ಬಯೋಇನ್‌ಫರ್ಮ್ಯಾಟಿಕ್ಸ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.2+) (Robot: Adding be:Біяінфарматыка
೪೮೧ ನೇ ಸಾಲು: ೪೮೧ ನೇ ಸಾಲು:
[[ru:Биоинформатика]]
[[ru:Биоинформатика]]
[[sh:Bioinformatika]]
[[sh:Bioinformatika]]
[[si:ජෛව ‍තොරතුරු විද්‍යාව]]
[[simple:Bioinformatics]]
[[simple:Bioinformatics]]
[[sk:Bioinformatika]]
[[sk:Bioinformatika]]

೦೧:೩೫, ೩ ಜನವರಿ ೨೦೧೩ ನಂತೆ ಪರಿಷ್ಕರಣೆ

ಮನುಷ್ಯನ X ಕ್ರೋಮೋಸೋಮ್‌ನ ನಕ್ಷೆ(NCBI ವೆಬ್‌ಸೈಟ್‌ನಿಂದ). ಮನುಷ್ಯ ಜಿನೋಮ್‌ಗಳ ಜೋಡಣೆ ಬಯೋಇನ್‌ಫರ್ಮ್ಯಾಟಿಕ್ಸ್‌ನ ಬಹುದೊಡ್ಡ ಸಾಧನೆಗಳಲ್ಲೊಂದು

ಜೀವಾಣು ವಿಜ್ಞಾನ ಕ್ಷೇತ್ರಕ್ಕೆ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅನ್ವಯಿಸಿಕೊಳ್ಳುವುದನ್ನೇ ಬಯೋಇನ್‌ಫರ್ಮ್ಯಾಟಿಕ್ಸ್ ಎನ್ನಲಾಗಿದೆ. ಜೈವಿಕ ವ್ಯವಸ್ಥೆಯಲ್ಲಿನ ಸಂವಹನ ಪ್ರಕ್ರಿಯೆಯನ್ನು ಅಧ್ಯಯನ ಮಾಡಲು 1979ರಲ್ಲಿ ಬಯೋಇನ್‌ಫರ್ಮ್ಯಾಟಿಕ್ಸ್‌ ಎಂಬ ಪರಿಕಲ್ಪನೆಯನ್ನು ಪೌಲಿನ್‌ ಹೋಗ್‌ವೆಗ್‌ ಎಂಬ ಜೀವ ವಿಜ್ಞಾನಿ ಪರಿಚಯಿಸಿದ.

ದತ್ತಕೋಶಗಳು, ಅಲ್ಗಾರಿದಮ್‌ಗಳು, ಕಂಪ್ಯುಟೇಶನಲ್‌ ಮತ್ತು ಸಂಖ್ಯಾಶಾಸ್ತ್ರೀಯ ತಂತ್ರಗಳು ಹಾಗೂ ಜೈವಿಕ ಮಾಹಿತಿಯ ವಿಶ್ಲೇಷಣೆ ಮತ್ತು ನಿರ್ವಹಣೆಯಲ್ಲಿ ಉದ್ಭವಿಸುವ ತಾತ್ವಿಕ ಹಾಗೂ ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸುವ ಸಿದ್ಧಾಂತಗಳನ್ನು ರೂಪಿಸುವ ಮತ್ತು ಅವುಗಳನ್ನು ಅಗ್ಯತಕ್ಕೆ ತಕ್ಕಂತೆ ಸುಧಾರಿಸುವ ಕೆಲಸವನ್ನು ಬಯೋಇನ್‌ಫರ್ಮ್ಯಾಟಿಕ್ಸ್‌ ಮಾಡುತ್ತದೆ.

ಇತ್ತೀಚಿನ ದಶಕಗಳಲ್ಲಿ ವಂಶವಾಹಿ ಅಧ್ಯಯನ ಮತ್ತು ಜೀವಾಣು ಸಂಶೋಧನಾ ತಂತ್ರಜ್ಞಾನಗಳಲ್ಲಿ ಕ್ಷಿಪ್ರ ಬೆಳವಣಿಗೆಗಳಾಗಿವೆ, ಅದೇ ರೀತಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಎರಡೂ ಕ್ಷೇತ್ರಗಳು ಜೀವಾಣು ವಿಜ್ಞಾನದ ಮೇಲೆ ಭಾರಿ ಮೊತ್ತದ ಮಾಹಿತಿ ಕಲೆ ಹಾಕಲು ಇದೀಗ ಬಯೋಇನ್‌ಫರ್ಮ್ಯಾಟಿಕ್ಸ್‌ ಹೆಸರಿನಲ್ಲಿ ಸಂಯೋಜನೆಗೊಂಡಿವೆ.

ಜೈವಿಕ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಗಣಿತ ವಿಜ್ಞಾನಕ್ಕೆ ಅನುಸಾರವಾದ ಮತ್ತು ಕಂಪ್ಯೂಟಿಂಗ್‌ ವಿಧಾನಗಳಿಗೆ ಕೊಟ್ಟಿರುವ ಹೆಸರೇ ಬಯೋಇನ್‌ರ್ಮ್ಯಾಟಿಕ್ಸ್‌. DNAಗಳ ನಕ್ಷೆ ತಯಾರಿಸಿ ಅದರ ವಿಶ್ಲೇಷಣೆ ನಡೆಸುವುದು, ಪ್ರೋಟೀನ್‌ಗಳ ಸೀಕ್ವೆನ್ಸ್‌(ಅನುಕ್ರಮ) ಸಿದ್ಧಪಡಿಸುವುದು, ವಿವಿಧ DNA ಮತ್ತು ಪ್ರೋಟೀನ್‌ಗಳ ಸೀಕ್ವೆನ್ಸ್‌ಗಳನ್ನು ಜೋಡಿಸಿ ಹೋಲಿಸುವುದು, ಹಾಗೂ ಪ್ರೋಟೀನ್‌ ರಚನೆಗಳ 3-D (3 ಆಯಾಮದ) ಮಾದರಿಗಳನ್ನು ರೂಪಿಸಿ ಪರೀಕ್ಷಿಸುವುದು - ಮುಂತಾದವು ಬಯೋಇನ್‌ಫರ್ಮ್ಯಾಟಿಕ್ಸ್‌ ಅಧ್ಯಯನದ ಸಾಮಾನ್ಯ ಚಟುವಟಿಕೆ.

ಜೈವಿಕ ಪ್ರಕ್ರಿಯೆಗಳ ಕುರಿತು ನಮ್ಮ ಗ್ರಹಿಕೆಯನ್ನು ವಿಸ್ತರಿಸುವುದು ಬಯೋಇನ್‌ಫರ್ಮ್ಯಾಟಿಕ್ಸ್‌ ಅಧ್ಯಯನದ ಪ್ರಾಥಮಿಕ ಗುರಿ.


ಇದನ್ನು ರೂಪಿಸುವ ಇತರೆ ವಿಧಾನಗಳನ್ನು ಹೊರತುಪಡಿಸಿಯೂ ತನ್ನ ಗುರಿಯನ್ನು ಸಾಧಿಸಲು ತೀವ್ರತರವಾದ ಕಂಪ್ಯುಟೇಶನಲ್‌ ತಂತ್ರಗಳ (ಉದಾ: ಪ್ಯಾಟರ್ನ್ ರೆಕಗ್ನಿಷನ್‌(ಮೂಲಮದರಿ ಗುರುತಿಸುವಿಕೆ), ಡೇಟಾ ಮೈನಿಂಗ್‌ (ದತ್ತಾಂಶ ಶೋಧನೆ), ಮೆಷಿನ್‌ ಲರ್ನಿಂಗ್‌ ಅಲ್ಗಾರಿದಮ್ಸ್‌ ಮತ್ತು ವಿಷುಯಲೈಸೇಷನ್‌(ದೃಗ್ಗೋಚರತೆ) ಇದು ಅಭಿವೃದ್ಧಿ ಮತ್ತು ಅದರ ಅನ್ವಯದ ಮೇಲೆ ತನ್ನ ಗಮನ ಕೇಂದ್ರೀಕರಿಸಿದೆ.ಹೀಗಾಗಿ ಮಿಕ್ಕೆಲ್ಲ ವಿಧಾನಗಳಿಗಿಂತಲೂ ಇದು ಭಿನ್ನವಾಗಿದೆ.

ಸೀಕ್ವೆನ್ಸ್‌ ಅಲೈನ್‌ಮೆಂಟ್‌, ಜೀನ್‌ ಫೈಂಡಿಂಗ್‌, ಜಿನೋಮ್‌ ಅಸೆಂಬ್ಲಿ‌, ಪ್ರೋಟೀನ್‌ ಸ್ಟ್ರಕ್ಚರ್‌ ಅಲೈನ್‌ಮೆಂಟ್‌, ಪ್ರೋಟೀನ್‌ ಸ್ಟ್ರಕ್ಚರ್‌ ಪ್ರಿಡಿಕ್ಷನ್‌, ಪ್ರಿಡಿಕ್ಷನ್‌ ಆಫ್‌ ಜೀನ್‌ ಎಕ್ಸ್‌ಪ್ರೆಶನ್‌ ಮತ್ತು ಪ್ರೋಟೀನ್-ಪ್ರೋಟೀನ್‌ ಇಂಟರಾಕ್ಷನ್ಸ್‌ ಜಿನೋಮ್ ವೈಡ್‌ ಅಸೋಸಿಯೇಷನ್‌ ಅಧ್ಯಯನಗಳು ಮತ್ತು ಮಾಡೆಲಿಂಗ್‌ ಆಫ್‌ ಎವೊಲ್ಯೂಷನ್‌-ಇವು ಈ ಕ್ಷೇತ್ರದಲ್ಲಿ ನಡೆದಿರುವ ಪ್ರಮುಖ ಸಂಶೋಧನೆಗಳು.

ಪರಿಚಯ

"ಜಿನೋಮಿಕ್‌ ಕ್ರಾಂತಿ"ಯ ಆರಂಭದಲ್ಲಿ ದತ್ತಕೋಶದ ಸೃಷ್ಟಿ ಮತ್ತು ನಿರ್ವಹಣೆಯಲ್ಲಿ ಜೈವಿಕ ಮಾಹಿತಿಯನ್ನು ಸಂಗ್ರಹಿಸಲು ಬಯೋಇನ್‌ಫರ್ಮ್ಯಾಟಿಕ್ಸ್‌ ಬಳಸಲಾಗಿತ್ತು. ಉದಾಹರಣೆಗೆ, ನ್ಯೂಕ್ಲಿಯೋಟೈಡ್ ಮತ್ತು ಅಮೀನೋ ಆಸಿಡ್‌ ಸೀಕ್ವೆನ್ಸ್‌.

ಈ ರೀತಿಯ ದತ್ತಕೋಶದ ಅಭಿವೃದ್ಧಿ ಕೇವಲ ತತ್ವಗಳನ್ನು ರೂಪಿಸುವುದಷ್ಟೇ ಅಲ್ಲ, ಜೊತೆಗೆ ಸಂಕೀರ್ಣ ಇಂಟರ್‌ಫೇಸ್‌ಗಳ ಅಭಿವೃದ್ಧಿಯನ್ನೂ ಒಳಗೊಂಡಿತ್ತು. ಈ ವ್ಯವಸ್ಥೆಯಿಂದ ಇರುವ ಮಾಹಿತಿಯನ್ನು ಪಡೆಯುವ, ಪರಿವರ್ತಿಸುವ ಮತ್ತು ಹೊಸ ಮಾಹಿತಿಯನ್ನು ತುಂಬುವುದಕ್ಕೆ ಸಂಶೋದಕರಿಗೆ ಸಾಧ್ಯವಾಯಿತು.

ವಿವಿಧ ರೋಗಗಳು ಬಂದ ಸಂದರ್ಭದಲ್ಲಿ ಜೀವಕೋಶದ ಸಹಜ ಚಟುವಟಿಕೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ಕಂಡುಕೊಳ್ಳಬೇಕಾದರೆ, ಈ ಜೀವಕೋಶಗಳ ವಿವಿಧ ಕಾರ್ಯಚಟುವಟಿಕೆಗಳ ಸ್ಪಷ್ಟ ಚಿತ್ರಣ ದೊರಕಬೇಕು. ಇದು ಸಾಧ್ಯವಾಗಲು ಎಲ್ಲ ಜೈವಿಕ ಮಾಹಿತಿ ಒಂದೆಡೆ ಸಂಗ್ರಹಗೊಳ್ಳಬೇಕು. ಇದನ್ನು ಸಾಧಿಸಲು ಬಯೋಇನ್‌ಫರ್ಮ್ಯಾಟಿಕ್ಸ್‌ ಕ್ಷೇತ್ರ ಹಲವು ತುರ್ತು ಕಾರ್ಯಗಳನ್ನು ಅಭಿವೃದ್ಧಿಪಡಿಸಿದೆ. ನ್ಯೂಕ್ಲಿಯೋಟೈಡ್‌ ಮತ್ತು ಅಮಿನೋ ಆಸಿಡ್‌ ಸೀಕ್ವೆನ್ಸ್‌ಗಳು, ಪ್ರೋಟೀನ್ ಡೊಮೈನ್ಸ್‌, ಮತ್ತು ಪ್ರೋಟೀನ್ ರಚನೆಗಳೂ ಸೇರಿದಂತೆ ವಿವಿಧ ರೀತಿಯ ಜೈವಿಕ ಮಾಹಿತಿಯ ವ್ಯಾಖ್ಯಾನ ಮತ್ತು ವಿಶ್ಲೇಷಣೆಯನ್ನು ಈ ತುರ್ತು ಕಾರ್ಯಗಳು ಒಳಗೊಂಡಿವೆ.


