ಸಿಂಧೂತಟದ ನಾಗರೀಕತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.3) (Robot: Adding sk:Harappská kultúra
೭೩ ನೇ ಸಾಲು: ೭೩ ನೇ ಸಾಲು:
[[si:ඉන්දු නිම්න ශිෂ්ටාචාරය]]
[[si:ඉන්දු නිම්න ශිෂ්ටාචාරය]]
[[simple:Indus Valley civilization]]
[[simple:Indus Valley civilization]]
[[sk:Harappská kultúra]]
[[sl:Indska civilizacija]]
[[sl:Indska civilizacija]]
[[sv:Induskulturen]]
[[sv:Induskulturen]]

೧೮:೧೬, ೬ ನವೆಂಬರ್ ೨೦೧೧ ನಂತೆ ಪರಿಷ್ಕರಣೆ

ಸಿಂಧೂತಟದ ನಾಗರೀಕತೆಯ ವಿಸ್ತಾರ

ಸಿಂಧೂ ನದಿಯ ತಟದಲ್ಲಿ ಕ್ರಿ.ಪೂ. ೨೫೦೦ರ ಸುಮಾರಿನಲ್ಲಿ ನೀರಾವರಿ ಆರಂಭವಾಯಿತು. ಇದರೊಂದಿಗೆ ಪ್ರಗತಿಗೊಂಡ ನಾಗರೀಕತೆ ಸಿಂಧೂತಟದ ನಾಗರೀಕತೆ ಅಥವ ಸಿಂಧೂಕಣಿವೆ ನಾಗರೀಕತೆ (Indus Valley Civilization) ಎಂದು ಕರೆಯಲ್ಪಟ್ಟಿದೆ. ಈ ನಾಗರೀಕತೆ ಸುಮಾರು ಕ್ರಿ.ಪೂ. ೨೫೦೦ರಿಂದ ಕ್ರಿ.ಪೂ. ೧೯೦೦ರ ವರೆಗೆ ಪ್ರಗತಿಗೊಂಡಿತು. ಈ ನಾಗರೀಕತೆಯ ಮುಖ್ಯ ನಗರಿಗಳಾದ ಹರಪ್ಪ ಮತ್ತು ಮೋಹೆನ್ಜದಾರೊ ಭಾರತದ ಮೊದಲ ನಗರಿಗಳೆಂದು ಪರಿಗಣಿಸಲ್ಪಟ್ಟಿವೆ.ಇದು ಭಾರತ ಉಪಖಂಡದ ವಾಯುವ್ಯ ಭಾಗದಲ್ಲಿತ್ತು ಮತ್ತು ಸಿಂಧೂ ನದಿಯ ಬಯಲಿನಲ್ಲಿ ನೆಲೆಗೊಂಡಿತ್ತು. ಇಂದಿನ ಪಂಜಾಬ್ ಪ್ರಾಂತ್ಯವು ಅದರ ಕೇಂದ್ರ ಸ್ಥಳವಾಗಿದ್ದುದಲ್ಲದೆ, ಅದು ಗಗ್ಗರ್-ಹಾಕ್ರ ಮತ್ತು ಗಂಗಾ-ಯಮುನಾ ದೋ-ಅಬ್ ಗಳವರೆಗೂ ಹಬ್ಬಿತ್ತು. ಅಂದರೆ ಇಂದಿನ ಪಾಕಿಸ್ತಾನದ ಬಹುತೇಕ ಪ್ರದೇಶಗಳು, ಆಧುನಿಕ ಭಾರತದ ವಾಯುವ್ಯ ರಾಜ್ಯಗಳು, ಅಫಘಾನಿಸ್ಥಾನದ ಆಗ್ನೇಯ ಭಾಗ ಮತ್ತು ಬಲೂಚಿಸ್ಥಾನ,ಇರಾನಿನ ಪೂರ್ವ ಭಾಗ.

