ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Divyaswamy (ಚರ್ಚೆ | ಕಾಣಿಕೆಗಳು) Translated from http://en.wikipedia.org/wiki/Chennai_International_Airport (revision: 360587864) using http://translate.google.com/toolkit with about 100% human translations. |
ಚು robot Adding: hi:चेन्नई अंतर्राष्ट्रीय हवाई अड्डा Modifying: it:Aeroporto Internazionale di Chennai |
||
೨೭೬ ನೇ ಸಾಲು: | ೨೭೬ ನೇ ಸಾಲು: | ||
[[ar:مطار تشيناي الدولي]] |
[[ar:مطار تشيناي الدولي]] |
||
[[de:Flughafen Chennai]] |
[[de:Flughafen Chennai]] |
||
[[en:Chennai International Airport]] |
[[en:Chennai International Airport]] |
||
[[es:Aeropuerto Internacional de Chennai]] |
[[es:Aeropuerto Internacional de Chennai]] |
||
[[fr:Aéroport international de Chennai]] |
[[fr:Aéroport international de Chennai]] |
||
[[hi:चेन्नई अंतर्राष्ट्रीय हवाई अड्डा]] |
|||
[[it:Aeroporto Internazionale Chennai]] |
[[it:Aeroporto Internazionale di Chennai]] |
||
⚫ | |||
[[ml:ചെന്നൈ അന്താരാഷ്ട്രവിമാനത്താവളം]] |
[[ml:ചെന്നൈ അന്താരാഷ്ട്രവിമാനത്താവളം]] |
||
[[mr:चेन्नई आंतरराष्ट्रीय विमानतळ]] |
[[mr:चेन्नई आंतरराष्ट्रीय विमानतळ]] |
||
⚫ | |||
[[pl:Port lotniczy Madras]] |
[[pl:Port lotniczy Madras]] |
||
[[ru:Ченнай (аэропорт)]] |
[[ru:Ченнай (аэропорт)]] |
೧೫:೫೮, ೨೬ ಮೇ ೨೦೧೦ ನಂತೆ ಪರಿಷ್ಕರಣೆ
Chennai International Airport Meenambakkam Airport சென்னை பன்னாட்டு வானூர்தி நிலையம் | |||
---|---|---|---|
IATA: MAA – ICAO: VOMM | |||
Summary | |||
Airport type | Public | ||
Owner | Government of India | ||
Operator | Airports Authority of India | ||
Serves | Chennai Metropolitan Area | ||
Location | Tirusulam, Chennai | ||
Hub for | |||
Elevation AMSL | ೫೨ ft / ೧೬ m | ||
Coordinates | 12°58′56″N 80°9′49″E / 12.98222°N 80.16361°E | ||
Runways | |||
Direction | Length | Surface | |
ft | m | ||
07/25 | ೧೨,೦೦೧ | ೩,೬೫೮ | Asphalt |
12/30 | ೬,೭೦೮ | ೨,೦೪೫ | Asphalt–Concrete |
Statistics (2007-08) | |||
Passenger movements | ೧೦,೬೫೯,೭೫೪ | ||
Airfreight movements in tonnes | ೨೭೦,೬೦೮ | ||
Aircraft movements | ೧೧೫,೮೬೫ | ||
Source: DAFIF[೧][೨] |
ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ವು (IATA: MAA, ICAO: VOMM) (ತಮಿಳು:சென்னை பன்னாட்டு வானூர்தி நிலையம் ) ಭಾರತದ ಚೆನ್ನೈನ ದಕ್ಷಿಣ ಭಾಗದಲ್ಲಿರುವ ತಿರುಶೂಲಂನಲ್ಲಿ 7 km (4.3 mi) ನೆಲೆಗೊಂಡಿದೆ. ಇದು ದೇಶದೊಳಗಡೆ ಪ್ರವೇಶ ಪಡೆಯುವ ಅತ್ಯಂತ ದೊಡ್ಡ ಅಂತರರಾಷ್ಟ್ರೀಯ ಹೆಬ್ಬಾಗಿಲುಗಳ ಪೈಕಿ ಒಂದಾಗಿದ್ದು, ಭಾರತದಲ್ಲಿನ ಮೂರನೇ ಅತಿ ನಿಬಿಡವಾದ (ದೆಹಲಿ ಮತ್ತು ಮುಂಬಯಿಯ ನಂತರ) ವಿಮಾನ ನಿಲ್ದಾಣವಾಗಿದೆ. ಅಷ್ಟೇ ಅಲ್ಲ, ಇದು 2007ರಲ್ಲಿ ಸುಮಾರು 12 ದಶಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಮೂಲಕ ಹಾಗೂ 25ಕ್ಕೂ ಹೆಚ್ಚಿನ ವಿವಿಧ ವಾಯುಯಾನ ಸಂಸ್ಥೆಗಳಿಗೆ ಸೇವೆ ಸಲ್ಲಿಸುವ ಮೂಲಕ ಒಂದು ಅಂತರರಾಷ್ಟ್ರೀಯ ಕೇಂದ್ರವೆಂಬ ಹೆಸರನ್ನೂ ಪಡೆದಿದೆ. ಇದು ಮುಂಬಯಿ ನಂತರದ ದೇಶದಲ್ಲಿನ ಎರಡನೇ-ಅತಿದೊಡ್ಡ ಸರಕು ಕೇಂದ್ರವೆನಿಸಿಕೊಂಡಿದೆ. ಮೀನಂಬಕ್ಕಂ ಹಾಗೂ ತಿರುಶೂಲಂನ ಉದ್ದಕ್ಕೂ ಇದು ನೆಲೆಗೊಂಡಿದ್ದು, ತಿರುಶೂಲಂನಲ್ಲಿ ಪ್ರಯಾಣಿಕರ ಪ್ರವೇಶಕ್ಕೆ ಅವಕಾಶವಿದ್ದರೆ, ಮೀನಂಬಕ್ಕಂನಲ್ಲಿ ಸರಕು ಪ್ರವೇಶಕ್ಕೆ ಅವಕಾಶವಿದೆ.
ಇತಿಹಾಸ
ಭಾರತದಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣಗಳ ಪೈಕಿ ಒಂದನ್ನು ಚೆನ್ನೈ ಹೊಂದಿತ್ತು, ಮತ್ತು ಅದು 1954ರಲ್ಲಿ ಬಾಂಬೆಯಿಂದ (ಮುಂಬಯಿ) ಬೆಳಗಾಂನ ಮೂಲಕ ಮಾರ್ಗವನ್ನು ಹೊಂದಿದ್ದ ಏರ್ ಇಂಡಿಯಾದ ಮೊದಲ ವಿಮಾನದ ಅಂತಿಮ ಗಮ್ಯಸ್ಥಾನವಾಗಿತ್ತು. ಮೊದಲ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ನಿಲ್ದಾಣವನ್ನು ವಿಮಾನ ನಿಲ್ದಾಣದ ಈಶಾನ್ಯ ಭಾಗದಲ್ಲಿ ಕಟ್ಟಲಾಯಿತು. ಈ ಪ್ರದೇಶವು ಮೀನಂಬಕ್ಕಂನ ಉಪನಗರದಲ್ಲಿ ಬರುವುದರಿಂದ ಸದರಿ ವಿಮಾನನಿಲ್ದಾಣವನ್ನು ಮೀನಂಬಕ್ಕಂ ವಿಮಾನ ನಿಲ್ದಾಣ ಎಂದೇ ಉಲ್ಲೇಖಿಸಲಾಗುತ್ತದೆ. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಒಂದು ಹೊಸ ಸಂಕೀರ್ಣವನ್ನು ತರುವಾಯ ತಿರುಶೂಲಂನಲ್ಲಿ ನಿರ್ಮಿಸಲಾಯಿತು. ಇದು ಮತ್ತಷ್ಟು ದಕ್ಷಿಣಕ್ಕೆ ಪಲ್ಲಾವರಂ ಸಮೀಪದಲ್ಲಿದ್ದು, ಇಲ್ಲಿಗೆ ಪ್ರಯಾಣಿಕ ಕಾರ್ಯಾಚರಣೆಗಳು ವರ್ಗಾಯಿಸಲ್ಪಟ್ಟವು. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹಳೆಯ ಕಟ್ಟಡವನ್ನು ಈಗ ಸರಕುಗಳ ಆಗಮನ ಹಾಗೂ ನಿರ್ಗಮನದ ಒಂದು ನಿಲ್ದಾಣವಾಗಿ ಬಳಸಲಾಗುತ್ತಿದ್ದು, ಅದು ಭಾರತೀಯ ಕೊರಿಯರ್ ಕಂಪನಿಯಾದ ಬ್ಲ್ಯೂ ಡಾರ್ಟ್ಗೆ ಸಂಬಂಧಿಸಿದ ಮೂಲ ಕಾರ್ಯಸ್ಥಾನವಾಗಿದೆ.