ಮಾಹಿತಿಯನ್ನು ವಿಶ್ಲೇಷಿಸುವ ಮತ್ತು ವ್ಯಾಖ್ಯಾನಿಸುವ ನೈಜ ಪ್ರಕ್ರಿಯೆಗೆ ಕಂಪ್ಯುಟೇಶನಲ್‌ ಬಯಾಲಜಿ ಎಂದು ಕರೆಯುತ್ತಾರೆ. ಬಯೋಇನ್‌ಫರ್ಮ್ಯಾಟಿಕ್ಸ್‌ ಮತ್ತು ಕಂಪ್ಯುಟೇಶನಲ್‌ ಬಯಾಲಜಿಗಳ ಆಂತರ್ಯದಲ್ಲಿರುವ ಪ್ರಮುಖ ಉಪವಿಭಾಗಗಳು ಈ ರೀತಿ ಇವೆ:


a) ಲಭ್ಯ ಮಾಹಿತಿಯ ಸುಲಭ ಮತ್ತು ಸಮರ್ಥ ಬಳಕೆಗೆ ಅವಕಾಶ ಕೊಡುವ ಪರಿಕರ ಅಥವಾ ಸಾಧನ-ಸಲಕರೆಣೆಗಳ ಅಭಿವೃದ್ಧಿ ಮತ್ತು ಜಾರಿ, ಹಾಗೂ ವಿವಿಧ ಮಾದರಿಯ ಮಾಹಿತಿಯ ಬಳಕೆ ಮತ್ತು ನಿರ್ವಹಣೆ.

b) ಹೊಸ ಅಲ್ಗಾರಿದಮ್‌ಗಳು (ಗಣಿತೀಯ ಸೂತ್ರಗಳು) ಮತ್ತು ಬೃಹತ್‌ ಮಾಹಿತಿ ಸಂಗ್ರಹಗಳ ಸದಸ್ಯರಲ್ಲಿ ಸಂಬಂಧಗಳನ್ನು ನಿರ್ವಹಿಸುವ ಅಂಕಿಅಂಶಗಳ ಅಭಿವೃದ್ಧಿ. ಉದಾಹರಣೆಗೆ, ನಿರ್ದಿಷ್ಟ ಸೀಕ್ವೆನ್ಸ್‌ಗಳೊಳಗೆ ವಂಶವಾಹಿಯನ್ನು ಪತ್ತೆ ಹಚ್ಚುವುದು, ಪ್ರೋಟೀನ್ ರಚನೆಗಳ ಅಥವಾ ಕಾರ್ಯಗಳನ್ನು ಮುಂಗಾಣುವುದು, ಪ್ರೋಟೀನ್ ಸೀಕ್ವೆನ್ಸ್‌ಗಳನ್ನು ಅದೇ ತೆರನಾದ ಸೀಕ್ವೆನ್ಸ್ ಕುಟುಂಬಗಳೊಡನೆ ಒಟ್ಟುಗೂಡಿಸುವುದು ಮುಂತಾದವು.

ಪ್ರಮುಖ ಸಂಶೋಧನಾ ಕ್ಷೇತ್ರಗಳು

ಸೀಕ್ವೆನ್ಸ್ ಅನ್ಯಾಲಿಸಿಸ್‌ (ಸೀಕ್ವೆನ್ಸ್ ವಿಶ್ಲೇಷಣೆ)

ಫೇಜ್‌ Φ-X174 ಸೀಕ್ವೆನ್ಸ್1977ರಲ್ಲಿ ರೂಪುಗೊಂಡಾಗಿನಿಂದ ನೂರಾರು ಆರ್ಗ್ಯಾನಿಸಂಗಳ DNA ಸೀಕ್ವೆನ್ಸ್ ಗಳನ್ನು ವಿಸಂಕೇತಿಸಿ (ಸರಳ ಭಾಷೆಗೆ ತಿರುಗಿಸಿ)  ದತ್ತಕೋಶಗಳಲ್ಲಿ ಸಂಗ್ರಹಿಸಲಾಗಿದೆ. ಪಾಲಿಪೆಪ್‌ಟೈಡ್ಸ್‌ಗಳನ್ನು ಸಂಕೇತಿಸಿ (ಗುಪ್ತ ಭಾಷೆಗೆ ತಿರುಗಿಸಿ)ವಂಶವಾಹಿಗಳನ್ನು ಮತ್ತು ರೆಗ್ಯುಲೇಟರಿ ಸೀಕ್ವೆನ್ಸ್‌ಗಳನ್ನು ಕಂಡುಕೊಳ್ಳಲು ಮಾಹಿತಿಯ ವಿಶ್ಲೇಷಣೆ ಮಾಡಲಾಗಿದೆ. 

ಒಂದೇ ಜಾತಿಯ ಅಥವಾ ವಿವಿಧ ಜಾತಿಯ ಜೀವಿಗಳ ನಡುವೆ ವಂಶವಾಹಿಗಳನ್ನು ಹೋಲಿಸುವುದರಿಂದ ವಿವಿಧ ಪ್ರೋಟೀನ್‌ ಕಾರ್ಯಾಚರಣೆಗಳ ನುಡವಿನ ಸಾಮ್ಯತೆಗಳನ್ನು ಪತ್ತೆ ಹಚ್ಚಬಹುದು, ಅಥವಾ ವಿವಿಧ ಜೀವಿಗಳ (ಪೈಲೋಜಿನೆಟಿಕ್‌ ವೃಕ್ಷ ಸಿದ್ಧಪಡಿಸಲು ಮಾಲಿಕ್ಯೂಲರ್‌ ಸಿಸ್ಟಮ್ಯಾಟಿಕ್ಸ್‌ ಅಧ್ಯಯನದ ಬಳಕೆ) ನಡುವೆ ಇರಬಹುದಾದ ಜೈವಿಕ ಸಂಬಂಧಗಳನ್ನು ಕಂಡುಹಿಡಿಯಬಹುದು. ಜೈವಿಕ ಮಾಹಿತಿ ಪ್ರಮಾಣ ಬೆಳೆಯುತ್ತಿದ್ದ ಬಹಳ ಹಿಂದಿನ ಸಂದರ್ಭದಲ್ಲಿ DNA ಸೀಕ್ವೆನ್ಸ್‌ಗಳನ್ನು ಮನುಷ್ಯ ಪ್ರಯತ್ನದಲ್ಲಿ ವಿಶ್ಲೇಷಣೆ ನಡೆಸುವುದು ದುಃಸಾಧ್ಯವಾಗಿತ್ತು. ಆದರೆ ಇಂದು ಈ ಕೆಲಸ ಕಂಪ್ಯೂಟರ್‌ ಪ್ರೋಗ್ರಾಮ್‌ಗಳ ಸಹಾಯದಿಂದ ಸುಲಭವಾಗಿದೆ. ಇದರಿಂದ ಕೋಟ್ಯಂತರ ನ್ಯೂಕ್ಲಿಯೋಟೈಡ್‌ಗಳಿಂದಾದ ಸಹಸ್ರಾರು ಆರ್ಗ್ಯಾನಿಸಂಗಳಿರುವ ಜಿನೋಮ್‌ಗಳನ್ನೂ ಕೂಡ ಅತಿ ಸರಳವಾಗಿ ಪತ್ತೆ ಮಾಡಬಹುದು. ಈ ಪ್ರೋಗ್ರಾಮ್‌ಗಳು, DNA ಸೀಕ್ವೆನ್ಸ್‌ನಲ್ಲಿ ಆಗುವ ಪರಿವರ್ತನೆಗಳಿಗೆ (ವಿನಿಮಯಗೊಂಡ,ಅಳಿಸಿದ ಅಥವಾ ಸೇರಿಸಲಾದ ತಳಹದಿಯಲ್ಲಿ) ಪರಸ್ಪರ ಸಂಬಂಧವಿರುವ ಆದರೆ ಏಕರೂಪದ್ದಲ್ಲದ ಸೀಕ್ವೆನ್ಸ್‌ಗಳನ್ನು ಗುರುತಿಸುವಲ್ಲಿ ಇವು ಸಹಕಾರಿಯಾಗುತ್ತವೆ. ಈ ಸೀಕ್ವೆನ್ಸ್ ಅಲೈನ್‌ಮೆಂಟ್‌ನ ಭಿನ್ನ ರೂಪವೊಂದು ಸೀಕ್ವೆನ್ಸಿಂಗ್‌ ಪ್ರಕ್ರಿಯೆಯೊಳಗೇ ಬಳಕೆಯಾಗುತ್ತದೆ.

ಶಾಟ್‌ಗನ್‌ ಸೀಕ್ವೆನ್ಸಿಂಗ್‌ಎನ್ನಲಾಗುವ ಈ ತಂತ್ರ (ಬ್ಯಾಕ್ಟೀರಿಯಾ ಜಿನೋಮ್‌ ಹೆಮೋಫಿಲಸ್‌ ಇನ್‌ಫ್ಲುಯೆನ್ಜಾ )ವನ್ನು ಸೀಕ್ವೆನ್ಸ್‌ ಮಾಡಲು ದಿ ಇನ್‌ಸ್ಟಿಟ್ಯೂಟ್‌ ಆಫ್‌ ಜಿನೋಮಿಕ್‌ ರಿಸರ್ಚ್‌ಮೊದಲು ಬಳಸಿದ  ತಂತ್ರ ) ನ್ಯೂಕ್ಲಿಯೋಟೈಡ್‌ಗಳ ಸೀಕ್ವೆನ್ಸ್‌ ಪಟ್ಟಿಯನ್ನು ಒದಗಿಸುವುದಿಲ್ಲ, ಬದಲು ಸಾವಿರಾರು ಸಣ್ಣ DNA ತುಣುಕುಗಳ (ಪ್ರತಿಯೊಂದೂ 600-800 ನ್ಯೂಕ್ಲಿಯೋಟೈಡ್‌ಗಳಷ್ಟು ಉದ್ದ) ಸೀಕ್ವೆನ್ಸ್‌ಗಳನ್ನು ನೀಡುತ್ತದೆ. 


ಈ ತುಣುಕುಗಳ ತುದಿ ಒಂದರ ಮೇಲೊಂದು ವ್ಯಾಪಿಸಿಕೊಂಡಿರುತ್ತವೆ. ಇವುಗಳನ್ನು ಸರಿಯಾಗಿ ಜೋಡಿಸಿದಾಗ ಪರಿಪೂರ್ಣ ಜಿನೋಮ್‌ ರೂಪುಗೊಳ್ಳುತ್ತದೆ.

ಶಾಟ್‌ಗನ್‌ ಸೀಕ್ವೆನ್ಸಿಂಗ್‌ ತಂತ್ರದಿಂದ ಸೀಕ್ವೆನ್ಸ್‌ ಮಾಡಲಾದ ಮಾಹಿತಿಯನ್ನು ಬಹುಬೇಗ ಪಡೆಯಬಹುದು. ಆದರೆ ದೊಡ್ಡ ಜಿನೋಮ್‌ಗಳಿಗೆ ತುಣುಕುಗಳ ಜೋಡಣಾ ಕಾರ್ಯ ಇದರಲ್ಲಿ ಸ್ವಲ್ಪ ಕ್ಲಿಷ್ಟಕರ. 
ಹ್ಯೂಮನ್‌ ಜಿನೋಮ್‌ ಪ್ರಾಜೆಕ್ಟ್‌ (ಮಾನವ ತಳಿನಕ್ಷೆ ಯೋಜನೆ)ನಲ್ಲಿ ತುಣುಕುಗಳ ಜೋಡಣಾ ಕಾರ್ಯ ಹಲವು ದಿನಗಳ CPU ಸಮಯವನ್ನು (ಇದೇ ಉದ್ದೇಶಕ್ಕಾಗಿ ನೂರು ಪೆಂಟಿಯಮ್‌ III ಡೆಸ್ಕ್‌ಟಾಪ್‌ ಮೆಷಿನ್‌ಗಳನ್ನು ಅಣಿಗೊಳಿಸಲಾಗಿತ್ತು) ತೆಗೆದುಕೊಂಡಿ‌ತ್ತು.  ಶಾಟ್‌ಗನ್‌ ಸೀಕ್ವೆನ್ಸಿಂಗ್‌ ಎನ್ನುವುದು ವಾಸ್ತವದಲ್ಲಿ ಈವರೆಗೆ ಆಗಿರುವ ಎಲ್ಲ ಜಿನೋಮ್‌ ಸೀಕ್ವೆನ್ಸ್‌ಗಳಲ್ಲಿ ಮಾಡುವ ಆಯ್ಕೆಯಾಗಿದೆ. ಜಿನೋಮ್‌ ಅಸೆಂಬ್ಲಿ ಅಲ್ಗಾರಿದಮ್‌ಗಳು ಬಯೋಇನ್‌ಫರ್ಮ್ಯಾಟಿಕ್ಸ್‌ ಸಂಶೋಧನೆಯಲ್ಲಿ ಬಹಳ ಗಂಭೀರವಾದ ಕ್ಷೇತ್ರ.

