ಜಗಜಿತ್ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.7.1) (Robot: Adding bn:জগজিৎ সিং
ಚು r2.6.3) (Robot: Adding simple:Jagjit Singh
೪೫೫ ನೇ ಸಾಲು: ೪೫೫ ನೇ ಸಾಲು:
[[ps:جګجيت سنګهـ]]
[[ps:جګجيت سنګهـ]]
[[pt:Jagjit Singh]]
[[pt:Jagjit Singh]]
[[simple:Jagjit Singh]]
[[ta:ஜக்ஜீத் சிங்]]
[[ta:ஜக்ஜீத் சிங்]]
[[te:జగ్జీత్ సింగ్]]
[[te:జగ్జీత్ సింగ్]]

೧೦:೪೭, ೨೩ ಅಕ್ಟೋಬರ್ ೨೦೧೧ ನಂತೆ ಪರಿಷ್ಕರಣೆ

Expression error: Unexpected < operator.

Jagjit Singh
ಸಂಗೀತ ಶೈಲಿGhazal, Classical, Devotional, Folk
ವೃತ್ತಿComposer, Singer, Music Director, Activist, Entrepreneur
ವಾದ್ಯಗಳುVocals, Harmonium, Tanpura, Piano
ಸಕ್ರಿಯ ವರ್ಷಗಳು1966–present
L‍abelsEMI, HMV, Saregama, Universal Music, Sony BMG Music Entertainment, Polydor, TIPS, Venus, T-Series
ಅಧೀಕೃತ ಜಾಲತಾಣwww.jagjitsingh.co.uk

ಜಗಜಿತ್ ಸಿಂಗ್ ಪಂಜಾಬಿ:ਜਗਜੀਤ ਸਿੰਘ ಹಿಂದಿ:जगजीत सिंह ಉರ್ದು: جگجیت سنگھ (ಫೆಬ್ರುವರಿ ೮,೧೯೪೧ರಲ್ಲಿ ಜನನ) ಅವರು ಪ್ರಮುಖ ಭಾರತೀಯ ಗಝಲ್ ಗಾಯಕ, ಸಂಯೋಜನೆಕಾರ, ಸಂಗೀತ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಮತ್ತು ಉದ್ಯಮಿ. ಗಝಲ್ ರಾಜ ಎಂದು ಜನಪ್ರಿಯರಾದ ಜಗಜಿತ್ ಸಿಂಗ್ ಅವರು ಪತ್ನಿಯ ಜತೆಯಲ್ಲಿ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರ ಪತ್ನಿ ಚಿತ್ರಾಸಿಂಗ್ ಕೂಡ ೧೯೭೦ ಮತ್ತು ೧೯೮೦ರ ದಶಕಗಳಲ್ಲಿ ಇನ್ನೊಬ್ಬ ಪ್ರಖ್ಯಾತ ಭಾರತೀಯ ಗಝಲ್ ಗಾಯಕಿಯಾಗಿದ್ದರು. ಇವರಿಬ್ಬರು ಧ್ವನಿಮುದ್ರಿತ ಭಾರತೀಯ ಸಂಗೀತದ ಇತಿಹಾಸದಲ್ಲಿ ಪ್ರಪ್ರಥಮ ಯಶಸ್ವಿ ಜೋಡಿ(ಪತಿ-ಪತ್ನಿ)ಯಾಗಿದ್ದಾರೆ. ಇವರಿಬ್ಬರನ್ನು ಒಟ್ಟಾಗಿ ಆಧುನಿಕ ಗಝಲ್ ಗಾಯನದ ಪ್ರವರ್ತಕರು ಎಂದು ಪರಿಗಣಿಸಲಾಗಿದೆ. ಭಾರತೀಯ ಚಲನಚಿತ್ರ ಸಂಗೀತ ಪ್ರಪಂಚದ ಹೊರಗೆ ಅತ್ಯಂತ ಯಶಸ್ವಿ ಧ್ವನಿಮುದ್ರಿತ ಗಾಯನದ ಕಲಾವಿದರು ಎಂದು ಪರಿಗಣಿಸಲಾಗಿದೆ. ಅವರು ಪಂಜಾಬಿ, ಹಿಂದಿ, ಉರ್ದು, ಬಂಗಾಳಿ, ಗುಜರಾತಿ, ಸಿಂಧಿ ಮತ್ತು ನೇಪಾಳಿ ಭಾಷೆಗಳಲ್ಲಿ ಹಾಡಿದ್ದಾರೆ. ಅವರಿಗೆ ೨೦೦೩ರಲ್ಲಿ ಭಾರತದ ಮೂರನೇ ಅತ್ಯಧಿಕ ನಾಗರಿಕ ಗೌರವವಾದ ಪದ್ಮಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.

ಭಾರತದ ಶಾಸ್ತ್ರೀಯ ಕಲಾ ಪ್ರಕಾರವಾದ ಗಝಲ್‌‌ಗೆ ಜನಪ್ರಿಯತೆ ಮತ್ತು ಪುನಶ್ಚೇತನ ತಂದಿದ್ದಕ್ಕಾಗಿ ಅವರು ವ್ಯಾಪಕವಾದ ಮನ್ನಣೆ ಪಡೆದಿದ್ದಾರೆ. ಅವರು ಮೈಲುಗಲ್ಲು ಸ್ಥಾಪಿಸಿದ ಚಿತ್ರಗಳಾದ ಪ್ರೇಮ್ ಗೀತ್ (೧೯೮೧ ),ಅರ್ಥ್ ಮತ್ತು ಸಾತ್ ಸಾಥ್ (೧೯೮೨ ) ಮತ್ತು ಟಿವಿ ಸರಣಿಗಳಾದ ಮಿರ್ಜಾ ಗಾಲಿಬ್(೧೯೮೮ ) ಮತ್ತು ಕಹಕಾಶನ್(೧೯೯೧ )ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಇದನ್ನು ಸಾಧಿಸಿದ್ದಾರೆ. ಜಗಜಿತ್ ಸಿಂಗ್ ಅವರನ್ನು ಸಾರ್ವಕಾಲಿಕ ಯಶಸ್ವಿ ಗಝಲ್ ಗಾಯಕ ಮತ್ತು ಗೀತೆ ಸಂಯೋಜಕ ಎಂದು ಪರಿಗಣಿಸಲಾಗಿದೆ. ವಿಮರ್ಶಾತ್ಮಕವಾಗಿ ಅವರ ಗಾಯನದ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸು ಎರಡನ್ನೂ ಪರಿಗಣಿಸಿ ಈ ಮನ್ನಣೆ ನೀಡಲಾಗಿದೆ. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚಿನ ವೃತ್ತಿಜೀವನ ಮತ್ತು ೫೦ ಆಲ್ಬಂಗಳನ್ನು ಒಳಗೊಂಡ ಕೃತಿಸಂಚಯದೊಂದಿಗೆ, ಅವರ ಸಂಗೀತದ ವ್ಯಾಪ್ತಿ ಮತ್ತು ವಿಸ್ತಾರವು ಪ್ರಕಾರದ ಲಕ್ಷಣವನ್ನು ನಿರೂಪಿಸುತ್ತದೆಂದು ಪರಿಗಣಿಸಲಾಗಿದೆ. ವಿಮರ್ಶಾತ್ಮಕವಾಗಿ ಶ್ಲಾಘನೆಗೆ ಒಳಗಾದ ಕವಿ ಎನಿಸಿದ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಬರೆದ ಗೀತೆಗಳ ಏಕೈಕ ಸಂಯೋಜಕ ಮತ್ತು ಗಾಯಕರು ಜಗಜಿತ್ ಸಿಂಗ್ ಆಗಿದ್ದು, ಅವುಗಳನ್ನು ನಯಿ ದಿಶಾ (೧೯೯೯ )ಮತ್ತು ಸಂವೇದನಾ (೨೦೦೨ )ಎಂಬ ಎರಡು ಆಲ್ಬಂಗಳಲ್ಲಿ ಸಂಯೋಜಿಸಿ ಧ್ವನಿಮುದ್ರಿಸಿದ್ದಾರೆ. ಭಾರತದ ಪ್ರಸಕ್ತ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಅವರ ಪತ್ನಿ ಗುರುಶರಣ್ ಕೌರ್ ಅವರ ಉತ್ಕಟೇಚ್ಚೆಯ ಅಭಿಮಾನಿಗಳೆಂದು ಹೆಸರಾಗಿದ್ದಾರೆ.