ಈ ನಾಗರೀಕತೆಯ ಅತ್ಯಂತ ವಿಕಸಿತಗೊಂಡ ಕಾಲವನ್ನು 'ಹರಪ್ಪ ನಾಗರೀಕತೆ' ಎಂದು ಕರೆಯಲಾಗುತ್ತದೆ. ಏಕೆಂದರೆ ಈ ನಾಗರೀಕತೆಯು ಪ್ರಪ್ರಥಮವಾಗಿ ಬೆಳಕಿಗೆ ಬಂದಿದ್ದು 'ಹರಪ್ಪ'ಎಂಬ ನಿವೇಶನದಿಂದ. ಈ ನಿವೇಶನದ ಉತ್ಖನನವು ೧೯೨೦'ರ ದಶಕದಲ್ಲಿ ಪ್ರಾರಂಭವಾದಾಗ ಇದು ಆಗಿನ ಬ್ರಿಟೀಶ್ ಆಡಳಿತಕ್ಕೊಳಪಟ್ಟಿದ್ದ ಪಂಜಾಬ್ ಪ್ರಾಂತ್ಯದಲ್ಲಿತ್ತು (ಈಗ ಪಾಕಿಸ್ತಾನದಲ್ಲಿದೆ). ೧೯೨೦'ರ ದಶಕದಲ್ಲಿ ಪ್ರಾರ್ಂಭವಾದ ಉತ್ಖನನಗಳು ೧೯೯೯ನೇ ವರ್ಷದವರೆಗೂ ಮುಂದುವರೆದಿತ್ತು. ಸಿಂಧೂ ನಾಗರೀಕತೆಯ ಮತ್ತೊಂದು ಪ್ರಮುಖ ನಗರವಾದ ಮೊಹೆಂಜೋದಾರವು ಈಗ ಯುನೆಸ್ಕೋ ವಿಶ್ವದ ಸಾಂಸ್ಕೃತಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಹರಪ್ಪ ಲಿಪಿ ಮೂಲವನ್ನು ಕುರಿತು ಅನೇಕ ವಾದಗಳಿವೆ, ಕೆಲವರು ಈ ಲಿಪಿಯು ಪ್ರೋಟೋ-ದ್ರಾವಿಡ ಲಿಪಿಯಿಂದ ಬಂದದ್ದು ಎಂದರೆ ಮತ್ತೆ ಕೆಲವರು ಎಲ್ಮೋ-ದ್ರಾವಿಡ ಲಿಪಿಯಿಂದ ಬಂದದ್ದು ಎಂದು ಹೇಳಿದ್ದಾರೆ. ಈ ಕುರಿತು ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಈ ಲಿಪಿಯ ಕುರಿತು ಸಂಶೋಧನೆ ನಡೆಸಿರುವ ಮಹಾನ್ ವಿದ್ವಾಂಸರೆಂದರೆ ಐರಾವತಂ ಮಹಾದೇವನ್, ಎಫ್.ಬಿ.ಜೆ. ಕ್ಯುಪರ್, ಅಸ್ಕೊ ಪಾರ್ಪೋಲ ಮತ್ತು ಮೈಕೆಲ್ ವಿಟ್ಜೆಲ್.

ಸಂಶೋಧನೆ ಮತ್ತು ಉತ್ಖನನಗಳು

ಹರಪ್ಪ ನಾಗರೀಕತೆಯ ಕುರುಹುಗಳ ಕುರಿತು ಮೊದಲು ದಾಖಲಿಸಿದವರೆಂದರೆ ೧೮೪೨ರಲ್ಲಿ ನರೇಟಿವ್ಸ್ ಆಫ್ ವೇರಿಯಸ್ ಜರ್ನೀಸ್ ಇನ್ ಬಲೂಚೀಸ್ತಾನ್, ಆಫಘಾನಿಸ್ತಾನ್ ಅಂಡ್ ದ ಪಂಜಾಬ್ ಎಂಬ ಕೃತಿಯನ್ನು ಬರೆದ ಚಾರ್ಲ್ಸ್ ಮ್ಯಾಸನ್. ಸ್ಥಳಿಯರು ಇಲ್ಲಿ ೨೫ ಮೈಲುಗಳಷ್ಟು ವಿಶಾಲವಾದ ಪ್ರಾಚೀನ ನಗರವಿದೆ ಎಂದು ಹೇಳುತ್ತಿದ್ದರೂ ಸಹ ಒಂದು ಶತಮಾನದವರೆಗೂ ಯಾರು ಈ ಕುರಿತು ಉತ್ಸಾಹ ತೋರಿರಲಿಲ್ಲ.

