ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Robot: Adding ml:കാർക്കല
No edit summary
೫೬ ನೇ ಸಾಲು: ೫೬ ನೇ ಸಾಲು:
}}
}}


'''ಕಾರ್ಕಳ''' [[ಉಡುಪಿ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸೂಮಾರು ೩೦೦ ಕೀ.ಮಿ ದೂರದಲ್ಲಿದೆ ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು.ನಂತರ ಇಲ್ಲಿರುವ ಕರಿಬಂಡೆಗಳಿಂದ "ಕರಿಕಲ್ಲು"ಎಂದು ಜನಜನಿತವಾಗಿತ್ತು.ವತ೯ಮಾನದಲ್ಲಿ ಎಕಶಿಲಾ ಗೊಮ್ಮಟೇಶ್ವರ ಮೂಲಕ ವಿಶ್ವಶಾಂತಿಯನ್ನು ಸಾರುತ್ತ "ಕಾರ್ಕಳ" ಎಂದು ಕರೆಯಲ್ಪಡುತ್ತಿದೆ.
'''ಕಾರ್ಕಳ''' [[ಉಡುಪಿ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸೂಮಾರು ೩೦೦ ಕೀ.ಮಿ ದೂರದಲ್ಲಿದೆ ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು.ನಂತರ ಇಲ್ಲಿರುವ ಕರಿಬಂಡೆಗಳಿಂದ "ಕರಿಕಲ್ಲು"ಎಂದು ಜನಜನಿತವಾಗಿತ್ತು.ವತ೯ಮಾನದಲ್ಲಿ ೪೨ಅಡಿ ಎತ್ತರದ ಎಕಶಿಲಾ ಗೊಮ್ಮಟೇಶ್ವರ ಮೂಲಕ ವಿಶ್ವಶಾಂತಿಯನ್ನು ಸಾರುತ್ತ "ಕಾರ್ಕಳ" ಎಂದು ಕರೆಯಲ್ಪಡುತ್ತಿದೆ.


== '''ಇತಿಹಾಸ''' ==
== '''ಇತಿಹಾಸ''' ==

೨೩:೩೧, ೨೧ ಸೆಪ್ಟೆಂಬರ್ ೨೦೧೨ ನಂತೆ ಪರಿಷ್ಕರಣೆ

ಕಾರ್ಕಳ
ಕಾರ್ಕಳ
ಕರಿಕಲ್ಲು
town
Nickname: 
ಜೈನ ತೀರ್ಥ
Settled1912
Population
 (2001)
 • Total೨೫,೧೧೮
Websitewww.karkalatown.gov.in
The Famous Jain Centre

ಕಾರ್ಕಳ ಉಡುಪಿ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸೂಮಾರು ೩೦೦ ಕೀ.ಮಿ ದೂರದಲ್ಲಿದೆ ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು.ನಂತರ ಇಲ್ಲಿರುವ ಕರಿಬಂಡೆಗಳಿಂದ "ಕರಿಕಲ್ಲು"ಎಂದು ಜನಜನಿತವಾಗಿತ್ತು.ವತ೯ಮಾನದಲ್ಲಿ ೪೨ಅಡಿ ಎತ್ತರದ ಎಕಶಿಲಾ ಗೊಮ್ಮಟೇಶ್ವರ ಮೂಲಕ ವಿಶ್ವಶಾಂತಿಯನ್ನು ಸಾರುತ್ತ "ಕಾರ್ಕಳ" ಎಂದು ಕರೆಯಲ್ಪಡುತ್ತಿದೆ.