ರಚನಾ ಸ್ವರೂಪ
ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಆಗಮನ ಹಾಗೂ ನಿರ್ಗಮನದ ಮೂರು ನಿಲ್ದಾಣಗಳನ್ನು ಒಳಗೊಂಡಿದೆ: ಮೀನಂಬಕ್ಕಂನಲ್ಲಿರುವ ಆಗಮನ ಹಾಗೂ ನಿರ್ಗಮನದ ಹಳೆಯ ನಿಲ್ದಾಣವನ್ನು ಸರಕು ನಿರ್ವಹಣೆಗಾಗಿ ಬಳಸಲಾಗುತ್ತದೆ; ತಿರುಶೂಲಂನಲ್ಲಿರುವ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ಹೊಸ ನಿಲ್ದಾಣ ಸಂಕೀರ್ಣವನ್ನು ಪ್ರಯಾಣಿಕ ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತದೆ. ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ನಿಲ್ದಾಣ ಸಂಕೀರ್ಣವು ಸ್ವದೇಶದ ಮತ್ತು ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣಗಳನ್ನು ಒಳಗೊಂಡಿದ್ದು, ಒಂದು ಸಂಯೋಜಕ ಕಟ್ಟಡದಿಂದ ಇವು ಅಂತರ-ಸಂಪರ್ಕವನ್ನು ಹೊಂದಿವೆ. ಈ ಸಂಯೋಜಕ ಕಟ್ಟಡವು ಆಡಳಿತಾತ್ಮಕ ಕಚೇರಿಗಳು ಹಾಗೂ ಒಂದು ಫಲಹಾರ ಮಂದಿರವನ್ನು ಒಳಗೊಂಡಿದೆ. ಸದರಿ ಸಂಕೀರ್ಣವು ಒಂದು ಅಖಂಡವಾದ ರಚನೆಯಾಗಿದ್ದರೂ ಸಹ, ಪೂರ್ವಭಾವಿಯಾಗಿ ಅಸ್ತಿತ್ವದಲ್ಲಿದ್ದ ಮೀನಂಬಕ್ಕಂ ಆಗಮನ ಹಾಗೂ ನಿರ್ಗಮನ ನಿಲ್ದಾಣಕ್ಕೆ ಕಾಮರಾಜ್ ಮತ್ತು ಅಣ್ಣಾ ಆಗಮನ ಹಾಗೂ ನಿರ್ಗಮನ ನಿಲ್ದಾಣಗಳನ್ನು 1988ರಲ್ಲಿ ಸೇರಿಸುವುದರೊಂದಿಗೆ ಇದನ್ನು ಹಂತಹಂತವಾಗಿ ಕಟ್ಟಲಾಯಿತು.
ಎರಡು ವಿಮಾನ ಸೇತುವೆಗಳನ್ನು (ಜೆಟ್ಮಾರ್ಗಗಳನ್ನು) ಹೊಂದಿದ್ದ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವು ಕಟ್ಟಲ್ಪಟ್ಟ ಮೊದಲ ಭಾಗವಾಗಿತ್ತು. ಇದರ ನಂತರ, ಮೂರು ವಿಮಾನ ಸೇತುವೆಗಳನ್ನು ಒಳಗೊಂಡ ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ನಿರ್ಮಿಸಲಾಯಿತು. ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣದ ನಿರ್ಮಾಣವು ಸಂಪೂರ್ಣಗೊಂಡ ನಂತರ, ಮೀನಂಬಕ್ಕಂನಲ್ಲಿನ ಹಳೆಯ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ಸರಕು ನಿರ್ವಹಣೆಗಾಗಿ ಪ್ರತ್ಯೇಕವಾಗಿ ಬಳಸಲಾಯಿತು. ಮೂರು ವಿಮಾನ ಸೇತುವೆಗಳನ್ನು ಒಳಗೊಂಡಿರುವ ಒಂದು ಹೊಸ ವಿಭಾಗವನ್ನು ಇತ್ತೀಚೆಗಷ್ಟೇ ಸೇರಿಸುವ ಮೂಲಕ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ಮತ್ತಷ್ಟು ದಕ್ಷಿಣ ಭಾಗಕ್ಕೆ ವಿಸ್ತರಿಸಲಾಯಿತು. ಸದ್ಯಕ್ಕೆ, ಹೊಸ ಅಂತರರಾಷ್ಟ್ರೀಯ ವಿಭಾಗವನ್ನು ನಿರ್ಗಮನಗಳಿಗಾಗಿ ಬಳಸಲಾಗುತ್ತಿದ್ದರೆ, ಹಳೆಯದಾದ ಕಟ್ಟಡವನ್ನು ಆಗಮನಗಳಿಗಾಗಿ ಬಳಸಲಾಗುತ್ತಿದೆ.
ಆಗಮನ ಹಾಗೂ ನಿರ್ಗಮನ ನಿಲ್ದಾಣಗಳು, ವಾಯುಯಾನ ಸಂಸ್ಥೆಗಳು ಮತ್ತು ಗಮ್ಯಸ್ಥಾನಗಳು
ಸ್ವದೇಶದ ವಿಮಾನಗಳು ಕಾಮರಾಜ್ ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣದಿಂದ (KDT) ಕಾರ್ಯಾಚರಣೆಯನ್ನು ನಡೆಸಿದರೆ, ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವು (AIT) ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಮೀಸಲಾಗಿದೆ. ಮೀನಂಬಕ್ಕಂನಲ್ಲಿರುವ ಹಳೆಯ ಆಗಮನ ಹಾಗೂ ನಿರ್ಗಮನ ನಿಲ್ದಾಣವನ್ನು ಸರಕು ಕಾರ್ಯಾಚರಣೆಗಳಿಗಾಗಿ ಬಳಸಲಾಗುತ್ತಿದೆ.
ಸರಕು ಆಗಮನ ಹಾಗೂ ನಿರ್ಗಮನ ನಿಲ್ದಾಣ
MRO ವಿಮಾನಖಾನೆ ಸೌಕರ್ಯ
' |
ವಾಯುಯಾನ ಸಂಸ್ಥೆಗಳು |
ಏರ್ ಇಂಡಿಯಾ |
ಇಂಡಿಯನ್ ಏರ್ಲೈನ್ಸ್ |
ಕಿಂಗ್ಫಿಶರ್ ಏರ್ಲೈನ್ಸ್ |
ಅಂಕಿ-ಅಂಶಗಳು
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(January 2010) |
ಪ್ರಸ್ತುತ, ಚೆನ್ನೈ ವಿಮಾನ ನಿಲ್ದಾಣವು ಪ್ರತಿ ಗಂಟೆಗೆ ಸುಮಾರು 25 ವಿಮಾನ ಚಲನೆಗಳನ್ನು ನಿರ್ವಹಿಸುತ್ತಿದ್ದು, 2014-15ರ ವರ್ಷದ ವೇಳೆಗೆ ಇದು ಗರಿಷ್ಟ ಪ್ರಮಾಣವನ್ನು ಮುಟ್ಟಲಿದೆ. ಆದಾಗ್ಯೂ, ಒತ್ತಡದ-ಅವಧಿಯ ದಟ್ಟಣೆಯನ್ನು ನಿರ್ವಹಿಸುವ ಸಾಮರ್ಥ್ಯವು ಅದಕ್ಕಿಂತ ಸಾಕಷ್ಟು ಮುಂಚಿತವಾಗಿ ಪೂರ್ತಿಯಾಗಿ ಬಳಕೆಗೆ ಒಳಗಾಗಲಿದೆ. ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣವು ವಾರ್ಷಿಕವಾಗಿ 3 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, 2007-08ರಲ್ಲಿ 3,410,253 ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ತನ್ನ ಪ್ರಯಾಣಿಕ ನಿರ್ವಹಣಾ ಸಾಮರ್ಥ್ಯವನ್ನು ಈಗಾಗಲೇ ದಾಟಿದಂತಾಗಿದೆ. ಅದೇ ರೀತಿಯಲ್ಲಿ, ಕಾಮರಾಜ್ ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣವು ವಾರ್ಷಿಕವಾಗಿ 6 ದಶಲಕ್ಷ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದು, 2007-08ರಲ್ಲಿ 7,249,501 ಪ್ರಯಾಣಿಕರನ್ನು ನಿರ್ವಹಿಸಿದೆ. ಮತ್ತೊಮ್ಮೆ ಇಲ್ಲೂ ಸಹ ಆಗಮನ ಹಾಗೂ ನಿರ್ಗಮನ ನಿಲ್ದಾಣದ ಬೇಡಿಕೆಯು ಸಾಮರ್ಥ್ಯವನ್ನು ಹೆಚ್ಚು ಪ್ರಮಾಣದಲ್ಲಿ ದಾಟಿದಂತಾಗಿದೆ. ಎಲ್ಲಾ ವಿಮಾನ ನಿಲ್ದಾಣಗಳ ಪೈಕಿ ಚೆನ್ನೈ ವಿಮಾನ ನಿಲ್ದಾಣವು 2007 - 08ರ ವರ್ಷದ ಅವಧಿಯಲ್ಲಿ 10,659,754ರಷ್ಟು ಸಂಖ್ಯೆಯ ಪ್ರಯಾಣಿಕರ ಒಂದು ಸಾಮರ್ಥ್ಯವನ್ನು ನಿರ್ವಹಿಸಿದೆ. 2007 - 08ರ ವರ್ಷದಲ್ಲಿ[ಸೂಕ್ತ ಉಲ್ಲೇಖನ ಬೇಕು] ಈ ವಿಮಾನ ನಿಲ್ದಾಣವು ಒಟ್ಟಾರೆಯಾಗಿ 270,608 ಟನ್ನುಗಳಷ್ಟು ಸರಕನ್ನು ನಿರ್ವಹಿಸಿದೆ.
- ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು 2007-08ರಲ್ಲಿ 1,15,865ರಷ್ಟು ಸಂಖ್ಯೆಯ ವಿಮಾನ ಚಲನೆಗಳನ್ನು ನಿರ್ವಹಿಸಿತು ಮತ್ತು ವಿಮಾನ ಚಲನೆಗಳನ್ನು ನಿರ್ವಹಿಸುವಲ್ಲಿನ ಇದರ ಸಾಮರ್ಥ್ಯವು 2014-15ರ ಹೊತ್ತಿಗೆ ಗರಿಷ್ಟ ಪ್ರಮಾಣವನ್ನು ಮುಟ್ಟುವ ಸಾಧ್ಯತೆಯಿದೆ.
- ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ಪ್ರತಿ ಗಂಟೆಗೆ ಸುಮಾರು 25 ವಿಮಾನ ಚಲನೆಯನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಿಸ್ತರಣೆಯ ನಂತರವೂ, 2014-15ರ ವೇಳೆಗೆ ವಿಮಾನ ನಿಲ್ದಾಣವು ಗರಿಷ್ಟ ಪ್ರಮಾಣವನ್ನು ಮುಟ್ಟಲಿದೆ ಹಾಗೂ ಅಷ್ಟು ಹೊತ್ತಿಗೆ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವು ಸಿದ್ಧವಾಗಬೇಕಿದೆ. ಇದೇ ತೆರನಾದ ತರ್ಕವನ್ನು ಮುಂಬಯಿಯಲ್ಲಿ ಅನ್ವಯಿಸಲಾಗಿದ್ದು, ಅಲ್ಲಿನ ನವಿ ಮುಂಬಯಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಅದೇ ವೇಳೆಗೆ ಸಿದ್ಧವಾಗಬೇಕಿದೆ, ಮತ್ತು ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ಸರಿಸುಮಾರು ಅದೇ ಸಮಯಕ್ಕೆ ಗರಿಷ್ಟ ಪ್ರಮಾಣವನ್ನು ಮುಟ್ಟುತ್ತದೆ.
- ಸ್ವದೇಶದ ಆಗಮನ ಹಾಗೂ ನಿರ್ಗಮನದ ಒಂದು ಹೊಸ ನಿಲ್ದಾಣವನ್ನು ನಿರ್ಮಿಸಲು ಹಾಗೂ ಅಲ್ಲಿ ಅಡ್ಡ-ಓಡುದಾರಿಗಳನ್ನು ಏಕಕಾಲಿಕವಾಗಿ ಬಳಸಲು ಅನುವು ಮಾಡಿಕೊಡುವ ಒಂದು ತರ್ಕಬದ್ಧವಾದ ದೃಷ್ಟಿಕೋನವನ್ನು AAI ಹೊಂದಿದೆ. ಈ ಎಲ್ಲಾ ಕೆಲಸಕಾರ್ಯಗಳೂ ಕಾರ್ಯಗತಗೊಳ್ಳಲು ನಾವು 2015ರವರೆಗೂ ಕಾಯಬೇಕಾಗುತ್ತದೆ.
ಗೌರವ ಪ್ರಶಸ್ತಿಗಳು
- ಪಯಣಿಸುವ ಪ್ರಯಾಣಿಕರ ಸಂಖ್ಯೆಗೆ ಸಂಬಂಧಿಸಿದಂತೆ ಇದು ದೇಶದಲ್ಲಿನ ಮೂರನೇ ಅತಿದೊಡ್ಡ, ಹಾಗೂ ಸರಕು ನಿರ್ವಹಣೆಗೆ ಸಂಬಂಧಿಸಿದಂತೆ ಎರಡನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ.
- ಇದು ದೇಶದಲ್ಲಿನ ಮೊಟ್ಟಮೊದಲ ISO 9000 ಪ್ರಮಾಣಿತ ವಿಮಾನ ನಿಲ್ದಾಣವಾಗಿದೆ. ಈ ಪ್ರಶಸ್ತಿಯನ್ನು ಇದು 2001ರಲ್ಲಿ ಸ್ವೀಕರಿಸಿತು.
- ಇದು ಅಂತರರಾಷ್ಟ್ರೀಯ, ಸ್ವದೇಶದ ಮತ್ತು ಸರಕು ಆಗಮನ ಹಾಗೂ ನಿರ್ಗಮನದ ನಿಲ್ದಾಣಗಳನ್ನು ಒಂದಕ್ಕೊಂದು ತಾಗಿಕೊಂಡಿರುವಂತೆ ಹೊಂದಿರುವ ಮೊಟ್ಟಮೊದಲ ವಿಮಾನ ನಿಲ್ದಾಣವಾಗಿದೆ.
