ಮನೋಜ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.5.1) (Robot: Adding ar:مانوج كومار
ಚು r2.7.1) (Robot: Adding hi:मनोज कुमार
೧೯೬ ನೇ ಸಾಲು: ೧೯೬ ನೇ ಸಾಲು:
[[fr:Manoj Kumar]]
[[fr:Manoj Kumar]]
[[gu:મનોજ કુમાર]]
[[gu:મનોજ કુમાર]]
[[hi:मनोज कुमार]]
[[it:Manoj Kumar]]
[[it:Manoj Kumar]]
[[ml:മനോജ് കുമാർ]]
[[ml:മനോജ് കുമാർ]]

೦೧:೨೨, ೧೫ ಮಾರ್ಚ್ ೨೦೧೨ ನಂತೆ ಪರಿಷ್ಕರಣೆ

Manoj Kumar
Born
Harikishen Goswami

Other namesBharat Kumar
Manoj
Occupation(s)Actor , Director
Years active೧೯೫೭ - ೧೯೯೫ (Retired)
SpouseShashi Goswami

ಮನೋಜ್ ಕುಮಾರ್ (ಜನನ ೨೪ ಜುಲೈ ೧೯೩೭), ಅಬ್ಬೊತ್ತಾಬಾದ್, ಬ್ರಿಟಿಶ್ ಇಂಡಿಯಾ), ಬಾಲಿವುಡ್ ಚಿತ್ರೋದ್ಯಮದ ಪ್ರಶಸ್ತಿ ವಿಜೇತ ನಟ ಹಾಗು ನಿರ್ದೇಶಕ. ಇವರು ದೇಶಭಕ್ತಿ ಕಥಾಹಂದರವುಳ್ಳ ಚಿತ್ರಗಳಲ್ಲಿ ಪಾತ್ರವಹಿಸುವುದರ ಜೊತೆಗೆ ಅವುಗಳ ನಿರ್ದೇಶನಕ್ಕೂ ಹೆಸರುವಾಸಿಯಾಗಿದ್ದಾರೆ, ಹಾಗು ಇವರಿಗೆ "ಶ್ರೀಮಾನ್ ಭಾರತ್" ಎಂಬ ಉಪನಾಮವೂ ಇದೆ.(ಭಾರತ್ ಎಂಬುದು ಇಂಡಿಯಾದ ಸಂಸ್ಕೃತ ಹಾಗು ಹಿಂದಿ ಭಾಷೆಯ ಪದ). ೧೯೯೨ರಲ್ಲಿ, ಇವರು ಭಾರತ ಸರ್ಕಾರದಿಂದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದರು.

ಆರಂಭಿಕ ಜೀವನ

ಮನೋಜ್ ಕುಮಾರ್, ಅಂದಿನ ಬ್ರಿಟಿಶ್ ಇಂಡಿಯಾದ ಭಾಗವಾಗಿದ್ದ ಖೈಬರ್-ಪಖ್ತುಂಖ್ವಾಕ್ಕೆ ಸೇರಿದ ಪಟ್ಟಣ ಅಬ್ಬೊಟ್ಟಬಾದ್ ನಲ್ಲಿ ಜನಿಸಿದರು. ಇದೀಗ ಅಬ್ಬೊತ್ತಾಬಾದ್ ಪಾಕಿಸ್ತಾನದ ಗಡಿಯೊಳಗೆ ಸ್ಥಿತವಾಗಿದೆ. ಇವರ ಮೂಲ ಹೆಸರು ಹರಿಕಿಶನ್ ಗಿರಿ ಗೋಸ್ವಾಮಿ. ಇವರು ೧೦ ವರ್ಷದವರಿದ್ದಾಗ, ಇವರ ಗೊಸೈನ್ ಹಿಂದೂ ಕುಟುಂಬವು, ವಿಭಜನೆಯ ಕಾರಣದಿಂದಾಗಿ ಭಾರತಕ್ಕೆ ಸ್ಥಳಾಂತರಗೊಂಡಿತು. ಅವರು ನಂತರ ದೆಹಲಿಯ ವಿಜಯ್ ನಗರ್, ಕಿಂಗ್ಸ್ ವೇ ಕ್ಯಾಂಪ್ ನಲ್ಲಿ ನೆಲೆಗೊಂಡರು.

ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಿಂದ ಪದವಿ ಪಡೆದ ಬಳಿಕ, ಇವರು ಚಿತ್ರರಂಗ ಪ್ರವೇಶಿಸಲು ನಿರ್ಧರಿಸಿದರು.

