ಉಸೈನ್ ಬೋಲ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.3) (Robot: Adding bn:উসেইন বোল্ট
ಚು r2.7.2) (Robot: Adding io:Usain Bolt
೫೪ ನೇ ಸಾಲು: ೫೪ ನೇ ಸಾಲು:
[[hu:Usain Bolt]]
[[hu:Usain Bolt]]
[[id:Usain Bolt]]
[[id:Usain Bolt]]
[[io:Usain Bolt]]
[[is:Usain Bolt]]
[[is:Usain Bolt]]
[[it:Usain Bolt]]
[[it:Usain Bolt]]

೧೧:೧೨, ೩೦ ಜುಲೈ ೨೦೧೨ ನಂತೆ ಪರಿಷ್ಕರಣೆ

ಚಿತ್ರ:Usain bolt two.jpg
ಯುಸೈನ್ ಬೋಲ್ಟ್

(ಹುಟ್ಟು: ಆಗಸ್ಟ್ ೨೧, ೧೯೮೬)

ಯುಸೈನ್ ಬೋಲ್ಟ್ ಜಮೈಕ ದೇಶದ ಒಬ್ಬ ಓಟಗಾರ. ೧೦೦ ಮೀಟರ್ ಓಟ ಹಾಗು ೨೦೦ ಮೀಟರ್ ಓಟ ಸ್ಪರ್ಧೆಗಳಲ್ಲಿ ವಿಶ್ವ ಹಾಗು ಒಲಂಪಿಕ್ ದಾಖಲೆಗಳನ್ನು ಹೊಂದಿರುವಾತ. ೨೦೦೮ರ ಬೀಜಿಂಗ್ ಒಲಂಪಿಕ್ಸ್ ಅಲ್ಲಿ ಈ ಎರಡು ಸ್ಪರ್ಧೆಗಳನ್ನಲ್ಲದೆ, ಜಮೈಕದ ಇತರ ತಂಡಗಾರರೊಂದಿಗೆ ೪ x ೧೦೦ ಮೀಟರ್ ರಿಲೇ ಸ್ಪರ್ಧೆಯಲ್ಲೂ ವಿಶ್ವದಾಖಲೆ ಸೃಷ್ಟಿಸಿ, ಇತಿಹಾಸದಲ್ಲಿ ಒಂದೇ ಒಲಂಪಿಕ್ಸ್ ನಲ್ಲಿ 'ಯುಸೈನ್ ಬೋಲ್ಟ್', ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಮೂರರಲ್ಲೂ ವಿಶ್ವದಾಖಲೆಗಳನ್ನು ಮುರಿದ ಮೊದಲಿಗರಾದರು. ಮತ್ತೊಬ್ಬ 'ಅಮೆರಿಕನ್ ಸ್ಪ್ರಿಂಟ್ ಓಟಗಾರ', 'ಕಾರ್ಲ್ ಲ್ಯೂಯಿಸ್,' ರವರು, ೧೯೮೪ ರಲ್ಲಿ, ಒಂದೇ ಒಲಿಂಪಿಕ್ಸ್ ನಲ್ಲಿ,'ಸ್ಪ್ರಿಂಟ್ ಓಟ,' ದಲ್ಲಿ ೩ ವಿಶ್ವದಾಖಲೆಗಳನ್ನು ಸ್ಥಾಪಿಸಿದ್ದರು. 'ಬೋಲ್ಟ್,' ತಮ್ಮ, '೨೩ ನೇ ಜನ್ಮದಿನದ ಮುನ್ನಾದಿನ,' , 'ಒಲಂಪಿಕ್ ಕ್ರೀಡಾಂಗಣ,' ದಲ್ಲಿ ನಡೆದ, 'ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್,' ನ ೧೦೦ ಮೀ. ಓಟದ ಸ್ಪರ್ಧೆಯಲ್ಲಿ '೯.೫೮ ಸೆಕೆಂಡ್,' ಗಳಲ್ಲಿ ಓಟ ಪೂರೈಸಿ, ತಮ್ಮದೇ 'ವಿಶ್ವದಾಖಲೆ,' ಯನ್ನು ಸುಧಾರಿಸಿಕೊಂಡಿದ್ದರು. (ರಿಯಾಕ್ಷನ್ ಟೈಮ್ ೦.೧೪೬ ಸೆಕೆಂಡ್ ಗಳು).

