ಮಂಡ್ಯ ರಮೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
[[Image:Ramesh-mandya.jpg|thumb|right|150px|ಮಂಡ್ಯ ರಮೇಶ್]]



"ಮಂಡ್ಯ ಅಂದ್ರೆ ಇಂಡಿಯಾ..!" "ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ" ಇವು ಹಳೆಯ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಸುಪ್ರಸಿದ್ಧ ನುಡಿಗಟ್ಟುಗಳು. ಸಕ್ಕರೆ ಸೀಮೆ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆಯ ಜನರೂ ಅಲ್ಲಿ ಬೆಳೆವ ಕಬ್ಬಿನಂತೆ ಮೇಲು ನೋಟಕ್ಕೆ ಒರಟರಾದರೂ ಆಂತರ್ಯದಲ್ಲಿ ಮೃದು-ಮಧುರ..! ತಾಯ್ನೆಲದ ಗುಣವನ್ನೇ ಮೈದುಂಬಿಸಿಕೊಂಡು ತಮ್ಮ ಮೃದು-ಮಧುರ ನಡುವಳಿಕೆಗಳಿಂದಾಗಿ "ಇಂಡಿಯಾ" ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಭಿಮಾನಿ-ಶಿಷ್ಯ ಸಮೂಹವನ್ನು ಹೋದಲ್ಲೆಲ್ಲಾ ಸೃಷ್ಟಿಸುತ್ತಿರುವ ವ್ಯಕ್ತಿ-ರಂಗಭೂಮಿಯ ವಿಶಿಷ್ಟ ಶಕ್ತಿ "ಮಂಡ್ಯ ರಮೇಶ್."
"ಮಂಡ್ಯ ಅಂದ್ರೆ ಇಂಡಿಯಾ..!" "ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ" ಇವು ಹಳೆಯ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಸುಪ್ರಸಿದ್ಧ ನುಡಿಗಟ್ಟುಗಳು. ಸಕ್ಕರೆ ಸೀಮೆ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆಯ ಜನರೂ ಅಲ್ಲಿ ಬೆಳೆವ ಕಬ್ಬಿನಂತೆ ಮೇಲು ನೋಟಕ್ಕೆ ಒರಟರಾದರೂ ಆಂತರ್ಯದಲ್ಲಿ ಮೃದು-ಮಧುರ..! ತಾಯ್ನೆಲದ ಗುಣವನ್ನೇ ಮೈದುಂಬಿಸಿಕೊಂಡು ತಮ್ಮ ಮೃದು-ಮಧುರ ನಡುವಳಿಕೆಗಳಿಂದಾಗಿ "ಇಂಡಿಯಾ" ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಭಿಮಾನಿ-ಶಿಷ್ಯ ಸಮೂಹವನ್ನು ಹೋದಲ್ಲೆಲ್ಲಾ ಸೃಷ್ಟಿಸುತ್ತಿರುವ ವ್ಯಕ್ತಿ-ರಂಗಭೂಮಿಯ ವಿಶಿಷ್ಟ ಶಕ್ತಿ "ಮಂಡ್ಯ ರಮೇಶ್."

