ಬಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding lv:Audums
ಚು r2.7.2+) (Robot: Adding be:Тэкстыль
೧೪ ನೇ ಸಾಲು: ೧೪ ನೇ ಸಾಲು:
[[am:ጨርቅ]]
[[am:ጨርቅ]]
[[ar:النسيج]]
[[ar:النسيج]]
[[be:Тэкстыль]]
[[bg:Текстил]]
[[bg:Текстил]]
[[bs:Tekstil]]
[[bs:Tekstil]]

೨೨:೪೦, ೨೫ ಜನವರಿ ೨೦೧೨ ನಂತೆ ಪರಿಷ್ಕರಣೆ

ಕರಾಚಿಯ ಬಟ್ಟೆ ಮಾರುಕಟ್ಟೆ

ಬಹಳ ಪ್ರಚೀನಕಾಲದಿಂದ ಇಲ್ಲಿಯವರೆಗೂ ಮನುಷ್ಯನಿಗೆ ಬಟ್ಟೆಯ ಆವಷ್ಯಕತೆ, ಊಟ, ವಸತಿಯಯ ನಂತರದ ಮಹತ್ವದ ಪಾತ್ರವನ್ನು ವಹಿಸಿದೆ. ಪ್ರಾಣಿಗಳಂತೆ ಅವನು ಹೊದೆಯದೆ, ತೊಟ್ಟುಕೊಳ್ಳದೆ ತನ್ನ ಜೀವನಸ್ತರದಲ್ಲಿ ಜೀವಿಸಲಾರ. ಹಾಗೆಯೇ ವಿಶ್ವದಾದಾದ್ಯಂತ ಬಟ್ಟೆಯ ಆವಿಷ್ಕಾರವಾಗಿರುವ ಸಂಗತಿ ಬಹುಶಃ ಮಾನವನ ಆದಿಯಷ್ಟೇ ಹಳೆಯಸಂಗತಿಯಾಗಿದೆ. ಮೊದಲು ಬಳಕೆಗೆ ಉಪಯೋಗಿಸ ಪದಾರ್ಥವೆಂದರೆ, ಮರದ ತೊಗಟೆ, ನಾರು, ಪ್ರಣಿಗಳ ಚರ್ಮಗಳು. ಕುರಿಯ ಉಣ್ಣೆ, ಅತ್ಯಂತ ಪ್ರಾಚೀನ ಉಡುಪಿನ ಒಂದು ಬಗೆ. ಆನಂತರ, ಲಿನನ್ ಎಂಬನಾರಿನ ಬಳಕೆ, ಉತ್ತರ ಆಫ್ರಿಕ ಮತ್ತು ಉತ್ತರ ಯೂರೋಪಿನಲ್ಲಿ ವಾಡಿಕೆಯಾಯಿತು.

ಹತ್ತಿಯ ಉಪಯೋಗ ನಮ್ಮ ಭಾರತದಲ್ಲಿ ವೇದಗಳ ಕಾಲದಷ್ಟು ಹಳೆಯದು. ಹತ್ತಿಯ ಬಟ್ಟೆಯಿಂದ ಉಡುಪುಗಳನ್ನು ಮಾಡಿಕೊಳ್ಳುವ ಕಲೆಯಲ್ಲಿ ಭಾರತೀಯರು ನಿಷ್ಣಾತರು. ಹತ್ತಿಬಟ್ಟೆಯ ಜೊತೆಗೆ ಬಳಸುವ ಬಣ್ಣಹಾಕುವ, ಮುದ್ರಿಸುವ, ಹಾಗೂ ಅದನ್ನು ಕೆಡದಂತೆ ಸಂಸ್ಕರಿಸುವ ಕಲೆಗಳನ್ನು ವಿಕಾಸಮಾಡಿಕೊಳ್ಳುತ್ತಾ ಹೋದರವರು. ಇದು ಕೇವಲ ಒಂದು ಪ್ರಾಂತ್ಯಕ್ಕೆ ಸೀಮಿತವಾಗದೆ, ಭಾರತದೇಶವಿಡೀ ಇದರಲ್ಲಿ ಪಾಲ್ಗೊಂಡಿದ್ದನ್ನು ನಾವು ಚರಿತ್ರೆಗಳಲ್ಲಿ ಓದಬಹುದು. ಕೆಲವು ಪ್ರಮುಖ ಪ್ರದೇಶಗಳಲ್ಲಿ ಈ ಕಲೆ ಹೆಚ್ಚಾಗಿ ವಿಕಸನಗೊಂಡಿತ್ತು. ಉದಾಹರಣೆಗೆ, ತಮಿಳುಪ್ರದೇಶ, ಆಂಧ್ರ, ಮೈಸೂರು, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್,ಉತ್ತರ ಪ್ರದೇಶ, ಬಂಗಾಳ, ಮತ್ತು ಪೂರ್ವೋತ್ತರ ಪ್ರಾಂತ್ಯಗಳು.