ಚಿತ್ರ:Usain bolt one.jpg
'ಯುಸೈನ್ ಬೋಲ್ಟ್, ಓಡುವ ಸ್ಪ್ರರ್ಧೆಯಲ್ಲಿ'

ಬಾಲ್ಯದ ದಿನಗಳು

'ಬೋಲ್ಟ್,' ೨೧, ಆಗಸ್ಟ್ ೧೯೮೬ ರಲ್ಲಿ, ಜಮೈಕ ದ, 'ಶೆರ್ ವುಡ್ ಕಂಟೆಂಟ್,' ಚಿಕ್ಕ ಪಟ್ಟಣ, 'ಟ್ರೆಲೌನಿ,' ಯಲ್ಲಿ ಜನಿಸಿದರು. ತಂದೆ, 'ವೆಲ್ಲೆಸ್ಲೆ ಬೋಲ್ಟ್', ತಾಯಿ 'ಜೆನೆಫರ್' , ಗಳ ಜೊತೆಯಲ್ಲಿ ಬೆಳೆದರು. ಅವರ ಸೋದರ, 'ಸಿದ್ದೀಕಿ,' ಮತ್ತು ತಂಗಿ, 'ಶೆರೀನ್,' ತಂದೆ, 'ವೆಲ್ಲೆಸ್ಲೆ ಬೋಲ್ಟ್', ಅಲ್ಲಿನ ಸ್ಥಾನೀಯ " ದಿನಬಳಕೆ ಸಾಮಾನಿನ ದಿನಸಿ-ಅಂಗಡಿ," ನಡೆಸುತ್ತಿದ್ದರು.

ಸ್ಪ್ರಿಂಟ್ ಓಟದಲ್ಲಿ ಮೊದಲಿನಿಂದಲೂ ತೀವ್ರ ಆಸಕ್ತಿಯಿತ್ತು

'ಯುಸೈನ್ ಬೋಲ್ಟ್,' ಚಿಕ್ಕ ವಯಸ್ಸಿನಲ್ಲಿ, ಅವರ ಸೋದರನ ಜೊತೆ, ಬೀದಿಗಳಲ್ಲಿ ಕ್ರಿಕೆಟ್, ಫುಟ್ಬಾಲ್ [ಸಾಕರ್] ಆಟದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದರು. ಬಾಲ್ಯದಲ್ಲಿ, ಕ್ರಿಕೆಟ್ ಮತ್ತು ಕ್ರೀಡೆಗಳನ್ನು ಬಿಟ್ಟರೆ, ಬೇರೆಯೇನೂ ತಲೆಯಲ್ಲಿ ಹೊಳೆಯುತ್ತಿರಲಿಲ್ಲ ವೆಂದು, ನೆನೆಸಿಕೊಳ್ಳುತ್ತಿದ್ದರು.

