ಗಾದೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: sah:Өс хоһооно
೪೨೨ ನೇ ಸಾಲು: ೪೨೨ ನೇ ಸಾಲು:
[[ro:Proverb]]
[[ro:Proverb]]
[[ru:Пословица]]
[[ru:Пословица]]
[[sah:Өс хоһооно]]
[[simple:Proverb]]
[[simple:Proverb]]
[[sk:Príslovie]]
[[sk:Príslovie]]

೨೩:೪೭, ೧೮ ಜುಲೈ ೨೦೧೦ ನಂತೆ ಪರಿಷ್ಕರಣೆ

ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು ರೂಪಕಗಳಾಗಿರುತ್ತವೆ.


ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಗಾದೆಗಳು

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:


ಹೊರಗಿನ ಕೊಂಡಿಗಳು

[ವಿಕಿಪೀಡಿಯ ಕನ್ನಡ ಗಾದೆ (ಕನ್ನಡ)]
[ವಿಕಿಪೀಡಿಯ ಕನ್ನಡ ಗಾದೆಗಳು (ಆಂಗ್ಲ) / wikipedia kannada proverbs (English)]
[ಅವರ್-ಕರ್ನಾಟಕ ಗಾದೆಗಳು]
[ಸಂಪದ ಗಾದೆಗಳ ಸಂಗ್ರಹ]


ಹೇಳಿಕೆ ಮಾತು


ಗಾದೆಗಳನ್ನು ಇಲ್ಲಿ ಪಟ್ಟಿ ಮಾಡಿರಿ...
Please contribute to the list of kannada proverbs(kannada gadegalu / ಕನ್ನಡ ಗಾದೆಗಳು)...

ಕನ್ನಡ ಹಾರೈಕೆಗಳು


  • ಹಿಟ್ಟಿಕ್ಕಿದವನ ಹೊಟ್ಟೆ ತಣ್ಣಗಿರಲಿ (=> ಅನ್ನದಾತ ಸುಖೀಭವ)
  • ಉರಿ ಹೋಗಲಿ ಸಿರಿ ಬರಲಿ
  • ನಿನ್ನ ಬಾಳು ಬಂಗಾರವಾಗಲಿ
  • ತಿಂಗಳ ಬೆಳಕಾಗಿ ಬಾಳಿನಲ್ಲಿ ತಂಗಾಳಿ ಹಿಂಗದಿರಲಿ
  • ಹಾಲ್‍ಹೆಚ್ಚಲಿ ಹಣಹೆಚ್ಚಲಿ ಕುಡಿಹೆಚ್ಚಲಿ ಪೈರ್‌ಹೆಚ್ಚಲಿ
  • ಒಂದಕ್ಕೆ ಸಾವಿರ ಆಗಲಿ
  • ಕೂಡಿ ಬಾಳೋಣ ಎಂದೂ ಸೇರಿ ದುಡಿಯೋಣ
  • ನೂರು (ಆಯಸ್ಸು) ತುಂಬಲಿ
  • ಸಿಂಗಾರದಲ್ಲಿ ಬಂಗಾರದವಳಾಗಿರು

ಕನ್ನಡ ಶಾಪಗಳು


  • ನಿನ್ನ ಮಾರಿ(=ಮೋರೆ, ಮುಖ) ಮಣ್ಣಾಗೆ ಅಡಗಲಿ
  • ಪಾಪಿಯ(ನ್ನು) ಪಾಪಿ ತಿಂದೋಗಲಿ
  • ನಿನ್ನ ಬಾಯಾಗೆ ಹುಳ ಬೀಳ(-ಲಿ)
  • ನಿನ್ನ ಹೆಣ ಎತ್ತ(-ಲಿ)
  • ನೀ ಡಬ್ಬಿದ್ದು ಸಾಯಿ(=ನೀನು ಡಬ್ಬಿ ಬಿದ್ದು ಸಾಯಿ, ನೀ ಮಕಾಡೆ ಬಿದ್ದು ಸಾಯಿ)
  • ನಿನ್ನ ಬಾಯಾಗೆ ಮಣ್ಣು ಹಾಕ(-ಲಿ)
  • ನೀ ನೆಗೆದು ಬಿದ್ದು ಹೋಗ
  • ನಿನ್ನ ಮನೆ ಎಕ್ಕುಟಿ ಹೋಗ(-ಲಿ) (=> ನಿನ್ನ ಮನೆಯಲ್ಲಿ ಎಕ್ಕದ ಗಿಡ ಹುಟ್ಟಿ ಮನೆ ಹಾಳಾಗಿ ಹೋಗಲಿ)
  • ನಿನ್ನ ನಾಲಗೆ ಸೇದು ಹೋಗ(-ಲಿ)

ಕನ್ನಡ ಗಾದೆಗಳು


  • ಮಣ್ಣಿನಿಂದ ಮಣ್ಣಿಗೆ
    • English: from mud to the mud
    • ಅರ್ಥ: ಭೂತಾಯಿಯ ಮಡಿಲಲ್ಲಿ ಹುಟ್ಟಿದ ನಾವೆಲ್ಲರೂ ಕಡೆಗೆ ಭೂತಾಯಿಯ ಮಡಿಲಿಗೆ ಸೇರುತ್ತೇವೆ.


  • ಸೊನ್ನೆಯಿಂದ ಸೊನ್ನೆಗೆ
    • English: from nothing to nothing
    • ಅರ್ಥ: [ಬೌದ್ಧ ಧರ್ಮದ ಪ್ರಕಾರ,] ಶೂನ್ಯದಿಂದ ಹುಟ್ಟಿದ ಎಲ್ಲವೂ ಕಡೆಗೆ ಶೂನ್ಯದಲ್ಲಿ ವಿಲೀನಗೊಳ್ಳುತ್ತವೆ. [ಹಿಂದೂ ಧರ್ಮದ ಪ್ರಕಾರ, ಪರಮಾತ್ಮನಲ್ಲಿ ಹುಟ್ಟಿದ ಎಲ್ಲವೂ ಕಡೆಗೆ ಪರಮಾತ್ಮನಲ್ಲಿ ಐಕ್ಯಗೊಳ್ಳುತ್ತವೆ.]