ವೃತ್ತಿಜೀವನ

ಯುವಕನಾಗಿದ್ದಾಗ, ಇವರು ಬಾಲಿವುಡ್ ನ ಸೂಪರ್ ಸ್ಟಾರ್ ದಿಲೀಪ್ ಕುಮಾರ್ ರ ಅಭಿಮಾನಿಯಾಗಿದ್ದರು. ಜೊತೆಗೆ ಶಬನಮ್ ಚಿತ್ರದಲ್ಲಿನ ದಿಲೀಪ್ ರ ಪಾತ್ರದಿಂದ ಪ್ರಭಾವಿತರಾಗಿ ತಮ್ಮ ಹೆಸರನ್ನು ಮನೋಜ್ ಕುಮಾರ್ ಎಂದು ಬದಲಾಯಿಸಿಕೊಳ್ಳಲು ನಿರ್ಧರಿಸಿದರು.[ಸೂಕ್ತ ಉಲ್ಲೇಖನ ಬೇಕು]

ಆಗ ೧೯೫೭ರ ಚಲನಚಿತ್ರ ಫ್ಯಾಶನ್ ನಲ್ಲಿ ಪ್ರಥಮ ಬಾರಿಗೆ ಅಭಿನಯಿಸಿ ಅಲ್ಪ ಗಮನ ಸೆಳೆದ ನಂತರ, ಮನೋಜ್ ಕಾಂಚ್ ಕಿ ಗುಡಿಯಾ (೧೯೬೦) ಚಿತ್ರದಲ್ಲಿ ಸಯೀದಾ ಖಾನ್ ಗೆ ಜೊತೆಯಾಗಿ ನಾಯಕನ ಪಾತ್ರ ನಿರ್ವಹಿಸುತ್ತಾರೆ. ನಂತರ ಪಿಯಾ ಮಿಲನ್ ಕಿ ಆಸ್ ಹಾಗು ರೇಶ್ಮಿ ರುಮಾಲ್ ಚಿತ್ರಗಳು ಬಿಡುಗಡೆಯಾದವು. ನಂತರ ವಿಜಯ್ ಭಟ್ ನಿರ್ದೇಶನದ ಮೊದಲ ಚಿತ್ರ ಹರಿಯಾಲಿ ಔರ್ ರಾಸ್ತಾ (೧೯೬೨) ಚಿತ್ರದಲ್ಲಿ ಮಾಲಾ ಸಿನ್ಹಾಗೆ ಎದುರಾಗಿ ನಟಿಸಿದರು. ನಂತರ ಕುಮಾರ್ ರಾಜ್ ಖೊಸ್ಲಾ ನಿರ್ದೇಶನದ ವೋ ಕೌನ್ ಥಿ (೧೯೬೪) ಚಿತ್ರದಲ್ಲಿ ಸಾಧನಾರೊಂದಿಗೆ ಎದುರಾಗಿ ಕಾಣಿಸಿಕೊಂಡರು. ಜೊತೆಗೆ ಮತ್ತೊಮ್ಮೆ ಹಿಮಾಲಯ ಕಿ ಗೋದ್ ಮೇ (೧೯೬೫) ಚಿತ್ರಕ್ಕಾಗಿ ಮತ್ತೊಮ್ಮೆ ವಿಜಯ್ ಭಟ್ ಹಾಗು ಮಾಲಾ ಸಿನ್ಹಾ ಜೊತೆಗೆ ಕೆಲಸ ಮಾಡಿದರು.

ದೇಶಪ್ರೇಮಿ ನಾಯಕ

ಕುಮಾರ್ ೧೯೬೫ರ ಚಿತ್ರ ಶಹೀದ್ ನಿಂದ ದೇಶಪ್ರೇಮಿ ನಾಯಕನ ಪಾತ್ರವನ್ನು ನಿರ್ವಹಿಸಲು ಆರಂಭಿಸಿದರು. [೧]ಚಿತ್ರವು, ಭಾರತದ ಸ್ವತಂತ್ರ ಸಂಗ್ರಾಮದಲ್ಲಿ ಹುತಾತ್ಮನಾದ ಭಗತ್ ಸಿಂಗ್ ರ ಜೀವನಕಥೆಯನ್ನು ಆಧರಿಸಿದೆ. 1965ರ ಇಂಡೋ-ಪಾಕಿಸ್ತಾನದ ಯುದ್ಧದ ನಂತರ, ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ, ಜೈ ಜವಾನ್ ಜೈ ಕಿಸಾನ್ (ಯೋಧನಿಗೆ ಜಯವಾಗಲಿ, ರೈತನಿಗೆ ಜಯವಾಗಲಿ) ಎಂಬ ಜನಪ್ರಿಯ ಘೋಷವಾಕ್ಯವನ್ನು ಆಧರಿಸಿ ಚಿತ್ರ ನಿರ್ಮಿಸಬೇಕೆಂದು ಕೇಳಿಕೊಂಡರು.[ಸೂಕ್ತ ಉಲ್ಲೇಖನ ಬೇಕು]