ಇತಿಹಾಸ

ಕಾರ್ಕಳದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ದೊರಕದಿದ್ದರು ಸೂಮಾರು ೧೦ನೇ ಶತಮಾನದ ಆದಿಯಿಂದ ಹಲವು ಮಾಹಿತಿಗಳು ಲಬ್ಯವಿದೆ. ಪ್ರಾಚೀನ ಕಾರ್ಕಳ: ಕಾರ್ಕಳದಲ್ಲಿ ಜನಜೀವನ ಎಂದು ಆರಂಭವಾಯಿತು ಎಂಬುದಕ್ಕೆ ಅನಾದಿಕಾಲದ ಆಧಾರಗಳು ನಮಗೆ ಸಿಗುತ್ತಿಲ್ಲವಾದರೂ ಬೃಹತ್ ಶಿಲಾಯುಗಕ್ಕೆ ಕಾಲಿಟ್ಟಾಗ ಒಂದು ಸ್ಪಷ್ಟ ಚಿತ್ರ ದೊರೆಯುತ್ತದೆ. ತತ್ಸಂಬಂಧವಾದ ಹಲವಾರು ಪಳೆಯುಳಿಕೆಗಳು ಕಾಣಸಿಗುತ್ತವೆ. ಇಲ್ಲಿ ಹೆಸರಿಸಬಹುದಾವುಗಳೆಂದರೆ ಗವಿಗಳು ಮತ್ತು ಸಮಾಧಿಗಳು.ಇಲ್ಲಿನ ಹಿರಿಯಂಗಡಿ ಬಳಿ ಇರುವ ಪರ್ಪಲೆ ಬೆಟ್ಟದ ಮಧ್ಯಭಾಗದಲ್ಲಿ ಒಂದು ಗವಿ ಇದೆ.ಪೂರ್ವಕ್ಕೆ ಮುಖವಿರುವ ಈ ಮುರಕಲ್ಲು ಗವಿ ಬೃಹತ್ ಶಿಲಾಯುಗದ್ದು.ಕಾಲದ ಪ್ರಭಾವದಿಂದಾಗಿ ಆದ ಹಲವಾರು ಬದಲಾವಣೆಗಳನ್ನು ನಾವು ಇಲ್ಲಿ ಕಾಣಬಹುದು.ಗವಿಯ ಮುಂದೆ ಕಿರಿದಾದ ಸಣ್ಣ ಕಣಿವೆ, ಇಲ್ಲೊಂದು ಅಷ್ಟೇ ಸಣ್ಣದಾದ ಝರಿ.ಇದು ಪ್ರಾಚೀನ ಕಾಲದಲ್ಲಿ ಮಾನವ ವಾಸ್ತವ್ಯಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿತ್ತು. ಆಧುನಿಕ ಮಾನವನ ಸಂಪರ್ಕ ಹೊಂದಿರುವ ಈಗವಿ ಇದ್ದಿರಬಹುದಾದ ಪಳೆಯುಳಿಕೆಗಳನ್ನು ತನ್ನ ಗರ್ಭದಲ್ಲಿ ಸೇರಿಸಿಕೊಂಡಿದೆ.ಬೆಳುವಾಯಿ ಸಮೀಪದ ದರೆಗುಡ್ಡೆ ಮತ್ತು ಬೈಲೂರು ಸಮೀಪದ ಕಣಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆ ವಾಸ್ತವ್ಯದ (Rock Shelters) ಕುರುಹುಗಳಿವೆ.ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು.ಸಾವಿರಾರು ವರ್ಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿನ ಕುರುಹುಗಳು ನಾಶವಾಗಿವೆ. ರೆಂಜಾಳದ ಸಮೀಪ ಇರುವ ಬೋರುಕಟ್ಟೆ ಎಂಬ ಹಳ್ಳಿಯಲ್ಲಿ ಒಂದು ಬೃಹತ್ ಶಿಲಾ ಸಮಾಧಿ ಇದೆ.ಇದನ್ನು ಅಲ್ಲಿನ ಜನ “ಪಾಂಡವರಕಲ್ಲು ” ಎಂದು ಕರೆಯುತ್ತಾರೆ. ಈ ಹೆಸರು ಸಮಾದಿಯ ಪ್ರಾಚೀನತೆಯನ್ನು ಸೂಚಿಸುತ್ತದೆ ಅಷ್ಟೇ.ಜಿಲ್ಲೆಯ ಇತರೆಡೆಗಳಲ್ಲೂ “ಪಾಂಡವರಕಲ್ಲು ” ಎಂದು ಕರೆಸಿಕೊಳ್ಳುವ ಸ್ಥಳಗಳಿವೆ.ಅಲ್ಲೆಲ್ಲಾ ಕಾಣಸಿಗಬಹುದು ಬೃಹತ್ ಶಿಲಾ ಸಮಾಧಿಗಳು.ಬೋರುಕಟ್ಟೆ ಸಮಾಧಿಯು ಸಣ್ಣ ರಂಧ್ರದ( Pot-hole) ಸಮಾಧಿ.ಇದರ ಮೇಲೆ ತೆಳುವಾದ ಕಲ್ಲು ಚಪ್ಪಡಿಗಳ ಒಂದು ಚಪ್ಪರ ಇದೆ.ಮಾನವ ಆ ವೇಳೆಗೆ ಲೋಹದ ಮುಖ್ಯವಾಗಿ, ಕಬ್ಬಿಣದ ಉಪಯೋಗ ಪಡೆದಿದ್ದನೆಂಬುದಕ್ಕೆ ಇದು ಸಾಕ್ಷಿ.ಇಲ್ಲಿನ ಬೃಹತ್ ಶಿಲಾಯುಗದ ಸ್ಮಾರಕಗಳು ಸುಮಾರು ಕ್ರಿ.ಪೂ.4ನೆಯ ಶತಮಾನ ಮತ್ತು ಅನಂತರದ ಕಾಲವೆಂದು ಅಂದಾಜಿಸಬಹುದು.ಆದರೆ ವೈಜ್ಞಾನಿಕವಾಗಿ ಉತ್ಖನನ ಕಾರ್ಯ ನಡೆಯುವ ವರೆಗೆ ಈ ಕಾಲವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ.

