ಜಲಚರ ಸಾಕಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Keshavraju (ಚರ್ಚೆ | ಕಾಣಿಕೆಗಳು) Translated from http://en.wikipedia.org/wiki/Aquaculture (revision: 366879928) using http://translate.google.com/toolkit with about 84% human translations. |
( ಯಾವುದೇ ವ್ಯತ್ಯಾಸವಿಲ್ಲ )
|
೧೪:೫೬, ೨೪ ಜೂನ್ ೨೦೧೦ ನಂತೆ ಪರಿಷ್ಕರಣೆ
ಜಲಚರ ಸಾಕಣೆ ಎಂಬುದು ಈಜುರೆಕ್ಕೆ ಮೀನು, ಮೃದ್ವಂಗಿಗಳು, ಕಠಿಣಚರ್ಮಿಗಳಂಥ ಸಿಹಿನೀರಿನ ಹಾಗೂ ಉಪ್ಪುನೀರಿನ ಜೀವಿಗಳು ಮತ್ತು ಜಲವಾಸಿ ಸಸ್ಯಗಳ ಸಾಕುವಿಕೆಯಾಗಿದೆ.[೧][೨] ಜಲದಲ್ಲಿನ ಕೃಷಿ ಎಂದೂ ಹೆಸರಾಗಿರುವ ಜಲಚರ ಸಾಕಣೆಯು ನಿಯಂತ್ರಿತ ಸನ್ನಿವೇಶಗಳ ಅಡಿಯಲ್ಲಿನ ಜಲವಾಸಿ ಜೀವಿಗಳ ಸಾಕುವಿಕೆ ಅಥವಾ ಬೆಳೆಸುವಿಕೆಯನ್ನು ಒಳಗೊಂಡಿದೆ, ಮತ್ತು ಇದನ್ನು ಸಾಕಿರದ ಮೀನಿನ ಹಿಡಿಯುವಿಕೆಯಾದ ವಾಣಿಜ್ಯ ಮೀನುಗಾರಿಕೆಯೊಂದಿಗೆ ತದ್ವಿರುದ್ಧವಾಗಿ ಪರಿಗಣಿಸಬಹುದಾಗಿದೆ.[೩] ವಾಣಿಜ್ಯ ಜಲಚರ ಸಾಕಣೆಯು ಮಾನವರಿಂದ ನೇರವಾಗಿ ಸೇವಿಸಲ್ಪಡುವ ಮೀನು ಮತ್ತು ಚಿಪ್ಪುಮೀನುಗಳ ಪೈಕಿ ಒಂದರ್ಧವನ್ನು ಪೂರೈಸುತ್ತದೆ.[೪]
ಸಮುದ್ರಜೀವಿ ಸಾಕಣೆ ಎಂಬುದು ಸಮುದ್ರ ಪರಿಸರಗಳಲ್ಲಿ ನಡೆಸಲ್ಪಡುವ ಜಲಚರ ಸಾಕಣೆಯ ಪರಿಪಾಠಕ್ಕೆ ಅನ್ವಯಿಸುತ್ತದೆ. ಜಲಚರ ಸಾಕಣೆಯ ನಿರ್ದಿಷ್ಟ ಬಗೆಗಳಲ್ಲಿ ಪಾಚಿ ಕೃಷಿ (ಕಡಲುಚೇಣಿ/ಕಡಲಕಳೆ ಮತ್ತು ಇತರ ಪಾಚಿಗಳ ಉತ್ಪಾದನೆ), ಮೀನಿನ ಸಾಕಣೆ, ಸೀಗಡಿ ಸಾಕಣೆ, ಸಿಂಪಿ ಸಾಕುವಿಕೆ, ಕೃಷಿಮಾಡಿದ ಮುತ್ತುಗಳ ಬೆಳೆಸುವಿಕೆ ಹಾಗೂ ಅಲಂಕಾರಿಕ ಮೀನುಗಳ ಬೆಳೆಸುವಿಕೆ ಮತ್ತು ಮಾರುವಿಕೆ ಮೊದಲಾದವು ಸೇರಿವೆ. ನಿರ್ದಿಷ್ಟ ವಿಧಾನಗಳಲ್ಲಿ ಆಕ್ವಾಪೋನಿಕ್ಸ್ ಎಂಬುದೂ ಸೇರಿಕೊಂಡಿದ್ದು, ಇದು ಮೀನಿನ ಸಾಕಣೆ ಹಾಗೂ ಸಸ್ಯ ಕೃಷಿಯನ್ನು ಸಂಯೋಜಿಸುತ್ತದೆ.
ಇತಿಹಾಸ
ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿನ ಸ್ಥಾನಿಕ ಗುಂಡಿತ್ಜ್ಮಾರಾ ಜನರು 6000 BCಯಷ್ಟು ಮುಂಚೆಯೇ ಹಾವುಮೀನುಗಳನ್ನು ಪೋಷಿಸಿ ಬೆಳೆಸಿರಬಹುದೆಂದು ತೋರುತ್ತದೆ. ಕಾಂಡಾಹ್ ಸರೋವರದ ಸಮೀಪದಲ್ಲಿನ ಸುಮಾರು ...100 square kilometres (39 sq mi)ರಷ್ಟು ಅಗ್ನಿಪರ್ವತದಿಂದ ಆದ ಪ್ರವಾಹದ ಬಯಲುಗಳನ್ನು ಕಾಲುವೆಗಳು ಹಾಗೂ ಅಣೆಕಟ್ಟುಗಳ ಒಂದು ಸಂಕೀರ್ಣವಾಗಿ ಅವರು ಅಭಿವೃದ್ಧಿಪಡಿಸಿದರು ಎಂಬುದಕ್ಕೆ ಪುರಾವೆಯು ಲಭ್ಯವಿದೆ. ಅಷ್ಟೇ ಅಲ್ಲ, ಹಾವುಮೀನುಗಳನ್ನು ಸೆರೆಹಿಡಿಯಲು ಅವರು ಹೆಣೆದ ಬಲೆಗಳನ್ನು ಬಳಸಿದರು ಎಂಬುದಕ್ಕೆ, ಮತ್ತು ಹಾವುಮೀನುಗಳ ಆ ಹಿಡಿಯುವಿಕೆ ಮತ್ತು ಹೊಗೆಹಿಡಿಸಿ ಅವನ್ನು ರಕ್ಷಿಸಿಟ್ಟುಕೊಳ್ಳುವಿಕೆಯು ಅವರಿಗೆ ವರ್ಷಾದ್ಯಂತ ಆಧಾರವಾಗಿರುತ್ತಿತ್ತು ಎಂಬುದಕ್ಕೂ ಸಹ ಪುರಾವೆಯು ಲಭ್ಯವಿದೆ.[೫][೬]
ಸುಮಾರು 2500 BCಯಷ್ಟು ಹಿಂದೆಯೇ ಜಲಚರ ಸಾಕಣೆಯು ಚೀನಾದಲ್ಲಿ ನಡೆಸಲ್ಪಡುತ್ತಿತ್ತು.[೭] ನದಿಯ ಪ್ರವಾಹಗಳ ನಂತರ ಜಲಭಾಗವು ಇಳಿದುಹೋದಾಗ, ಕೆಲವೊಂದು ಮೀನುಗಳು, ಅದರಲ್ಲೂ ಮುಖ್ಯವಾಗಿ ಕಾರ್ಪ್ ಸಿಹಿನೀರು ಮೀನುಗಳು ಸರೋವರಗಳಲ್ಲಿ ಸಿಕ್ಕಿಬೀಳುತ್ತಿದ್ದವು. ಬಹಳ ಹಿಂದಿನ ಜಲಚರ ಸಾಕಣೆಗಾರರು ಚಿಕ್ಕ ಕೊಡತಿ ಹುಳುಗಳು ಮತ್ತು ರೇಷ್ಮೆಹುಳು ಹಿಕ್ಕೆಯನ್ನು ಬಳಸಿಕೊಂಡು ತಮ್ಮ ಹಿಂಡನ್ನು ಪೋಷಿಸಿ, ನಂತರ ಅವನ್ನು ತಿನ್ನುತ್ತಿದ್ದರು. ಪುಣ್ಯವಶಾತ್ತಾಗಿ ಆದ ಕಾರ್ಪ್ ಸಿಹಿನೀರು ಮೀನಿನ ಒಂದು ಜೀನ್ನ ಹಠಾತ್ ಬದಲಾವಣೆಯು (ನವವಿಕೃತಿಯು) ಟ್ಯಾಂಗ್ ರಾಜವಂಶದ ಅವಧಿಯಲ್ಲಿ ಹೊನ್ನಮೀನಿನ ಹೊರಹೊಮ್ಮುವಿಕೆಗೆ ಕಾರಣವಾಯಿತು.
ಬಿದಿರಿನ ಬೊಂಬುಗಳನ್ನು ಒದಗಿಸುವ ಮೂಲಕ ಮತ್ತು, ನಂತರದಲ್ಲಿ ಬೀಜಕಗಳಿಗಾಗಿ ಭದ್ರವಾದ ಹಿಡಿತದ ಮೇಲ್ಮೈಗಳಾಗಿ ಕಾರ್ಯನಿರ್ವಹಿಸುವ ಬಲೆಗಳು ಹಾಗೂ ಸಿಂಪಿ ಚಿಪ್ಪುಗಳನ್ನು ಒದಗಿಸುವ ಮೂಲಕ ಜಪಾನ್ ದೇಶದ ಕೃಷಿಕರು ಕಡಲಕಳೆಯನ್ನು ಕೃಷಿಮಾಡಿದರು.
ರೋಮನ್ನರು ಮೀನುಗಳನ್ನು ಕೊಳಗಳಲ್ಲಿ ಸಾಕಿದರು.[೮]
ಮಧ್ಯ ಯುರೋಪ್ನಲ್ಲಿ, ಬಹಳ ಹಿಂದಿನ ಕ್ರಿಶ್ಚಿಯನ್ ಸನ್ಯಾಸಿಗಳ ನಿವಾಸಗಳು ರೋಮನ್ ಶೈಲಿಯ ಜಲಚರ ಸಾಕಣೆಯ ಪರಿಪಾಠಗಳನ್ನು ಅಳವಡಿಸಿಕೊಂಡಿದ್ದವು.[೯] ಸಮುದ್ರತೀರಗಳು ಹಾಗೂ ದೊಡ್ಡ ನದಿಗಳಿಂದ ದೂರವಿದ್ದ ಕಾರಣದಿಂದಾಗಿ ಮೀನುಗಳು ದುರ್ಲಭ/ದುಬಾರಿಯಾಗಿದ್ದರಿಂದ, ಯುರೋಪ್ನಲ್ಲಿ ಮಧ್ಯಯುಗಗಳ ಅವಧಿಯಲ್ಲಿ ಜಲಚರ ಸಾಕಣೆಯು ಹರಡಿತು. 19ನೇ ಶತಮಾನದ ಅವಧಿಯಲ್ಲಿ ಸಾಗಾಣಿಕೆಯಲ್ಲಿ ಸುಧಾರಣೆಗಳು ಕಂಡುಬಂದಿದ್ದರಿಂದಾಗಿ, ಒಳನಾಡಿನ ಪ್ರದೇಶಗಳಲ್ಲೂ ಸಹ ಮೀನುಗಳು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗತೊಡಗಿದವು. ಇದು ಜಲಚರ ಸಾಕಣೆಯ ಜನಪ್ರಿಯತೆಯನ್ನು ತಗ್ಗಿಸಿತು.
ಹವಾಯಿಯ ಜನರು ಸಾಗರದ ಸಮೀಪದ ಮೀನಿನ ಕೊಳಗಳನ್ನು ನಿರ್ಮಿಸಿದರು (ನೋಡಿ: ಹವಾಯಿಯ ಜನರ ಜಲಚರ ಸಾಕಣೆ). ಅಲೆಕೊಕೊ ಎಂಬಲ್ಲಿರುವ ಕನಿಷ್ಟಪಕ್ಷ 1,000 ವರ್ಷಗಳಷ್ಟು ಹಿಂದಿನ ಕಾಲಕ್ಕೆ ಸೇರಿರುವ ಒಂದು ಮೀನು ಕೊಳವು, ಒಂದು ಗಮನಾರ್ಹವಾದ ಉದಾಹರಣೆಯಾಗಿದೆ. ಐತಿಹ್ಯವು ಹೇಳುವ ಪ್ರಕಾರ, ಪುರಾಣದ ಮೆನೆಹ್ಯೂನ್ ಕುಬ್ಜ ಜನರಿಂದ ಇದು ನಿರ್ಮಿಸಲ್ಪಟ್ಟಿತು.
1859ರಲ್ಲಿ, ನ್ಯೂಯಾರ್ಕ್ನ ವೆಸ್ಟ್ ಬ್ಲೂಮ್ಫೀಲ್ಡ್ನ ಸ್ಟೀಫನ್ ಐನ್ಸ್ವರ್ತ್ ಎಂಬಾತ ತೊರೆಯ ಟ್ರೌಟ್ ಮೀನುಗಳಿಗೆ ಸಂಬಂಧಿಸಿದಂತೆ ಪ್ರಯೋಗಗಳನ್ನು ಶುರುಮಾಡಿದ. 1864ರ ಹೊತ್ತಿಗೆ ಸೇಥ್ ಗ್ರೀನ್ ಎಂಬಾತ ನ್ಯೂಯಾರ್ಕ್ನ ರೋಚೆಸ್ಟರ್ಗೆ ಸಮೀಪದ ಕ್ಯಾಲೆಡೋನಿಯಾ ಸ್ಪ್ರಿಂಗ್ಸ್ನಲ್ಲಿ ಒಂದು ವಾಣಿಜ್ಯ ಸ್ವರೂಪದ ಮೀನು ಮರಿಮಾಡುವಿಕೆಯ ಕಾರ್ಯಾಚರಣೆಯನ್ನು ಸ್ಥಾಪಿಸಿದ್ದ. 1866ರ ಹೊತ್ತಿಗೆ, ಮ್ಯಾಸಚೂಸೆಟ್ಸ್ನ ಕಾನ್ಕಾರ್ಡ್ನ ಡಾ. W. W. ಫ್ಲೆಚರ್ ಎಂಬಾತನ ತೊಡಗಿಸಿಕೊಳ್ಳುವಿಕೆಯೊಂದಿಗೆ, ಕೆನಡಾ ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳು ಈ ಎರಡೂ ಕಡೆಯಲ್ಲೂ ಕೃತಕ ಮೀನಿನ ಮೊಟ್ಟೆಗಳನ್ನು ಮರಿಮಾಡುವ ಕೇಂದ್ರಗಳು ಪ್ರಗತಿಯಲ್ಲಿದ್ದವು.[೧೦] 1889ರಲ್ಲಿ ಕೆನಡಾದ ನ್ಯೂಫೌಂಡ್ಲ್ಯಾಂಡ್ನಲ್ಲಿ ಡಿಡೋ ದ್ವೀಪದ ಮೀನಿನ ಮೊಟ್ಟೆ ಮರಿಮಾಡುವ ಕೇಂದ್ರವು ಪ್ರಾರಂಭಗೊಂಡಾಗ, ಅದು ವಿಶ್ವದಲ್ಲಿನ ಅತಿದೊಡ್ಡ ಹಾಗೂ ಅತ್ಯಂತ ಮುಂದುವರಿದ ಕೇಂದ್ರವಾಗಿ ಹೊರಹೊಮ್ಮಿತ್ತು.
ಕ್ಯಾಲಿಫೋರ್ನಿಯಾದ ಜನರು ಕಾಡುಜಾತಿಯ ಕಡಲುಚೇಣಿಯನ್ನು ಸಾಕಿದರು ಮತ್ತು ಸುಮಾರು 1900ರ ಹೊತ್ತಿಗೆ ಪೂರೈಕೆಯನ್ನು ನಿರ್ವಹಿಸಲು ಪ್ರಯತ್ನಿಸಿದರು, ನಂತರ ಇದಕ್ಕೆ ಯುದ್ಧ ಸಮಯದ ಒಂದು ಸಂಪನ್ಮೂಲವೆಂಬ ಹಣೆಪಟ್ಟಿಯನ್ನು ಕಟ್ಟಿದರು.[೧೧]
21ನೇ ಶತಮಾನಲ್ಲಿನ ಸ್ಥಿತಿ
2007ರ ವೇಳೆಗೆ ಇದ್ದಂತೆ, ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳ ಪೈಕಿ ಸುಮಾರು 430ರಷ್ಟು (97%) ಜಾತಿಗಳನ್ನು 20ನೇ ಶತಮಾನದ ಅವಧಿಯಲ್ಲಿ ಪಳಗಿಸಿ ಒಗ್ಗಿಸಲಾಗಿತ್ತು; ಇದರ ಪೈಕಿ ಸುಮಾರು 106 ಜಾತಿಗಳು 2007ರ ವರೆಗಿನ ದಶಕದಲ್ಲಿ ಬಂದವು. ಕೃಷಿಯ ದೀರ್ಘಾವಧಿ ಪ್ರಾಮುಖ್ಯತೆಯ ಅರಿವಿರುವ ಸ್ಥಿತಿಯಲ್ಲಿ ಕುತೂಹಲಕರವಾಗಿರುವ ಸಂಗತಿಯೆಂದರೆ, ತಿಳಿದಿರುವ ಸಮುದ್ರ ಸಸ್ಯ ಜಾತಿಗಳ ಪೈಕಿ 0.17%ನಷ್ಟು ಹಾಗೂ ತಿಳಿದಿರುವ ಸಮುದ್ರ ಪ್ರಾಣಿ ಜಾತಿಗಳ ಪೈಕಿ 0.13%ನಷ್ಟಿರುವ ಪ್ರಮಾಣಕ್ಕೆ ಹೋಲಿಸಿದಾಗ, ಇಂದಿನವರೆಗೆ ತಿಳಿದಿರುವ ನೆಲದ ಸಸ್ಯ ಜಾತಿಗಳ ಪೈಕಿ ಕೇವಲ 0.08%ನಷ್ಟು ಹಾಗೂ ತಿಳಿದಿರುವ ನೆಲದ ಪ್ರಾಣಿ ಜಾತಿಗಳ ಪೈಕಿ 0.0002%ನಷ್ಟು ಪಳಗಿಸಿ ಒಗ್ಗಿಸಲ್ಪಟ್ಟಿವೆ. ವಿಶಿಷ್ಟವೆನಿಸುವಂತೆ, ಒಗ್ಗಿಸುವಿಕೆಯು ಸುಮಾರು ಒಂದು ದಶಕದಷ್ಟು ಸುದೀರ್ಘವಾದ ವೈಜ್ಞಾನಿಕ ಸಂಶೋಧನೆಯನ್ನು ಒಳಗೊಂಡಿದೆ.[೧೨] ಜಲವಾಸಿ ಜಾತಿಗಳ ಒಗ್ಗಿಸುವಿಕೆಗೆ ಸಂಬಂಧಿಸಿ ಹೇಳುವುದಾದರೆ, ಇದು ಮಾನವರಿಗೆ ಅಲ್ಪಪ್ರಮಾಣದ ಅಪಾಯಗಳನ್ನು ಒಡ್ಡಿದೆ. ಇದಕ್ಕೆ ಹೋಲಿಸಿದಾಗ ನೆಲದ ಪ್ರಾಣಿಗಳನ್ನು ಒಗ್ಗಿಸುವುದು ದೊಡ್ಡ ಸಂಖ್ಯೆಯಲ್ಲಿ ಮಾನವರ ಜೀವಕ್ಕೆ ಎರವಾಗಿದೆ ಎನ್ನಬಹುದು. ಸಿಡುಬು ಮತ್ತು ಗಂಟಲಮಾರಿಯಂಥ ಕಾಯಿಲೆಗಳ ಮೂಲಕ, ಪಳಗಿಸಿ ಒಗ್ಗಿಸಲ್ಪಟ್ಟ ಪ್ರಾಣಿಗಳಲ್ಲಿ[೧೩] ಹುಟ್ಟಿಕೊಂಡಿರುವ ಅತ್ಯಂತ ಪ್ರಮುಖವಾದ ಮಾನವರ ಕಾಯಿಲೆಗಳು, ಬಹುಪಾಲು ಸಾಂಕ್ರಾಮಿಕ ಕಾಯಿಲೆಗಳಂತೆ ಪ್ರಾಣಿಗಳಿಂದ ಮಾನವರಿಗೆ ಹಬ್ಬುತ್ತವೆ. ಹೋಲಿಸಬಹುದಾದ ವಿಷಮತೆಯೊಂದಿಗಿನ ಯಾವುದೇ ಮಾನವ ರೋಗಕಾರಕಗಳು ಸಮುದ್ರ ಜಾತಿಗಳಿಂದ ಇನ್ನೂ ಹೊರಹೊಮ್ಮಿಲ್ಲ.