ಭಾರತದ ಸಂಸತ್ ಭವನದ ಐತಿಹಾಸಿಕ ಕೇಂದ್ರ ಭವನದಲ್ಲಿ ೨೦೦೭ರ ಮೇ ೧೦ರಂದು ನಡೆದ ಮಹತ್ವದ ಜಂಟಿ ಅಧಿವೇಶನದಲ್ಲಿ, ಜಗಜಿತ್ ಸಿಂಗ್ ಕೊನೆಯ ಮೊಘಲ್ ಚಕ್ರವರ್ತಿ ಬಹಾದುರ್ ಶಾಹ್ ಜಫಾರ್‌ ಅವರ ಪ್ರಖ್ಯಾತ ಗಝಲ್ ಲಗ್ತಾ ನಹೀನ್ ಹೈ ದಿಲ್ ಮೇರಾ ಗಾಯನವನ್ನು ಹಾಡಿದರು. ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟ(೧೮೫೭ )ದ ೧೫೦ನೇ ವಾರ್ಷಿಕೋತ್ಸವದ ಸ್ಮರಣಾರ್ಥ ಇದನ್ನು ಅವರು ಹಾಡಿದರು. ರಾಷ್ಟ್ರಪತಿ A P J ಅಬ್ದುಲ್ ಕಲಾಂ, ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಉಪರಾಷ್ಟ್ರಪತಿ ಬೈರೋನ್ ಸಿಂಗ್ ಶೆಖಾವತ್, ಲೋಕಸಭಾ ಅಧ್ಯಕ್ಷ ಸೋಮನಾಥ್ ಚಟರ್ಜಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಮತ್ತು ಮಾಜಿ ಪ್ರಧಾನಮಂತ್ರಿಗಳು, ಸಂಸತ್ ಸದಸ್ಯರು, ವಿದೇಶಿ ರಾಯಭಾರಿಗಳು ಮತ್ತು ಹೈಕಮೀಷನರ್‌ಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಗಜಿತ್ ಸಿಂಗ್ ಪ್ರಥಮ ಭಾರತದ ಸಂಗೀತ ಸಂಯೋಜಕರಾಗಿದ್ದು, ಅವರು ಭಾರತೀಯ ಸಂಗೀತದ ಇತಿಹಾಸದಲ್ಲಿ ತಮ್ಮ ಪತ್ನಿ ಚಿತ್ರಾ ಸಿಂಗ್ ಜತೆಯಲ್ಲಿ (ಭಾರತದ ಪ್ರಥಮ ಡಿಜಿಟಲ್ ದ್ವನಿಮುದ್ರಿತ) ಆಲ್ಬಂ ಬಿಯಾಂಡ್ ಟೈಮ್‌ ಗೆ ಡಿಜಿಟಲ್ ಮಲ್ಟಿ-ಟ್ರಾಕ್ ಧ್ವನಿಮುದ್ರಣವನ್ನು ಬಳಸಿದ ಪ್ರಥಮ ಧ್ವನಿಮುದ್ರಣದ ಕಲಾವಿದರೆನಿಸಿದ್ದಾರೆ. ಅವರು ಭಾರತದ ಪ್ರಭಾವಿ ಕಲಾವಿದರಲ್ಲಿ ಒಬ್ಬರೆಂದು ಕೂಡ ಪರಿಗಣಿತರಾಗಿದ್ದಾರೆ. ಸಿತಾರ್ ದಂತಕಥೆ ರವಿ ಶಂಕರ್ ಮತ್ತು ಇತರ ಭಾರತದ ಶಾಸ್ತ್ರೀಯ ಸಂಗೀತ ಮತ್ತು ಸಾಹಿತ್ಯದ ಪ್ರಮುಖ ಗಣ್ಯರೊಟ್ಟಿಗೆ ಸೇರಿಕೊಂಡು ಸಿಂಗ್ ಅವರು ಭಾರತದಲ್ಲಿ ಕಲೆ ಮತ್ತು ಸಂಸ್ಕೃತಿಯ ರಾಜಕೀಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಭಾರತದ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ವಿಶೇಷವಾಗಿ ಜಾನಪದ ಕಲೆಗಳು ಮತ್ತು ಸಂಗೀತಗಾರ ವೃತ್ತಿನಿರತರು ಅನುಭವಿಸುವ ಬೆಂಬಲದ ಕೊರತೆ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದ್ದರು. ಸೇಂಟ್ ಮೇರಿ`ಸ್ ಸ್ಕೂಲ್, ಮುಂಬೈನ ಗ್ರಂಥಾಲಯ, ಬಾಂಬೆ ಹಾಸ್ಪಿಟಲ್, CRY, ಸೇವ್ ದಿ ಚಿಲ್ಡ್ರನ್ ಮತ್ತು ALMA.ಮುಂತಾದ ಅನೇಕ ಜನೋಪಕಾರಿ ಪ್ರಯತ್ನಗಳಿಗೆ ಅವರು ಸಕ್ರಿಯ ಬೆಂಬಲವನ್ನು ನೀಡಿದರು.

ಆರಂಭಿಕ ವರ್ಷಗಳು ಮತ್ತು ಹಿನ್ನೆಲೆ

ಜಗಜಿತ್ ಸಿಂಗ್ ಅವರು ಶ್ರೀ ಗಂಗಾನಗರ್, ರಾಜಸ್ಥಾನ[೧]ದಲ್ಲಿ ಅಮರ್ ಸಿಂಗ್ ದಿಮಾನ್ ಎಂಬುವವರಿಗೆ ಜನಿಸಿದರು. ಅಮರ್ ಸಿಂಗ್ ಸರ್ಕಾರಿ ನೌಕರರಾಗಿದ್ದು, ಭಾರತದ ಪಂಜಾಬಿನ ದಲ್ಲಾ ಗ್ರಾಮದ ನಿವಾಸಿಗಳು. ಅವರ ತಾಯಿ ಸಮ್ರಾಲಾದ ಒಟ್ಟಾಲನ್ ಗ್ರಾಮದ ಬಚ್ಚನ್ ಕೌರ್. ಅವರಿಗೆ ನಾಲ್ವರು ಸಹೋದರಿಯರು ಮತ್ತು ಇಬ್ಬರು ಸಹೋದರರಿದ್ದು, ಅವರ ಕುಟುಂಬದಲ್ಲಿ ಜೀತ್ ಎಂದೇ ಜಗಜಿತ್ ಹೆಸರಾಗಿದ್ದರು. ಅವರು ಸಿಖ್ ಧರ್ಮಾಚರಣೆಯಲ್ಲಿ ಬೆಳೆದರು.

ಅವರು ಶ್ರೀ ಗಂಗಾನಗರದ ಖಾಲ್ಸಾ ಪ್ರೌಢಶಾಲೆ ಯಲ್ಲಿ ಅಭ್ಯಸಿಸಿದರು ಮತ್ತು ಮೆಟ್ರಿಕ್ಯುಲೇಷನ್ ನಂತರ ಸರ್ಕಾರಿ ಕಾಲೇಜು,ಶ್ರೀ ಗಂಗಾನಗರದಲ್ಲಿ ವಿಜ್ಞಾನವನ್ನು ಅಭ್ಯಸಿಸಿದರು ಮತ್ತು ಜಲಂಧರ್DAV ಕಾಲೇಜ್‌ನಲ್ಲಿ ಕಲೆಯಲ್ಲಿ ಪದವಿಯನ್ನು ಗಳಿಸಿದರು. ಹರ್ಯಾಣದ ಕುರುಕ್ಷೇತ್ರ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಜಗಜಿತ್ ಸಿಂಗ್ ಅವರು ಬಾಲ್ಯದ ದಿನಗಳಿಂದಲೂ ಸಂಗೀತದ ನಂಟು ಹೊಂದಿದ್ದರು. ಅವರು ಪಂಡಿತ್ ಚಗನ್‌ಲಾಲ್ ಶರ್ಮಾ ನೇತೃತ್ವದಲ್ಲಿ ಗಂಗಾನಗರದಲ್ಲಿ ಎರಡುವರ್ಷ ಸಂಗೀತವನ್ನು ಕಲಿತರು ನಂತರ ಅವರು ಖಾಯಲ್, ತುಮ್ರಿ ಮತ್ತು ದ್ರುಪದ್ ಸ್ವರೂಪಗಳ ಭಾರತೀಯ ಶಾಸ್ತ್ರೀಯ ಸಂಗೀತವನ್ನು ಸಾಯ್ನಿಯ ಘರಾನಾ ಶಾಲೆಯ ಉಸ್ತಾದ್ ಜಮಾಲ್ ಖಾನ್ಅವರಿಂದ ಕಲಿಯಲು ಆರು ವರ್ಷಗಳನ್ನು ಮುಡುಪಾಗಿಟ್ಟರು.

ವೃತ್ತಿಜೀವನ

ಆರಂಭಿಕ ವೃತ್ತಿಜೀವನ

ಪಂಜಾಬ್ ವಿಶ್ವವಿದ್ಯಾನಿಲಯ ಮತ್ತು ಕುರುಕ್ಷೇತ್ರ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗು ಪ್ರಾಧ್ಯಾಪಕರಾಗಿದ್ದ ದಿವಂಗತ ಸೂರಜ್ ಬನ್ ಸಂಗೀತದಲ್ಲಿ ಜಗಜಿತ್ ಅವರಿಗೆ ಪ್ರೋತ್ಸಾಹ ನೀಡಿದ್ದರು. ಅವರು ೧೯೬೫ರಲ್ಲಿ ಸಂಗೀತಗಾರ ಮತ್ತು ಗಾಯಕರಾಗಿ ಉತ್ತಮ ಅವಕಾಶಗಳನ್ನು ಅರಸಿಕೊಂಡು ಮುಂಬೈಗೆ ಆಗಮಿಸಿದರು. ಸಂಗೀತದ ಉದ್ಯಮದಲ್ಲಿ ಅವರ ಮುಂಚಿನ ಹೋರಾಟವು ಅವರೇ ವಿವರಣೆ ನೀಡುವಂತೆ ಅಷ್ಟೊಂದು ಕಠಿಣವಾಗಿಲ್ಲದಿದ್ದರೂ, ವಿಷಮ ಪರೀಕ್ಷೆಗಳು ಮತ್ತು ಕ್ಲೇಶಗಳನ್ನು ಕೂಡ ಹಂಚಿಕೊಂಡಿದ್ದರು. ಅವರು ಹಣ ತೆರುವ ಅತಿಥಿಯಾಗಿ(ಪೇಯಿಂಗ್ ಗೆಸ್ಟ್) ವಾಸಿಸಿದರು ಮತ್ತು ಅವರ ಮುಂಚಿನ ಕೆಲಸಗಳು ಜಾಹೀರಾತು ಪ್ರಾಸಗಳನ್ನು ಹಾಡುವುದು ಅಥವಾ ವಿವಾಹಗಳು ಅಥವಾ ಸಮಾರಂಭಗಳಲ್ಲಿ ಪ್ರದರ್ಶನ ನೀಡುವುದಾಗಿತ್ತು.