  • ಅಡವಿಯ ದೊಣ್ಣೆ ಪರದೇಸಿಯ ತಲೆ (ಕನ್ನಡ)
  • ಅಳಿವುದೇ ಕಾಯ ಉಳಿವುದೇ ಕೀರ್ತಿ (ಕನ್ನಡ)
  • ಅಂದು ಬಾ ಅಂದ್ರೆ ಮಿಂದು ಬಂದ (ಕನ್ನಡ)
  • ಅಂಗೈ ಹುಣ್ಣಿಗೆ ಕನ್ನಡಿ ಯಾಕೆ (ಕನ್ನಡ)
  • ಅಂಕೆ ಇಲ್ಲದ ಚತುರೆ, ಲಗಾಮು ಇಲ್ಲದ ಕುದುರೆ (ಕನ್ನಡ)
  • ಅಟ್ಟಿಕ್ಕಿದೋಳಿಗಿನ್ನ ಬೊಟ್ಟಿಕ್ಕಿದೋಳು ಹೆಚ್ಚು (ಕನ್ನಡ)
  • ಆಡೋದು ಮಡಿ ಉಂಬೋದು ಮೈಲಿಗೆ (ಕನ್ನಡ)
  • ಆಡಿ ತಪ್ಪ ಬೇಡ ಓಡಿ ಸಿಕ್ಕ ಬೇಡ (ಕನ್ನಡ)
  • ಆಡುತ್ತಾ ಆಡುತ್ತಾ ಭಾಷೆ, ಹಾಡುತ್ತಾ ಹಾಡುತ್ತಾ ರಾಗ (ಕನ್ನಡ)
  • ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು (ಕನ್ನಡ)
  • ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ (ಕನ್ನಡ)
  • ಆಚಾರ್ಯರಿಗೆ ಮಂತ್ರಕ್ಕಿಂತ ಉಗುಳು ಜಾಸ್ತಿ (ಕನ್ನಡ)
  • ಆದ್ರೆ ಒಂದು ಅಡಿಕೆ ಮರ, ಹೋದ್ರೆ ಒಂದು ಗೋಟಡಿಕೆ (ಕನ್ನಡ)
  • ಆಗೋ ಪೂಜೆ ಆಗುತ್ತಿರಲಿ ಊದೋ ಶಂಖ ಊದಿ ಬಿಡುವ (ಕನ್ನಡ)
  • ಆಗರಕ್ಕೆ ಹೋಗಿ ನನ್ನ ಗಂಡ ಗೂಬೆ ತಂದ (ಕನ್ನಡ)
  • ಆಲಸಿ-ಮುಂಡೇದಕ್ಕೆ ಎರಡು ಖರ್ಚು, ಲೋಭಿ-ಮುಂಡೇದಕ್ಕೆ ಮೂರು ಖರ್ಚು (ಕನ್ನಡ)
  • ಆನೆ ಮೆಟ್ಟಿದ್ದೇ ಸಂದು, ಸೆಟ್ಟಿ ಕಟ್ಟಿದ್ದೇ ಪಟ್ಟಣ (ಕನ್ನಡ)
  • ಆನೆಯಂಥದೂ ಮುಗ್ಗರಿಸ್ತದೆ (ಕನ್ನಡ)
  • ಆಪತ್ತಿಗೆ ಹರಕೆ, ಸಂಪತ್ತಿಗೆ ಮರವು (ಕನ್ನಡ)
  • ಆರು ಯತ್ನ ತನ್ನದು, ಏಳನೇದು ದೇವರಿಚ್ಛೆ (ಕನ್ನಡ)
  • ಆಸೆ ಹೆಚ್ಚಿತು ಆಯಸ್ಸು ಕಮ್ಮಿ ಆಯಿತು (ಕನ್ನಡ)
  • ಆಸೆಗೆ ಕೊನೆಯಿಲ್ಲ (ಕನ್ನಡ)
  • ಆಕಳು ಕಪ್ಪಾದ್ರೆ ಹಾಲು ಕಪ್ಪೇನು (ಕನ್ನಡ)
  • ಅಬದ್ಧಕ್ಕೆ ಅಪ್ಪಣೆಯೇ ಅಂದ್ರೆ ಬಾಯಿಗೆ ಬಂದಷ್ಟು (ಕನ್ನಡ)
  • ಅಗಸನ ಬಡಿವಾರವೆಲ್ಲ ಹೆರರ ಬಟ್ಟೆ ಮೇಲೆ (ಕನ್ನಡ)
  • ಅಗಸರ ಕತ್ತೆ ಕೊಂಡು ಹೋಗಿ, ಡೊಂಬರಿಗೆ ತ್ಯಾಗ ಹಾಕಿದ ಹಾಗೆ (ಕನ್ನಡ)
  • ಅಜ್ಜ! ಮದುವೆ ಅಂದ್ರೆ ನನಗೋ ಅಂದ (ಕನ್ನಡ)
  • ಅಜ್ಜಿ ಸಾಕಿದ ಮಗ ಬೊಜ್ಜಕ್ಕೂ ಬಾರದು (ಕನ್ನಡ)
  • ಅಜ್ಜಿಗೆ ಅರಿವೆಯ ಚಿಂತೆ, ಮಗಳಿಗೆ ಗಂಡನ ಚಿಂತೆ, ಮೊಮ್ಮಗಳಿಗೆ ಕಜ್ಜಾಯದ ಚಿಂತೆ (ಕನ್ನಡ)
  • ಅಕ್ಕ ಬರಬೇಕು ಅಕ್ಕಿ ಮುಗೀಬಾರದು (ಕನ್ನಡ)
  • ಅಕ್ಕ ನನ್ನವಳಾದ್ರೆ ಬಾವ ನನ್ನವನೇನು (ಕನ್ನಡ)
  • ಅಕ್ಕ ಸತ್ತರೆ ಅಮಾಸೆ ನಿಲ್ಲದು, ಅಣ್ಣ ಸತ್ತರೆ ಹುಣ್ಣಿಮೆ ನಿಲ್ಲದು (ಕನ್ನಡ)
  • ಅಕ್ಕನ ಚಿನ್ನವಾದ್ರೂ ಅಕ್ಕಸಾಲಿ ಟೊಣೆಯದೆ(=ಕದಿಯದೆ) ಬಿಡ (ಕನ್ನಡ)
  • ಅಕ್ಕನ ಹಗೆ ಬಾವನ ನಂಟು (ಕನ್ನಡ)
  • ಅಕ್ಕರೆಯ ಅಕ್ಕ ಬಂದಾಗೇ ಸಕ್ಕರೆಯೆಲ್ಲ ಕಹಿ ಆಯ್ತು (ಕನ್ನಡ)
  • ಅಕ್ಕರೆಯಿದ್ದಲ್ಲಿ ದುಃಖವುಂಟು (ಕನ್ನಡ)
  • ಅಕ್ಕಿ ಅಂದ್ರೆ ಪ್ರಾಣ, ನೆಂಟ್ರು ಅಂದ್ರೆ ಜೀವ (ಕನ್ನಡ)
  • ಅಕ್ಕಿ ಸರಿಯಾಗ ಬಾರದು ಅಕ್ಕನ ಮಕ್ಕಳು ಬಡವಾಗ ಬಾರದು (ಕನ್ನಡ)
  • ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ (ಕನ್ನಡ)
  • ಅಲ್ಪ ವಿದ್ಯೆ ಬಲು ಗರ್ವ (ಕನ್ನಡ)
  • ಅಲ್ಪರ ಸಂಗ ಅಭಿಮಾನ ಭಂಗ (ಕನ್ನಡ)
  • ಅಮ್ಮನ ಮನಸ್ಸು ಬೆಲ್ಲದ ಹಾಗೆ, ಮಗಳ ಮನಸ್ಸು ಕಲ್ಲಿನ ಹಾಗೆ (ಕನ್ನಡ)
  • ಅನ್ನ ಇಕ್ಕಿ ಸಾಕು ಅನ್ನಿಸ ಬಹುದು, ದುಡ್ಡು ಕೊಟ್ಟು ಸಾಕು ಅನ್ನಿಸೋಕಾಗಲ್ಲ (ಕನ್ನಡ)
  • ಅನ್ಯಾಯದಿಂದ ಗಳಿಸಿದ್ದು ಅಸಡ್ಡಾಳಾಗಿ ಹೋಯ್ತು (ಕನ್ನಡ)
  • ಅಪ್ಪಂತೋನಿಗೆ ಇಪ್ಪತ್ತೊಂದು ಕಾಯಿಲೆ (ಕನ್ನಡ)
  • ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು, ಅತ್ತೆ ಮನೇಲೂ ಸೈ ಅನ್ನಿಸಿಕೊಣ್ತಾಳೆ (ಕನ್ನಡ)
  • ಅರಗಿನಂತೆ ತಾಯಿ, ಮರದಂತೆ ಮಕ್ಕಳು (ಕನ್ನಡ)
  • ಅರಮನೆಯ ಮುಂದಿರಬೇಡ, ಕುದರೆಯ ಹಿಂದಿರಬೇಡ (ಕನ್ನಡ)
  • ಅರಸನ ಕುದರೆ ಲಾಯದಲ್ಲೆ ಮುಪ್ಪಾಯಿತು (ಕನ್ನಡ)
  • ಅರಸು ಆದೀಕ (=ಆದಾಯ) ತಿಂದ, ಪರದಾನಿ ಹೂಸು ಕುಡಿದ (ಕನ್ನಡ)
  • ಅರೆಪಾವಿನವರ ಅಬ್ಬರ ಬಹಳ (ಕನ್ನಡ)
  • ಅರಿಯದೆ ಮಾಡಿದ ಪಾಪ ಅರಿತಂದು ಪರಿಹಾರ (ಕನ್ನಡ)
  • ಅರ್ತಿಗೆ (=ಪ್ರೀತಿಗೆ) ಬಳೆ ತೊಟ್ಟು ಕೈ ಕೊಡವಿದರೆ ಹೋದೀತೆ (ಕನ್ನಡ)
  • ಅತಿ ಆಸೆ ಗತಿಗೇಡು (ಕನ್ನಡ)
  • ಅತಿ ಸ್ನೇಹ ಗತಿ ಕೇಡು (ಕನ್ನಡ)
  • ಅತ್ತೆ ಒಡೆದ ಪಾತ್ರೆಗೆ ಬೆಲೆ ಇಲ್ಲ (ಕನ್ನಡ)
  • ಅವರವರ ತಲೆಗೆ ಅವರವರದೇ ಕೈ (ಕನ್ನಡ)
  • ಅಯ್ಯೋ ಅಂದವರಿಗೆ ಆರು ತಿಂಗಳು ಆಯಸ್ಸು ಕಮ್ಮಿ (ಕನ್ನಡ)
  • ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ--Kusuma ೧೦:೦೨, ೨ ಡಿಸೆಂಬರ್ ೨೦೦೯ (UTC).
  • ಬೆಕ್ಕಿಗೆ ಚೆಲ್ಲತ ಇಲಿಗೆ ಪ್ರನ ಸನ್ಕತ (ಕನ್ನಡ)
  • ಬೆಲ್ಲಗಿರುವುದೆಲ್ಲ ಹಾಲಲ್ಲ (ಕನ್ನಡ)
  • ಬಿರಿಯ ಉನ್ದ ಬ್ರಹ್ಮನ ಬಿಕ್ಶೆ ಬೆದಿದನನ್ಥೆ (ಕನ್ನಡ)
  • ಬೇಲಿನೆ ಎದ್ದು ಹೊಲ ಮೇಯಿತಂತೆ (ಕನ್ನಡ)
  • ಬೀದೀ ಕೂಸು ಬೆಳೀತು ಕೋಣೇ ಕೂಸು ಕೊಳೀತು (ಕನ್ನಡ)
  • ಬಾಯ್ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು, ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು (ಕನ್ನಡ)
  • ಬಾಯಲ್ಲಿ ಬಸಪ್ಪ ಹೊಟ್ಟೆಯಲ್ಲಿ ವಿಷಪ್ಪ (ಕನ್ನಡ)
  • ಬಾಯಲ್ಲಿ ಬೆಲ್ಲ ಕರುಳು ಕತ್ತರಿ (ಕನ್ನಡ)
  • ಬಯಕೆಗೆ ಬಡವರಿಲ್ಲ (ಕನ್ನಡ)
  • ಬೆಳ್ಳಯ್ಯ ಕಾಕಾ ಅರಿವಯ್ಯ ಮೂಕ (ಕನ್ನಡ)
  • ಭಂಗಿ ದೇವರಿಗೆ ಹೆಂಡಗುಡುಕ ಪೂಜರಿ (ಕನ್ನಡ)
  • ಬಿಮ್ಮಗಿದ್ದಾಗ ಹಮ್ಮು, ಬಿಮ್ಮು ತಪ್ಪಿದಾಗ ದಮ್ಮು (ಕನ್ನಡ)
  • ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ (ಕನ್ನಡ)
  • ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ (ಕನ್ನಡ)
  • ಡಂಬು (=ಬೂಟಾಟಿಕೆ) ನನ್ನ ಕೇಳು, ಡಬ್ಬು (=ದುಡ್ಡು) ನನ್ನ ಹೆಂಡ್ರನ್ನ ಕೇಳು (ಕನ್ನಡ)
  • ಡಾವರ (=ನೀರಡಿಕೆ) ಹತ್ತಿದಾಗ ದೇವರ ಧ್ಯಾನ (ಕನ್ನಡ)
  • ದಾಯವಾಗಿ(=ದಾನವಾಗಿ) ಸಿಕ್ಕಿದರೆ, ನನಗೆ ಒಂದಿರಲಿ ನಮ್ಮಪ್ಪನಿಗೆ ಒಂದಿರಲಿ (ಕನ್ನಡ)
  • ದುಡ್ಡಿಗೆ ದುಡ್ಡು ಗಂಟು ಹಾಕಿದ್ಯೋ? ಬೆನ್ನಿಗೆ ಹೊಟ್ಟೆ ಅಂಟು ಹಾಕಿದ್ಯೋ? (ಕನ್ನಡ)
  • ಹೇಳಿಕೆ ಮಾತು ಕೇಳಿ ಹೆಂಡ್ರನ್ನ ಬಿಟ್ಟ (ಕನ್ನಡ)
  • ಹೇಳೊದು ವೇದ ಹಾಕೊದು ಗಾಳ (ಕನ್ನಡ)
  • ಹೋದ ಬದುಕಿಗೆ ಹನ್ನೆರಡು ದೇವರು (ಕನ್ನಡ)
  • ಹೋದಾ ಪುಟ್ಟಾ, ಬಂದಾ ಪುಟ್ಟಾ, ಪುಟ್ಟನ ಕಾಲಿಗೆ ನೀರಿಲ್ಲ (ಕನ್ನಡ)
  • ಹೋದ್ರೆ ಒಂದು ಕಲ್ಲು, ಬಂದ್ರೆ ಒಂದು ಹಣ್ಣು (ಕನ್ನಡ)
  • ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ (ಕನ್ನಡ)
  • ಹಳೆ ಮನೆಗೆ ಹೆಗ್ಗಣ ಸೇರಿಕೊಂಡಂಗೆ (ಕನ್ನಡ)
  • ಹಂದಿ ತನ್ನ ಚಂದಕ್ಕೆ ವೃಂದಾವನ ಆಡ್ಕೊಣ್ತು (ಕನ್ನಡ)
  • ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು (ಕನ್ನಡ)
  • ಹಣ್ಣು ತಿಂದೋನು ನುಣುಚಿ ಕೊಂಡ ಸಿಪ್ಪೆ ತಿಂದೋನು ಸಿಗ್ಹಾಕೊಂಡ (ಕನ್ನಡ)
  • ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ (ಕನ್ನಡ)
  • ಹಣ ಎರವಲು ತಂದು ಮಣ ಉರುವಲು ಕೊಂಡ (ಕನ್ನಡ)
  • ಹಣ ಇದ್ದೋರಿಗೆ ಏನೆಲ್ಲ, ಗುಣ ಇದ್ದೋರಿಗೆ ಏನಿಲ್ಲ (ಕನ್ನಡ)
  • ಹಣ ಇಲ್ದೋರು ಎದ್ದೂ ಬಿದ್ದಂಗೆ, ಗುಣ ಇಲ್ದೋರು ಇದ್ದೂ ಇಲ್ದಂಗೆ (ಕನ್ನಡ)
  • ಹಣ ಇಲ್ಲದವ ಹೆಣಕ್ಕಿಂತ ಕಡೆ (ಕನ್ನಡ)
  • ಹಾಳೂರಿಗೆ ಉಳಿದೋನೇ ಗೌಡ, ಬೆಂಗಳೂರಿಗೆ ಬಂದೋನೇ ಬಹದ್ದೂರ (ಕನ್ನಡ)
  • ಹಾಳೂರಿಗೆ ಉಳಿದವನೇ ಗೌಡ (ಕನ್ನಡ)
  • ಹಾಗಲ ಕಾಯಿಗೆ ಬೇವಿನ ಕಾಯಿ ಸಾಕ್ಷಿ (ಕನ್ನಡ)
  • ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ (ಕನ್ನಡ)
  • ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ (ಕನ್ನಡ)
  • ಹಾಲಪ್ಪ ಅಂತ ಹೆಸರಿದ್ದರೂ ಮಜ್ಜಿಗೆಗೆ ಗತಿ ಇಲ್ಲ (ಕನ್ನಡ)
  • ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು (ಕನ್ನಡ)
  • ಹಾಲಿಲ್ಲ ಬಟ್ಟಲಿಲ್ಲ ಗುಟುಕ್ ಅಂದ (ಕನ್ನಡ)
  • ಹಾಲು ಕುಡಿದ ಮಕ್ಕಳೇ ಬದುಕಲಿಲ್ಲ ವಿಷ ಕುಡಿದ ಮಕ್ಕಳು ಬದುಕ್ಯಾರೆ (ಕನ್ನಡ)
  • ಹಾಲು ಮಾರಿದ್ದು ಹಾಲಿಗೆ ನೀರು ಮಾರಿದ್ದು ನೀರಿಗೆ (ಕನ್ನಡ)
  • ಹಾರುವರ ಕೇರೀಲಿ ಹಬ್ಬ ಆದ್ರೆ ಮೂಳನಾಯಿಗೇನು ಓಡಾಟ (ಕನ್ನಡ)
  • ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ (ಕನ್ನಡ)
  • ಹಬ್ಬ ಹಸನಾಗಲಿ, ಗೋದಿ ಜತನಾಗಲಿ, ಬಂದ ಬೀಗರು ಉಂಡು ಹೋಗಲಿ (ಕನ್ನಡ)
  • ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು (ಕನ್ನಡ)
  • ಹಗಲು ಅರಸನ ಕಾಟ ಇರುಳು ದೆವ್ವದ ಕಾಟ (ಕನ್ನಡ)
  • ಹಗೆ ಮಾತು ಆತುಕೊಂಡ, ತುಟಿ ಬಿಚ್ಚದೆ ಕೂತುಕೊಂಡ (ಕನ್ನಡ)
  • ಹಗೆಯೋನ ಕೊಲ್ಲಾಕೆ ಹಗಲೇನು ಇರುಳೇನು (ಕನ್ನಡ)
  • ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ (ಕನ್ನಡ)
  • ಹಗ್ಗ ತಿನ್ನೋ ಹನುಮಂತ ರಾಯನಿಗೆ ಜ್ವಾಳದ ಶಾವಿಗೆ ಎಷ್ಟು ಕೊಟ್ಟೀಯ (ಕನ್ನಡ)
  • ಹಲವು ದೇವರ ಮಾಡಿ ಹಾರುವಯ್ಯ ಕೆಟ್ಟ (ಕನ್ನಡ)
  • ಹಲ್ಲುಬಿದ್ದ ಮುದುಕಿ ಎಲ್ಲಿ ಬಿದ್ದರೇನು (ಕನ್ನಡ)
  • ಹರೆ ಬಡಿದರೂ ಮದುವೆ ಮೊರ ಬಡಿದರೂ ಮದುವೆ (ಕನ್ನಡ)
  • ಹರೆಯಕ್ಕೆ ಬಂದಾಗ ಹಂದಿನೂ ಚಂದ (ಕನ್ನಡ)
  • ಹರಿದಿದ್ದೇ ಹಳ್ಳ ನಿಂತಿದ್ದೇ ತೀರ್ಥ (ಕನ್ನಡ)
  • ಹರುವಯ್ಯನ ಎಲೆ ಇಂಬ, ಒಕ್ಕಲಿಗನ ಮನೆ ಇಂಬ (ಕನ್ನಡ)
  • ಹಸಿದ ಹೊಟ್ಟೆ ತೋರಿಸಿದರೆ ಮಸೆದ ಕತ್ತಿ ತೋರಿಸಿದರು (ಕನ್ನಡ)
  • ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು (ಕನ್ನಡ)
  • ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು (ಕನ್ನಡ)
  • ಹತ್ತು ಜನಕ್ಕೆ ಬಿದ್ದ ನ್ಯಾಯ ಬೇಗ ಸಾಯಕಿಲ್ಲ (ಕನ್ನಡ)
  • ಹೂವಿನಿಂದ ನಾರು ಸ್ವರ್ಗ ಸೇರಿತು
  • ಹತ್ತು ಕಟ್ಟುವಲ್ಲಿ ಒಂದು ಮುತ್ತು ಕಟ್ಟು (ಕನ್ನಡ)
  • ಹತ್ತು ಮಕ್ಕಳ ತಾಯಾದರೂ ಸತ್ತ ಮಗನ್ನ ಮರೆಯೊದಿಲ್ಲ (ಕನ್ನಡ)
  • ಹತ್ತು ತಿಂಗಂಳ ಪುಟ್ಟ ಹಟ್ಟೆಲ್ಲಾ ಹೆಜ್ಜೆ (ಕನ್ನಡ)
  • ಹೌದಪ್ಪನ ಮನೇಲಿ ಹೌದಪ್ಪ, ಇಲ್ಲಪ್ಪನ ಮನೇಲಿ ಇಲ್ಲಪ್ಪ (ಕನ್ನಡ)
  • ಹೆಡ್ಡಾಳಾದ್ರೂ ದೊಡ್ಡಾಳು ಮೇಲು (ಕನ್ನಡ)
  • ಹೆಂಡ್ರ ಅವಾಂತರ ತಡಿಲಾರದೆ ಗಂಡ ದೇಶಾಂತರ ಹೋದ (ಕನ್ನಡ)
  • ಹೆಂಡ್ರನ್ನ ಸಸಾರ (=ತಾತ್ಸಾರ) ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ (ಕನ್ನಡ)