ಹತ್ತಿ ಬಟ್ಟೆ ತಯಾರಿಕೆ ಒಂದು ಗೃಹೋದ್ಯೋಗವಾಗಿ ದೇಶದಾದ್ಯಂತ ಹಬ್ಬಿತ್ತು. ಕಾಶ್ಮೀರ, ಒರಿಸ್ಸಾ, ಕೇರಳ, ಹಿಮಾಚಲಪ್ರದೇಶಗಳನ್ನು ಬಿಟ್ಟರೆ, ದೇಶದ ಎಲ್ಲಾ ಭಾಗಗಳಲ್ಲೂ ಹತ್ತಿಯಸಾಗುವಳಿ ಚಿಕ್ಕಪ್ರಮಾಣದಲ್ಲಿ ನಡೆದಿತ್ತು. ಸ್ವಾಭಾವಿಕವಾಗಿಯೇ ಆ ಭಾಗದ ಜನರು ಅಲ್ಲಿ ಬೆಳೆದ ಹತ್ತಿಯನ್ನು ಉಪಯೋಗಿಸಿಕೊಂಡು ಬಟ್ಟೆನೇಯುವ ಕ್ರಮ ರೂಢಿಯಲ್ಲಿತ್ತು. ಆದರೆ ಕೆಲವು ಪ್ರದೇಶಗಳು ಈ ಕಲೆಯಲ್ಲಿ ಎತ್ತರವನ್ನು ಮುಟ್ಟಿದ್ದರು. ಬಂಗಾಳದ ಢಾಕಾ, ಮದ್ರಾಸ್ ರಾಜ್ಯ, ಒರಿಸ್ಸರಾಜ್ಯ, ಆಂಧ್ರ, ಕರ್ನಾಟಕ, ಮಹಾರಾಷ್ಟ್ರ, ಕೇರಳ ಇದಕ್ಕೆ ತಕ್ಕ ಉದಾಹರಣೆಗಳು. ಭಾರತದಲ್ಲಿ ಕಾಶಿ,ಮೈಸೂರು,ಕಲ್ಕತ್ತಾ,ಗುಂಟೂರ್, ಕಂಚಿಪುರ ಗಳಲ್ಲಿ ಪ್ರಾಚೀನಕಾಲದಿಂದಲೂ ರೇಷ್ಮೆ ಬಟ್ಟೆಗಳ ತಯಾರಿಕೆ ಭರದಿಂದ ಸಾಗಿದೆ.

ಬಟ್ಟೆತಯಾರಿಕೆಯಲ್ಲಿ ಮೂರು ವಿಧಗಳಿವೆ.

೧. ಮಗ್ಗದ ಮೇಲೆ ನೇಯುವುದು. ೨. ನಿಟ್ಟೆಡ್ ಬಟ್ಟೆಗಳು. ೩. ಬಾಂಡೆಡ್ ಬಟ್ಟೆಗಳು. ಹೆಚ್ಚು ಕಡಿಮೆ ನಮಗೆ ಬೇಕಾಗುವ ಎಲ್ಲ ವಿಧದ ಬಟ್ಟೆಗಳು, ಈ ಮೇಲೆ ತಿಳಿಸಿದ ವಿಧಾನಗಳಿಂದ ಸುಲಭವಾಗಿ ದೊರೆಯುತ್ತದೆ. ಹಿಂದೆ ಕೈಮಗ್ಗದ ಮೇಲೆ ಬಹಳ ಕಷ್ಟದಿಂದ ತಯಾರಿಸುತ್ತಿದ್ದ ಸೀರೆ, ಮತ್ತು ಮಹಿಳೆಯರ ಉಡುಪಿನ ಎಂಬ್ರಾಯ್ಡರಿ ವಸ್ತ್ರಗಳು, ಹೊಸ ವಿದ್ಯುತ್ ಚಾಲಿತ ಮಗ್ಗಗಳಲ್ಲಿ ಕೆಲವೇ ಗಂಟೆಗಳಲ್ಲಿ ಹಲವು-ಪಟ್ಟು ಹೆಚ್ಚಾಗಿ ಉತ್ಪಾದಿಸಲ್ಪಡುತ್ತವೆ. ಸುಲಭವಾಗಿ ತಯಾರುಮಾಡಬಹುದಾದ ಬಟ್ಟೆಗಳ ಯಂತ್ರಗಳನ್ನು ಹೆಚ್ಚಿನ ಕಷ್ಟವಿಲ್ಲದೆ ಯಾರುಬೇಕಾದರು ನಡೆಸಬಹುದು.

"https://kn.wikipedia.org/w/index.php?title=ಬಟ್ಟೆ&oldid=247838" ಇಂದ ಪಡೆಯಲ್ಪಟ್ಟಿದೆ