- ಇದು (ಸ್ವದೇಶದ ಆಗಮನ ಹಾಗೂ ನಿರ್ಗಮನದ ನಿಲ್ದಾಣದಲ್ಲಿ) ವಿಮಾನ ಸೇತುವೆಯನ್ನು ಹೊಂದುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
- ಇದು ವಾಕಲೇಟರ್ಗಳನ್ನು (ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನದ ನಿಲ್ದಾಣದಲ್ಲಿ) ಹೊಂದುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
- ಇದು ಅಂತರರಾಷ್ಟ್ರೀಯ ವಿಮಾನಗಳಿಗೆ ಸಂಬಂಧಿಸಿದಂತೆ ಸ್ವದೇಶದ ಆಗಮನ ಹಾಗೂ ನಿರ್ಗಮನದ ನಿಲ್ದಾಣವನ್ನು ಸರಾಗವಾಗಿ ಬಳಸಿಕೊಳ್ಳುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
- ಕಾಮರಾಜ್ ಸ್ವದೇಶದ ಆಗಮನ ಹಾಗೂ ನಿರ್ಗಮನದ ನಿಲ್ದಾಣವಷ್ಟೇ ಅಲ್ಲದೇ, ಅಣ್ಣಾ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನದ ನಿಲ್ದಾಣದಲ್ಲಿ ಗೊತ್ತುಪಡಿಸಿದ ನೀರು ಶೀತಕಯಂತ್ರಗಳ ಮೂಲಕ ಉಚಿತವಾಗಿ ಖನಿಜ ಜಲವನ್ನು (ಮಿನರಲ್ ವಾಟರ್) ಪೂರೈಕೆ ಮಾಡುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
- ಇದು ವಿಮಾನ ನಿಲ್ದಾಣವನ್ನು ಪರಿಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ, ಕಾಗದದ ಬಟ್ಟಲುಗಳನ್ನು ಅಲ್ಲಿ ಪರಿಚಯಿಸುವಲ್ಲಿನ ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
- ಇಲ್ಲಿನ ಉಪನಗರದ ಪ್ರತ್ಯೇಕವಾದ ವಿಮಾನ ನಿಲ್ದಾಣ ರೈಲು ನಿಲ್ದಾಣ ವಿಮಾನ ನಿಲ್ದಾಣವು ಶೀಘ್ರದಲ್ಲಿಯೇ ಒಂದು ಸಂಯೋಜಿತ ಮೆಟ್ರೋ ರೈಲಿನ ಅಂತಿಮ ನಿಲ್ದಾಣವಾಗಿಯೂ ಮಾರ್ಪಾಡಾಗಲಿದೆ.
- ಭಾರತದ ಖಾಸಗಿ ವಾಯುಯಾನ ಸಂಸ್ಥೆಗಳಿಂದ ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಗಳನ್ನು (ಜೆಟ್ ಏರ್ವೇಸ್ನಿಂದ ಕೊಲೊಂಬೊಗೆ) ಕೈಗೊಳ್ಳುವಲ್ಲಿ ಇದು ಮೊಟ್ಟಮೊದಲ ವಿಮಾನ ನಿಲ್ದಾಣವೆನಿಸಿಕೊಂಡಿದೆ.
- ನದಿಯೊಂದರ ಮೇಲೆ ಹಾದುಹೋಗುವ (ಆಡ್ಯಾರ್ ನದಿಯ ಮೇಲಿನ ದ್ವಿತೀಯಕ ಓಡುದಾರಿ)(ನಿರ್ಮಾಣದ ಹಂತದಲ್ಲಿದೆ) ಓಡುದಾರಿಯೊಂದನ್ನು ಹೊಂದುವಲ್ಲಿ ಇದು 2ನೇ ವಿಮಾನ ನಿಲ್ದಾಣವೆನಿಸಿಕೊಂಡಿದೆ.
ಆಧುನಿಕೀಕರಣ ಮತ್ತು ವಿಸ್ತರಣೆ
ಚೆನ್ನೈ ವಿಮಾನ ನಿಲ್ದಾಣವು
ಆಧುನಿಕೀಕರಣ ಮತ್ತು ವಿಸ್ತರಣೆಗಾಗಿ ಸಿದ್ಧಗೊಳಿಸಲ್ಪಟ್ಟಿದೆ. ಇದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಕೈಗೊಳ್ಳಬೇಕಿದೆ. ಒಂದು ಸಮಾನಾಂತರ ಓಡುದಾರಿ, ಟ್ಯಾಕ್ಸಿ ಮಾರ್ಗಗಳು, ಗಟ್ಟಿ ನೆಲಗಟ್ಟುಗಳು ಮತ್ತು ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹೊಸ ಕಟ್ಟಡಗಳ ಸೃಷ್ಟಿಯು ಈ ಕಾಮಗಾರಿಗಳಲ್ಲಿ ಸೇರಿಕೊಂಡಿದೆ. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಸನಿಹದ ಪ್ರದೇಶಗಳಿಂದ ಸ್ವಾಧೀನಪಡಿಸಿಕೊಳ್ಳುವುದನ್ನು ವಿಸ್ತರಣಾ ಕಾಮಗಾರಿಗಳು ಒಳಗೊಳ್ಳಲಿವೆ. ಇದನ್ನು ಕಾರ್ಯಗತಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಒಂದು ನಿರ್ಣಯವು ಅಂಗೀಕರಿಸಲ್ಪಟ್ಟ ನಂತರ, ಸದರಿ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ವಿಸ್ತರಣಾ ಕಾರ್ಯವನ್ನು ಶ್ರೀಪೆರುಂಬುದೂರ್ ತಾಲ್ಲೂಕಿನಲ್ಲಿರುವ ಮನಪಕ್ಕಂ, ಕೋಲಪಕ್ಕಂ, ಗೆರುಗಂಬಕ್ಕಂ ಹಾಗೂ ತಾರಾಪಕ್ಕಂಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಈ ಪ್ರದೇಶಗಳಲ್ಲಿರುವ ಸುಮಾರು 947 ಕುಟುಂಬಗಳಿಗೆ ಸರ್ಕಾರವು ಸೂಕ್ತವಾದ ಪರಿಹಾರವನ್ನು ಹಾಗೂ ಪುನರ್ವಸತಿಯನ್ನು ಒದಗಿಸಲಿದೆ. [ಸೂಕ್ತ ಉಲ್ಲೇಖನ ಬೇಕು] ವಿಸ್ತರಣಾ ಕಾಮಗಾರಿಯ ಮೊದಲನೆಯ ಹಂತದಲ್ಲಿಯೇ ಸದರಿ ಕುಟುಂಬಗಳ ಪುನರ್ವಸತಿಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು.