  • ಹೆಣ್ಣು ಚಂದ ಕಣ್ಣು ಕುಲ್ಡು ಅಂದಂಗೆ (ಕನ್ನಡ)
  • ಹೆಣು ಮಕ್ಕಳು ಇದ್ದ ಮನೆ ಕನ್ನಡಿಯಂಗೆ (ಕನ್ನಡ)
  • ಹೆರಿಗೆ ಬೇನೆ ಕೆಲ ಗಂಟೆ ಗಂಟ, ಬಂಜೆ ಬೇನೆ ಬದುಕಿನ ಗಂಟ (ಕನ್ನಡ)
  • ಹೆಸರಿಗೆ ಹೊನ್ನ ಹೆಗ್ಗಡೆ, ಎಸರಿಗೆ ಅಕ್ಕಿ ಇಲ್ಲ (ಕನ್ನಡ)
  • ಹೆತ್ತ ಅಮ್ಮನ್ನ ತಿನ್ನೋಳು ಅತ್ತೆಯಮ್ಮನ್ನ ಬಿಟ್ಟಾಳ (ಕನ್ನಡ)
  • ಹೆತ್ತವರಿಗೆ ಅಂಬಲಿ ಬಿಡದಿದ್ದರೂ, ಹಂಬಲ ಬಿಡದಿದ್ದರೆ ಸಾಕು (ಕನ್ನಡ)
  • ಹೆತ್ತವರು ಹೆಸರಿಕ್ಕ ಬೇಕು (ಕನ್ನಡ)
  • ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ (ಕನ್ನಡ)
  • ಹಿಟ್ಟು ಹಳಸಿತ್ತು ನಾಯೂ ಹಸಿದಿತ್ತು (ಕನ್ನಡ)
  • ಹಿರೀಅಕ್ಕನ ಚಾಳಿ ಮನೆ ಮಕ್ಕಳಿಗೆಲ್ಲಾ (ಕನ್ನಡ)
  • ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ (ಕನ್ನಡ)
  • ಹಿತವಿಲ್ಲದ ಗಂಡ ಹಿಂದಿದ್ದರೇನು ಮುಂದಿದ್ದರೇನು (ಕನ್ನಡ)
  • ಹಿತ್ತಲ ಗಿಡ ಮದ್ದಲ್ಲ ಹತ್ತರ ಮಾತು ರುಚಿಯಲ್ಲ (ಕನ್ನಡ)
  • ಹೊಳೆಗೆ ಸುರಿದರೂ ಅಳೆದು ಸುರಿ (ಕನ್ನಡ)
  • ಹೊಟ್ಟೆ ತುಂಬಿದೋರಿಗೆ ಹುಡುಗಾಟ, ಹೊಟ್ಟೆಗಿಲ್ಲದೋರಿಗೆ ಮಿಡುಕಾಟ (ಕನ್ನಡ)
  • ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು (ಕನ್ನಡ)
  • ಹೊಟ್ಟೆ ಉರಿದು ಕೊಳ್ಳೋದು ಒಂದೇಯ, ಹೊಟ್ಟೆ ಇರಿದು ಕೊಳ್ಳೋದು ಒಂದೇಯ (ಕನ್ನಡ)
  • ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು (ಕನ್ನಡ)
  • ಹೊರೆ ಹೊತ್ತುಕೊಂಡು ಗ್ರಹಗತಿ ಕೇಳ್ದಂದೆ (ಕನ್ನಡ)
  • ಹುಳ್ಳಿಕಾಳೂ ತಿನ್ನೊ ಮುಕ್ಕ ಒಬ್ಬಟ್ಟಿನ ಹೂರ‍್ಣ ಕೇಳಿದಂಗೆ (ಕನ್ನಡ)
  • ಹುಣ್ಣಿಮೆ ಬರುವನಕ ಅಮಾಸೆ ನಿಲ್ಲದು, ಅಮಾಸೆ ಬರುವನಕ ಹುಣ್ಣಿಮೆ ನಿಲ್ಲದು (ಕನ್ನಡ)
  • ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ (ಕನ್ನಡ)
  • ಹುಟ್ಟಿದ ಮನೆ ಹೋಳಿಹುಣ್ಣಿಮೆ ಕೊಟ್ಟ ಮನೆ ಶಿವರಾತ್ರಿ (ಕನ್ನಡ)
  • ಹುಟ್ಟಿದಾಗ ಬಂದದ್ದು ಹೂತಾಗ ಹೋದೀತೇನು (ಕನ್ನಡ)
  • ಹುಟ್ಟು ಗುಣ ಸುಟ್ಟರೂ ಹೊಗೊದಿಲ್ಲ (ಕನ್ನಡ)
  • ಹುಬ್ಬೆ ಮಳೇಲಿ ಬಿತ್ತಿದರೆ ಹುಲ್ಲೂ ಇಲ್ಲ ಕಾಳೂ ಇಲ್ಲ (ಕನ್ನಡ)
  • ಹುತ್ತ ಬಡಿದರೆ ಹಾವು ಸಾಯುವುದೇ (ಕನ್ನಡ)
  • ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ (ಕನ್ನಡ)
  • ಓದೋದು ಕಾಶಿ ಖಂಡ, ತಿನ್ನೋದು ಮಶಿ ಕೆಂಡ (ಕನ್ನಡ)
  • ಓದಿ ಓದಿ ಮರುಳಾದ ಕೋಚು ಭಟ್ಟ (ಕನ್ನಡ)
  • ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ (ಕನ್ನಡ)
  • ಒಂದು ಹೊತ್ತು ಉಂಡವ ಯೋಗಿ ಎರಡು ಹೊತ್ತು ಉಂಡವ ಭೋಗಿ ಮೂರು ಹೊತ್ತು ಉಂಡವ ರೋಗಿ ನಾಲ್ಕು ಹೊತ್ತು ಉಂಡವ ಎತ್ತುಕೊಂಡು ಹೋಗಿ (ಕನ್ನಡ)
  • ಒಂದು ಕಣ್ಣೀಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ (ಕನ್ನಡ)
  • ಒಕ್ಕಣ್ಣರ ನಾಡಿಗೆ ಹೋದ್ರೆ ಒಂದು ಕಣ್ಣು ಮುಚ್ಚಿ ನಡೆಯಬೇಕು (ಕನ್ನಡ)
  • ಒಲ್ಲದ ಗಂಡಗೆ ಬೆಣ್ಣೇಲಿ ಕಲ್ಲು (ಕನ್ನಡ)
  • ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು (ಕನ್ನಡ)
  • ಪಾಪಿ ಸಮುದ್ರ ಹೊಕ್ರೂ ಮೊಣಕಾಲುದ್ದ ನೀರು (ಕನ್ನಡ)
  • ಪಾಪ ಅಂದ್ರೆ ಕರ್ಮ ಬರ್ತದೆ (ಕನ್ನಡ)
  • ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು (ಕನ್ನಡ)
