ಐಶ್ವರ್ಯಾ ರೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.3) (Robot: Adding simple:Aishwarya rai
೯೩ ನೇ ಸಾಲು: ೯೩ ನೇ ಸಾಲು:
[[ru:Рай, Айшвария]]
[[ru:Рай, Айшвария]]
[[sa:ऐश्वर्या रै]]
[[sa:ऐश्वर्या रै]]
[[simple:Aishwarya rai]]
[[sq:Aishwarya Rai]]
[[sq:Aishwarya Rai]]
[[sr:Ајшварија Рај]]
[[sr:Ајшварија Рај]]

೧೭:೨೦, ೨೫ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ

ಐಶ್ವರ್ಯಾ ರೈ

ಐಶ್ವರ್ಯಾ ರೈ
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಐಶ್ವರ್ಯಾ ರೈ
(1973-11-01) ೧ ನವೆಂಬರ್ ೧೯೭೩ (ವಯಸ್ಸು ೫೦)
ಮಂಗಳೂರು, ಕರ್ನಾಟಕ, ಭಾರತ
ಬೇರೆ ಹೆಸರುಗಳು ಐಶ್ವರ್ಯಾ ರೈ ಬಚ್ಚನ್
ವೃತ್ತಿ ನಟಿ
ವರ್ಷಗಳು ಸಕ್ರಿಯ ೧೯೯೭ – ಪ್ರಸ್ತುತ
ಪತಿ/ಪತ್ನಿ ಅಭಿಷೇಕ್ ಬಚ್ಚನ್ (೨೦೦೭–ಪ್ರಸ್ತುತ)

ಐಶ್ವರ್ಯಾ ರೈ (ಜನನ: ನವೆಂಬರ್ ೧, ೧೯೭೩) ಭಾರತೀಯ ಸಿನೆಮಾ ನಟಿ ಮತ್ತು ಮಾಡೆಲ್. ೧೯೯೪ ರಲ್ಲಿ ಭಾರತಸುಂದರಿ ಸ್ಪರ್ಧೆಯನ್ನು ಗೆದ್ದ ನಂತರ ಅದೇ ವರ್ಷ ವಿಶ್ವಸುಂದರಿ ಸ್ಪರ್ಧೆಯನ್ನು ಗೆದ್ದರು.

ಐಶ್ವರ್ಯಾ ಹುಟ್ಟಿದ್ದು ಕರ್ನಾಟಕದ ಮಂಗಳೂರಿನಲ್ಲಿ. ತಂದೆ ಕೃಷ್ಣರಾಜ್ ರೈ ಮತ್ತು ತಾಯಿ ಬೃಂದಾ ರೈ. ಮುಂಬೈ ನಗರದಲ್ಲಿ ಡಿ ಜಿ ರೂಪಾರೆಲ್ ಕಾಲೇಜ್ ಮತ್ತು ಆರ್ಯ ವಿದ್ಯಾ ಕಾಲೇಜಿನಲ್ಲಿ ಓದಿದ ಐಶ್ವರ್ಯಾ ಒಂಬತ್ತನೆಯ ತರಗತಿಯಲ್ಲಿ ಇದ್ದಾಗಲೆ ಕ್ಯಾಮೆಲಿನ್ ಸಂಸ್ಥೆಗೆ ಮಾಡೆಲ್ ಆಗಿ ಕೆಲಸ ಮಾಡಿದ್ದರು. ನಂತರ ಅನೇಕ ಜಾಹೀರಾತುಗಳಲ್ಲಿ ನಟಿಸಿದ ಐಶ್ವರ್ಯಾ ಪ್ರಪಂಚಸುಂದರಿ ಪ್ರಶಸ್ತಿಯನ್ನು ಗೆದ್ದ ಮೇಲೆ ಪ್ರಸಿದ್ಧರಾದರು. ಇದರ ನಂತರ ಅನೇಕ ಚಿತ್ರಗಳಲ್ಲಿ ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದಾರೆ.