ಚಲನಚಿತ್ರಕ್ಕೆ ಮೊದಲ ಪ್ರವೇಶ

ಜಗಜಿತ್ ಸಿಂಗ್ ಅವರಿಗೆ ಗುಜರಾತಿ ಚಲನಚಿತ್ರದಲ್ಲಿ ಹಾಡುವಂತೆ ಆಹ್ವಾನಿಸಲಾಯಿತು. ಗುಜರಾತಿ ಚಲನಚಿತ್ರ ಧರತಿ ನಾ ಚೋರು ವನ್ನು ಸುರೇಶ್ ಅಮೀನ್ ನಿರ್ಮಾಣ ಮಾಡಿದ್ದರು. ಸುರೇಶ್ ಅಮೀನ್ ಅವರು ಜಗಜಿತ್ ಸಿಂಗ್ ಅವರಿಂದ "ಜೋಲಿ ವಾಲೆ ಬಾಬಾ" ಎಂದೇ ಪ್ರಖ್ಯಾತರಾಗಿದ್ದರು. ಏಕೆಂದರೆ ಅವರು ಹೋದ ಕಡೆಯೆಲ್ಲ ಹೆಗಲಿಗೆ ಕೆಂಪು ಬಣ್ಣದ ಚೀಲವನ್ನು ಒಯ್ಯುತ್ತಿದ್ದರು. ಸುರೇಶ್ ಅಮಿನ್ ಬರೋಡ-ಗುಜರಾತ್‌ ಮೂಲದವರಾಗಿದ್ದು, ಸ್ಕಾಡ್ ಕನ್ಸಲ್ಟೆಂಟ್ಸ್ ಪ್ರೈ. ಲಿ ಜತೆ ಸಂಬಂಧ ಹೊಂದಿದ್ದರು. ಸುರೇಶ್ ಅಮಿನ್ ಅವರು ೧೯೯೮ರಲ್ಲಿ ನಿಧನರಾದಾಗ, ಬರೋಡದ ಸ್ಕಾಡ್ ಕನ್ಸಲ್ಟೆಂಟ್ಸ್ ೧೯೯೮ಡಿಸೆಂಬರ್‌ನಲ್ಲಿ ಜಗಜಿತ್ ಸಿಂಗ್ ಅವರಿಂದ ನೇರ ಪ್ರಸಾರದ ಗಾನಗೋಷ್ಠಿಯನ್ನು ಆಯೋಜಿಸಿತು. ಜಗಜಿತ್ ಸಿಂಗ್(ಸ್ನೇಹಿತರು ಮಹಾರಾಜ್ ಎಂದು ಕರೆಯುತ್ತಿದ್ದರು) ಸುರೇಶ್ ಅಮಿನ್ ಅವರಿಗೆ ವಿಶೇಷ ಗೌರವ ಸಲ್ಲಿಸಿದರು ಹಾಗು ಸ್ಕಾಡ್ ಕನ್ಸಲ್ಟೆಂಟ್ಸ್ ಗಾನಗೋಷ್ಠಿಯಲ್ಲಿ "ಚಿಟ್ಟಿ ನ ಕೋಯಿ ಸಂದೇಶ್" ಎಂಬ ಗೀತೆಯನ್ನು ಹಾಡುವ ಮೂಲಕ ಸುರೇಶ್ ಅಮಿನ್ ಅವರಿಗೆ ಮುಡುಪಾಗಿಟ್ಟರು. ಸುರೇಶ್ ಅಮೀನ್ ಸಾವಿನ ಪರಿವೆಯಿಲ್ಲದಿರುವುದಕ್ಕೆ ಈ ಗೀತೆಯು ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ.

ಪ್ರಸಿದ್ದಿಯತ್ತ ಬೆಳವಣಿಗೆ

೧೯೭೦ರ ದಶಕದಲ್ಲಿ ಗಝಲ್ ಹಾಡುವ ಕಲೆಯು ನೂರ್ ಜೆಹಾನ್, ಮಲಿಕಾ ಪುಕ್‌ರಾಜ್, ಬೇಗಂ ಅಖ್ತರ್, ತಲಾತ್ ಮಹ್ಮೂದ್ ಮೆಹದಿ ಹಸನ್ ಮುಂತಾದ ಸುಭದ್ರ ಹೆಸರುಗಳಿಂದ ಮೇಲುಗೈ ಪಡೆಯಿತು. ಆದಾಗ್ಯೂ, ಜಗಜಿತ್ ಅವರು ತಮ್ಮ ಹೆಜ್ಜೆಗುರುತನ್ನು ಮೂಡಿಸಿ, ಸ್ವಯಂ ಸ್ಥಾನವನ್ನು ರೂಪಿಸಿಕೊಳ್ಳಲು ಸಮರ್ಥರಾದರು. ೧೯೭೬ರಲ್ಲಿ ಅವರ ಆಲ್ಬಂ, ದಿ ಅನ್‌ಫರ್ಗಟೇಬಲ್ಸ್ (HMV LP ರೆಕಾರ್ಡ್ಸ್‌ಗಳಲ್ಲಿ)ಸಂಗೀತದ ಅಂಗಡಿಗಳಲ್ಲಿ ಜನಪ್ರಿಯವಾಯಿತು. ಮೂಲಭೂತವಾಗಿ ಗಝಲ್ ಆಲ್ಬಂ ಆಗಿದ್ದ ಅದು ಸಂಗೀತಕ್ಕೆ ನೀಡಿದ್ದ ಮಹತ್ವ ಮತ್ತು ಜಗಜಿತ್ ಅವರ ಹೊಸ ಧ್ವನಿಯು ಗಝಲ್ ಗಾಯನದ ಮುಂಚಿನ ಶೈಲಿಯಿಂದ ನಿರ್ಗಮನವಾಗಿತ್ತು. ಈ ಶೈಲಿಯು ಶಾಸ್ತ್ರೀಯ ಮತ್ತು ಅರೆ ಶಾಸ್ತ್ರೀಯ ಭಾರತದ ಸಂಗೀತವನ್ನು ತೀವ್ರವಾಗಿ ಆಧರಿಸಿತ್ತು. ಸಂದೇಹವಾದಿಗಳಿಗೆ ಈ ಗೀತೆಗೆ ಅವರದೇ ಆದ ಆಕ್ಷೇಪಗಳಿದ್ದವು. ಮಡಿವಂತರು ಅದನ್ನು ತಿರಸ್ಕರಿಸಿದರು. ಆದರೆ ಶ್ರೋತೃಗಳ ನಡುವೆ ಅದು ವ್ಯಾಪಕವಾಗಿ ಯಶಸ್ವಿಯಾಯಿತು ಮತ್ತು ಆಲ್ಬಂ ಹೊಸ ಮಾರಾಟ ದಾಖಲೆಗಳನ್ನು ನಿರ್ಮಿಸಿತು.

೧೯೬೭ರಲ್ಲಿ ಜಗಜಿತ್ ಗಾಯಕಿಯೂ ಆಗಿದ್ದ ಚಿತ್ರಾ ಅವರನ್ನು ಭೇಟಿ ಮಾಡಿದರು. ಸುಮಾರು ಎರಡು ವರ್ಷಗಳ ಪ್ರಣಯದ ನಂತರ ಅವರು ವಿವಾಹವಾದರು(೧೯೬೯ ). ಅವರು ಪ್ರಥಮ ಪತಿ-ಪತ್ನಿಯರ ಗಾಯಕ ತಂಡವೆಂದು ಯಶಸ್ವಿಯಾಗಿ ಪಡಿಮೂಡಿಸಿದರು. ಜಗಜಿತ್ ಮತ್ತು ಚಿತ್ರಾ ಸಿಂಗ್ ಅವರು ಗಝಲ್ ಸಂಗೀತಕ್ಕೆ ಮತ್ತು ಭಾರತೀಯ ಸಂಗೀತೋದ್ಯಮಕ್ಕೆ ವಿಪುಲ ಕೊಡುಗೆಗಳನ್ನು ನೀಡಿದರು.

ಇವರಿಬ್ಬರ ಯಶಸ್ವಿ ಬಿಡುಗಡೆಗಳಲ್ಲಿ ಎಕ್‌ಸ್ಟಸೀಸ್ , ಎ ಸೌಂಡ್ ಅಫೇರ್ ಮತ್ತು ಪ್ಯಾಷನ್ಸ್ ಸೇರಿವೆ. ಈ ಆಲ್ಬಂಗಳು ಲವಲವಿಕೆಯಿಂದ ಕೂಡಿದ್ದರೂ, ೧೯೯೦ರ ದಶಕದ ಆರಂಭದ ವರ್ಷಗಳಲ್ಲಿ ಬಿಡುಗಡೆಯಾದ ಬಿಯಾಂಡ್ ಟೈಮ್ ಶಬ್ದಗಳ ಜತೆ ಪ್ರಯೋಗವಾಗಿದ್ದು, ಪ್ರದೇಶ ಮತ್ತು ಕಾಲದ ಆಚೆಗಿನ ಭಾವನೆಯನ್ನು ಮುಟ್ಟಿಸುತ್ತದೆ.

ಈ ಸಂದರ್ಭದಲ್ಲಿ ದಂಪತಿಯ ಏಕೈಕ ಪುತ್ರ ವಿವೇಕ್(೨೧ ) ೧೯೯೦ರ ಜುಲೈ ೨೮ರಂದು ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣವಪ್ಪಿದಾಗ,ಅವರು ದುಃಖದಲ್ಲಿ ಮುಳುಗಿದರು. ಅವರ ತರುವಾಯದ ಆಲ್ಬಂ 'ಸಮ್‌ವನ್ ಸಮ್ವೇರ್' ಇಬ್ಬರೂ ಒಟ್ಟಿಗೆ ಗಝಲ್ ಹಾಡಿರುವ ಕೊನೆಯ ಆಲ್ಬಂ ಆಗಿದೆ. ಈ ಆಲ್ಬಂ ಆತ್ಮ, ಅಲೌಕಿಕ, ಆತ್ಮಸಾಕ್ಷಿಯ ಮತ್ತು ಆತ್ಮಾವಲೋಕನದ ಪ್ರವಾಸವಾಗಿತ್ತು. ಈ ಗಝಲ್‌ಗಳು ಹೃದಯಸ್ಪರ್ಶಿ ಲಕ್ಷಣವನ್ನು ಹೊಂದಿದ್ದು, ಆಳವಾದ ವೈಯಕ್ತಿಕ ನಷ್ಟದ ಭಾವನೆಯನ್ನು ಬಿಂಬಿಸಿದವು. ಇದಾದ ನಂತರ ಚಿತ್ರಾ ಸಿಂಗ್ ಗಾಯನವನ್ನು ತ್ಯಜಿಸಿದರು.

ಜಗಜಿತ್ ಸಿಂಗ್ ಅವರ ನಂತರದ ಆಲ್ಬಂಗಳಾದ ಹೋಪ್ , ಇನ್ ಸರ್ಚ್ , ಇನ್‌ಸೈಟ್ , ಮಿರೇಜ್ , ವಿಷನ್ಸ್ , ಕಹಕಶನ್ (ಅರ್ಥ "ಗ್ಯಾಲಕ್ಸಿ"), ಲವ್ ಈಸ್ ಬ್ಲೈಂಡ್ , ಚಿರಾಗ್ (ಅರ್ಥ"ದೀಪ"/"ಜ್ಯೋತಿ")ಕೂಡ ಯಶಸ್ಸು ಸಾಧಿಸಿತು. ಸಾಜ್ಡಾ (ಒಂದು ಉರ್ದು ಪದ ಅರ್ಥ "ಶರಣಾಗತಿ"),ಜಗಜಿತ್ ಮತ್ತು ಲತಾ ಮಂಗೇಶ್ಕರ್ ಅವರು ಹಾಡಿದ ಗಝಲ್‌ಗಳಾಗಿದ್ದು, ಇನ್ನೊಂದು ಅದ್ಬುತ ಬಿಡುಗಡೆಯಾಗಿದೆ ಹಾಗು ಇದು ಶ್ರೇಷ್ಠ ಗಝಲ್ ಆಲ್ಬಂ ಆಗಿ ಗುರುತು ಮೂಡಿಸಿದೆ. ಅವರ ಆಲ್ಬಂಗಳ ಒಟ್ಟು ಯಶಸ್ಸುಗಳಿಂದ ಅವರನ್ನು ಭಾರತದ ಶ್ರೇಷ್ಟ ಗಝಲ್ ಗಾಯಕರನ್ನಾಗಿ ಮಾಡಿತು. ಪ್ರೇಕ್ಷಕರು ಇನ್ನೂ ಹೆಚ್ಚಿನದನ್ನು ಬಯಸಿದರು ಮತ್ತು ಜಗಜಿತ್ ಸಿಂಗ್ ಅವರ ಪಂಜಾಬಿ ಆಲ್ಬಂಗಳೊಂದಿಗೆ ಸಹಾಯ ಮಾಡಿದರು. ಉತ್ಸಾಹಪೂರಿತ, ಹುರುಪಿನ ಮತ್ತು ಅತ್ಯಂತ ಉಲ್ಲಾಸದ ಅವರ ಪಂಜಾಬಿ ಹಾಡುಗಳು ಸಂತೋಷಕರ ಮತ್ತು ಖುಷಿ ನೀಡುವಂತದ್ದಾಗಿತ್ತು. ಅವರ ಮೋಡಿಹಾಕುವ ಗಝಲ್ ಗೀತೆಗಳು ಉತ್ತಮ ದರ್ಜೆಯ ಕವಿತೆಯನ್ನು ಹೆಸರಾಂತ ಕವಿಗಳಿಂದ ಬಳಸಿಕೊಂಡವು. ಆ ಕವಿಗಳಲ್ಲಿ ಮಿರ್ಜಾ ಗಾಲಿಬ್, ಫಿರಕ್ ಗೋರಕ್‌ಪುರಿ, ಖತೀಲ್ ಶಿಫಾಯಿ, ಶಾಹಿದ್ ಕಬೀರ್, ಅಮೀರ್ ಮೀನಾಯ್, ಕಫೀಲ್ ಅಜರ್, ಸುದರ್ಶನ್ ಫಕೀರ್ ಮತ್ತುನಿದಾ ಫಜ್ಲಿ, ಮತ್ತು ಸಮಕಾಲೀನ ಲೇಖಕರಾದ ಜಾಕಾ ಸಿದ್ದಿಖಿ, ನಜೀರ್ ಬಕ್ರಿ, ಫಾಯಿಜ್ ರತ್ಲಾಮಿಮತ್ತು ರಾಜೇಶ್ ರೆಡ್ಡಿಸೇರಿದ್ದಾರೆ.

ಜಗಜಿತ್ ಬಾಲಿವುಡ್ ಚಲನಚಿತ್ರಗಳ ಅನೇಕ ಗೀತೆಗಳಿಗೆ ಹಿನ್ನೆಲೆ ಗಾಯಕರಾಗಿ ಕೂಡ ಹಾಡಿದ್ದಾರೆ. ಇವುಗಳಲ್ಲಿ ಅರ್ಥ್ , ಸಾತ್ ಸಾತ್ , ಮ್ತತುಪ್ರೇಮ್‌ಗೀತ್ ಒಳಗೊಂಡಿವೆ. (ಎಲ್ಲವೂ ೧೯೮೦ರ ದಶಕದ ಚಿತ್ರಗಳು). ಈ ಹಾಡುಗಳು ಇಂದಿಗೂ ಜನಪ್ರಿಯವಾಗಿ ಉಳಿದಿವೆ. ವಾಸ್ತವವಾಗಿ, ಪ್ರೇಮ್‌ಗೀತ್‌ ನ ಎಲ್ಲ ಗೀತೆಗಳನ್ನು ಜಗಜಿತ್ ಸಂಯೋಜನೆ ಮಾಡಿದ್ದಾರೆ. TV ಧಾರಾವಾಹಿ(ಮಿರ್ಜಾ ಗಾಲಿಬ್ (ಮಿರ್ಜಾ ಗಾಲಿಬ್ ಕವಿಯ ಜೀವನ ಆಧಾರಿತ)ಗೆ ಅವರ ಸಂಯೋಜನೆಗಳು ಗಝಲ್ ಅಭಿಮಾನಿಗಳಲ್ಲಿ ಅತ್ಯಂತ ಜನಪ್ರಿಯವಾಗಿ ಉಳಿದಿವೆ. ಗಾಲಿಬ್ ಕವಿತೆಯ ವಿಶೇಷ ಅಂಶವನ್ನು ಜಗಜಿತ್ ಸಿಂಗ್ ಅವರ ಗಾಲಿಬ್ ಗಝಲ್‌ಗಳಲ್ಲಿನ ಬಾವಪೂರ್ಣ ಸಂಯೋಜನೆಗಳಲ್ಲಿ ಸೂಕ್ಷ್ಮವಾಗಿ ಮತ್ತು ಅದ್ಭುತವಾಗಿ ಮೂಡಿಸಲಾಗಿದೆ. ಆಲ್ಬಂನ್ನು ವಾಸ್ತವವಾಗಿ ಮೇರುಕೃತಿ ಎಂದು ಕರೆಯಬಹುದು.

ಅವರ ಮುಂಚಿನ ಗಝಲ್‌(೭೦ ಮತ್ತು ೮೦ರ ದಶಕಗಳಲ್ಲಿ ಹಾಡಿದ ಗಝಲ್‌ಗಳು)ಗಳಿಗೆ ಹೋಲಿಸಿದರೆ ಅವರ ನಂತರದ ಗಝಲ್‌ಗಳು ಅತ್ಯಂತ ಭಾವಪೂರ್ಣ ಮತ್ತು ತೀಕ್ಷ್ಣವಾದ ಚರ್ಯೆಯನ್ನು ಹೊಂದಿವೆ. ಉದಾಹರಣೆಗೆ ಮರಾಸಿಮ್ , ಫೇಸ್ ಟು ಫೇಸ್ , ಆಯೀನಾ , ಕ್ರೈ ಫಾರ್ ಕ್ರೈ ಆದರೆ ಇವೆಲ್ಲವುಗಳಲ್ಲಿ ರೊಮಾನ್ಸ್(ಭಾವಾತಿರೇಕದ ಪ್ರೇಮ)ಹಿಂಭಾಗದ ಸ್ಥಾನವನ್ನು ಎಂದಿಗೂ ಪಡೆಯಲಿಲ್ಲ!. ಆತ್ಮದತ್ತ ಪಯಣವು ಭಾವಪ್ರಧಾನ ವಿರಾಮಗಳಿಂದ ಕೂಡಿದೆ. ಉದಾಹರಣೆಗೆ ದಿಲ್ ಕಹಿನ್ ಹೋಶ್ ಕಹಿನ್ . ಇತ್ತೀಚಿನ ಬಾಲಿವುಡ್ ಚಿತ್ರಗಳಾದ ದುಶ್ಮನ್ , ಸರ್ಫರೋಶ್ , ತುಮ್ ಬಿನ್ ಮತ್ತು ತರ್ಕೀಬ್ ಗಳಲ್ಲಿನ ಗಝಲ್‌ಗಳು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಜಗಜಿತ್ ಸಿಂಗ್ ಅವರ ಬಹುತೇಕ ಮುಂಚಿನ ಆಲ್ಬಂಗಳು ಇಂಗ್ಲೀಷ್ ಹೆಸರುಗಳನ್ನು ಹೊಂದಿದ್ದವು. ನಂತರ ಇವುಗಳಿಗೆ ಉರ್ದು ಹೆಸರುಗಳನ್ನು ನೀಡಲಾಯಿತು, ಉದಾಹರಣೆಗೆ ಸಹರ್ (ಅರ್ಥ "ಮುಂಜಾವು"/"ಬೆಳಿಗ್ಗೆ"), ಮುಂತಜಿರ್ (ಅರ್ಥ "ಕಾಯುವಿಕೆ"),ಮರಸಿಂ(ಅರ್ಥ "ನಂಟು"/"ಸಂಬಂಧ"/"ಬಂಧುತ್ವ")ಮತ್ತು "ಸೋಜ್"(ಅರ್ಥ ಕರುಣರಸ) ಈ ಬದಲಾವಣೆಯು ಉದ್ದೇಶಪೂರ್ವವಲ್ಲದಿರಬಹುದು. ಆದರೆ ಅವರ ಗಾಯನದಲ್ಲಿ ಮೈಲಿಗಲ್ಲಿನ ಸಾಧನೆಯ ಗುರುತಾಗಿದೆ. ಹೊಸ ಆಲ್ಬಂಗಳು ಸಾಹಿತ್ಯಗಳ ಅತ್ಯುತ್ತಮ ಆಯ್ಕೆಯನ್ನು ತೋರಿಸುತ್ತದೆ ಮತ್ತು ಅವರ ಗಾಯನವು ಅತ್ಯುಚ್ಛ ಶ್ರೇಣಿಯನ್ನು ಮುಟ್ಟಿತು.