ಆಧುನಿಕೀಕರಣ ಮತ್ತು ಹೊಸದಾಗಿ ರಚಿಸುವ ಕಾಮಗಾರಿಗಳಿಗಾಗಿ ಸುಮಾರು 2,350 ಕೋಟಿ ರೂಪಾಯಿಗಳು ವೆಚ್ಚವಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ಇದರ ಪೈಕಿ ಓಡುದಾರಿ, ಟ್ಯಾಕ್ಸಿ ಮಾರ್ಗ ಹಾಗೂ ಗಟ್ಟಿ ನೆಲಗಟ್ಟಿನ ನಿರ್ಮಾಣದ ವೆಚ್ಚವೇ ಸುಮಾರು 1,100 ಕೋಟಿ ರೂಪಾಯಿಗಳಾಗಲಿವೆ. ಇನ್ನುಳಿದಂತೆ, ಆಗಮನ ಹಾಗೂ ನಿರ್ಗಮನ ನಿಲ್ದಾಣದ ಕಟ್ಟಡ, ಸರಕು ಕಟ್ಟಡ, ಕಾರು ನಿಲುಗಡೆ ತಾಣ ಮತ್ತು ಮೇಲ್ಮೈ ಸ್ವರೂಪವರ್ಧನೆಯ ನಿರ್ಮಾಣಕ್ಕಾಗಿ 1,250 ಕೋಟಿ ರೂಪಾಯಿಗಳು ವೆಚ್ಚವಾಗಲಿವೆ. [ಸೂಕ್ತ ಉಲ್ಲೇಖನ ಬೇಕು]
ಆಧುನಿಕೀಕರಣ ಯೋಜನೆಯ ಅನುಸಾರ, ಸೇತುವೆಯೊಂದರ ಮುಖಾಂತರ ದ್ವಿತೀಯಕ ಓಡುದಾರಿಯು ಆಡ್ಯಾರ್ ನದಿಯ ಮೇಲೆ ನಿರ್ಮಾಣವಾಗಲಿದೆ. ಆಡ್ಯಾರ್ ನದಿಗೆ ಅಡ್ಡಲಾಗಿ ಓಡುದಾರಿಯು ವಿಸ್ತರಣೆಗೊಳ್ಳಲಿದೆ. ಓಡುದಾರಿ ಹಾಗೂ ಒಂದು ಟ್ಯಾಕ್ಸಿ ಮಾರ್ಗಕ್ಕೆ ಸ್ಥಳಾವಕಾಶ ಕಲ್ಪಿಸಿಕೊಡುವ ಸಲುವಾಗಿ, ನದಿಯ ಮೇಲೆ ಒಂದು ಸೇತುವೆಯನ್ನು ಕಟ್ಟಲಾಗುತ್ತದೆ. ಇದು ನದಿಯೊಂದಕ್ಕೆ[ಸೂಕ್ತ ಉಲ್ಲೇಖನ ಬೇಕು] ಅಡ್ಡಲಾಗಿ ಒಂದು ಓಡುದಾರಿಯನ್ನು ಹೊಂದುವಲ್ಲಿನ ಭಾರತದಲ್ಲಿನ ಏಕೈಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಖ್ಯಾತಿಯುನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ತಂದುಕೊಡಲಿದೆ. ಮುಂಬಯಿಯಲ್ಲಿ ಮಿಥಿ ನದಿಯ ಮೇಲೆ ಓಡುದಾರಿಯ ಕೇವಲ ಅಂತ್ಯಭಾಗ ಮಾತ್ರವೇ ಸಾಗುತ್ತದೆ. ದ್ವಿತೀಯಕ ಓಡುದಾರಿಯ ವಿಸ್ತರಣಾ ಕಾರ್ಯಕ್ಕೆ ಸುಮಾರು 430 ಕೋಟಿ ರೂಪಾಯಿಗಳು ವೆಚ್ಚವಾಗಲಿದ್ದು, ಇದು 2010ರ[ಸೂಕ್ತ ಉಲ್ಲೇಖನ ಬೇಕು] ವೇಳೆಗೆ ಸಂಪೂರ್ಣಗೊಳ್ಳಲಿದೆ. [೩]
ಪ್ರಸ್ತಾವಿತ ಚೆನ್ನೈ ಮೆಟ್ರೊ ರೈಲು ಯೋಜನೆಯು ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಗರದ ಹಲವಾರು ಭಾಗಗಳಿಗೆ ಸಂಪರ್ಕ ಕಲ್ಪಿಸಲಿದೆ. ತಾತ್ಕಾಲಿಕವಾಗಿ, ಸದರಿ ಯೋಜನೆಯು 2013-2014ನೇ ಹಣಕಾಸು ವರ್ಷದಲ್ಲಿ ಸಂಪೂರ್ಣಗೊಳ್ಳುವ ರೀತಿಯಲ್ಲಿ ಕಾರ್ಯಸೂಚಿಯನ್ನು ರೂಪಿಸಲಾಗಿದೆ.[೪]
ಪ್ರಯಾಣಿಕರ ಆಗಮನ ಹಾಗೂ ನಿರ್ಗಮನದ ಪ್ರಸ್ತಾವಿತ ಹೊಸ ನಿಲ್ದಾಣಗಳು
ಸ್ವದೇಶದ ಆಗಮನ ಹಾಗೂ ನಿರ್ಗಮನದ ಹೊಸ ನಿಲ್ದಾಣವೊಂದರ ನಿರ್ಮಾಣ ಮತ್ತು ಈಗಿರುವ ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನದ ನಿಲ್ದಾಣದ ವಿಸ್ತರಣಾ ಕಾರ್ಯಗಳು ಪ್ರಸಕ್ತ ಅಭಿವೃದ್ಧಿ ಯೋಜನೆಗಳಲ್ಲಿ ಸೇರಿಕೊಂಡಿವೆ. ನಾಲ್ಕು ಸಂಸ್ಥೆಗಳ ಸಹಯೋಗದ ಪ್ರಯತ್ನದೊಂದಿಗೆ ಇದರ ವಿನ್ಯಾಸವನ್ನು ರೂಪಿಸಲಾಗಿದೆ. ಭೂದೃಶ್ಯದ ವಿನ್ಯಾಸವನ್ನು ಹರ್ಗ್ರೀವ್ಸ್ ಅಸೋಸಿಯೇಟ್ಸ್ ಸಂಸ್ಥೆಯು ಕೈಗೊಂಡಿದ್ದರೆ, ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ನಿಲ್ದಾಣದ ಕಟ್ಟಡಗಳು, ನಿಲುಗಡೆ ಗ್ಯಾರೇಜಿನ ರಚನಾ ಸ್ವರೂಪಗಳು ಮತ್ತು ಸಂಪರ್ಕ ಕಲ್ಪಿಸುವ ರಸ್ತೆಮಾರ್ಗದ ಸಂಪರ್ಕ ವ್ಯವಸ್ಥೆಯ ವಿನ್ಯಾಸದ ಜವಾಬ್ದಾರಿಯನ್ನು ಜೆನ್ಸ್ಲರ್ ಅಂಡ್ ಫ್ರೆಡೆರಿಕ್ ಷ್ವಾರ್ಟ್ಜ್ ಸಂಸ್ಥೆಯ ವಾಸ್ತುಶಿಲ್ಪಿಗಳು ಹೊತ್ತುಕೊಂಡಿದ್ದಾರೆ. ದಿ ಕ್ರಿಯೇಟಿವ್ ಗ್ರೂಪ್ ಸಂಸ್ಥೆಯು ಸದರಿ ಯೋಜನೆಗೆ ಸಂಬಂಧಿಸಿದ ಸ್ಥಳೀಯ ವಾಸ್ತುಶಿಲ್ಪಿಗಳ ಪಾತ್ರವನ್ನು ವಹಿಸಲಿದೆ. ಪ್ರಸ್ತಾವಿತ ವಿನ್ಯಾಸವನ್ನು ಈಗಿರುವ ಆಗಮನ ಹಾಗೂ ನಿರ್ಗಮನ ನಿಲ್ದಾಣದ ವಿನ್ಯಾಸ ಘಟಕಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಹಿಂದೆ ವರದಿಯಾಗಿದ್ದರ ಪ್ರಕಾರ, ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹೊಸ ಕಟ್ಟಡಗಳು 10 ದಶಲಕ್ಷ ಪ್ರಯಾಣಿಕರ ಒಂದು ನಿರ್ವಹಣಾ ಸಾಮರ್ಥ್ಯವನ್ನು ಹೊಂದಲಿವೆ. ಅಷ್ಟೇ ಅಲ್ಲ, ಈಗಿರುವ ಆಗಮನ ಹಾಗೂ ನಿರ್ಗಮನದ ನಿಲ್ದಾಣಗಳೊಂದಿಗೆ ಇವನ್ನು ಸಂಯೋಜಿಸಿದಾಗ ವಾರ್ಷಿಕವಾಗಿ 23 ದಶಲಕ್ಷ ಪ್ರಯಾಣಿಕರ ಒಂದು ನಿರ್ವಹಣಾ ಸಾಮರ್ಥ್ಯವನ್ನು ಇವು ಒದಗಿಸಲಿವೆ. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಹೊಸ ಕಟ್ಟಡಗಳು ಸುಮಾರು 1, 40,000 ಚದರ ಮೀಟರುಗಳಷ್ಟು ವಿಸ್ತೀರ್ಣದ ಒಂದು ಪ್ರದೇಶವನ್ನು ಹೊಂದಲಿವೆ ಎಂದು ನಿರೀಕ್ಷಿಸಲಾಗಿದೆ. ಅಷ್ಟೇ ಅಲ್ಲ, 140 ದಾಖಲಾಗುವಿಕೆಯ (ಚೆಕ್-ಇನ್) ಕೌಂಟರುಗಳು ಹಾಗೂ 60 ವಲಸೆಗಾರಿಕೆಯ (ಇಮಿಗ್ರೇಷನ್) ಕೌಂಟರುಗಳು ಇದರಲ್ಲಿ ಸೇರಿಕೊಳ್ಳಲಿವೆ ಮತ್ತು ಎರಡು ಓಡುದಾರಿಗಳು ಟ್ಯಾಕ್ಸಿ ಮಾರ್ಗಗಳ ಒಂದು ಜಾಲದಿಂದ ಪರಸ್ಪರ ಸಂಪರ್ಕವನ್ನು ಹೊಂದಲಿವೆ. ಆಗಮನ ಹಾಗೂ ನಿರ್ಗಮನ ನಿಲ್ದಾಣದ ಸಂಕೀರ್ಣವು ಒಂದು ಮೇಲ್ಸೇತುವೆಯ ಟ್ರಾವೆಲೇಟರ್ ನ್ನು ಹೊಂದಲಿದ್ದು, ಸ್ವದೇಶದ ಆಗಮನ ಹಾಗೂ ನಿರ್ಗಮನ ನಿಲ್ದಾಣ ಮತ್ತು ಅಂತರರಾಷ್ಟ್ರೀಯ ಆಗಮನ ಹಾಗೂ ನಿರ್ಗಮನ ನಿಲ್ದಾಣಗಳ ನಡುವಿನ ಸುಮಾರು 1 ಕಿ.ಮೀ. ಅಂತರವನ್ನು ಇದು ಸಂಪರ್ಕಿಸುತ್ತದೆ. ತುತ್ತತುದಿಯಲ್ಲಿ ಇದು ಒಂದು ಮೇಲೆತ್ತರಿಸಿದ ರಸ್ತೆಯನ್ನು ಹಾಗೂ ಕೆಳಭಾಗದಲ್ಲಿ ಒಂದು ಸುರಂಗ ಮಾರ್ಗವನ್ನು ಹೊಂದಲಿದ್ದು, ಅದು ಎರಡು ವಾಕಲೇಟರ್[[]]ಗಳನ್ನು [೫] ಒಳಗೊಳ್ಳಲಿದೆ.