ಬಯೋಇನ್‌ಫರ್ಮ್ಯಾಟಿಕ್ಸ್‌ ಕ್ಷೇತ್ರದ ಸೀಕ್ವೆನ್ಸ್ ಅನಲಿಸಿಸ್‌ನ ಮತ್ತೊಂದು ಅಂಶವೆಂದರೆ, ಸ್ವಯಂಚಾಲಿತ ವಂಶವಾಹಿಗಳ ಶೋಧನೆ ಮತ್ತು ಜಿನೋಮ್‌ ಒಳಗೇ ಇರುವ ನಿಯಂತ್ರಕ ಸೀಕ್ವೆನ್ಸ್‌ಗಳು. ಜಿನೋಮ್‌ ಒಳಗಿರುವ ಎಲ್ಲ ನ್ಯೂಕ್ಲಿಯೋಟೈಡ್‌ಗಳು ವಂಶವಾಹಿಗಳಲ್ಲ.

ಉನ್ನತ ಆರ್ಗ್ಯಾನಿಸಂಗಳ ಜಿನೋಮ್‌ ಒಳಗಿರುವ ಬಹುತೇಕ DNAಗಳು ಯಾವುದೇ ಸ್ಪಷ್ಟ ಉದ್ದೇಶ  ಹೊಂದಿರುವುದಿಲ್ಲ. ಈ ಅನುಪಯುಕ್ತ DNAಗಳೂ ಕೂಡ  ಗಮನಕ್ಕೆ ಬಾರದ ಕಾರ್ಯಾಂಶಗಳನ್ನು ಹೊಂದಿರುವ ಸಾಧ್ಯತೆ ಇದೆ. 
ಜಿನೋಮ್‌ ಮತ್ತು ಪ್ರೋಟಿಯೋಮ್‌ ಯೋಜನೆಗಳ ನಡುವಿನ ಅಂತರವನ್ನು ಮುಚ್ಚಲು ಬಯೋಇನ್‌ಫರ್ಮ್ಯಾಟಿಕ್ಸ್‌ ಸಹಕಾರಿಯಾಗುತ್ತದೆ. ಉದಾಹರಣೆಗೆ, ಪ್ರೋಟೀನ್‌ ಗುರುತಿಸಲು ಬಳಸುವ DNA ಸೀಕ್ವೆನ್ಸ್‌ಗಳು. 

ಇದನ್ನೂ ಗಮನಿಸಿ: ಸೀಕ್ವೆನ್ಸ್ ಅನ್ಯಾಲಿಸಿಸ್‌, ಸೀಕ್ವೆನ್ಸ್ ಪ್ರೋಫೈಲಿಂಗ್‌ ಟೂಲ್‌, ಸೀಕ್ವೆನ್ಸ್ ಮೋಟಿಫ್‌.

ಜಿನೋಮ್‌ ಅನಟೇಶನ್

ಜಿನೋಮಿಕ್ಸ್‌ ಅಧ್ಯಯನಕ್ಕೆ ಸೀಮಿತವಾಗಿ ವ್ಯಾಖ್ಯಾನಿಸುವುದಾದರೆ, ವಂಶವಾಹಿಗಳು ಮತ್ತು ಇತರೆ ಜೈವಿಕ ಲಕ್ಷಣಗಳನ್ನು DNA ಸೀಕ್ವೆನ್ಸ್‌ನಲ್ಲಿ ಗುರ್ತಿಸುವ ಪ್ರಕ್ರಿಯೆಯೇ ಜಿನೋಮ್‌ ಟಿಪ್ಪಣಿ ಅಥವಾ ಜಿನೋಮ್‌ ಅನಟೇಶನ್‌.


ಮೊಟ್ಟ ಮೊದಲ ಜಿನೋಮ್ ಅನಟೇಶನ್‌ ಸಾಫ್ಟ್‌ವೇರ್‌‌‌ ಸಿಸ್ಟಮ್‌ 1995ರಲ್ಲಿ ರೂಪುಗೊಂಡಿತು. ಇದನ್ನು ಡಾ. ಓವೆನ್‌ ವೈಟ್‌ ಸಿದ್ಧಪಡಿಸಿದ್ದರು. ಡೀಕೋಡ್‌ ಮಾಡಲಾದ ಮುಕ್ತ ಜಿವಂತ ಆರ್ಗ್ಯಾನಿಸಂನ ಮೊಟ್ಟ ಮೊದಲ ಜಿನೋಮ್‌ ಬ್ಯಾಕ್ಟೀರಿಯಾ ಹೆಮೋಫಿಲಿಸ್‌ ಇನ್‌ಫ್ಲುಯೆಂಜಾ ವನ್ನು ಸೀಕ್ವೆನ್ಸ್‌ ಮತ್ತು ವಿಶ್ಲೇಷಣೆ ಮಾಡಿದ ತಂಡದಲ್ಲಿ ಇವರೂ ಒಬ್ಬರಾಗಿದ್ದರು.

ವಂಶವಾಹಿಗಳ ಪತ್ತೆ (DNA ಸೀಕ್ವೆನ್ಸ್‌ನಲ್ಲಿ ಪ್ರೋಟೀನ್‌ಗಳನ್ನು ಎನ್‌ಕೋಡ್ ಮಾಡುವ ಸ್ಥಳಗಳ ಪತ್ತೆ) RNAಗಳ ವರ್ಗಾವಣೆ ಮತ್ತು ಇತರೆ ವೈಶಿಷ್ಟ್ಯಗಳಿಗೆ ಹಾಗೂ ಈ ವಂಶವಾಹಿಗಳಿಗೆ ಆರಂಭಿಕ ಕಾರ್ಯವನ್ನು ನಿಯೋಜಿಸುವುದು ಮುಂತಾದ ಕಾರ್ಯಸಾಧನೆಗೆ ಡಾ.ವೈಟ್‌ ಈ ಸಾಫ್ಟ್‌ವೇರ್‌ ಸಿಸ್ಟಮ್‌ ಅಭಿವೃದ್ಧಿಪಡಿಸಿದ್ದರು. ಸಧ್ಯ ಚಾಲ್ತಿಯಿರುವ ಬಹುತೇಕ ಜಿನೋಮ್‌ ಅನಟೇಶನ್‌ ಸಿಸ್ಟಮ್‌ಗಳು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ. ಆದರೆ ಜಿನೋಮಿಕ್‌ DNAಗಳ ವಿಶ್ಲೇಷಣೆಗೆ ಲಭ್ಯವಿರುವ ಪ್ರೋಗ್ರಾಮ್‌ಗಳು ಆಗಾಗ್ಗೆ ಬದಲಾವಣೆಯಾಗುತ್ತವೆ, ಹಾಗೂ ಸುಧಾರಣೆಯನ್ನೂ ಕಾಣುತ್ತಿರುತ್ತವೆ.

=== ಕಂಪ್ಯುಟೇಶನಲ್‌ ಎವೊಲ್ಯೂಷನರಿ ಬಯಾಲಜಿ

===
ಜೀವಿಗಳ ಹುಟ್ಟಿನ ಮೂಲ ಮತ್ತು ಅವುಗಳ ವಂಶ ಅಥವ ಜೈವಿಕ ವರ್ಗವನ್ನು ಪತ್ತೆ ಮಾಡುವ, ಹಾಗೂ ಕಾಲಾಂತರದಲ್ಲಿ ಉಂಟಾಗುವ ಅವುಗಳ ಜೈವಿಕ ಬದಲಾವಣೆಯನ್ನು ಅಧ್ಯಯನ ಮಾಡುವ ಒಂದು ಜ್ಞಾನ ಶಾಖೆಯೇವಿಕಸನೀಯ ಜೀವ ವಿಜ್ಞಾನ(ಎವೊಲ್ಯೂಷನರಿ ಬಯಾಲಜಿ) 


ವಿಕಸನೀಯ ಜೀವವಿಜ್ಞಾನಿಗಳ ಅಧ್ಯಯನಕ್ಕೆ ಇನ್‌ಫರ್ಮ್ಯಾಟಿಕ್ಸ್‌ ಹಲವು ಪ್ರಮುಖ ಮಾರ್ಗಗಳಲ್ಲಿ ಸಹಕರಿಸಿದೆ. ಇನ್‌ಫರ್ಮ್ಯಾಟಿಕ್ಸ್‌ನಿಂದ, ವಿಕಸನೀಯ ಜೀವಶಾಸ್ತ್ರದಲ್ಲಿ ಈ ಕೆಳಗಿನ ಅಧ್ಯಯನಗಳು ಸಾಧ್ಯವಾಗಿದೆ:

ಫಿಸಿಕಲ್‌ ಟ್ಯಾಕ್ಸೋನಮಿ ಅಥವಾ ಶಾರೀರಿಕ ಅವಲೋಕನ ಒಂದನ್ನೇ ಮಾಡುವ ಬದಲು ಅವುಗಳ DNA ಬದಲಾವಣೆಯನ್ನು ಕ್ರಮವಾಗಿ ಅಳೆಯುವ ಮೂಲಕ ದೊಡ್ಡ ಪ್ರಮಾಣದ ಆರ್ಗ್ಯಾನಿಸಂಗಳ ವಿಕಾಸವನ್ನು ಗುರುತಿಸುವುದು.

ಹೆಚ್ಚು ಸಂಕೀರ್ಣವಾದ ವಿಕಸನೀಯ ಘಟನೆಗಳ ಅಧ್ಯಯನಕ್ಕೆ ಅವಕಾಶ ನೀಡುವ ತೀರಾ ಇತ್ತೀಚಿನ ಸಂಪೂರ್ಣ ಜಿನೋಮ್‌ಗಳ ಹೋಲಿಕೆ, ಉದಾಹರಣಗೆ ಜೀನ್‌ ಡೂಪ್ಲಿಕೇಶನ್‌(ವಂಶವಾಹಿಗಳ ಪ್ರತಿಕೃತಿ ಸೃಷ್ಟಿ), ಹೊರೈಝೆಂಟಲ್‌ ಜೀನ್‌ ಟ್ರಾನ್ಸ್‌ಫರ್‌(ಕ್ಷಿತಿಜೀಯ ವಂಶವಾಹಿ ವರ್ಗಾವಣೆ), ಮತ್ತು ಬ್ಯಾಕ್ಟೀರಿಯಲ್‌ ಸ್ಪೆಸಿಫಿಕೇಶನ್‌ನಲ್ಲಿ ಮುಖ್ಯವಾಗುವ ಅಂಶಗಳ ಊಹೆ ಅಥವಾ ಕಲ್ಪನೆ ಮುಂತಾದವು.

  • ಕಾಲಾನಂತರದಲ್ಲಿ ಈ ವ್ಯವಸ್ಥೆಯಿಂದ ದೊರಕುವ ಲಾಭಗಳನ್ನು ಊಹಿಸಲು ಜೀವಿಗಳ ಸಂಕೀರ್ಣ ಕಂಪ್ಯುಟೇಶನಲ್‌ ಮಾದರಿಗಳನ್ನು ರೂಪಿಸುವುದು.

ಬೃಹತ್‌ ಸಂಖ್ಯೆಯಲ್ಲಿ ಜೀವಿಗಳು ಮತ್ತು ಆರ್ಗ್ಯಾನಿಸಂಗಳನ್ನು ಗುರುತಿಸುವುದು ಹಾಗೂ ಆ ಮಾಹಿತಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು.

ಈಗಿನ ಹೆಚ್ಚು ಜಟಿಲವಾದ ಜೀವನ ವೃಕ್ಷದ ಪುನರ್‌ನಿರ್ಮಾಣಕ್ಕೆ ಭವಿಷ್ಯದ ಸಾಹಸಗಳು ಪ್ರಯತ್ನಿಸುತ್ತವೆ.

ಜಿನೆಟಿಕ್‌ ಅಲ್ಗಾರಿದಮ್‌ಗಳನ್ನು ಬಳಸುವ ಕಂಪ್ಯೂಟರ್‌ ವಿಜ್ಞಾನದ ಸಂಶೋಧನಾ ಕ್ಷೇತ್ರ ಮತ್ತು ಕಂಪ್ಯುಟೇಶನಲ್‌ ಎವೊಲ್ಯೂಷನರಿ ಬಯಾಲಜಿಗಳು ಎರಡೂ ಒಂದೇ ಎಂಬ ಗೊಂದಲ ಆಗಾಗ ಕಂಡುಬರುತ್ತದೆ. ಆದರೆ ಎರಡೂ ಒಂದಕ್ಕೊಂದು ಭಿನ್ನ ಕ್ಷೇತ್ರಗಳು.