  • ರಟ್ಟೆ ಮುರಿದು ರೊಟ್ಟಿ ತಿನ್ನು ಕಟ್ಟೆ ಹಾಕಿ ಅನ್ನ ಉಣ್ಣು (ಕನ್ನಡ)
  • ರಾಗ ನೆನೆಪಾದಾಗ ತಾಳ ಮರೆತು ಹೋಯಿತಂತೆ (ಕನ್ನಡ)
  • ರಾಗಿ ಇದ್ರೆ ರಾಗ ರಾಗಿ ಇಲ್ದಿದ್ರೆ ರೋಗ (ಕನ್ನಡ)
  • ರಾಗಿಕಲ್ಲು ತಿರುಗುವಾಗ ರಾಜ್ಯವೆಲ್ಲಾ ನೆಂಟರು (ಕನ್ನಡ)
  • ರಾಜ ಇರೋತನಕ ರಾಣಿ ಭೋಗ (ಕನ್ನಡ)
  • ರಾಮ ಅನ್ನೋ ಕಾಲದಲ್ಲಿ ರಾವಣ ಬುದ್ಧಿ (ಕನ್ನಡ)
  • ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ (ಕನ್ನಡ)
  • ರಾತ್ರಿ ಕಂಡ ಬಾವೀಲಿ ಹಗಲು ಬಿದ್ದಂಗೆ (ಕನ್ನಡ)
  • ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ (ಕನ್ನಡ)
  • ರಸ ಬೆಳೆದು ಕಸ ತಿನ್ನಬೇಡ, ಹಸ ಕಟ್ಟಿ ಮೊಸರಿಗೆ ಪರದಾಡಬೇಡ (ಕನ್ನಡ)
  • ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು (ಕನ್ನಡ)
  • ಸ್ತ್ರೀ ರೂಪವೇ ರೂಪ, ಶೃಂಗಾರವೇ ರಸ (ಕನ್ನಡ)
  • ಸಾವಿರ ಸುಳ್ಳು ಹೇಳಿ ಒಂಡು ಮಡುವೆ ಮಾಡು (ಕನ್ನಡ)
  • ಸೂಜಿಯಷ್ಟು ಬಾಯಿ ಗುಡಾಣದಷ್ಟು ಹೊಟ್ಟೆ (ಕನ್ನಡ)
  • ಸಡಗರದಲ್ಲಿ ಮದುವೆ ಮಾಡಿ ಈ ಹೆಣ್ಣು ಯಾರು ಅಂದಳಂತೆ ಅತ್ತೆ (ಕನ್ನಡ)
  • ಸಂದೀಲಿ ಸಮಾರಾಧನೆ ಮಾಡ್ದಂಗೆ (ಕನ್ನಡ)
  • ಸಂಸಾರಿ ಸಾವಾಸ ಮಾಡಿ ಸನ್ಯಾಸಿ ಕೆಟ್ಟ (ಕನ್ನಡ)
  • ಸಂತೇಲಿ ಮಂತ್ರ ಹೇಳಿದಂಗೆ (ಕನ್ನಡ)
  • ಸಂತೆ ಕಟ್ಟೋಕು ಮೊದಲೇ ಸೇರಿದರು ಗಂಟು ಕಳ್ಳರು (ಕನ್ನಡ)
  • ಸಂತೆ ಸೇರೋಕೆ ಮೊದಲು ಗಂಟು ಕಳ್ಳರು ಸೇರಿದರು (ಕನ್ನಡ)
  • ಸಾದೆತ್ತಿಗೆ ಎರಡು ಹೇರು (ಹೊರೆ) (ಕನ್ನಡ)
  • ಸಾಲ ಅಂದ್ರೆ ಶೂಲ, ಕಾಲ ಅಂದ್ರೆ ಯಮ (ಕನ್ನಡ)
  • ಸಾಲಗಾರ ಸುಮ್ಮನಿದ್ದರೂ ಸಾಕ್ಷಿದಾರ ಸುಮ್ಮನಿರ (ಕನ್ನಡ)
  • ಸಾಲಗಾರನ ಮನೆಗೆ ಸವುದೆ ಹೊತ್ತರೆ ಮೇಲಣ ಬಡ್ಡಿಗೆ ಸಮವಾಯಿತು (ಕನ್ನಡ)
  • ಸಾವಿರ ಕೊಟ್ಟರೂ ಸವತಿ ಮನೆ ಬೇಡ (ಕನ್ನಡ)
  • ಸಾವಿರ ಕುದರೆ ಸರದಾರ ಮನೇ ಹೆಣ್ತಿಗೆ ಪಿಂಜಾರ (ಕನ್ನಡ)
  • ಸಾವಿರ ಸಲ ಗೋವಿಂದ ಅಂದರು, ಒಬ್ಬ ದಾಸಯ್ಯನಿಗೆ ಭಿಕ್ಷೆ ನೀಡಲಿಲ್ಲ (ಕನ್ನಡ)
  • ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು (ಕನ್ನಡ)
  • ಸಾವಿರ ವರ್ಷ ಸಾಮು ಮಾಡಿ ಸಾಯೋ ಮುದುಕಿ ಸೊಂಟ ಮುರಿದ (ಕನ್ನಡ)
  • ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ (ಕನ್ನಡ)
  • ಸಾಯೋ ತನಕ ಶನಿ ಕಾಟ ಆದ್ರೆ ಬಾಳೋದು ಯಾವಾಗ (ಕನ್ನಡ)
  • ಸಾಯ್ತಿನಿ ಸಾಯ್ತಿನಿ ಅಂತ ಸಾವಿರ ಕೋಳಿ ತಿಂದನಂತೆ (ಕನ್ನಡ)
  • ಸಮಯಕ್ಕಾದ ಹುಲ್ಲು ಕಡ್ಡಿ ಸಹಸ್ರ ಹೊನ್ನು (ಕನ್ನಡ)
  • ಸಮಯಕ್ಕಾದವನೆ ನೆಂಟ ಕೆಲಸಕ್ಕಾದವನೆ ಬಂಟ (ಕನ್ನಡ)
  • ಸಮಯಕ್ಕೆ ಬಾರದ ಬುದ್ಧಿ ಸಾವಿರ ಇದ್ದರೂ ಲದ್ಧಿ (ಕನ್ನಡ)
  • ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು (ಅನ್ಯ) (ಕನ್ನಡ)
  • ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ (ಕನ್ನಡ)
  • ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ (ಕನ್ನಡ)
  • ಸತ್ತ ಮೇಲಿನ ಸೊರ‍್ಗಕ್ಕಿಂತ ಇದ್ದ ನರಲೋಕ ವಾಸಿ (ಕನ್ನಡ)
  • ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ (ಕನ್ನಡ)
  • ಸವತಿ ಸಣ್ಣವಳಲ್ಲ ದಾಯಾದಿ ಚಿಕ್ಕವನಲ್ಲ (ಕನ್ನಡ)
  • ಸೆಟ್ಟಿ ಸಾಲ ಸತ್ತ ಮೇಲೆ ತಿಳೀತು (ಕನ್ನಡ)
