ಪೆರಗ್ವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Cannot use left and right at the same time.
Rescuing 1 sources and tagging 0 as dead.) #IABot (v2.0.8
೮೮ ನೇ ಸಾಲು: ೮೮ ನೇ ಸಾಲು:


== ಹೊರಗಿನ ಸಂಪರ್ಕಗಳು ==
== ಹೊರಗಿನ ಸಂಪರ್ಕಗಳು ==
* [http://dmoz.org/Regional/South_America/Paraguay/ ಪೆರಗ್ವೆ]
* [http://dmoz.org/Regional/South_America/Paraguay/ ಪೆರಗ್ವೆ] {{Webarchive|url=https://web.archive.org/web/20080420143419/http://www.dmoz.org/Regional/South_America/Paraguay/ |date=2008-04-20 }}
* [http://vlib.iue.it/history/americas/Paraguay/ ಪೆರಗ್ವೆ ದೇಶದ ಇತಿಹಾಸ]
* [http://vlib.iue.it/history/americas/Paraguay/ ಪೆರಗ್ವೆ ದೇಶದ ಇತಿಹಾಸ]



೧೪:೫೮, ೧೦ ಆಗಸ್ಟ್ ೨೦೨೧ ನಂತೆ ಪರಿಷ್ಕರಣೆ

ಪೆರಗ್ವೆ ಗಣರಾಜ್ಯ
República del Paraguay
Tetã Paraguái
Flag of ಪೆರಗ್ವೆ
Flag
Coat of arms of ಪೆರಗ್ವೆ
Coat of arms
Motto: ಸ್ಪಾನಿಷ್: Paz y justicia
("ಶಾಂತಿ ಮತ್ತು ನ್ಯಾಯ")
Anthem: "ಪರಾಗ್ವೆಯೋಸ್ ರಿಪಬ್ಲಿಕ ಒ ಮ್ಯುರ್ಟೆ"
Location of ಪೆರಗ್ವೆ
Capitalಅಸೂನ್‌ಸಿಯಾನ್
Largest cityರಾಜಧಾನಿ
Official languagesಸ್ಪಾನಿಷ್, ಗ್ವರಾನಿ
Governmentಸಾಂವಿಧಾನಿಕ ಗಣರಾಜ್ಯ
• ರಾಷ್ಟ್ರಪತಿ
ನಿಕಾನೊರ್ ಡ್ವಾರ್ಟೆ ಫ್ರುಟೊಸ್
• ಉಪರಾಷ್ಟ್ರಪತಿ
ಲುಯಿಸ್ ಕ್ಯಾಸ್ಟಿಗ್ಲಿಯೋನಿ ಯೊರಿಯ
ಸ್ವಾತಂತ್ರ್ಯ 
• ಘೋಷಿತ
ಮೇ ೧೪, ೧೮೧೧
• Water (%)
2.3%
Population
• ಜುಲೈ ೨೦೦೫ estimate
6,158,000 (101st)
GDP (PPP)೨೦೦೫ estimate
• Total
$28.342 billion (96th)
• Per capita
$4,555 (107th)
HDI (2003)0.755
high · 88th
Currencyಗ್ವರಾನಿ (PYG)
Time zoneUTC-4
• Summer (DST)
UTC-3
Calling code595
Internet TLD.py

ಪೆರಗ್ವೆ, (ಅಧಿಕೃ‍ತವಾಗಿ ಪರಾಗ್ವೆ ಗಣರಾಜ್ಯ),ದಕ್ಷಿಣ ಅಮೆರಿಕದ ಸರಿಸುಮಾರು ಮಧ್ಯಭಾಗದಲ್ಲಿರುವ ಒಂದು ರಾಷ್ಟ್ರ. ಪೆರಗ್ವೆ ನದಿಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು ನೈರುತ್ಯಗಳಲ್ಲಿ ಅರ್ಜೆಂಟೀನವನ್ನು, ಈಶಾನ್ಯದಲ್ಲಿ ಬ್ರೆಜಿಲ್ ದೇಶವನ್ನು ಮತ್ತು ವಾಯವ್ಯದಲ್ಲಿ ಬೊಲಿವಿಯ ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲಿದೆ. ಗ್ವರಾನಿ ಭಾಷೆಯಲ್ಲಿ ಇದರ ಅರ್ಥ "ದೊಡ್ಡ ನದಿಯಿಂದ" ಎಂದು. ಪರಾನ ನದಿಯೇ ಈ ದೊಡ್ಡ ನದಿ.

ಇತಿಹಾಸ

೧೬ನೇ ಶತಮಾನದಲ್ಲಿ ಬಂದಿಳಿದ ಮೊದಲ ಯೂರೋಪಿಯನ್ನರು ಆಗಸ್ಟ್ ೧೫, ೧೫೩೭ರಂದು ಅಸೂನ್‌ಸಿಯಾನ್ ನಗರವನ್ನು ಹುಟ್ಟುಹಾಕಿದರು. ನಂತರ ಇದು ಅಮೆರಿಕದ ಸ್ಪಾನಿಷ್ ವಸಾಹತುಗಳ ಕೇಂದ್ರವಾಯಿತು. ಪ್ರಾಂತೀಯ ಸ್ಪಾನಿಷ್ ನಾಯಕರನ್ನು ಸೋಲಿಸಿ ಮೇ ೧೪, ೧೮೧೧ರಂದು ಸ್ವಾತಂತ್ಯ ಘೋಷಿಸಿಕೊಂಡರು.

ರಾಜಕಾರಣ

ಪೆರಗ್ವೆ ಅಧ್ಯಕ್ಷೀಯ ಮಾದರಿಯ ಗಣರಾಜ್ಯ ಪ್ರಜಾಪ್ರಭುತ್ವ. ದೇಶದಲ್ಲಿ ಬಹುಪಕ್ಷೀಯ ವ್ಯವಸ್ಥೆಯಿದೆ. ಕಾರ್ಯಾಂಗದ ಅಧಿಕಾರವನ್ನು ಸರಕಾರ, ಶಾಸಕಾಂಗದ ಅಧಿಕಾರವನ್ನು ಸರಕಾರ ಮತ್ತು ರಾಷ್ಟ್ರೀಯ ಸಂಸತ್ತು ನಿರ್ವಹಿಸುತ್ತವೆ. ನ್ಯಾಯಾಂಗವು ಇವೆರಡಕ್ಕಿಂತ ಪ್ರತ್ಯೇಕವಾಗಿದ್ದು, ಸ್ವತಂತ್ರವಾಗಿದೆ.

ಭೂಗೋಳ

ಪೆರಗ್ವೆ ದೇಶದ ನಕ್ಷೆ

ದೇಶದ ಆಗ್ನೇಯ ಗಡಿಯಲ್ಲಿ ಪರಾನ ನದಿಯಿದ್ದು ಇದರ ಮೇಲೆ ಕಟ್ಟಿರುವ ಇಟೈಪು ಅಣೆಕಟ್ಟು ಬ್ರೆಜಿಲ್ ಜೊತೆಗಿನ ಗಡಿಯಲ್ಲಿದೆ. ಇದು ಪ್ರಪಂಚದ ಅತಿ ದೊಡ್ಡ ಜಲವಿದ್ಯುತ್ ಸ್ಥಾವರವಾಗಿದೆ.

ಅರ್ಥವ್ಯವಸ್ಥೆ

ಪೆರಗ್ವೆ ದೇಶ ಮಾರುಕಟ್ಟೆ ಆಧರಿತ ಅರ್ಥವ್ಯವಸ್ಥೆಯಾಗಿದ್ದು ಹೆಚ್ಚಿನ ಜನರು ಕೃಷಿ ಆಧರಿತ ಜೀವನ ನಡೆಸುತ್ತಾರೆ. ಇನ್ನೊಂದು ಪ್ರಧಾನ ಉದ್ಯಮವೆಂದರೆ ಹೊರದೇಶಗಳಿಂದ ಆಮದು ಮಾಡಿಕೊಂಡ ಸಾಮಾನುಗಳನ್ನು ದಕ್ಷಿಣ ಅಮೇರಿಕದ ಇತರ ದೇಶಗಳಿಗೆ ರಫ್ತು ಮಾಡುವುದು. ಪೆರಗ್ವೆಯ ಅರ್ಥವ್ಯವಸ್ಥೆ ಬ್ರೆಜಿಲ್ ದೇಶದ ಮೇಲೆ ಆಧರಿತವಾಗಿದೆ. ಇದಕ್ಕೆ ಕಾರಣ ಈ ದೇಶದ ಮೂಲಕ ಹಾದು ಹೋಗುವ ಕಾಲುವೆಯು ಪೆರಗ್ವೆ ದೇಶವನ್ನು ಬ್ರೆಜಿಲ್ ಕರಾವಳಿಯ ಬಂದರಿಗೆ ಸಂಪರ್ಕ ಮಾಡುತ್ತದೆ.

ಜನತೆ ಮತ್ತು ಜನಾಂಗ

ದೇಶದ ರಾಜಧಾನಿ ಅಸೂನ್‌ಸಿಯಾನ್

ದೇಶದ ಶೇ. ೯೫ರಷ್ಟು ಜನ ಸ್ಪಾನಿಷ್ ಮತ್ತು ಮೂಲಜನರ ಮಿಶ್ರತಳಿ. ಮೂಲ ಗ್ವರಾನಿ ಭಾಷೆಯನ್ನು ಶೇ. ೯೪ರಷ್ಟು ಜನ ಮಾತನಾಡುತ್ತಾರೆ. ಶೇ. ೭೫ರಷ್ಟು ಜನ ಸ್ಪಾನಿಷ್ ಭಾಷೆಯನ್ನು ಮಾತನಾಡಬಲ್ಲರು. ಇವೆರಡೂ ಅಧಿಕೃತ ಭಾಷೆಗಳು.

ದೇಶದಲ್ಲಿ ಕ್ಯಾಥೊಲಿಕ್ ಧರ್ಮದ ಬಹುಮತವಿದೆ.

ಸಂಸ್ಕೃತಿ

  • ಪೆರಗ್ವೆ ದೇಶದ ಜನರು ಕಸೂತಿ ಕಲೆ ("ಅಹೊ ಪೊಯ್") ಮತ್ತು ಲೇಸ್ ಹೊಲಿಯುವಿಕೆ ("ನಂದೂತಿ")ಗಳಿಗೆ ಹೆಸರುವಾಸಿಯಾಗಿದ್ದಾರೆ.
  • ೧೯೫೦ ಮತ್ತು ೧೯೬೦ರ ದಶಕಗಳಲ್ಲಿ ಪ್ರಖ್ಯಾತ ಕಾದಂಬರಿಕಾರರು ಮತ್ತು ಕವಿಗಳ ಉಗಮವಾಯಿತು. ಇವುಗಳಲ್ಲಿ ಪ್ರಮುಖರು ಯೋಸೆ ರಿಕಾರ್ಡೊ ಮಾತ್ಸೊ, ರೋಕೆ ವಾಲೆಯೋಸ್, ಮತ್ತು ಆಗಸ್ಟೊ ರೋವಾ ಬಾಸ್ಟೊಸ್.
  • ಸಾಮಾಜಿಕವಾಗಿ ಇಲ್ಲಿ ಅವಿಭಕ್ತ ಕುಟುಂಬಗಳಿರುತ್ತವೆ - ಪೋಷಕರು, ಮಕ್ಕಳು, ರಕ್ತ ಸಂಬಂಧಿಗಳು ಹೀಗೆ ಎಲ್ಲರೂ ಒಂದೇ ಮನೆಯಲ್ಲಿರುತ್ತಾರೆ.

ಇವನ್ನೂ ನೋಡಿ

ಹೊರಗಿನ ಸಂಪರ್ಕಗಳು


Logo of SACN ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
"https://kn.wikipedia.org/w/index.php?title=ಪೆರಗ್ವೆ&oldid=1056463" ಇಂದ ಪಡೆಯಲ್ಪಟ್ಟಿದೆ