=== ಜೀವ ವೈವಿಧ್ಯತೆ

===

ಒಂದು ನಿರ್ದಿಷ್ಟ ಪರಿಸರದಲ್ಲಿ ವಾಸಿಸುವ ಎಲ್ಲ ಜೀವಿಗಳು-ಅಂದರೆ ಅದು ನಿಷೇಧಿತ ಪ್ರದೇಶದ ಬಯೋಫಿಲ್ಮ್‌ , ಸಮುದ್ರದ ನೀರಿನ ಒಂದು ಹನಿ, ಒಂದು ಹಿಡಿ ಮಣ್ಣು ಅಥವಾ ಭೂಮಿಯ ಒಟ್ಟಾರೆ ಜೀವಗೋಳವಾಗಿರಬಹುದು, ಇವುಗಳ ಒಟ್ಟು ಜಿನೋಮಿಕ್‌ ಲಭ್ಯತೆ ಮತ್ತು ಒಂದಕ್ಕೊಂದು ಪೂರಕವಾದ ಪರಿಸರ ವ್ಯವಸ್ಥೆಯನ್ನಾಧರಿಸಿ ಜೀವ ವೈವಿಧ್ಯತೆಯನ್ನು ವ್ಯಾಖ್ಯಾನಿಸಬಹುದು. ಜೀವಿಗಳ ಹೆಸರು, ಅವುಗಳ ವಿವರಣೆ; ಅವುಗಳ ವಿತರಣೆ; ವಂಶವಾಹಿಗಳ ಮಾಹಿತಿ; ಜೀವಿಗಳ ಸಂಖ್ಯೆ ಪ್ರಮಾಣ ಮತ್ತು ಸ್ಥಿತಿಗತಿ;ವಾಸಸ್ಥಾನದ ಅಗತ್ಯಗಳು ಮತ್ತು ಪ್ರತಿ ಆರ್ಗ್ಯಾನಿಸಂಗಳು ಹೇಗೆ ಪರಸ್ಪರ ಪ್ರತಿಕ್ರಯಿಸುತ್ತವೆ ಎಂಬಿತ್ಯಾದಿ ಮಾಹಿತಿಗಾಗಿ ದತ್ತಕೋಶವನ್ನು ಬಳಸಲಾಗುತ್ತದೆ.

ಮಾಹಿತಿಯನ್ನು ಗುರುತಿಸಿ, ದೃಗ್ಗೋಚರವಾಗಿಸಿಕೊಂಡು ಮತ್ತು ಅದನ್ನು  ವಿಶ್ಲೇಷಿಸಲು ವಿಶೇಷ ಸಾಫ್ಟ್‌ವೇರ್‌ ಪ್ರೋಗ್ಯಾಮ್‌ಗಳನ್ನು ಬಳಸಲಾಗುತ್ತದೆ. ಈ ಎಲ್ಲ ಅಂಶಗಳನ್ನೂ  ಇತರರೊಂದಿಗೆ  ಸಂಪರ್ಕಿಸುವುದು ಇದೆಲ್ಲಕ್ಕಿಂತ ಬಹಳ ಮುಖ್ಯ ಅಂಶವಾಗಿದೆ.
ಕ್ರಿಯಾಶೀಲ ಜನಸಾಗರ ಅಥವಾ ಸಸ್ಯತೋಟ (ಕೃಷಿಯಲ್ಲಿ)ಗಳ ಸಂಚಿತ ಜೈವಿಕ ಅಥವಾ ಅಪಾಯದಂಚಿನಲ್ಲಿರುವ ಜೀವಿಗಳ ಸಂರಕ್ಷಣೆ,ಸಂತಾನೋತ್ಪಾದನೆಯ ಕೊಳದ ಆರೋಗ್ಯ ತಪಾಸಣೆ ಮಾಡಲು ಕಂಪ್ಯೂಟರ್‌ ಸಿಮ್ಯುಲೇಷನ್‌  ಅನ್ನು ವಿವಿಧ ಮಾದರಿಗಳಲ್ಲಿ, ಅಂದರೆ, ಅಧ್ಯಯನದಲ್ಲಿ ಬಳಸಲಾಗುತ್ತದೆ. 
ಈ ಕ್ಷೇತ್ರದ ಒಂದು ಬಹಳ ರೋಮಾಂಚಕಾರಿ ಸಾಧ್ಯತೆಯೆಂದರೆ, ಅಪಾಯದಂಚಿನಲ್ಲಿರುವ ಜೀವಿಗಳ ಒಟ್ಟಾರೆ ಜಿನೋಮ್‌ ಅಥವಾ  DNA ಸೀಕ್ವೆನ್ಸ್‌ಗಳನ್ನು ಇದರಿಂದ ಸಂರಕ್ಷಿಸಿಡಬಹುದಲ್ಲದೆ, ಪ್ರಕೃತಿ ನಡೆಸುವ ಜೀವ ಪ್ರಯೋಗಗಳ ಫಲಿತಾಂಶಗಳು ಕಾಲಗರ್ಭದಲ್ಲಿ ಮರೆಯಾಗದಂತೆ ಸಿಲಿಕೋದಲ್ಲಿ  ರಕ್ಷಿಸುವ, ಒಂದು ವೇಳೆ ಜೀವ ಪ್ರಬೇಧವೊಂದು ಮುಂದೊಂದು ದಿನ ಸಂಪೂರ್ಣವಾಗಿ ನಿರ್ನಾಮವಾದರೂ, ಬಹುಷಃ ಸಂರಕ್ಷಿತ ಜೀನ್‌ಗಳ ಮರು ಬಳಕೆ ಮಾಡುವುದು ಸಾಧ್ಯವಾಗುತ್ತದೆ.[೧] 

=== ವಂಶವಾಹಿ ವರ್ತನೆಗಳ ವಿಶ್ಲೇಷಣೆ

===

ಮೈಕ್ರೋಅರೇಸ್‌, ಎಕ್ಸ್‌ಪ್ರೆ‌ಸ್ಡ್‌ cDNA ಸೀಕ್ವೆನ್ಸ್ ಟ್ಯಾಗ್‌(EST) ಸೀಕ್ವೆನ್ಸಿಂಗ್‌, ಸೀರಿಯಲ್‌ ಅನ್ಯಾಲಿಸಿಸ್‌ ಆಫ್‌ ಜೀನ್ ಎಕ್ಸ್‌ಪ್ರೆಶನ್‌ (SAGE) ಟ್ಯಾಗ್‌ ಸೀಕ್ವೆನ್ಸಿಂಗ್‌ ಮ್ಯಾಸೀವ್‌ ಪ್ಯಾರಲಲ್‌ ಸಿಗ್ನೇಚರ್‌ ಸೀಕ್ವೆನ್ಸಿಂಗ್‌ (MPSS), ಮಲ್ಟಿಪ್ಲೆಕ್ಸ್ಡ್‌ ಇನ್‌-ಸಿಟು ಹೈಬ್ರಿಡೈಸೇಷನ್‌ ನ ಹಲವು ಅನ್ವಯಗಳೂ ಸೇರಿದಂತೆ ಹಲವಾರು ತಂತ್ರಗಳ ಮೂಲಕ mRNAಗಳ ಮಟ್ಟವನ್ನು ಅಳೆಯುವುದರಿಂದ ಜೀನ್‌ಗಳ ವರ್ತನೆಯನ್ನು ನಿರ್ಣಯಿಸಬಹುದು. ಭಾರೀ ಕಂಪನಗಳನ್ನೆಬ್ಬಿಸುವ ಈ ಎಲ್ಲ ತಂತ್ರಗಳು ಜೈವಿಕ ಅಳತೆಯಲ್ಲಿ ಪೂರ್ವನಿರ್ಧರಿತವಾದವುಗಳು. ಉನ್ನತ ಮಟ್ಟದ ಜೀನ್ ವರ್ತನಾ ಅಧ್ಯಯನಗಳಲ್ಲಿ ಸಿಗ್ನಲ್‌ಗಳನ್ನು ಕಂಪನದಿಂದ ಬೇರೆ ಮಾಡಲು ಸಂಖ್ಯಾಶಾಸ್ತ್ರೀಯ ಪರಿಕರಗಳನ್ನು ಅಭಿವೃದ್ಧಿಪಡಿಸುವುದು ಕಂಪ್ಯುಟೇಶನಲ್‌ ಬಯಲಾಜಿಯಲ್ಲಿ ಒಂದು ಬಹುಮುಖ್ಯ ಸಂಶೋಧನಾ ವಿಭಾಗ.

ಅಸ್ತವ್ಯಸ್ತವಾಗಿರುವ ವಂಶವಾಹಿಗಳನ್ನು ಪತ್ತೆಹಚ್ಚಲು ಇಂತಹ ಅಧ್ಯಯನಗಲನ್ನು ಬಳಕೆ ಮಾಡಲಾತ್ತದೆ.ಕ್ಯಾನ್ಸರ್‌ ಪೀಡಿತ ಎಪಿಥೀಲಿಯಲ್‌ ಕೋಶದ ಮೈಕ್ರೋಅರೆ ಮಾಹಿತಿಯನ್ನು ಕ್ಯಾನ್ಸರ್‌ ಪೀಡಿತವಲ್ಲದ ಕೋಶದೊಂದಿಗೆ ಹೋಲಿಸಬಹುದು. ನಿರ್ದಿಷ್ಟ ಕ್ಯಾನ್ಸರ್‌ ಕೋಶಗಳಲ್ಲಿ ಅಪ್‌-ರೆಗ್ಯುಲೇಟೆಡ್‌ ಮತ್ತು ಡೌನ್‌-ರೆಗ್ಯಲೇಟೆಡ್‌ ಟ್ರಾನ್ಸ್‌ಸ್ಕ್ರಿಪ್ಟ್‌ಗಳನ್ನು ಪತ್ತೆ ಹಚ್ಚಲು ಈ ಹೋಲಿಕೆ ಮಾಡಲಾಗುತ್ತದೆ.

ರೆಗ್ಯುಲೇಶನ್‌ ವಿಶ್ಲೇಷಣೆ

ಹಾರ್ಮೋನ್‌ನಂತಹ ಎಕ್ಸ್‌ಟ್ರಾಸೆಲ್ಯುಲರ್‌ ಸಿಗ್ನಲ್‌ನಿಂದ ಆರಂಭವಾಗುವ ರೆಗ್ಯುಲೇಶನ್‌ ಘಟನೆಗಳ ಸಂಕೀರ್ಣ ಸಂಯೋಜನೆ ಒಂದು ಅಥವಾ ಹಲವು ಪ್ರೋಟೀನ್‌ಗಳು ಹೆಚ್ಚು ಅಥವಾ ಕಡಿಮೆಯಾಗಲು ಕಾರಣವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮತ್ತಷ್ಟು ಹಂತಗಳನ್ನು ಅನ್ವೇಷಿಸಲು ಬಯೋಇನ್‌ಫರ್ಮ್ಯಾಟಿಕ್ಸ್‌ ತಂತ್ರಗಳನ್ನು ಇಲ್ಲಿ ಅನ್ವಯಿಸಲಾಗಿದೆ. ಉದಾಹರಣೆಗೆ, ವಂಶವಾಹಿಯ ಕೋಡಿಂಗ್‌ ವಲಯದ DNA ವ್ಯಾಪ್ತಿಯಲ್ಲಿ ಸೀಕ್ವೆನ್ಸ್‌ ಮೋಟಿಫ್‌ಗಳ ಪತ್ತೆ ಮತ್ತು ಅಧ್ಯಯನವನ್ನು ಪ್ರಮೋಟರ್‌ ಅನಲಿಸಿಸ್‌ ಒಳಗೊಳ್ಳುತ್ತದೆ.


mRNA ಆಗಿ ಲಿಪ್ಯಂತರಗೊಂಡ ಪ್ರದೇಶದ ವ್ಯಾಪ್ತಿಯವರೆಗೆ ಈ ಮೋಟಿಫ್‌ಗಳು ತಮ್ಮ ಪ್ರಭಾವ ಬೀರುತ್ತವೆ. ಜೀನ್ ರೆಗ್ಯುಲೇಶನ್‌ ನಿರ್ಣಯಿಸಲು ಈ ವರ್ತನಾ ಮಾಹಿತಿಯನ್ನು ಬಳಸಲಾಗುತ್ತದೆ. ಅರ್ಗ್ಯಾನಿಸಂನ ಹಲವು ಸ್ಥಿತಿಗಳ ಮೈಕ್ರೋಅರೆ ಮಾಹಿತಿಯನ್ನು ಪ್ರತಿ ಸ್ಥಿತಿಯಲ್ಲಿ ಜೀನ್‌ಗಳ ಪಾತ್ರವನ್ನು ಕಲ್ಪಿತ ಮಾಹಿತಿಗೆ ಹೋಲಿಸಲಾಗುವುದು. ಸಿಂಗಲ್‌-ಸೆಲ್‌ ಆರ್ಗ್ಯಾನಿಸಂನಲ್ಲಿ, ಸೆಲ್‌ ಸೈಕಲ್‌ನ ಹಂತಗಳು ಮತ್ತು ಒತ್ತಡದ ಸ್ಥಿತಿಗಳನ್ನು (ಹೀಟ್‌ ಶಾಕ್‌, ಹಸಿವು, ಮುಂತಾದವು) ಹೋಲಿಸಬಹುದು.