  • ಸೊಕ್ಕಿದ್ದು ಉಕ್ತದೆ ಉಕ್ಕಿದ್ದು ಒಲೆಗೆ ಹಾರ‍್ತದೆ (ಕನ್ನಡ)
  • ಸೊಪ್ಪುಸೆದೆ ತಿನ್ನೋರ ಒಪ್ಪ ನೋಡು, ತುಪ್ಪತೊಗೆ ತಿನ್ನೋರ ರಂಪ ನೋಡು (ಕನ್ನಡ)
  • ಸುಳ್ಳು ದೇವರಿಗೆ ಕಳ್ಳ ಪೂಜಾರಿ (ಕನ್ನಡ)
  • ಸುಂಕದೋನ ಹತ್ರ ಸುಖದುಃಖ ಹೇಳಿಕೊಂಡ ಹಾಗೆ (ಕನ್ನಡ)
  • ಶೀಲವಂತರ ಓಣೀಲಿ ಕೋಳಿ ಮಾಯ ಆದವಂತೆ (ಕನ್ನಡ)
  • ಶೆಟ್ಟಿ ಸುಂಗಾರ ಆಗೋದರೊಳಗೆ ಪಟ್ಟಣ ಹಾಳಾಯ್ತು (ಕನ್ನಡ)
  • ಶಿವಾ ಅರಿಯದ ಸಾವು ಇಲ್ಲ ಮನಾ ಅರಿಯದ ಪಾಪ ಇಲ್ಲ (ಕನ್ನಡ)
  • ಶಿವರಾತ್ರಿ ಮನೆಗೆ ಏಕಾದಶಿ ಬಂದಂಗೆ (ಕನ್ನಡ)
  • ತೇದು ಇಕ್ಕಿದೋಳಿಗಿಂತ ಸಾದು ಇಕ್ಕಿದೋಳು ಹೆಚ್ಚು (ಕನ್ನಡ)
  • ತೇಗಿ ತೇಗಿ ಬೀಗಿ ಬಿದ್ದ (ಕನ್ನಡ)
  • ತೂತು ಗತ್ತಲೇಲಿ ತಾತನ ಮದುವೆ (ಕನ್ನಡ)
  • ತಾಳ ತಪ್ಪಿದ ಬಾಳು, ತಾಳಲಾರದ ಗೋಳು (ಕನ್ನಡ)
  • ತಾಮ್ರದ ನಾಣ್ಯ ತಾಯಿ ಮಕ್ಕಳನ್ನ ಕೆಡಿಸ್ತು (ಕನ್ನಡ)
  • ತನ್ನೂರಲ್ಲಿ ರಂಗ, ಪರೂರಲ್ಲಿ ಮಂಗ (ಕನ್ನಡ)
  • ತುಂಬಿದ ಕೊಡ, ತುಳುಕೋದಿಲ್ಲ (ಕನ್ನಡ)
  • ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು (ಕನ್ನಡ)
  • ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು (ಕನ್ನಡ)
  • ಊರಿಗಾಗದ ಗೌಡ, ಮೇಲೆರಗುವ ಗಿಡುಗ (ಕನ್ನಡ)
  • ಊರು ಬಾವಿಗೆ ಬಿದ್ದರೂ, ಊರ ಬಾಯಿಗೆ ಬೀಳಬಾರದು (ಕನ್ನಡ)
  • ಊರು ದೂರಾಯಿತು ಕಾಡು ಹತ್ತರಾಯಿತು (ಕನ್ನಡ)
  • ಉಡೋಕೆ ಇಲ್ಲದವ ಮೈಲಿಗೆಗೆ ಹೇಸ, ಉಂಬೋಕೆ ಇಲ್ಲದವ ಎಂಜಲಿಗೆ ಹೇಸ (ಕನ್ನಡ)
  • ಉಂಡ ಮನೆ ಜಂತೆ ಎಣಿಸಬಾರದು (ಕನ್ನಡ)
  • ಉಂಡದ್ದು ಊಟ ಆಗಲಿಲ್ಲ, ಕೊಂಡದ್ದು ಕೂಟ ಆಗಲಿಲ್ಲ (ಕನ್ನಡ)
  • ಉಂಬೋಕೆ ಉಡೋಕೆ ಅಣ್ಣಪ್ಪ ಕೆಲಸಕ್ಕಷ್ಟೇ ಇಲ್ಲಪ್ಪ (ಕನ್ನಡ)
  • ಉಂಬಾಗ ಉಡುವಾಗ ಊರೆಲ್ಲ ನೆಂಟರು (ಕನ್ನಡ)
  • ಉದ್ಯೋಗವೇ ಗಂಡಸಿಗೆ ಲಕ್ಷಣ (ಕನ್ನಡ)
  • ಉಗಿದರೆ ತುಪ್ಪ ಕೆಡುತ್ತದೆ, ನುಂಗಿದರೆ ಗಂಟಲು ಕೆಡುತ್ತದೆ (ಕನ್ನಡ)
  • ಉಪ್ಪಿಕ್ಕಿದವರನ್ನು ಮುಪ್ಪಿನ ತನಕ ನೆನೆ (ಕನ್ನಡ)
  • ಉರಿಯೋ ಬೆಂಕೀಲಿ ಎಣ್ಣೆ ಹೊಯಿದ ಹಾಗೆ (ಕನ್ನಡ)
  • ಉತ್ತಮ ಹೊಲ ಮಧ್ಯಮ ವ್ಯಾಪಾರ ಕನಿಷ್ಠ ಚಾಕರಿ (ಕನ್ನಡ)
  • ಉತ್ತಮನು ಎತ್ತ ಹೋದರೂ ಶುಭವೇ (ಕನ್ನಡ)
  • ವಶಗೆಡದೆ ಹಸಗೆಡಲ್ಲ (ಕನ್ನಡ)
  • ವಿನಾಶ ಕಾಲಕ್ಕೆ ವಿಪರೀತ ಬುದ್ಧಿ (ಕನ್ನಡ)
  • ವ್ಯಾಪಾರಕ್ಕೆ ನಿಮಿಷ ಬೇಸಾಯಕ್ಕೆ ವರುಷ (ಕನ್ನಡ)
  • ಯಾವ ಚಿಂತೇನೂ ಮಾಡದೋನ ಹೆಂಡ್ತಿ ಗಂಡಿದ್ದೂ ಮುಂಡೆ (ಕನ್ನಡ)
  • ಯೋಗ ಇದ್ದಷ್ಟೇ ಭೋಗ (ಕನ್ನಡ)
  • ಯೋಗಿ ತಂದದ್ದು ಯೋಗಿಗೆ, ಭೋಗಿ ತಂದದ್ದು ಭೋಗಿಗೆ (ಕನ್ನಡ)
  • ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ (ಕನ್ನಡ)
  • ಯಾರೂ ಇಲ್ಲದ ಊರಿಗೆ ಹೋಗಿ ನೀರು ಮಜ್ಜಿಗೆ ಬಯಸಿದಂತೆ (ಕನ್ನಡ)
  • ಯಾರೂ ಇಲ್ಲದ ಮನೆಗೆ ನಾನು ಜೋಗಪ್ಪ ಅಂದ (ಕನ್ನಡ)
  • ಯಾರದೋ ದುಡ್ಡು; ಎಲ್ಲಮ್ಮನ ಜಾತ್ರೆ (ಕನ್ನಡ)
  • ಯಾವ ಕಾಲ ತಪ್ಪಿದರೂ ಸಾವು ಕಾಲ ತಪ್ಪದು (ಕನ್ನಡ)
  • ಯಜಮಾನಿಲ್ಲದ ಮನೆ ಮೇಟಿ ಇಲ್ಲದ ಕಣ ಎರಡೂ ಒಂದೆ (ಕನ್ನಡ)
  • ಯಸಗಾತಿಗೆ ದೋಸೆ ಕೊಡೊ ಹೊತ್ತಿಗೆ, ಮೂಸಿಮೂಸಿ ಮೂಗಿನ ಕೆಳಗೆ ಹಾಕಿದ್ಲು (ಕನ್ನಡ)
  • ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮುದ್ದೆ ಉಣ್ತಾ ಮಜ್ಜಿಗೆ ಓಡಾಟ (ಕನ್ನಡ)
  • ಯುಕ್ತಿಯ ಮಾತು ಮಕ್ಕಳಿಂದಾದರೂ ತಿಳುಕೊ (ಕನ್ನಡ)