ಸಾಕಿರದ ಮೀನುಗಾರಿಕೆಯಲ್ಲಿನ ಹಿಡಿಯುವಿಕೆಯ ನಿಶ್ಚಲತೆ ಮತ್ತು ಜನಪ್ರಿಯ ಸಮುದ್ರ ಜಾತಿಗಳ ಮಿತಿಮೀರಿದ ಬಳಕೆಯು ಉನ್ನತ ಗುಣಮಟ್ಟ ಪ್ರೋಟೀನಿಗೆ ಸಂಬಂಧಿಸಿದ ಬೆಳೆಯುತ್ತಿರುವ ಬೇಡಿಕೆಯೊಂದಿಗೆ ಸೇರಿಕೊಂಡು, ಇತರ ಸಮುದ್ರ ಜಾತಿಗಳನ್ನು ಪಳಗಿಸಿ ಒಗ್ಗಿಸುವಲ್ಲಿ ಜಲಚರ ಸಾಕಣೆಗಾರರಿಗೆ ಉತ್ತೇಜನ ನೀಡಿವೆ.[೧೪][೧೫]
ಉತ್ಪಾದನೆಯ ಪ್ರಮಾಣ
2004ರಲ್ಲಿ, ಮೀನುಗಾರಿಕಾ ಕೇಂದ್ರಗಳ ಒಟ್ಟು ಜಾಗತಿಕ ಉತ್ಪಾದನೆಯು ...140,500,000 tonnes (138,300,000 long tons; 154,900,000 short tons)ರಷ್ಟಿದ್ದು, ಇದರ ಪೈಕಿ ಜಲಚರ ಸಾಕಣೆಯ ಕೊಡುಗೆಯು ...45,500,000 tonnes (44,800,000 long tons; 50,200,000 short tons)ರಷ್ಟಿತ್ತು ಅಥವಾ ಸುಮಾರು 32%ನಷ್ಟಿತ್ತು.[೧೬] ವಿಶ್ವವ್ಯಾಪಿ ಜಲಚರ ಸಾಕಣೆಯ ಬೆಳವಣಿಗೆಯ ಪ್ರಮಾಣವು ನಿರಂತರವಾಗಿಸಲ್ಪಟ್ಟಿರುವುದರ ಜೊತೆಗೆ ಕ್ಷಿಪ್ರವಾಗಿದ್ದು, ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಪ್ರತಿ ವರ್ಷಕ್ಕೆ ಸುಮಾರು 8 ಪ್ರತಿಶತದಷ್ಟು ಸರಾಸರಿಯನ್ನು ಅದು ತೋರಿಸುತ್ತಿದೆ. ಇದೇ ವೇಳೆಗೆ, ಸಾಕಿರದ ಮೀನುಗಳ ಹಿಡಿಯುವಿಕೆಯಲ್ಲಿ ಹಿಡಿದಿದ್ದರ ಮೀನುಗಳ ಪ್ರಮಾಣವು ಕಳೆದ ದಶಕಕ್ಕೆ ಸಂಬಂಧಿಸಿದಂತೆ ಮೂಲಭೂತವಾಗಿ ಕುಸಿದಿದೆ.
ವಿಭಿನ್ನ ಜಾತಿಗಳು ಗುಂಪುಗಳಿಗೆ ಸಂಬಂಧಿಸಿದ ಸರಾಸರಿ ವಾರ್ಷಿಕ ಶೇಕಡಾವಾರು ಬೆಳವಣಿಗೆ [೧೬] | ||||||
---|---|---|---|---|---|---|
ಕಾಲಾವಧಿ | ಕಠಿಣಚರ್ಮಿಗಳು | ಮೃದ್ವಂಗಿಗಳು | ಸಿಹಿನೀರಿನ ಮೀನುಗಳು |
ಉಭಯನೀರಿನಲ್ಲೂ ವಾಸಿಸುವ ಮೀನುಗಳು |
ಸಮುದ್ರದ ಮೀನುಗಳು |
ಒಟ್ಟಾರೆ |
1970–2004 | 18.9 | 7.7 | 9.3 | 7.3 | 10.5 | 8.8 |
1970–1980 | 23.9 | 5.6 | 6.0 | 6.5 | 14.1 | 6.2 |
1980–1990 | 24.1 | 7.0 | 13.1 | 9.4 | 5.3 | 10.8 |
1990–2000 | 9.1 | 11.6 | 10.5 | 6.5 | 12.5 | 10.5 |
2000–2004 | 19.2 | 5.3 | 5.2 | 5.8 | 9.6 | 6.3 |
2004ರಲ್ಲಿನ ಪ್ರಮುಖ ಜಾತಿಗಳ ಗುಂಪುಗಳು | |
---|---|
ಜಾತಿಗಳ ಗುಂಪು | ದಶಲಕ್ಷ ಟನ್ನುಗಳು[೧೬] |
ಸಿಹಿನೀರಿನ ಮೀನುಗಳು | 23.87 |
ಮೃದ್ವಂಗಿಗಳು | 13.93 |
ಜಲವಾಸಿ ಸಸ್ಯಗಳು | 13.24 |
ಉಭಯನೀರಿನಲ್ಲೂ ವಾಸಿಸುವ ಮೀನುಗಳು | 3.68 |
ಕಠಿಣಚರ್ಮಿಗಳು | 2.85 |
ಸಮುದ್ರ ಮೀನುಗಳು | 1.45 |
ಇತರ ಜಲವಾಸಿ ಪ್ರಾಣಿಗಳು | 0.38 |
2004ರಲ್ಲಿನ ಮೊದಲ ಹತ್ತು ಜಾತಿಗಳ ಗುಂಪುಗಳು | |
---|---|
ಜಾತಿಗಳ ಗುಂಪು | ದಶಲಕ್ಷ ಟನ್ನುಗಳು[೧೬] |
ಕಾರ್ಪ್ ಸಿಹಿನೀರು ಮೀನುಗಳು ಮತ್ತು ಇತರ ಸೈಪ್ರಿನಿಡ್ಗಳು | 18.30 |
ಸಿಂಪಿಗಳು | 4.60 |
ಮಳಿ ಮೃದ್ವಂಗಿಗಳು, ದಾರೆಮಳಿ ಮೃದ್ವಂಗಿsಗಳು, ಆರ್ಕ್ ಚಿಪ್ಪುಗಳು | 4.12 |
ವಿವಿಧ ಸಿಹಿನೀರಿನ ಮೀನುಗಳು | 3.74 |
ಇಂಚಾಕಗಳು, ಸೀಗಡಿಗಳು | 2.48 |
ಸಾಲ್ಮನ್ಗಳು, ಟ್ರೌಟ್ ಮೀನುಗಳು, ಸ್ಮೆಲ್ಟ್ ಮೀನುಗಳು | 1.98 |
ಶಂಬೂಕಗಳು (ಕಪ್ಪೆಚಿಪ್ಪಿನ ಪ್ರಾಣಿಗಳು) | 1.86 |
ಟಿಲಾಪಿಯಾಗಳು ಮತ್ತು ಇತರ ಸಿಕ್ಲಿಡ್ಗಳು | 1.82 |
ಇಚ್ಚಿಪ್ಪು ಮೀನುಗಳು, ಪೆಕ್ಟಿನ್ಗಳು | 1.17 |
ವಿವಿಧ ಸಮುದ್ರ ಮೃದ್ವಂಗಿಗಳು | 1.07 |
ಜಲಚರ ಸಾಕಣೆಯು ಚೀನಾದಲ್ಲಿ ವಿಶೇಷವಾಗಿ ಒಂದು ಮುಖ್ಯ ಆರ್ಥಿಕ ಚಟುವಟಿಕೆಯಾಗಿದೆ. ಚೈನೀಸ್ ಬ್ಯೂರೋ ಆಫ್ ಫಿಶರೀಸ್ ಸಂಸ್ಥೆಯು ವರದಿ ಮಾಡಿರುವ ಪ್ರಕಾರ, 1980 ಮತ್ತು 1997ರ ನಡುವೆ ಜಲಚರ ಸಾಕಣೆಯ ಹಿಡಿಯುವಿಕೆಗಳು ಅಥವಾ ಬೆಳೆಸುವಿಕೆಗಳು 16.7 ಪ್ರತಿಶತದಷ್ಟಿರುವ ಒಂದು ವಾರ್ಷಿಕ ದರದಲ್ಲಿ ಬೆಳೆಯುವ ಮೂಲಕ, ...1,900,000 tonnes (1,900,000 long tons; 2,100,000 short tons)ರಿಂದ ಸುಮಾರು ...23,000,000 tonnes (23,000,000 long tons; 25,000,000 short tons)ರವರೆಗೆ ನೆಗೆದವು. 2005ರಲ್ಲಿ, ಜಾಗತಿಕ ಉತ್ಪಾದನೆಯ ಪೈಕಿ ಚೀನಾದ ಕೊಡುಗೆಯು 70%ನಷ್ಟಿತ್ತು.[೧೭][೧೮] ಇದು ಸದ್ಯಕ್ಕೆ U.S.ನಲ್ಲಿನ ಆಹಾರ ಉತ್ಪಾದನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಯಗಳಲ್ಲಿ ಒಂದೆನಿಸಿಕೊಂಡಿದೆ.[೧೯]
2004ರಲ್ಲಿನ ಮೊದಲ ಹತ್ತು ಜಲಚರ ಸಾಕಣೆ ಉತ್ಪಾದಕ ದೆಶಗಳು | |
---|---|
ದೇಶ | ದಶಲಕ್ಷ ಟನ್ನುಗಳು[೧೬] |
ಚೀನಾ | 30.61 |
ಭಾರತ | 2.47 |
ವಿಯೆಟ್ನಾಂ | 1.20 |
ಥೈಲೆಂಡ್ | 1.17 |
ಇಂಡೋನೇಷಿಯ | 1.05 |
ಬಾಂಗ್ಲಾದೇಶ | 0.91 |
ಜಪಾನ್ | 0.78 |
ಚಿಲಿ | 0.67 |
ನಾರ್ವೆ | 0.64 |
ಅಮೆರಿಕಾ ಸಂಯುಕ್ತ ಸಂಸ್ಥಾನಗಳು | 0.61 |
ಇತರ ದೇಶಗಳು | 5.35 |
ಒಟ್ಟು | 45.47 |
U.S.ನ ಎಲ್ಲಾ ಇಂಚಾಕ ಬಳಕೆಯ ಪೈಕಿ ಸರಿಸುಮಾರು 90%ನಷ್ಟು ಭಾಗವನ್ನು ಕೃಷಿಮಾಡಲಾಗುತ್ತದೆ ಮತ್ತು ಆಮದು ಮಾಡಿಕೊಳ್ಳಲಾಗುತ್ತದೆ.[೨೦] ಇತ್ತೀಚಿನ ವರ್ಷಗಳಲ್ಲಿ ಸಾಲ್ಮನ್ ಜಲಚರ ಸಾಕಣೆಯು ದಕ್ಷಿಣ ಭಾಗದ ಚಿಲಿಯಲ್ಲಿ, ಅದರಲ್ಲೂ ವಿಶೇಷವಾಗಿ ಚಿಲಿಯ ಅತಿವೇಗವಾಗಿ-ಬೆಳೆಯುತ್ತಿರುವ ನಗರವಾದ ಪುಯೆರ್ಟೊ ಮಾಂಟ್ನಲ್ಲಿ ಒಂದು ಪ್ರಮುಖ ರಫ್ತು ವಿಷಯವಾಗಿ ಮಾರ್ಪಟ್ಟಿದೆ.
ಮಿತಿಮೀರಿದ ವರದಿ ಮಾಡುವಿಕೆ
ವರದಿಮಾಡಲ್ಪಟ್ಟಿರುವ ಜಲಚರ ಸಾಕಣೆಯ ಉತ್ಪಾದನೆಯಲ್ಲಿ ಚೀನಾ ದೇಶವು ಜಾಗತಿಕ ಮಟ್ಟದಲ್ಲಿ ಅಗಾಧ ಪ್ರಮಾಣದಲ್ಲಿ ಮೇಲುಗೈ ಹೊಂದಿದೆ. ಜಗತ್ತಿನ ಉಳಿದ ದೇಶಗಳ ಉತ್ಪಾದನೆಯನ್ನು ಒಟ್ಟಿಗೆ ಸೇರಿಸಿದರೆ ಆಗುವ ಪ್ರಮಾಣಕ್ಕೆ ದುಪ್ಪಟ್ಟಿನಷ್ಟಿರುವ ಒಂದು ಒಟ್ಟು ಉತ್ಪಾದನೆಯನ್ನು ಅದು ವರದಿಮಾಡುತ್ತದೆ. ಆದಾಗ್ಯೂ, ಚೀನಾದ ಹುಟ್ಟುವಳಿಗಳ ನಿಖರತೆಗೆ ಸಂಬಂಧಿಸಿದಂತೆ ಒಂದಷ್ಟು ವಿವಾದಾಂಶಗಳೂ ಇವೆ.
2001ರಲ್ಲಿ, ಮೀನುಗಾರಿಕಾ ವಲಯಕ್ಕೆ ಸಂಬಂಧಿಸಿದ ರೆಗ್ ವಾಟ್ಸನ್ ಮತ್ತು ಡೇನಿಯೆಲ್ ಪಾಲಿ ಎಂಬ ವಿಜ್ಞಾನಿಗಳು ನೇಚರ್ ನಿಯತಕಾಲಿಕಕ್ಕೆ ಬರೆದ ಪತ್ರವೊಂದರಲ್ಲಿ ಕಳವಳಗಳನ್ನು ವ್ಯಕ್ತಪಡಿಸುತ್ತಾ, 1990ರ ದಶಕದಲ್ಲಿನ ತನ್ನ ಸಾಕಿರದ ಮೀನುಗಳ ಮೀನುಗಾರಿಕೆಯಿಂದ ಹಿಡಿದ ಮೀನುಗಳ ಪ್ರಮಾಣವನ್ನು ಚೀನಾ ದೇಶವು ಮಿತಿಮೀರಿ ವರದಿಮಾಡುತ್ತಿದೆ ಎಂದು ತಿಳಿಸಿದರು.[೨೧][೨೨] ಅವರು ತಮ್ಮ ಅಭಿಪ್ರಾಯವನ್ನು ಮುಂದುವರಿಸುತ್ತಾ, 1988ರಿಂದೀಚೆಗೆ ಜಾಗತಿಕ ಮಟ್ಟದಲ್ಲಿನ ಹಿಡಿಯಲ್ಪಟ್ಟ ಮೀನುಗಳ ಪ್ರಮಾಣವು ವಾರ್ಷಿಕವಾಗಿ 300,000 ಟನ್ನುಗಳಷ್ಟು ಹೆಚ್ಚುತ್ತಿದೆ ಎಂದು ಕಾಣಿಸುವಂತೆ ಚೀನಾ ದೇಶವು ವರದಿ ಮಾಡಿದ್ದು, ವಾಸ್ತವವಾಗಿ ಈ ಪ್ರಮಾಣವು ವಾರ್ಷಿಕವಾಗಿ 350,000 ಟನ್ನುಗಳಷ್ಟು ಕುಸಿಯುತ್ತಿದೆ ಎಂದು ತಿಳಿಸಿದರು. ವಾಟ್ಸನ್ ಮತ್ತು ಪಾಲಿ ಸೂಚಿಸಿದ ಅನುಸಾರ, ಇದು ಚೀನಾದ ಕಾರ್ಯನೀತಿಗಳಿಗೆ ಪ್ರಾಯಶಃ ಸಂಬಂಧಿಸಿದಂತಿದೆ. ಆರ್ಥಿಕತೆಯನ್ನು ನಿಯಂತ್ರಿಸುವ ದೇಶದ ಅಸ್ತಿತ್ವಗಳಿಗೆ ಉತ್ಪಾದನೆಯನ್ನು ಹೆಚ್ಚಿಸುವ ಕೆಲಸ ವಹಿಸಲಾಗಿರುವುದು ಅಲ್ಲಿನ ವೈಶಿಷ್ಟ್ಯವಾಗಿದೆ. ಅಷ್ಟೇ ಅಲ್ಲ, ತೀರಾ ಇತ್ತೀಚಿನವರೆಗೆ, ಚೀನಾದ ಅಧಿಕಾರಿಗಳ ಬಡತಿಯು ಅವರದೇ ಸ್ವಂತದ ಪ್ರದೇಶಗಳಿಗೆ ಸೇರಿದ ಉತ್ಪಾದನೆಯ ಹೆಚ್ಚಳಗಳ ಮೇಲೆ ಆಧರಿಸಿತ್ತು.[೨೩][೨೪]
ಈ ವಾದವನ್ನು ಚೀನಾವು ಅಲ್ಲಗಳೆಯುತ್ತದೆ. ಕ್ಷಿನ್ಹುವಾ ನ್ಯೂಸ್ ಏಜೆನ್ಸಿ ಎಂಬ ಅಧಿಕೃತ ಸಂಸ್ಥೆಯು, ಕೃಷಿ ಖಾತೆಯ ಮೀನುಗಾರಿಕಾ ವಿಭಾಗದ ಮಹಾ ನಿರ್ದೇಶಕನಾದ ಯಾಂಗ್ ಜಿಯಾನ್ ಎಂಬಾತ ನು ಚೀನಾದ ಅಂಕಿ-ಅಂಶಗಳು "ಮೂಲಭೂತವಾಗಿ ಸರಿ"ಯಾಗಿದ್ದವು ಎಂದು ಹೇಳಿರುವುದನ್ನು ಉಲ್ಲೇಖಿಸಿದೆ.[೨೫] ಆದಾಗ್ಯೂ, ಚೀನಾದ ಅಂಕಿ-ಅಂಶದ ಹುಟ್ಟುವಳಿಗಳ ವಿಶ್ವಾಸಾರ್ಹತೆಗೆ ಸಂಬಂಧಿಸಿದಂತೆ ಒಂದಷ್ಟು ವಿವಾದಾಂಶಗಳಿವೆ ಎಂಬುದಕ್ಕೆ FAO ಸಮ್ಮತಿಸಿದೆ, ಹಾಗೂ ಜಲಚರ ಸಾಕಣೆ ದತ್ತಾಂಶವೂ ಸೇರಿದಂತೆ ಚೀನಾದಿಂದ ಬಂದಿರುವ ದತ್ತಾಂಶವನ್ನು ವಿಶ್ವದ ಉಳಿದ ಭಾಗಗಳ ದತ್ತಾಂಶದಿಂದ ಸದ್ಯಕ್ಕೆ ಪ್ರತ್ಯೇಕವಾಗಿ ಪರಿಗಣಿಸುವುದಾಗಿ ತಿಳಿಸಿದೆ.[೨೬]
ವಿಧಾನಗಳು
ಸಮುದ್ರಜೀವಿ ಸಾಕಣೆ
ಸಮುದ್ರಜೀವಿ ಸಾಕಣೆ ಎಂಬುದು ಸಮುದ್ರದ ನೀರಿನಲ್ಲಿನ, ಸಾಮಾನ್ಯವಾಗಿ ತೀರಪ್ರದೇಶದ ರಕ್ಷಿತ ಜಲಭಾಗದಲ್ಲಿನ, ಸಮುದ್ರ ಜೀವಿಗಳ ಬೆಳೆಸುವಿಕೆಗೆ ಸಂಬಂಧಿಸಿದ ಪದವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸಮುದ್ರ ಮೀನಿನ ಸಾಕುವಿಕೆಯು ಸಮುದ್ರಜೀವಿ ಸಾಕಣೆಯ ಒಂದು ಉದಾಹರಣೆಯಾಗಿದೆ, ಮತ್ತು ಸಮುದ್ರ ಕಠಿಣಚರ್ಮಿಗಳು (ಇಂಚಾಕಗಳಂಥವು), ಮೃದ್ವಂಗಿಗಳು (ಸಿಂಪಿಗಳ ರೀತಿಯವು) ಹಾಗೂ ಕಡಲಕಳೆಯ ಸಾಕುವಿಕೆಗೂ ಇದು ಅನ್ವಯಿಸುತ್ತದೆ.
