ಅಳಲೆ ಕಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding or:ହରିଡ଼ା
ಚು r2.7.1) (Robot: Adding fa:هلیله سیاه
೩೦ ನೇ ಸಾಲು: ೩೦ ನೇ ಸಾಲು:
[[dv:އަރޮޅި]]
[[dv:އަރޮޅި]]
[[en:Terminalia chebula]]
[[en:Terminalia chebula]]
[[fa:هلیله سیاه]]
[[hi:हरीतकी]]
[[hi:हरीतकी]]
[[ml:കടുക്ക]]
[[ml:കടുക്ക]]

೨೨:೪೩, ೬ ಮಾರ್ಚ್ ೨೦೧೨ ನಂತೆ ಪರಿಷ್ಕರಣೆ

ಚಿತ್ರ:Alalekayi.jpg
'ಅಳಲೆ ಕಾಯಿಮರ'

ಅಡುಗೆಮನೆಯ ವೈದ್ಯ’ (ಅಜ್ಜಿಯ ವೈದ್ಯ) ವೆಂದು ಹೆಸರಾದ ಸಕಲರೋಗಗಳಿಗೂ ಬಳಸಬಹುದಾದ, 'ನಿರಪುದ್ರವಿ-ಅಳಲೆಕಾಯಿ' (ಹರೀತಕಿ-ಸಂಸ್ಕೃತ) ನಮ್ಮಲ್ಲೆರ ಆಡುಗೆಮನೆಯ ವೈದ್ಯನಾಗಿ ಹಲವಾರು ಶತಮಾನಗಳಿಂದ ಬಳಕೆಯಲ್ಲಿದೆ. ತೊಟ್ಟಿಲಿನಲ್ಲಿ ಮಲಗಿರುವ ಕಂದನಿಂದ ಆದಿಯಾಗಿ ವಯೋಮಾನದ ಮನೆಯ ಸದಸ್ಯರಿಗೂ, ಎಲ್ಲಾ ವಿಧದ ಜಡ್ಡಿಗೂ ಅಳಲೆಕಾಯಿಯೇ ಮದ್ದು. 'ಆಯುರ್ವೇದ ಶಾಸ್ತ್ರ'ದಲ್ಲಿ ’ಔಷಧಿಗಳ ರಾಜನೆಂದೇ ಹೆಸರುವಾಸಿಯಾದ ಸಸ್ಯವೊಂದಿದೆ'. ಅದೇ ವೈಜ್ಞಾನಿಕವಾಗಿ, 'Tarminalia Chebula' ವೆಂದು ಕರಯಲ್ಪಡುವ ಈ ಸಸ್ಯ ಪ್ರಭೇದ, 'ಕಾಂಬ್ರೆಟೇಸಿ' (Combretaceae)ವೆಂಬ ಸಸ್ಯ ಕುಟುಂಬಕ್ಕೆ ಸೇರುತ್ತದೆ. ಕರ್ನಾಟಕದ ಮನೆಮನೆಯಗಳಲ್ಲಿ ಜನಜನಿತವಾಗಿರುವ 'ಅಳಲೆಕಾಯಿ' ಭಾರತದಾದ್ಯಂತಾ ಕಂಡುಬರುತ್ತದೆ. ಅಳಲೆಕಾಯಿಮರದ ೨೫-೩೦ ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. 'ರೆಂಬೆ-ಕೊಂಬೆ'ಗಳೊಂದಿ ಶೋಭಿಸುವ ಈ ಮರದ ಹಳದಿ ಮಿಶ್ರಿತ ಬಿಳಿಯ ಹೂವುಗಳು ಕ್ರಮೇಣ ಹಸಿರು ಕಾಯಿಗಳಾಗಿ ಮಾರ್ಪಡುತ್ತವೆ. ನಂತರ, ಮಾದ ಕಾಯಿಗಳು ಕಂದು ಬಣ್ಣಕ್ಕೆ ತಿರುಗುತ್ತವೆ. ಹಾಗೆಯೇ ಅವುಗಳ ಮೇಲ್ಮೈ ಗಟ್ಟಿಯಾಗುತ್ತದೆ. ಇಂತಹ ಕಾಯಿಗಳನ್ನು ಕಿತ್ತು, ಒಣಗಿಸಿ ಪುಡಿಮಾಡಿ, ಹಲವಾರು ಔಷಧಿಗಳಿಗೆ ಬಳಸಲಾಗುತ್ತದೆ.