ಸಂಸ್ಕೃತ ಗಾದೆಗಳು


  • ಆಲಸ್ಯಂ ಅಮೃತಂ ವಿಷಂ
  • ಅತ್ಯಾಶ ಬಹುದುಃಖಾಯ ಅತಿ ಸರ್ವತ್ರ ವರ್ಜಯೇತ್
  • ಕೃಷಿತೋನಾಸ್ತಿ ದುರ್ಭಿಕ್ಷಂ
  • ವಿನಾಶ ಕಾಲೇ ವಿಪರೀತ ಬುದ್ಧಿ
  • ಯಥಾ ರಾಜ ತಥಾ ಪ್ರಜಾ
  • ಅತಿ ಸರ್ವತ್ರ ವರ್ಜಯೇತ್
  • ಜಾಮಾತೋ ದಶಮ ಗ್ರಹಮಃ
  • ಕಾಂಚಾಣೇನ ಕಾರ್ಯ ಸಿದ್ಧಿಃ
  • ಯತ್ರ ಧೂಮೋ ತತ್ರ ವಹ್ನಿಃ
  • ಆಚಾರಂ ಕುಲಂ ಆಖ್ಯಾತಿ
  • ಶರೀರಮಾದ್ಯಂ ಖಲು ಧರ್ಮ ಸಾಧನಂ
  • ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ
  • ನ ಮಾತುಃ ಪರದೈವತಃ
  • ಬುದ್ಧಿಃ ಯಸ್ಯ ಬಲಂ ತಸ್ಯ
  • ನಹಿ ಜ್ಞಾನೇನ ಸದೃಶಂ
  • ವಿದ್ಯಾ ಪರದೇವತಾ
  • ಪರೋಪಕಾರಃ ಪುಣ್ಯಾಯ
  • ಪರೋಪಕಾರಮಿದಂ ಶರೀರಂ
  • ದುಷ್ಟಂ ದೂರ ವರ್ಜಯೇತ್
  • ಮೌನಂ ಸಮ್ಮತಿ ಲಕ್ಷಣಂ
  • ಮೌನಂ ಸರ್ವತ್ರ ಸಾಧನಂ
  • ಮೌನೇನ ಕಲಹಂ ನಾಸಿ
  • ರಾಘವಾಯ ಸ್ವಸ್ತಿ ರಾವಣಾಯ ಸ್ವಸ್ತಿ
  • ಶ್ರೇಯಾಂಸಿ ಬಹು ವಿಘ್ನಾನಿ
  • ಸಂಘೇ ಶಕ್ತಿ ಕಲೌಯುಗೇ
  • ವಚನೇ ಕಿಂ ದರಿದ್ರತಾ
  • ವಜ್ರಂ ವಜ್ರೇಣ ಭಿನ್ಯತೇ
  • ಕಂಟಕೇನೇವ ಕಂಟಕಂ
  • ಶಠಂ ಪ್ರತಿ ಶಠಂ ಸಮಾಚರೇತ್
  • ಶಕ್ತೇಃ ಯುಕ್ತಿಃ ಗರೀಯಸೀ
  • ಸತ್ಯಮೇವ ಜಯತೇ ನಾನೃತಂ
  • ಸಾಹಸೇ ಶ್ರೀಃ ವಸತಿ
  • ಸರ್ವೇ ಗುಣಾಃ ಕಾಂಚನಮಾಶ್ರಯಂತೇ
  • ಅನ್ನದಾತ ಸುಖೀಭವ
  • ಆವಶ್ಯಂ ಅನುಭೋಕ್ತವ್ಯಂ ಕೃತಂ ಕರ್ಮ ಶುಭಾಶುಭಂ (=>As you sow, So you reap)
  • ಆಲಸ್ಯಾತ್ ಅಮೃತಂ ವಿಷಂ
  • ವಿದ್ಯಾಧನಂ ಸರ್ವಧನಪ್ರಧಾನಂ
  • ಅಶಾಂತಸ್ಯ ಕುತಸ್ಸುಖಂ
  • ಮಾ ಗೃಧಃ ಕಸ್ಯಚ್ವಿದ್ಧನಂ
  • ಅಲ್ಪವಿದ್ಯಾ ಮಹಾಗರ್ವೀ
  • ನ ಚ ಧರ್ಮೋ ದಯಾಪರಃ
  • ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ
  • ಗುಣಾಃ ಸರ್ವತ್ರ ಪೂಜ್ಯಂತೇ
  • ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ
  • ಅಜಾಪುತ್ರಂ ಬಲಿಂ ದಾದ್ಯಾತ್ (ಆಡಿನಮರಿಯನ್ನೇ ಬಲಿಕೊಡುತ್ತಾರೆ)

ಮುಕ್ತಾಯ

"https://kn.wikipedia.org/w/index.php?title=ಗಾದೆ&oldid=155156" ಇಂದ ಪಡೆಯಲ್ಪಟ್ಟಿದೆ