ಇದರ ಪರಿಣಾಮವಾಗಿ ನಿರ್ಮಾಣವಾದದ್ದೇ ಕುಮಾರ್ ರ ಮಹತ್ವದ,ಕಲಾತ್ಮಕ ಹಾಗು ಅವರ ಪ್ರಥಮ ನಿರ್ದೇಶನದ ಚಿತ್ರ, ಉಪಕಾರ್ (೧೯೬೭). ಚಿತ್ರದಲ್ಲಿ ಅವರು ಯೋಧ ಹಾಗು ರೈತನ ಪಾತ್ರವೆರಡನ್ನೂ ನಿರ್ವಹಿಸಿದ್ದಾರೆ. ಚಿತ್ರವು, ಗುಲ್ಶನ್ ಬಾವ್ರಾ ರಚಿಸಿ, ಕಲ್ಯಾಣ್ ಜಿ-ಆನಂದ್ ಜಿ ಸಂಗೀತ ಸಂಯೋಜಿಸಿ, ಮಹೇಂದ್ರ ಕಪೂರ್ ಹಾಡಿರುವ ಪ್ರಸಿದ್ಧ ಮೇರೆ ದೇಶ್ ಕಿ ಧರ್ತಿ ಹಾಡಿನಿಂದಲೂ ಸಹ ಈ ಚಿತ್ರ ಗಮನ ಸೆಳೆದಿದೆ. ಉಪಕಾರ್ ಚಿತ್ರವು ಜನಪ್ರಿಯ ಯಶಸ್ಸನ್ನು ಗಳಿಸುವುದರ ಜೊತೆಗೆ ಕುಮಾರ್ ಗೆ ಮೊದಲ ಅತ್ಯುತ್ತಮ ನಿರ್ದೇಶಕ ಫಿಲಂಫೇರ್ ಪ್ರಶಸ್ತಿಯನ್ನು ಗಳಿಸಿಕೊಟ್ಟಿತು.

ನಂತರ ೧೯೬೦ರ ಉತ್ತರಾರ್ಧದಲ್ಲಿ ಹಲವಾರು ಪಾತ್ರಗಳಲ್ಲಿ ತೊಡಗಿಸಿಕೊಂಡ ಬಳಿಕ, ಮನೋಜ್ ದೇಶಪ್ರೇಮದ ಕಥಾಹಂದರವುಳ್ಳ ಚಿತ್ರ ಪೂರಬ್ ಔರ್ ಪಶ್ಚಿಮ್ ನಲ್ಲಿ(೧೯೭೦) ಮತ್ತೊಮ್ಮೆ ದೇಶಪ್ರೇಮಿಯ ಪಾತ್ರ ನಿರ್ವಹಿಸಿದರು, ಚಿತ್ರದಲ್ಲಿ ಪೂರ್ವ ಹಾಗು ಪಶ್ಚಿಮದ ಜೀವನವನ್ನು ಉದಾಹರಿಸಲಾಗಿದೆ. ನಂತರ ೧೯೭೨ರಲ್ಲಿ, ಅವರು ಬೇಯಿಮಾನ್ ಚಿತ್ರದಲ್ಲಿ ಅಭಿನಯಿಸಿದರು.(ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ ಪಡೆದರು.) ಜೊತೆಗೆ ಶೋರ್ (೧೯೭೨) ಚಿತ್ರವನ್ನು ನಿರ್ದೇಶಿಸಿ ಅದರಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಜಯಾ ಬಾಧುರಿ ಎದುರಾಗಿ ನಟಿಸಿದ ಶೋರ್ ಚಿತ್ರವು ಬಾಕ್ಸ್ ಆಫಿಸ್ ನಲ್ಲಿ ಸಾಧಾರಣ ಯಶಸ್ಸನ್ನು ಕಂಡಿತು. ಆದರೆ ಚಿತ್ರದಲ್ಲಿ ಏಕ್ ಪ್ಯಾರ್ ಕಾ ನಗ್ಮಾ ಹೈ ಎಂಬ ಒಂದು ಸ್ಮರಣೀಯ ಗೀತೆಯಿದೆ. ಲಕ್ಷ್ಮಿಕಾಂತ್-ಪ್ಯಾರೆಲಾಲ್ ಸಂಗೀತ ಸಂಯೋಜನೆಯ ಈ ಯುಗಳಗೀತೆಯನ್ನು ಲತಾ ಮಂಗೇಶ್ಕರ್ ಹಾಗು ಮುಕೇಶ್ ಹಾಡಿದ್ದಾರೆ.