'ಯುಸೈನ್ ಬೋಲ್ಟ್', 'ವಾಲ್ಡೆನ್ಸಿಯ ಶಾಲೆ, ಯಲ್ಲಿ

'ಯುಸೈನ್ ಬೋಲ್ಟ್', 'ವಾಲ್ಡೆನ್ಸಿಯ ಶಾಲೆ,' ಗೆ, ಎಲ್ಲಾ ವಯಸ್ಸಿನ ಹುಡುಗರ ಪ್ರಾಥಮಿಕ-ಶಾಲೆಗೆಸೇರಿದರು. ಇಲ್ಲಿ ಅವರ ವೇಗದ ಓಟದ ಸಾಮರ್ಥ್ಯದ ಅರಿವಾಯಿತು. ವಾರ್ಷಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದಾಗ, ೧೨ ನೆ ವಯಸ್ಸಿಗೇ ಸ್ಕೂನಿನಲ್ಲೇ ಅತಿವೇಗಿ ಓಟಗಾರನೆಂದು ಗುರುತಿಸಲ್ಪಟ್ಟರು.' ವಾರ್ಷಿಕ ನ್ಯಾಷನಲ್ ಓಟ', ಪ್ರೈಮರಿಸ್ಕೂಲ್ ನ ಪ್ಯಾರಿಶ್ ಸಭೆಯಲ್ಲಿ ೧೨ ನೇ ವಯಸ್ಸಿಗೇ ಬೋಲ್ಟ್, ಅವರ ಶಾಲೆಯ '೧೦೦ ಮೀ ಸ್ಪ್ರಿಂಟ್,,' ಓಡುಗರಲ್ಲಿ ಪ್ರಥಮರಾಗಿದ್ದರು. 'ವಿಲಿಯಮ್ ನಿಬ್ ಮೆಮೋರಿಯಲ್ ಹೈಸ್ಕೂಲ್,' ಸೇರಿದಾಗ, ಬೋಲ್ಟ್ ರವರ ಧ್ಯಾನ, ಬೇರೆ-ಬೇರೆ ಆಟಗಳಕಡೆ ವಾಲಿತು. ಅವರ ಕ್ರಿಕೆಟ್ ಕೋಚ್, ಗಮನಿಸಿದಂತೆ, ಬೋಲ್ಟ್ ರ ವೇಗದ ಓಟ, 'ಟ್ರ್ಯಾಕ್ ಮತ್ತು ಫೀಲ್ಡ್ ಇವೆಂಟ್ಸ್', ಗಳನ್ನು ಹೆಚ್ಚು-ಹೆಚ್ಚು ಅಭ್ಯಾಸಮಾಡಲು ಆಗ್ರಹ ಅವರ ಪ್ರಯತ್ನದ ಮೇಲಿತ್ತು. ಕೋಚ್ 'ಪ್ಯಾಬ್ಲೊ ಮ್ಯಾಕ್ ನೆಲ್', ಹಿಂದಿನ ೧೦೦ ಮೀ ಒಲಂಪಿಕ್ ಖಿಲಾಡಿ ಹಾಗೂ 'ಡ್ವಾಯ್ನ್ ಬ್ಯಾರೆಟ್ ಬೋಲ್ಟ್,' ಗೆ, ಕೋಚ್ ಮಾಡಿದರು. ಸ್ಕೂಲಿನ ಇತಿಹಾಸದಲ್ಲಿ ಅನೇಕ ಅಥ್ಲೆಟ್ ಗಳಿದ್ದರು. ಹಳೆಯ ಹುಡುಗರ ಪೈಕೆ, ಮಿಂಚಿನ ಓಟಗಾರ, ಮೈಖೇಲ್ ಗ್ರೀರನ್ನೂ ಸೇರಿದಂತೆ, ಬೋಲ್ಟ್ ಪ್ರಥಮ ವಾರ್ಷಿಕ ಹೈಸ್ಕೂಲ್ ಛಾಂಪಿಯನ್-ಶಿಪ್ ಮೆಡಲ್ ೨೦೦೧ ರಲ್ಲಿ, ಬೆಳ್ಳಿಯ ಪದಕ ಪಡೆದು, ೨೦೦ ಮೀ ೨೨.೦೪ ಸೆಕೆಂಡ್ ಗಳಲ್ಲಿ 'ಮ್ಯಾಕ್ನೆಲ್,' ತಕ್ಷಣ ಅವರ ಪ್ರೈಮರಿ ಶಾಲೆಯ ಕೋಚ್ ಆದರು. ಇಬ್ಬರೂ ಅರ್ಥಮಾಡಿಕೊಂಡು ಸಂತೋಷದಿಂದ ಮುಂದುವರೆದರು. ಬೋಲ್ಟ್ ರ ಮನಸ್ಸಿಟ್ಟು ಆಡದ ವಜೆಯಿಂದಾಗಿ, ಕೆಲವು ವೇಳೆ, ಮ್ಯಾಕ್ನೆಲ್ ರಿಗೆ ಅವರು ಕೊಟ್ಟ ಪರಿಣಿತಿ ಪೋಲಾಯಿತಲ್ಲ ಎಂದು ,ಬೇಸರವಾಗುತ್ತಿತ್ತು.