ಟೆಂಪ್ಲೇಟು:Link FA

[[dv:ސިންދު ވާދީ ރަށްވެހިކަން ]] ಈ ಹರಪ್ಪ ಮತ್ತು ಮಹೋ೦ಜೋದಾರ್ ನಾಗರಿಕತೆಗಳು ಸಮುದ್ರ ತಟದಲ್ಲಿ ಭೂ೦ಕಪನದಿ೦ದ ಮುಳುಗಿರಬಹುದು ಎ೦ದು ಶ೦ಕಿಸಲಾಗಿದೆ ಪ್ರಾಚೀನ ಕಾಲದ ಯಾವೂದೆ ನಾಗರಿಕತೆ ನೊಡಿದಾಗ ನಮಗೆ ಗೋಚರವಾಗುವ ಒ೦ದು ಅ೦ಶ ಎ೦ದರೆ ಎಲ್ಲ ನಾಗರಿಕತೆಗಳು ದೈವ ಸೃಶ್ಟಿಯ ಪ೦‌ಚಭೂತಗಳಲೋ೦ದಾದ "ನೀರು" ಅನ್ನ ಅಳವಡಿಸಿಕೋಡಿದೆ.ಉದಾಹರಣೆಗೆ ಈಗಿನ ಹಳೆಬೀಡು. ಇದು ಹೊಯ್ಸಳರ ಕಾಲದಲ್ಲಿ ನದಿ ತಟದಲ್ಲಿ ನಿಮಾ೯ಣವಾಗಿದೆ. ಯೋಗಾಸನದ ಭಂಗಿಗಳು.ಹಿಂದುಗಳಿಗೆ ಅತಿ ಪವಿತ್ರವಾದ ಸ್ವಸ್ತಿಕದ ಚಿಹ್ನೆಗಳು. `ಓಂ' ಪ್ರಣವಾಕ್ಷರದ ಹೆಗ್ಗುರುತುಗಳು. ಕುದುರೆಯ ಬಳಕೆಯ ಸಾಕ್ಷಿಗಳು…. ಸಿಂಧೂ ಕಣಿವೆಯು ನಾಗರಿಕತೆಯ ತೊಟ್ಟಿಲೇನೂ ಅಲ್ಲ ಎಂದವರಿಗೆ ಅಚ್ಚರಿ ಕಾದಿದೆ. ಹರಪ್ಪಾ, ಮೊಹೆಂಜದಾರೋ, ಅವಶೇಷಗಳು ಕೇವಲ ನಾಶಗೊಂಡ ಸಂಸ್ಕೃತಿಯ ಕುರುಹುಗಳಲ್ಲ, ಅತ್ಯಂತ ಕ್ರಿಯಾಶೀಲವಾಗಿದ್ದ ಅಪ್ಪಟ ಭಾರತೀಯ ಬದುಕಿನ ಸಾಕ್ಷಿಯಾಗಿದ್ದವು ಎಂಬುದಕ್ಕೆ ಈಗಲೂ ಪುರಾವೆಗಳು ಸಿಗುತ್ತಿವೆ. ೧೯೨೧ರಲ್ಲಿ ಹರಪ್ಪಾ, ಮೊಹೆಂಜದಾರೋ ನಗರಗಳು ಪತ್ತೆಯಾದ ದಿನದಿಂದ ಈವರೆಗೂ ಈ ನಾಗರಿಕತೆಯ ಬಗ್ಗೆ ಬೆಳಕು ಚೆಲ್ಲುವ ಮತ್ತು ಕತ್ತಲನ್ನೂ ಚೆಲ್ಲುವ ವಾದಗಳು ಮೂಡುತ್ತಲೇ ಇವೆ. ಒಂದು ಮುಖ್ಯವಾದ : ಇದು ದ್ರಾವಿಡರ ಭೂಮಿಯಾಗಿತ್ತು, ಆರ್ಯರು ಬಂದು ಅವರನ್ನು ಓಡಿಸಿದರು, ಅವರ ನಾಗರಿಕತೆಯನ್ನು ನಿರ್ನಾಮ ಮಾಡಿದರು, ಇತ್ಯಾದಿ. ಆದರೆ ಅಂಥ ಮಹಾನ್ ದ್ರಾವಿಡ ನಾಗರಿಕತೆಯ ಒಂದೂ ಸಾಂಸ್ಕೃತಿಕ ಕುರುಹುಗಳು ಈವರೆಗೆ ಪತ್ತೆಯಾಗದಿರುವುದು ಮತ್ತು ಆರ್ಯರು ಯಾವುದೇ ನಾಗರಿಕತೆಯ ಕುರುಹುಗಳನ್ನೂ ತೋರದೆ ಬೃಹತ್ ಗ್ರಂಥಗಳನ್ನು ರಚಿಸಿರುವುದು – ಎರಡೂ ತಾಳಮೇಳ ಇಲ್ಲದ ವಾದ ಎಂಬುದು ಮೇಲುನೋಟಕ್ಕೇ ಸರಿ ಎನಿಸುತ್ತದೆ. ಇಲ್ಲಿ ಅರಳಿದ್ದು ಒಂದೇ ಸಂಸ್ಕೃತಿ, ಅವರೇ ಈ ಎಲ್ಲಾ ಗ್ರಂಥಗಳನ್ನು ರೂಪಿಸಿದರು ಎಂಬ ವಾದಕ್ಕೆ ಈಗ ಬೆಲೆ ಬರುತ್ತಿದೆ. ಈವರೆಗೆ ಈ ಪ್ರದೇಶದಲ್ಲಿ ೨೦೦೦ಕ್ಕೂ ಎಹಚ್ಚು ನಗರಗಳು ಪತ್ತೆಯಾಗಿವೆ. ಇಲ್ಲಿ ಗುಪ್ತಗಾಮಿನಿಯಾದ ಸರಸ್ವತೀ ನದಿಯನ್ನು ವಿeನಿಗಳೇ ಗುರುತಿಸಿದ್ದಾರೆ. ಹೀಗಾಗಿ ಇದು ಸಿಂಧೂ-ಸರಸ್ವತೀ ನಾಗರಿಕತೆ ಎಂದೇ ಹೆಚ್ಚಾಗಿ ಕರೆಸಿಕೊಳ್ಳುತ್ತಿದೆ. ಈಗ ಇದೇ ನೆಲದಲ್ಲಿ ವೇದಕಾಲೀನ ಸಂಸ್ಕೃತಿಯ ನಿದರ್ಶನಗಳು ಸಾಕಷ್ಟು ದೊರೆತಿವೆ.