೨೧:೩೩, ೨೨ ಸೆಪ್ಟೆಂಬರ್ ೨೦೧೨ ನಂತೆ ಪರಿಷ್ಕರಣೆ

ಮಂಡ್ಯ ರಮೇಶ್


"ಮಂಡ್ಯ ಅಂದ್ರೆ ಇಂಡಿಯಾ..!" "ಮಂಡ್ಯ ಗೆದ್ದರೆ ಇಂಡಿಯಾ ಗೆದ್ದಂತೆ" ಇವು ಹಳೆಯ ಮೈಸೂರು ಭಾಗದಲ್ಲಿ ಪ್ರಚಲಿತವಿರುವ ಸುಪ್ರಸಿದ್ಧ ನುಡಿಗಟ್ಟುಗಳು. ಸಕ್ಕರೆ ಸೀಮೆ ಎಂದೇ ಪ್ರಖ್ಯಾತವಾಗಿರುವ ಮಂಡ್ಯ ಜಿಲ್ಲೆಯ ಜನರೂ ಅಲ್ಲಿ ಬೆಳೆವ ಕಬ್ಬಿನಂತೆ ಮೇಲು ನೋಟಕ್ಕೆ ಒರಟರಾದರೂ ಆಂತರ್ಯದಲ್ಲಿ ಮೃದು-ಮಧುರ..! ತಾಯ್ನೆಲದ ಗುಣವನ್ನೇ ಮೈದುಂಬಿಸಿಕೊಂಡು ತಮ್ಮ ಮೃದು-ಮಧುರ ನಡುವಳಿಕೆಗಳಿಂದಾಗಿ "ಇಂಡಿಯಾ" ಅಷ್ಟೇ ಅಲ್ಲದೇ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಅಭಿಮಾನಿ-ಶಿಷ್ಯ ಸಮೂಹವನ್ನು ಹೋದಲ್ಲೆಲ್ಲಾ ಸೃಷ್ಟಿಸುತ್ತಿರುವ ವ್ಯಕ್ತಿ-ರಂಗಭೂಮಿಯ ವಿಶಿಷ್ಟ ಶಕ್ತಿ "ಮಂಡ್ಯ ರಮೇಶ್." ತನ್ನೆದುರು ಸಿಕ್ಕ ಎಳಯರನ್ನು "ಕಂದಮ್ಮಾ.." ಎಂದೂ, ಹಿರಿಯರು ಮತ್ತು ಸಮವಯಸ್ಕರನ್ನು "ಗುರುಗಳೇ.." ಎನ್ನುತ್ತಾ, ಎಂದಿಗೂ ಮಾಸದ ಮಂದಹಾಸ, ಸ್ನೇಹಭಾವದೊಂದಿಗೆ ಮೋಡಿ ಮಾಡುವ ಮಂಡ್ಯ ರಮೇಶ್ ಓರ್ವ ಅದ್ಭುತ ಕಲಾವಿದ, ನಿರ್ದೇಶಕ, ಕಲಾಸಂಘಟಕ ಅಷ್ಟೇ ಅಲ್ಲದೇ ಅತ್ಯುತ್ತಮ ರಂಗಶಿಕ್ಷಕರೂ ಹೌದು. ಸಿನಿಮಾ, ಕಿರುತರೆಗಳಲ್ಲಿ ಸಾಕಷ್ಟು ಬ್ಯುಸಿಯಾಗಿದ್ದರೂ, ಕಲಾಪ್ರಪಂಚದಲ್ಲಿ ತನಗೊಂದು ಸ್ಥಾನ-ಮಾನ ದೊರಕಿಸಿಕೊಟ್ಟ ರಂಗಭೂಮಿಯನ್ನು ಬದುಕಿನ ಉಸಿರೆಂದು ಭಾವಿಸಿರುವ ಆದರ್ಶವಂತ. ಅಂದ ಹಾಗೆ ಈ ಹೃದಯವಂತ ಕನಸುಗಾರನ ಕಲ್ಪನೆಯ ಕೂಸೇ "ನಟನ." ರಂಗಪ್ರಪಂಚದಲ್ಲಿ ತನ್ನನ್ನು ಕೈಹಿಡಿದು ಮುನ್ನಡೆಸಿದ ಭಾರತೀಯ ರಂಗಭೂಮಿಯ ಧೃವತಾರೆಗಳಾದ ನಿನಾಸಂನ ಕೆ.ವಿ.ಸುಬ್ಬಣ್ಣ, ರಂಗಭೀಷ್ಮ ಬಿ.ವಿ.ಕಾರಂತರ ಹಾದಿಯಲ್ಲೇ ಸಾಗುತ್ತಾ ಕಟ್ಟಿದ ರಂಗನೆಲೆ "ನಟನ", ಇದೀಗ ಒಂದು ಹೆಮ್ಮೆರವಾಗಿ ಬೆಳೆದಿದೆ. ರಂಗಶಿಕ್ಷಣ, ಲಲಿತಕಲೆಗಳ ಕೇಂದ್ರವಾಗಿರುವ "ನಟನ" ತನ್ನ ನಿರಂತರ ಚಲನಶೀಲತೆಯಿಂದಾಗಿ ನಾಡಿನ ರಂಗಚಳುವಳಿಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ತನ್ನದೇ ಆದ ವಿಶಿಷ್ಟ ಸ್ಥಾನಮಾನ ಗಳಿಸಿದ್ದು, ಅದ್ಭುತ ಶಕ್ತಿಯ ಹೊಸ ಕಲಾವಿದರನ್ನು ತಯಾರಿಸುವ ರಂಗ ಶಾಲೆಯಾಗಿ ರೂಪುಗೊಂಡಿದೆ.