ಮೊದಲ ಸ್ಪರ್ಧೆಗಳು

"ಕೆರೇಬಿಯನ್ ರೀಜನಲ್ ಪ್ರತಿಯೋಗಿತೆ", ಸಮಯದಲ್ಲಿ, 'ಯುಸೈನ್ ಬೋಲ್ಟ್' ಜಮೈಕಾಕ್ಕೆ ಸ್ಪರ್ದಿಸಿದರು. ೪೦೦ ಮೀ. ಓಟದಲ್ಲಿ ಬೋಲ್ಟ್ ತೆಗೆದುಕೊಂಡ ಸಮಯ, [ಅದು ಅವರ ವೈಕ್ತಿಕ ಹೆಚ್ಚು]. ೪೮.೨೮ ಸೆಕೆಂಡ್. ೨೦೦೧ ರ 'CARIFTA,' ೨೦೦ ಮೀ. ಗೇಮ್ಸ್ ಸ್ಪರ್ಧೆಯ, ಓಟದಲ್ಲೂ ೨೧.೮೧ ಸೆಕೆಂಡ್ ನಲ್ಲಿ ಮುಗಿಸಿ, ಅವರು ರಜತ ಪದಕ ಗೆದ್ದರು. ೧೬, ಆಗಸ್ಟ್, ೨೦೦೯ ರಂದು, ಬರ್ಲಿನ್ ನಗರದಲ್ಲಿ ಆಯೋಜಿಸಲಾಗಿದ್ದ, ೧೨ ನೇ '(IAAAF),' 'ವಾರ್ಷಿಕ ಅಥ್ಲೆಟಿಕ್ ಪ್ರತಿಯೋಗಿತೆ,' ಯಲ್ಲಿ 'ಯುಸೈನ್ ಬೋಲ್ಟ್,' ರವರು, 'ಸ್ಪ್ರಿಂಟ್,' ನ ಮತ್ತೊಂದು, ಹೊಸ ಇತಿಹಾಸಕ್ಕೆ ಮುನ್ನುಡಿಯಾಗಿದ್ದಾರೆ. '೧೦೦ ಮೀ 'ಸ್ಪ್ರಿಂಟ್ ಓಟದ ಇತಿಹಾಸ,' ದಲ್ಲೇ ಜಮೈಕಾ ಮೂಲದ ಈ ಅಥ್ಲೆಟ್, ಮತ್ತೊಮ್ಮೆ 'ವಿಶ್ವದ- ಪರಮ-ವೇಗಿ-ಸ್ಪ್ರಿಂಟರ್,' ಎಂದು, ಹೊರಹೊಮ್ಮಿದ್ದಾರೆ.

ನಂಬಲಾಗದಂತಹ ದಾಖಲೆಗಳ ರಾಜ-'ಯುಸೈನ್ ಬೋಲ್ಟ್'

'ಬರ್ಲಿನ್ ನಗರ,' ದಲ್ಲಿ ನಡೆದ, 'ವಿಶ್ವ ಅಥ್ಲೆಟಿಕ್ಸ್ ಛಾಂಪಿಯನ್ ಶಿಪ್,' ನಲ್ಲಿ, ಒಂದಾದರೊಂದರಂತೆ,ನಂಬಲಾರದಷ್ಟು ದಾಖಲೆಗಳನ್ನು ಸೃಷ್ಟಿಸುತ್ತಿರುವ ಯುಸೈನ್ ಬೋಲ್ಟ್ ರ ಸಾಧನೆಗಳನ್ನು ಕಂಡ ವಿಶ್ವದ ಜನರೆಲ್ಲಾ ಮೂಗಿನ ಮೇಲೆ ಕೈಯಾಡಿಸುತ್ತಿದ್ದಾರೆ. " ನಾನು ನಿಷೇಧಿತ ಉದ್ದೀಪನಾ ಔಷಧಿಗಳ ಸೇವನೆಮಾಡದೆ ನನ್ನ ನಿರ್ಮಲತೆಯನ್ನು ಕಾಪಾಡಿಕೊಂಡು ಈ ಸಾಧನೆಗಳನ್ನು ಮಾಡಿದ್ದೇನೆ. ಇದರಿಂದ ನನಗೆ ಅತೀವ ಆನಂದವಾಗಿದೆ " ಎಂದು ಹೆಮ್ಮೆಯಿಂದ ನುಡಿದ 'ಯುಸೈನ್ ಬೋಲ್ಟ್,' ರವರು ತೃಪ್ತಿಯಿಂದ ಬೀಗುತ್ತಿದ್ದರು. ಸುಮಾರು ೧ ವರ್ಷದ ಹಿಂದೆ,'ಬೀಜಿಂಗ್ ಒಲಂಪಿಕ್ಸ್,' ನಲ್ಲಿ, ಪುರುಷರ ೨೦೦ ಮೀ. ಸ್ಪರ್ಧೆಯಲ್ಲಿ ಗುರಿಯನ್ನು ಕೇವಲ '೧೯.೧೯ ಸೆ,' ನಲ್ಲಿ ಕ್ರಮಿಸಿ, ತಮ್ಮ ಹೆಸರಿನಲ್ಲಿದ್ದ 'ವಿಶ್ವದಾಖಲೆ,' ಯನ್ನು ಮತ್ತಷ್ಟು ಉತ್ತಮಪಡಿಸಿದರು. ಇದಕ್ಕೆ ಮೊದಲು ೧೯.೩೦ ಸೆ. ಗುರಿಯನ್ನು ಕ್ರಮಿಸಿದ್ದ ಬೋಲ್ಟ್ ರವರು, ಆಗಲೇ ವಿಶ್ವದಾಖಲೆಗೆ ಸೇರ್ಪಡೆಯಾಗಿದ್ದರು. ಅಂದರೆ, ಸುಮಾರು '೦.೧೧೩,' 'ರಿಯಾಕ್ಷನ್ ಟೈಮ್', ಸೆಕೆಂಡ್, ನಷ್ಟು ಹೆಚ್ಚಿನ ಸಾಧನೆಮಾಡಿದಂತಾಗಿದೆ. ಈಗ ಅವರು ಒಲಂಪಿಕ್ ಮತ್ತು ವಿಶ್ವ-ಛಾಂಪಿಯನ್ ಶಿಪ್ ನಲ್ಲಿ ೧೦೦ ಮತ್ತು ೨೦೦ ಮೀ. ಓಟದಸ್ಪರ್ಧೆಯಲ್ಲಿ ಒಂದೇಬಾರಿ ವಿಶ್ವದಾಖಲೆಸಹಿತ ಸ್ವರ್ಣ ಪದಕ ಗೆದ್ದುಕೊಂಡ ಏಕೈಕ ಓಟಗಾರರಾಗಿದ್ದಾರೆ.