ಓಡುದಾರಿಗಳ ವಿನ್ಯಾಸದ ವಿವರಗಳು ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ನಿರ್ವಹಿಸಲ್ಪಡುತ್ತಿದ್ದರೆ, ಓಡುದಾರಿಯ ಭೂಪಾರ್ಶ್ವದ ಮೇಲಿನ ಕಟ್ಟಡಗಳ ವಿನ್ಯಾಸಕಾರ್ಯಕ್ಕೆ ವಾಸ್ತುಶಿಲ್ಪದ ಸಂಸ್ಥೆಗಳನ್ನು ಸೀಮಿತಗೊಳಿಸಲಾಗಿದೆ. ಸದ್ಯದ ಪ್ರಸ್ತಾವವು ಈಗ ಅಸ್ತಿತ್ವದಲ್ಲಿರುವ ಓಡುದಾರಿಗೆ ಸಮಾನಾಂತರದ್ದಾಗಿದೆ. "ಎರಡು ಹುಲುಸಾಗಿರುವ ಸಮರ್ಥನೀಯ ತೋಟಗಳು" ಹಾಗೂ ರೆಕ್ಕೆಯಂಥ ಛಾವಣಿಗಳ ಸುತ್ತ ವ್ಯವಸ್ಥೆಗೊಳಿಸಲಾಗುತ್ತಿರುವ ಈ ಸಮಗ್ರ ವಿನ್ಯಾಸವು, ಮಳೆಯ ನೀರನ್ನು ಸಂಗ್ರಹಿಸುವಲ್ಲಿ ಹಾಗೂ ತೋಟದ ಒಂದು ಭಾಗವಾಗಿರುವ ನಿಟ್ಟಿನಲ್ಲಿ ನೆರವಾಗುತ್ತದೆ.[೬]
ಪ್ರಸ್ತಾವಿತ ಹೊಸ ಸಂಯೋಜಿತ ಸರಕು ಸಂಕೀರ್ಣ
ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಂಕೀರ್ಣದಲ್ಲಿ ಒಂದು ಸಂಯೋಜಿತ ಸರಕು ಸಂಕೀರ್ಣವನ್ನು ನಿರ್ಮಿಸಲಾಗುವುದು. ಸದರಿ ಸಂಕೀರ್ಣವನ್ನು ಸುಮಾರು 145 ಕೋಟಿ ರೂಪಾಯಿಗಳ ವೆಚ್ಚದಲ್ಲಿ 15 ತಿಂಗಳಲ್ಲಿ ನಿರ್ಮಿಸಲಾಗುವುದು. ನೆಲ ಅಂತಸ್ತು 21,000 ಚದರ ಮೀಟರುಗಳಷ್ಟು ವಿಸ್ತೀರ್ಣವನ್ನು ಹೊಂದಲಿದ್ದರೆ, ಮೊದಲ ಅಂತಸ್ತನ್ನು 12,100 ಚದರ ಮೀಟರುಗಳ ವಿಸ್ತೀರ್ಣದ ಪ್ರದೇಶದ ಮೇಲೆ ಕಟ್ಟಲಾಗುತ್ತದೆ. ಹೊಸ ಕಟ್ಟಡವನ್ನು ಆಮದು ಸಂಬಂಧಿ ಚಟುವಟಿಕೆಗಳಿಗಾಗಿ ಪ್ರತ್ಯೇಕವಾಗಿ ಬಳಸಲಾಗುತ್ತದೆ. ಸಿವಿಲ್ ಕಾಮಗಾರಿಗಳು ಒಮ್ಮೆಗೆ ಸಂಪೂರ್ಣಗೊಂಡ ನಂತರ, ಯಾಂತ್ರೀಕೃತ ಶೇಖರಣೆ ಹಾಗೂ ಮರುಗಳಿಕೆಯ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಇದಕ್ಕಾಗಿ 75 ಕೋಟಿ ರೂಪಾಯಿಗಳು ವೆಚ್ಚವಾಗಲಿವೆ.[೭]
ಹೊಸ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ
ತಿರುಶೂಲಂನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ವಿಸ್ತರಣೆಯನ್ನು ಹೊರತುಪಡಿಸಿ, ಶ್ರೀಪೆರುಂಬುದೂರ್ ಮತ್ತು ತಿರುವಳ್ಳೂರು ತಾಲ್ಲೂಕುಗಳಲ್ಲಿ ಒಂದು ಹೊಸ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪಿಸುವುದರ ಕುರಿತು ತಮಿಳು ನಾಡುಡಿನ ಮುಖ್ಯಮಂತ್ರಿಯಾದ M. ಕರುಣಾನಿಧಿಯವರು ಪ್ರಕಟಣೆಯನ್ನು ನೀಡಿದ್ದಾರೆ.
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವು ...3,486.66 acres (14.1100 km2)ರಂದು ಬಳಕೆಗೆ ಬರಲಿದ್ದು, ಸುಮಾರು 2,000 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಚೆನ್ನೈ ವಿಮಾನ ನಿಲ್ದಾಣದ ವಿಸ್ತರಣೆಯು ...1,069.99 acres (4.3301 km2)ರಂದು ನೆರವೇರಲಿದೆ.