ಆಗ ೧೯೭೬ರಲ್ಲಿ ಮನೋಜ್ ಕುಮಾರ್ ರೋಟಿ ಕಪಡಾ ಔರ್ ಮಕಾನ್ (೧೯೭೪), ಸನ್ಯಾಸಿ (೧೯೭೫) ಹಾಗು ದಸ್ ನಂಬರಿ(೧೯೭೬) ಚಲನಚಿತ್ರಗಳ ಮೂಲಕ ಒಂದರ ಹಿಂದೊಂದು ಮೂರು ಯಶಸ್ವೀ ಚಲನಚಿತ್ರಗಳನ್ನು ನೀಡುವುದರ ಮೂಲಕ ಇತಿಹಾಸ ಸೃಷ್ಟಿಸಿದರು.

ನಂತರದ ವೃತ್ತಿಜೀವನ

೧೯೭೦ರ ಮಧ್ಯಭಾಗವು ಕುಮಾರ್ ನಿರ್ದೇಶನದ ಮೂರು ಯಶಸ್ವೀ ಚಲನಚಿತ್ರಗಳನ್ನೂ ಕಂಡಿತು: ರೋಟಿ ಕಪಡಾ ಔರ್ ಮಕಾನ್ (೧೯೭೪), ಒಂದು ಸಾಮಾಜಿಕ ಚಿತ್ರವಾಗಿದ್ದು, ಜೀನತ್ ಅಮಾನ್, ಶಶಿ ಕಪೂರ್ ಹಾಗು ಅಮಿತಾಬ್ ಬಚ್ಚನ್ ರನ್ನು ಒಳಗೊಂಡಂತೆ ಬಹು ತಾರಾಗಣವನ್ನು ಒಳಗೊಂಡಿತ್ತು, ಚಿತ್ರದ ನಿರ್ದೇಶನಕ್ಕಾಗಿ ಅವರಿಗೆ ಅತ್ಯುತ್ತಮ ನಿರ್ದೇಶಕ ಫಿಲಂಫೇರ್ ಪ್ರಶಸ್ತಿಯನ್ನು ಗಳಿಸಿದರು; ಸನ್ಯಾಸಿ (೧೯೭೫) ಕುಮಾರ್ ಹಾಗು ಹೇಮಾಮಾಲಿನಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ ಧಾರ್ಮಿಕತೆ-ಆಧಾರಿಕ ಹಾಸ್ಯ ಚಲನಚಿತ್ರವಾಗಿದೆ; ಹಾಗು ದಸ್ ನಂಬರಿ (೧೯೭೫) ಚಲನಚಿತ್ರವೂ ಸಹ ಕುಮಾರ್ ಹಾಗು ಹೇಮಾ ಅವರ ತಾರಾಗಣ ಒಳಗೊಂಡಿದೆ. ೧೯೮೧ರಲ್ಲಿ, ತಾವು ಅತ್ಯಾಭಿಮಾನಿಯಾಗಿದ್ದ ದಿಲೀಪ್ ಕುಮಾರ್ ರನ್ನು ನಿರ್ದೇಶಿಸುವ ಅವಕಾಶ ದೊರೆತಾಗ ಜೊತೆಗೆ ಕ್ರಾಂತಿ ಚಿತ್ರದ ಪಾತ್ರ ನಿರ್ವಹಣೆಯಿಂದ ಕುಮಾರ್ ತಮ್ಮ ವೃತ್ತಿಜೀವನದ ಉತ್ತುಂಗಕ್ಕೇರಿದರು. ಚಿತ್ರವು ೧೯ನೇ ಶತಮಾನದಲ್ಲಿನ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಕಥಾಹಂದರವನ್ನು ಹೊಂದಿತ್ತು. ಅವರ ವೃತ್ತಿಜೀವನದಲ್ಲಿ ಕ್ರಾಂತಿ ಚಿತ್ರವು ಗಮನಾರ್ಹ ಯಶಸ್ಸು ಗಳಿಸಿದ ಕಡೆಯ ಚಲನಚಿತ್ರವಾಗಿದೆ. ಅವರು ಜನಪ್ರಿಯ ಯಶಸ್ಸು, ವಿಕ್ರಮ ಗಳಿಸಿದ ಪಂಜಾಬಿ ಚಲನಚಿತ್ರ ಜಾಟ್ ಪಂಜಾಬಿ ಯಲ್ಲೂ ನಟಿಸಿದ್ದಾರೆ.

