಬೆಳಗಾಂವ ( ಪ್ಯಾಸೆಂಜರ್)

ಮಿರಜ್ - ಕ್ಯಾಸಲರಾಕ್ " "

ಮಿರಜ್ - ಲೋಂಡಾ " "

ಮಿರಜ್ - ಬಳ್ಳಾರಿ " "

ಕೊಲ್ಹಾಪುರ - ಬೆಂಗಳೂರು ( ರಾಣಿ ಚೆನ್ನಮಾ ಎಕ್ಸ್ ಪ್ರೆಕ್ಸ)

ಯಶವಂತಪುರ - ದಾದರ ( ಚಾಲುಕ್ಯ ಎಕ್ಸ್ ಪ್ರೆಕ್ಸ)ಸದ್ಯಕ್ಕೆ ನಿಲುಗಡೆ ಇಲ್ಲ.

ಕ್ಯಾಸಲರಾಕ್ - ಮಿರಜ್ ( ಪ್ಯಾಸೆಂಜರ್)

ಲೋಂಡಾ - ಮಿರಜ್ " "

ಬೆಳಗಾಂವ - ಮಿರಜ್ " "

ಬೆಳಗಾಂವ - ಮಿರಜ್ ಪುಶ ಪುಲ್

ಬೆಂಗಳೂರು - ಕೊಲ್ಹಾಪುರ( ರಾಣಿ ಚೆನ್ನಮಾ ಎಕ್ಸ್ ಪ್ರೆಕ್ಸ)

ದಾದರ - ಯಶವಂತಪುರ ( ಚಾಲುಕ್ಯ ಎಕ್ಸ್ ಪ್ರೆಕ್ಸ)

ರಾಜಕೀಯ: ಗೋಕಾಕ ನಗರದ ಜಾರಕಿಹೊಳಿ ಕುಟುಂಬದ ಮೂವರು ಸೋದರರಾದ ರಮೇಶ ಜಾರಕಿಹೊಳಿ,ಶಾಸಕರು.ಗೋಕಾಕ ಮತಕ್ಷೇತ್ರ, ಸತೀಶ ಜಾರಕಿಹೊಳಿ,ಶಾಸಕರು.ಯಮಕನಮರ್ಡಿ ಮೀಸಲು ಮತಕ್ಷೇತ್ರ, ಬಾಲಚಂದ್ರ ಜಾರಕಿಹೊಳಿ,ಶಾಸಕರು,ಅರಭಾಂವಿ ಮತಕ್ಷೇತ್ರ& ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರು.ಕರ್ನಾಟಕ ಸರಕಾರ,ಬೆಂಗಳೂರು.

"https://kn.wikipedia.org/w/index.php?title=ಗೋಕಾಕ&oldid=310585" ಇಂದ ಪಡೆಯಲ್ಪಟ್ಟಿದೆ