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಆರಂಭದಲ್ಲಿ ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ (AAI) ವಹಿಸಿಕೊಡುವುದಿತ್ತು. ಆದಾಗ್ಯೂ, ಚೆನ್ನೈ ಸಮೀಪದ ಶ್ರೀಪೆರುಂಬುದೂರಿನಲ್ಲಿ ಮೇಲೇಳುತ್ತಿರುವ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವು ಒಂದು ಸಾರ್ವಜನಿಕ-ಖಾಸಗಿ ಭಾಗೀದಾರಿಕೆಯ ಅಡಿಯಲ್ಲಿ ಅಭಿವೃದ್ಧಿಗೊಳ್ಳಲಿದೆ. ಪ್ರಧಾನ ಮಂತ್ರಿಯವರ ಸಮಿತಿಯು ಈ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಪೂರ್ವಭಾವಿ-ಕಾರ್ಯಸಾಧ್ಯತಾ ವರದಿಯೊಂದನ್ನು ಒದಗಿಸಲೂ ಸಹ ಕೇಳಿಕೊಂಡಿದೆ.
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವು ನಾಲ್ಕು ಓಡುದಾರಿಗಳನ್ನು ಹೊಂದಲಿದೆ. ಚೆನ್ನೈ ವಿಮಾನ ನಿಲ್ದಾಣದ ಮೇಲೆ ಕಣ್ಣಿಟ್ಟಿರುವ ಅಗ್ರಗಣ್ಯ ಜಾಗತಿಕ ವಿಮಾನ ನಿಲ್ದಾಣ ಅಭಿವರ್ಧಕ ಕಂಪನಿಗಳು ಸದರಿ ಯೋಜನೆಗೆ ಸಂಬಂಧಿಸಿದ ಹರಾಜು ಕೂಗುವಿಕೆಗಾಗಿ ಭಾರತೀಯ ಕಂಪನಿಗಳೊಂದಿಗೆ ಸೇರುವೆಯ ಒಪ್ಪಂದಗಳನ್ನು ಮಾಡಿಕೊಳ್ಳಲು ಮುನ್ನುಗ್ಗುತ್ತಿವೆ. ಈ ಯೋಜನೆಯಲ್ಲಿ ಆಸಕ್ತಿ ತೋರಿಸಿರುವ ಕಂಪನಿಗಳಲ್ಲಿ ಸಿಂಗಪೂರ್ ಷಾಂಗೈ ಏರ್ಪೋರ್ಟ್, ಮ್ಯಾಕ್ಕ್ವಾರೀ ಗ್ರೂಪ್, GMR ಗ್ರೂಪ್, GVK ಇಂಡಸ್ಟ್ರೀಸ್ ಲಿಮಿಟೆಡ್. ಮತ್ತು ಟಾಟಾ ಗ್ರೂಪ್ ಸೇರಿವೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಪ್ರಫುಲ್ ಪಟೇಲ್ ಈ ಕುರಿತು ಸ್ಪಷ್ಟೀಕರಣವನ್ನು ನೀಡಿ, "ಚೆನ್ನೈ ಸಮೀಪದಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವಲ್ಲಿ AAI ಯಾವುದೇ ಪಾತ್ರವನ್ನು ಹೊಂದಿಲ್ಲ" ಎಂದು ತಿಳಿಸಿದ್ದಾರೆ.
ಕಾಮಗಾರಿಗಳು ಶುರುವಾದ 28 ತಿಂಗಳೊಳಗಾಗಿ ಹೊಸ ವಿಮಾನ ನಿಲ್ದಾಣವು ಸಂಪೂರ್ಣಗೊಳ್ಳುವುದೆಂದು ನಿರೀಕ್ಷಿಸಲಾಗಿದೆ.
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗುವುದೇ?
ಶ್ರೀಪೆರುಂಬುದೂರ್ನಲ್ಲಿನ ಅತಿ-ನಿರೀಕ್ಷಿತ ಎರಡನೇ ವಿಮಾನ ನಿಲ್ದಾಣದ ಯೋಜನೆಯು ಕೈಗೂಡದಿರಬಹುದು. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಸದರಿ ಯೋಜನೆಯನ್ನು ಕೈಬಿಡಲು ಸಿದ್ಧತೆ ನಡೆಸುತ್ತಿವೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯು (ICAO) ಸದರಿ ಯೋಜನೆಯ ಕುರಿತಾದ ಒಂದು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೊಂಡಿದ್ದರೂ ಸಹ, ಕೇಂದ್ರ ನಾಗರಿಕ ವಿಮಾನಯಾನ ಖಾತೆಯಲ್ಲಿನ ಓರ್ವ ಹಿರಿಯ ಅಧಿಕಾರಿಯು ಹೇಳಿರುವ ಪ್ರಕಾರ, ಮೀನಂಬಕ್ಕಂನಲ್ಲಿ ಸದ್ಯಕ್ಕೆ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವು ವಿಸ್ತರಣೆಗೆ ಒಳಗಾಗುತ್ತಿರುವುದರಿಂದ, ಸದರಿ ನಗರದಲ್ಲಿ ಎರಡನೇ ವಿಮಾನ ನಿಲ್ದಾಣವವೊಂದನ್ನು ನಿರ್ಮಿಸುವ ತುರ್ತು ಅಗತ್ಯ ಕಂಡುಬರುತ್ತಿಲ್ಲ ಎಂದು ಸರ್ಕಾರಕ್ಕೆ ಮನವರಿಕೆಯಾಗಿದೆ.[೮]
ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಪ್ರಸ್ತಾವವು ಇನ್ನೂ ಬಿಡಲ್ಪಟ್ಟಿಲ್ಲ
ಚೆನ್ನೈ ವಿಮಾನ ನಿಲ್ದಾಣದ ವಿಸ್ತರಣೆ ಹಾಗೂ ಆಧುನಿಕೀಕರಣವು ಮುಂದಿನ ವರ್ಷದ ವೇಳೆಗೆ ಸಂಪೂರ್ಣಗೊಳ್ಳಲಿದೆ ಮತ್ತು ಒಂದು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ಸರ್ಕಾರವು 'ಅಗತ್ಯ ಕ್ರಮಗಳನ್ನೂ' ಸಹ ಕೈಗೊಳ್ಳುತ್ತಿದೆ ಎಂದು ಇಂದು ರಾಜ್ಯ ವಿಧಾನಸಭೆಗೆ ತಿಳಿಸಲಾಯಿತು.
ಶಾಸನಸಭೆಯಲ್ಲಿ ಸಚಿವ K N ನೆಹರುರವರಿಂದ ಮಂಡಿಸಲ್ಪಟ್ಟ ಸಾರಿಗೆ ಇಲಾಖೆಯ ಕಾರ್ಯನೀತಿಯ ಟಿಪ್ಪಣಿಯು ಹೇಳುವ ಪ್ರಕಾರ, ದಕ್ಷಿಣದ ಒಂದು ಪ್ರಮುಖ ಮಹಾನಗರವು ಅತ್ಯಂತ ವೇಗವಾಗಿ ಹೂಡಿಕೆಯ ಗಮ್ಯಸ್ಥಾನವಾಗಿ ಮಾರ್ಪಡುತ್ತಿದೆ ಎಂಬ ಅಂಶವನ್ನು ಸರ್ಕಾರ ಅಂಗೀಕರಿಸಿರುವುದರಿಂದ ಸದ್ಯದ ಆಧುನಿಕೀಕರಣದ ಪ್ರಯತ್ನವು ತ್ವರಿತ ಗತಿಯಲ್ಲಿದೆ.
"ವಿಮಾನ ನಿಲ್ದಾಣದ ಆಧುನಿಕೀಕರಣವು 2011ರ ವೇಳೆಗೆ ಸಂಪೂರ್ಣಗೊಳ್ಳಲಿದೆ.
"127.06 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈಗಾಗಲೇ 126 ಎಕರೆಗಳಷ್ಟು ಭೂಮಿಯನ್ನು ಸರ್ಕಾರವು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಭಾರತದ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಅದನ್ನು ವರ್ಗಾಯಿಸಲಾಗಿದೆ" ಎಂದು ಸದರಿ ಟಿಪ್ಪಣಿಯು ಹೇಳಿದೆ.
