ಚಿಕ್ಕಮಗಳೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೫೫ ನೇ ಸಾಲು: ೫೫ ನೇ ಸಾಲು:


[http://www.mapsofindia.com/maps/karnataka/districts/chikmagalur.htm ಚಿಕ್ಕಮಗಳೂರು ಜಿಲ್ಲೆಯ ನಕ್ಷೆ]
[http://www.mapsofindia.com/maps/karnataka/districts/chikmagalur.htm ಚಿಕ್ಕಮಗಳೂರು ಜಿಲ್ಲೆಯ ನಕ್ಷೆ]
====ಪ್ರಜಾವಾಣಿಯಲ್ಲಿ ವಿಷೇಶ ಲೇಖನಗಳು====
[http://prajavani.net/Content/Nov252010/dharshan20101124214434.asp ೧]
[http://prajavani.net/Content/Nov252010/dharshan20101124214435.asp ೨]
[http://prajavani.net/Content/Nov252010/dharshan20101124214436.asp ೩]
[http://prajavani.net/Content/Nov252010/dharshan20101124214437.asp ೪]
[http://prajavani.net/Content/Nov252010/dharshan20101124214438.asp ೫]


[[Category: ಭೂಗೋಳ]]
[[Category: ಭೂಗೋಳ]]

೧೭:೫೨, ೨೬ ನವೆಂಬರ್ ೨೦೧೦ ನಂತೆ ಪರಿಷ್ಕರಣೆ

ಚಿಕ್ಕಮಗಳೂರು ಕರ್ನಾಟಕ ರಾಜ್ಯದ ಒಂದು ನಗರ ಮತ್ತು ಅದೇ ಹೆಸರಿನ ಜಿಲ್ಲಾ ಕೇಂದ್ರ. ಇದು ಬೆಂಗಳೂರಿನಿಂದ ೨೫೧ ಕಿಮೀ ದೂರದಲ್ಲಿದೆ. ಇದು ಕಾಫಿ ತೋಟಗಳಿಗೆ ಹೆಸರುವಾಸಿಯಾಗಿದೆ. ಚಿಕ್ಕಮಗಳೂರು ಜಿಲ್ಲೆ ೭ ತಾಲೂಕುಗಳನ್ನು ಒಳಗೊಂಡಿದೆ.

ಚಿಕ್ಕಮಗಳೂರು ಜಿಲ್ಲಾ ಕೆಂದ್ರದಲ್ಲಿ ಸುಮಾರು ಒಂದು ಲಕ್ಶಕ್ಕೂ ಹೆಚ್ಚು ಜನ ವಾಸಿಸುತ್ತಾರೆ. ಇಲ್ಲಿನ ವಾತಾವರಣವು ಅತಿ ಮಧುರವಾದಗಿದ್ದು ಇಲ್ಲಿನ ಗಿರಿವನಗಳ ನಡುವೆ ಒಂದು ಚಿಕ್ಕ ಪಟ್ಟಣವಾಗಿ ಸಂತಸ ಕೊಡುವ ಜಾಗ ಆಗಿದೆ. ವರ್ಷ್ ಕ್ಕೋಮ್ಮೇ ಈ ಪಟ್ಟಣದ ಬಳಿ ಇರುವ ದೇವೀರಮ್ಮನ ಬೆಟ್ಟದಲ್ಲಿ ನೆಡೆಯುವ ಪೊಜೆಗಾಗಿ ಜನ ರಾಷ್ಟ್ರದ ಹಾಗೂ ರಾಜ್ಯದ ಎಲ್ಲಾಕಡೆಯಿಂದ ಬರುತ್ತಾರೆ. ಕೆಲವು ವರ್ಷಗಳಿಂದ ಇಲ್ಲಿನ ಜನರ ಸ್ಥಿಥಿ ಅಭಿವ್ರುದ್ಧಿ ಆಗುತ್ತಾ ಬಂದಿದೆ...

ಪ್ರವಾಸಿ ತಾಣಗಳು

ಕೆಮ್ಮಣ್ಣುಗುಂಡಿ ಮತ್ತು ಕಲ್ಹತ್ತಿಗಿರಿ

ಕೆಮ್ಮಣ್ಣುಗುಂಡಿ ಚಿಕ್ಕಮಗಳೂರಿನ ಸಮೀಪದಲ್ಲಿರುವ (೫೫ ಕಿಮೀ)ಒಂದು ಗಿರಿಧಾಮ. ಸಹ್ಯಾದ್ರಿ ಪರ್ವತಶ್ರೇಣಿಯ ಎತ್ತರದ ಶಿಖರಗಳು ಸಹ ಇದರ ಸುತ್ತಮುತ್ತಲಲ್ಲೇ ಇವೆ. ಇಲ್ಲಿ ಮಾಣಿಕ್ಯಧಾರಾ ಜಲಪಾತವಿದೆ. ಕೆಮ್ಮಣ್ಣುಗುಂಡಿ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾಗಿದೆ.

ಕೆಮ್ಮಣ್ಣುಗುಂಡಿಯ ಸಮೀಪದಲ್ಲೇ ಇರುವ ಇನ್ನೊಂದು ಪ್ರವಾಸಿ ಆಕರ್ಷಣೆ ಕಲ್ಹತ್ತಿಗಿರಿ ಜಲಪಾತ.

ಮುಳ್ಳಯ್ಯನಗಿರಿ

ಕರ್ನಾಟಕದ ಅತಿ ಎತ್ತರದ ಗಿರಿಶಿಖರ ಎಂದು ಖ್ಯಾತಿ ಪಡೆದಿರುವ ಮುಳ್ಳಯ್ಯನಗಿರಿಯು 6,330 ಆಡಿ ಎತ್ತರವಿದ್ದು ಪಶ್ಚಿಮ ಘಟ್ಟದ ಬಾಬಾ ಬುಡನ್ ಗಿರಿ ಶಿಕರಗಳ ಸಾಲಿಗೆ ಸೇರುತ್ತದೆ. ಬೆಟ್ಟದ ತುದಿಯಲ್ಲಿ ಮುಳ್ಳಯ್ಯನ ದೇವಸ್ಥಾನ ಹಾಗೂ ಮಠವಿದೆ. ಚಾರಣಿಗರಿಗೆ ಮುಳ್ಳಯ್ಯನಗಿರಿ ಪ್ರಶಸ್ತವಾದ ಸ್ಥಳ. ಚಿಕ್ಕಮಗಳೂರಿನಿಂದ ಬೆಟ್ಟದ ಬುಡಕ್ಕೆ ಬಸ್ ಸೌಕರ್ಯ ಇದ್ದು, ತದನಂತರ "ಸರ್ಪನ ದಾರಿ" ಎಂದು ಕರೆಯಲಾಗುವ ಕಡಿದಾದ ಕಾಲುಹಾದಿಯಲ್ಲಿ ನಡೆದು ಬೆಟ್ಟದ ತುದಿ ತಲುಪಬೇಕು. ಮುಳ್ಳಯ್ಯನ ಗಿರಿಯ ಮೇಲಿನಿಂದ ಸಿಗುವ ವಿಹಂಗಮ ನೋಟ ಅತ್ಯಂತ ಆಹ್ಲಾದಕರ.

ಶೃಂಗೇರಿ

ನೋಡಿ: ಶೃಂಗೇರಿ

ಶೃಂಗೇರಿ ಪಟ್ಟಣ ಬಹಳ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಅದ್ವೈತ ಮಠಗಳಲ್ಲಿ ಮೊದಲನೆಯದು ಇರುವುದು ಇಲ್ಲಿಯೇ. ಇಲ್ಲಿರುವ ವಿದ್ಯಾಶಂಕರ ದೇವಸ್ಥಾನ ಖ್ಯಾತವಾದದ್ದು. ಈ ದೇವಸ್ಥಾನದ ಸುತ್ತಲೂ ಇರುವ ಹನ್ನೆರಡು ಕಂಬಗಳಲ್ಲಿ ಪ್ರತಿಯೊಂದರ ಮೇಲೆಯೂ ಬೇರೆ ಬೇರೆ ತಿಂಗಳುಗಳಲ್ಲಿ ಸೂರ್ಯರಶ್ಮಿ ಬೀಳುತ್ತದೆ!

ಭದ್ರಾ ಅಭಯಾರಣ್ಯ

ಲಕ್ಕವಳ್ಳಿಯ ಬಳಿ ಭದ್ರಾ ನದಿಗೆ ಕಟ್ಟಿರುವ ಅಣೆಕಟ್ಟಿನ ಸುತ್ತಲೂ ಇರುವ ಅಭಯಾರಣ್ಯ.ಲಕ್ಕವಳ್ಳಿಯ ಬಳಿ ಕುವೆಂಪು ವಿಶ್ವ ವಿಶ್ವವಿಧ್ಯಾಲಯವು ಇದೆ. ಚಿಕ್ಕಮಗಳೂರಿನ ಸವಿ ನೆನಪುಗಳನ್ನು ಸ್ವಲ್ಪ ದಿನ ಮೆಲುಕಹಾಕಲು ಚಿಕ್ಕಮಗಳೂರಿನ ಪಾಂಡುರಂಗ ಕಾಫಿ ಕೊಳ್ಳಲು ಮರೆಯದಿರಿ. ಈ ಹಾಗು ಅಲ್ದೂರಿನ ಆಶಾ ಕಾಫಿ'"ನ್ನು ಮರೆಯದಿರಿ. ಈ ಅರಣ್ಯವು ಮುತ್ತೋಡಿ ಯಿಂದ ಬಾಳೆಹೂನ್ನೂರು ವರೆಗೂ ಆವರಿಸಿದೆ.

ಇತರ ಪಟ್ಟಣಗಳು

ಚಿಕ್ಕಮಗಳೂರು ಜಿಲ್ಲೆಯ ಕೆಲ ಇತರ ಮುಖ್ಯ ಪಟ್ಟಣಗಳೆಂದರೆ ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ.

ತಾಲೂಕುಗಳು

ಇವನ್ನೂ ನೋಡಿ

ಕರ್ನಾಟಕ

ಬಾಹ್ಯ ಸಂಪರ್ಕಗಳು

ಚಿಕ್ಕಮಗಳೂರು ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ

ಚಿಕ್ಕಮಗಳೂರು ಪ್ರವಾಸ

ಚಿಕ್ಕಮಗಳೂರು ಜಿಲ್ಲೆಯ ನಕ್ಷೆ

ಪ್ರಜಾವಾಣಿಯಲ್ಲಿ ವಿಷೇಶ ಲೇಖನಗಳು