ಸಂಯೋಜಿಸಲ್ಪಟ್ಟ ವಿಧಾನ
ಇಂಟಿಗ್ರೇಟೆಡ್ ಮಲ್ಟಿ-ಟ್ರೋಫಿಕ್ ಆಕ್ವಾಕಲ್ಚರ್ (IMTA) ಎಂಬುದು ಒಂದು ಪರಿಪಾಠವಾಗಿದ್ದು, ಇದರಲ್ಲಿ ಒಂದು ಜಾತಿಗೆ ಸೇರಿದ ಉಪ-ಉತ್ಪನ್ನಗಳು (ತ್ಯಾಜ್ಯಗಳು) ಮತ್ತೊಂದಕ್ಕೆ ಸಂಬಂಧಿಸಿದ ಒಳಸೇರಿಸಲ್ಪಡುವ ವಸ್ತುಗಳಾಗುವಲ್ಲಿ (ರಸಗೊಬ್ಬರಗಳು, ಆಹಾರ) ಮರುಬಳಕೆ ಮಾಡಲ್ಪಡುತ್ತವೆ. ಪರಿಸರೀಯ ಸಮರ್ಥನೀಯತೆ (ಜೈವಿಕ ಉಪಶಮನ), ಆರ್ಥಿಕ ಸ್ಥಿರತೆ (ಉತ್ಪನ್ನ ವೈವಿಧ್ಯೀಕರಣ ಹಾಗೂ ಅಪಾಯದ ತಗ್ಗಿಸುವಿಕೆ) ಮತ್ತು ಸಾಮಾಜಿಕ ಸ್ವೀಕಾರಾರ್ಹತೆಗೆ (ಉತ್ತಮವಾದ ನಿರ್ವಹಣಾ ಪರಿಪಾಠಗಳು) ಸಂಬಂಧಿಸಿದ ಸಮತೋಲಿತ ವ್ಯವಸ್ಥೆಗಳನ್ನು ಸೃಷ್ಟಿಸುವ ಸಲುವಾಗಿ, ಉಣಿಸಲ್ಪಟ್ಟ ಜಲಚರ ಸಾಕಣೆಯು (ಉದಾಹರಣೆಗೆ, ಮೀನು, ಇಂಚಾಕ) ಅಜೈವಿಕ ಸಾರದಂಥ ವಸ್ತು (ಉದಾಹರಣೆಗೆ ಕಡಲಕಳೆ) ಮತ್ತು ಜೈವಿಕ ಸಾರದಂಥ ವಸ್ತು (ಉದಾಹರಣೆಗೆ ಚಿಪ್ಪುಮೀನು) ಜಲಚರ ಸಾಕಣೆಯೊಂದಿಗೆ ಸಂಯೋಜಿಸಲ್ಪಟ್ಟಿದೆ.[೨೭]
"ಬಹು-ಪೌಷ್ಟಿಕ" ಎಂಬ ಪದವು ಅದೇ ವ್ಯವಸ್ಥೆಯಲ್ಲಿನ ವಿಭಿನ್ನ ಪೌಷ್ಟಿಕ ಅಥವಾ ಪೋಷಣೆಯ ಮಟ್ಟಗಳಿಗೆ ಸೇರಿದ ಜಾತಿಗಳ ಒಟ್ಟುಗೂಡಿಸುವಿಕೆಗೆ ಉಲ್ಲೇಖಿಸಲ್ಪಡುತ್ತದೆ.[೨೮] ಇದು ತುಂಬಾ ಪ್ರಾಚೀನವಾಗಿರುವ ಜಲವಾಸಿ ಬಹುಕೃಷಿಯ ಪರಿಪಾಠದಿಂದ ಪ್ರತ್ಯೇಕವಾಗಿರುವ ಒಂದು ಸಂಭಾವ್ಯ ವೈಲಕ್ಷಣ್ಯವಾಗಿದ್ದು, ಇದು ಸರಳವಾಗಿ ಅದೇ ಪೌಷ್ಟಿಕ ಮಟ್ಟಕ್ಕೆ ಸೇರಿರುವ ವಿಭಿನ್ನ ಮೀನು ಜಾತಿಗಳ ಒಂದು ಸಹ-ಕೃಷಿಯಾಗಿರಲು ಸಾಧ್ಯವಿದೆ. ಈ ನಿದರ್ಶನದಲ್ಲಿ, ಕೆಲವು ಸಹಕ್ರಿಯೆಯ ಪ್ರಯೋಜನಗಳೊಂದಿಗಿನ ಒಂದೇ ರೀತಿಯ ಜೀವಿವಿಜ್ಞಾನದ ಮತ್ತು ರಾಸಾಯನಿಕ ಪ್ರಕ್ರಿಯೆಗಳನ್ನು ಈ ಜೀವಿಗಳೆಲ್ಲವೂ ಹಂಚಿಕೊಳ್ಳಬಹುದಾಗಿದ್ದು, ಅದು ಸಂಭವನೀಯವಾಗಿ ಪರಿಸರ ವ್ಯವಸ್ಥೆಯಲ್ಲಿನ ಗಮನಾರ್ಹ ವರ್ಗಾವಣೆಗಳಿಗೆ ಕಾರಣವಾಗುತ್ತದೆ. ವಾಸ್ತವವಾಗಿ, ಒಂದೇ ಕೊಳದಲ್ಲಿನ ವ್ಯಾಪಕ ಕೃಷಿಗಳಾಗಿ (ಕಡಿಮೆ ತೀವ್ರತೆ, ಕಡಿಮೆ ನಿರ್ವಹಣೆ) ಹಲವಾರು ನೆಲೆಗಳನ್ನು ಆಕ್ರಮಿಸಿಕೊಂಡಿರುವ ಜಾತಿಗಳ ಒಂದು ಮಹತ್ತರ ವೈವಿಧ್ಯತೆಯನ್ನು ಕೆಲವೊಂದು ಸಾಂಪ್ರದಾಯಿಕ ಬಹುಕೃಷಿ ವ್ಯವಸ್ಥೆಗಳು ಸಂಯೋಜಿಸಬಹುದು. IMTAಯಲ್ಲಿ "ಸಂಯೋಜಿಸಲ್ಪಟ್ಟಿರುವ" ಎಂಬುದು, ನೀರಿನ ಮೂಲಕದ ಪೌಷ್ಟಿಕ ದ್ರವ್ಯ ಹಾಗೂ ಶಕ್ತಿಯ ವರ್ಗಾವಣೆಯಿಂದ ಸಂಪರ್ಕಿಸಲ್ಪಟ್ಟಿರುವ ಪರಸ್ಪರರ ಸಾಮೀಪ್ಯದಲ್ಲಿರುವ, ವಿಭಿನ್ನ ಜಾತಿಗಳ ಹೆಚ್ಚು ತೀವ್ರವಾದ ಬೆಳೆಸುವಿಕೆಗೆ ಉಲ್ಲೇಖಿಸಲ್ಪಡುತ್ತದೆ.
ಆದರ್ಶಪ್ರಾಯವಾಗಿ, IMTA ವ್ಯವಸ್ಥೆಯೊಂದರಲ್ಲಿನ ಜೀವಿವಿಜ್ಞಾನದ ಹಾಗೂ ರಾಸಾಯನಿಕ ಪ್ರಕ್ರಿಯೆಗಳು ಸಮತೋಲನದಲ್ಲಿರುವುದು ಅಗತ್ಯ. ವಿಭಿನ್ನ ಪರಿಸರ ವ್ಯವಸ್ಥೆಯ ಕಾರ್ಯಚಟುವಟಿಕೆಗಳನ್ನು ಒದಗಿಸುವ ವಿಭಿನ್ನ ಜಾತಿಗಳ ಸೂಕ್ತ ಆಯ್ಕೆ ಹಾಗೂ ಪ್ರಮಾಣಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ. ಸಹ-ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳು ವಿಶಿಷ್ಟವೆನಿಸುವಂತೆ ಕೇವಲ ಜೈವಿಕ ಸೋಸುಗಗಳಿಗಿಂತ ಹೆಚ್ಚಾಗಿರುತ್ತವೆ; ಅವು ವಾಣಿಜ್ಯ ಮೌಲ್ಯವನ್ನು ಹೊಂದಿರುವ ಕೊಯ್ಲುಮಾಡಬಹುದಾದ ಬೆಳೆಗಳಾಗಿವೆ.[೨೮] ಸಹ-ಸಂಗೋಪನ ಕೃಷಿ ಮಾಡಲ್ಪಟ್ಟ ಜಾತಿಗಳು ಹಾಗೂ ಸುಧಾರಿತ ಪರಿಸರ ವ್ಯವಸ್ಥೆಯ ಆರೋಗ್ಯಕ್ಕೆ ಇರುವ ಪರಸ್ಪರ ಪ್ರಯೋಜನಗಳನ್ನು ಆಧರಿಸಿ, ಒಂದು ಕಾರ್ಯನಿರತ IMTA ವ್ಯವಸ್ಥೆಯು ಮಹತ್ತರವಾದ ಒಟ್ಟು ಉತ್ಪಾದನೆಯನ್ನು ಉಂಟುಮಾಡಬಲ್ಲದು; ಒಂದು ವೇಳೆ ಪ್ರತ್ಯೇಕ ಜಾತಿಗಳ ಉತ್ಪಾದನೆಯು ಒಂದು ಅಲ್ಪ ಕಾಲಾವಧಿಯ ಮೇಲಿನ ಒಂದು ಎಕಫಸಲಿನ ಕೃಷಿಯಲ್ಲಿ ಇರುವುದಕ್ಕಿಂತ ಕಡಿಮೆ ಇರುವಾಗಲೂ ಇದು ಕಂಡುಬರುತ್ತದೆ.[೨೯]
"ಸಂಯೋಜಿಸಲ್ಪಟ್ಟ ಜಲಚರ ಸಾಕಣೆ" ಎಂಬ ಪದಗುಚ್ಛವು ನೀರಿನ ವರ್ಗಾವಣೆಯ ಮೂಲಕ ನಡೆಯುವ ಎಕಫಸಲಿನ ಕೃಷಿಗಳ ಸಂಯೋಜಿಸುವಿಕೆಯನ್ನು ವಿವರಿಸಲು ಕೆಲವೊಮ್ಮೆ ಬಳಸಲ್ಪಡುತ್ತದೆ.[೨೯] ಆದಾಗ್ಯೂ, ಎಲ್ಲಾ ಆಶಯಗಳು ಹಾಗೂ ಉದ್ದೇಶಗಳಿಗೆ ಸಂಬಂಧಿಸಿದಂತೆ, "IMTA" ಹಾಗೂ "ಸಂಯೋಜಿಸಲ್ಪಟ್ಟ ಜಲಚರ ಸಾಕಣೆ" ಎಂಬ ಪದಗುಚ್ಛಗಳು ಕೇವಲ ತಮ್ಮ ವರ್ಣನಾತ್ಮಕತೆಯ ಮಟ್ಟದಲ್ಲಿ ವ್ಯತ್ಯಯವಾಗುತ್ತವೆ. ಆಕ್ವಾಪೋನಿಕ್ಸ್, ಫ್ರಾಕ್ಷನೇಟೆಡ್ ಆಕ್ವಾಕಲ್ಚರ್ (ವಿಭಾಗಿಸಲ್ಪಟ್ಟ ಜಲಚರ ಸಾಕಣೆ), IAAS-ಇಂಟಿಗ್ರೇಟೆಡ್ ಅಗ್ರಿಕಲ್ಚರ್-ಆಕ್ವಾಕಲ್ಚರ್ ಸಿಸ್ಟಮ್ಸ್ (ಸಂಯೋಜಿಸಲ್ಪಟ್ಟ ಕೃಷಿ-ಜಲಚರ ಸಾಕಣೆ ವ್ಯವಸ್ಥೆಗಳು), IPUAS-ಇಂಟಿಗ್ರೇಟೆಡ್ ಪೆರಿ-ಅರ್ಬನ್ ಆಕ್ವಾಕಲ್ಚರ್ ಸಿಸ್ಟಮ್ಸ್ (ಸಂಯೋಜಿಸಲ್ಪಟ್ಟ ನಗರವನ್ನಾವರಿಸಿದ-ಜಲಚರ ಸಾಕಣೆ ವ್ಯವಸ್ಥೆಗಳು), ಮತ್ತು IFAS-ಇಂಟಿಗ್ರೇಟೆಡ್ ಫಿಶರೀಸ್-ಆಕ್ವಾಕಲ್ಚರ್ ಸಿಸ್ಟಮ್ಸ್ (ಸಂಯೋಜಿಸಲ್ಪಟ್ಟ ಮೀನುಗಾರಿಕಾ ಕೇಂದ್ರಗಳ-ಜಲಚರ ಸಾಕಣೆ ವ್ಯವಸ್ಥೆಗಳು) ಇವೆಲ್ಲವೂ IMTA ಪರಿಕಲ್ಪನೆಯ ಇತರ ರೂಪಾಂತರಗಳಾಗಿವೆ.
ಜಾತಿಯ ಗುಂಪುಗಳು
ಈಜುರೆಕ್ಕೆ ಮೀನು
ಈಜುರೆಕ್ಕೆ ಮೀನಿನ ಸಾಕುವಿಕೆಯು ಜಲಚರ ಸಾಕಣೆಯ ಅತ್ಯಂತ ಸಾಮಾನ್ಯ ಸ್ವರೂಪವಾಗಿದೆ. ಕೆರೆಗಳು, ಕೊಳಗಳು, ಅಥವಾ ಸಾಗರದ ಆವರಣಗಳಲ್ಲಿ, ಸಾಮಾನ್ಯವಾಗಿ ಆಹಾರಕ್ಕಾಗಿ ಮೀನುಗಳನ್ನು ವಾಣಿಜ್ಯ ಸ್ವರೂಪದಲ್ಲಿ ಬೆಳೆಸುವುದನ್ನು ಇದು ಒಳಗೊಳ್ಲುತ್ತದೆ. ವಿಹಾರದ ಮೀನುಗಾರಿಕೆಗೆ ಸಂಬಂಧಿಸಿದಂತೆ ಅಥವಾ ಒಂದು ಜಾತಿಯ ಸ್ವಾಭಾವಿಕ ಸಂಖ್ಯೆಗಳಿಗೆ ಪೂರಕವಾಗಿರಲು ಎಳೆಯ ಹರೆಯದ ಮೀನುಗಳನ್ನು ಕಾಡುಮೇಡುಗಳಲ್ಲಿ ಬಿಡುವ ಒಂದು ಸೌಲಭ್ಯವನ್ನು ಸಾಮಾನ್ಯವಾಗಿ ಒಂದು ಮೀನು ಮೊಟ್ಟೆ ಮರಿಮಾಡುವ ಕೇಂದ್ರ ಎಂದು ಉಲ್ಲೇಖಿಸಲಾಗುತ್ತದೆ. ಮೀನು ಸಾಕಣೆ ಕೇಂದ್ರಗಳಿಂದ ಬೆಳೆಸಲ್ಪಟ್ಟಿರುವ ಮೀನು ಜಾತಿಗಳಲ್ಲಿ ಸಾಲ್ಮನ್, ದೊಡ್ಡ ಕಣ್ಣಿನ ಟೂನಾ, ಕಾರ್ಪ್ ಸಿಹಿನೀರು ಮೀನು, ಟಿಲಾಪಿಯಾ, ಬೆಕ್ಕುಮೀನು ಹಾಗೂ ಕಾಡ್ ಮೊದಲಾದವು ಸೇರಿವೆ.[೩೦]
ಮೆಡಿಟರೇನಿಯನ್ ಸಮುದ್ರದಲ್ಲಿ, ಕಿರಿಯ ನೀಲಿ ಈಜುರೆಕ್ಕೆಯ ಟೂನಾಗಳನ್ನು ಸಮುದ್ರದಲ್ಲಿ ಬಲೆಯನ್ನುಪಯೋಗಿಸಿ ಹಿಡಿಯಲಾಗುತ್ತದೆ ಮತ್ತು ಅವನ್ನು ಕಡಲತೀರದೆಡೆಗೆ ನಿಧಾನವಾಗಿ ತಳ್ಳಿಕೊಂಡು ಬರಲಾಗುತ್ತದೆ. ನಂತರ ಅವನ್ನು ಕಡಲತೀರದಾಚೆಯ ದೊಡ್ಡಿಗಳಲ್ಲಿ ನಿರ್ಬಂಧಿಸಿಡಲಾಗುತ್ತದೆ ಮತ್ತು ಅಲ್ಲಿ ಅವನ್ನು ಮಾರುಕಟ್ಟೆಯ ಅಗತ್ಯಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಬೆಳೆಸಲಾಗುತ್ತದೆ.[೩೧] 2009ರಲ್ಲಿ, ಆಸ್ಟ್ರೇಲಿಯಾದಲ್ಲಿನ ಸಂಶೋಧಕರು ಮೊಟ್ಟಮೊದಲ ಬಾರಿಗೆ ನೆಲಾವೃತ ಕೆರೆಗಳಲ್ಲಿ ಟೂನಾಗಳನ್ನು (ದಕ್ಷಿಣ ಭಾಗದ ನೀಲಿ ಈಜುರೆಕ್ಕೆಯ ಮೀನು) ಬೆಳೆಯಿಸಲು ಪುಸಲಾಯಿಸುವಲ್ಲಿ ಯಶಸ್ವಿಯಾದರು.[೩೨]
ಚಿಪ್ಪುಮೀನು
ಕಡಲ್ಗಿವಿಯ ಸಾಕುವಿಕೆಯು ಜಪಾನ್ ಮತ್ತು ಚೀನಾ ದೇಶಗಳಲ್ಲಿ 1950ರ ದಶಕದ ಅಂತ್ಯ ಹಾಗೂ 1960ರ ದಶಕದ ಆರಂಭದಲ್ಲಿ ಶುರುವಾಯಿತು.[೩೩] 1990ರ ದಶಕದ ಮಧ್ಯಭಾಗದಿಂದೀಚೆಗೆ, ಈ ಉದ್ಯಮವು ಗಣನೀಯವಾಗಿ ಯಶಸ್ವಿಯಾಗಿದೆ.[೩೪] ಅತಿಯಾದ-ಮೀನುಗಾರಿಕೆ ಮತ್ತು ಅತಿಕ್ರಮಿಸುವಿಕೆಗಳು ಸಾಕಿರದ ಮೀನುಗಳ ಒಟ್ಟುಸಂಖ್ಯೆಯನ್ನು ಎಷ್ಟರಮಟ್ಟಿಗೆ ತಗ್ಗಿಸಿವೆಯೆಂದರೆ, ಬಹುತೇಕ ಕಡಲ್ಗಿವಿ ಮಾಂಸದ ಅಗತ್ಯವನ್ನು ಸಾಕಣೆ ಮಾಡಲ್ಪಟ್ಟ ಅಥವಾ ಬೆಳೆಸಲ್ಪಟ್ಟ ಕಡಲ್ಗಿವಿಯು ಈಗ ಪೂರೈಸುತ್ತಿದೆ.
