ಬಳ್ಳಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding ms:Bellary
ಚು r2.7.3) (Robot: Adding lt:Belaris
೪೦ ನೇ ಸಾಲು: ೪೦ ನೇ ಸಾಲು:
[[fr:Bellary]]
[[fr:Bellary]]
[[it:Bellary]]
[[it:Bellary]]
[[lt:Belaris]]
[[mr:बेल्लारी]]
[[mr:बेल्लारी]]
[[ms:Bellary]]
[[ms:Bellary]]

೦೧:೫೧, ೩೧ ಡಿಸೆಂಬರ್ ೨೦೧೨ ನಂತೆ ಪರಿಷ್ಕರಣೆ

ಬಳ್ಳಾರಿ ಕರ್ನಾಟಕ ರಾಜ್ಯದ ಒಂದು ಜಿಲ್ಲೆ; ಇದೇ ಹೆಸರಿನ ನಗರ ಜಿಲ್ಲೆಯ ರಾಜಧಾನಿ.

ಆಕರ್ಷಣೆಗಳು

ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಲ್ಲಿ ಹಂಪೆ ಮತ್ತು ಅಲ್ಲಿರುವ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಮುಖ್ಯವಾದವು. ಬಳ್ಳಾರಿ ಜಿಲ್ಲೆಯ ಇನ್ನೊಂದು ಪ್ರಮುಖ ಪಟ್ಟಣ ಎಂದರೆ ಹೊಸಪೇಟೆ - ಇಲ್ಲಿರುವ ತುಂಗಭದ್ರಾ ಅಣೆಕಟ್ಟು ಕೃಷಿಗೆ ನೀರನ್ನು ಒದಗಿಸುತ್ತದೆ.ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು ರತೋತ್ಸವ ಇರುತ್ತದೆ.

ಚರಿತ್ರೆ

ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ ೧೯೫೩ ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.

ಭೌಗೋಳಿಕ

ಕರ್ನಾಟಕದ ಪೂರ್ವದ ಗಡಿಯಲ್ಲಿರುವ ಬಳ್ಳಾರಿ ಜಿಲ್ಲೆಯ ಉತ್ತರಕ್ಕೆ ರಾಯಚೂರು ಮತ್ತು ಕೊಪ್ಪಳ, ಪಶ್ಚಿಮಕ್ಕೆ ಹಾವೇರಿ ಮತ್ತು ಗದಗ್, ದಕ್ಷಿಣಕ್ಕೆ ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಪೂರ್ವಕ್ಕೆ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕರ್ನೂಲು ಜಿಲ್ಲೆಗಳಿವೆ. ಈ ಜಿಲ್ಲೆಯ ವಿಸ್ತೀರ್ಣ 8447 ಚ.ಕಿಮೀ ಮತ್ತು ವಾರ್ಷಿಕ ಮಳೆ ೬೩.೯ ಸೆಮೀ.

ಬಳ್ಳಾರಿ ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.

ತಾಲೂಕುಗಳು

ಕೃಷಿ

ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ತುಂಗಭದ್ರಾ ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಹತ್ತಿ, ಜೋಳ, ನೆಲಗಡಲೆ, ಭತ್ತ, ಸೂರ್ಯಕಾಂತಿ.

ಇದನ್ನೂ ನೋಡಿ

"https://kn.wikipedia.org/w/index.php?title=ಬಳ್ಳಾರಿ&oldid=305104" ಇಂದ ಪಡೆಯಲ್ಪಟ್ಟಿದೆ