ಕ್ರಾಂತಿ ಯ ನಂತರ, ೧೯೮೦ರಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಅವರ ಎಲ್ಲ ಚಿತ್ರಗಳು ಸೋಲಲು ಆರಂಭಿಸಿದಾಗ ಕುಮಾರ್ ರ ವೃತ್ತಿಜೀವನವು ಇಳಿಮುಖವಾಗತೊಡಗಿತು. ೧೯೮೯ರಲ್ಲಿ, ಅವರು ತಮ್ಮ ಚಿತ್ರ ಕ್ಲರ್ಕ್ ಗಾಗಿ ಪಾಕಿಸ್ತಾನಿ ತಾರೆಯರಾದ ಮೊಹಮ್ಮದ್ ಅಲಿ ಹಾಗು ಜೇಬಾರನ್ನು ಆಯ್ಕೆ ಮಾಡಿದರು. ಇದನ್ನು ಒಂದು ಪರಿವರ್ತನಾ ಘಟನೆ ಮತ್ತು ಅಪೂರ್ವವೆಂದು ಪರಿಭಾವಿಸಲಾಗುತ್ತದೆ. ೧೯೯೫ರ ತಮ್ಮ ಕಡೆಯ ಚಿತ್ರ ಮೈದಾನ್-ಎ-ಜಂಗ್ ನ ನಂತರ ನಟನೆಗೆ ವಿದಾಯ ಹೇಳಿದರು. ಅವರ ಪುತ್ರ, ಕುನಾಲ್ ಗೋಸ್ವಾಮಿ, ದೇಶಭಕ್ತಿಯ ಕಥಾಹಂದರವನ್ನು ಮತ್ತೆ ತೆರೆಯ ಮೇಲೆ ತರಲು ಪ್ರಯತ್ನಿಸಿದರು. ಆಗ ೧೯೯೯ರಲ್ಲಿ ಕುಮಾರ್ ಜೈ ಹಿಂದ್ ಎಂಬ ಚಿತ್ರವನ್ನು ನಿರ್ದೇಶಿಸಿದರು, ಚಿತ್ರವು ಗಲ್ಲಾಪಟ್ಟಿಯಲ್ಲಿ ಸೋತಿತು. ಅದೇ ವರ್ಷ ಕುಮಾರ್ ಗೆ ಜೀವಮಾನದ ಸಾಧನೆಗಾಗಿ ಫಿಲಂಫೇರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮನೋಜ್ ಕುಮಾರ್ ಹಿಂದಿ ಚಲನಚಿತ್ರಗಳಲ್ಲಿ ತಮ್ಮದೇ ಆದ ಅಪರೂಪ ಶೈಲಿಯನ್ನು ಹೊಂದಿದ್ದಾರೆ. ಇದರ ಬಗೆಗಿನ ಉಲ್ಲೇಖವನ್ನು ಅವರ ಅತ್ಯಂತ ಮಹತ್ವವುಳ್ಳ ಅತ್ಯಧಿಕ ಭಾವುಕತೆಯ ಚಲನಚಿತ್ರ ಕ್ಲರ್ಕ್ ನಲ್ಲಿ ಕಾಣಬಹುದು: ಅಶೋಕ್ ಕುಮಾರ್ ತೀವ್ರವಾದ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ದೃಶ್ಯ ಅಸಹಜಯತೆಯನ್ನೂ ಮೀರಿದೆ. ಅವರ ಪುತ್ರ ಮನೋಜ್ ಚಿಕಿತ್ಸೆಗಾಗಿ ವೈದ್ಯರನ್ನು ಕರೆತರುವಲ್ಲಿ ವಿಫಲರಾಗುತ್ತಾರೆ. ತಮ್ಮ ತಂದೆ ಒಬ್ಬ ಯೋಧನಾಗಿದ್ದು ನೇತಾಜಿಯವರ ಜೊತೆ ಹೋರಾಡಿದ್ದು ಮನೋಜ್ ಗೆ ನೆನಪಾಗುತ್ತದೆ. ಈ ರೀತಿಯಾಗಿ ಮನೋಜ್ ದೇಶಭಕ್ತಿ ಗೀತೆಯನ್ನು (ಕದಂ ಕದಂ ಬಡಾಯೇ ಜಾ) ಅಲ್ಲೇ ಪಕ್ಕದಲ್ಲಿದ್ದ ಧ್ವನಿಮುದ್ರಿಕೆಯ ಮೂಲಕ ಕೇಳಿಸುತ್ತಾರೆ ಹಾಗು ಅಶೋಕ್ ಕುಮಾರ್ ರ ಜೀವ ಉಳಿಯುತ್ತದೆ. ಅವರು ಎದ್ದು ಆವೇಗ(ಶ)ದಿಂದ ಪಥ ಸಂಚಲನ ಮಾಡುತ್ತಾರೆ. ಅವರ ವಿಶಿಷ್ಟ ಮುದ್ರೆ, ಮುಖವನ್ನು ಅರೆಬರೆಯಾಗಿ ಕೈನಿಂದ ಮುಚ್ಚಿಕೊಂಡಿರುವುದು ಬಹಳ ಜನಪ್ರಿಯವಾಯಿತು, ಅಲ್ಲದೇ ನಂತರದಲ್ಲಿ ಬಂದ ನಿಂತಾಡುವ ಹಾಸ್ಯಗಾರರಿಗೆ ಈ ವಿಶಿಷ್ಟ ಮುದ್ರೆಯು ಅಪಹಾಸ್ಯದ ಸರಕಾಗಿದೆ.
ಕುಮಾರ್ ರ ವಿಶಿಷ್ಟ ಛಾಪು, ಕೈನಿಂದ ಮುಖವನ್ನು ಅರೆಬರೆಯಾಗಿ ಮುಚ್ಚಿಕೊಂಡಿರುವುದು, ಬಹಳ ಜನಪ್ರಿಯವಾದರೂ, ಹಾಸ್ಯಗಾರರು ಅಪಹಾಸ್ಯ ಮಾಡಲು ಎಡೆ ಮಾಡಿಕೊಟ್ಟಿದೆ. ೨೦೦೭ರಲ್ಲಿ ಶಾರುಖ್ ಖಾನ್ ರ ಚಿತ್ರ ಓಂ ಶಾಂತಿ ಓಂ ನಲ್ಲಿ ನಾಯಕನು, ಮನೋಜ್ ಕುಮಾರ್ ರಂತೆ ಮುಖವನ್ನು ಮುಚ್ಚಿಕೊಂಡು ಚಿತ್ರದ ಪ್ರಥಮ ಪ್ರದರ್ಶನದಲ್ಲಿ ನುಸುಳಲು ಪ್ರಯತ್ನಿಸುತ್ತಾನೆ. ಕುಮಾರ್ ಇದಕ್ಕಾಗಿ ಮೊಕದಮ್ಮೆ ಹೂಡುತ್ತಾರೆ, ನಂತರ ವ್ಯಾಜ್ಯವು ನ್ಯಾಯಾಲಯದಿಂದಾಚೆ ಪರಿಹಾರವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ರಾಜಕೀಯ

