ಭಾರತದ ತ್ರಿವರ್ಣ ಧ್ವಜ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೯೭ ನೇ ಸಾಲು: ೯೭ ನೇ ಸಾಲು:
[[nn:Det indiske flagget]]
[[nn:Det indiske flagget]]
[[no:Indias flagg]]
[[no:Indias flagg]]
[[or:ଭାରତୀୟ ଜାତୀୟ ପତାକା]]
[[pl:Flaga Indii]]
[[pl:Flaga Indii]]
[[pt:Bandeira da Índia]]
[[pt:Bandeira da Índia]]

೦೧:೩೪, ೧೫ ಆಗಸ್ಟ್ ೨೦೧೨ ನಂತೆ ಪರಿಷ್ಕರಣೆ

ಭಾರತದ ತ್ರಿವರ್ಣ ಧ್ವಜ

ಭಾರತದ ರಾಷ್ತ್ರೀಯ ಧ್ವಜ'ದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು, ಈ ಸಭೆ.

ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ (dominion) ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ - ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ.

ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳುಪು, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ,ಮತ,ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರ ದ್ವಜ ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರ ದ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ .ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶ ಭಕ್ತಿ ಎನ್ನುತೇವೆ. ಅಂದಿನ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರು ೧೯೪೭ ಜುಲೈ ೨೨ ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. ನಮ್ಮ ಸರಕಾರವು ದ್ವಜ ಕೇವಲ ಕೈ ನೆಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು.ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ ಆದರೆ ಅದು ಕೈ ನೂಲು ಮತ್ತು ಕೈ ನೆಯ್ಗೆಯದೇ ಇರಬೇಕು.ಕೇಸರಿ-ಬಿಳಿ-ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿ ಚಕ್ರವು ಹೆಚ್ಹು ಕಡಿಮೆ ಬಿಳಿ ಬಣ್ಣದ ಅದ್ದಗಳಷ್ಟಿದ್ದು ಇಪ್ಪತ್ತುನಾಲ್ಕು ರೇಖೆಗಳಿವೆ. ದ್ವಜದ ಉದ್ದ ಮತ್ತು ಅಗಲ ೩:೨ ಪ್ರಮಾಣದಲ್ಲಿರತಕ್ಕದ್ದು ಎಂದು ತಿಳಿಸಿದೆ.ರಾಷ್ಟ್ರ ಧ್ವಜ ತಯಾರಿಸುವ ಹಕ್ಕು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ, ಉತ್ತರ ಕರ್ನಾಟಕದಾದ್ಯಂತ ಒಟ್ಟು ೫೨ ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ..ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು.ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ.

ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ,ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರ ದ್ಯೇಯಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಲಿಯಪದಿಸುವುದೇ ನಮ್ಮ ರಾಷ್ಟ್ರ ದ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ. ನಮ್ಮ ರಾಷ್ಟ್ರ ದ್ವಜದ ಬಣ್ಣಗಳು ಕೇಸರಿ:- ಧೈರ್ಯ,ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ಬಲಿದಾನಗಳ ಸಂಕೇತವಾಗಿದೆ. ಬಿಳಿ ಬಣ್ಣ :-ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ. ಹಸಿರು ಬಣ್ಣ;- ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಸಂಬಂದಗಳ ಸಂಕೇತವಾಗಿದೆ.ರಾಷ್ಟ್ರ ದ್ವಜವನ್ನು ಹಾರಿಸಿದ ನಂತರ ರಾಷ್ಟ್ರ ಗೀತೆಯನ್ನು ಹಾಡಬೇಕು.

ರಾಷ್ಟ್ರ ದ್ವಜವನ್ನು ಸರಿಯಾಗಿ ಪ್ರದರ್ಶನ ಮಾಡುವ ಕೆಲವು ವಿಧಾನಗಳು.

  • ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು.ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು.
  • ರಾಷ್ಟ್ರ ದ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ,ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ.
  • ಸ್ವಾತಂತ್ರೋತ್ಸವ,ಗಣರಾಜ್ಯೋತ್ಸವ ಮತ್ತು ಗಾಂದೀ ಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರ ಮಟ್ಟದ ಆಚರಣೆಯ ಸಂದರ್ಬಹಗಳಲ್ಲಿ ರಾಷ್ಟ್ರ ದ್ವಜವನ್ನು ಹಾರಿಸಬಹುದು.
  • ದ್ವಜ ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸತಕ್ಕದ್ದು.
  • ರಾಷ್ಟ್ರ ದ್ವಜವನ್ನು ಉರಿಸುವುದಾಗಲಿ,ಕೆಡಿಸುವುದಾಗಲಿ,ಕಾಲಡಿಯಲ್ಲಿ ಹಾಕುವುದಾಗಲಿ,ಹಾಳುಗೆದುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ,ಮಾತು,ಬರಹ ಅಥವಾ ಕೃತ್ಯದ ಮೂಲಕ

ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋದಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು.

  • ಹವಾಮಾನದ ವೈಪರೀತ್ಯದಿಂದ ದ್ವಾಜವು ಹಾಳಾಗದಂತೆ ಹಾರುತ್ತಿರುವ ದ್ವಜವನ್ನು ಕಾಪಾಡಬೇಕು.
  • ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಬಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ದ್ವಜ ಕೋಲಿನಿಂದ ಅದನ್ನು ಹಾರಿಸ ತಕ್ಕದು
  • ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅದ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರ ದ್ವಜ ಹಾರಾಡತಕ್ಕದ್ದು
  • ಶಾಲೆ ಕಾಲೇಜುಗಳು,ಕ್ರೀಡಾ ಶಿಬಿರಗಳು,ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರ ದ್ವಜ ಹಾರಿಸಬಹುದು.

ನಮನ*




ಟೆಂಪ್ಲೇಟು:Link FA

ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA