ಚರಿತ್ ಬಾಳಪ್ಪ ಪೂಜಾರಿ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
೬೯ ನೇ ಸಾಲು: ೬೯ ನೇ ಸಾಲು:


[[ವರ್ಗ:ಭಾರತೀಯ ನಟರು]]
[[ವರ್ಗ:ಭಾರತೀಯ ನಟರು]]
[[ವರ್ಗ:ಕಿರುತೆರೆ ನಟನಟಿಯರು]]

೨೩:೨೬, ೨೨ ಜುಲೈ ೨೦೨೧ ನಂತೆ ಪರಿಷ್ಕರಣೆ

ಚರಿತ್ ಬಾಳಪ್ಪ ಪೂಜಾರಿ
ಚಿತ್ರ:ಚರಿತ್ ಬಾಳಪ್ಪ ಪೂಜಾರಿ.jpg
ಚರಿತ್ ಬಾಳಪ್ಪ ಪೂಜಾರಿ
ಜನನ೧೩ ಆಗಸ್ಟ್ ೧೯೮೫
ಇತರೆ ಹೆಸರುಗಳುಚರಿತ್ ಬಾಳಪ್ಪ ತಲ್ವಾರ್
ವಿದ್ಯಾರ್ಹತೆಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ - ಕೊಡ್ಲಿಪೇಟೆ ಶಾಲೆ ಕೊಡಗು,
ಪದವಿ ಪೂರ್ವ ಶಿಕ್ಷಣ ಶನಿವಾರ ಸಂತೆ ಕಾಲೇಜು,
ಪದವಿ ಮತ್ತು ಸ್ನಾತ್ತಕೋತ್ತರ ಪದವಿ(ಬಿಬಿಎಂ) ನಿಟ್ಟೆ ಯುನಿವರ್ಸಿಟಿ.
ಉದ್ಯೋಗಮಾಡೆಲ್, ನಟ.
ಸಕ್ರಿಯ ವರ್ಷಗಳು2015 - ಇಂದಿನ ವರೆಗೆ
ಇದಕ್ಕೆ ಖ್ಯಾತರುಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರವಾಹಿಯ ಡಾ
ಜೀವನ ಸಂಗಾತಿಮಂಜುಶ್ರೀ ಚರಿತ್
ಪೋಷಕರುಬಾಳಪ್ಪ ಪೂಜಾರಿ (ತಂದೆ), ಪ್ರೇಮ ಬಾಳಪ್ಪ (ತಾಯಿ)

ಚರಿತ್ ಬಾಳಪ್ಪ ಪೂಜಾರಿ ಅಲಿಯಾಸ್ ಚರಿತ್ ತಲ್ವಾರ್(ಜನನ:೧೩ ಆಗಸ್ಟ್ ೧೯೮೫) ಇವರು ಭಾರತೀಯ ದೂರದರ್ಶನ ನಟ ಹಾಗೂ ಮಾಡೆಲ್.[೧]ಇವರು ಕಿರುತೆರೆಗೆ ಪಾದಾರ್ಪಿಸಿದ್ದು ಲವ್ ಲವಿಕೆ ಎಂಬ ಧಾರವಾಹಿಯ ಮೂಲಕ. ಇಲ್ಲಿ ಅಭಿಯಿಸಿದ ಇವರು ಲಕ್ಕಿ ಎಂದೇ ಹೆಸರುವಾಸಿಯಾಗಿದ್ದರು.[೨] ನಂತರ ಅಮ್ಮ ಎಂಬ ಧಾರವಾಹಿಯಲ್ಲಿ ನವೀನ್ , ಸರ್ಪ ಸಂಬಂಧ ಎಂಬ ಧಾರವಾಹಿಯಲ್ಲಿ ಭರಣ ಮತ್ತು ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರವನ್ನು ವಹಿಸಿ ನಟಿಸಿದ್ದಾರೆ. ಹೀಗೆ ನಟನಾ ಕ್ಷೇತ್ರದಲ್ಲಿ ಇವರು ಎರಡು ಬಾರಿ ಅತ್ಯುತ್ತಮ ನಟ ಮತ್ತು ತನ್ನ ನಟನೆಗಾಗಿ ಮೋಸ್ಟ್ ಪ್ರಾಮಿಸಿಂಗ್ ಲೀಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.[೩]