ಅವರ ಮೊದಲ ಚಿತ್ರ ಮಣಿರತ್ನಂ-ನಿರ್ದೇಶಿತ ತಮಿಳು ಚಿತ್ರ "ಇರುವರ್" (೧೯೯೭). ಈ ಚಿತ್ರ ಯಶಸ್ವಿಯಾಗಲಿಲ್ಲ. ೨೦೦೦ ದಲ್ಲಿ ಬಿಡುಗಡೆಯಾದ ತಮಿಳು ಚಿತ್ರ "ಕಂಡುಕೊಂಡೇನ್ ಕಂಡುಕೊಂಡೇನ್" ಯಶಸ್ವಿಯಾಯಿತು. ಐಶ್ವರ್ಯಾ ಅವರು ನಟಿಸಿರುವ ಬಹುಪಾಲು ಚಿತ್ರಗಳು ಹಿಂದಿ ಭಾಷೆಯವು- ಕೆಲವು ತಮಿಳು ಮತ್ತು ಒಂದು ಬೆಂಗಾಲಿ ಚಿತ್ರದಲ್ಲಿಯೂ ನಟಿಸಿದ್ದಾರೆ (ರವೀಂದ್ರನಾಥ ಠಾಕೂರರ ಕಾದಂಬರಿಯಾಧಾರಿತ "ಚೋಕೆರ್ ಬಾಲಿ"). ಹಾಲಿವುಡ್ ಮತ್ತು ಇಂಗ್ಲೆಂಡಿನಲ್ಲಿ ನಿರ್ಮಾಪಣೆ ನಡೆದ "ಬ್ರೈಡ್ ಎ೦ಡ್ ಪ್ರೆಜುಡೀಸ್" (೨೦೦೪) ಎ೦ಬ ಇಂಗ್ಲಿಷ್ ಚಿತ್ರದಲ್ಲಿಯೂ ನಟಿಸಿದ್ದಾರೆ.

ಅವರ ಅತಿ ಯಶಸ್ವಿ ಚಿತ್ರಗಳಲ್ಲಿ ಕೆಲವೆಂದರೆ "ದೇವದಾಸ್" ಮತ್ತು "ಹಮ್ ದಿಲ್ ದೇ ಚುಕೇ ಸನಮ್".

ಐಶ್ವರ್ಯಾ ರೈ ಫ್ರಾನ್ಸ್ ದೇಶದ ಕ್ಯಾನ್ಸ್ ನಲ್ಲಿ ನಡೆಯುವ ವಾರ್ಷಿಕ ಚಲನಚಿತ್ರೋತ್ಸವದ ಸಮಿತಿಯಲ್ಲಿ ಕೆಲಸ ಮಾಡಿರುವ ಏಕೈಕ ಭಾರತೀಯರು.


ಕೆಲ ಚಿತ್ರಗಳು

ಹಿ೦ದಿ

  • ಹಮ್ ದಿಲ್ ದೇ ಚುಕೇ ಸನಮ್" (೧೯೯೯)
  • ತಾಲ್ (೧೯೯೯)
  • ಜೋಷ್ (೨೦೦೦)
  • ಮೊಹಬ್ಬತೇನ್ (೨೦೦೦)
  • ದೇವದಾಸ್ (೨೦೦೨)
  • ಧೊಮ್ ೨(೨೦೦೬)
  • ರಾವಣ

ತಮಿಳು

  • ಇರುವರ್ (೧೯೯೭)
  • ಜೀನ್ಸ್ (೧೯೯೮)
  • ಕಂಡುಕೊಂಡೇನ್ ಕಂಡುಕೊಂಡೇನ್ (೨೦೦೦)
  • ಎ೦ದಿರನ್(೨೦೧೦)

ಇತರ

  • ಚೋಕೆರ್ ಬಾಲಿ (೨೦೦೩) - ಬೆ೦ಗಾಲಿ
  • ಬ್ರೈಡ್ ಎ೦ಡ್ ಪ್ರೆಜುಡಿಸ್ (೨೦೦೪) - ಇ೦ಗ್ಲಿಷ್

ಬಾಹ್ಯ ಸ೦ಪರ್ಕಗಳು