’ವಾತ,’’ಪಿತ್ಥ,’ ಮತ್ತು ’ಕಫ’ಗಳನ್ನು ನಿವಾರಿಸುವ ಪರಮೌಷಧಿ

ಚಿತ್ರ:Imag.jpg
'ಇನ್ನೂ ಹಣ್ಣಾಗದ ಅಳಲೆಕಾಯಿಗಳು'

'ಆಯುರ್ವೇದ ಶಾಸ್ತ್ರ'ಗಳಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ 'ವಾತ', 'ಪಿತ್ಥ', 'ಕಫ'ಗಳ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದಾಗಿ ಬಳಕೆಯಲ್ಲಿ ಇದೆ. ನೆಗಡಿ, ಕೆಮ್ಮು, ಜ್ವರ ಮುಂತಾದ ಸಾಮಾನ್ಯ ಜಡ್ಡುಗಳಿಂದ ಹಿಡಿದು, 'ಕಾಮಾಲೆ', 'ಅಸ್ತಮಾ', 'ಮೂಲವ್ಯಾಧಿ', ಮತ್ತು 'ಹೃದ್ದ್ರೋಗ'ದಂತಹ ಗಂಭೀರ ಬೇನೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿಯೆಂದು ಬಳಕೆಯಲ್ಲಿತ್ತು. ದೇಹದ ಯಾವುದೇ ಭಾಗದಲ್ಲಿ ಗಾಯಗಳಾದರೂ ಅಳಲೆಕಾಯಿ ರಸಲೇಪನದಿಂದ ಸಮಾಧಾನ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಗಳಾದ, 'ಬ್ಯಾಕ್ಟೀರಿಯಾ' ಮತ್ತು 'ಫಂಗಸ್' ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು 'ಅಳಲೆಕಾಯಿ' ಹೇಳಿಮಾಡಿಸಿದ ವೈದ್ಯ ಪದ್ಧತಿಯಾಗಿತ್ತು.

ಅಳಲೆಕಾಯಿಯ ಕೆಲವು ಉಪಯೋಗಗಳು

  • ಅಳಲೆಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ,'ಬಾಯಿಮುಕ್ಕಳಿಸಿ ಉಗುಳು'ವುದರಿಂದ 'ಬಾಯಿಹುಣ್ಣು' ಮತ್ತಿತರ 'ವಸಡು ದೋಶ'ಗಳಿಗೆ ರಾಮಬಾಣ.
  • 'ಜೀರ್ಣಶಕ್ತಿ'ಯನ್ನು ವರ್ಧಿಸಲು 'ಮಲಬದ್ಧತೆ'ಯನ್ನು ನೀಗಿಸುವಲ್ಲಿ ಪರಿಣಾಮಕಾರಿಯಾಗಿದೆ.
  • ಎಲ್ಲಾ ಪ್ರಕಾರದ 'ಕಣ್ಣುಗಳ ಬೇನೆಗೂ,' 'ಅಳಲೆಕಾಯಿ' ಉಪಯೋಗಕಾರಿಯಾಗಿದೆ.
  • ಪ್ರತಿದಿನ ಮುಂಜಾನೆ 'ಅಳಲೆಕಾಯಿ ಕಷಾಯ'ವನ್ನು ಕುಡಿಯುವುದರಿಂದ ದೇಹದ ಉಷ್ಣಗೆಯನ್ನು ಸಮತೋಲನದಲ್ಲಿಡುವುದರ ಜೊತೆಗೆ, ದೇಹದಲ್ಲಿ ಶೇಖರಿಸಲ್ಪಟ್ಟ 'ಅನಗತ್ಯ ಕೊಬ್ಬನ್ನು ಕರಗಿಸುತ್ತದೆ'.
  • 'ಲೈಂಗಿಕ ತೊಂದರೆ', ಹಾಗೂ 'ನರದೌರ್ಬಲ್ಯಕ್ಕೆ ಮದ್ದು'.
  • 'ಗರ್ಭಿಣಿಯರು' ಅಳಲೆಕಾಯಿಯನ್ನು ಸೇವಿಸುವಂತಿಲ್ಲ. ಏಕೆಂದರೆ, ಇದರ ಸೇವೆಯಿಂದ 'ಗರ್ಭಪಾತ'ದ ಸಾಧ್ಯತೆಗಳು ಹೆಚ್ಚೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.

