ಅಗಸ್ಟ ಕಾಂಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೫ ನೇ ಸಾಲು: ೨೫ ನೇ ಸಾಲು:
ಜ್ಞಾನಾರ್ಜನೆಯ ವಿಜ್ಞಾನಗಳ ವಿಂಗಡಣೆಯಲ್ಲಿ ವಿಜ್ಞಾನಕ್ಕೆ ನಿಗದಿಯಾದ ಸ್ಥಾನವಿದೆ. ವಿಜ್ಞಾನಗಳಲ್ಲಿ ಗಣಿತವಿಜ್ಞಾನ ಅತಿ ಮುಖ್ಯವಾದುದು. ಅದರಿಂದ ಮಾನವನಿಗೆ ಹೆಚ್ಚು ಪ್ರಯೋಜನವಿದೆ. ಮಾನವನ ಮನಸ್ಸನ್ನು ಸ್ಥಿಮಿತಗೊಳಿಸಲು ಗಣಿತವಿಜ್ಞಾನ ಅಗತ್ಯ. ಭೌತವಿಜ್ಞಾನವೂ, ರಸಾಯನ ವಿಜ್ಞಾನವೂ, ಗಣಿತವಿಜ್ಞಾನಕ್ಕೆ ಅಂಟಿಕೊಂಡಿವೆ. [[ಜೀವವಿಜ್ಞಾನ]]ವನ್ನು ಅರಿಯಲು ಮೇಲೆ ಹೇಳಿದ ವಿಜ್ಞಾನಗಳಿಂದ ಅನುಕೂಲವಾಗುತ್ತದೆ. ಸಾಮಾಜಿಕ ಭೌತವಿಜ್ಞಾನ (ಸೋಷಿಯಲ್ ಫಿಸಿಕ್ಸ್ ) ಜೀವರಾಶಿಗಳ ಚಲನವಲನಗಳ ಅನುಭವಕ್ಕೆ ಅನುಕೂಲಮಾಡಿಕೊಡುತ್ತದೆ. ಹಾಗೆಯೇ ಸಮಾಜವಿಜ್ಞಾನ ಮೇಲೆ ಹೇಳಿದ ವಿಜ್ಞಾನಗಳನ್ನು ಅವಲಂಬಿಸಿದೆ. ಈ ಅವಲಂಬನೆಯ ಅಧ್ಯಯನವೇ ಸಮಾಜವಿಜ್ಞಾನ. ಮಾನವಸಂಘಗಳು ಪ್ರಬಲವಾದಂತೆಲ್ಲ ವ್ಯಕ್ತಿಯ ಸೌಮ್ಯತೆ ವಿಕಾಸಗೊಳ್ಳುವುದು ಸಾಧ್ಯ. ಸಮಾಜದಲ್ಲಿ ಕುಟುಂಬಕ್ಕೆ ಅಗ್ರಸ್ಥಾನವಿದೆ. ಮಾನವ ಒಬ್ಬೊಂಟಿಗನಾಗಿರಲು ಸಾಧ್ಯವಿಲ್ಲ. ಸ್ತ್ರೀಗೆ ಕುಟುಂಬದಲ್ಲಿ ಪ್ರಥಮ ಸ್ಥಾನವಿರಬೇಕು.
ಜ್ಞಾನಾರ್ಜನೆಯ ವಿಜ್ಞಾನಗಳ ವಿಂಗಡಣೆಯಲ್ಲಿ ವಿಜ್ಞಾನಕ್ಕೆ ನಿಗದಿಯಾದ ಸ್ಥಾನವಿದೆ. ವಿಜ್ಞಾನಗಳಲ್ಲಿ ಗಣಿತವಿಜ್ಞಾನ ಅತಿ ಮುಖ್ಯವಾದುದು. ಅದರಿಂದ ಮಾನವನಿಗೆ ಹೆಚ್ಚು ಪ್ರಯೋಜನವಿದೆ. ಮಾನವನ ಮನಸ್ಸನ್ನು ಸ್ಥಿಮಿತಗೊಳಿಸಲು ಗಣಿತವಿಜ್ಞಾನ ಅಗತ್ಯ. ಭೌತವಿಜ್ಞಾನವೂ, ರಸಾಯನ ವಿಜ್ಞಾನವೂ, ಗಣಿತವಿಜ್ಞಾನಕ್ಕೆ ಅಂಟಿಕೊಂಡಿವೆ. [[ಜೀವವಿಜ್ಞಾನ]]ವನ್ನು ಅರಿಯಲು ಮೇಲೆ ಹೇಳಿದ ವಿಜ್ಞಾನಗಳಿಂದ ಅನುಕೂಲವಾಗುತ್ತದೆ. ಸಾಮಾಜಿಕ ಭೌತವಿಜ್ಞಾನ (ಸೋಷಿಯಲ್ ಫಿಸಿಕ್ಸ್ ) ಜೀವರಾಶಿಗಳ ಚಲನವಲನಗಳ ಅನುಭವಕ್ಕೆ ಅನುಕೂಲಮಾಡಿಕೊಡುತ್ತದೆ. ಹಾಗೆಯೇ ಸಮಾಜವಿಜ್ಞಾನ ಮೇಲೆ ಹೇಳಿದ ವಿಜ್ಞಾನಗಳನ್ನು ಅವಲಂಬಿಸಿದೆ. ಈ ಅವಲಂಬನೆಯ ಅಧ್ಯಯನವೇ ಸಮಾಜವಿಜ್ಞಾನ. ಮಾನವಸಂಘಗಳು ಪ್ರಬಲವಾದಂತೆಲ್ಲ ವ್ಯಕ್ತಿಯ ಸೌಮ್ಯತೆ ವಿಕಾಸಗೊಳ್ಳುವುದು ಸಾಧ್ಯ. ಸಮಾಜದಲ್ಲಿ ಕುಟುಂಬಕ್ಕೆ ಅಗ್ರಸ್ಥಾನವಿದೆ. ಮಾನವ ಒಬ್ಬೊಂಟಿಗನಾಗಿರಲು ಸಾಧ್ಯವಿಲ್ಲ. ಸ್ತ್ರೀಗೆ ಕುಟುಂಬದಲ್ಲಿ ಪ್ರಥಮ ಸ್ಥಾನವಿರಬೇಕು.
ತನ್ನೆಲ್ಲ ಭಾಷಣ ಮತ್ತು ಬರೆವಣಿಗೆಯಿಂದ ಕಾಂಟ್ ಸಮಾಜವಿಜ್ಞಾನದ ಮೂಲಪುರುಷನೆಂದು ಖ್ಯಾತಿಪಡೆದ.
ತನ್ನೆಲ್ಲ ಭಾಷಣ ಮತ್ತು ಬರೆವಣಿಗೆಯಿಂದ ಕಾಂಟ್ ಸಮಾಜವಿಜ್ಞಾನದ ಮೂಲಪುರುಷನೆಂದು ಖ್ಯಾತಿಪಡೆದ.
==ಬಾಹ್ಯDeepak ==
==ಬಾಹ್ಯ ಸಂಪರ್ಕಗಳು==


==ಸಂಪರ್ಕಗಳು==
* {{Gutenberg author |id=Comte,+Auguste | name=Auguste Comte}}
* {{Gutenberg author |id=Comte,+Auguste | name=Auguste Comte}}
* {{Internet Archive author |sname=Auguste Comte}}
* {{Internet Archive author |sname=Auguste Comte}}

೧೬:೨೧, ೫ ಡಿಸೆಂಬರ್ ೨೦೨೧ ನಂತೆ ಪರಿಷ್ಕರಣೆ

ಅಗಸ್ಟ ಕಾಂಟ್
Auguste Comte by Tony Touillon.
ಜನನ(೧೭೯೮-೦೧-೧೯)೧೯ ಜನವರಿ ೧೭೯೮
Montpellier, France
ಮರಣ5 September 1857(1857-09-05) (aged 59)
Paris, France
ರಾಷ್ಟ್ರೀಯತೆFrench
ಗಮನಾರ್ಹ ಚಿಂತನೆಗಳುPositivism, law of three stages, encyclopedic law, altruism
ಪ್ರಭಾವಕ್ಕೋಳಗಾಗು

ಅಗಸ್ಟ ಕಾಂಟ್ (Auguste Comte) (19 ಜನವರಿ 1798 – 5 ಸೆಪ್ಟೆಂಬರ್ 1857), ಹೆಸರಾಂತ ಸಮಾಜಶಾಸ್ತ್ರಜ್ಞ.

ಜನನ ಮತ್ತು ಬಾಲ್ಯ

1798ರಲ್ಲಿ ಫ್ರಾನ್ಸ್ ದೇಶದ ಮಾಂಟ್ ಪೆಲಿಯರ್ ಎಂಬ ಸ್ಥಳದಲ್ಲಿ ಜನಿಸಿದ. ಇವನ ತಂದೆ-ತಾಯಿ ರೋಮನ್ ಕೆಥೊಲಿಕ್ ಧರ್ಮಕ್ಕೆ ಸೇರಿದವರು. ಚಿಕ್ಕವಯಸ್ಸಿನಿಂದಲೂ ಈತ ಮೇಧಾವಿ, ವಾದಚತುರ, ಪ್ರತಿಭಾವಂತ, ಚುರುಕು ಬುದ್ಧಿಯವ, ಜ್ಞಾನಾರ್ಜನೆಯಲ್ಲಿಯೂ, ಓದಿದ್ದನ್ನು ಗ್ರಹಿಸುವುದರಲ್ಲಿಯೂ, ಇತರರಿಗೆ ಮೇಲ್ಪಂಕ್ತಿಯಾಗಿದ್ದ. ಹದಿನಾರನೆಯ ವಯಸ್ಸಿನಲ್ಲಿಯೇ ಗಣಿತಶಾಸ್ತ್ರವನ್ನು ಅಧ್ಯಯನ ಮಾಡುವುದರಲ್ಲಿ ಹೆಚ್ಚಿನ ಕಾಲವನ್ನು ಉಪಯೋಗಿಸತೊಡಗಿದ. ಬಾಲ್ಯದಲ್ಲಿಯೇ ತನ್ನ ಉಪಾಧ್ಯಾಯನೊಬ್ಬನ ಜೊತೆಯಲ್ಲಿ ವಾದ ಮಾಡಿ ಗೆದ್ದ. ನೆಪೋಲಿಯನ್ನನಂಥ ಪರಾಕ್ರಮಿಯನ್ನೂ ಈತ ಟೀಕಿಸದೆ ಬಿಡಲಿಲ್ಲ. ಸ್ವಮತೀಯರಲ್ಲಿ ಇವನಿಗೆ ಅಷ್ಟೇನೂ ಗೌರವವಿರಲಿಲ್ಲ. ಕಾಂಟನಿಗೆ ತನ್ನ 19ನೆಯ ವಯಸ್ಸಿನಲ್ಲಿಯೇ ಸೇಂಟ್ ಸೈಮನ್ ಎಂಬ ಸಮಾಜ ಸ್ವಾಮ್ಯವಾದಿಯ ಪರಿಚಯವಾಗಿ ಮನಸ್ಸಿನ ಪರಿವರ್ತನೆಯಾಯಿತು. ಅನಂತರ ಆತ ಸಮಾಜವಿಜ್ಞಾನ ಮತ್ತು ಸಾಮಾಜಿಕ ಸಂಘಗಳ ಉತ್ಕೃಷ್ಟ ರೀತಿಯ ಅಧ್ಯಯನವನ್ನು ನಡೆಸಿದ.

ಜೀವನ

ಕಾಂಟ್ 1822ರಲ್ಲಿ ಎ ಪ್ರಾಸ್ಪೆಕ್ಟಸ್ ಆಫ್ ದಿ ಸೈಂಟಿಫಿಕ್ ವರ್ಕ್ಸ ರಿಕ್ವೈರ್ಡ್ ಫಾರ್ ದಿ ರಿ ಆರ್ಗನೈಸೇಷನ್ ಆಫ್ ದಿ ಸೊಸೈಟಿ ಎಂಬ ಗ್ರಂಥವನ್ನು ಪ್ರಕಟಿಸಿದ. ಈ ಪ್ರಕಟಣೆಯಿಂದ ಕಾಂಟನ ಜೀವನದ ಮೇಲೆ ಮಹತ್ಪರಿಣಾಮವಾಯಿತು. ಅಲ್ಲಿಂದಾಚೆ ದೀರ್ಘವಾಗಿ ಆಲೋಚನೆ ಮಾಡಿ ವಿಷಯಗ್ರಹಣ ಮಾಡಲು ಆತ ಪ್ರಾರಂಭಿಸಿದ. ಈ ಮಧ್ಯೆ ಮದುವೆ ಮಾಡಿಕೊಂಡ. ತನ್ನ ಪುಸ್ತಕದ ಪ್ರಕಟಣೆಗೆ ಯಥಾಶಕ್ತಿ ದುಡಿದಿದ್ದರಿಂದಲೂ ಸಂಸಾರದಲ್ಲಿ ಹೆಚ್ಚಿನ ಹೊಂದಾಣಿಕೆ ಇಲ್ಲದ್ದರಿಂದಲೂ ಅವನ ಮನೋರೋಗ ಪ್ರಬಲವಾಯಿತು. ಅದೇ ಕಾಲದಲ್ಲಿ ಸಾರ್ವಜನಿಕರಿಗಾಗಿ ಪ್ರತಿಮಾನವನೂ ಸತತವೂ ದುಡಿಯಬೇಕೆಂಬ ಧ್ಯೇಯವನ್ನೊಳಗೊಂಡ ಹಲವಾರು ಭಾಷಣಗಳನ್ನು ಮಾಡಿದ. ಈತ ತನ್ನ ಪುಸ್ತಕಗಳಿಂದ ಬರುತ್ತಿದ್ದ ಸಂಭಾವನೆಯನ್ನು ಸ್ವೀಕರಿಸುತ್ತಿರಲಿಲ್ಲವಾಗಿ ಕೊನೆಗಾಲದವರೆಗೂ ಬಡವನಾಗಿಯೇ ಇರಬೇಕಾಯಿತು. ಸನ್ಮಿತ್ರರು ಅವನಿಗೆ ಆಗಾಗ ಹಣವನ್ನು ಕೊಟ್ಟು ಅವನ ಜೀವನಕ್ಕೆ ನೆರವಾಗುತ್ತಿದ್ದರು. ಕಾಂಟನ ಜ್ಞಾಪಕಶಕ್ತಿ ಆತ ಬರೆದ ಎಲ್ಲ ಗ್ರಂಥಗಳಲ್ಲಿಯೂ ವಿಷಯಗಳನ್ನು ಶಾಸ್ತ್ರೋಕ್ತವಾಗಿ ಚಿತ್ರಿಸಲು ಅನುಕೂಲವಾಯಿತು. ಇದರಿಂದಲೇ ಆತ ಮಹಾಜ್ಞಾನಿಯಾಗಲು ಸಾಧ್ಯವಾಯಿತೆಂದು ಅನೇಕ ತಜ್ಞರ ಅಭಿಪ್ರಾಯ. ಪಾಸಿಟಿವ್ ಫಿಲಾಸಫಿ (ಲೋಕಸಿದ್ಧವಾದ, ಪ್ರತ್ಯಕ್ಷ ಪ್ರಮಾಣವಾದ) ಮತ್ತು ಪಾಸಿಟಿವ್ ಪಾಲಿಟಿ (ಲೋಕಸಿದ್ಧ ಆಡಳಿತವಿಧಾನ) ಎಂಬ ಗ್ರಂಥಗಳನ್ನು ಬರೆದು ಕಾಂಟ್ ಜಗತ್ಪ್ರಸಿದ್ಧ ನಾದ. 1830 - 42ರವರೆಗೆ ಪಾಸಿಟಿವ್ ಫಿಲಾಸಫಿಯ ಆರು ಸಂಕ್ಷಿಪ್ತ ಸಂಪುಟಗಳನ್ನು ಪ್ರಕಟಿಸಿದ. ಹೀಗೆಯೇ ಪಾಸಿಟಿವ್ ಪಾಲಿಟಿಯ ನಾಲ್ಕು ಸಂಕ್ಷಿಪ್ತ ಸಂಪುಟಗಳನ್ನು 1851 - 54ರೊಳಗೆ ಪ್ರಕಟಿಸಿದ. ಕಾಂಟನ ಮೇಧಾಶಕ್ತಿಯನ್ನು ಜಾನ್ ಸ್ಟುಅರ್ಟಮಿಲ್ ಮಿಗಿಲಾಗಿ ಕೊಂಡಾಡಿ, ಪ್ರಪಂಚದ ಮೇಧಾವಿಗಳಲ್ಲಿ ಅಗ್ರಗಣ್ಯನೆಂದು ಸಾರಿದ್ದಾನೆ. ಜಾರ್ಜ್ ಹೆನ್ರಿ ಲೂಯಿಸ್ ಎಂಬ ವಿದ್ವಾಂಸ ಆಧುನಿಕ ಸಮಾಜದ ಮಾರ್ಗದರ್ಶಕನೆಂದು ಹೇಳಿದ್ದಾನೆ. ಜಾನ್ಮಾರ್ಲೆ ಎಂಬ ಇಂಗ್ಲೆಂಡ್ ದೇಶದ ರಾಜಕಾರಣಿ, ಕಾಂಟನಂಥ ಮೇಧಾವಿಯನ್ನು ಸರಿದೂಗುವ ಸಮಾಜಶಾಸ್ತ್ರಜ್ಞನೇ ಇಲ್ಲವೆಂದು ಅಭಿಪ್ರಾಯ ಪಟ್ಟಿದ್ದಾನೆ. ಮಾನವ ಬಹುದೇವತಾರಾಧನೆಯನ್ನುಳಿದು ಕ್ರಮೇಣ ಹೇಗೆ ಏಕದೇವೋಪಾಸಕನಾದ ನೆಂಬುದನ್ನು ತನ್ನ ಗ್ರಂಥಗಳಲ್ಲಿ ಕಾಂಟ್ ವಿವರಿಸಿದ್ದಾನೆ. ಕಾಲಕ್ರಮೇಣ ಮನುಷ್ಯನ ಬುದ್ಧಿಶಕ್ತಿ ಚುರುಕುಗೊಂಡು ಅನೇಕ ದೇವತಾರಾಧನೆ ಸುವ್ಯವಸ್ಥಿತ ಮಾರ್ಗವಲ್ಲವೆಂದು ಮನುಷ್ಯ ಮನಗಂಡನೆಂದೂ ಅನಂತರ ಏಕದೇವತಾವಾದವನ್ನು ಅವಲಂಬಿಸಿದನೆಂದೂ ಪ್ರತಿಪಾದಿಸಿದ್ದಾನೆ. ಆಮೇಲೆ ದೇವರು ಮನಸ್ಸಿನ ಹಿಂದಿರುವ ಒಂದು ಶಕ್ತಿಯೆಂದು ದೃಢಪಡಿಸಿ ವಾಸ್ತವಾಂಶಗಳನ್ನೂ ಗೋಚರಸಾಧ್ಯ ವಿಷಯಗಳನ್ನೂ ಮಾತ್ರ ಅಂಗೀಕರಿಸುವ ಮಾನವೋತ್ತಮತಾವಾದವನ್ನು ಮಂಡಿಸಿದ್ದಾನೆ.

ಕಾಂಟನ ಕೊಡುಗೆ

ಜ್ಞಾನಾರ್ಜನೆಯ ವಿಜ್ಞಾನಗಳ ವಿಂಗಡಣೆಯಲ್ಲಿ ವಿಜ್ಞಾನಕ್ಕೆ ನಿಗದಿಯಾದ ಸ್ಥಾನವಿದೆ. ವಿಜ್ಞಾನಗಳಲ್ಲಿ ಗಣಿತವಿಜ್ಞಾನ ಅತಿ ಮುಖ್ಯವಾದುದು. ಅದರಿಂದ ಮಾನವನಿಗೆ ಹೆಚ್ಚು ಪ್ರಯೋಜನವಿದೆ. ಮಾನವನ ಮನಸ್ಸನ್ನು ಸ್ಥಿಮಿತಗೊಳಿಸಲು ಗಣಿತವಿಜ್ಞಾನ ಅಗತ್ಯ. ಭೌತವಿಜ್ಞಾನವೂ, ರಸಾಯನ ವಿಜ್ಞಾನವೂ, ಗಣಿತವಿಜ್ಞಾನಕ್ಕೆ ಅಂಟಿಕೊಂಡಿವೆ. ಜೀವವಿಜ್ಞಾನವನ್ನು ಅರಿಯಲು ಮೇಲೆ ಹೇಳಿದ ವಿಜ್ಞಾನಗಳಿಂದ ಅನುಕೂಲವಾಗುತ್ತದೆ. ಸಾಮಾಜಿಕ ಭೌತವಿಜ್ಞಾನ (ಸೋಷಿಯಲ್ ಫಿಸಿಕ್ಸ್ ) ಜೀವರಾಶಿಗಳ ಚಲನವಲನಗಳ ಅನುಭವಕ್ಕೆ ಅನುಕೂಲಮಾಡಿಕೊಡುತ್ತದೆ. ಹಾಗೆಯೇ ಸಮಾಜವಿಜ್ಞಾನ ಮೇಲೆ ಹೇಳಿದ ವಿಜ್ಞಾನಗಳನ್ನು ಅವಲಂಬಿಸಿದೆ. ಈ ಅವಲಂಬನೆಯ ಅಧ್ಯಯನವೇ ಸಮಾಜವಿಜ್ಞಾನ. ಮಾನವಸಂಘಗಳು ಪ್ರಬಲವಾದಂತೆಲ್ಲ ವ್ಯಕ್ತಿಯ ಸೌಮ್ಯತೆ ವಿಕಾಸಗೊಳ್ಳುವುದು ಸಾಧ್ಯ. ಸಮಾಜದಲ್ಲಿ ಕುಟುಂಬಕ್ಕೆ ಅಗ್ರಸ್ಥಾನವಿದೆ. ಮಾನವ ಒಬ್ಬೊಂಟಿಗನಾಗಿರಲು ಸಾಧ್ಯವಿಲ್ಲ. ಸ್ತ್ರೀಗೆ ಕುಟುಂಬದಲ್ಲಿ ಪ್ರಥಮ ಸ್ಥಾನವಿರಬೇಕು. ತನ್ನೆಲ್ಲ ಭಾಷಣ ಮತ್ತು ಬರೆವಣಿಗೆಯಿಂದ ಕಾಂಟ್ ಸಮಾಜವಿಜ್ಞಾನದ ಮೂಲಪುರುಷನೆಂದು ಖ್ಯಾತಿಪಡೆದ.

ಬಾಹ್ಯDeepak

ಸಂಪರ್ಕಗಳು

  1. Sutton, Michael (1982). Nationalism, Positivism, and Catholicism. The Politics of Charles Maurras and French Catholics 1890–1914. Cambridge: Cambridge University Press. ISBN 0521228689. esp. Chapters 1 and 2