ಇತರ ಹಲವು ಬಾಲಿವುಡ್ ತಾರೆಯರ ಮಾದರಿ, ಚಿತ್ರಜೀವನದಿಂದ ತಮ್ಮ ನಿವೃತ್ತಿಯ ನಂತರ ಕುಮಾರ್ ರಾಜಕೀಯ ಪ್ರವೇಶಿಸಲು ನಿರ್ಧರಿಸುತ್ತಾರೆ. ಭಾರತದಲ್ಲಿ ೨೦೦೪ರ ಸಾರ್ವತ್ರಿಕ ಚುನಾವಣೆಗೆ ಮುಂಚೆ, ಇವರು ಅಧಿಕೃತವಾಗಿ ಶಿವಸೇನೆ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಪ್ರಕಟಿಸಿದರು.

ವೈಯಕ್ತಿಕ ಜೀವನ

ಕುಮಾರ್, ಶಶಿ ಗೋಸ್ವಾಮಿ ಎಂಬುವವರನ್ನು ವರಿಸಿದ್ದಾರೆ.(ಮೂಲತಃ ಇವರು ಹರಿಯಾಣದ, ಸಿರ್ಸ ಜಿಲ್ಲೆಯ ಜೋಧ್ಕನ್ ಗೆ ಸೇರಿದವರು). ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ವಿಶಾಲ್ ಹಾಗು ಕುನಾಲ್, ವಿಶಾಲ್, ಒಬ್ಬ ಗಾಯಕನಾಗಿ ತಮ್ಮ ಪ್ರತಿಭೆಯನ್ನು ಪಣಕ್ಕೊಡಿದರೆ, ಕುನಾಲ್ ಒಬ್ಬ ನಟನಾಗಲು ಪ್ರಯತ್ನಿಸಿದರು. ಇವರ ಸಹೋದರ, ರಾಜೀವ್ ಗೋಸ್ವಾಮಿ, ಸಹ ಚಿತ್ರರಂಗವನ್ನು ಪ್ರವೇಶಿಸಿದ್ದರು.

