ಗಂಗೋತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.5) (Robot: Adding ta:கங்கோத்ரி
ಚು r2.7.2) (Robot: Adding bn:গঙ্গোত্রী
೫೨ ನೇ ಸಾಲು: ೫೨ ನೇ ಸಾಲು:
[[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
[[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]


[[bn:গঙ্গোত্রী]]
[[bpy:গঙ্গোত্তরি]]
[[bpy:গঙ্গোত্তরি]]
[[de:Gangotri (Ort)]]
[[de:Gangotri (Ort)]]

೨೦:೫೨, ೨೮ ಜುಲೈ ೨೦೧೨ ನಂತೆ ಪರಿಷ್ಕರಣೆ

ಗಂಗೋತ್ರಿ
ಗಂಗೋತ್ರಿ
Population
 (2001)
 • Total೬೦೬


ಗಂಗೋತ್ರಿ ಭಾರತಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಒಂದು ತೀರ್ಥಕ್ಷೇತ್ರ. ಭಾಗೀರಥಿ ನದಿಯ ದಂಡೆಯಲ್ಲಿರುವ ಗಂಗೋತ್ರಿ ಹಿಮಾಲಯದ ಪವಿತ್ರ ಚತುರ್ಧಾಮಗಳ ಪೈಕಿ ಒಂದು. ಹಿಮಾಲಯದ ಉನ್ನತ ಪ್ರದೇಶದಲ್ಲಿರುವ ಗಂಗೋತ್ರಿ ಸಮುದ್ರಮಟ್ಟದಿಂದ ೩,೦೪೨ ಮೀ. ಎತ್ತರದಲ್ಲಿದೆ. ಉತ್ತರಾಖಂಡದ ಮುಖ್ಯ ನಗರಗಳಾದ ಹರಿದ್ವಾರ, ರಿಷಿಕೇಶ ಮತ್ತು ಡೆಹ್ರಾ ಡೂನ್‍‍ಗಳಿಂದ ಒಂದು ದಿನದ ಪ್ರಯಾಣ ಮಾಡಿ ಗಂಗೋತ್ರಿಯನ್ನು ತಲುಪಬಹುದು. ಯಮುನೋತ್ರಿಯಿಂದಾದರೆ ಎರಡು ದಿನಗಳ ಪ್ರಯಾಣ. ಗಂಗೋತ್ರಿಯವರೆಗೆ ವಾಹನಗಳು ಸಾಗಬಲ್ಲವಾದ್ದರಿಂದ ಇಲ್ಲಿಗೆ ಬರುವ ಯಾತ್ರಿಗಳ ಸಂಖ್ಯೆ ಯಮುನೋತ್ರಿಗೆ ಹೋಲಿಸಿದರೆ ಹೆಚ್ಚು. ಜೊತೆಗೆ ಗಂಗೋತ್ರಿ ಯಮುನೋತ್ರಿಗಿಂತ ಹೆಚ್ಚು ಪಾವನವೆಂದು ಜನರ ನಂಬಿಕೆ.

ಗಂಗೋತ್ರಿ ದೇವಾಲಯ

ಗಂಗೋತ್ರಿ ಗಂಗಾ ನದಿಯ ಉಗಮಸ್ಥಾನವಾಗಿದೆ. ಇಲ್ಲಿ ಗಂಗೆಯು ಭಾಗೀರಥಿ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವಳು. ಮುಂದೆ ದೇವಪ್ರಯಾಗದಲ್ಲಿ ಅಲಕನಂದಾ ನದಿಯೊಂದಿಗೆ ಸಂಗಮಿಸಿದ ನಂತರ ನದಿಗೆ ಗಂಗಾ ಎಂಬ ನಾಮಧೇಯ. ಗಂಗೋತ್ರಿಯಲ್ಲಿ ಗಂಗಾ ದೇವಿಯ ಆಲಯವು ಇದೆ. ದೇವಾಲಯದ ಪ್ರಾಂಗಣದಲ್ಲಿ ಗಂಗೆಯನ್ನು ಒಲಿಸಿಕೊಳ್ಳಲು ಭಗೀರಥ ಚಕ್ರವರ್ತಿಯು ತಪಸ್ಸನ್ನು ಮಾಡಿದನೆನ್ನಲಾಗುವ ಸ್ಥಳವನ್ನು ಸಹ ಗುರುತಿಸಲಾಗಿದೆ. ಗಂಗಾನದಿಯ ಮೂಲ ಗಂಗೋತ್ರಿಯಿಂದ ೧೮ ಕಿ.ಮೀ. ಮುಂದೆ ಉನ್ನತ ಪರ್ವತಗಳಲ್ಲಿ ಇರುವ ಗೋಮುಖ. ಗಂಗೋತ್ರಿಯಿಂದ ಇಲ್ಲಿಗೆ ಅತಿ ಕಠಿಣ ಕಾಲ್ನಡಿಗೆಯ ಹಾದಿ ಇದೆ. ಗಂಗೋತ್ರಿಯಲ್ಲಿ ಪ್ರತಿ ಸಂಜೆ ನಡೆಸಲಾಗುವ ಗಂಗಾ ಆರತಿ ಬಲು ಪ್ರಸಿದ್ಧ. ಚಳಿಗಾಲದ ೬ ತಿಂಗಳುಗಳ ಕಾಲ ಈ ಪ್ರದೇಶವು ಹಿಮದಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿರುತ್ತದೆ. ದೀಪಾವಳಿಯ ದಿನದಂದು ಗಂಗೋತ್ರಿ ದೇವಾಲಯವನ್ನು ಮುಚ್ಚಿ ಗಂಗೆಯ ವಿಗ್ರಹವನ್ನು ಹಾರ್ಸಿಲ್‌ ಬಳಿಯ ಮುಖ್ಬಾ ಗ್ರಾಮದಲ್ಲಿ ನೆಲೆಗೊಳಿಸಿ ಆರಾಧಿಸಲಾಗುತ್ತದೆ. ಮುಂದಿನ ಮೇ ತಿಂಗಳಲ್ಲಿ ಮತ್ತೆ ಗಂಗೋತ್ರಿ ದೇವಾಲಯವನ್ನು ತೆರೆಯಲಾಗುತ್ತದೆ. ಗಂಗೋತ್ರಿ ಮತ್ತು ಆಸುಪಾಸಿನ ಪ್ರದೇಶಗಳು ಗಂಗೋತ್ರಿ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿವೆ.


ಗಂಗೋತ್ರಿಯಲ್ಲಿ ಭಾಗೀರಥಿನದಿ
ಗಂಗಾ ನದಿಯ ಮೂಲ - ಗೋಮುಖ



ಇವನ್ನೂ ನೋಡಿ


ಬಾಹ್ಯ ಸಂಪರ್ಕಕೊಂಡಿಗಳು