ಕಠಿಣಚರ್ಮಿಗಳು
ವಾಣಿಜ್ಯ ಸ್ವರೂಪದಲ್ಲಿನ ಇಂಚಾಕ ಸಾಕಣೆಯು 1970ರ ದಶಕದಲ್ಲಿ ಪ್ರಾರಂಭವಾಯಿತು, ಮತ್ತು ಅಲ್ಲಿಂದೀಚೆಗೆ ಉತ್ಪಾದನೆಯು ತೀವ್ರವಾಗಿ ಬೆಳೆಯಿತು. 2003ರಲ್ಲಿ ಜಾಗತಿಕ ಉತ್ಪಾದನೆಯು ...1,600,000 tonnes (1,600,000 long tons; 1,800,000 short tons)ಕ್ಕಿಂತ ಹೆಚ್ಚು ಪ್ರಮಾಣವನ್ನು ಮುಟ್ಟುವುದರ ಮೂಲಕ, ಸುಮಾರು 9,000 ದಶಲಕ್ಷದಷ್ಟು U.S. ಡಾಲರುಗಳ ಒಂದು ಮೌಲ್ಯವನ್ನು ಅದು ಪ್ರತಿನಿಧಿಸಿತು. ಬೆಳೆಸಲ್ಪಟ್ಟ ಇಂಚಾಕದ ಪೈಕಿ 75%ನಷ್ಟು ಭಾಗವು ಏಷ್ಯಾದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಚೀನಾ ಹಾಗೂ ಥೈಲೆಂಡ್ನಲ್ಲಿ ಉತ್ಪಾದಿಸಲ್ಪಡುತ್ತದೆ. ಇತರ 25%ನಷ್ಟು ಭಾಗವು ಮುಖ್ಯವಾಗಿ ಲ್ಯಾಟಿನ್ ಅಮೆರಿಕಾದಲ್ಲಿ ಉತ್ಪಾದಿಸಲ್ಪಡುತ್ತಿದ್ದು, ಇಲ್ಲಿ ಬ್ರೆಜಿಲ್ ಅತಿದೊಡ್ಡ ಉತ್ಪಾದಕನಾಗಿದೆ. ಥೈಲೆಂಡ್ ಅತಿದೊಡ್ಡ ರಫ್ತುದಾರನಾಗಿದೆ.
ಇಂಚಾಕ ಸಾಕಣೆಯು ಆಗ್ನೇಯ ಏಷ್ಯಾದಲ್ಲಿನ ತನ್ನ ಸಾಂಪ್ರದಾಯಿಕ, ಸಣ್ಣ-ಪ್ರಮಾಣದ ಸ್ವರೂಪದಿಂದ ಒಂದು ಜಾಗತಿಕ ಉದ್ಯಮವಾಗಿ ಬದಲಾವಣೆಗೊಂಡಿದೆ.
ಪ್ರತಿ ಏಕಮಾನ ವಿಸ್ತೀರ್ಣದಲ್ಲಿನ ಹಿಂದೆಂದೂ ಇಲ್ಲದ ಅತೀವ ದಟ್ಟಣೆಗಳಿಗೆ ತಾಂತ್ರಿಕ ಪ್ರಗತಿಗಳು ಕಾರಣವಾಗಿವೆ, ಹಾಗೂ ಸಾಕಿದ ತಳಿಯು ವಿಶ್ವವ್ಯಾಪಿಯಾಗಿ ಸಾಗಿಸಲ್ಪಡುತ್ತಿದೆ. ವಸ್ತುತಃ ಎಲ್ಲಾ ಸಾಕಲ್ಪಟ್ಟ ಇಂಚಾಕಗಳು ಪೆನೇಯೀಡ್ಗಳಾಗಿವೆ (ಅಂದರೆ, ಪೆನೇಯೀಡೇ ವಂಶಕ್ಕೆ ಸೇರಿದ ಇಂಚಾಕಗಳಾಗಿವೆ), ಮತ್ತು ಇಂಚಾಕದ ಕೇವಲ ಎರಡು ಜಾತಿಗಳು— ಅಂದರೆ ಪೆನೇಯಸ್ ವನ್ನಾಮೀ (ಪೆಸಿಫಿಕ್ ಬಿಳಿ ಇಂಚಾಕ) ಹಾಗೂ ಪೆನೇಯಸ್ ಮೊನೊಡಾನ್ (ದೈತ್ಯ ಹುಲಿ ಸೀಗಡಿ)- ಸಾಕಲ್ಪಟ್ಟ ಉಳಿದೆಲ್ಲಾ ಇಂಚಾಕಗಳ ಪೈಕಿ ಸ್ಥೂಲವಾಗಿ 80%ನಷ್ಟು ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ. ಈ ಕೈಗಾರಿಕಾ ಸ್ವರೂಪದ ಎಕಫಸಲಿನ ಕೃಷಿಗಳು ಕಾಯಿಲೆಗೆ ಅತ್ಯಂತ ಸುಲಭವಾಗಿ ಈಡಾಗುತ್ತವೆ; ಇದರಿಂದಾಗಿ ಸಮಗ್ರ ವಲಯಗಳಾದ್ಯಂತ ಇರುವ ಇಂಚಾಕಗಳ ಒಟ್ಟುಸಂಖ್ಯೆಗಳಲ್ಲಿ, ಹತ್ತರಲ್ಲಿ ಒಂಬತ್ತರಷ್ಟರ ಪ್ರಮಾಣದಲ್ಲಿ ಇಂಚಾಕಗಳು ಸಾಯುತ್ತಿರುವುದು ಕಂಡುಬಂದಿದೆ. ಹೆಚ್ಚುತ್ತಲೇ ಇರುವ ಪರಿಸರ ವಿಜ್ಞಾನದ ಸಮಸ್ಯೆಗಳು, ಮರುಕಳಿಸಿದ ಕಾಯಿಲೆಯ ಏಕಾಏಕಿ ಆರಂಭಗಳು, ಮತ್ತು ಒತ್ತಡವಷ್ಟೇ ಅಲ್ಲದೇ 0}NGOಗಳು ಮತ್ತು ಬಳಕೆದಾರ ದೇಶಗಳಿಂದ ಬರುವ ಟೀಕೆಯು 1990ರ ದಶಕದ ಅಂತ್ಯದ ವೇಳೆಗೆ ಉದ್ಯಮದಲ್ಲಿನ ಬದಲಾವಣೆಗಳಿಗೆ ಮತ್ತು ಸಾಮಾನ್ಯವಾಗಿ ಬಲವಾಗಿರುವ ಕಟ್ಟುಪಾಡುಗಳಿಗೆ ಕಾರಣವಾದವು. 1999ರಲ್ಲಿ, ಹೆಚ್ಚು ಸಮರ್ಥನೀಯವಾದ ಸಾಕುವಿಕೆಯ ಪರಿಪಾಠಗಳನ್ನು ಅಭಿವೃದ್ಧಿಪಡಿಸುವ ಹಾಗೂ ಉತ್ತೇಜಿಸುವ ಕಡೆಗೆ ಗುರಿಯನ್ನು ಹೊಂದಿರುವ ಕಾರ್ಯಸೂಚಿಯೊಂದಕ್ಕೆ ಸರ್ಕಾರಗಳು, ಉದ್ಯಮ ಪ್ರತಿನಿಧಿಗಳು, ಹಾಗೂ ಪರಿಸರೀಯ ಸಂಘಟನೆಗಳು ಚಾಲನೆ ನೀಡಿದವು.[ಸೂಕ್ತ ಉಲ್ಲೇಖನ ಬೇಕು]
ಅನೇಕ ಸಮಸ್ಯೆಗಳನ್ನು ಒಳಗೊಳ್ಳುವುದರ ಜೊತೆಗೆ, ಸಿಹಿನೀರಿನ ಸೀಗಡಿ ಸಾಕಣೆಯು ಸಮುದ್ರದ ಇಂಚಾಕ ಸಾಕಣೆಯೊಂದಿಗೆ ಅನೇಕ ಗುಣಲಕ್ಷಣಗಳನ್ನು ಹಂಚಿಕೊಳ್ಳುತ್ತದೆ. ಮುಖ್ಯ ಜಾತಿಗಳ (ದೈತ್ಯ ನದಿ ಸೀಗಡಿಯಾಗಿರುವ ಮ್ಯಾಕ್ರೋಬ್ರಾಕಿಯಂ ರೋಸೆನ್ಬರ್ಗಿಲ್ ) ಬೆಳವಣಿಗೆಯ ಜೀವನಚಕ್ರದಿಂದ ಅನನ್ಯ ಸಮಸ್ಯೆಗಳು ಪರಿಚಯಿಸಲ್ಪಟ್ಟಿವೆ.[೩೫]
ಜಾಗತಿಕ ಮಟ್ಟದಲ್ಲಿನ ಸಿಹಿನೀರಿನ ಸೀಗಡಿಗಳ ವಾರ್ಷಿಕ ಉತ್ಪಾದನೆಯು (ಏಡಿಮೀನು (ಮತ್ತು ಏಡಿಗಳನ್ನು ಹೊರತುಪಡಿಸಿ) 2003ರಲ್ಲಿ ಸುಮಾರು ...280,000 tonnes (280,000 long tons; 310,000 short tons)ನಷ್ಟಿತ್ತು; ಇದರ ಪೈಕಿ ಚೀನಾ ದೇಶವು ...180,000 tonnes (180,000 long tons; 200,000 short tons)ನಷ್ಟು ಪ್ರಮಾಣದಲ್ಲಿ ಉತ್ಪಾದಿಸಿದರೆ, ಭಾರತ ಹಾಗೂ ಥೈಲೆಂಡ್ ದೇಶಗಳು ತಲಾ ...35,000 tonnes (34,000 long tons; 39,000 short tons)ನಷ್ಟು ಪ್ರಮಾಣವನ್ನು ಉತ್ಪಾದಿಸಿದವು. ಹೆಚ್ಚುವರಿಯಾಗಿ, ಚೀನಾ ದೇಶವು ಸುಮಾರು ...370,000 tonnes (360,000 long tons; 410,000 short tons)ನಷ್ಟು ಪ್ರಮಾಣದಲ್ಲಿ ಚೀನಾದ ನದಿ ಏಡಿಯನ್ನು (ಎರಿಯೋಚೆಯಿರ್ ಸಿನೆನ್ಸಿಸ್ ) ಉತ್ಪಾದಿಸಿತು.[೩೬]
ಕಂಟಕಚರ್ಮಿಗಳು
ವಾಣಿಜ್ಯ ಸ್ವರೂಪದಲ್ಲಿ ಬೆಳೆಸಲಾದ ಕಂಟಕಚರ್ಮಿಗಳಲ್ಲಿ ಸಮುದ್ರ ಸೌತೆಗಳು ಮತ್ತು ಕಡಲಚಿಳ್ಳೆಗಳು ಸೇರಿವೆ. ಚೀನಾದಲ್ಲಿ, ಸಮುದ್ರ ಸೌತೆಗಳನ್ನು ಕೃತಕ ಕೊಳಗಳಲ್ಲಿ ಬೆಳೆಸಲಾಗುತ್ತದೆ. ಈ ಕೊಳಗಳು ...1,000 acres (400 ha)ನಷ್ಟು ದೊಡ್ಡದಿರುತ್ತವೆ.[೩೭]
ಪಾಚಿಗಳು
ತೇಲುಸಸ್ಯ, ಸೂಕ್ಷ್ಮಸಸ್ಯಗಳು, ಅಥವಾ ಪ್ಲವಕದ ಪಾಚಿಗಳು ಎಂದೂ ಉಲ್ಲೇಖಿಸಲ್ಪಡುವ ಸೂಕ್ಷ್ಮಪಾಚಿಗಳು ಕೃಷಿಮಾಡಲ್ಪಟ್ಟ ಪಾಚಿಗಳ ಬಹುಪಾಲನ್ನು ಆವರಿಸಿಕೊಳ್ಳುತ್ತವೆ.
ಕಡಲಕಳೆ ಎಂದು ಸಾಮಾನ್ಯವಾಗಿ ಪರಿಚಿತವಾಗಿರುವ ಬೃಹತ್ಪಾಚಿಗಳು ಅನೇಕ ವಾಣಿಜ್ಯ ಹಾಗೂ ಕೈಗಾರಿಕಾ ಉಪಯೋಗಗಳನ್ನು ಹೊಂದಿವೆಯಾದರೂ, ಅವುಗಳ ಗಾತ್ರ ಹಾಗೂ ನಿರ್ದಿಷ್ಟ ಅವಶ್ಯಕತೆಗಳ ಕಾರಣದಿಂದಾಗಿ ಅವನ್ನು ಒಂದು ದೊಡ್ಡ ಪ್ರಮಾಣದಲ್ಲಿ ಸುಲಭವಾಗಿ ಕೃಷಿಮಾಡಲಾಗುವುದಿಲ್ಲ ಹಾಗೂ ಬಹುತೇಕ ಸಂದರ್ಭಗಳಲ್ಲಿ ಅವನ್ನು ಸಹಜವಾಗಿರುವ ಕಾಡುಸ್ಥಿತಿಯಲ್ಲಿ ಅವನ್ನು ಪಡೆಯಲಾಗುತ್ತದೆ.
ವಿವಾದಾಂಶಗಳು
ನೈಸರ್ಗಿಕ ಸ್ಥಿತಿಯ ಮೀನುಗಾರಿಕೆಯನ್ನು ಬಳಕೆಮಾಡಿಕೊಳ್ಳುವುದಕ್ಕೆ ಹೋಲಿಸಿದಾಗ, ಜಲಚರ ಸಾಕಣೆಯು ಪರಿಸರೀಯವಾಗಿ ಹೆಚ್ಚು ಹಾನಿಯುಂಟುಮಾಡಬಲ್ಲದು.[೩೮] ಇದಕ್ಕೆ ಸಂಬಂಧಿಸಿದ ಕಳವಳಗಳಲ್ಲಿ, ತ್ಯಾಜ್ಯ ನಿರ್ವಹಣೆ, ಪ್ರತಿಜೀವಕಗಳ ಪಾರ್ಶ್ವ-ಪರಿಣಾಮಗಳು, ಕೃಷಿಮಾಡಿದ ಮತ್ತು ಸಾಕಿರದ ಪ್ರಾಣಿಗಳ ನಡುವಿನ ಪೈಪೋಟಿ, ಮತ್ತು ಹೆಚ್ಚು ಮಾರುಕಟ್ಟೆ ಮಾಡಬಹುದಾದ ಮಾಂಸಾಹಾರಿ ಮೀನುಗಳನ್ನು ಪೋಷಿಸಲು ಇತರ ಮೀನುಗಳನ್ನು ಬಳಸುವುದು ಇವೇ ಮೊದಲಾದವು ಸೇರಿವೆ. ಆದಾಗ್ಯೂ, 1990ರ ದಶಕ & 2000ರ ದಶಕದ ಅವಧಿಯಲ್ಲಿ ಕಂಡುಬಂದ ಸಂಶೋಧನೆ ಹಾಗೂ ವಾಣಿಜ್ಯ ಸ್ವರೂಪದ ಪೋಷಣೆಯಲ್ಲಿನ ಸುಧಾರಣೆಗಳು ಇವುಗಳ ಪೈಕಿ ಬಹಳಷ್ಟನ್ನು ಕಡಿಮೆಮಾಡಿವೆ.[೩೯]
ಮೀನು ತ್ಯಾಜ್ಯವು ಸಾವಯವ ಸ್ವರೂಪದ್ದಾಗಿದ್ದು, ಜಲವಾಸಿ ಆಹಾರ ಜಾಲಗಳ ಎಲ್ಲಾ ಘಟಕಗಳಲ್ಲಿ ಅಗತ್ಯವಾಗಿರುವ ಪೌಷ್ಟಿಕ ದ್ರವ್ಯಗಳಿಂದ ಅದು ಮಾಡಲ್ಪಟ್ಟಿದೆ. ಸಾಗರದಲ್ಲಿ ಸಾಮಾನ್ಯವಾದ ಮೀನಿನ ತ್ಯಾಜ್ಯ ಸಾಂದ್ರತೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿನ ಸಾಂದ್ರತೆಗಳನ್ನು ಜಲಚರ ಸಾಕಣೆಯು ಅನೇಕವೇಳೆ ಉತ್ಪಾದಿಸುತ್ತದೆ. ಈ ತ್ಯಾಜ್ಯವು ಸಾಗರ ತಳಭಾಗದಲ್ಲಿ ಸಂಗ್ರಹಗೊಂಡು, ತಳಭಾಗದಲ್ಲಿ-ವಾಸಿಸುವ ಜೀವರಾಶಿಗೆ ಹಾನಿಯುಂಟುಮಾಡುತ್ತದೆ ಇಲ್ಲವೇ ಅವನ್ನು ನಿರ್ಮೂಲಗೊಳಿಸುತ್ತದೆ. ನೀರಿನ ಸ್ತಂಭದಲ್ಲಿನ ಕರಗಿದ-ಆಮ್ಲಜನಕ ಮಟ್ಟಗಳನ್ನೂ ಸಹ ತ್ಯಾಜ್ಯವು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದು ಸಾಕಿರದ ಪ್ರಾಣಿಗಳ[ಸೂಕ್ತ ಉಲ್ಲೇಖನ ಬೇಕು] ಮೇಲೆ ಮತ್ತಷ್ಟು ಒತ್ತಡವನ್ನು ಹೇರುತ್ತದೆ.
ಕಾಯಿಲೆಯನ್ನು ತಡೆಗಟ್ಟುವ ಉದ್ದೇಶದಿಂದ ಬೇಸಾಯಗಾರರು ಅನೇಕವೇಳೆ ತಮ್ಮ ಪ್ರಾಣಿಗಳಿಗೆ ಪ್ರತಿಜೀವಕಗಳ ಪೂರೈಕೆಯನ್ನು ಮಾಡುತ್ತಾರೆ. ಜಾನುವಾರುಗಳೊಂದಿಗೆ ಆಗುವಂತೆಯೇ ಇದು ಬ್ಯಾಕ್ಟೀರಿಯಾದ ನಿರೋಧಕತೆಯ ವಿಕಸನದ ವೇಗವನ್ನು ಹೆಚ್ಚಿಸಬಲ್ಲದಾಗಿರುತ್ತದೆ.
