ಕರ್ನಾಟಕದ ಏಕೀಕರಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊಸ ಪುಟ: ಸ್ವಾತಂತ್ರ್ಯಾ ನಂತರವೂ ಕರ್ನಾಟಕಕ್ಕೆ ನಿಜವಾದ ಅಸ್ಥಿತ್ವವೇ ಇರಲಿಲ್ಲ. ಏಕೆಂ...
 
ಚು 'ಕರ್ನಾಟಕ ಏಕೀಕರಣ' - ಕರ್ನಾಟಕದ ಏಕೀಕರಣ ಪುಟಕ್ಕೆ ಸ್ಥಳಾಂತರಿಸಲಾಗಿದೆ: standardizing the title
( ಯಾವುದೇ ವ್ಯತ್ಯಾಸವಿಲ್ಲ )

೨೨:೧೦, ೮ ನವೆಂಬರ್ ೨೦೦೯ ನಂತೆ ಪರಿಷ್ಕರಣೆ

ಸ್ವಾತಂತ್ರ್ಯಾ ನಂತರವೂ ಕರ್ನಾಟಕಕ್ಕೆ ನಿಜವಾದ ಅಸ್ಥಿತ್ವವೇ ಇರಲಿಲ್ಲ. ಏಕೆಂದರೆ ಅದು ೪ ಭಾಗಗಳಲ್ಲಿ ಹಂಚಿಹೋಗಿತ್ತು.ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು.

ಏಕಿಕರಣಕ್ಕೆ ಮೊದಲು

೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಂದು ಕರ್ನಾಟಕ ಏಕೀಕರಣವಾಯಿತು. ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗು ಮದ್ರಾಸ್ ಕರ್ನಾಟಕ ಎಂದು ನಾಲ್ಕು ಭಾಗಗಳಾಗಿದ್ದ ಕನ್ನಡ ನಾಡು ಈ ದಿನ ರಾಜಕೀಯವಾಗಿ ಒಂದಾಯಿತು.ಈ ದಿನವನ್ನು ಕರ್ನಾಟಕ ರಾಜ್ಯೋತ್ಸವ ದಿನವನ್ನಾಗಿ ಅಚರಿಸಲಾಗುತ್ತಿದೆ. ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.

ಕರ್ನಾಟಕ ಏಕೀಕರಣ ಹೋರಾಟ

ಕರ್ನಾಟಕ ಏಕೀಕರಣವಾಗ ಬೇಕೆಂದು ಸ್ವಾತಂತ್ರ್ಸ ಪೂರ್ವದಿಂದಲೂ ಹೋರಾಟ ನೆಡೆದಿತ್ತು. ಹೈದರಾಬಾದು ಕಾಂಗ್ರೆಸ್ ಅಧಿವೇಶನದಲ್ಲಿ, ಕರ್ನಾಟಕ ಏಕೀಕರಣ ಬೇಡಿಕೆಯನ್ನು ವಿರೋಧಿಸಿ ನಿರ್ಣಯವಾದಾಗ, ಕನ್ನಡಿಗರಿಗೆ ಬಹಳ ನಿರಾಸೆಯಾಯಿತು. ಕರ್ನಾಟಕದ ಕಾಂಗ್ರೆಸ್ ಮುಖಂಡರು, ನಿಜಲಿಂಗಪ್ಪನವರ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಸಭೆ ಸೇರಿ, ಕರ್ನಾಟಕ ಏಕೀಕರಣ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಂದರ್ಭ ಬಂದಿತ್ತು. ಈ ನಡುವೆ, ರಾಜ್ಯಾದಂತ್ಯ ಸಂಚರಿಸಿ, ವಿದ್ಯಾರ್ಥಿಗಳನ್ನು ಸಂಘಟಿಸಿದ್ದ ಅನ್ನದಾನಯ್ಯ ಪುರಾಣಿಕ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತನ್ನು ಸ್ಥಾಪಿಸಿ, ಅದರ ಪ್ರಥಮ ಅಧಿವೇಶನವನ್ನು ಹೈದರಾಬಾದಿನಲ್ಲಿ ನೆಡೆಸಿದ್ದರು. ರಾಜ್ಯದ ಹಿರಿಯ ರಾಜಕಾರಣಿ ಮಾರ್ಗರೇಟ್ ಆಳ್ವಾರವರು ಈ ಪರಿಷತ್ತಿನಲ್ಲಿ ಸಕ್ರೀಯ ಪಾತ್ರ ವಹಿಸಿದ್ದರು. ಈ ಅಧಿವೇಶನದ ಸರ್ವಾನುಮತದ ನಿರ್ಣಯದಂತೆ, ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ತಿನಕರ್ನಾಟಕ ಏಕೀಕರಣ ಹೋರಾಟದಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಲಾಗಿತ್ತು. ಅದರಂತೆ ಕರ್ನಾಟಕ ಏಕೀಕರಣದ ಪರವಾಗಿ ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ನೆಡೆದಿತ್ತು. ಕರ್ನಾಟಕ ಏಕೀಕರಣದ ವಿರೋಧಿಗಳು ಕೆಲವು ಈ ಸಂದರ್ಭದಲ್ಲಿ ಹಿಂಸಾಚಾರ ನೆಡೆಸಿದ ಕಾರಣ, ಜನಸಾಮಾನ್ಯರು, ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಪೋಲಿಸರು ವಿದ್ಯಾರ್ಥಿಗಳೇ ಹಿಂಸಾಚಾರ ನೆಡೆಸಿದರೆಂದೂ ಆಪಾದಿಸಿ, ಅನ್ನದಾನಯ್ಯ ಪುರಾಣಿಕ ಮತ್ತು ಕೆಲವು ವಿದ್ಯಾರ್ಥಿ ಪರಿಷತ್ತಿನ ಮುಖಂಡರನ್ನು ಪೋಲಿಸರು ಬಂಧಿಸಿದ್ದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಮತ್ತು ಹುಬ್ಬಳಿಯ ಹಿರಿಯ ರಾಜಕಾರಣಿ-ವಕೀಲರಾದ ಶೆಟ್ಟರ್ರವರು ನ್ಯಾಯಾಲಯದಲ್ಲಿ ವಾದಿಸಿ, ಅನ್ನದಾನಯ್ಯ ಪುರಾಣಿಕರನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು. (( ಕರ್ನಾಟಕ ಏಕೀಕರಣದ ಬಗ್ಗೆ ಪುಸ್ತಕ ಬರೆದಿರುವ ಕೆಲವು ಲೇಖಕರು ಪೋಲಿಸರ ಈ ಕ್ರಮವನ್ನು ಸರಿಯಂದು ದಾಖಲಿಸಿ, ಹುಬ್ಬಳ್ಳಿ ಗಲಭೆಗಾಗಿ ವಿದ್ಯಾರ್ಥಿಗಳನ್ನು ದೂಷಿಸಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ))

