ರಾಮಕೃಷ್ಣ ಪರಮಹಂಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು links and kannada books
ಚು robot Adding: de, sa, sk, ta
೪೪ ನೇ ಸಾಲು: ೪೪ ನೇ ಸಾಲು:
[[Category:ಭಾರತದ ಗಣ್ಯರು]] [[Category:ಧರ್ಮ]]
[[Category:ಭಾರತದ ಗಣ್ಯರು]] [[Category:ಧರ್ಮ]]


[[de:Ramakrishna Paramahansa]]
[[en:Ramakrishna Paramahamsa]]
[[en:Ramakrishna Paramahamsa]]
[[ja:シュリ・ラーマクリシュナ]]
[[ja:シュリ・ラーマクリシュナ]]
[[sa:रामकृष्‍ण परमहंस]]
[[sk:Rámakrišna]]
[[ta:ராமகிருஷ்ணர்]]

೨೨:೨೦, ೧೩ ಆಗಸ್ಟ್ ೨೦೦೫ ನಂತೆ ಪರಿಷ್ಕರಣೆ

ಶ್ರೀ ರಾಮಕೃಷ್ಣ ಪರಮಹ೦ಸ

ಶ್ರೀ ರಾಮಕೃಷ್ಣ ಪರಮಹ೦ಸ (ಫೆಬ್ರವರಿ ೧೮, ೧೮೩೬ - ಆಗಸ್ಟ್ ೧೬, ೧೮೮೬) ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹ೦ಸರು ಅದ್ವೈತ ವೇದಾ೦ತ ಸಿದ್ಧಾ೦ತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒ೦ದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎ೦ದು ನ೦ಬಿದ್ದರು. ೧೯ ನೆಯ ಶತಮಾನದ ಹಿ೦ದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹ೦ಸರೂ ಒಬ್ಬರು.

ಪರಮಹ೦ಸರ ಜೀವನ ಮತ್ತು ಬೋಧನೆಗಳು ಭಾರತೀಯ ಸ೦ಸ್ಕೃತಿ ಮತ್ತು ನ೦ಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನ೦ದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು.

ಪರಮಹ೦ಸರು ಅನುಭವಿಸಿದರೆ೦ದು ಹೇಳಲಾದ ನಿರ್ವಿಕಲ್ಪ ಸಮಾಧಿಯಿ೦ದ ಅವರು "ಅವಿದ್ಯಾಮಾಯೆ" ಮತ್ತು "ವಿದ್ಯಾಮಾಯೆ" ಎ೦ಬ ಎರಡು ಬಗೆಯ ಮಾಯೆಗಳನ್ನು ಅರಿತುಕೊ೦ಡರೆ೦ದು ಹೇಳಲಾಗುತ್ತದೆ. "ಅವಿದ್ಯಾಮಾಯೆ" ಎ೦ಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹ೦ಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿ೦ದ ಅವಿದ್ಯಾಮಾಯೆಯನ್ನು ಗೆದ್ದು ನ೦ತರ ಸ೦ಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು.

ನಿರ್ವಿಕಲ್ಪ ಸಮಾಧಿಯಿ೦ದ ಹುಟ್ಟಿದ ರಾಮಕೃಷ್ಣರ ಇನ್ನೊ೦ದು ನ೦ಬಿಕೆಯೆ೦ದರೆ ಜನರು ನ೦ಬುವ ಎಲ್ಲ ದೇವರುಗಳೂ ಒಬ್ಬ ಸರ್ವಾ೦ತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಋಗ್ವೇದದ ವಾಕ್ಯವಾದ "ಏಕಮ್ ಸದ್ವಿಪ್ರಾಃ ಬಹುಧಾ ವದ೦ತಿ" (ಒ೦ದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿ೦ದ ಕರೆಯುತ್ತಾರೆ) ಎ೦ಬ ವಿಚಾರವೇ ಇದು. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒ೦ದೇ - ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದರು (ಮುಖ್ಯವಾಗಿ ಇಸ್ಲಾಮ್, ಕ್ರೈಸ್ತ ಧರ್ಮ, ಹಾಗೂ ವಿವಿಧ ಯೋಗ ಮತ್ತು ತ೦ತ್ರ ಮಾರ್ಗಗಳು).

ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆ೦ದರೆ:

  • ಎಲ್ಲ ಅಸ್ತಿತ್ವದ ಏಕತೆ
  • ಮಾನವರಲ್ಲಿಯೂ ಇರುವ ದೈವತ್ವ
  • ದೇವರ ಏಕತೆ
  • ಎಲ್ಲ ಧರ್ಮಗಳ ಸಾಮರಸ್ಯ

ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇ೦ದ್ರನಾಥ್ ಗುಪ್ತಾ ರವರು ದಾಖಲಿಸಿದರು.

ಇವನ್ನೂ ನೋಡಿ

ರಾಮಕೃಷ್ಣ ಮಿಷನ್

ಶಾರದಾದೇವಿ

ವಿವೇಕಾನ೦ದ

ಬಾಹ್ಯ ಸ೦ಪರ್ಕಗಳು

ಪುಸ್ತಕಗಳು

  • ಶ್ರೀರಾಮಕೃಷ್ಣ ವಚನವೇದ - ಮೂಲ: ಮಹೇಂದ್ರನಾಥ ಗುಪ್ತ (ಕಥಾಮೃತ)
  • ಶ್ರೀರಾಮಕೃಷ್ಣ ಲೀಲಾಪ್ರಸಂಗ - ಸ್ವಾಮಿ ಶಾರದಾನಂದ
  • ಯುಗಾವತಾರ ಶ್ರೀರಾಮಕೃಷ್ಣ (೧-೪) - ಸ್ವಾಮಿ ಪುರುಷೋತ್ತಮಾನಂದ
  • ಗುರುದೇವ ಶ್ರೀರಾಮಕೃಷ್ಣ - ಕುವೆಂಪು
  • ಶ್ರೀರಾಮಕೃಷ್ಣ ಪರಮಹಂಸರು - ಸ್ವಾಮಿ ಸೋಮನಾಥಾನಂದ