ಮೀನಿನ ಎಣ್ಣೆಗಳು
ಆಹಾರದಲ್ಲಿ ಸೇರಿಸಲ್ಪಟ್ಟಿರುವ ಕಾಳಿನ ಪ್ರಮಾಣದ ಕಾರಣದಿಂದಾಗಿ ಸಾಕಣೆ-ಕೇಂದ್ರದಲ್ಲಿ ಬೆಳೆಸಿದ ಟಿಲಾಪಿಯಾದ ಪೋಷಣೆಯ ಮೌಲ್ಯವು ರಾಜಿಗೆ ಒಳಗಾಗಬೇಕಾಗಬಹುದು. ಸಣ್ಣ ಸರಪಳಿಯ ಒಮೆಗಾ-6 ಕೊಬ್ಬಿನ ಆಮ್ಲಗಳನ್ನು ಕಾಳು ಒಳಗೊಂಡಿರುತ್ತದೆಯಾದ್ದರಿಂದ, ಮೀನುಗಳಲ್ಲಿ ಈ ದ್ರವ್ಯಗಳು ರೂಪುಗೊಳ್ಳಲು ಈ ಆಮ್ಲಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತವೆ. "ದೀರ್ಘ-ಸರಪಳಿಯ ಒಮೆಗಾ-6ರಿಂದ ದೀರ್ಘ-ಸರಪಳಿಯ ಒಮೆಗಾ-3ವರೆಗಿನ, ಕ್ರಮವಾಗಿ AAಯಿಂದ EPAವರೆಗಿನ ಅನುಪಾತಗಳು ಟಿಲಾಪಿಯಾದಲ್ಲಿ ಸುಮಾರು 11:1ರಷ್ಟು ಸರಾಸರಿ ಪ್ರಮಾಣದಲ್ಲಿವೆ; ಇದಕ್ಕೆ ಹೋಲಿಸಿದಾಗ ಸಾಲ್ಮನ್ ಮತ್ತು ಟ್ರೌಟ್ ಮೀನುಗಳೆರಡರಲ್ಲೂ ಕ್ರಮವಾಗಿ 1:1 ಅನುಪಾತದಲ್ಲಿ (AAಗಿಂತ EPA ಪ್ರಮಾಣವು ಹೆಚ್ಚಿದೆ ಎಂಬುದನ್ನು ಇದು ಸೂಚಿಸುತ್ತದೆ) ಈ ಪ್ರಮಾಣವು ಕಂಡುಬರುತ್ತದೆ." 2005ರಲ್ಲಿ ...1,500,000 tonnes (1,500,000 long tons; 1,700,000 short tons)ನಷ್ಟು ಪ್ರಮಾಣದ ಟಿಲಾಪಿಯಾವನ್ನು US ಉತ್ಪಾದಿಸಿದ್ದು, 2010ರ ವೇಳೆಗೆ ಇದು ...2,500,000 tonnes (2,500,000 long tons; 2,800,000 short tons)ನಷ್ಟು ಇರುತ್ತದೆ ಎಂದು ಮುನ್ನಂದಾಜು ಮಾಡಲ್ಪಟ್ಟಿದೆ. ಮೀನುಗಳ ಬಳಕೆಯನ್ನು ಪ್ರೋತ್ಸಾಹಿಸುವ ವ್ಯಾಪಕವಾದ ಪ್ರಚಾರವು, ಒಂದು ಸಮತೋಲಿತ ಆಹಾರವನ್ನು ಸೇವಿಸಲು ಪ್ರಯತ್ನಿಸುತ್ತಿರುವ ಕಡಿಮೆ ಆದಾಯಗಳೊಂದಿಗಿನ ಜನರಿಂದ ಟಿಲಾಪಿಯಾದ ಬಳಕೆಯು ಹೆಚ್ಚು ಪ್ರಮಾಣದಲ್ಲಿ ಆಗಲು ಕಾರಣವಾಗಿದೆ. ಟಿಲಾಪಿಯಾದಲ್ಲಿ ಕಂಡುಬರುವ ಒಮೆಗಾ-3 ಸಂಯುಕ್ತಗಳ ಕಡಿಮೆ ಪ್ರಮಾಣಗಳು ಹಾಗೂ ಒಮೆಗಾ-6 ಸಂಯುಕ್ತಗಳ ಹೆಚ್ಚಿನ ಅನುಪಾತಗಳು, ಈ ಮೀನುಗಳನ್ನು ಸೇವಿಸುವುದರಿಂದ ದೊರೆಯುವ ಆರೋಗ್ಯದ ಪ್ರಯೋಜನಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.[೪೦]
ಸಾಲ್ಮನ್ ಹಾಗೂ ಇತರ ಮಾಂಸಾಹಾರಿ ಮೀನುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಮಾಣದಲ್ಲಿರುವ ಆಹಾರಗಳನ್ನು ಸೋಯಾದಂಥ ಪ್ರೋಟೀನು ಮೂಲಗಳಿಂದ ರೂಪಿಸಲು ಸಾಧ್ಯವಿದೆಯಾದರೂ, ಸೋಯಾ-ಆಧರಿತ ಆಹಾರಕ್ರಮಗಳು ಒಮೆಗಾ-6 ಮತ್ತು ಒಮೆಗಾ-3 ಕೊಬ್ಬಿನ ಆಮ್ಲಗಳ ನಡುವಿನ ಸಮತೋಲನವನ್ನು ಬದಲಾಯಿಸಬಹುದಾಗಿದೆ.[೪೧]
ಸಾಕಿರದ ಮೀನಿನ ಮೇಲಿನ ಪ್ರಭಾವಗಳು
ಆಹಾರಕ್ಕಾಗಿರುವ ಸಾಕಿರದ ಮೇವು ಮೀನಿಗೆ ಸಂಬಂಧಿಸಿದಂತೆ, ಸಾಲ್ಮನ್ ಸಾಕುವಿಕೆಯು ಸದ್ಯಕ್ಕೆ ಒಂದು ಹೆಚ್ಚಿನ ಬೇಡಿಕೆಯನ್ನು ಒಳಗೊಂಡಿದೆ. ಮಾಂಸಾಹಾರಿಗಳಾಗಿರುವ ಸಾಲ್ಮನ್ಗಳಿಗೆ ಪ್ರೋಟೀನಿನ ಅಗತ್ಯ ಹೆಚ್ಚು ಕಂಡುಬರುತ್ತದೆ, ಮತ್ತು ಕೃಷಿಮಾಡಿ ಬೆಳೆಸಿದ ಸಾಲ್ಮನ್ ಮೀನುಗಳು ತಾವು ಉತ್ಪತ್ತಿ ಮಾಡುವುದಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮೀನನ್ನು ತಿನ್ನುತ್ತವೆ. ಕೃಷಿ ಮಾಡಿ ಬೆಳೆಸಲಾದ ಪ್ರತಿ ಪೌಂಡಿನಷ್ಟು ಸಾಲ್ಮನ್ ಮೀನಿಗೆ ಸುಮಾರು 6 ಪೌಂಡುಗಳಷ್ಟು ಪ್ರಮಾಣದಲ್ಲಿ ಸಾಕಿರದ ಮೀನಿನ ಅವಶ್ಯಕತೆಯಿರುತ್ತದೆ.[೪೨] ವಿಶ್ವದ ನಿಯಂತ್ರಿತ ಮೀನುಗಾರಿಕಾ ಕೇಂದ್ರಗಳ ಪೈಕಿ ಎಪ್ಪತ್ತೈದು ಪ್ರತಿಶತ ಭಾಗದಷ್ಟು ಈಗಾಗಲೇ ತಮ್ಮ ಗರಿಷ್ಟ ಸಮರ್ಥನೀಯ ಇಳುವರಿಯ ಹತ್ತಿರದಲ್ಲಿವೆ ಅಥವಾ ಅದನ್ನು ಮೀರಿವೆ."[೪೩] ಸಾಲ್ಮನ್ ಸಾಕುವಿಕೆಗೆ ಸಂಬಂಧಿಸಿರುವ ಸಾಕಿರದ ಮೇವು ಮೀನಿನ ಕೈಗಾರಿಕಾ ಪ್ರಮಾಣದಲ್ಲಿನ ಪಡೆಯುವಿಕೆಯೂ ಸಹ, ಆಹಾರಕ್ಕಾಗಿ ಅವನ್ನು ನೆಚ್ಚಿಕೊಂಡಿರುವ ಸಾಕಿರದ ಪರಭಕ್ಷಕ ಮೀನಿನ ಉಳಿಯುವ ಸಾಮರ್ಥ್ಯದ ಮೇಲೆ ಪ್ರಭಾವ ಬೀರುತ್ತದೆ.
ತಮ್ಮ ಸಾಕಿರದ ಸಹವರ್ತಿಗಳೊಂದಿಗೆ ಪರಸ್ಪರ ತಳಿಸೃಷ್ಟಿಯನ್ನು ಮಾಡಲು ಅವಕಾಶವಿರುವ ತೀರಪ್ರದೇಶದ ದೊಡ್ಡಿಗಳಿಂದ ಮೀನು ತಪ್ಪಿಸಿಕೊಳ್ಳಬಲ್ಲದು; ಇದರಿಂದಾಗಿ ಸಾಕಿರದ ಆನುವಂಶಿಕ ಮೂಲಗಳ ಪ್ರಭಾವವು ಕುಗ್ಗುತ್ತದೆ.[೪೪] ತಪ್ಪಿಸಿಕೊಂಡ ಮೀನು, ಯಶಸ್ಸನ್ನು ಸಾಧಿಸುವ ಸ್ಥಳೀಯ ಜಾತಿಗಳನ್ನು ಮೀರಿಸಿ ಆಕ್ರಮಣಶೀಲವಾಗಿ ಮಾರ್ಪಡಬಲ್ಲದು.[೪೫]
ತೀರಪ್ರದೇಶದ ಪರಿಸರ ವ್ಯವಸ್ಥೆಗಳು
ಜಲಚರ ಸಾಕಣೆಯು ತೀರಪ್ರದೇಶದ ಪರಿಸರ ವ್ಯವಸ್ಥೆಗಳಿಗೆ ಒಂದು ಗಮನಾರ್ಹ ಬೆದರಿಕೆಯಾಗಿ ಮಾರ್ಪಡುತ್ತಿದೆ. ಸೀಗಡಿ ಸಾಕಣೆಯ ಭಾಗಶಃ ಕಾರಣದಿಂದಾಗಿ ಸುಮಾರು 20 ಪ್ರತಿಶತ ಭಾಗದಷ್ಟು ಮ್ಯಾಂಗ್ರೋವ್ ಮರದ ಕಾಡುಗಳು 1980ರಿಂದಲೂ ನಾಶವಾಗುತ್ತಾ ಬಂದಿವೆ.[೪೬] ಸ್ವಲ್ಪ ಉಪ್ಪಾದ ಇಂಚಾಕ ಕೊಳಗಳಾಗಿ ಮ್ಯಾಂಗ್ರೋವ್ ಮರಗಳ ದೊಡ್ಡ ಪ್ರಮಾಣದ ಪರಿವರ್ತನೆಗಳು, "ಕಡಿದು ಸುಡುವ" ಕೃಷಿಯ ಸಮುದ್ರ-ಸಮಾನ ವಿಧಾನವಾಗಿ ನಿರೂಪಿಸಲ್ಪಟ್ಟಿವೆ.[೪೭] ಮ್ಯಾಂಗ್ರೋವ್ ಮರದ ಪರಿಸರ ವ್ಯವಸ್ಥೆಗಳ ಮೇಲೆ ನಿರ್ಮಾಣಗೊಂಡ ಇಂಚಾಕ ಜಲಚರ ಸಾಕಣೆಯ ಒಟ್ಟು ಆರ್ಥಿಕ ಮೌಲ್ಯದ ಒಂದು ವಿಸ್ತರಿತ ವೆಚ್ಚ–ಪ್ರಯೋಜನ ವಿಶ್ಲೇಷಣೆಯು ಕಂಡುಕೊಂಡಿರುವ ಪ್ರಕಾರ, ಬಾಹ್ಯ ಪ್ರಯೋಜನಗಳಿಗಿಂತಲೂ ಬಾಹ್ಯ ವೆಚ್ಚಗಳು ಸಾಕಷ್ಟು ಹೆಚ್ಚಿನ ಮಟ್ಟದಲ್ಲಿದ್ದವು.[೪೮] ಕಳೆದ ನಾಲ್ಕು ದಶಕಗಳಿಂದಲೂ ....269,000 hectares (660,000 acres) ನಷ್ಟು ಇಂಡೋನೇಷ್ಯಾದ ಮ್ಯಾಂಗ್ರೋವ್ ಮರಗಳು ಸೀಗಡಿ ಸಾಕಣೆ ಕೇಂದ್ರಗಳಾಗಿ ಪರಿವರ್ತಿಸಲ್ಪಟ್ಟಿವೆ. ಜೀವಾಣುವಿಷದ ರೂಪುಗೊಳ್ಳುವಿಕೆ ಮತ್ತು ಪೌಷ್ಟಿಕ ದ್ರವ್ಯದ ನಷ್ಟದ ಕಾರಣದಿಂದಾಗಿ, ಇವುಗಳ ಪೈಕಿ ಬಹಳಷ್ಟು ಸಾಕಣೆ ಕೇಂದ್ರಗಳು ಒಂದೇ ದಶಕದೊಳಗೆ ಬಿಟ್ಟುಬಿಡಲ್ಪಟ್ಟಿವೆ.[೪೯][೫೦]
ವಿಶಿಷ್ಟವೆನಿಸುವಂತೆ, ಸಾಲ್ಮನ್ ಸಾಕಣೆ ಕೇಂದ್ರಗಳು ಮಲಿನವಾಗಿಲ್ಲದ ತೀರಪ್ರದೇಶದ ಪರಿಸರ ವ್ಯವಸ್ಥೆಗಳಲ್ಲಿ ನೆಲೆಗೊಂಡಿದ್ದು, ನಂತರದಲ್ಲಿ ಅವು ಆ ತಾಣಗಳನ್ನು ಮಾಲಿನ್ಯಮಾಡುತ್ತವೆ. 200,000 ಸಾಲ್ಮನ್ಗಳನ್ನು ಹೊಂದಿರುವ ಒಂದು ಸಾಕಣೆ ಕೇಂದ್ರವು, 60,000 ಜನರನ್ನು ಹೊಂದಿರುವ ಒಂದು ನಗರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಕ್ಕೆಯ ತ್ಯಾಜ್ಯವನ್ನು ಹೊರಹಾಕುತ್ತದೆ. ಈ ತ್ಯಾಜ್ಯವು ಸಂಸ್ಕರಿಸಲ್ಪಡದೆ ಸುತ್ತಮುತ್ತಲಿನ ಜಲವಾಸಿ ಪರಿಸರದೊಳಕ್ಕೆ ನೇರವಾಗಿ ಹೊರಹಾಕಲ್ಪಡುತ್ತದೆ; ಅನೇಕವೇಳೆ ಇದು ಪ್ರತಿಜೀವಕಗಳು ಮತ್ತು ಕೀಟನಾಶಕಗಳನ್ನು ಒಳಗೊಂಡಿರುತ್ತದೆ."[೪೩] ಸಾಲ್ಮನ್ ಸಾಕಣೆಕೇಂದ್ರಗಳಿಗೆ ಸಮೀಪದಲ್ಲಿರುವ ಜಲತಳ ಜೀವಿಗಳ (ಸಮುದ್ರತಳ) ಮೇಲೆ ಭಾರದ ಲೋಹಗಳ, ಅದರಲ್ಲೂ ನಿರ್ದಿಷ್ಟವಾಗಿ ತಾಮ್ರ ಮತ್ತು ಸತು ಲೋಹಗಳ ಒಂದು ಶೇಖರಣೆಯು ಕಂಡುಬರುತ್ತದೆ.[೫೧]
ತಳಿ ಮಾರ್ಪಾಡು
ವೇಗದ ಬೆಳವಣಿಗೆಗೆ ಸಂಬಂಧಿಸಿದಂತೆ ಸಾಲ್ಮನ್ಗಳು ತಳಿಯವಾಗಿ ಮಾರ್ಪಾಡಿಸಲ್ಪಟ್ಟಿವೆಯಾದರೂ, ಪ್ರತಿರೋಧವನ್ನು ಎದುರಿಸಬೇಕಾದ ಕಾರಣದಿಂದಾಗಿ ವಾಣಿಜ್ಯ ಬಳಕೆಗೆ ಸಂಬಂಧಿಸಿದಂತೆ ಅವು ಮಾನ್ಯತೆಯನ್ನು ಪಡೆದಿಲ್ಲ.[೫೨] ಪ್ರಯೋಗಾಲಯದ ಸಜ್ಜಿಕೆಯೊಂದರಲ್ಲಿನ ಅಧ್ಯಯನವೊಂದು ಕಂಡುಕೊಂಡಿರುವ ಪ್ರಕಾರ, ಸಾಕಿರದ ತಮ್ಮ ಸಂಬಂಧಿಗಳೊಂದಿಗೆ ಬೆರಕೆ ಮಾಡಲ್ಪಟ್ಟ ಮಾರ್ಪಾಡುಗೊಂಡ ಸಾಲ್ಮನ್ಗಳು ಪೈಪೋಟಿ ನಡೆಸುವಲ್ಲಿ ಆಕ್ರಮಣಶೀಲವಾಗಿದ್ದರೂ ಸಹ, ಅಂತಿಮವಾಗಿ ವಿಫಲಗೊಂಡವು.[೫೩]
ನಿರೀಕ್ಷೆಗಳು
ನದೀಮುಖಗಳಂಥ ಬೆಲೆಬಾಳುವ ಆವಾಸಸ್ಥಾನಗಳು ವಿಷಮಸ್ಥಿತಿಯಲ್ಲಿ ಇರುವುದರಿಂದ, ಜಾಗತಿಕ ಮಟ್ಟದ ಸಾಕಿರದ ಮೀನುಗಳ ಹಿಡಿಯುವಿಕೆಗಳು ಕುಸಿತವನ್ನು ಕಾಣುತ್ತಿವೆ.[೫೪] ಸಾಲ್ಮನ್ನಂಥ ಮೀನು ತಿನ್ನುವ ಮೀನಿನ ಜಲಚರ ಸಾಕಣೆ ಅಥವಾ ಸಾಕುವಿಕೆಯು ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನೆರವಾಗುವುದಿಲ್ಲ, ಏಕೆಂದರೆ ಮೀನು ಹಿಟ್ಟು ಅಥವಾ ಮೀನು ಎಣ್ಣೆಯಂಥ, ಇತರ ಮೀನುಗಳಿಂದ ಬರುವ ಉತ್ಪನ್ನಗಳನ್ನು ಅವು ತಿನ್ನಬೇಕಾಗಿ ಬರುತ್ತದೆ. ಅಧ್ಯಯನಗಳು ತೋರಿಸಿರುವ ಪ್ರಕಾರ, ಸಾಲ್ಮನ್ ಸಾಕುವಿಕೆಯು ಸಾಕಿರದ ಸಾಲ್ಮನ್ಗಳ ಮೇಲೆ ಪ್ರಮುಖವಾದ ಋಣಾತ್ಮಕ ಪ್ರಭಾವಗಳನ್ನು ಹೊಂದಿದೆ; ಅಷ್ಟೇ ಅಲ್ಲ, ಸಾಲ್ಮನ್ಗಳನ್ನು ಪೋಷಿಸಲು ಅಗತ್ಯವಾಗಿ ಹಿಡಿಯಬೇಕಿರುವ ಮೇವು ಮೀನುಗಳ ಮೇಲೂ ಅದು ಋಣಾತ್ಮಕ ಪ್ರಭಾವಗಳನ್ನು ಹೊಂದಿದೆ.[೫೫][೫೬] ಆಹಾರ ಸರಪಳಿಯ ಮೇಲೆ ಉನ್ನತ ಸ್ಥಾನದಲ್ಲಿರುವ ಮೀನುಗಳು ಆಹಾರ ಶಕ್ತಿಯ ಕಡಿಮೆ ಪರಿಣಾಮಕಾರಿ ಮೂಲಗಳಾಗಿವೆ.
ಮೀನು ಹಾಗೂ ಇಂಚಾಕಗಳನ್ನು ಹೊರತುಪಡಿಸಿ, ಕಡಲಕಳೆ ಮತ್ತು ಸಿಂಪಿಗಳು, ಮಳಿ ಮೃದ್ವಂಗಿಗಳು, ಶಂಬೂಕಗಳು ಮತ್ತು ಇಚ್ಚಿಪ್ಪು ಮೀನುಗಳಂಥ ಸೋಸುಗದಿಂದ-ಪೋಷಿಸಲ್ಪಡುವ ಎರಡು ಚಿಪ್ಪುಗಳ ಮೃದ್ವಂಗಿಗಳಂಥ ಕೆಲವೊಂದು ಜಲಚರ ಸಾಕಣೆ ಕಾರ್ಯಗಳು ತುಲನಾತ್ಮಕವಾಗಿ ಹಾನಿಕರವಲ್ಲದ್ದಾಗಿವೆ ಮತ್ತು ಪರಿಸರೀಯವಾಗಿಯೂ ಪುನಶ್ಚೈತನ್ಯಕಾರಿಯಾಗಿವೆ.[೧೫] ಸೋಸುಗ-ಪೋಷಕಗಳು ಮಾಲಿನ್ಯಕಾರಕಗಳನ್ನಷ್ಟೇ ಅಲ್ಲದೇ ನೀರಿನಿಂದ ಬರುವ ಪೌಷ್ಟಿಕ ದ್ರವ್ಯಗಳನ್ನು ಸೋಸುತ್ತವೆಯಾದ್ದರಿಂದ ನೀರಿನ ಗುಣಮಟ್ಟವು ಸುಧಾರಿಸುತ್ತವೆ.[೫೭] ಅಕಾರ್ಬನಿಕ ಸಾರಜನಕ ಮತ್ತು ರಂಜಕದಂಥ ಪೌಷ್ಟಿಕ ದ್ರವ್ಯಗಳನ್ನು ಕಡಲಕಳೆಗಳು ನೀರಿನಿಂದ[೨೭] ನೇರವಾಗಿ ತೆಗೆಯುತ್ತವೆ ಮತ್ತು ಸೋಸುಗದಿಂದ-ಪೋಷಿಸಲ್ಪಡುವ ಮೃದ್ವಂಗಿಗಳು ತೇಲುಸಸ್ಯ ಮತ್ತು ಅವಶೇಷದಂಥ ಪೃಥಕ್ಕಣ ದ್ರವ್ಯಗಳನ್ನು ಸೇವಿಸುತ್ತವೆಯಾದ್ದರಿಂದ, ಅವು ಪೌಷ್ಟಿಕ ದ್ರವ್ಯಗಳ ಸಾರವನ್ನು ತೆಗೆಯಬಲ್ಲವಾಗಿರುತ್ತವೆ.[೫೮]
ಜಲಚರ ಸಾಕಣೆಗೆ ಸಂಬಂಧಿಸಿದ ಕೆಲವೊಂದು ಲಾಭದಾಯಕ ಸಹಕಾರ ಸಂಸ್ಥೆಗಳು ಸಮರ್ಥನೀಯ ಪರಿಪಾಠಗಳನ್ನು ಉತ್ತೇಜಿಸುತ್ತವೆ.[೫೯] ಮೀನಿನ ಒತ್ತಡವನ್ನು ಕನಿಷ್ಟಗೊಳಿಸುವಿಕೆ, ಬಲೆಯ ದೊಡ್ಡಿಗಳ ಕಳೆತೆಗೆಯಲು ಪಾಡುಬಿಡುವಿಕೆ, ಮತ್ತು ಸಂಯೋಜಿಸಲ್ಪಟ್ಟ ಕೀಟ ನಿರ್ವಹಣೆಯನ್ನು ಅನ್ವಯಿಸುವುದರ ಮೂಲಕ, ಹೊಸ ವಿಧಾನಗಳು ಜೀವಿವಿಜ್ಞಾನದ ಹಾಗೂ ರಾಸಾಯನಿಕ ಮಾಲಿನ್ಯದ ಅಪಾಯವನ್ನು ತಗ್ಗಿಸುತ್ತವೆ. ಕಾಯಿಲೆ ನಿಯಂತ್ರಣಕ್ಕೆ ಸಂಬಂಧಿಸಿದಂತಿರುವ ಪ್ರತಿಜೀವಕದ ಬಳಕೆಯನ್ನು ತಗ್ಗಿಸಲು ಹೆಚ್ಚು ಹೆಚ್ಚು ಲಸಿಕೆಗಳು ಬಳಸಲ್ಪಡುತ್ತಿವೆ.[೬೦]
ತೀರದಲ್ಲಿರುವ ಮರುಪ್ರಸರಣಗೊಳ್ಳುವ ಜಲಚರ ಸಾಕಣೆ ವ್ಯವಸ್ಥೆಗಳು, ಬಹುಕೃಷಿ ಕೌಶಲಗಳನ್ನು ಬಳಸಿಕೊಳ್ಳುತ್ತಿರುವ ಸೌಕರ್ಯಗಳು, ಮತ್ತು ಸೂಕ್ತವಾಗಿ-ನೆಲೆ ಕಲ್ಪಿಸಲಾದ ಸೌಲಭ್ಯಗಳು (ಉದಾಹರಣೆಗೆ, ಪ್ರಬಲವಾದ ಹರಿವುಗಳೊಂದಿಗಿನ ಕಡಲತೀರದಾಚೆಯ ಪ್ರದೇಶಗಳು) ಋಣಾತ್ಮಕ ಪರಿಸರೀಯ ಪ್ರಭಾವಗಳನ್ನು ನಿರ್ವಹಿಸುವಲ್ಲಿನ ವಿಧಾನಗಳ ಉದಾಹರಣೆಗಳಾಗಿವೆ.
ಇವನ್ನೂ ನೋಡಿ
ಟಿಪ್ಪಣಿಗಳು
- ↑ ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ ಆಫ್ ಆಕ್ವಾಕಲ್ಚರ್
- ↑ ಆಕ್ವಾಕಲ್ಚರ್'ಸ್ ಗ್ರೋತ್ ಕಂಟಿನ್ಯೂಯಿಂಗ್: ಇಂಪ್ರೂವ್ಡ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಕೆನ್ ರೆಡ್ಯೂಸ್ ಎನ್ವಿರಾನ್ಮೆಂಟಲ್ ಎಫೆಕ್ಟ್ಸ್ ಆಫ್ ದಿ ಪ್ರಾಕ್ಟೀಸ್.(UPDATE).” ಸಂಪನ್ಮೂಲ: ಎಂಜಿನಿಯರಿಂಗ್ & ಟೆಕ್ನಾಲಜಿ ಫಾರ್ ಎ ಸಸ್ಟೇನಬಲ್ ವರ್ಲ್ಡ್ 16.5 (2009): 20-22. ಗೇಲ್ ಎಕ್ಸ್ಪ್ಯಾಂಡೆಡ್ ಅಕಾಡೆಮಿಕ್ ASAP. ವೆಬ್. 1 ಅಕ್ಟೋಬರ್ 2009. <http://find.galegroup.com/gtx/start.do?prodId=EAIM.>.
- ↑ ಅಮೆರಿಕನ್ ಹೆರಿಟೇಜ್ ಡೆಫನಿಷನ್ ಫಾರ್ ಆಕ್ವಾಕಲ್ಚರ್
- ↑ ಹಾಫ್ ಆಫ್ ಫಿಶ್ ಕನ್ಸ್ಯೂಮ್ಡ್ ಗ್ಲೋಬಲಿ ಈಸ್ ನೌ ರೈಸ್ಡ್ ಆನ್ ಫಾರ್ಮ್ಸ್, ಸ್ಟಡಿ ಫೈಂಡ್ಸ್ ಸೈನ್ಸ್ ಡೈಲಿ , ಸೆಪ್ಟೆಂಬರ್ 8, 2009.
- ↑ ಅಬೋರಿಗಿನ್ಸ್ ಮೆ ಹ್ಯಾವ್ ಫಾರ್ಮ್ಡ್ ಈಲ್ಸ್, ಬಿಲ್ಟ್ ಹಟ್ಸ್ ABC ಸೈನ್ಸ್ ನ್ಯೂಸ್, 13 ಮಾರ್ಚ್ 2003.
- ↑ ಲೇಕ್ ಕೊಂಡಾಹ್ ಸಸ್ಟೇನಬಿಲಿಟಿ ಪ್ರಾಜೆಕ್ಟ್ 2010ರ ಫೆಬ್ರುವರಿ 18ರಂದು ಮರು ಸಂಪಾದಿಸಲಾಯಿತು.
- ↑ "History of Aquaculture". Food and Agriculture Organization, United Nations. Retrieved August 23, 2009.
- ↑ "The Harbor and Fishery Remains at Cosa, Italy, by Anna Marguerite McCann". Journal of Field Archaeology 6(4):291-311. Retrieved 10 September 2009.
- ↑ ಝಿಂಗ್ರಾನ್, V.G., ಇಂಟ್ರಡಕ್ಷನ್ ಟು ಆಕ್ವಾಕಲ್ಚರ್. 1987, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ, ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ, ನೈಜೀರಿಯನ್ ಇನ್ಸ್ಟಿಟ್ಯೂಟ್ ಫಾರ್ ಓಷನೋಗ್ರಫಿ ಅಂಡ್ ಮೆರೈನ್ ರಿಸರ್ಚ್.
- ↑ ಮಿಲ್ನರ್, ಜೇಮ್ಸ್ W. (1874). "ದಿ ಪ್ರೋಗ್ರೆಸ್ ಆಫ್ ಫಿಶ್-ಕಲ್ಚರ್ ಇನ್ ದಿ ಯುನೈಟೆಡ್ ಸ್ಟೇಟ್ಸ್". 1872 ಮತ್ತು 1873ಕ್ಕೆ ಸಂಬಂಧಿಸಿದ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಮೀನು ಮತ್ತು ಮೀನುಗಾರಿಕಾ ಕೇಂದ್ರಗಳ ಆಯೋಗದ ಆಯುಕ್ತರ ವರದಿ. 535 – 544 <http://penbay.org/cof/cof_1872_1873.html>
- ↑ ಪೀಟರ್ ನ್ಯೂಷಲ್, ಸೀವೀಡ್ ಫಾರ್ ವಾರ್: ಕ್ಯಾಲಿಫೋರ್ನಿಯಾ'ಸ್ ವರ್ಲ್ಡ್ ವಾರ್ I ಕೆಲ್ಪ್ ಇಂಡಸ್ಟ್ರಿ, ಟೆಕ್ನಾಲಜಿ ಅಂಡ್ ಕಲ್ಚರ್ 30 (ಜುಲೈ 1989), 561-583.
- ↑ http://www.sciencemag.org/cgi/content/full/sci;316/5823/382
- ↑ Guns, Germs, and Steel. New York, New York: W.W. Norton & Company, Inc. 2005. ISBN 978-0-393-06131-4.
- ↑ "'FAO: 'ಫಿಶ್ ಫಾರ್ಮಿಂಗ್ ಈಸ್ ದಿ ವೇ ಫಾರ್ವರ್ಡ್.'(ಬಿಗ್ ಪಿಕ್ಚರ್)(ಫುಡ್ ಅಂಡ್ ಅಗ್ರಿಕಲ್ಚರ್ ಅಡ್ಮಿನಿಸ್ಟರೇಷನ್'ಸ್ 'ಸ್ಟೇಟ್ ಆಫ್ ಫಿಶರೀಸ್ ಅಂಡ್ ಆಕ್ವಾಕಲ್ಚರ್' ರಿಪೋರ್ಟ್)." ದಿ ಇಕಾಲಜಿಸ್ಟ್ 39.4 (2009): 8-9. ಗೇಲ್ ಎಕ್ಸ್ಪ್ಯಾಂಡೆಡ್ ಅಕಡೆಮಿಕ್ ASAP. ವೆಬ್. 1 ಅಕ್ಟೋಬರ್ 2009. <http://find.galegroup.com/gtx/start.do?prodId=EAIM.>.
- ↑ ೧೫.೦ ೧೫.೧ "ದಿ ಕೇಸ್ ಫಾರ್ ಫಿಶ್ ಅಂಡ್ ಆಯಿಸ್ಟರ್ ಫಾರ್ಮಿಂಗ್," ಕಾರ್ಲ್ ಮಾರ್ಜಿಯಾಲಿ, ಯೂನಿವರ್ಸಿಟಿ ಆಫ್ ಸದರ್ನ್ ಕ್ಯಾಲಿಫೋರ್ನಿಯಾ, ಟ್ರೋಜನ್ ಫ್ಯಾಮಿಲಿ ಮ್ಯಾಗಝೀನ್, ಮೇ 17, 2009.
- ↑ ೧೬.೦ ೧೬.೧ ೧೬.೨ ೧೬.೩ ೧೬.೪ FAO (2006) ದಿ ಸ್ಟೇಟ್ ಆಫ್ ವರ್ಲ್ಡ್ ಫಿಶರೀಸ್ ಅಂಡ್ ಆಕ್ವಾಕಲ್ಚರ್ (SOPHIA)
- ↑ ವೈರ್ಡ್ 12.05: ದಿ ಬ್ಲ್ಯೂವಾಟರ್ ರೆವಲ್ಯೂಷನ್
- ↑ washingtonpost.com: ಫಿಶ್ ಫಾರ್ಮಿಂಗ್'ಸ್ ಬೌಂಟಿ ಈಸ್ ನಾಟ್ ವಿಥೌಟ್ ಬಾರ್ಬ್ಸ್
- ↑ [೧]
- ↑ ದಿ ಸ್ಟೇಟ್ ಆಫ್ ವರ್ಲ್ಡ್ ಫಿಶರೀಸ್ ಅಂಡ್ ಆಕ್ವಾಕಲ್ಚರ್ (SOFIA) 2004
- ↑ ವಾಟ್ಸನ್, ರೆಗ್ ಮತ್ತು ಪಾಲಿ, ಡೇನಿಯೆಲ್ (2001) ಸಿಸ್ಟಮ್ಯಾಟಿಕ್ ಡಿಸ್ಟಾರ್ಷನ್ಸ್ ಇನ್ ವರ್ಲ್ಡ್ ಫಿಶರೀಸ್ ಕ್ಯಾಚ್ ಟ್ರೆಂಡ್ಸ್ ನೇಚರ್ ಗೆ ಬರೆದ ಪತ್ರ, 414: 534.
- ↑ ಪಿಯರ್ಸನ್, ಹೆಲೆನ್ (2001) ಚೈನಾ ಕಾಟ್ ಔಟ್ ಆಸ್ ಮಾಡೆಲ್ ಷೋಸ್ ನೆಟ್ ಫಾಲ್ ಇನ್ ಫಿಶ್ ನೇಚರ್ 414, 477. doi 10.1038/35107216
- ↑ ಹೆಲಿಪ್ರಿನ್, ಜಾನ್ (2001) ಚೈನೀಸ್ ಮಿಸ್ರಿಪೋರ್ಟಿಂಗ್ ಮಾಸ್ಕ್ಸ್ ಡ್ರಮಾಟಿಕ್ ಡಿಕ್ಲೈನ್ ಇನ್ ಓಷನ್ ಫಿಶ್ ಕ್ಯಾಚಸ್ ಅಸೋಸಿಯೇಟೆಡ್ ಪ್ರೆಸ್ , 29 ನವೆಂಬರ್ 2001.
- ↑ ರೆವಿಲ್ಲೆ, ವಿಲಿಯಂ (2002) ಸಮ್ಥಿಂಗ್ ಫಿಶಿ ಎಬೌಟ್ ದಿ ಫಿಗರ್ಸ್ ದಿ ಐರಿಶ್ ಟೈಮ್ಸ್ , 14 ಮಾರ್ಚ್ 2002
- ↑ ಚೈನಾ ಡಿಸ್ಪ್ಯೂಟ್ಸ್ ಕ್ಲೇಮ್ ಇಟ್ ಓವರ್ ರಿಪೋರ್ಟ್ಸ್ ಫಿಶ್ ಕ್ಯಾಚ್ ಅಸೋಸಿಯೇಟ್ ಪ್ರೆಸ್ , 17 ಡಿಸೆಂಬರ್ 2002.
- ↑ FAO (2006) ದಿ ಸ್ಟೇಟ್ ಆಫ್ ವರ್ಲ್ಡ್ ಫಿಶರೀಸ್ ಅಂಡ್ ಆಕ್ವಾಕಲ್ಚರ್ (SOPHIA), ಪುಟ 5.
- ↑ ೨೭.೦ ೨೭.೧ ಚಾಪಿನ್ T, ಬುಚ್ಮನ್ AH, ಹಾಲಿಂಗ್ C, ಟ್ರೋಯೆಲ್ M, ಕೌಟ್ಸ್ಕಿ N, ನಿಯೋರಿ A, ಕ್ರೇಮರ್ GP, ಝೆರ್ಟುಷೆ-ಗೊನ್ಜಾಲೆಜ್ JA, ಯಾರಿಶ್ C and ನೀಫಸ್ C. 2001. ಇಂಟಿಗ್ರೇಟಿಂಗ್ ಸೀವೀಡ್ಸ್ ಇನ್ಟು ಮೆರೈನ್ ಆಕ್ವಾಕಲ್ಚರ್ ಸಿಸ್ಟಮ್ಸ್: ಎ ಕೀ ಟುವರ್ಡ್ ಸಸ್ಟೇನಬಿಲಿಟಿ. ಜರ್ನಲ್ ಆಫ್ ಫೈಕಾಲಜಿ 37: 975-986. ಉಲ್ಲೇಖ ದೋಷ: Invalid
<ref>
tag; name "Chopin et al. 2001" defined multiple times with different content - ↑ ೨೮.೦ ೨೮.೧ ಚಾಪಿನ್ T. 2006. ಇಂಟಿಗ್ರೇಟೆಡ್ ಮಲ್ಟಿ-ಟ್ರೋಫಿಕ್ ಆಕ್ವಾಕಲ್ಚರ್. ವಾಟ್ ಇಟ್ ಈಸ್, ಅಂಡ್ ವೈ ಯು ಷುಡ್ ಕೇರ್... ಅಂಡ್ ಡೋಂಟ್ ಕನ್ಫ್ಯೂಸ್ ಇಟ್ ವಿತ್ ಪಾಲಿಕಲ್ಚರ್. ನಾರ್ದರ್ನ್ ಆಕ್ವಾಕಲ್ಚರ್, ಸಂಪುಟ 12, ಸಂಖ್ಯೆ 4, ಜುಲೈ/ಆಗಸ್ಟ್ 2006, ಪುಟ 4.
- ↑ ೨೯.೦ ೨೯.೧ ನಿಯೋರಿ A, ಚಾಪಿನ್ T, ಟ್ರೋಯೆಲ್ M, ಬುಚ್ಮನ್ AH, ಕ್ರೇಮರ್ GP, ಹಾಲಿಂಗ್ C, ಶ್ಪೈಗೆಲ್ M ಮತ್ತು ಯಾರಿಶ್ C. 2004. ಇಂಟಿಗ್ರೇಟೆಡ್ ಆಕ್ವಾಕಲ್ಚರ್: ರ್ಯಾಷನೇಲ್, ಎವಲ್ಯೂಷನ್ ಅಂಡ್ ಸ್ಟೇಟ್ ಆಫ್ ದಿ ಆರ್ಟ್ ಎಂಫಸೈಝಿಂಗ್ ಸೀವೀಡ್ ಬಯೋಫಿಲ್ಟರೇಷನ್ ಇನ್ ಮಾಡರ್ನ್ ಮೆರಿಕಲ್ಚರ್. ಆಕ್ವಾಕಲ್ಚರ್ 231: 361-391.
- ↑ McAvoy, Audrey (October 24, 2009). "Hawaii regulators approve first US tuna farm". The Associated Press. Retrieved April 9, 2010.
{{cite web}}
: Italic or bold markup not allowed in:|publisher=
(help) - ↑ ವೋಲ್ಪ್, J. (2005) "ಡಾಲರ್ಸ್ ವಿಥೌಟ್ ಸೆನ್ಸ್: ದಿ ಬೇಟ್ ಫಾರ್ ಬಿಗ್-ಮನಿ ಟ್ಯೂನಾ ರ್ಯಾಂಚಿಂಗ್ ಅರೌಂಡ್ ದಿ ವರ್ಲ್ಡ್". ಬಯೋಸೈನ್ಸ್ , 55 :301–302.
- ↑ ದಿ ಟಾಪ್ 10 ಎವೆರಿಥಿಂಗ್ ಆಫ್ 2009: ಟಾಪ್ 10 ಸೈಂಟಿಫಿಕ್ ಡಿಸ್ಕವರೀಸ್: 5. ಬ್ರೀಡಿಂಗ್ ಟ್ಯೂನಾ ಆನ್ ಲ್ಯಾಂಡ್, ಟೈಮ್ ಮ್ಯಾಗಝೀನ್, ಡಿಸೆಂಬರ್ 8, 2009
- ↑ "Abalone Farming Information". Retrieved 2007-11-08.
- ↑ "Abalone Farming on a Boat". Retrieved 2007-01-27.
- ↑ ನ್ಯೂ, M. B.: ಫಾರ್ಮಿಂಗ್ ಫ್ರೆಶ್ವಾಟರ್ ಪ್ರಾನ್ಸ್ ; FAO ಫಿಶರೀಸ್ ಟೆಕ್ನಿಕಲ್ ಪೇಪರ್ 428, 2002. ISSN 0429-9345.
- ↑ ಸಿಹಿನೀರಿನ ಕಠಿಣಚರ್ಮಿಗಳಿಗೆ ಸಂಬಂಧಿಸಿದಂತೆ FAO ಫಿಶರೀಸ್ ಗ್ಲೋಬಲ್ ಆಕ್ವಾಕಲ್ಚರ್ ಪ್ರೊಡಕ್ಷನ್ ಡೇಟಾಬೇಸ್ನಿಂದ ಪಡೆಯಲಾದ ದತ್ತಾಂಶ. ತೀರಾ ಇತ್ತೀಚಿನ ದತ್ತಾಂಶ ಜೋಡಿಗಳು 2003ಕ್ಕೆ ಸಂಬಂಧಿಸಿವೆ ಮತ್ತು ಕೆಲವೊಮ್ಮೆ ಅಂದಾಜುಗಳನ್ನು ಅವು ಒಳಗೊಂಡಿರುತ್ತವೆ. 2005ರ ಜೂನ್ 28ರಂದು ಮರುಸಂಪಾದಿಸಲಾಯಿತು.
- ↑ Ess, Charlie. "Wild product's versatility could push price beyond $2 for Alaska dive fleet". National Fisherman. Retrieved 2008-08-01.
- ↑ ಡೈಮಂಡ್, ಜೇರ್ಡ್. ಕೊಲ್ಯಾಪ್ಸ್: ಹೌ ಸೊಸೈಟೀಸ್ ಚೂಸ್ ಟು ಫೇಲ್ ಆರ್ ಸಕ್ಸೀಡ್. ವೈಕಿಂಗ್ ಪ್ರೆಸ್, 2005. ಪುಟಗಳು 479-485
- ↑ ಕೋಸ್ಟಾ-ಪಿಯರ್ಸ್, B.A., ಲೇಖಕ/ಸಂಪಾದಕ. 2002. ಇಕಲಾಜಿಕಲ್ ಆಕ್ವಾಕಲ್ಚರ್. ಬ್ಲ್ಯಾಕ್ವೆಲ್ ಸೈನ್ಸ್, ಆಕ್ಸ್ಫರ್ಡ್, UK.
- ↑ ವೇಕ್ ಫಾರೆಸ್ಟ್ ಯೂನಿವರ್ಸಿಟಿ ಬ್ಯಾಪ್ಟಿಸ್ಟ್ ಮೆಡಿಕಲ್ ಸೆಂಟರ್ (2008, ಜುಲೈ 10). ಪಾಪ್ಯುಲರ್ ಫಿಶ್, ಟಿಲಾಪಿಯಾ, ಕಂಟೈನ್ಸ್ ಪೊಟೆನ್ಷಿಯಲಿ ಡೇಂಜರಸ್ ಫ್ಯಾಟಿ ಆಸಿಡ್ ಕಾಂಬಿನೇಷನ್ . ಸೈನ್ಸ್ಡೈಲಿ www.sciencedaily.comನಿಂದ 2008ರ ಜುಲೈ 11ರಂದು ಮರುಸಂಪಾದಿಸಲಾಯಿತು
- ↑ ಎಸ್ಪೆ, M., A. ಲೆಮ್ಮೆ, A. ಪೆಟೀ, ಮತ್ತು A. ಎಲ್-ಮೊವಾಫಿ. 2006. ಕೆನ್ ಅಟ್ಲಾಂಟಿಕ್ ಸಾಲ್ಮನ್ (ಸಾಲ್ಮೋ ಸಾಲಾರ್ ) ಗ್ರೋ ಆನ್ ಡಯೆಟ್ಸ್ ಡಿವಾಯ್ಡ್ ಆಫ್ ಫೀಶ್ ಮೀಲ್? ಆಕ್ವಾಕಲ್ಚರ್ 255:255-262
- ↑ ಸ್ವಿಸ್ಸ್ವಿಸ್ WWF ಫ್ಯಾಕ್ಟ್ಷೀಟ್, ಪುಟ 7, ಹೆಡಿಂಗ್ "ಫಿಶೆ ಅಂಡ್ ಮೀರೆಸ್ಫ್ರಕ್ಟೆ ಔಸ್ ಝುಕ್ಟೆನ್"
- ↑ ೪೩.೦ ೪೩.೧ ಸೀಫುಡ್ ಚಾಯ್ಸಸ್ ಅಲೈಯನ್ಸ್ (2005) ಇಟ್ಸ್ ಆಲ್ ಎಬೌಟ್ ಸಾಲ್ಮನ್
- ↑ ಡೇವಿಡ್ ಸುಝುಕಿ ಫೌಂಡೇಷನ್: ಓಪನ್-ನೆಟ್-ಕೇಜ್ ಫಿಶ್ ಫಾರ್ಮಿಂಗ್
- ↑ "'ಆಕ್ವಾಕಲ್ಚರ್'ಸ್ ಗ್ರೋತ್ ಕಂಟಿನ್ಯೂಯಿಂಗ್: ಇಂಪ್ರೂವ್ಡ್ ಮ್ಯಾನೇಜ್ಮೆಂಟ್ ಟೆಕ್ನಿಕ್ಸ್ ಕೆನ್ ರೆಡ್ಯೂಸ್ ಎನ್ವಿರಾನ್ಮೆಂಟಲ್ ಎಫೆಕ್ಟ್ಸ್ ಆಫ್ ದಿ ಪ್ರಾಕ್ಟಿಸ್.(UPDATE)." ಮೂಲ: ಎಂಜಿನಿಯರಿಂಗ್ & ಟೆಕ್ನಾಲಜಿ ಫಾರ್ ಎ ಸಸ್ಟೇನಬಲ್ ವರ್ಲ್ಡ್ 16.5 (2009): 20-22. ಗೇಲ್ ಎಕ್ಸ್ಪ್ಯಾಂಡೆಡ್ ಅಕಾಡೆಮಿಕ್ ASAP. ವೆಬ್. 1 ಅಕ್ಟೋಬರ್ 2009. <http://find.galegroup.com/gtx/start.do?prodId=EAIM.>.
- ↑ ಹೀರೋಸ್ ಆಫ್ ಎನ್ವಿರಾನ್ಮೆಂಟ್ 2008: ಜರ್ಗೆನ್ನೆ ಪ್ರೈಮಾವೆರಾ ಟೈಮ್ ವಿಶೇಷ ವರದಿ. 2009ರ ಸೆಪ್ಟೆಂಬರ್ 24.
- ↑ ನಿಕರ್ಸನ್ DJ (1999) "ಟ್ರೇಡ್-ಆಫ್ಸ್ ಆಫ್ ಮ್ಯಾಂಗ್ರೂವ್ ಏರಿಯಾ ಡೆವಲಪ್ಮೆಂಟ್ ಇನ್ ದಿ ಫಿಲಿಪ್ಪೀನ್ಸ್" ಇಕಾಲ್. ಇಕಾನ್. 28 (2):279-298.
- ↑ ಗುಣವರ್ಧನ1 M ಮತ್ತು ರೋವನ್ JS (2005) ಇಕನಾಮಿಕ್ ವ್ಯಾಲ್ಯುಯೇಷನ್ ಆಫ್ ಎ ಮ್ಯಾಂಗ್ರೂವ್ ಇಕೋಸಿಸ್ಟಮ್ ಥ್ರೆಟನ್ಡ್ ಬೈ ಶ್ರಿಂಪ್ ಆಕ್ವಾಕಲ್ಚರ್ ಇನ್ ಶ್ರೀಲಂಕಾ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ , 36 (4)535-550.
- ↑ ಹಿನ್ರಿಕ್ಸೆನ್ D (1998) ಕೋಸ್ಟಲ್ ವಾಟರ್ಸ್ ಆಫ್ ದಿ ವರ್ಲ್ಡ್: ಟ್ರೆಂಡ್ಸ್, ಥ್ರೆಟ್ಸ್, ಅಂಡ್ ಸ್ಟ್ರಾಟಜೀಸ್ ಐಲೆಂಡ್ ಪ್ರೆಸ್. ISBN 1-55963-383-2
- ↑ ಮೀಟ್ ಅಂಡ್ ಫಿಶ್ AAAS ಅಟ್ಲಾಸ್ ಆಫ್ ಪಾಪ್ಯುಲೇಶನ್ ಅಂಡ್ ಎನ್ವಿರಾನ್ಮೆಂಟ್. 2010ರ ಜನವರಿ 4ರಂದು ಮರುಸಂಪಾದಿಸಲಾಯಿತು.
- ↑ FAO: ಕಲ್ಚರ್ಡ್ ಅಕ್ವಾಟಿಕ್ ಸ್ಪೀಷೀಸ್ ಇನ್ಫರ್ಮೇಷನ್ ಪ್ರೋಗ್ರ್ಯಾಮ್: ಒಂಕೊರೈಂಕಸ್ ಕಿಸುಟ್ಚ್ (ವಾಲ್ಬೌಮ್, 1792) ರೋಮ್. 2009ರ ಮೇ 8ರಂದು ಮರು ಸಂಪಾದಿಸಲಾಯಿತು.
- ↑ ಮೆಕ್ಲಿಯೋಡ್ C, J ಗ್ರೈಸ್, H ಕ್ಯಾಂಪ್ಬೆಲ್ ಮತ್ತು T ಹರ್ಲೆತ್ (2006) ಸೂಪರ್ ಸೂಪರ್ ಸಾಲ್ಮನ್: ದಿ ಇಂಡಸ್ಟ್ರಿಯಲೈಸೇಷನ್ ಆಫ್ ಫಿಶ್ ಫಾರ್ಮಿಂಗ್ ಅಂಡ್ ದಿ ಡ್ರೈವ್ ಟುವರ್ಡ್ಸ್ GM ಟೆಕ್ನಾಲಜೀಸ್ ಇನ್ ಸಾಲ್ಮನ್ ಪ್ರೊಡಕ್ಷನ್ CSaFe, ಡಿಸ್ಕಷನ್ ಪೇಪರ್ 5, ಯೂನಿವರ್ಸಿಟಿ ಆಫ್ ಒಟ್ಯಾಗೊ.
- ↑ ಡೆಲ್ವಿನ್ RH, ಡಿ'ಆಂಡ್ರೇಡ್ M, ಉಹ್ M ಮತ್ತು ಬಿಯಾಗಿ CA (2004) "ಪಾಪ್ಯುಲೇಷನ್ ಎಫೆಕ್ಟ್ಸ್ ಆಫ್ ಗ್ರೋತ್ ಹಾರ್ಮೋನ್ ಟ್ರಾನ್ಸ್ಜೆನಿಕ್ ಕೊಹೊ ಸಾಲ್ಮನ್ ಡಿಪೆಂಡ್ ಆನ್ ಫುಡ್ ಅವೈಲಬಲಬಿಲಿಟಿ ಅಂಡ್ ಜೀನೋಟೈಪ್ ಬೈ ಎನ್ವಿರಾನ್ಮೆಂಟ್ ಇಂಟರಾಕ್ಷನ್ಸ್", ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ , 101 (25)9303-9308.
- ↑ ಟಯೆಟೆನ್ಬರ್ಗ್ TH (2006) ಎನ್ವಿರಾನ್ಮೆಂಟಲ್ ಅಂಡ್ ನ್ಯಾಚುರಲ್ ರಿಸೋರ್ಸ್ ಇಕನಾಮಿಕ್ಸ್: ಎ ಕಾಂಟೆಂಪರರಿ ಅಪ್ರೋಚ್ . ಪುಟ 28. ಪಿರಸ್ಸನ್/ಅಡಿಸನ್ ವೆಸ್ಲೆ. ISBN 9780321305046
- ↑ ಕ್ನ್ಯಾಪ್ G, ರೊಹೀಮ್ CA ಮತ್ತು ಆಂಡರ್ಸನ್ JL (2007) ದಿ ಗ್ರೇಟ್ ಸಾಲ್ಮನ್ ರನ್: ಕಾಂಪಿಟಿಷನ್ ಬಿಟ್ವೀನ್ ವೈಲ್ಡ್ ಅಂಡ್ ಫಾರ್ಮ್ಡ್ ಸಾಲ್ಮನ್ ವರ್ಲ್ಡ್ ವೈಲ್ಡ್ಲೈಫ್ ಫಂಡ್. ISBN 0-89164-175-0
- ↑ ವಾಷಿಂಗ್ಟನ್ ಪೋಸ್ಟ್. ಸಾಲ್ಮನ್ ಫಾರ್ಮಿಂಗ್ ಮೆ ಡೂಮ್ ವೈಲ್ಡ್ ಪಾಪ್ಯುಲೇಷನ್ಸ್, ಸ್ಟಡಿ ಸೇಸ್.
- ↑ OSTROUMOV S. A. (2005). "Some aspects of water filtering activity of filter-feeders". Hydrobiologia. 542: 400. Retrieved September 26, 2009.
- ↑ "Environmental impacts of shellfish aquaculture" (PDF). 2008. Retrieved 2009-10-08.
- ↑ "Aquaculture: Issues and Opportunities for Sustainable Production and Trade". ITCSD. July 2006.
- ↑ "ಪ್ಯೂ ಓಷನ್ಸ್ ಕಮಿಷನ್ ರಿಪೋರ್ಟ್ ಆನ್ ಆಕ್ವಾಕಲ್ಚರ್"
ಆಕರಗಳು
- ಕೋರ್ಸೀಗಡಿ, K.E., ಆರ್ಮ್ಸ್ಟ್ರಾಂಗ್, D.A., 1983. ರಿಮೂವಲ್ ಆಫ್ ನೈಟ್ರೋಜನ್ ಬೈ ಆನ್ ಅಕ್ವಾಟಿಕ್ ಪ್ಲಾಂಟ್, ಇಲೋಡಿಯಾ ಡೆನ್ಸಾ , ಇನ್ ರೀಸರ್ಕ್ಯುಲೇಟಿಂಗ್ ಮ್ಯಾಕ್ರೋಬ್ರಾಕಿಯಂ ಕಲ್ಚರ್ ಸಿಸ್ಟಮ್ಸ್. ಆಕ್ವಾಕಲ್ಚರ್ 32, 347-360.
- ಡುವಾರ್ಟೆ, ಕಾರ್ಲೋಸ್ M; ಮಾರ್ಬಾ, ನೂರಿಯಾ ಮತ್ತು ಹೋಮರ್, ಮೇರಿಯಾನ್ನೆ (2007) ರ್ಯಾಪಿಡ್ ಡೊಮೆಸ್ಟಿಕೇಷನ್ ಆಫ್ ಮೆರೈನ್ ಸ್ಪೀಷೀಸ್. ಸೈನ್ಸ್. ಸಂಪುಟ 316, ಸಂಖ್ಯೆ 5823, ಪುಟಗಳು 382–383. ಪಾಡ್ಕ್ಯಾಸ್ಟ್
- J. G. ಫೆರೀರಾ, A.J.S. ಹಾಕಿನ್ಸ್, S.B. ಬ್ರಿಕರ್, 2007. ಮ್ಯಾನೇಜ್ಮೆಂಟ್ ಆಫ್ ಪ್ರೊಡಕ್ಟಿವಿಟಿ, ಎನ್ವಿರಾನ್ಮೆಂಟಲ್ ಎಫೆಕ್ಟ್ಸ್ ಅಂಡ್ ಪ್ರಾಫಿಟಬಿಲಿಟಿ ಆಫ್ ಷೆಲ್ಫಿಶ್ ಆಕ್ವಾಕಲ್ಚರ್ – ದಿ ಫಾರ್ಮ್ ಆಕ್ವಾಕಲ್ಚರ್ ರಿಸೋರ್ಸ್ ಮ್ಯಾನೇಜ್ಮೆಂಟ್ (FARM) ಮಾಡೆಲ್. ಆಕ್ವಾಕಲ್ಚರ್, 264, 160-174.
- GESAMP (2008) ಅಸೆಸ್ಮೆಂಟ್ ಅಂಡ್ ಕಮ್ಯುನಿಕೇಷನ್ ಆಫ್ ಎನ್ವಿರಾನ್ಮೆಂಟಲ್ ರಿಸ್ಕ್ಸ್ ಇನ್ ಕೋಸ್ಟಲ್ ಆಕ್ವಾಕಲ್ಚರ್ FAO ವರದಿಗಳು ಮತ್ತು ಅಧ್ಯಯನಗಳು ಸಂ. 76. ISBN 978-92-5-105947-0
- ಹೆಪ್ಬರ್ನ್, J. 2002. ಟೇಕಿಂಗ್ ಆಕ್ವಾಕಲ್ಚರ್ ಸೀರಿಯಸ್ಲಿ . ಆರ್ಗ್ಯಾನಿಕ್ ಫಾರ್ಮಿಂಗ್, ವಿಂಟರ್ 2002 © ಸಾಯಿಲ್ ಅಸೋಸಿಯೇಷನ್.
- ಕಿನ್ಸೆ, ಡೇರಿನ್, 2006 "'ಸೀಡಿಂಗ್ ದಿ ವಾಟರ್ ಆಸ್ ಅರ್ತ್' : ಎಪಿಸೆಂಟರ್ ಅಂಡ್ ಪೆರಿಫೆರೀಸ್ ಆಫ್ ಎ ಗ್ಲೋಬಲ್ ಆಕ್ವಾಕಲ್ಚರಲ್ ರೆವಲ್ಯೂಷನ್. ಎನ್ವಿರಾನ್ಮೆಂಟಲ್ ಹಿಸ್ಟರಿ 11, 3: 527-66
- ನೇಲರ್, R.L., S.L. ವಿಲಿಯಮ್ಸ್, ಮತ್ತು D.R. ಸ್ಟ್ರಾಂಗ್. 2001. ಆಕ್ವಾಕಲ್ಚರ್ – ಎ ಗೇಟ್ವೇ ಫಾರ್ ಎಕ್ಸಾಟಿಕ್ ಸ್ಪೀಷೀಸ್ . ಸೈನ್ಸ್, 294: 1655-6.
- ಸಾಗರ ವಿಜ್ಞಾನ ಮತ್ತು ನೇಪಿಯರ್ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಸ್ಕಾಟಿಷ್ ಸಂಘ. 2002. ಜಲಚರ ಸಾಕಣೆಯ ಪರಿಸರೀಯ ಪ್ರಭಾವಗಳ ಅವಲೋಕನ ಮತ್ತು ಸಮನ್ವಯ
- ಹಿಗ್ಗಿನ್ಬೊಥಾಮ್ ಜೇಮ್ಸ್ ಪಿಸಿನೇ: ಆರ್ಟಿಫಿಷಿಯಲ್ ಫಿಶ್ಪಾಂಡ್ಸ್ ಇನ್ ರೋಮನ್ ಇಟಲಿ ಯೂನಿವರ್ಸಿಟಿ ಆಫ್ ನಾರ್ತ್ ಕರೋಲಿನಾ ಪ್ರೆಸ್ (ಜೂನ್, 1997)
- ವೈಬಾನ್, ಕರೋಲ್ ಅರಾಕಿ (1992) ಟೈಡ್ ಅಂಡ್ ಕರೆಂಟ್: ಫಿಶ್ಪಾಂಡ್ಸ್ ಆಫ್ ಹವಾಯಿ'ಐ ಯೂನಿವರ್ಸಿಟಿ ಆಫ್ ಹವಾಯಿ ಪ್ರೆಸ್:: ISBN 0-8248-1396-0
- ಟಿಮನ್ಸ್, M.B., ಎಬೆಲಿಂಗ್, J.M., ವೀಟನ್, F.W., ಸಮ್ಮರ್ಫೆಲ್ಟ್, S.T., ವಿನ್ಸಿ, B.J., 2002. ರೀಸರ್ಕ್ಯುಲೇಟಿಂಗ್ ಆಕ್ವಾಕಲ್ಚರ್ ಸಿಸ್ಟಮ್ಸ್: 2ನೇ ಆವೃತ್ತಿ. ಕಾಯುಗಾ ಆಕ್ವಾ ವೆಂಚರ್ಸ್.