ಪ್ರಶಸ್ತಿಗಳು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

  • ೧೯೬೮ - ಉಪಕಾರ್ ಚಿತ್ರಕ್ಕಾಗಿ ಎರಡನೇ ಅತ್ಯುತ್ತಮ ಚಲನಚಿತ್ರವೆಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಫಿಲ್ಮ್‌ಫೇರ್ ಪ್ರಶಸ್ತಿಗಳು

ವಿಜೇತ

  • ೧೯೬೮ - ಉಪಕಾರ್ ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಫಿಲಂಫೇರ್ ಪ್ರಶಸ್ತಿ


  • ೧೯೬೮ - ಉಪಕಾರ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಫಿಲಂಫೇರ್ ಪ್ರಶಸ್ತಿ [೨]


  • ೧೯೬೮ - ಉಪಕಾರ್ ಚಿತ್ರದ ಅತ್ಯುತ್ತಮ ಕಥೆಗಾಗಿ ಫಿಲಂಫೇರ್ ಪ್ರಶಸ್ತಿ
  • ೧೯೬೮ - ಉಪಕಾರ್ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ ಫಿಲಂಫೇರ್ ಪ್ರಶಸ್ತಿ


  • ೧೯೭೨ - ಬೇಯಿಮಾನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ
  • ೧೯೭೫ - ರೋಟಿ ಕಪಡಾ ಔರ್ ಮಕಾನ್ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಫಿಲಂಫೇರ್ ಪ್ರಶಸ್ತಿ
  • ೨೦೦೮ - ಜೀವಮಾನದ ಸಾಧನೆಗಾಗಿ ಫಿಲಂಫೇರ್ ಪ್ರಶಸ್ತಿ

ನಾಮನಿರ್ದೇಶನಗೊಂಡಿದ್ದು

  • ೧೯೬೮ - ಉಪಕಾರ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ
  • ೧೯೬೯ - ಆದ್ಮಿ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟ ಫಿಲಂಫೇರ್ ಪ್ರಶಸ್ತಿ



  • ೧೯೭೫ - ರೋಟಿ ಕಪಡಾ ಔರ್ ಮಕಾನ್ ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರ ಫಿಲಂಫೇರ್ ಪ್ರಶಸ್ತಿ
  • ೧೯೭೫ - ರೋಟಿ ಕಪಡಾ ಔರ್ ಮಕಾನ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ
  • ೧೯೭೬ - ಸನ್ಯಾಸಿ ಚಿತ್ರಕ್ಕಾಗಿ ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ

ಗೌರವಗಳು

  • ೧೯೯೨ - ಭಾರತ ಸರ್ಕಾರ|ಭಾರತ ಸರ್ಕಾರ ದಿಂದ ಪದ್ಮಶ್ರೀ ಪುರಸ್ಕಾರ
  • ೨೦೦೯ - ದಾದಾಸಾಹೇಬ್ ಫಾಲ್ಕೆ ಅಕ್ಯಾಡೆಮಿಯಿಂದ ಫಾಲ್ಕೆ ರತ್ನ ಪ್ರಶಸ್ತಿ [೧]

ಇತರ ಪ್ರಶಸ್ತಿಗಳು

  • ೧೯೬೮ - BFJA ಪ್ರಶಸ್ತಿಗಳು: ಉಪಕಾರ್ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿ[೨]
  • ೨೦೦೮ - ಸ್ಟಾರ್‌ ಸ್ಕ್ರೀನ್‌ ಜೀವಮಾನ ಸಾಧನೆಯ ಪ್ರಶಸ್ತಿ
  • ೨೦೧೦ -೧೨ನೇ ಮುಂಬೈ ಚಲನಚಿತ್ರೋತ್ಸವದಲ್ಲಿ ಜೀವಮಾನ ಸಾಧನೆ ಪ್ರಶಸ್ತಿ [೩]


ವಿಶೇಷ ಗೌರವ

ಶ್ರೀ ಸಾಯಿಬಾಬಾರೆಡೆಗೆ ಮನೋಜ್ ಕುಮಾರ್ ಅವರ ಭಕ್ತಿಗೆ ಗೌರವಾರ್ಥವಾಗಿ, ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಮಂಡಳಿಯು, ಶಿರಡಿಯಲ್ಲಿರುವ "ಪಿಂಪಲ್ವಾಡಿ ರಸ್ತೆ"ಯನ್ನು, "ಮನೋಜ್ ಕುಮಾರ್ ಗೋಸ್ವಾಮಿ ರಸ್ತೆ" ಎಂದು ಬದಲಾವಣೆ ಮಾಡಿದೆ.[೩]