ಕ್ಲಸ್ಟರಿಂಗ್‌ ಅಲ್ಗಾರಿದಮ್ಸ್‌ಗಳನ್ನು ಆ ವರ್ತನಾ ಮಾಹಿತಿಗೆ ಅನ್ವಯಿಸಿ ಒಂದೇ ರೀತಿ ವರ್ತಿಸುವ ಜೀನ್‌ಗಳನ್ನು ಪತ್ತೆ ಮಾಡಬಹುದು.  

ಒಂದೇ ರೀತಿ ವರ್ತಿಸುವ ಜೀನ್‌ಗಳ ಎದುರುನಡೆ ಪ್ರದೇಶಗಳಲ್ಲಿ (ಪ್ರಮೋಟರ್ಸ್) ಅತಿ ಪ್ರಬಲವಾದ ರೆಗ್ಯುಲೇಟರಿ ಎಲಿಮೆಂಟ್‌ಗಳನ್ನು ಹುಡುಕಬಹುದು.

=

ಪ್ರೋಟೀನ್‌ ವರ್ತನೆಗಳ ವಿಶ್ಲೇಷಣೆ === ಪ್ರೋಟೀನ್‌ ಮೈಕ್ರೋಅರೇಸ್‌ ಮತ್ತು ಹೈ ಥ್ರೂಪುಟ್‌(HT) ಮಾಸ್‌ ಸ್ಪೆಕ್ಟ್ರೋಮೆಟ್ರಿ (MS), ಜೈವಿಕ ನಮೂನೆಯಲ್ಲಿ ಪ್ರೋಟೀನ್‌ಗಳ ಇರುವಿಕೆಯ ಸ್ಥೂಲ ಚಿತ್ರಣವನ್ನು ನೀಡಬಲ್ಲದು.


ಪ್ರೋಟೀನ್‌ ಮೈಕ್ರೋಅರೆ ಮತ್ತು HT MS ಮಾಹಿತಿಯನ್ನು ಸೂಕ್ತವಾಗಿ ಬಳಸಿಕೊಳ್ಳುವಲ್ಲಿ ಬಯೋಇನ್‌ಫರ್ಮ್ಯಾಟಿಕ್ಸ್ ಪೂರ್ಣವಾಗಿ ತೊಡಗಿಸಿಕೊಂಡಿದೆ. ಮೊದಲಿನ ಮಾದರಿಯಲ್ಲಿ ಮೈಕ್ರೋಅರೇಸ್‌ mRNAಗೆ ಗುರಿಪಡಿಸಿದಂತೆ ಇಂತಹದೇ ಸಮಸ್ಯೆಗಳು ಎದುರಾಗಿದ್ದವು. ಇದರ ನಂತರದ ವಿಧಾನ, ಬೃಹತ್‌ ಪ್ರಮಾಣದ ಸಮಗ್ರ ಮಾಹಿತಿಯನ್ನು ಪ್ರೋಟೀನ್‌ ಸೀಕ್ವೆನ್ಸ್‌ ಮಾಹಿತಿಕೋಶದಿಂದ ಕಲ್ಪಿತ ಮಾಹಿತಿಗೆ ಹೋಲಿಸುವ ದೊಡ್ಡ ಸಮಸ್ಯೆಯಲ್ಲಿ ತೊಡಗಿತ್ತು. ಅಲ್ಲದೆ ನಮೂನೆಗಳ ಸಂಕೀರ್ಣ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯಲ್ಲೂ ಇದು ತೊಡಗಿತ್ತು. ಇದರಲ್ಲಿ ಪ್ರತಿ ಪ್ರೋಟೀನ್‌ಗಳಲ್ಲಿ ಹಲವು ಆದರೆ ಅಪೂರ್ಣ ಪೆಪ್‌ಟೈಡ್‌ಗಳು ಪತ್ತೆಯಾದವು.

=

ಕ್ಯಾನ್ಸರ್‌ನ ಹಠಾತ್‌ ಪರಿವರ್ತನೆಯ ವಿಶ್ಲೇಷಣೆ ===

ಕ್ಯಾನ್ಸರ್‌ನಲ್ಲಿ ರೋಗಪೀಡಿತ ಕೋಶಗಳ ಜಿನೋಮ್‌ಗಳು ಅತ್ಯಂತ ಸಂಕೀರ್ಣ, ಅವುಗಳ ಮರುಜೋಡಣೆ ಊಹೆಗೂ ನಿಲುಕದ್ದು. ಕ್ಯಾನ್ಸರ್‌ನಲ್ಲಿ ವೈವಿಧ್ಯಮಯ ವಂಶವಾಹಿಗಳಲ್ಲಿ ಹಿಂದೆ ಗುರ್ತಿಸಲು ಸಾಧ್ಯವಾಗದೇ ಇದ್ದ ಪಾಯಿಂಟ್ ಮ್ಯುಟೇಶನ್‌ಗಳನ್ನು ಪತ್ತೆ ಹಚ್ಚಲು ಬೃಹತ್‌ ಪ್ರಮಾಣದ ಸೀಕ್ವೆನ್ಸಿಂಗ್‌ ಪ್ರಯತ್ನಗಳನ್ನು ಮಾಡಲಾಗುತ್ತದೆ.


ಸೃಷ್ಟಿಸಲಾದ ಸೀಕ್ವೆನ್ಸ್‌ ಮಾಹಿತಿಯನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸಲು ಬಯೋಇನ್‌ಫರ್ಮ್ಯಾಟಿಕ್ಸ್‌ ತಜ್ಞರು ವಿಶೇಷ ಆಟೋಮೇಟೆಡ್‌ ವ್ಯವಸ್ಥೆಯನ್ನು ನಿರ್ಮಿಸಿಕೊಂಡೇ ಬಂದಿದ್ದಾರೆ. ಹ್ಯೂಮನ್‌ ಜಿನೋಮ್‌ ಸೀಕ್ವೆನ್ಸ್‌ನ ಬೆಳೆಯುತ್ತಿರುವ ಮೊತ್ತ ಮತ್ತು ಜರ್ಮ್‌‌ಲೈನ್‌ ಪಾಲಿಮಾರ್ಫಿಸಮ್ಸ್‌ಗಳಿಗೆ ಸೀಕ್ವೆನ್ಸಿಂಗ್‌ ಫಲಿತಾಂಶಗಳನ್ನು ಹೋಲಿಕೆ ಮಾಡಲು ತಜ್ಞರು ಹೊಸ ಅಲ್ಗಾರಿದಮ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ರೂಪಿಸಿದ್ದಾರೆ. ಕ್ರೋಮೋಸೋಮ್‌ಗಳ ಗಳಿಕೆ,ಇಳಿಕೆಯನ್ನು (ಇದನ್ನು ಕಂಪ್ಯಾರಿಟಿವ್‌ ಜಿನೋಮಿಕ್‌ ಹೈಬ್ರಿಡೈಸೇಷನ್‌ ಎಂದು ಕರೆಯುತ್ತಾರೆ) ಕಂಡುಹಿಡಿಯಲು ಹೊಸ ದೈಹಿಕ ಪತ್ತೆ ತಂತ್ರಜ್ಞಾನಗಳಾದ ಓಲಿಗೋನ್ಯೂಕ್ಲಿಯೋಟೈಡ್‌ ಮೈಕ್ರೋಅರೇಗಳನ್ನು ಬಳಸಲಾಗುತ್ತಿದೆ. ಹಾಗೂ ಸಿಂಗಲ್‌ ನ್ಯೂಕ್ಲಿಯೋಟೈಡ್‌ ಪಾಲಿಮಾರ್ಫಿಸಮ್‌ ಅರೇಸ್‌ ಅನ್ನು ಗೊತ್ತಿರುವ ಪಾಯಿಂಟ್‌ ಮ್ಯುಟೇಶನ್ಸ್‌ ಅನ್ನು ಪತ್ತೆ ಮಾಡಲು ಬಳಸಲಾಗುತ್ತದೆ.

ಈ ಪತ್ತೆ ವಿಧಾನಗಳು ಜಿನೋಮ್‌ಗಳಾದ್ಯಂತ ಏಕಕಾಲದಲ್ಲಿ ಸಾವಿರಾರು ತಾಣಗಳಲ್ಲಿ ವಿಶ್ಲೇಷಣೆ ನಡೆಸುತ್ತವೆ. ಹಾಗೂ ಹೈ-ಥ್ರೂಪುಟ್‌ನಲ್ಲಿ ಸಾವಿರಾರು ನಮೂನೆಗಳನ್ನು ಅಳೆಯಲು ಬಳಸಿದಾಗ ಇವು ಒಂದೇ ಪ್ರಯೋಗದಲ್ಲಿ ಟೆರ್ರಬೈಟ್‌ನಷ್ಟು (TB) ಮಾಹಿತಿ ಒದಗಿಸುವ ಸಾಮರ್ಥ್ಯ ಹೊಂದಿವೆ.

ಬೃಹತ್ ಹಾಗೂ ಹೊಸ ರೀತಿಯ ಮಾಹಿತಿ, ಬಯೋಇನ್‌ಫರ್ಮ್ಯಾಟಿಕ್ಸ್‌ ತಜ್ಞರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿವೆ.

ಈ ಮಾಹಿತಿಯಲ್ಲಿ ಆಗಾಗ್ಗೆ ಗಮನಾರ್ಹವಾದ ಪರಿವರ್ತನೆ ಅಥವಾ ಕಂಪನ ಇರುವುದು ಪತ್ತೆಯಾಗುತ್ತಿತ್ತು. ಹೀಗಾಗಿ ಕಾಪಿ ನಂಬರ್‌ ಬದಲಾವಣೆಗಳನ್ನು ನೈಜವಾಗಿ ಸೂಚಿಸಲು ಹಿಡನ್‌ ಮರ್ಕೋಫ್‌ ಮಾಡೆಲ್‌ ಮತ್ತು ಚೇಂಜ್‌-ಪಾಯಿಂಟ್‌ ಅನ್ಯಾಲಿಸಿಸ್‌ ವಿಧಾನಗಳು ಅಭಿವೃದ್ಧಿಯಾದವು.

ನಾವೆಲ್‌ ಇನ್‌ಫರ್ಮ್ಯಾಟಿಕ್ಸ್‌ ಡೆವೊಲಪ್‌ಮೆಂಟ್‌ನ ಅಗತ್ಯವಿರುವ ಮತ್ತೊಂದು ರೀತಿಯ ಮಾಹಿತಿ, ಹಾನಿಯನ್ನು ವಿಶ್ಲೇಷಿಸುವ ತಂತ್ರ. ಇದು ಹಲವು ಟ್ಯೂಮರ್‌ (ಗೆಡ್ಡ ಅಥವಾ ದುರ್ಮಾಂಸ)ಗಳಲ್ಲಿ ಮರುಕಳಿಸುತ್ತಿರುವುದು ಕಂಡುಬಂದಿದೆ. .

ಪ್ರೋಟೀನ್‌ ರಚನೆಗೊಂದು ಮುನ್ನುಡಿ

ಪ್ರೋಟೀನ್‌ ರಚನೆಯನ್ನು ಮೊದಲೇ ಊಹಿಸುವುದೂ ಬಯೋಇನ್‌ಫರ್ಮ್ಯಾಟಿಕ್ಸ್‌ನ ಮತ್ತೊಂದು ಮಹತ್ವದ ಸಂಗತಿ. ಪ್ರೋಟೀನ್‌ನ ಅಮಿನೋ ಆಸಿಡ್‌ ಸೀಕ್ವೆನ್ಸ್, ಪ್ರಾಥಮಿಕ ರಚನೆಗಳನ್ನು, ವಂಶವಾಹಿಯ ಮೇಲಿನ ಸ್ವಿಕ್ವೆನ್ಸ್‌ನಲ್ಲಿ ಬಹಳ ಸುಲಭವಾಗಿ ಗುರ್ತಿಸಬಹುದು. ಇದು ವಂಶವಾಹಿಗೆ ಕೋಡ್‌ ಮಾಡುತ್ತದೆ.