ಕೆಲವು ರಸಾಯನಿಕಗಳ ಇರುವಿಕೆ

'ಒಣಗಿದ ಅಳಲೆಕಾಯಿಗಳು'

ಅಳಲೆಕಾಯಿನಲ್ಲಿ, 'ಚೆಬುಲ್ಯಾಜಿಕ್', 'ಆಯಾಸಿಡ್', 'ಚೆಬುಲಿನಿಕ್ ಆಯ್ಯಾಸಿಡ್' ಮತ್ತು 'ಕಾರಿಲೇಜಿನ್' ಮುಂತಾದ ರಸಾಯನಿಕಗಳನ್ನು ಪತ್ತೆ ಹಚ್ಚಲಾಗಿದೆ. ವಿಸ್ತಾರಮಯ ವೈವಿಧ್ಯಪೂರ್ಣಗುಣಗಳ ಬಗ್ಗೆ ವಿಸ್ತಾರವಾದ ಅಧ್ಯನದ ಅಗತ್ಯವಿದೆಯೆಂದು ತಜ್ಞರ ಅಭಿಪ್ರಾಯ.

'ಅಳಲೆಕಾಯಿಪಂಡಿತರು'

ಇಂದಿಗೂ ಮನೆಯಲ್ಲಿ ಕೆಲವು ಹಳೆಯಕಾಲದ ವೈದ್ಯರನ್ನು 'ಅಳಲೆಕಾಯಿಪಂಡಿತ' ರೆಂದು ಕರೆಯುವುದುಂಟು. ಏಕೆಂದರೆ, ವಿಪುಲವಾದ ಶಕ್ತಿಯನ್ನು ಹೊಂದಿದ ಅಳಲೆಕಾಯಿಯನ್ನು ಅವರು, ಚೂರ್ಣಮಾಡಿ, ತಮಗೆ ತಿಳಿದ ಹಾಗೂ ತಿಳಿಯದ ಕಾಯಿಲೆಗಳಿಗೂ ಮದ್ದಾಗಿ ಬಳಸುತ್ತಿದ್ದರಿಂದ. ಇದರ ಸೇವನೆಯಿಂದ ದುಷ್ಪರಿಣಾಮವಿಲ್ಲದಿರುವುದು ಇದರ ವೈಶಿಷ್ಟ್ಯ.

'ಝಂಡು', ಮತ್ತು 'ಹಿಮಾಲಯ ಕಂಪೆನಿ'ಗಳ ಪಾತ್ರ

ಭಾರತದಲ್ಲಿ ಹಲವಾರು 'ಆಯುರ್ವೇದದ ಕಂಪೆನಿಗಳು,' 'ಅಳಲೆಕಾಯಿ ಮಿಶ್ರಿತ ಔಷಧಿ'ಗಳನ್ನು ತಯಾರಿಸಿ, ತಮ್ಮ ವೈವಿಧ್ಯಮಯ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟಮಾಡಿ ಲಾಭಗಳಿಸುತ್ತಿದ್ದಾರೆ. ಅವುಗಳಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಮಾರಾಟದಲ್ಲಿರುವ ಕೆಲವು 'ಬ್ರಾಂಡ್' ಗಳನ್ನು ಕೆಳಗೆ ನಮೂದಿಸಲಾಗಿದೆ :

  • 'ಹರಿಟಾಕಿ'
  • 'ಅಭಯ ಮೋದಕ್'
  • 'ಪಥ್ಯಾದಿಚೂರ್ಣ'
  • 'ತ್ರಿಫಲ ಚೂರ್ಣ' (ಇದರ ಜೊತೆಗೆ, 'ತಾರೇಕಾಯಿ' ಹಾಗೂ 'ನೆಲ್ಲಿಕಾಯಿ'ಗಳನ್ನು ಬಳಸಲಾಗುತ್ತದೆ)

ಸಂಪರ್ಕಿಸ ಬಹುದಾದ ಗ್ರಂಥಗಳು

  • 'ಸ್ವಯಂವೈದ್ಯ'-'ತಿರುಕ,' 'ಅನಾಥ ಸೇವಾಶ್ರಮ', ಮಲ್ಲಾಡಿಹಳ್ಳಿ, 'ವಿಶ್ವಸ್ತ ಸಮಿತಿ', ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ.