ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೮ ನೇ ಸಾಲು: ೮ ನೇ ಸಾಲು:




ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ? ನಿಸು ಇದ್ದದೇ ಗೊತಾಗ್ಲಿಲ್ಲವಲ್ಲೇ!" ಎಂದ.
ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ? ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!" ಎಂದ.





೧೦:೨೭, ೨೩ ಮೇ ೨೦೧೧ ನಂತೆ ಪರಿಷ್ಕರಣೆ

ಕೊರವಂಜಿಯು ಬಹುಶಃ ಕನ್ನಡದ ಮೊದಲ ಹಾಸ್ಯ ಪತ್ರಿಕೆ. ೧೯೪೨ರಲ್ಲಿ ಇದನ್ನು ಕನ್ನಡದ ಖ್ಯಾತ ಸಾಹಿತಿ "ರಾಶಿ," (ಡಾ ಎಮ್ ಶಿವರಾಂ) ಅವರು ಸ್ಥಾಪಿಸಿದರು . ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು ಒಬ್ಬ ಕಳಕಳಿಯ ಹಾಗೂ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಸಾಹಿತಿಗಲಮನ್ನು ಹಾಗೂ ಕಲಾವಿದರನ್ನು ಜೊತೆಗೂಡಿಸಿಕೊಂಡು ಕೊರವಂಜಿಯನ್ನು ತಂದರು. ಆ ಕಾಲದಲ್ಲಿ ಹಾಸ್ಯಪತ್ರಿಕೆಗಳು ಕನ್ನಡದಲ್ಲಿ ಇರಲೇ ಇಲ್ಲ.


ಆ ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ ಆರ್.ಕೆ.ಲಕ್ಷ್ಮಣ್! ಲಕ್ಷ್ಮಣ್, ಅಂದಿನ ದಿನಗಳಲ್ಲಿ ಹಿಂದೂ, ಪತ್ರಿಕೆಗೆ ತಮ್ಮ ಅಣ್ಣ, ಆರ್. ಕೆ. ನಾರಾಯಣ್ ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.


'ಕೊರವಂಜಿ’ಯ ಕೆಲವು ಪ್ರಮುಖ ಬರಹಗಾರರು : ೧. ಟಿ. ಸುನಂದಮ್ಮ, ೨. ಕೇಫ(ಎ ವಿ ಕೇಶವಮೂರ್ತಿ), ೩. ಅರಾಸೇ, ೪. ದಾಶರಥಿ ದೀಕ್ಷಿತ್, ೫. ಅ.ರಾ.ಮಿತ್ರ, ೬. ಹಾ.ರಾ. (ಎಚ್ ಆರ್ ಶಂಕರನಾರಾಯಣ), ೭. ನಾ ಕ(ನಾ ಕಸ್ತೂರಿ),೮. ಎಸ್ ಎನ್ ಶಿವಸ್ವಾಮಿ, ಮುಂತಾದವರು.


ಆದರೆ ಕೊರವಂಜಿಯನ್ನು ಕನ್ನಡದ ಓದುಗರು ಕಾಪಾಡಿಕೊಳ್ಳಲಿಲ್ಲ. ೧೯೬೬ರಲ್ಲಿ 'ಕೊರವಂಜಿ' ಕಾಡಿಗೆ ಹೋದಳು. ಮಹೀಶೂರ ಕನ್ನಡಿಗ ನಿದ್ದೆಯಿಂದೆದ್ದು ಆಕಳಿಸುತ್ತಾ, "ಹೋಗ್ಬಿಟ್ಟು ಬರ್ತೀನಿ ಅಂದ್ಯಾ, ಕೊರವಂಜೀ? ನೀನು ಇದ್ದದೇ ಗೊತಾಗ್ಲಿಲ್ಲವಲ್ಲೇ!" ಎಂದ.


೧೯೭೪ರಲ್ಲಿಯೇ ರಾಶಿಯವರೇ, "೨೫ ವರ್ಷಗಳ ಕಾಲ ಕೊರವಂಜಿಯಲ್ಲಿ ಕಾಣಿಸಿಕೊಂಡ ನಗೆ ಗೆರೆ ಚಿತ್ರಗಳಲ್ಲಿ ಅಷ್ಟೋತ್ತರಗಳನ್ನು ಆಯ್ದು, ಕಾಲಕ್ಕೆ ತಕ್ಕಂತೆ ತುಸು ಒಗ್ಗರಣೆ ಹಾಕಿ...", ನಗೆ ಗೆರೆ ಚಿತ್ರಗಳು ಎಂಬ ಸಣ್ಣ ಪುಸ್ತಕವನ್ನು ಬೆಂಗಳೂರಿನ ರಾಜಾಜಿ ನಗರದ ವಿಜ್ಞಾನ ವಿಶ್ವ ಪ್ರಕಾಶನದ ಮೂಲಕ ಪ್ರಕಟಿಸಿದರು.


ಕುಹಕಿಡಿಗಳು

ರಾಜಕಾರಣಿಗಳೂ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಹಾಸ್ಯದ ಮೊನಚಿನಲ್ಲಿ ವಿಶ್ಲೇಷಿಸುವ ಅಂಕಣಕ್ಕೆ ‘ಕೊರವಂಜಿ’ಯ ಮೊದಲ ಎರಡು ಪುಟಗಳು ಮೀಸಲಿದ್ದವು. ಟಿ.ಎಸ್.ರಾಮಚಂದ್ರರಾವ್, ಹೆಚ್.ಆರ್.ನಾಗೇಶರಾವ್ ನಿಯಮಿತವಾಗಿ ತಮ್ಮ ಬರಹಗಳನ್ನು ಈ ಅಂಕಣಕ್ಕೆ ಕಳುಹಿಸುತ್ತಿದ್ದರು.

ಹೆಚ್.ಆರ್.ನಾಗೇಶರಾವ್ ಸಂಗ್ರಹದ ಜುಲೈ 1947ರ ಸಂಚಿಕೆ
ಹೆಚ್.ಆರ್.ನಾಗೇಶರಾವ್ ಸಂಗ್ರಹದ ಜುಲೈ 1947ರ ಸಂಚಿಕೆ