ಬಹುತೇಕ ಪ್ರಕರಣಗಳಲ್ಲಿ ಈ ಪ್ರಾಥಮಿಕ ರಚನೆ ತನ್ನ ಮೂಲ ವಾತಾವರಣದಲ್ಲಿ ಒಂದು ರಚನೆಯನ್ನು ಅನನ್ಯವಾಗಿ ಗುರ್ತಿಸುತ್ತದೆ. ( ಬೋವಿನ್‌ ಸ್ಪಾಂಜಿಫಾರ್ಮ್ ಎನ್‌ಸೆಫಲೋಪಥಿ - aka ಮ್ಯಾಡ್‌ ಕೌ ಡಿಸೀಸ್ - ಪ್ರಿಯಾನ್‌-ಇಂಥವಕ್ಕೆ ಇಲ್ಲಿ ವಿನಾಯಿತಿಗಳು ಇರುತ್ತವೆ.)


ಪ್ರೋಟೀನ್‌ ಕಾರ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಈ ರಚನೆಯ ಜ್ಞಾನ ಅತ್ಯಗತ್ಯ. ಉತ್ತಮ ಪರಿಭಾಷೆಗಳ ಕೊರತೆಯಿಂದ ರಚನಾತ್ಮಕ ಮಾಹಿತಿ ಸೆಂಕೆಂಡರಿ , ಟರ್ಟಿಯರಿ ಮತ್ತು ಕ್ವಾಟರ್ನರಿ ರಚನೆಯಲ್ಲೊಂದು ಎಂಬ ಹಾಗೆ ವರ್ಗೀಕರಣಗೊಂಡಿದೆ. ಈ ಮುಂದಾಲೋಚನೆಗೆ ಸಾಮಾನ್ಯವಾದ ಕಾರ್ಯಸಾಧ್ಯ ಪರಿಹಾರ ಈಗಲೂ ಮುಕ್ತ ಪ್ರಶ್ನೆಯಾಗಿಯೇ ಉಳಿದಿದೆ. ಇಲ್ಲಿಯವರೆಗೆ ಬಹುತೇಕ ಸಂಶೋಧನೆಗಳು ಬಹುತೇಕ ಸಮಯದಲ್ಲಿ ಕೆಲಸ ನಿರ್ವಹಿಸುವ ಶೋಧಾನಾನುಕೂಲ ವಿಧಾನದ ಕಡೆಗೇ ಮುಖಮಾಡಿವೆ.

ಸಮರೂಪತೆ (= homology)ಯ ಕಲ್ಪನೆ ಬಯೋಇನ್‌ಫರ್ಮ್ಯಾಟಿಕ್ಸ್‌ನ ಬಹುಮುಖ್ಯ ಚಿಂತನೆಗಳಲ್ಲೊಂದು. ಬಯೋಇನ್‌ಫರ್ಮ್ಯಾಟಿಕ್ಸ್‌ನ ಜಿನೋಮಿಕ್‌ ಶಾಖೆಯಲ್ಲಿ, ಹೋಮೋಲಜಿಯನ್ನು ವಂಶವಾಹಿಗಳ ಚಟುವಟಿಕೆಯನ್ನು ಊಹಿಸಲು ಬಳಸಲಾಗುತ್ತದೆ. ಈಗಾಗಲೇ ಚಟುವಟಿಕೆ ಗೊತ್ತಿರುವ A ವಂಶವಾಹಿಯ ಸೀಕ್ವೆನ್ಸ್‌, ಚಟುವಟಿಕೆ ಗೊತ್ತಿರದ B ವಂಶವಾಹಿ ಸೀಕ್ವೆನ್ಸ್‌ಗೆ ಸಮನಾಗಿದ್ದರೆ, B ವಂಶವಾಹಿ, A ಯ ಕಾರ್ಯವನ್ನು ಅನುಸರಿಸಬಹುದು ಎಂದು ಯಾರಾದರೂ ಸುಲಭವಾಗಿ ಸೂಚಿಸಬಹುದು.

ಬಯೋಇನ್‌ಫರ್ಮ್ಯಾಟಿಕ್ಸ್‌ನ ರಚನಾ ಶಾಖೆಯಲ್ಲಿ, ಸ್ಟ್ರಕ್ಚರ್‌ ಫಾರ್ಮೇಶನ್‌ನಲ್ಲಿ ಪ್ರೋಟೀನ್‌ನ ಯಾವ ಭಾಗ ಮುಖ್ಯ ಮತ್ತು ಇನ್ನುಳಿದ ಯಾವ ಭಾಗಗಳೊಂದಿಗೆ ಇದು ಸಂವಹನ ನಡೆಸುತ್ತದೆ ಎನ್ನುವುದನ್ನು ನಿರ್ಧರಿಸಲು ಹೋಮೋಲಜಿ ಬಳಸಲಾಗುತ್ತದೆ. ಹೋಮೋಲಜಿ ಮಾಡೆಲಿಂಗ್‌ ಎನ್ನುವ ತಂತ್ರದಲ್ಲಿ ಈ ಮಾಹಿತಿ, ಒಮ್ಮೆ ಸಾದೃಶ ಪ್ರೋಟೀನ್‌ನ ರಚನೆ ಪತ್ತೆಯಾದೊಡನೆ ಪ್ರೋಟೀನ್‌ನ ರಚನೆಯ ಮುನ್ನುಡಿ ಹೇಳಲು ಬಳಕೆಯಾಗುತ್ತದೆ.

ಪ್ರೋಟೀನ್‌ ರಚನೆಗಳನ್ನು ಮೊದಲೇ ನಿರ್ಧರಿಸಲು ಇರುವ ಏಕೈಕ ವಿಶ್ವಸನೀಯ ವಿಧಾನವಿದು.

ಮನುಷ್ಯರ ಹಿಮೋಗ್ಲೋಬಿನ್‌ ಮತ್ತು  ದ್ವಿದಳ ಧಾನ್ಯದ ಬೀಜಕೋಶದಲ್ಲಿರುವ ಲೆಗೆಮೋಗ್ಲೋಬಿನ್‌) ನಡುವಿನ ಒಂದೇ ರೀತಿಯ ಪ್ರೋಟೀನ್‌ ಹೋಮೋಲಜಿ ಇದಕ್ಕೊಂದು ಉದಾಹರಣೆಯೆಂದರೆ. 

 ಆರ್ಗ್ಯಾನಿಸಂನಲ್ಲಿ ಆಮ್ಲಜನಕವನ್ನು ಸಾಗಿಸುವ ಒಂದೇ ರೀತಿಯ ಕೆಲಸವನ್ನು ಎರಡೂ ನಿರ್ವಹಿಸುತ್ತವೆ. 

ಇವರೆಡೂ ಪ್ರೋಟೀನ್‌ಗಳು ಸಂಪೂರ್ಣ ಭಿನ್ನವಾದ ಅಮಿನೋ ಆಸಿಡ್‌ ಸೀಕ್ವೆನ್ಸ್‌ಗಳನ್ನು ಹೊಂದಿದ್ದರೂ, ಅವುಗಳ ಪ್ರೋಟೀನ್‌ ರಚನೆಗಳು ವಾಸ್ತವದಲ್ಲಿ ಒಂದೇ ರೀತಿ ಇರುತ್ತವೆ. ಇದು ಬಹುತೇಕ ಏಕರೂಪದ ಉದ್ಧೇಶವನ್ನು ಬಿಂಬಿಸುತ್ತವೆ.

ಪ್ರೋಟೀನ್‌ ಥ್ರೆಡ್ಡಿಂಗ್‌ ಮತ್ತು ಭೌತಶಾಸ್ತ್ರವನ್ನು ಆಧರಿಸಿದ ಮಾಡೆಲಿಂಗ್‌ ವಿಧಾನ ಡಿ ನೋವೋ (from scratch)-ಇವು ಪ್ರೊಟೀನ್‌ ರಚನೆಗಳನ್ನು ಮೊದಲೇ ತಿಳಿಯಲು ನೆರವಾಗುವ ಇನ್ನಿತರ ತಂತ್ರಗಳು.

ಇದನ್ನೂ ನೋಡಿ: ಸ್ಟ್ರಕ್ಚರಲ್‌ ಮೋಟಿಫ್‌ ಮತ್ತು ಸ್ಟ್ರಕ್ಚರಲ್‌ ಡೊಮೈನ್‌.

ಕಂಪ್ಯಾರಿಟೀವ್‌ ಜಿನೋಮಿಕ್ಸ್‌

ವಿವಿಧ ಆರ್ಗ್ಯಾನಿಸಂಗಳಲ್ಲಿ ವಂಶವಾಹಿಗಳು (ಆರ್ಥೋಲಜಿ ಅನ್ಯಾಲಿಸಿಸ್‌) ಅಥವಾ ಇತರೆ ಜಿನೋಮಿಕ್‌ ಲಕ್ಷಣಗಳ ನಡುವೆ ಸಂವಹನವನ್ನು ಏರ್ಪಡಿಸುವುದು, ಕಂಪೇರೆಟಿವ್‌ ಜಿನೋಮಿಕ್ಸ್‌ನ ಮೂಲ ಉದ್ದೇಶ. ಎರಡು ಜಿನೋಮ್‌ಗಳ ಭಿನ್ನ ಲಕ್ಷಣಗಳಿಗೆ ಕಾರಣವಾಗುವ ವಿಕಾಸ ಪ್ರಕ್ರಿಯೆಗಳ ಜಾಡು ಹಿಡಿಯುವುದನ್ನು ಈ ಜಿನೋಮಿಕ್‌ ಮ್ಯಾಪ್‌ಗಳು ಸಾಧ್ಯವಾಗಿಸಿವೆ.

ಹಲವು ಸಂಘಟನಾತ್ಮಕ ಮಟ್ಟದಲ್ಲಿ ನಡೆಯುವ ವಿಕಸನ ಘಟನೆಗಳ ಬಾಹುಳ್ಯ ಅಥವಾ ಪ್ರಮಾಣ ಜಿನೋಮ್‌ ಒಂದರ ವಿಕಾಸವನ್ನು ರೂಪಿಸುತ್ತವೆ.

ಅತ್ಯಂತ ಬುಡಮಟ್ಟದಲ್ಲಿ ಪಾಯಿಂಟ್‌ ಮ್ಯುಟೇಶನ್‌ಗಳು ಪ್ರತಿ ನ್ಯೂಕ್ಲಿಯೋಟೈಡ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಉನ್ನತ ಮಟ್ಟದಲ್ಲಿ ಬೃಹತ್‌ ಕ್ರೋಮೋಸೋಮ್‌ ಘಟಕಗಳು, ಪ್ರತಿರೂಪವಾಗುವುದು, ಪಕ್ಕಕ್ಕೆ ವರ್ಗಾವಣೆಯಾಗುವುದು, ತಿರುಗುಮುರುಗಾಗುವುದು, ಸ್ಥಾನಪಲ್ಲಟವಾಗುವುದು, ಅಳಿಸಿ ಹೋಗುವುದು ಮತ್ತು ಸೇರಿಕೊಳ್ಳುವುದು ಮುಂತಾದ ಪ್ರಕ್ರಿಯೆಗೆ ಒಳಗಾಗುತ್ತವೆ.

ಅಂತಿಮವಾಗಿ ಎಲ್ಲ ಜಿನೋಮ್‌ಗಳು ಹೈಬ್ರಿಡೈಸೇಷನ್‌, ಪಾಲಿಪ್ಲಾಯ್ಡೈಸೇಷನ್‌ ಮತ್ತು ಎನ್‌ಡೋಸಿಂಬಿಯಾಸಿಸ್‌ ಪ್ರಕ್ರಿಯೆಯಲ್ಲಿ ತೊಡಗುತ್ತವೆ. ಇದು ಕ್ಷಿಪ್ರ ಹೊಸಜಾತಿ ಸೃಷ್ಟಿಗೆ ಕಾರಣವಾಗುತ್ತದೆ.

ಜಿನೋಮ್‌ ವಿಕಸನದ ಸಂಕೀರ್ಣ ಪ್ರಕ್ರಿಯೆ ಗಣಿತೀಯ ಮಾದರಿಗಳು ಮತ್ತು ಅಲ್ಗಾರಿದಮ್‌ಗಳನ್ನು ರೂಪಿಸುವವರಿಗೆ ಹಲವು ರೋಮಾಂಚಕಾರಿ ಸವಾಲುಗಳನ್ನು ಒಡ್ಡುತ್ತದೆ. ಜಾಗರೂಕತೆಯ ಮಾದರಿಗಳನ್ನಾಧರಿಸಿದ ಸಮಸ್ಯೆಗಳ ಪರಿಹಾರಕ್ಕೆ ಬಳಸುವ ನಿರ್ದಿಷ್ಟ, ಶೋಧನಾನುಕೂಲ, ನಿಶ್ಚಿತ ಮಾನದಂಡಗಳು ಮತ್ತು ಅಂದಾಜಿನ ಅಲ್ಗಾರಿದಮ್‌ಗಳಿಂದ ಹಿಡಿದು ಪ್ರೊಬೇಬಿಲಿಸ್ಟಿಕ್‌ ಮಾದರಿಗಳನ್ನಾಧರಿಸಿದ ಸಮಸ್ಯೆಗಳ ಬಯೇಸಿಯನ್‌ ವಿಶ್ಲೇಷಣೆಗೆ ಬಳಸುವ ಮಾರ್ಕೋಫ್‌ ಚೈನ್‌ ಮಾಟೆ ಕಾರ್ಲೋ ಅಲ್ಗಾರಿದಮ್‌ಗಳವರೆಗೆ ವಿಸ್ತೃತ ಸ್ಪೆಕ್ಟ್ರಾ ಅಲ್ಗಾರಿದಮಿಕ್‌, ಸಂಖ್ಯಾಶಾಸ್ತ್ರೀಯ ಮತ್ತು ಗಣಿತೀಯ ತಂತ್ರಗಳನ್ನು ಇವರು ಅವಲಂಬಿಸುತ್ತಾರೆ.

