ಪದ್ಮಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: ur:پدمنی
೫೮ ನೇ ಸಾಲು: ೫೮ ನೇ ಸಾಲು:
[[de:Padmini]]
[[de:Padmini]]
[[en:Padmini (actress)]]
[[en:Padmini (actress)]]
[[hi:पदमिनी (हिन्दी फ़िल्म कलाकार)]]
[[ml:പദ്മിനി]]
[[ml:പദ്മിനി]]
[[ta:பத்மினி]]
[[ta:பத்மினி]]

೨೧:೩೨, ೩೦ ಸೆಪ್ಟೆಂಬರ್ ೨೦೧೦ ನಂತೆ ಪರಿಷ್ಕರಣೆ

ಪದ್ಮಿನಿ - (ಜೂನ್ ೧೨,೧೯೩೨)- ಸೆಪ್ಟೆಂಬರ್ ೨೪,೨೦೦೬ ಭಾರತದ ಬಹುಭಾಷಾ ನಟಿ ಮತ್ತು ಭರತನಾಟ್ಯ ಕಲಾವಿದೆಯಾಗಿದ್ದರು. ಇವರು ತಮಿಳು, ತೆಲುಗು, ಮಲಯಾಳಂ,ಹಿಂದಿ, ಕನ್ನಡ ಭಾಷೆಯಲ್ಲಿ ಸುಮಾರು ೨೫೦ ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.

ಬಹುಭಾಷಾ ತಾರೆ ಪದ್ಮಿನಿ

ಚಿತ್ರ ಬದುಕು

ಕೇರಳದ ಪೂೞಪ್ಪುೞದಲ್ಲಿ ಜೂನ್ ೧೨ ರಂದು ಜನಿಸಿದ ಪದ್ಮಿನಿಯವರು ಕಲ್ಪನಾ ಎಂಬ ಹಿಂದಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದರು. ಹಿಂದಿ ನಟ ರಾಜ್ ಕಪೂರ್ ಅವರ ಜೊತೆ `ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ, ಆಶಿಕ್ ಮತ್ತು ಮೇರಾ ನಾಮ್ ಜೋಕರ್ ಚಿತ್ರದಲ್ಲಿ ನಟಿಸಿದ್ದರು.

ತಮಿಳು ಚಿತ್ರರಂಗದ ಖ್ಯಾತ ನಟರಾದ ಶಿವಾಜಿ ಗಣೇಶನ್ ಹಾಗೂ ಎಂಜಿ.ರಾಮಚಂದ್ರನ್ ಅವರ ಜೊತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು.

ಭರತನಾಟ್ಯವನ್ನು ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿದ್ದ ಪದ್ಮಿನಿಯವರು ಪದ್ಮಿನಿ ಸ್ಕೂಲ್ ಆಫ್ ಫೈನ್ ಆರ್ಟ್ಸ್ ಎಂಬ ಕಲಾಶಾಲೆಯನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಸುತ್ತಿದ್ದರು.

ಖಾಸಗಿ ಬದುಕು

ಪದ್ಮಿನಿಯವರು ಡಾ.ಕೆ.ಟಿ.ರಾಮಚಂದ್ರನ್ ಅವರನ್ನು ವಿವಾಹವಾಗಿದ್ದರು. ಪ್ರೇಮ್ ರಾಮಚಂದ್ರನ್ ಪದ್ಮಿನಿಯವರ ಮಗ. ಸದ್ಯಕ್ಕೆ ಅವರು ವಾರ್ನರ್ ಬ್ರದರ್ಸ್ ಕಂಪೆನಿಯ ಉದ್ಯೋಗಿಯಾಗಿದ್ದಾರೆ.

ನಿಧನ

ಪದ್ಮಿನಿಯವರು ತಮ್ಮ ಎಪ್ಪತ್ತನೆಯ ವಯಸ್ಸಿನಲ್ಲಿ ಚೆನ್ನೈ ನಗರದ ಅಪೋಲೋ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ ೨೪,೨೦೦೬ರಂದು ನಿಧನ ಹೊಂದಿದರು.

"https://kn.wikipedia.org/w/index.php?title=ಪದ್ಮಿನಿ&oldid=167079" ಇಂದ ಪಡೆಯಲ್ಪಟ್ಟಿದೆ