ಪದಗಳ ಮೂಲ

ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ನಂತರ ಇಲ್ಲಿರುವ ಕರಿಬಂಡೆಗಳಿಂದ "ಕರಿಕಲ್ಲು"ಎಂದು ಜನಜನಿತವಾಗಿತ್ತು.ಕಾರ್ಕಳವನ್ನು ತುಳುವರು "ಕಾರ್ಲ" ಎಂದು ಕರೆಯುತ್ತಾರೆ ಹಾಗೆ ಕೊಂಕಣಿಯಲ್ಲಿ ಕಾರ್ಕೊಳ್ ಎಂದು ಕರೆಯುತ್ತರೆ. ೩೦೦ ವರ್ಷಗಳ ಜೈನರ ಆಳ್ವಿಕೆಯಿಂದಾಗಿ "ಜೈನ ತೀರ್ಥ" ಎಂದು ಪ್ರಸಿದ್ದವಾಗಿದೆ.ಕೆಲವರು ಕಾರ್ಕಳ ಎನ್ನುವ ಹೆಸರು 'ಕರಿ ಕೊಳ 'ಅ೦ದರೆ 'ಆನೆಕೆರೆ 'ಇದರಿ೦ದ ಬ೦ತು ಎ೦ದು ವಾದಿಸುತ್ತಾರೆ

ಇತಿಹಾಸ ಪ್ರಸಿಧ್ದ ವ್ಯಕ್ತಿಗಳು

ಅಲುಪರು ಕಾರ್ಕವನ್ನಾಳಿದವರಲ್ಲಿ ಮೊದಲಿಗರು ತದನನಂತರ ಸಂತರರು ಆಳ್ವಿಕೆಯನ್ನು ಮುಂದುವರೆಸಿದರು.

ಸಂಸ್ಕೃತಿ

ಕಾರ್ಕಳದ ಮುಖ್ಯ ಭಾಷೆ ತುಳು ಆಗಿರುತ್ತದೆ.ಕೊಂಕಣಿಗಳು,ಕೆಥೊಲಿಕ್ ಕ್ರಿಶ್ಛಿಯನ್ರು,ಕುಡುಬಿಯವರು ತಮ್ಮೊಳಗೆ ಅವರದ್ದೆ ಶೈಲಿಯಲ್ಲಿ ಕೊಂಕಣಿ ಮಾತನಾಡುತ್ತಾರೆ.

"https://kn.wikipedia.org/w/index.php?title=ಕಾರ್ಕಳ&oldid=291140" ಇಂದ ಪಡೆಯಲ್ಪಟ್ಟಿದೆ