ಇವುಗಳಲ್ಲಿ ಅನೇಕ ಅಧ್ಯಯನಗಳು ಹೋಮೋಲಜಿ ಪತ್ತೆ ಮತ್ತು ಪ್ರೋಟೀನ್‌ ಕುಟುಂಬಗಳ ಕಂಪ್ಯುಟೇಶನ್ ಅನ್ನು ಆಧರಿಸಿವೆ.

=

ಜೈವಿಕ ವ್ಯವಸ್ಥೆಯ ಮಾದರಿ ರಚನೆ ===

ಸಿಸ್ಟಮ್ಸ್‌ ಬಯಾಲಜಿ ಕೋಶೀಯ ಉಪವ್ಯವಸ್ಥೆಯ ಕಂಪ್ಯೂಟರ್‌ ಸಿಮ್ಯುಲೇಶನ್‌ ಪ್ರಕ್ರಿಯೆಯನ್ನು ಹೊಂದಿರುತ್ತದೆ. (ಉದಾಹರಣೆಗೆ [[ಮೆಟಾಬೋಲೈಟ್‌ ಮತ್ತು ಎನ್‌ಜೈಮ್‌ಗಳ ಜಾಲ|ಮೆಟಾಬೋಲೈಟ್‌ ಮತ್ತು ಎನ್‌ಜೈಮ್‌ಗಳ ಜಾಲ]] ಮೆಟಾಬೋಲಿಸಮ್‌, ಸಿಗ್ನಲ್‌ ಟ್ರಾನ್ಸ್‌ಡಕ್ಷನ್‌ ಪಾಥ್‌ವೇ ಮತ್ತು ಜೀನ್‌ ರೆಗ್ಯುಲೇಟರಿ ಜಾಲ‌ಗಳನ್ನು ಇದು ಒಳಗೊಳ್ಳುತ್ತದೆ) ಇದು ಈ ಕೋಶೀಯ ಪ್ರಕ್ರಿಯೆಗಳ ಸಂಪರ್ಕಗಳ ದೃಶ್ಯೀಕರಣ ಮತ್ತು ವಿಶ್ಲೇಷಣೆಗಳೆರಡರ ಮೇಲೂ ಅಧ್ಯಯನ ನಡೆಸುತ್ತದೆ. ಕಂಪ್ಯೂಟರ್‌ ಸಿಮ್ಯುಲೇಶನ್‌ ಮೂಲಕ ಸರಳ ಜೀವಿಗಳ(ಕೃತಕ) ವಿಕಾಸದ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಕೃತಕ ಜೀವನ ಅಥವಾ ಮಿಥ್ಯಾ ವಿಕಾಸ ತಂತ್ರಗಳಲ್ಲಿ ಪ್ರಯತ್ನಿಸಲಾಗಿದೆ.

=

ಹೈ-ಥ್ರೂಪುಟ್‌ ಇಮೇಜ್‌ ಅನ್ಯಾಲಿಸಿಸ್‌

===

ಹೈ-ಇನ್‌ಫರ್ಮೇಶನ್‌-ಕಂಟೆಂಟ್‌ ಬಯೋಮೆಡಿಕಲ್‌ ಇಮೇಜರಿಯ (ಹೆಚ್ಚಿನ ಮಾಹಿತಿಯ ಜೀವವೈದ್ಯಕೀಯ ಚಿತ್ರ ರೂಪಿಸುವುದು) ಬಹೃತ್‌ ಪ್ರಮಾಣದ ಮಾಹಿತಿಯ ವಿಶ್ಲೇಷಣೆ ಮತ್ತು ಪರಿಮಾಣ ಮಾಪನದ ಪ್ರಕ್ರಿಯೆಯ ವೇಗ ವರ್ಧನೆಗೆ ಅಥವಾ ಅದನ್ನು ಸಂಪೂರ್ಣ ಸ್ವಯಂಚಾಲಿತಗೊಳಿಸಲು ಕಂಪ್ಯುಟೇಶನಲ್‌ ತಂತ್ರಜ್ಞಾನಗಳು ಬಳಕೆಯಾಗುತ್ತವೆ. ನಿಖರತೆ, ವಸ್ತು ನಿಷ್ಟತೆ ಅಥವಾ ವೇಗವನ್ನು ವೃದ್ಧಿಸಿಕೊಳ್ಳುವ ಮೂಲಕ ಬೃಹತ್‌ ಅಥವಾ ಸಂಕೀರ್ಣ ಇಮೇಜ್‌ಗಳ ಗುಂಪನ್ನು ಅಳೆಯುವುದು ವೀಕ್ಷಕನ ಸಾಮರ್ಧ್ಯವನ್ನು ಆಧುನಿಕ ಇಮೇಜ್‌ ವಿಶ್ಲೇಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ.

ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾದ ವಿಶ್ಲೇಷಣಾ ವ್ಯವಸ್ಥೆಯೊಂದು ವೀಕ್ಷಕನನ್ನೇ ಸ್ಥಳಾಂತರಿಸಬಲ್ಲದು.

ಬಯೋಮೆಡಿಕಲ್‌ ಇಮೇಜರಿಯಲ್ಲಿ ಈ ವ್ಯವಸ್ಥೆಗಳು ಅನನ್ಯವಲ್ಲದಿದ್ದರೂ, ಬಯೋಮೆಡಿಕಲ್‌ ಇಮೇಜಿಂಗ್‌, ರೋಗ ಪತ್ತೆ ಮತ್ತು ಸಂಶೋಧನೆಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ. ಕೆಲವು ಉದಾಹರಣೆಳು ಈ ರೀತಿ ಇವೆ:

ಜೀವಂತ ಪ್ರಾಣಿಗಳು ಉಸಿರಾಡುವ ಶ್ವಾಸಕೋಶಗಳಲ್ಲಿ ಗಾಳಿಯ ಹರಿದಾಟದ ವಿಧಾನವನ್ನು ಅವು ಉಸಿರಾಡುವ ಸಮಯದಲ್ಲೇ ಕಂಡುಕೊಳ್ಳುವುದು.

ಶುದ್ಧ ರಕ್ತನಾಳದ ಗಾಯಾಳು ಚೇತರಿಸಿಕೊಳ್ಳುವ ಸಂದರ್ಭದಲ್ಲಿ ಉಂಟಾಗುತ್ತಿರುವ ಬದಲಾವಣೆಯ ಕ್ವಾಂಟಿಫೈಯಿಂಗ್‌ ಅಕಲ್ಷನ್‌ ಗಾತ್ರದ ನೈಜ ಸಮಯದ ಚಿತ್ರಣ.

ವಿಸ್ತೃತ ವಿಡಿಯೋ ರೆಕಾರ್ಡಿಂಗ್‌ ಮೂಲಕ ಪ್ರಯೋಗಾಲಯ ಪ್ರಾಣಿಗಳ ವರ್ತನೆಯನ್ನು ಅಧ್ಯಯನ ಮಾಡುವುದು.

ಮೆಟಾಬೋಲಿಕ್‌ ಚಟುವಟಿಕೆಗಳ ಪತ್ತೆಯಲ್ಲಿ ಅವಗೆಂಪು (=infrared) ಮಾಪನ

ಪ್ರೋಟೀನ್‌-ಪ್ರೋಟೀನ್‌ ಡಾಕಿಂಗ್‌

ಕಳೆದ ಎರಡು ದಶಕಗಳಲ್ಲಿ ಸಾವಿರಾರು 3 ಆಯಾಮದ ಪ್ರೋಟೀನ್‌ ರಚನೆಗಳು X-ರೇ ಕ್ರಿಸ್ಟಲ್ಲೋಗ್ರಫಿ ಮತ್ತು ಪ್ರೋಟೀನ್‌ ನ್ಯೂಕ್ಲಿಯರ್‌ ಮ್ಯಾಗ್ನೆಟಿಕ್‌ ರೆಸೊನ್ಯಾನ್ಸ್‌ ಸ್ಪೆಕ್ರೋಸ್ಕೋಪಿ (ಪ್ರೋಟೀನ್‌ NMR)ಗಳ ಮೂಲಕವೇ ನಿರ್ಣಯಿಸಲ್ಪಟ್ಟಿವೆ. ಪ್ರೋಟೀನ್‌-ಪ್ರೋಟೀನ್‌ ಸಂವಹನವನ್ನು ಪ್ರೋಟೀನ್‌-ಪ್ರೋಟೀನ್‌ ಸಂವಹನ ಪ್ರಯೋಗ ಕೈಗೊಳ್ಳದೆ ಕೇವಲ 3D ಆಕೃತಿಗಳನ್ನು ಮಾತ್ರವೇ ಆಧರಿಸಿ ಊಹಿಸುವುದು ವಾಸ್ತವವಾಗಿ ಸಾಧ್ಯವೇ? ಎನ್ನುವುದು ಜೈವಿಕ ವಿಜ್ಞಾನಿಗಳಿಗೆ ಒಂದು ಪ್ರಮುಖ ಪ್ರಶ್ನೆ. ಪ್ರೋಟೀನ್‌-ಪ್ರೋಟೀನ್‌ ಡಾಕಿಂಗ್‌ ಸಮಸ್ಯೆಯ ಪರಿಹಾರಕ್ಕಾಗಿ ಹಲವು ವಿವಿಧ ವಿಧಾನಗಳು ಅಭಿವೃದ್ಧಿಯಾಗಿವೆ. ಆದರೂ ಈ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ.

ಸಾಫ್ಟ್‌ವೇರ್‌ ಮತ್ತು ಪರಿಕರಗಳು

ಬಯೋಇನ್‌ಫರ್ಮ್ಯಾಟಿಕ್ಸ್‌ ಕ್ಷೇತ್ರದಲ್ಲಿ ಬಳಸುವ ಸಾಫ್ಟ್‌ವೇರ್‌ಗಳು ಸರಳ ಕಮ್ಯಾಂಡ್‌ಲೈನ್‌ ಪರಿಕರದಿಂದ ಹಿಡಿದು ಅತ್ಯಂತ ಸಂಕೀರ್ಣ ಗ್ರಾಫಿಕಲ್‌ ಪ್ರೋಗ್ರಾಮ್‌ ಮತ್ತು ಹಲವಾರು ಬಯೋಇನ್‌ಫರ್ಮ್ಯಾಟಿಕ್ಸ್‌ ಕಂಪನಿ ಅಥವಾ ಸಾರ್ವಜನಿಕ ಸಂಸ್ಥೆಗಳ ಸ್ವತಂತ್ರ ವೆಬ್‌-ಸರ್ವೀಸ್‌ಗಳವರೆಗೆ ಸಾಕಷ್ಟು ಲಭ್ಯವಿದೆ.

ಜೀವವಿಜ್ಞಾನಿಗಳ ನಡುವೆ ಕಂಪ್ಯುಟೇಶನಲ್‌ ಬಯಾಲಜಿಯ ಅತ್ಯುತ್ತಮ ಪರಿಕರವಾಗಿ ಬಳಕೆಯಾಗುತ್ತಿರುವ ಅತ್ಯಂತ ಜನಪ್ರಿಯ ಸಾಫ್ಟ್‌ವೇ‌ರ್‌ ಎಂದರೆ ಬಹುಷಃ BLAST, ಇದೊಂದು ಅಲ್ಗಾರಿದಮ್‌ ಆಗಿದ್ದು, ಇತರೆ ಸೀಕ್ವೆನ್ಸ್‌ಗಳಿಗೆದುರು ಆರ್ಬಿಟ್ರರಿ (ಅನಿರ್ಬಂಧಿತ) ಸೀಕ್ವೆನ್ಸ್‌ಗಳ ಸಾಮ್ಯತೆ ಪ್ರಾಯಶಃ ರೋಗಪರಿಹಾರಗೊಂಡ ಪ್ರೋಟೀನ್‌ ದತ್ತಕೋಶ ಅಥವಾ DNA ಸೀಕ್ವೆನ್ಸ್‌ಗಳ ಹೋಲಿಕೆ ಮಾಡಲು ಸಹಕಾರಿಯಾಗಿದೆ. ಸೀಕ್ವೆನ್ಸ್‌ ಅಲೈನ್‌ಮೆಂಟ್‌ ಮಾಡಲು ಸಾಮಾನ್ಯವಾಗಿ ಲಭ್ಯವಿರುವ ಪ್ರೋಗ್ರಾಮ್‌ಗಳಲ್ಲಿ BLAST ಕೂಡ ಒಂದು. ದತ್ತಕೋಶವನ್ನು ಜಾಲಾಡಲು ಅನುವು ಮಾಡಿಕೊಡುವNCBI ಜನಪ್ರಿಯ ವೆಬ್‌ ಆಧಾರಿತ ಕಾರ್ಯಗತ ವ್ಯವಸ್ಥೆಯನ್ನು ಒದಗಿಸುತ್ತದೆ.