ಮಕ್ಕಳಿಕೆ ಎಳವೆಯಲ್ಲೇ ರಂಗದೀಕ್ಷೆ ನೀಡುವ ಉದ್ದೇಶದಿಂದ ಕಲಿಯುತ್ತಲೇ ನಲಿಯುವ -ನಲಿಯುತ್ತಲೇ ಕಲಿಯುವ ವಿಶಿಷ್ಠ ಪರಂಪರೆಯೊಂದನ್ನು ಹುಟ್ಟು ಹಾಕುತ್ತಿರುವ ಬೇಸಿಗೆ ಶಿಬಿರ "ರಜಾ-ಮಜಾ"- "ನಟನ"ದ ಒಂದು ಟಿಸಿಲು. ಬಾಲ್ಯ ಸಹಜ ಆಟೋಟಗಳು, ತುಂಟಾಟಗಳಿಂದ ವಂಚಿತರಾಗಿರುವ ಭವಿಷ್ಯದ ಪ್ರಜೆಗಳಿಗೆ ಬೇಸಿಗೆ ರನೆಯನ್ನು ಮಜವಾಗಿ ಸ್ಮರಣೀಯವಾಗಿ ಕಳೆಯುವುದರೊಂದಿಗೆ, ಹಾಡು, ನರ್ತನ, ಅಭಿನಯ, ಕರಕುಶಲ ಕಲೆಗಾರಿಕೆಗಳ ಕಲಿಕೆಯೊಂದಿಗೆ ಸಾಧಕರೊಂದಿಗೆ ಸಂವಾದ ನಡೆಸುವ ಮೂಲಕ ಬದುಕಿನ ಮೂಲಪಾಠಗಳನ್ನೂ ತಿಂಗಳೊಪ್ಪತ್ತಿನಲ್ಲಿ ಕಲಿಸುವ "ರಜಾ-ಮಜಾ" ಮಂಡ್ಯ ರಮೇಶ್ ಅವರ ಕನಸಿನ ಕೂಸು.

ಆರಂಭವಾದ ಕೆಲವೇ ವರ್ಷಗಳಲ್ಲಿಯೇ ಮೈಸೂರಿನ ಹಲವು ಬಡಾವಣೆಗಳಲ್ಲಷ್ಟೇ ಅಲ್ಲದೇ, ನೆರೆಯ ಮಂಡ್ಯ ಜಿಲ್ಲೆಯ ಪಾಂಡವಪುರ, ದೂರದ ಉಡುಪಿ ಜಿಲ್ಲೆಗಳಲ್ಲೂ "ಮಂಡ್ಯ ರಮೇಶ್ ಅವರ ರಜಾ-ಮಜಾ" ಎಂಬ ಬ್ರಾಂಡ್ ನೇಮ್ ಅಡಿಯಲ್ಲಿ ಶಿಬಿರಗಳು ನಡೆಯುತ್ತಿರುವುದು ಅದರ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ಅಂತೆಯೇ "ರಜಾ-ಮಜಾ" ಹಾಗೂ ನಟನ ರಂಗಶಾಲೆಯ ಮಕ್ಕಳ ಹಾಗೂ ಪೋಷಕರ ಪಾಲಿಗೆ ಮಂಡ್ಯ ರಮೇಶ್ ಕೇವಲ ನಿರ್ದೇಶಕರಲ್ಲ ..ಫ್ರೆಂಡ್..ಫಿಲಾಸಫರ್ ಮತ್ತು ಗೈಡ್...! ನಿಜವಾದ ಅರ್ಥದಲ್ಲಿ ದಿಗ್ಧರ್ಶಕ..!!