- ಪಿಯೆಡ್ರಾಹಿಟಾ, R.H., 2003. ರೆಡ್ಯೂಸಿಂಗ್ ದಿ ಪೊಟೆನ್ಷಿಯಲ್ ಎನ್ವಿರಾನ್ಮೆಂಟಲ್ ಇಂಪ್ಯಾಕ್ಟ್ಸ್ ಆಫ್ ಟ್ಯಾಂಕ್ ಆಕ್ವಾಕಲ್ಚರ್ ಎಫ್ಲುಯೆಂಟ್ಸ್ ಥ್ರೂ ಇಂಟೆನ್ಸಿಫಿಕೇಷನ್ ಅಂಡ್ ರೀಸರ್ಕ್ಯುಲೇಷನ್. ಆಕ್ವಾಕಲ್ಚರ್ 226, 35-44.
- ಕ್ಲಾಸ್, S., ಮೋಜೆಸ್, N., ಲಹಾವ್, O., 2006. ಡೆವಲಪ್ಮೆಂಟ್ ಆಫ್ ಎ ಸಿಂಗಲ್-ಸ್ಲಜ್ ಡೀನೈಟ್ರಿಫಿಕೇಷನ್ ಮೆಥಡ್ ಫಾರ್ ನೈಟ್ರೇಟ್ ರಿಮೂವಲ್ ಫ್ರಂ RAS ಎಫ್ಲುಯೆಂಟ್ಸ್: ಲ್ಯಾಬ್-ಸ್ಕೇಲ್ ರಿಸಲ್ಟ್ಸ್ vs. ಮಾಡೆಲ್ ಪ್ರೆಡಿಕ್ಷನ್. ಆಕ್ವಾಕಲ್ಚರ್ 259, 342-353.
ಹೆಚ್ಚಿನ ಓದಿಗಾಗಿ
- ಆಕ್ವಾಲಿಂಗುವಾ ISBN 82-529-2389-5
- ರೈಸ್-ಫಿಶ್ ಕಲ್ಚರ್ ಇನ್ ಚೈನಾ (1995), ISBN 9780889367760, OCLC 35883297
- ಬರ್ಟ್, B., ರಾಡ್ವೆಲ್, L., & ರಿಚರ್ಡ್ಸ್, J. (2009) "ಇನ್ವೆಸ್ಟಿಗೇಷನ್ ಇನ್ಟು ದಿ ಸಸ್ಟೇನಬಿಲಿಟಿ ಆಫ್ ಆರ್ಗ್ಯಾನಿಕ್ ಆಕ್ವಾಕಲ್ಚರ್ ಆಫ್ ಅಟ್ಲಾಂಟಿಕ್ ಕಾಡ್ (ಗ್ಯಾಡಸ್ ಮೊರ್ಹುವಾ )" ಸಸ್ಟೇನಬಿಲಿಟಿ: ಸೈನ್ಸ್, ಪ್ರಾಕ್ಟೀಸ್ & ಪಾಲಿಸಿ , 5 (2):4-14.
ಬಾಹ್ಯ ಕೊಂಡಿಗಳು
ಈ ಲೇಖನದಲ್ಲಿ ಬಳಸಿದ ಬಾಹ್ಯಸಂಪರ್ಕ ವಿಕಿಪೀಡಿಯದ ನೀತಿ ನಿಯಮಗಳಿಗೆ ಬಾಹಿರವಾಗಿದೆ. |
- ಜಾಗತಿಕ
- Aquaculture ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Aquaculture science ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- FAO (2007) ಮೀಡಿಯಂ-ಟರ್ಮ್ ಚಾಲೆಂಜಸ್ ಅಂಡ್ ಕನ್ಸ್ಟ್ರೇಂಟ್ಸ್ ಫಾರ್ ಆಕ್ವಾಕಲ್ಚರ್ ISBN 978-92-5-105568-7
- FAO (2000) ಆಕ್ವಾಕಲ್ಚರ್ ಇನ್ ದಿ ಥರ್ಡ್ ಮಿಲೆನಿಯಂ
- FAO ಫಿಷರೀಸ್ ಡಿಪಾರ್ಟ್ಮೆಂಟ್ ಅಂಡ್ ಇಟ್ಸ್ SOFIA ರಿಪೋರ್ಟ್ ಆನ್ ಫಿಶರೀಸ್ ಅಂಡ್ ಆಕ್ವಾಕಲ್ಚರ್
- ದಿ ವರ್ಲ್ಡ್ ಆಕ್ವಾಕಲ್ಚರ್ ಸೊಸೈಟಿ: ಇದು 94 ದೇಶಗಳಲ್ಲಿ 3,000ಕ್ಕಿಂತಲೂ ಹೆಚ್ಚಿನ ಸದಸ್ಯರನ್ನು ಹೊಂದಿರುವ, ಲಾಭಗಳಿಕೆಯ ಉದ್ದೇಶವಿಲ್ಲದ ಒಂದು ಒಕ್ಕೂಟವಾಗಿದ್ದು, ವೈವಿಧ್ಯಮಯವಾಗಿರುವ ಜಾಗತಿಕ ಜಲಚರ ಸಾಕಣೆಯ ಸಮುದಾಯದ ಒಳಗಿನ ಸಂವಹನೆ ಮತ್ತು ಮಾಹಿತಿ ವಿನಿಮಯವನ್ನು ಸುಧಾರಿಸುವ ಕಡೆಗೆ ಪ್ರಮುಖ ಗುರಿಯನ್ನು ಹೊಂದಿದೆ.
- ದಿ ಕೋಸ್ಟಲ್ ರಿಸೋರ್ಸಸ್ ಸೆಂಟರ್ ಸೀಗಡಿ ಸಾಕಣೆ, ಕಡಲಕಳೆಯ ಕೃಷಿ ಮತ್ತು ಚಿಪ್ಪುಮೀನು ಸಾಕಣೆಯ ಕುರಿತಾದ ಮಾರ್ಗದರ್ಶಿ ಸೂತ್ರಗಳು, ಕಾರ್ಯನೀತಿಗಳು ಮತ್ತು ಅತ್ಯುತ್ತಮ ಪರಿಪಾಠಗಳು ಹಾಗೂ ನಿದರ್ಶನ-ಅಧ್ಯಯನಗಳ ಒಂದು ಶ್ರೇಣಿಯನ್ನು ಒದಗಿಸುತ್ತದೆ.
- ಪ್ರಾದೇಶಿಕ
- ನೆಟ್ವರ್ಕ್ ಆಫ್ ಆಕ್ವಾಕಲ್ಚರ್ ಸೆಂಟರ್ಸ್ ಇನ್ ಏಷ್ಯಾ-ಪೆಸಿಫಿಕ್: ಇಂಟರ್ಗೌರ್ನಮೆಂಟಲ್ ಆರ್ಗನೈಸೇಷನ್ ವಿತ್ ಮೆಂಬರ್ಸ್ ದಟ್ ಪ್ರೊಡ್ಯೂಸ್ > 85% ಆಫ್ ಗ್ಲೋಬಲ್ ಆಕ್ವಾಕಲ್ಚರ್ ಪ್ರೊಡಕ್ಷನ್. ಡೌನ್ಲೋಡ್ ಮಾಡುವುದಕ್ಕೆ ಸಂಬಂಧಿಸಿದಂತಿರುವ ಉಚಿತ ಸುದ್ದಿ ಹಾಗೂ ಸಂಪೂರ್ಣ-ಪಠ್ಯದ ಜಲಚರ ಸಾಕಣೆಯ ಪ್ರಕಟಣೆಗಳು.
- NOAA ಆಕ್ವಾಕಲ್ಚರ್: ನ್ಯಾಷನಲ್ ಓಷಿಯಾನಿಕ್ ಅಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ – US ಹಾಗೂ ಎಲ್ಲೆಡೆಯಿರುವ ಸಮುದ್ರದ ಜಲಚರ ಸಾಕಣೆಯ ಕುರಿತಾದ ಮಾಹಿತಿಗೆ ಸಂಬಂಧಿಸಿದ ವೆಬ್ಸೈಟ್.
- ಅಲಾಸ್ಕಾದಲ್ಲಿನ ಜಲಚರ ಸಾಕಣೆ
- ಸೋಷಿಯಲ್ & ಇಕನಾಮಿಕ್ ಬೆನಿಫಿಟ್ಸ್ ಆಫ್ ಆಕ್ವಾಕಲ್ಚರ್ ಫ್ರಂ "NOAA ಸೋಷಿಯೋಇಕನಾಮಿಕ್ಸ್" ವೆಬ್ಸೈಟ್ ಇನಿಷಿಯಿಟಿವ್
- ಆಕ್ವಾಕಲ್ಚರ್ ಅಸೋಸಿಯೇಷನ್ ಆಫ್ ಕೆನಡಾ:
- ಅಮೆರಿಕನ್ ಫಿಶರೀಸ್ ಸೊಸೈಟಿ
- ಆಕ್ವಾಕಲ್ಚರ್ ಇನ್ಫರ್ಮೇಷನ್ ಫ್ರಂ ದಿ ಕೋಸ್ಟಲ್ ಓಷನ್ ಇನ್ಸ್ಟಿಟ್ಯೂಟ್, ವುಡ್ಸ್ ಹೋಲ್ ಓಷನೋಗ್ರಾಫಿಕ್ ಇನ್ಸ್ಟಿಟ್ಯೂಷನ್
- ಆಕ್ವಾಕಲ್ಚರ್ ಇನ್ಫರ್ಮೇಷನ್ ಬ್ಯೂರೋ: ಸ್ಕಾಟಿಷ್ ಮೂಲದ ಜಲಚರ ಸಾಕಣೆಯ ಮಾಹಿತಿ ಕೇಂದ್ರ.
- ಫಿಶರೀಸ್ ಅಂಡ್ ಇಲಿನಾಯ್ಸ್ ಆಕ್ವಾಕಲ್ಚರ್ ಸೆಂಟರ್: ಮಿಡ್ವೆಸ್ಟ್ US ರಿಸರ್ಚ್ ಸೆಂಟರ್.
- ವಿಷಯ ಉದ್ದೇಶಿತ
- ಆಕ್ವಾ ಫಾರ್ಮ್ ಡಿಸೈನ್ಸ್ - ಬೆನಿಫಿಟ್ಸ್ ಆಫ್ ವಾಟರ್ ರೀಸರ್ಕ್ಯುಲೇಷನ್ ಸಿಸ್ಟಮ್ಸ್ ಇನ್ ಆಕ್ವಾಕಲ್ಚರ್: ನೀರಿನ ಮರುಪ್ರಸರಣದ ಜಲಚರ ಸಾಕಣೆ ವ್ಯವಸ್ಥೆಗಳ ವಿವರಣೆ ಹಾಗೂ ಪರಿಸರ-ಸ್ನೇಹಿ ಭೂಮಿ ಆಧರಿತ ಆವರಣದೊಳಗೆ ವ್ಯವಸ್ಥೆಗೊಳಿಸಲ್ಪಟ್ಟ ಜಲಚರ ಸಾಕಣೆ ಕಾರ್ಯಾಚರಣೆಗಳೊಳಗೆ ಮೀನುಗಳನ್ನು ಉತ್ಪಾದಿಸುವಲ್ಲಿನ ಸಾಕಣೆಕೇಂದ್ರದ ವಿನ್ಯಾಸಗಳ ಈ ಬಗೆಗಳನ್ನು ಉಪಯೋಗಿಸುವುದರ ಪ್ರಯೋಜನಗಳ ವಿವರಣೆ.
- FishingHurts.com/FishFarms: ಕ್ರಿಟಿಸಿಸಂ ಆಫ್ ಆಕ್ವಾಕಲ್ಚರ್'ಸ್ ಎಫೆಕ್ಟ್ಸ್ ಆನ್ ಅನಿಮಲ್ ವೆಲ್ಫೇರ್ ಅಂಡ್ ದಿ ಎನ್ವಿರಾನ್ಮೆಂಟ್
- watershed Watch Society Salmon farming and sea lice
- ವೆಬ್ ಬೇಸ್ಡ್ ಆಕ್ವಾಕಲ್ಚರ್ ಸಿಮ್ಯಲೇಷನ್ಸ್ ಫಾರ್ ಷೆಲ್ಫಿಶ್ ಇನ್ ಎಶ್ಚುಯರೀಸ್ ಅಂಡ್ ಕೋಸ್ಟಲ್ ಸಿಸ್ಟಮ್ಸ್: ಸಿಮ್ಯುಲೇಷನ್ ಮಾಡೆಲಿಂಗ್ ಫಾರ್ ಮಸ್ಸೆಲ್ಸ್, ಆಯಿಸ್ಟರ್ಸ್ ಅಂಡ್ ಕ್ಲಾಮ್ಸ್.
- ವೆಬ್ ಸಂಪನ್ಮೂಲಗಳು
- AquacultureHub ಜಲಚರ ಸಾಕಣೆಗಾರರಿಗೆ (ವಿಜ್ಞಾನಿಗಳು, ಕೃಷಿಕರು, ಇತ್ಯಾದಿ) ಸಂಬಂಧಿಸಿದ ಒಂದು ಸಾಮಾಜಿಕ ಜಾಲತಾಣ.
- ಆಕ್ವಾ KE—ಆಕ್ವಾಕಲ್ಚರ್ ರಿಸಚ್ರ್ ಡೇಟಾಬೇಸ್
- ಆಕ್ವಾಕಲ್ಚರ್ ರಿಸೋರ್ಸಸ್ ಡೈರೆಕ್ಟರಿ ಉಲ್ಲೇಖನದ ಕೊಂಡಿಗಳು ಮತ್ತು ಹಲವಾರು ಮೂಲಗಳಿಂದ ಪಡೆಯಲಾದ ಡೌನ್ಲೋಡ್ ಮಾಡಬಹುದಾದ ವರದಿಗಳು, ಲೇಖನಗಳ ಒಂದು ನಿರ್ದೇಶಿಕೆ.
- ಆರ್ಗ್ಯಾನಿಕ್ ಆಕ್ವಾಕಲ್ಚರ್: ಸಾವಯವ ರೀತಿಯಲ್ಲಿ ಮೀನುಗಳನ್ನು ಸಾಕಿಬೆಳೆಸುವುದರ ಮಹತ್ವಗಳು ಹಾಗೂ ಇತರೆ ವಿಷಯಗಳ ಕುರಿತಾದ ಲೇಖನಗಳು ಮತ್ತು ಉಲ್ಲೇಖನಗಳು.
- ರೀಡ್ ಕಾಂಗ್ರೆಷನಲ್ ರಿಸರ್ಚ್ ಸರ್ವೀಸ್ (CRS) ಜಲಚರ ಸಾಕಣೆಗೆ ಸಂಬಂಧಿಸಿದ ವರದಿಗಳು
- ಜಲಚರ ಸಾಕಣೆ, ಮೀನುಗಾರಿಕಾ ಕೇಂದ್ರಗಳು ಹಾಗೂ ಜಲವಾಸಿ ವಿಜ್ಞಾನದಲ್ಲಿನ ಆನ್ಲೈನ್ ಸಂಪನ್ಮೂಲಗಳಿಗೆ ಇರುವ ಮಾರ್ಗದರ್ಶಿ
- ಆಕ್ವಾಕಲ್ಚರ್ ರಿಸೋರ್ಸಸ್ ಫಾರ್ ಎತ್ನೊ-ಆಂತ್ರೊಪಾಲಜಿಸ್ಟ್ಸ್ ನ್ಯೂಸ್ ಮಿರರ್ ಸರ್ವೀಸ್ ಇನ್ ದಿ ಫೀಲ್ಡ್ ಆಫ್ ಆಕ್ವಾಕಲ್ಚರ್ ವಿತ್ ಫೋಕಸ್ ಆನ್ ಇಟ್ಸ್ ಸೋಷಿಯಲ್ ಇಫೆಕ್ಟ್ಸ್
- ಆಕ್ವಾಕಲ್ಚರ್ ನಾಲೆಜ್ ಎನ್ವಿರಾನ್ಮೆಂಟ್: ಕೊಳದ ನಿರ್ಮಾಣದಿಂದ ಅಂತರರಾಷ್ಟ್ರೀಯ ನೀತಿಸಂಹಿತೆಗಳವರೆಗಿನ, ಜಲಚರ ಸಾಕಣೆಯ ಹೆಚ್ಚೂಕಮ್ಮಿ ಪ್ರತಿಯೊಂದೂ ಅಂಶವನ್ನೂ ಒಳಗೊಂಡಿರುವ, ಸರ್ಕಾರ ಮತ್ತು ವಿಶ್ವಸಂಸ್ಥೆಯ ದಸ್ತಾವೇಜುಗಳ ಒಂದು ಶೋಧಿಸಬಲ್ಲ ಆನ್ಲೈನ್ ಗ್ರಂಥಾಲಯ.
- AquaNIC ಪ್ರಕಟಣೆಗಳು, ಸುದ್ದಿ, ವಿದ್ಯಮಾನಗಳು, ಉದ್ಯೋಗದ ಪ್ರಕಟಣೆಗಳು, ಚಿತ್ರಗಳು, ಹಾಗೂ ಸಂಬಂಧಿತ ಸಂಪನ್ಮೂಲಗಳನ್ನು ಒಳಗೊಂಡಂತೆ, ಜಲಚರ ಸಾಕಣೆಯ ವಿಷಯಗಳಿಗೆ ಸಂಬಂಧಿಸಿದ ಒಂದು ಸಮಗ್ರ ಮಾಹಿತಿಯ ಸರ್ವರ್.
- ಆಕ್ವಾಕಲ್ಚರ್ ಅಂಡ್ ಇನ್ಫರ್ಮೇಷನ್
- AAAS ಸೈನ್ಸ್ ಮ್ಯಾಗಝೀನ್ ಫೀಚರ್ ಆನ್ ಆಕ್ವಾಕಲ್ಚರ್
- ಆಕ್ವಾಕಲ್ಚರ್ ಅಂಡ್ ದಿ ಪ್ರೊಟೆಕ್ಷನ್ ಆಫ್ ವೈಲ್ಡ್ ಸಾಲ್ಮನ್
- [http://www.socalfishfarm.com/fish/index.php?option=com_content&view=article&id=46&Itemid=55 SoCal ಆಕ್ವಾಪೋನಿಕ್ಸ್ ಎಂಬುದು ಒಂದು ಸೌಲಭ್ಯವಾಗಿದ್ದು,
ಸಾವಯವದ ರೀತಿಯಲ್ಲಿ ಬೆಳೆಯಲ್ಪಡುವ ಅತ್ಯುತ್ತಮ ಗುಣಮಟ್ಟದ ಟಿಲಾಪಿಯಾ, ಇಂಚಾಕ ಮತ್ತು ತರಕಾರಿಗಳನ್ನು ಬೆಳೆಯಲು ಇದು ಸ್ಥಾಪಿಸಲ್ಪಟ್ಟಿದೆ.]
- Pages with reference errors
- Pages using duplicate arguments in template calls
- CS1 errors: markup
- Pages using ISBN magic links
- Articles with hatnote templates targeting a nonexistent page
- Articles with unsourced statements from April 2010
- Articles with invalid date parameter in template
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from May 2010
- Pages using div col with unknown parameters
- Wikipedia external links cleanup
- Wikipedia spam cleanup
- Commons link is locally defined
- Commons category with page title different than on Wikidata
- Articles with Open Directory Project links
- ಜಲಚರ ಸಾಕಣೆ