ಗಝಲ್‌ಗಳಲ್ಲದೇ ಜಗಜಿತ್ ಸಿಂಗ್ ಅವರು ಭಜನ್‌ಗಳು ಮತ್ತು ಗುರ್ಬಾನಿ(ಕ್ರಮವಾಗಿ ಹಿಂದು ಮತ್ತು ಸಿಖ್ ಭಕ್ತಿಗೀತೆಗಳು) ಮಾ , ಹರೇ ಕೃಷ್ಣ , ಹೇ ರಾಂ.. ಹೇ ರಾಂ , ಇಚ್ಚಾಬಾಲ್ ಮತ್ತು ಪಂಜಾಬಿಯಲ್ಲಿ ಮನ್ ಜೀತೈ ಜಗಜೀತ್ ಮುಂತಾದವು ಅವರನ್ನು ಮುಖೇಶ್, ಹರಿ ಓಂ ಶರಣ್, ಯೇಸುದಾಸ್, ಅನುಪ್ ಜಲೋಟಾಮತ್ತು ಪುರುಷೋತ್ತಮ್ ದಾಸ್ ಜಲೋಟಾ ಮುಂತಾದ ಭಜನ್ ಗಾಯಕರ ಸಾಲಿನಲ್ಲಿ ಇರಿಸಿತು. ಕ್ಷೋಬೆಗೊಂಡ ನರಗಳ ಮೇಲೆ ಜಗಜೀತ್ ಧ್ವನಿಯ ಆಪ್ಯಾಯಮಾನ ಪರಿಣಾಮವು ಮೆಟ್ರೊಗಳಲ್ಲಿನ(ಭಾರತದ ದೊಡ್ಡನಗರಗಳಿಗೆ ಹೀಗೆಂದು ಕರೆಯಲಾಗುತ್ತದೆ)ಮನೋವಿಜ್ಞಾನಿಗಳು ಒತ್ತಡ ಉಪಶಮನಕ್ಕಾಗಿ ಅವನ್ನು ಆಲಿಸುವಂತೆ ಶಿಫಾರಸು ಮಾಡುತ್ತಾರೆ.

ಪ್ರಭಾವ

ಜಗಜೀತ್ ಅವರು ಮುಂಚೆ ಗಣ್ಯವರ್ಗಗಳಿಗೆ ಮಾತ್ರ ಸೀಮಿತವಾಗಿದ್ದ ಗಝಲ್ ಪ್ರಕಾರವನ್ನು ಜನಸಾಮಾನ್ಯರತ್ತ ತಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಾಂಪ್ರದಾಯಿಕ ವಾದ್ಯಗೋಷ್ಠಿಯನ್ನು(ತಬಲಾ,ಧೋಲಕ್, ಬೋಂಗೊಗಳು, ಸಿತಾರ್, ಸರೋದ್, ಕೊಳಲು ಮತ್ತು ಹಾರ್ಮೊನಿಯಂ ಮತ್ತು ಕೆಲವು ತಂತಿ ವಾದ್ಯಗಳು)ಉಳಿಸಿಕೊಂಡು ಹೆಚ್ಚು ಪಾಶ್ಚಿಮಾತ್ಯ ವಾದ್ಯಗಳನ್ನು ಸೇರಿಸಿ ಧ್ವನಿಯ ವಿನ್ಯಾಸ ಬದಲಿಸಿದ ಆದ್ಯಪ್ರವರ್ತಕರೆಂದು ಅವರ ಸಂಗೀತ ನಿರ್ದೇಶನವನ್ನು ಕಾಣಲಾಗಿದೆ. ಜಗಜಿತ್ ಸಿಂಗ್ ಅವರಿಗೆ ಗಝಲ್‌ಜೀತ್ ಸಿಂಗ್ ಎಂದು ಉಪನಾಮ ನೀಡಲಾಗಿದೆ.

ಆಧುನಿಕ ಕಾಲದ ಅತ್ಯುಚ್ಚ ಸ್ಥಾನದ ಗಾಯಕ ಕುಮಾರ್ ಸಾನು ಅವರನ್ನು ಬೆಳಕಿದ ತಂದ ಹೆಗ್ಗಳಿಕೆಗೆ ಜಗಜಿತ್ ಸಿಂಗ್ ಪಾತ್ರರಾಗಿದ್ದಾರೆ. ಜಗಜಿತ್ ಸಿಂಗ್ ತಮಗೆ ಗಾಯನದ ಪ್ರಥಮ ಅವಕಾಶ ನೀಡಿದರು ಎಂದು ಸಾನು ಸ್ವತಃ ಒಪ್ಪಿಕೊಂಡಿದ್ದಾರೆ.

ಪಾಕಿಸ್ತಾನವು ಭಾರತದ ಹಾಡುಗಾರರಿಗೆ ಅವಕಾಶ ನೀಡುವುದಕ್ಕೆ ಸ್ಪಂದಿಸದಿದ್ದಾಗ, ಜಗಜೀತ್ ಸಿಂಗ್ ಅವರು ಪಾಕಿಸ್ತಾನದ ಕಲಾವಿದರು ಭಾರತದಲ್ಲಿ ಗಾಯನ ಮಾಡುವುದಕ್ಕೆ ಅವಕಾಶ ನೀಡುವುದನ್ನು ವಿರೋಧಿಸಿದ್ದರು.

ಯಶಸ್ವಿ ವೃತ್ತಿಜೀವನವನ್ನು ಸ್ವಯಂ ರೂಪಿಸಿಕೊಳ್ಳುವ ಜತೆಗೆ, ಜಗಜಿತ್ ಸಿಂಗ್ ಅನೇಕ ಪ್ರತಿಭಾಶಾಲಿ ಹೊಸ ಗಾಯಕರಾದ ಅಭಿಜೀತ್, ತಾಲತ್ ಅಜೀಜ್,ಘನಶ್ಯಾಂ ವಾಸ್ವಾನಿ, ಅಶೋಕ್ ಖೋಸ್ಲಾ, ಸಿಜಾ ರಾಯ್, ವಿಕ್ರಂ ಸಿಂಗ್,ಮತ್ತು ವಿನೋದ್ ಸೆಹಗಾಲ್ ಮುಂತಾದವರಿಗೆ ಮಾರ್ಗದರ್ಶನ ಮಾಡಿದರು. ಅವರು ಮುಂಬೈನ ಸೇಂಟ್ ಮೇರಿ`ಸ್ ಗ್ರಂಥಾಲಯ, ಬಾಂಬೆ ಹಾಸ್ಪಿಟಲ್, CRYಮತ್ತು ALMA (ಹೆಚ್ಚಿನ ಶಿಕ್ಷಣ ಮತ್ತು ಅಭಿವೃದ್ಧಿಗಾಗಿ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಸಂಸ್ಥೆ)ಮುಂತಾದ ಅನೇಕ ಪರೋಪಕಾರಿ ಚಟುವಟಿಕೆಗಳಿಗೆ ಅವರು ಸಕ್ರಿಯ ಬೆಂಬಲವನ್ನು ನೀಡಿದ್ದಾರೆ.

ವೈಯಕ್ತಿಕ ಜೀವನ

ಜಗಜಿತ್ ಸಿಂಗ್ ಜನಪ್ರಿಯ ಗಾಯಕಿ ಚಿತ್ರಾ ಸಿಂಗ್ ಅವರನ್ನು ೧೯೬೯ರಲ್ಲಿ ವಿವಾಹವಾದರು. ಅವರು ಮುಂಬೈನ ಬ್ರೀಚ್ ಕ್ಯಾಂಡಿಯಲ್ಲಿ ವಿವೇಕ್ ಸಿಂಗ್ ಬೀದಿ(ಅವರ ಪುತ್ರನ ನೆನಪಿಗಾಗಿ ಮುಡುಪಾಗಿಟ್ಟ ರಸ್ತೆ)ಯಲ್ಲಿ ವಾಸಿಸುತ್ತಾರೆ. ೧೯೯೦ರ ದಶಕದ ಆದಿಭಾಗದಲ್ಲಿ ಅವರ ಏಕೈಕ ಪುತ್ರ ವಿವೇಕ್ ರಸ್ತೆ ಅಪಘಾತದಲ್ಲಿ ಅಸುನೀಗಿದ್ದ.