ಜನನ , ಆರಂಭಿಕ ಜೀವನ ಮತ್ತು ಶಿಕ್ಷಣ

ಇವರು ೧೩ ಆಗಸ್ಟ್ ೧೯೮೫ ರಂದು ಬಂಟ್ವಾಳ ತಾಲೂಕಿನ ದಕ್ಷಿಣ ಕನ್ನಡಜಿಲ್ಲೆಯಲ್ಲಿ ಜನಿಸಿದರು. ಇವರ ತಂದೆ ಬಾಳಪ್ಪ ಪೂಜಾರಿ ಮತ್ತು ತಾಯಿ ಪ್ರೇಮ ಬಾಳಪ್ಪ. ಇವರು ತಮ್ಮ ಪ್ರಿಕೆಜಿ ಶಿಕ್ಷಣವನ್ನು ಬಂಟ್ವಾಳದ ಶಾಲೆಯಲ್ಲಿ ಪಡೆದು, ಕೊಡಗಿನ ಕೊಡ್ಲಿಪೇಟೆ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು , ಶನಿವಾರ ಸಂತೆ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪದವಿ ಮತ್ತು ಎಂ.ಬಿ.ಎ ನಲ್ಲಿ ಸ್ನಾತ್ತಕೋತ್ತರ ಪದವಿ ಶಿಕ್ಷಣವನ್ನು ನಿಟ್ಟೆ ಯುನಿವರ್ಸಿಟಿಯಲ್ಲಿ ಪೂರ್ಣಗೊಳಿಸಿದರು. ಬಂಟ್ವಾಳದಲ್ಲಿ ಹುಟ್ಟಿದರೂ ಇವರು ತಮ್ಮ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಕೊಡಗಿನಲ್ಲಿ ಪಡೆದು ನಂತರದ ಶಿಕ್ಷಣವನ್ನು ಕರಾವಳಿಯಲ್ಲಿ ಪಡೆಯುತ್ತಾರೆ.[೪]

ವೃತ್ತಿಜೀವನ

ಎಂ.ಬಿ.ಎ ಪದವಿ ಶಿಕ್ಷಣ ಪಡೆದ ನಂತರ ಚರಿತ್ ಇವರು ಮೊದಲಿಗೆ ಹೆಚ್.ಎಸ್.ಬಿ.ಸಿ ಎಂಬ ಮಲ್ಟಿನ್ಯಾಷನಲ್ ಕಂಪನಿ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಒಂದಷ್ಟು ಕಾಲ ಕೆಲಸ ಮಾಡಿದ ಬಳಿಕ ವಿಮಾನದಲ್ಲಿ ಕ್ಯಾಬಿನ್ ಕ್ರೂ ಆಗಿಯೂ ಕಾರ್ಯನಿರ್ವಹಿಸಿದರು.[೫] ಹೀಗೆ ಹಲವಾರು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ನಟನೆ ಮತ್ತು ಮಾಡೆಲಿಂಗ್ ನತ್ತ ಆಸಕ್ತಿ ಇವರಲ್ಲಿ ಹುಟ್ಟುತ್ತದೆ. ಕೈ ತುಂಬಾ ಸಂಬಳ ಸಿಕ್ಕರೂ ಆ ಉದ್ಯೋಗವನ್ನು ಬಿಟ್ಟು ಇವರು ನಟನೆಯ ಕಡೆಗೆ ಮುಖ ಮಾಡಿದರು.

ಕಿರುತೆರೆಯಲ್ಲಿ ಚರಿತ್

ನಟನೆ ಮತ್ತು ಮಾಡೆಲಿಂಗ್ ನಲ್ಲಿ ಚಿಕ್ಕದಿನಿಂದಲೇ ಆಸಕ್ತಿಯನ್ನು ಹೊಂದಿದ್ದ ಇವರು ಕೈ ತುಂಬಾ ಸಂಬಳವಿರುವ ಉದ್ಯೋಗವನ್ನ ಬಿಟ್ಟು 2015 ರಲ್ಲಿ ವಿನು ಬಳಂಜ ನಿರ್ದೇಶನದ ಲವ್ ಲವಿಕೆ ಎಂಬ ಕನ್ನಡ ಧಾರವಾಹಿಯಲ್ಲಿ ಮೊದಲ ಬಾರಿಗೆ ನಟಿಸುತ್ತಾರೆ. ಈ ಧಾರವಾಹಿ ಜೀ ಕನ್ನಡ ಚಾನಲ್ ನಲ್ಲಿ ಪ್ರಸಾರವಾಗುತ್ತಿತ್ತು. ಇಲ್ಲಿ ಲಕ್ಕಿ ಎಂಬ ಪಾತ್ರದಲ್ಲಿ ನಟಿಸಿದ ನಂತರ 2016 ರಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಅಮ್ಮ ಎಂಬ ಧಾರವಾಹಿಯಲ್ಲಿ ನವೀನ್ ಎಂಬ ಪಾತ್ರದಲ್ಲಿ[೬] , ನಂತರ ಕಲರ್ಸ್ ಸೂಪರ್ ನಲ್ಲಿ ಪ್ರಸಾರವಾಗುತ್ತಿದ್ದಸರ್ಪ ಸಂಬಂಧ ಎಂಬ ಧಾರವಾಹಿಯಲ್ಲಿ ಭರಣ ಎಂಬ ಪಾತ್ರದಲ್ಲಿ ನಟಿಸಿದರು. ತದನಂತರ 2018 ರಿಂದ 2021ರ ತನಕ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಎಂಬ ಧಾರವಾಹಿಯಲ್ಲಿ ಡಾ||ಧ್ರುವಂತ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