ವಿದ್ಯಾರ್ಥಿಗಳು ಹುಬ್ಬಳ್ಳಿಯಲ್ಲಿ ನೆಡೆಸಿದ ಮೆರವಣಿಗೆ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ನೀಡಿದ ಬೆಂಬಲ, ಕರ್ನಾಟಕ ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರವು ಕರ್ನಾಟಕದ ಏಕೀಕರಣದ ಪರವಾಗಿ ಕೆಲಸ ಮಾಡಲು ಪ್ರಮುಖ ಕಾರಣಗಳಲ್ಲಿ ಒಂದಾಗಿತ್ತು ಎಂದು ಎಸ್.ನಿಜಲಿಂಗಪ್ಪ,ಬಿ.ಡಿ.ಜತ್ತಿ ಮೊದಲಾದವರು ಹಲವು ಸಂದರ್ಭಗಳಲ್ಲಿ ಹೇಳಿದ್ದಾರೆ.

ಕರ್ನಾಟಕ ಏಕೀಕರಣವಾದ ನಂತರ ಸಮಾಜ, ನ್ಯಾಯಾಂಗ, ಸಮಾಜ ಮತ್ತು ಸಾಹಿತ್ಯ ಸೇವೆಗೆ ಅನ್ನದಾನಯ್ಯ ಪುರಾಣಿಕರು ಹೆಚ್ಚು ಗಮನ ನೀಡಿದ್ದಾರೆ. ಇವರು ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ ವಾಸವಾಗಿದ್ದಾರೆ. ಪತ್ನಿ ನೀಲಾಂಬಿಕೆಯವರು, ಕನ್ನಡ ಪುಸ್ತಕಗಳ ಪ್ರಕಟಣೆಗಾಗಿ ಮೀಸಲಾದ ಶ್ರೀ ಸಿದ್ಧಲಿಂಗ ಪ್ರಕಾಶನ ಸಂಸ್ಥೆ ನೆಡೆಸುತ್ತಿದ್ದಾರೆ. ಮಗಳು ಚಂದ್ರಿಕಾ ಪುರಾಣಿಕ, ಕನ್ನಡದ ಮಹಿಳಾ ಸಾಹಿತಿ, ಆಕಾಶವಾಣಿ-ದೂರದರ್ಶನ ಕಲಾವಿದೆ ಮತ್ತು ಶೇಷಾದ್ರಿಪುರಂ ಸಂಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ಮಗ ಉದಯ ಶಂಕರ ಪುರಾಣಿಕ, ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ ಮುಖ್ಯಸ್ಥರಾಗಿದ್ದು, ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾರೆ ( ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಇತ್ಯಾದಿ) ಮತ್ತು ವಿಶ್ವವಿದ್ಯಾಲಯಗಳು ಇವರು ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತು ಬರೆದಿರುವ ಪುಸ್ತಕಗಳನ್ನು ಪ್ರಕಟಿಸಲು ಮುಂದಾಗಿವೆ.

ಉಲ್ಲೇಖಗಳು

↑ ಬೆಂಗಳೂರು ದೂರದರ್ಶನ, ಉದಯ ಟಿ.ವಿ ಸಂದರ್ಶನ ಕಾರ್ಯಕ್ರಮಗಳು, ವಿಜಯ ಕರ್ನಾಟಕ, ಡೆಕ್ಕನ್ ಹೆರಾಲ್ಡ್, ಸುಧಾ, ಕನ್ನಡಮ್ಮ, ಹಿಂದೂ ದಿನಪತ್ರಿಕೆ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಂದರ್ಶನ-ಲೇಖನಗಳು