ಕರ್ನಾಟಕದ ಜಲಪಾತಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
No edit summary
೧ ನೇ ಸಾಲು: ೧ ನೇ ಸಾಲು:
[[ಕರ್ನಾಟಕ]] ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. [[ಕರ್ನಾಟಕ]]ದ ವಿವಿದ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ, ಅಬ್ಬೆ, ಹೆಬ್ಬೆ, ದಬ್ಬೆ, ಜೋಗ, ದಬ ದಬೆ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.
[[ಕರ್ನಾಟಕ]] ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. [[ಕರ್ನಾಟಕ]]ದ ವಿವಿದ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ, ಅಬ್ಬೆ, ಹೆಬ್ಬೆ, ದಬ್ಬೆ, ಜೋಗ, ದಬ ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.





೧೩:೧೯, ೨೪ ಮೇ ೨೦೧೦ ನಂತೆ ಪರಿಷ್ಕರಣೆ

ಕರ್ನಾಟಕ ರಾಜ್ಯವು ಹಲವಾರು ವಿಷಯಗಳಿಗೆ ಪ್ರಸಿದ್ಧವಾಗಿದೆ. ಪ್ರಕೃತಿ ಸೌಂದರ್ಯ ಅದರಲ್ಲಿ ಬಹು ಪ್ರಮುಖವಾದುದು. ಅದರಲ್ಲೂ ಜಲಪಾತಗಳ ವಿಷಯದಲ್ಲಿ ಕರ್ನಾಟಕ ಭಾರತದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ತಿಳಿಯಲಾಗಿದೆ. ತನ್ನಲ್ಲಿರುವ ಹಲವಾರು ನಯನ ಮನೋಹರವಾದ ಜಲಪಾತಗಳಿಂದಾಗಿ ಕರ್ನಾಟಕವು ಜಗತ್ಪ್ರಸಿದ್ಧಿಯನ್ನು ಪಡೆದಿದೆ. ಕರ್ನಾಟಕದ ವಿವಿದ ಪ್ರದೇಶಗಳಲ್ಲಿ ಜಲಪಾತಗಳನ್ನು ಅಬ್ಬಿ, ಅಬ್ಬೆ, ಹೆಬ್ಬೆ, ದಬ್ಬೆ, ಜೋಗ, ದಬ ದಬೆ, ದಿಡಗ/ದಿಡುಗ ಎಂಬ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.


ಕರ್ನಾಟಕ ರಾಜ್ಯದ ಬಹುಪಾಲು ಜಲಪಾತಗಳು ಕಂಡು ಬರುವುದು ಪಶ್ಚಿಮ ಘಟ್ಟಗಳ ಮಡಿಲಿನಲ್ಲಿ. ಕೊಡಗಿನಿಂದ ಹಿಡಿದು ಉತ್ತರ ಕನ್ನಡದ ಅಂಚಿನವರೆಗೆ ಹರಡಿರುವ ಪಶ್ಚಿಮ ಘಟ್ಟಗಳು ದೊಡ್ಡ ಹಾಗೂ ಚಿಕ್ಕ ಪುಟ್ಟ ಜಲಪಾತಗಳನ್ನೂ ಸೇರಿ ಏನಿಲ್ಲವೆಂದರೂ ಸುಮಾರು ೫೦೦ ರ ಆಸು ಪಾಸು ಜಲಪಾತಗಳಿವೆ ಎಂದು ಅಂದಾಜು ಮಾಡಲಾಗಿದೆ.

ಅಬ್ಬಿ ಜಲಪಾತ

ಅಬ್ಬಿ ಜಲಪಾತ, ಮಡಿಕೇರಿ

ಅಬ್ಬಿ ಜಲಪಾತವು ಕೊಡಗು ಜಿಲ್ಲೆಯ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ ಕೇವಲ ೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯವರೆಗೆ ಬಸ್ ಸೌಕರ್ಯವಿದ್ದು ಅಲ್ಲಿಂದ ೫ ಕಿ.ಮೀ. ಯಾವುದೇ ಸ್ಥಳೀಯ ಖಾಸಗಿ ವಾಹನವನ್ನು ಹಿಡಿದು ಹೋಗಬಹುದು.ನಂತರ ಸುಮಾರು ೫೦೦ ಮೀ ನಷ್ಟು ಕಾಫಿ ತೋಟದ ಮಧ್ಯೆ ನಡೆದುಕೊಂಡು ಹೋದರೆ ಈ ಸುಂದರವಾದ ಜಲಪಾತ ಕಾಣಸಿಗುತ್ತದೆ. ಮಳೆಗಾಲದ ನಂತರದ ಅವಧಿಯಲ್ಲಿ ಹೋದರೆ ೧೦೭ ಅಡಿ ಎತ್ತರದಿಂದ ಮೈದುಂಬಿಕೊಂಡು ಧುಮುಕುವ ಜಲಪಾತದ ವೈಭವವನ್ನು ಸವಿಯಬಹುದು.