AAI ಸಂಸ್ಥೆಯು ಸದರಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಸಂಸ್ಥೆಯಾಗಿತ್ತು ಮತ್ತು 1,808 ಕೋಟಿ ರೂಪಾಯಿಗಳ (18.08 ಶತಕೋಟಿ ರೂಪಾಯಿಗಳು) ಒಂದು ಅಂದಾಜು ವೆಚ್ಚದಲ್ಲಿ ಸದರಿ ಕಾಮಗಾರಿಯನ್ನು ಅದು ಕೈಗೆತ್ತಿಕೊಂಡಿತ್ತು ಎಂದು ಕಾರ್ಯನೀತಿಯ ಟಿಪ್ಪಣಿಯು ತಿಳಿಸಿದೆ. ಮೇಲಾಗಿ, ಇಲ್ಲಿಗೆ ಸಮೀಪದ ಒಂದು ಕೈಗಾರಿಕಾ ಕೇಂದ್ರವಾದ ಶ್ರೀಪೆರುಂಬುದೂರಿನಲ್ಲಿ ಒಂದು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ರಾಜ್ಯ ಸರ್ಕಾರವೂ ಸಹ 'ಅಗತ್ಯ ಕ್ರಮವನ್ನು' ತೆಗೆದುಕೊಳ್ಳುತ್ತಿದೆ ಎಂದು ಟಿಪ್ಪಣಿಯು ತಿಳಿಸಿತು.
ಸಾರಿಗೆ ಕೊಂಡಿಗಳು
ದಟ್ಟಣೆಯನ್ನು ಹೊಂದಿರುವ ಗ್ರಾಂಟ್ ಸದರ್ನ್ ಟ್ರಂಕ್ ರಸ್ತೆಗೆ (ರಾಷ್ಟ್ರೀಯ ಹೆದ್ದಾರಿ 45) ಹೊಂದಿಕೊಂಡಂತೆ ವಿಮಾನ ನಿಲ್ದಾಣವು ಸ್ಥಾಪಿತಗೊಂಡಿದೆ ಮತ್ತು ಉಪನಗರದ ರೈಲುಮಾರ್ಗದ ಜಾಲದ ಮೇಲಿರುವ ವಿಮಾನ ನಿಲ್ದಾಣ ಕೇಂದ್ರದಿಂದಲೂ (ತಿರುಶೂಲಂ) ಇದಕ್ಕೆ ಸೇವೆಯು ದೊರೆಯುತ್ತಿದೆ. ಪ್ರಸ್ತಾವಿತ ಮೆಟ್ರೋ ರೈಲು ವ್ಯವಸ್ಥೆಯು (ಚೆನ್ನೈ ಮೆಟ್ರೊ) ಸದರಿ ವಿಮಾನ ನಿಲ್ದಾಣವನ್ನು ಚೆನ್ನೈನಲ್ಲಿನ ಇತರ ಪ್ರಮುಖ ಸ್ಥಳಗಳೊಂದಿಗೆ ಸಂಪರ್ಕ ಕಲ್ಪಿಸಲಿದೆ.
ಘಟನೆಗಳು ಮತ್ತು ಅಪಘಾತ
1984ರ ಆಗಸ್ಟ್ನಲ್ಲಿ, ವಿಮಾನ ನಿಲ್ದಾಣಕ್ಕೆ ಸುಮಾರು 1,200 ಮೀಟರುಗಳ ಅಂತರದಲ್ಲಿ ಸಂಭವಿಸಿದ ಒಂದು ಬಾಂಬ್ ಸ್ಫೋಟದಿಂದಾಗಿ 33 ವ್ಯಕ್ತಿಗಳು ಮರಣ ಹೊಂದಿದರು ಹಾಗೂ ಇತರ 27 ವ್ಯಕ್ತಿಗಳು ಗಾಯಗೊಂಡರು.[೯]
ಇವನ್ನೂ ಗಮನಿಸಿ
ಆಕರಗಳು
- ↑ Airport information for VOMM at World Aero Data. Data current as of October 2006.Source: DAFIF.
- ↑ Airport information for MAA at Great Circle Mapper. Source: DAFIF (effective Oct. 2006).
- ↑ ಆಡ್ಯಾರ್ ನದಿಗೆ ಅಡ್ಡಲಾಗಿರುವ ಓಡುದಾರಿಯನ್ನು ಹೊಂದಲಿರುವ ಚೆನ್ನೈ ವಿಮಾನ ನಿಲ್ದಾಣ
- ↑ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಂಪರ್ಕವನ್ನು ಕಲ್ಪಿಸಲಿರುವ ಚೆನ್ನೈ ಮೆಟ್ರೊ ರೈಲು ವ್ಯವಸ್ಥೆ
- ↑ ಒಂದು ‘ಮೇಲ್ಸೇತುವೆಯ ಟ್ರಾವೆಲೇಟರ್’ನ್ನು ಪಡೆಯಲಿರುವ ವಿಮಾನ ನಿಲ್ದಾಣ
- ↑ ಪ್ರಸ್ತಾವಿತ ಹೊಸ ಚೆನ್ನೈ ವಿಮಾನ ನಿಲ್ದಾಣ - ಯೋಜನೆ
- ↑ ಪ್ರಸ್ತಾವಿತ ಹೊಸ ಚೆನ್ನೈ ವಿಮಾನ ನಿಲ್ದಾಣದ ಸರಕು ಸಂಕೀರ್ಣ - ಯೋಜನೆ
- ↑ ಶ್ರೀಪೆರುಂಬುದೂರ್ ಏರ್ಪೋರ್ಟ್ ಮೇ ನಾಟ್ ಟೇಕ್ ಆಫ್, ದಿ ಟೈಮ್ಸ್ ಆಫ್ ಇಂಡಿಯಾ, ಚೆನ್ನೈ, 2010ರ ಫೆಬ್ರುವರಿ 27
- ↑ ಈಳಂ ಆರ್ಮಿ ಚೀಫ್ ಹೆಲ್ಡ್ ಫಾರ್ ಚೆನ್ನೈ ಬ್ಲಾಸ್ಟ್, ದಿ ಇಂಡಿಯನ್ ಎಕ್ಸ್ಪ್ರೆಸ್ ನ್ಯೂಸ್ ಸರ್ವೀಸ್, 1998ರ ಫೆಬ್ರವರಿ 8
ಬಾಹ್ಯ ಕೊಂಡಿಗಳು
- ಚೆನ್ನೈ ವಿಮಾನ ನಿಲ್ದಾಣ ಮಾಗದರ್ಶಿ
- ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
- ಪ್ರಸ್ತಾವಿತ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಹಾಗೂ ಚೆನ್ನೈ ವಿಮಾನ ನಿಲ್ದಾಣದ ಕುರಿತಾದ ಕ್ರೋಡೀಕೃತ ಪರಿಷ್ಕರಣೆಗೆ ಸಂಬಂಧಿಸಿದ ನಕಾಶೆ
- ಹೊಸ ಚೆನ್ನೈ ವಿಮಾನ ನಿಲ್ದಾಣ ವಿನ್ಯಾಸ-ಷ್ವಾರ್ಟ್ಜಾರ್ಕ್
- Accident history for MAA at Aviation Safety Network
- REDIRECT Template:Chennai topics
- Pages with non-numeric formatnum arguments
- Pages using duplicate arguments in template calls
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles lacking sources from January 2010
- Articles with invalid date parameter in template
- All articles lacking sources
- Articles with unsourced statements from January 2010
- Articles with unsourced statements from November 2008
- Articles with unsourced statements from March 2010
- Commons link is locally defined
- Commons category with page title different than on Wikidata
- ತಮಿಳುನಾಡಿನಲ್ಲಿನ ವಿಮಾನ ನಿಲ್ದಾಣಗಳು
- ಭಾರತದಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು
- ಚೆನ್ನೈನಲ್ಲಿನ ಸಾರಿಗೆ ವ್ಯವಸ್ಥೆ
- ಚೆನ್ನೈನಲ್ಲಿರುವ ಕಟ್ಟಡಗಳು ಹಾಗೂ ರಚನಾ ಸ್ವರೂಪಗಳು