೧೯೯೮ರ ಜನವರಿಯಲ್ಲಿ ಜಗಜಿತ್ ಸಿಂಗ್ ಅವರಿಗೆ ಪ್ರಥಮ ಹೃದಯಕ್ಕೆ ರಕ್ತಪೂರೈಕೆ ಕೊರತೆಯ ಹೃದಯಾಘಾತ ಉಂಟಾಗಿದ್ದರಿಂದ ಅವರು ಧೂಮಪಾನವನ್ನು ತ್ಯಜಿಸಬೇಕಾಯಿತು. ೨೦೦೭ರ ಅಕ್ಟೋಬರ್‌ನಲ್ಲಿ ರಕ್ತ ಪರಿಚಲನೆ ಸಮಸ್ಯೆಗಳಿಂದಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಸಂಗೀತದ ವೃತ್ತಿಜೀವನ

ಗಝಲ್‌ಗಳು

ಜಗಜಿತ್ ಸಿಂಗ್ ಅವರು ಅನೇಕ ಯಶಸ್ವಿ ಗಝಲ್‌ಗಳಿಗೆ ಗೀತೆ ಸಂಯೋಜನೆ ಮಾಡಿದ್ದಾರೆ. ಅವುಗಳಲ್ಲಿ ಕೆಲವನ್ನು ಕೆಳಗೆ ಪಟ್ಟಿಮಾಡಲಾಗಿದೆ:-

  • ಯಾರಿಯನ್ ರಬ್ ಕರ್ ಕೆ ( ಶಿವ್ ಕೆ. ಬತಲ್ವಿಗೆ ಹಾಡಿದ ಗೀತೆ)
  • ಉಮ್ರ್ ಜಲ್ವೊ ಮೇ ಬಸರ್ ಹೋ
  • ದೇರ್ ಲಗಿ ಆನೆ ಮೇ ತುಂಕೋ
  • ಅಪ್ನಿ ಆಂಖೊ ಕೆ ಸಮುಂದರ್ ಮೇ ಉತರ್ ಜಾನೆ ದೇ
  • ಕೊಯಿ ಪಾಸ್ ಆಯಾ ಸವೇರೆ-ಸವೇರೆ
  • ಅಪನೇ ಹೊತ್ಹೊ ಪರ ಸಜಾನ ಚಾಹ್ತಾ ಹೂ
  • ಮೇರಿ ಜಿನ್ದಗಿ ಕಿಸಿ ಔರ್ ಕಿ, ಮೇರೆ ನಾಮ್ ಕಾ ಕೊಯಿ ಔರ್ ಹೈ
  • ಅಪನೇ ಹಾತೋ ಕೀ ಲಕೀರೋ ಮೇ
  • ಸದ್ಮ ತು ಹಾಯ್ ಮುಜ್ಹೆ ಭಿ ಕೆ ತುಜ್ಸೆ ಜುದ ಹೂನ್ ಮೇ
  • ಆದ್ಮಿ ಆದ್ಮಿ ಕೋ ಕ್ಯಾ ದೇಗಾ
  • ಹಾತ್ ಚ್ಹೂತೆ ಭಿ ತು
  • ಗರಾಜ್ ಬರಸ್ ಪ್ಯಾಸಿ ಧರ್ತಿ ಪರ್ ಫಿರ್ ಪಾನಿ ದೇ ಮೌಲ
  • ಅಪ್ನಿ ಮರ್ಜಿ ಸೆ ಕಹಾನ್ ಅಪ್ನೆ ಸಫರ್ ಕೆ ಹಮ್ ಹೈ
  • ಇಕ್ ಬ್ರಾಹ್ಮನ್ ನೆ ಕಹಾ ಹೈ
  • ಮೇನ್ ನಾ ಹಿಂದೂ ನಾ ಮುಸಲ್ಮಾನ್ ಮುಜ್ಹೆ ಜೀನೇ ದೋ
  • ಕೈಸೆ ಕೈಸೆ ಹದ್‌ಸೆ ಸೇಹ್ತೆ ರಹೇ
  • ವೋ ಜೋ ಹಂ ಮೇ ತುಮ್ಮೆ ಕರಾರ್ ಥಾ
  • ಪತ್ತ-ಪತ್ತ ಬೂಟಾ-ಬೂಟಾ ಹಾಲ್ ಹಮಾರ ಜಾನೆ ಹೈ
  • ಚಕ್ ಜಿಗರ್ ಕೆ ಸೆ ಲೇತೆ ಹೈ
  • ಮೇನ್ ಭೂಲ್ ಜಾವೊ ತುಮ್ಹೇ, ಅಬ್ ಯಾಹಿ ಮುನಾಸಿಬ್ ಹೈ
  • ಜಾತೆ ಜಾತೆ ವೋ ಮುಜ್ಹೆ ಅಚ್ಚಿ ನಿಶಾನಿ ದೇ ಗಯಾ
  • ಶಾಮ್ ಸೆ ಆಂಖ್ ಮೇ ನಮೀ ಸಿ ಹೈ
  • ತೆರೆ ಬಾರೆ ಮೇ ಜಬ್ ಸೋಚಾ ನಹೀ ಥಾ
  • ತೆರೆ ಆನೆ ಕಿ ಜಬ್ ಖಬರ್ ಮಹಕೆ
  • ತಮನ್ನ ಫಿರ್ ಮಚ್ಹಲ್ ಜಾಯೆ ಅಗರ್ ತುಂ ಮಿಲನೆ ಆ ಜಾವೊ
  • ಅಬ ಮೇನ್ ರತಿಯೊ ಕಿ ಕತಾರೊ ಮೇ ನಜರ್ ಆತಾ ಹೂ
  • ತುಜ್ಹ್ಸೆ ಮಿಲನೆ ಕಿ ಸಜಾ ದೆಂಗೆ ತೆರೆ ಶೆಹರ್ ಕೆ ಲೋಗ್
  • ಪತ್ತರ್ ಕೆ ಖುದ, ಪತ್ತರ್ ಕೆ ಸನಂ
  • ಹುಜೂರ್ ಆಪ್ಕ ಭಿ ಅಹತರಾಂ ಕರ್ತಾ ಚಲೂ
  • ದಿನ್ ಆ ಗಯೇ ಸಬಾಬ್ ಕೆ ಆನ್ಚಲ್ ಸಂಭಾಲಿಯೇ
  • ಗುಲ್ಶನ್ ಕಿ ಫಕತ್ ಫೂಲೋನ್ ಸೆ ನಹಿನ್ ಕಾಟೊನ್ ಸೆ ಭಿ ಜೀನತ್ ಹೋತಿ ಹೈ
  • ಬಾತ್ ಸಾಕಿ ಕಿ ನಾ ತಾಲಿ ಜಾಯೆಗಿ
  • ಚುಪ್ಕೆ ಚುಪ್ಕೆ ರಾತ್ ದಿನ್ ಆನ್ಸೂ ಬಹನಾ ಯಾದ್ ಹೈ
  • ರೋಶನ್ ಜಮಾಲ್-ಎ-ಯಾರ್ ಸೆ ಹೈ ಅಂಜುಮನ್ ತಮಾಮ್
  • ತೇರಾ ಚೆಹ್ರಾ ಕಿತ್ನಾ ಸುಹಾನ ಲಗ್ತಾ ಹೈ
  • ತುಂ ನಹಿ, ಘಂ ನಹಿ ಶರಾಬ್ ನಹಿ
  • ಸರಕ್ತಿ ಜಾಯೆ ಹೈ ರುಖ್ ಸೆ ನಕಾಬ್ ಆಹಿಸ್ತಾ-ಆಹಿಸ್ತಾ
  • ಯೆ ಖುದಾ ರೆಟ್ ಕೆ ಸೆಹರ ಕೋ ಸಮಂದರ್ ಕರ್ ದೇ
  • ಯೆ ದೌಲತ್ ಭಿ ಲೇ ಲೋ, ಯೆ ಶೋಹರತ್ ಭಿ ಲೇ ಲೋ
  • ಹೊಶ್ವಲೋ ಕೋ ಖಬರ್
  • ಹೊಂತೋನ್ ಸೆ ಚ್ಹೂ ಲೋ ತುಂ
  • ಕೊಇ ಯೆ ಕೈಸೆ ಬತಾಯೇ
  • ತೆರೆ ಖಾತ್
  • ಬಹುತ್ ಕೂಬ್‌ಸೂರತ್ ಹೈ
  • ಕಿಸ್ಕಾ ಚೆಹೆರಾ
  • ಕಲ್ ಚೋದ್ವಿ ಕಿ ರಾತ್ ಥಿ
  • ಬಾತ್ ನಿಕ್ಲೇಗಿ ತೊ
  • ದೇರ್ ಲಗಿ ಆನೆ ಮೇ ತುಮ್ಕೊ
  • ಮೇ ನಶೆ ಮೇ ಹ್ಞೂ
  • ಪ್ಯಾರ್ ಮುಜ್ಹ್ಸೆ ಜೋ ಕಿಯ ತುಮ್ನೆ
  • ತೇರಾ ಚೆಹೆರ ಹೈ ಆಈನೆ ಜೈಸ
  • ಚಿಟ್ಟಿ ನ ಕೊಯಿ ಸಂದೇಶ್
  • ತುಂ ಇತ್ನ ಜೋ ಮುಸ್ಕುರ ರಹೇ ಹೋ
  • ಜಬ್ ಸೆ ಕರೀಬ್ ಹೋ ಕೆ ಚಲೇ ಜಿನ್ದಗಿ ಸೆ ಹುಂ
  • ಕೊಯಿ ಫರಿಯಾದ್
  • ಕಹೀ ದೂರ್ ಜಬ್ ದಿನ್
  • ಕೆಹತ ಹಾಯ್ ಬಾಬುಲ್
  • ಜ್ಹುಕಿ ಜ್ಹುಕಿ ಸಿ ನಜರ್
  • ತುಮಕೋ ದೇಖ ತೊ ಎಹ್ ಖಯಾಲ್
  • ಸೇಹ್ಮ ಸೇಹ್ಮ
  • ಯಾದ್ ಕಿಯ ದಿಲ್ ನೆ ಕಃ ಹೋ ತುಂ
  • ಆಪ್ ಕೋ ದೇಖ್ ಕರ್
  • ಜಬ್ ಸಾಮನೇ ತುಂ
  • ಹಜಾರೊ ಕ್ವೈಷೆ ಐಸಿ
  • ಯಾ ತೊ ಮಿಟ್ ಜಾಇಯೆ ಯಾ ಮಿಟಾ ದೀಜಿಯೇ
  • ತೆರೆ ಆನೆ ಕಿ ಜಬ್ ಖಬರ್ ಮಹ್ಕೆ
  • ವೊಹ್ ಖಾತ್ ಕೆ ಪುರ್ಜೆ ಜಲಾ ರಹಾ ಥಾ
  • ತುಂ ಏ ಕೈಸೆ ಖಫಾ ಹೋ ಗಯೇ
  • ಹುಂ ತು ಹಾಯ್ ಪರ್ದೆಸ್ ಮೇ ದೇಶ್ ಮೇ
  • ಜೀವನ್ ಮರಣ್ ಚ್ಹೆ ಏಕ್ (ಗುಜರಾತಿಯಲ್ಲಿ)
  • ವೊಹ್ ಕಾಗಜ್ ಕಿ ಕಷ್ತಿ
  • ಬದಿ ನಾಜುಕ್ ಹೇ ಏ ಮನ್ಜಿಲ್ ಮೊಹಬ್ಬತ್ ಕಾ ಸಫರ್ ಹೇ