ಯುಸೈನ್ ಬೋಲ್ಟ್, ರಿಗೆ, ’ಆರ್ಡರ್ ಆಫ್ ಜಮೈಕಾ’,ಪ್ರಶಸ್ತಿ

ವಿಶ್ವದ ’ಸ್ಪ್ರಿಂಟ್ ಬಿರುಸಿನ ಓಟ’ ದಲ್ಲಿ, ಈಗಾಗಲೇ ಮೇರುಮಟ್ಟದಲ್ಲಿ ಶೋಭಿಸುತ್ತಿರುವ ಮಿಂಚಿನ ಓಟಗಾರ 'ಯುಸೈನ್ ಬೋಲ್ಟ್', ’ಆರ್ಡರ್ ಆಫ್ ಜಮೈಕಕಾ’, ಪದಕದಿಂದ ಅಲಂಕೃತರ‍ಾಗಿದ್ದಾರೆ. ೨೨ ವರ್ಷದ ಹರೆಯದ, 'ಯುಸೈನ್ ಬೋಲ್ಟ್', ಈ ಗೌರವ ಪಡೆದ ಅತ್ಯಂತ ಕಿರಿಯರೆನ್ನಿಸಿದ್ದಾರೆ. ’ಜಮೈಕ ದೇಶ’ದ ಅತ್ಯುನ್ನತ ಗೌರವವಾದ ಈ ಪ್ರಶಸ್ತಿಯನ್ನು ೨೧, ಅಕ್ಟೋಬರ್, ೨೦೦೯ ರಂದು ಪ್ರದಾನಮಾಡಲಾಯಿತು. ಇದೇ ಗೌರವವನ್ನು ಪಡೆದ ಹಿರಿಯರು, 'ಅಂತಾರಾಷ್ಟ್ರೀಯ ಖ್ಯಾತಟ್ರಿಬ್ಯುನಲ್ ನ್ಯಾಯಾಧೀಶ', ’ಡಾ. ಪ್ಯಾಟ್ರಿಕ್ ರಾಬಿನ್ಸನ್’, ಮತ್ತು ವೆಸ್ಟ್ ಇಂಡೀಸ್ ನ, ’ವಿವಿಯ ಪ್ರೊ. ಗಾರ್ಡನ್ ಶಿರ್ಲಿ, ’ಯವರು.