ಸಾತೊಡ್ಡಿ ಜಲಪಾತ

ಸಾತೊಡ್ಡಿ ಜಲಪಾತ, ಯಲ್ಲಾಪುರ




ಜೋಗ ಜಲಪಾತ

ಜೋಗ ಜಲಪಾತ

ಜೋಗ ಅಥವ ಗೇರುಸೊಪ್ಪ ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗಡಿಯಲ್ಲಿರುವ ಜೋಗ ಭಾರತದ ಅತಿ ಎತ್ತರದ ಜಲಪಾತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು ೨೯೨ ಮೀಟರ್ ಎತ್ತರದಿಂದ ಶರಾವತಿ ನದಿಯು ರಾಜಾ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಸೀಳುಗಲಾಗಿ ಇಲ್ಲಿ ಧುಮುಕುತ್ತೆದೆ.

ಜೋಗ ಜಲಪಾತದ ಬಗ್ಗೆ ಸಂಪೂರ್ಣವಾದ ಲೇಖನವನ್ನು ಇಲ್ಲಿ ಓದಿರಿ.

ಬೈಂದೂರು ಕೋಸಳ್ಳಿ ಜಲಪಾತ

ಚಿತ್ರ:Kosalli-falls-in-summer---arial.jpg
ಕೋಸಳ್ಳಿ ಜಲಪಾತ
ಕೋಸಳ್ಳಿ ಜಲಪಾತ ಕೊನೆಯ ಹಂತ


ಕೋಸಳ್ಳಿ ಜಲಪಾತವು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನಿಂದ ಸುಮಾರು 11 ಕಿ.ಮೀ ದೂರದಲ್ಲಿದೆ. ಬೈಂದೂರಿನಿಂದ ಶಿರೂರು ಮಾರ್ಗವಾಗಿ ಸುಮಾರು 7 ರಿಂದ 8 ಕಿ.ಮೀ ದೂರವಿರುವ ತೂದಳ್ಳಿಗೆ ಬಂದು ಅಲ್ಲಿಂದ ಸುಮಾರು 3 ಕಿ.ಮೀ ಕಾಡುಮಾರ್ಗದಲ್ಲಿ ನಡೆದು ಹೋದರೆ ಸಿಗುವುದೇ ಕೋಸಳ್ಳಿ ಜಲಪಾತ. ಕೋಸಳ್ಳಿ ಜಲಪಾತವು 3-5 ಹಂತಗಳಾಗಿ ಧುಮುಕುತ್ತದೆ.

  • ದೂರ: ಬೆಂಗಳೂರಿನಿಂದ ಸುಮಾರು 480 ಕಿ.ಮೀ. ಮಂಗಳೂರಿನಿಂದ 130 ಕಿ.ಮೀ
  • ಮಾರ್ಗ: ಮಂಗಳೂರು - ಗೋವಾ ರಾಷ್ಟ್ರೀಯ ಹೆದ್ದಾರಿ 17
  • ಸಮೀಪದ ಪಟ್ಟಣಗಳು: ಭಟ್ಕಳ, ಕುಂದಾಪುರ, ಉಡುಪಿ
  • ಸಮೀಪದ ಪ್ರಮುಖ ಆಕರ್ಷಣೆಗಳು: ಕೊಲ್ಲೂರು ಶ್ರೀ ಮುಕಾಂಬಿಕಾ ದೇವಸ್ಥಾನ (27ಕಿ.ಮೀ*), ಮುರ್ಡೇಶ್ವರ (30ಕಿ.ಮೀ*), ಉಡುಪಿ ಶ್ರೀ ಕೃಷ್ಣ ದೇವಸ್ಥಾನ (67ಕಿ.ಮೀ*)ಮರವಂತೆ ಕಡಲ ತೀರ (18ಕಿ.ಮೀ*), (*ಬೈಂದೂರಿನಿಂದ ಇರುವ ದೂರ)

ಕೋಸಳ್ಳಿ ಜಲಪಾತದ ಇತರ ಚಿತ್ರಗಳು

ಇತರ (ಅಪೂರ್ಣ ಪಟ್ಟಿ)

ಹೊರಗಿನ ಸಂಪರ್ಕಗಳು

ಡ್ರೀಮ್ ರೂಟ್ಸ್