ಆಯ್ದ ಚಲನಚಿತ್ರಗಳ ಪಟ್ಟಿ

ನಟ

- 1962_ ಬನಾರಸಿ ತಗ್ - 1966 - ಸಾಜನ್ - ಆಶಾ ಪಾರೇಖ್
1962 ಹರಿಯಾಲಿ ಔರ್ ರಾಸ್ತಾ ಶಂಕರ್ ಮಾಲಾ ಸಿನ್ಹಾ/ಶಶಿಕಲಾ
1964 ವೊಹ್ ಕೌನ್ ಥಿ? Dr ಆನಂದ್ ಸಾಧನ
1965 ಶಹೀದ್ ಶಹೀದ್-ಎ-ಅಜಂ ಭಗತ್ ಸಿಂಗ್
ಹಿಮಾಲಯ ಕಿ ಗೋದ್ ಮೇ ಸುನಿಲ್ ಮೆಹ್ರಾ ಮಾಲ ಸಿನ್ಹ
ಗುಮ್ನಾಮ್ ಆನಂದ್ ನಂದಾ
1966 ದೋ ಬದನ್ ವಿಕಾಸ್ ಆಶಾ ಪಾರೇಖ್
1967 ಪತ್ಥರ್ ಕೆ ಸನಮ್ ರಾಜೇಶ್ ವಹೀದ ರೆಹಮಾನ್/ಮುಮ್ತಾಜ್
ಅನಿತಾ ನೀರಜ್ ಸಾಧನಾ
ಉಪಕಾರ್ ಭಾರತ್ ವಿಜೇತ, ಅತ್ಯುತ್ತಮ ಚಲನಚಿತ್ರ ಫಿಲಂಫೇರ್ ಪ್ರಶಸ್ತಿ
1968 ನೀಲ್ ಕಮಲ್ ರಾಮ್ ವಹೀದಾ ರೆಹಮಾನ್
ಆದ್ಮಿ Dr ಶೇಖರ್ ವಹೀದಾ ರೆಹಮಾನ್
1970 ಪೂರಬ್ ಔರ್ ಪಶ್ಚಿಮ್ ಭಾರತ್ ಸಾಯಿರಾ ಬಾನು
ಯಾದ್ಗಾರ್ ಬಾನು ನೂತನ್
ಪೆಹಚಾನ್ ಗಂಗಾರಾಮ್ ಬಬಿತಾ
ಮೇರಾ ನಾಮ್ ಜೋಕರ್ ಡೇವಿಡ್
1972 ಶೋರ್ ಶಂಕರ್ ನಂದಾ/ಜಯಾ ಬಚ್ಚನ್
ಬೇಯಿಮಾನ್ ಮೋಹನ್ ವಿಜೇತ, ಅತ್ಯುತ್ತಮ ನಟ ಫಿಲಂಫೇರ್ ಪ್ರಶಸ್ತಿ
1974 ರೋಟಿ ಕಪ್ಡ ಔರ್ ಮಕಾನ್ ಭಾರತ್ ಜೀನತ್ ಅಮಾನ್/ಮೌಷುಮಿ ಚ್ಯಾಟರ್ಜಿ
1975 ಸನ್ಯಾಸಿ ರಾಮ್ ರಾಯ್ ಹೇಮಾಮಾಲಿನಿ
1976 ದಸ್ ನಂಬರಿ ಅರ್ಜುನ್ ಹೇಮಾಮಾಲಿನಿ
1981 ಕ್ರಾಂತಿ ಭಾರತ್/ಕ್ರಾಂತಿ ಹೇಮಾಮಾಲಿನಿ
1987 ಕಲಿಯುಗ್ ಔರ್ ರಾಮಾಯಣ್ ಪವನ್ ಪುತ್ರ (ಶ್ರೀ ಹನುಮಾನ್) ಮಾಧವಿ
1989 ಸಂತೋಷ್ ಸಂತೋಷ್ ಸಿಂಗ್
ಕ್ಲರ್ಕ್ ಭಾರತ್ ರೇಖಾ
1995 ಮೈದಾನ್-ಎ-ಜಂಗ್ ಮಾಸ್ತರ್ ದೀನಾನಾಥ್

ಉಲ್ಲೇಖಗಳು

ಬಾಹ್ಯ ಕೊಂಡಿಗಳು