ಪ್ರಶಸ್ತಿಗಳು

  • ೨೦೦೩ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಇದು ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದೆ. [೧]
  • ೨೦೦೬, ಶಿಕ್ಷಕರ ಸಾಧನೆ ಪ್ರಶಸ್ತಿಗಳು[೨]

...ಮತ್ತು ಇನ್ನೂ ಮುಂತಾದವು.

ಧ್ವನಿಮುದ್ರಿಕೆ ಪಟ್ಟಿ

ಚಲನಚಿತ್ರದ ಗೀತೆಗಳು

ಚಲನಚಿತ್ರದ ಹೆಸರು ವರ್ಷ ವಿವರಗಳು
Pyar Kare Dis : Feel The Power of Love ೨೦೦೭ [೩]
ಉಮರ್ ೨೦೦೬ ಹಿನ್ನೆಲೆ ಗಾಯಕ: "ಖುಮಾರಿ ಚದ್ ಕೆ ಉತರ್ ಗಯಿ"
ಬಾಬುಲ್ ೨೦೦೬ ಹಿನ್ನೆಲೆ ಗಾಯಕ: "ಕೆಹ್ತ ಹೈ ಬಾಬುಲ್"
ಕಸಕ್ ೨೦೦೫ ಸಾಹಿತ್ಯ
ವೀರ್‌-ಝಾರಾ ೨೦೦೪ "ತುಮ್ ಪಾಸ್ ಆ ರಹೆ ಹೊ" ಸಾಹಿತ್ಯ
ದೂಪ್' ೨೦೦೩ ಹಿನ್ನೆಲೆ ಗಾಯಕ: "ಬೇನಾಮ್ ಸಾ ಯೆ ದರ್ದ್", ಹರ್ ಏಕ್ ಘರ್ ಮೇ ದಿಯಾ", "ತೇರಿ ಆಂಖೋ ಸೆ ಹಿ" ಸಾಹಿತ್ಯ
ಜೋಗರ್ಸ್ ಪಾರ್ಕ್ ೨೦೦೩ "ಬಾರಿ ನಾಜುಕ್ ಹೈ" ಸಾಹಿತ್ಯ
ಆಪ್ಕೊ ಪೆಹ್ಲೆ ಭೀ ಕಹೀ ದೇಖಾ ಹೈ ೨೦೦೩ "ಐಸಿ ಆಂಖೇ ನಹೀ ದೇಖಿ"
ಲೀಲಾ ೨೦೦೨ "ದುವಾ ಉಟಾ ಹೈ", "ಜಾಗ್ ಕೆ ಕಟಿ", "ಜಬ್ಸೆ ಖರೀಬ್ ಹೊ ಕೆ ಚಲೆ", "ತೆರೆ ಕಯಾಲ್ ಕಿ"
ವಧ್ ೨೦೦೨ "ಬಹುತ್ ಖೂಬ್‌ಸೂರತ್"
ದೆಹಂ ೨೦೦೧ "ಯುನ್ ತೊ ಗುಜರ್ ರಹಾ ಹೈ"
ತುಮ್ ಬಿನ್ ೨೦೦೧ ಕೋಯಿ ಫರಿಯಾದ್
ತಕರೀಬ್ ೨೦೦೦ ಕಿಸ್ಕಾ ಚೆಹ್ರಾಅಬ್ ಮೈ ದೇಕೂ... ತೆರಾ ಚೆಹ್ರಾ ದೇಖ್‌ಕರ್
ಶಹೀದ್ ಉಧಮ್ ಸಿಂಗ್ ೨೦೦೦
ಭೋಪಾಲ್ ಎಕ್ಸ್‌‌ಪ್ರೆಸ್‌ ೧೯೯೯ ಇಸ್ ದುನಿಯಾ ಮೇ ರಖಾ ಕ್ಯಾ ಹೈ
ಸರ್ಫರೋಶ್ ೧೯೯೯ "ಹೋಶ್ ವಾಲೋನ್ ಕೊ"
ದುಶ್ಮನ್ ೧೯೯೮ "ಚಿಟ್ಟಿ ನ ಕೊಯಿ ಸಂದೇಶ್"
ಖುಡಾಯ್ ೧೯೯೪ ದಿನ್ ಆ ಗಯೇ ಶಬಾಬ್ ಕೆ", "ಉಲ್ಫತ್ ಕ ಜಬ್ ಕಿಸಿಸ್ ನೆ ಲಿಯಾ ನಾಮ್", "ಏ ಶೀಶೆ ಏ ರಿಶ್ತೆ"
ಮಾಮ್ಮೊ ೧೯೯೪ ಹಜಾರ್ ಬಾರ್ ರುಕೆ ಹಂ, ಹಜಾರ್ ಬಾರ್ ಚಲೇ ಗುಲ್ಜಾರ್ ಅವರಿಂದ
ಖಳ್ ನಾಯಕ್ ೧೯೯೩ "ಓ ಮಾ ತುಜೆ ಸಲಾಂ"
ನರ್ಗೀಸ್ ೧೯೯೨ ""ದೋನೋ ಕೆ ದಿಲ್ ಹೈ ಮಜ್ಬೂರ್ ಪ್ಯಾರ್ ಸೆ", ಮೇನ್ ಕಸೀ ಕಹೂ ಜಾನೆಮನ್
ಬಿಲ್ಲೂ ಬಾದ್‌ಶಾ ೧೯೮೯
ಆಖ್ರಿ ಕಹಾನಿ ೧೯೮೯
ದೂಸ್ರಾ ಕಾನೂನ್ ೧೯೮೯ TV
ಕಾನೂನ್ ಕಿ ಆವಾಜ್ ೧೯೮೯
ಮಿರ್ಜಾ ಗಲೀಬ್ ೧೯೮೮ ಗುಲ್ಜಾರ್ ನಿರ್ದೇಶಿಸಿದ TV ಯಶಸ್ವಿ ಧಾರಾವಾಹಿ
ರಾಹಿ ೧೯೮೭
ಆಶಿಯಾನ ೧೯೮೬ "ಹುಮ್ಸಫಾರ್ ಬನ್ ಕೆ ಹಂ"
ಲಾಂಗ್ ಡಾ ಲಿಶ್ಕಾರಾ ೧೯೮೬ "ಇಶ್ಕ್ ಹೈ ಲೋಕೊ"
"ಮೇ ಕಂಡ್ಯಾಲಿ ಥೋರ್ ವೆ"
"ಸಾರೆ ಪಿಂದಚ್ ಪುರೆ ಪಾಯೆ"
ಫಿರ್ ಆಯೀ ಬರ್ಸಾತ್ ೧೯೮೫ "ನ ಮೊಹಬತ್ ನ ದೋಸ್ತಿ ಕೆ ಲಿಯೆ"
ರಾವಣ್ ೧೯೮೪ "ಹಂ ತೊ ಯು ಅಪ್ನಿ ಜಿನ್ದಗಿ ಸೆ ಮಿಲೇ"
""ಮೇ ಗರ್ ಮೇನ್ ಚುನರಿಯಾ"
ಬಹುರೂಪಿ ೧೯೬೬
ಭಾವ್ನಾ ೧೯೮೪ "ಮೇರಾ ದಿಲ್ ಮೇ ತು ಹಿ ತು ಹೈ"
ಕಾಲ್ಕ ೧೯೮೩
ತುಮ್ ಲೌಟ್ ಆವೊ ೧೯೮೩
ಜುಲ್ಫ್ ಕೆ ಸಾಯೆ ಸಾಯೆ ೧೯೮೩ "ನಶೀಲಿ ರಾತ್ ಮೇ"
ಅರ್ಥ್ ೧೯೮೨ "ಜ್ಹುಕಿ ಜ್ಹುಕಿ ಸಿ ನಜರ್"
"ಕೊಇ ಎಹ್ ಕೈಸೆ ಬತಾಯೇ"
"ತೆರೆ ಖುಷ್ಬೂ ಮೇ ಬಸೆ ಖತ್"
"ತೂ ನಹಿ ತೊ ಜಿನ್ದಗಿ ಮೇ ಐರ್ ಕ್ಯಾ ರಹ ಜಾಯೇಗ"
"ತುಂ ಇತನ ಜೋ ಮುಶ್ಕುರ ರಹೇ ಹೋ"
ಸಾಥ್-ಸಾಥ್ ೧೯೮೨ "ಪ್ಯಾರ್ ಮುಜ್ಹ್ ಸೆ ಜೋ ಕಿಯ ತುಮ್ನೆ"
"ತುಂ ಕೋ ದೇಖ ತೊ ಎಹ್ ಖಯಾಲ್ ಆಯಾ"
"ಎಹ್ ಬತ ದೇ ಮುಜ್ಹೆ ಜಿನ್ದಗಿ"
"ಎಹ್ ಬತ ದೇ ಮುಜ್ಹೆ ಜಿನ್ದಗಿ"
"ಎಹ್ ತೇರ ಘರ್ ಯೇ ಮೇರಾ ಘರ್"
"ಯು ಜಿನ್ದಗಿ ಕಿ ರಹ ಮೇ" ಚಿತ್ರಾ ಸಿಂಗ್
ಸಿತಂ ೧೯೮೨
ಪ್ರೇಂ ಗೀತ್ ೧೯೮೧ ಹೊಂಟೊ ಸೆ ಚ್ಹೂ ಲೋ ತುಂ
ಏಕ್ ಬಾರ್ ಕಹೋ ೧೯೮೦ ಕೊಯಿ ಗೆಸು ಕೊಯಿ ಆನ್ಚಲ್ ಹಮೇ ಆವಾಜ್ ನ ದೇ (ಸಂಗೀತ: ಬಪ್ಪಿ ಲಹಿರಿ) (ಪ್ರಕಾರ: ನಜ್ಮ್)
ಗ್ರಹ ಪ್ರವೇಶ್ ೧೯೭೯
ಆವಿಷ್ಕಾರ್ ೧೯೭೩
ಹೀನಾ ೧೯೯೯ TV ಧಾರಾವಾಹಿ
ನೀಮ್ ಕಾ ಪೇಡ್ ೧೯೯೪ TV ಧಾರಾವಾಹಿ ("ಮುಹ್ ಕಿ ಬಾತ್ ಸುನೇ ಹರ್ ಕೊಯಿ (ಮುಖ್ಯ ಗೀತೆ)")
ಹಲೊ ಜಿಂದಗಿ ೧೯** TV ಧಾರಾವಾಹಿ ("ಹೈ ಲೊ ಜಿಂದಗಿ(ಮುಖ್ಯಗೀತೆ")