=

ಬಯೋಇನ್‌ಫರ್ಮ್ಯಾಟಿಕ್ಸ್‌ನಲ್ಲಿ ವೆಬ್‌ ಸೇವೆಗಳು

===

ವೈವಿಧ್ಯಮಯ ಬಯೋಇನ್‌ಫರ್ಮ್ಯಾಟಿಕ್ಸ್‌ ಅಪ್ಲಿಕೇಶನ್‌ಗಳಿಗೆ SOAP ಮತ್ತು REST- ಆಧಾರಿತ ಇಂಟರ್‌ಫೇಸ್‌ಗಳು ಅಭಿವೃದ್ಧಿಗೊಂಡಿವೆ. ಇವು ವಿಶ್ವದ ಒಂದು ಭಾಗದ ಅಲ್ಗಾರಿದಮ್‌ಗಳು, ಮಾಹಿತಿ ಮತ್ತು ಕಂಪ್ಯೂಟಿಂಗ್‌ ಸಂಪನ್ಯೂಲಗಳನ್ನು ಸರ್ವರ್‌ ಮೂಲಕ ಜಗತ್ತಿನ ಇತರೆ ಭಾಗಗಳಲ್ಲೂ ಉಪಯೋಗಿಸಲು ಅವಕಾಶ ನೀಡುತ್ತವೆ.


ಅಂತಿಮ ಬಳಕೆದಾರರು ಸಾಫ್ಟ್‌ವೇರ್‌ನೊಂದಿಗೆ ವ್ಯವಹರಿಸುವ ಅಗತ್ಯವಿಲ್ಲ, ಹಾಗೂ ದತ್ತಕೋಶ ನಿರ್ವಹಿಸುವ ಸಣ್ಣ ಪುಟ್ಟ ಖರ್ಚುವೆಚ್ಚಗಳೂ ಇವರಿಗಿರುವುದಿಲ್ಲ ಎಂಬುದು ಇದರ ಪ್ರಮುಖ ಉಪಯೋಗಳು.

ಮೂಲಭೂತ ಬಯೋಇನ್‌ಫರ್ಮ್ಯಾಟಿಕ್ಸ್‌ ಸೇವೆಗಳನ್ನು EBI 3 ಗುಂಪುಗಳನ್ನಾಗಿ ವಿಂಗಡಿಸಿದೆ: SSS (ಸೀಕ್ವೆನ್ಸ್ ಸರ್ಚ್‌ ಸರ್ವೀಸಸ್‌), MSA (ಮಲ್ಟಿಪಲ್‌ ಸೀಕ್ವೆನ್ಸ್ ಅಲೈನ್‌ಮೆಂಟ್‌) ಮತ್ತು BSA (ಬಯಾಲಜಿಕಲ್‌ ಸೀಕ್ವೆನ್ಸ್ ಅನ್ಯಾಲಿಸಿಸ್‌).


ಸಂಪನ್ಯೂಲಗಳ ಲಭ್ಯತೆ, ಒಂದೇ ರೀತಿಯ ಸಾಮಾನ್ಯ ಡೇಟಾ ಫಾರ್ಮ್ಯಾಟ್‌ನ ಸ್ವತಂತ್ರ ಪರಿಕರಗಳು, ಸ್ವತಂತ್ರ ಅಥವಾ ವೆಬ್‌ ಆಧಾರಿತ ಇಂಟರ್‌ಫೇಸ್‌ಗಳಿಂದ ಹಿಡಿದು, ಸಂಘಟನಾತ್ಮಕ, ವರ್ಗೀಕರಿಸಲ್ಪಟ್ಟ ಮತ್ತು ವಿಸ್ತರಣೀಯ ಬಯೋಇನ್‌ಮರ್ಮ್ಯಾಟಿಕ್ಸ್‌ ವರ್ಕ್‌ಫ್ಲೋ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ಗಳವರೆಗಿನ ವೆಬ್‌ ಆಧಾರಿತ ಬಯೋಇನ್‌ಫರ್ಮ್ಯಾಟಿಕ್ಸ್‌ ಸೇವೆಗಳ ಪ್ರಯೋಜನ ಈ ಸೇವಾಧಾರಿತ ಬಯೋಇನ್‌ಫರ್ಮ್ಯಾಟಿಕ್ಸ್‌ ಪ್ರದರ್ಶಿಸುತ್ತವೆ. 

ಇದನ್ನೂ ನೋಡಿರಿ

ಸಂಬಂಧಿತ ವಿಚಾರಗಳು

ಸಂಬಂಧಿತ ಕ್ಷೇತ್ರಗಳು

(ಶೈಕ್ಷಣಿಕ ಕ್ಷೇತ್ರ)]]

ಆಕರಗಳು

  • ಅಚ್ಯುತ್ ಶಂಕರ್‌ S ನಾಯರ್‌ ಕಂಪ್ಯುಟೇಶನಲ್‌ ಬಯಾಲಜಿ & ಬಯೋಇನ್‌ಫರ್ಮ್ಯಾಟಿಕ್ಸ್‌ - ಅ ಜೆಂಟಲ್ ಓವರ್‌ವ್ಯೂ, ಕಮ್ಯುನಿಕೇಶನ್ಸ್‌ ಆಫ್‌ ಕಂಪ್ಯೂಟರ್‌ ಸೊಸೈಟಿ, ಭಾರತ, ಜನವರಿ, 2007
  • ಆಲೂರು, ಶ್ರೀನಿವಾಸ್‌ ed. ಹ್ಯಾಂಡ್‌ಬುಕ್ ಆಫ್‌ ಕಂಪ್ಯುಟೇಶನಲ್‌ ಮಾಲಿಕ್ಯೂಲರ್‌ ಬಯಾಲಜಿ . ಚಾಪ್‌ಮನ್‌ & ಹಾಲ್‌/Crc, 2006. ISBN 1-58488-406-1 (ಚಾಪ್‌ಮನ್‌ & ಹಾಲ್‌/Crc ಕಂಪ್ಯೂಟರ್‌ ಮತ್ತು ಮಾಹಿತಿ ವಿಜ್ಞಾನದ ಸರಣಿ)
  • ಬಾಳ್ದಿ, P ಮತ್ತು ಬ್ರುಣಕ್‌, S, ಬಯೋಇನ್‌ಫರ್ಮ್ಯಾಟಿಕ್ಸ್‌: ದಿ ಮೆಷಿನ್ ಲರ್ನಿಂಗ್‌ ಅಪ್ರೋಚ್‌ , 2ನೇ ಆವೃತ್ತಿ MIT ಪ್ರೆಸ್‌, 2001. ISBN 0-262-02506-X
  • ಬಾರ್ನ್ಸ್ M.R. ಮತ್ತು ಗ್ರೇ, I.C., eds., ಬಯೋಇನ್‌ಫರ್ಮ್ಯಾಟಿಕ್ಸ್‌ ಫಾರ್‌ ಜಿನೆಟಿಸಿಟ್ಸ್‌ , ಮೊದಲ ಆವೃತ್ತಿ. ವಿಲೇ, 2001. ISBN 0-470-84394-2
  • ಬೇಕ್ಸ್‌ವ್ಯಾನಿಸ್‌, A.D. ಮತ್ತು ಕ್ವೆಲ್ಲೆಟೆ , B.F.F., eds., ಬಯೋಇನ್‌ಫರ್ಮ್ಯಾಟಿಕ್ಸ್‌: ಅ ಪ್ರಾಕ್ಟಿಕಲ್‌ ಗೈಡ್ ಟು ದಿ ಅನಲಿಸಿಸ್‌ ಆಫ್ ಜೀನ್ಸ್‌ ಅಂಡ್ ಪ್ರೋಟೀನ್ಸ್‌ , ಮೂರನೇ ಆವೃತ್ತಿ. ವಿಲೇ, 2001. ISBN 0-471-47878-4
  • ಬೇಕ್ಸ್‌ವ್ಯಾನಿಸ್, A.D., ಪೆಟ್ಸ್ಕೋ, G.A., ಸ್ಟೆಯಿನ್‌, L.D., ಮತ್ತು ಸ್ಟಾರ್ಮೋ, G.D., eds., ಕರೆಂಟ್‌ ಪ್ರೋಟೋಕಾಲ್ಸ್ ಇನ್‌ ಬಯೋಇನ್‌ಫರ್ಮ್ಯಾಟಿಕ್ಸ್‌ . ವಿಲೇ, 2001. ISBN 0-471-25093-7
  • ಕ್ಲೇವರಿ, J.M. ಮತ್ತು C. ನಾಟ್ರೆಡೇಮ್‌, ಬಯೋಇನ್‌ಫರ್ಮ್ಯಾಟಿಕ್ಸ್‌ ಫಾರ್‌ ಡಮ್ಮೀಸ್ . ವಿಲೇ, 2001. ISBN 0-7645-1696-5
  • ಕ್ರಿಸ್ಟಿಯಾನಿನಿ, N. ಮತ್ತು ಹಾನ್‌, M. ಇಂಟ್ರೊಡಕ್ಷನ್‌ ಟು ಕಂಪ್ಯುಟೇಶನಲ್‌ ಜಿನೋಮಿಕ್ಸ್‌ , ಕೇಂಬ್ರಿಡ್ಜ್‌ ಯೂನಿವರ್ಸಿಟಿ‌ ಪ್ರೆಸ್‌, 2006. ISBN 978-0-7513-2886-8

ISBN 978-0-7513-2886-8

]

  • [http://www.nap.edu/catalog/2121.html ಕ್ಯಾಲ್ಕ್ಯುಲೇಟಿಂಗ್ ದಿ ಸೀಕ್ರೆಟ್ಸ್ ಆಫ್‌ ಲೈಫ್: ಕಾಂಟ್ರಿಬ್ಯೂಷನ್ಸ್‌ ಅಫ್‌ ದಿ ಮ್ಯಾಥಮೆಟಿಕಲ್‌ ಸೈನ್ಸಸ್‌ ಅಂಟ್‌ ಕಂಪ್ಯೂಟಿಂಗ್‌ ಟು ಮಾಲಿಕ್ಯೂಲರ್‌ ಬಯಾಲಜಿ (1995)

]

ಹೊರಗಿನ ಕೊಂಡಿಗಳು

]

]

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನ ಮುಖಪುಟ]

    • [http://www.open-bio.org/ ಓಪನ್‌ ಬಯೋಇನ್‌ಫರ್ಮ್ಯಾಟಿಕ್ಸ್‌ ಫೌಂಡೇಷನ್‌:

ಬಯೋಇನ್‌ಫರ್ಮ್ಯಾಟಿಕ್ಸ್‌ ಕ್ಷೇತ್ರದಲ್ಲಿ ನಿರ್ದಿಷ್ಟ ಓಪನ್‌ ಸೋರ್ಸ್ ಯೋಜನೆಗಳಿಗೆ ಸಹಕರಿಸುತ್ತಿರುವ ಲಾಭರಹಿತ ಸಂಸ್ಥೆ. ]

  • ಪ್ರಮುಖ ನಿಯತಕಾಲಿಕಗಳು
    • [http://www.almob.org/ ಅಲ್ಗಾರಿದಮ್ಸ್‌ ಇನ್‌ ಮಾಲಿಕ್ಯೂಲರ್‌ ಬಯಾಲಜಿ

]

]

]

]

]
  • ಇತರೆ ವೈಬ್‌ಸೈಟ್‌ಗಳು

ಸರ್ವರ್‌ಗಳು, ಪರಿಕರಗಳು, ದತ್ತಕೋಶದ ಲಿಂಕ್‌ಗಳು, ಮತ್ತು ಬಯೋಇನ್‌ಫರ್ಮ್ಯಾಟಿಕ್ಸ್‌ ಕಂಪನಿಗಳೂ ಸೇರಿದಂತೆ ಸಮಗ್ರ ಬಯೋಇನ್‌ಫರ್ಮ್ಯಾಟಿಕ್ಸ್‌ ಮಾಹಿತಿ ಸಂಪನ್ಯೂಲ ಡೈರೆಕ್ಟರಿ ]

]

]


ಇದನ್ನೂ ನೋಡಿರಿ

ಟೆಂಪ್ಲೇಟು:Link FA