ಗಝಲ್ ಆಲ್ಬಂಗಳು

  • ದಿ ಅನ್‌ಫರ್ಗಟೇಬಲ್ಸ್ (೧೯೭೬)
  • ಬಿರ್ಹ ಡಾ ಸುಲ್ತಾನ್(ಶಿವ್ ಕುಮಾರ್ ಬತಲ್ವಿ) ಜಗಜಿತ್ & ಚಿತ್ರ (೧೯೭೮
  • ಲೈವ್ ಇನ್ ಪಾಕಿಸ್ತಾನ್ (೧೯೭೯)
  • ಎ ಮೈಲ್‌ಸ್ಟೋನ್ (೧೯೮೦)
  • ಮೇನ್ ಔರ್ ಮೇರಿ ತನಾಯೀ (೧೯೮೧)
  • ದಿ ಲೇಟೆಸ್ಟ್ (೧೯೮೨)
  • ಯೆ ಮೇರೆ ದಿಲ್ (೧೯೮೩)
  • ಲೈವ್ ಅಟ್ ರೋಯಲ್ ಆಲ್ಬರ್ಟ್ ಹಾಲ್ ª(೧೯೮೩)
  • ಎಕ್ಸ್ಟಸೀಸ್ (೧೯೮೪)
  • ಎ ಸೌಂಡ್ ಅಫೇರ್ (೧೯೮೫)
  • ಎಕೋಸ್ (೧೯೮೫–೮೬)
  • ಬೇಯಾಂಡ್ ಟೈಮ್ (೧೯೮೭)
  • ಮಿರ್ಜಾ ಗಾಲಿಬ್ (ಎರಡು ಸಂಪುಟಗಳು (೧೯೮೮), TV ಧಾರಾವಾಹಿ, ಗುಲ್ಜಾರ್ ನಿರ್ದೇಶನ
  • ಪ್ಯಾಶನ್ /ಬ್ಲಾಕ್ ಮ್ಯಾಜಿಕ್ (೧೯೮೮)
  • ಗಝಲ್ಸ್ ಫ್ರಂ ಫಿಲ್ಮ್ಸ್ (೧೯೮೯)
  • ಎಮೋಷನ್ಸ್
  • ಮನ್ ಜೀತೆ ಜಗಜಿತ್ (೧೯೯೦)
  • ಮೆಮೊರೆಬಲ್ ಗಝಲ್ಸ್ ಆಫ್ ಜಗಜಿತ್ ಎಂಡ್ ಚಿತ್ರಾ(೧೯೯೦)
  • ಸಮ್‌ವನ್ ಸಮ್ವೇರ್ (೧೯೯೦)
  • H O P E (೧೯೯೧)
  • ಸಜ್ದಾ (ಲತಾ ಜಿಯೊಂದಿಗೆ ಎರಡು ಸಂಪುಟಗಳು) (೧೯೯೧)
  • ಕಹಕಶನ್ (ಎರಡು ಸಂಪುಟಗಳು) (೧೯೯೧–೯೨), ಜಲಾಲ್ ಆಗಾ ನಿರ್ದೇಶನದ TV ಧಾರಾವಾಹಿ
  • ವಿಷನ್ಸ್ (ಎರಡು ಸಂಪುಟಗಳು) (೧೯೯೨)
  • ಇನ್ ಸರ್ಚ್ (೧೯೯೨)
  • ರೇರ್ ಜೆಮ್ಸ್ (೧೯೯೨)
  • ಫೇಸ್ ಟು ಪೇಸ್ (೧೯೯೩)
  • ಯುವರ್ ಚಾಯ್ಸ್ (೧೯೯೩)
  • ಚಿರಾಗ್(೧೯೯೩)
  • ಡಿಸೈರ್ಸ್ (೧೯೯೪)
  • ಇನ್‌ಸೈಟ್ (೧೯೯೪)
  • ಕ್ರೈ ಫಾರ್ ಕ್ರೈ (೧೯೯೫)
  • ಮಿರೇಜ್
  • ಯೂನಿಕ್ (೧೯೯೬)
  • ಕಂ ಅಲಿವ್ ಇನ್ ಎ ಕನ್ಸರ್ಟ್ (೧೯೯೮ (CD))
  • ಲೈವ್ ಎಟ್ ದಿ ವೆಂಬ್ಲಿ
  • ಲವ್ ಇಸ್ ಬ್ಲೈಂಡ್ (೧೯೯೮)
  • ಸಿಲ್ ಸಿಲೆ (೧೯೯೮) (ಸಾಹಿತ್ಯ ಜಾವೇದ್ ಅಖ್ತರ್ )ಅವರಿಂದ
  • ಮರಾಸಿಂ(೧೯೯೯) (ಸಾಹಿತ್ಯಗುಲ್ಜಾರ್)
  • ಜಾಮ್ ಉಠಾ(೧೯೯೯)
  • ಸಹರ್ (೨೦೦೦)
  • ಸಂವೇದನ ೨೦೦೨ (ಅಟಲ್ ಬಿಹಾರಿ ವಾಜಪೇಯಿಯವರ ಕವಿತೆ))
  • ಸೋಜ್(೨೦೦೨) (ಸಾಹಿತ್ಯ ಜಾವೇದ್ ಅಖ್ತರ್)
  • ಫರ್ಗೆಟ್ ಮಿ ನಾಟ್ (೨೦೦೨)
  • ಮುಂತಜಿರ್ (೨೦೦೪)
  • ಜೀವನ್ ಕ್ಯಾ ಹೈ (೨೦೦೫)
  • ತುಮ್ ತೊ ನಹೀ ಹೊ (ಬಷೀರ್ ಬದ್ರ್ ಸಾಹಿತ್ಯ) (೨೦೦೫)
  • ಲೈಫ್ ಸ್ಟೋರಿ(೨೦೦೬)
  • ಬೆಸ್ಟ್ ಆಫ್ ಜಗಜಿತ್ & ಚಿತ್ರ ಸಿಂಗ್ ( ಅಲಿ ಸರ್ದಾರ್ ಜಾಫ್ರೆ ಅವರ ಮೇರೆ ದರ್ವಾಜೆ ಸೆ ಅಬ್ ಚಾಂದ್ ಕೋ ರುಕ್ಸತ್ ಕರ್ ದೋ ಸೇರಿದೆ. )
  • ಕೋಯಿ ಬಾತ್ ಚಲೆ (ಸಾಹಿತ್ಯಗುಲ್ಜಾರ್)
  • ಜಾಜ್‌ಬಾತ್(೨೦೦೮)
  • ಇಂತೆಹ(೨೦೦೯)(ಬಾನೂ ಮೇನ್ ತೇರಿ ದುಲ್ಹಾನ್ಆಗಿ ಚಿತ್ರಿಸಲಾಗಿದೆ)

ಚಿಕ್ಕ ಚೊಕ್ಕ ವಿಷಯಗಳು

  • ಆಲ್ಬಂ 'ಬಿಯಾಂಡ್ ಟೈಮ್' ಭಾರತದ ಪ್ರಥಮ ಅಂಕೀಯ ಧ್ವನಿಮುದ್ರಿತ ಆಲ್ಬಂ.ಇದನ್ನು 'ವೆಸ್ಟರ್ನ್ ಔಟ್‌ಡೋರ್' ಸ್ಟುಡಿಯೊದಲ್ಲಿ ಧ್ವನಿಮುದ್ರಕ ದ್ವಯರಾದ ಡಾಮನ್ ಸೂದ್ ಮತ್ತು ಅವಿನಾಶ್ ಓಕ್ ಅವರು ಧ್ವನಿಮುದ್ರಿಸಿದರು.

ಉಲ್ಲೇಖಗಳು

ಹೊರಗಿನ ಕೊಂಡಿಗಳು