[೭]

ವೈವಾಹಿಕ ಜೀವನ

ಚರಿತ್ ಇವರು ೨೦೧೭ ರಲ್ಲಿ ನವೆಮಬರ್ ೩೦ ರಂದು ಮಂಜುಶ್ರೀ ಅವರನ್ನು ವಿವಾಹವಾದರು.[೮]

ಅಭಿನಯಿಸಿದ ಧಾರವಾಹಿಗಳ ಪಟ್ಟಿ

Key
ಇನ್ನೂ ಬಿಡುಗಡೆಯಾಗದ ಸಿನಿಮಾಗಳನ್ನು ಸೂಚಿಸುತ್ತದೆ
ವರ್ಷ ಧಾರವಾಹಿ ಪಾತ್ರ ಉಲ್ಲೇಖ
2015 ಲವ್ ಲವಿಕೆ ಲಕ್ಷ್ಮಣ್/ಲಕ್ಕಿ [೯]
2016 ಅಮ್ಮ ನವೀನ್
2016 ಸರ್ಪ ಸಂಬಂಧ ಭರಣ [೧೦]
2018 ಮುದ್ದು ಲಕ್ಷ್ಮಿ ಡಾ॥ಧ್ರುವಂತ್ [೧೧]

ಪ್ರಶಸ್ತಿಗಳು

  • ಸಿ.ಎಚ್.ಎಸ್.ಬಿ.ಸಿ ಯಲ್ಲಿ ಲೆರ್ನಿಂಗ್ ಆಫ್ ಚಾಂಪಿಯನ್ ಪ್ರಶಸ್ತಿ.
  • ಡೆಲ್ ಸಂಸ್ಥೆಯಿಂದ ಅಚೀವ್ಮೆಂಟ್ ಅವಾರ್ಡ್.
  • ಮೋಸ್ಟ್ ಪ್ರಾಮಿಸಿಂಗ್ ಲೀಡ್ ಅವಾರ್ಡ್.[೧೨]
  • ಅಮ್ಮ ಧಾರವಾಹಿಯಲ್ಲಿನ ನಟನೆಗಾಗಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿ[೧೩]

ಉಲ್ಲೇಖಗಳು

  1. "Bangalore Times 15 Most Desirable Men on Television Pics | Bangalore Times 15 Most Desirable Men on Television Photos | Bangalore Times 15 Most Desirable Men on Television Portfolio Pics | Bangalore Times 15 Most Desirable Men on Television Personal Photos - ETimes Photogallery". photogallery.indiatimes.com. Retrieved 21 July 2021.
  2. ""Want to do projects with a social message", says TV actor Charith Balappa - Times of India". The Times of India (in ಇಂಗ್ಲಿಷ್). Retrieved 22 July 2021.
  3. "ಚರಿತ್ ಬಾಳಪ್ಪ ಪೂಜಾರಿ ಯಾನೆ ಮುದ್ದುಲಕ್ಷ್ಮೀ ಡಾ॥ಧ್ರುವಂತ್ ಇವರ ಸಾಧನೆಯಕಥೆ". Billava Warriors. 20 December 2020. Retrieved 22 July 2021.
  4. "ಬಣ್ಣದ ಲೋಕದಲ್ಲಿ ಚರಿತ್ರೆ ಸೃಷ್ಟಿಸುವತ್ತ....ಕಿರುತೆರೆಯ ಮುದ್ದುಲಕ್ಷ್ಮಿ ಧಾರಾವಾಹಿಯ ಡಾ||ಧ್ರುವಂತ್ ಪಾತ್ರಧಾರಿ : ಚರಿತ್ ಬಾಳಪ್ಪ ಪೂಜಾರಿ". Billava Warriors. 5 July 2020.
  5. "Janasri News | Serial Stars - Amma serial - Naveen - part 5" (in ಇಂಗ್ಲಿಷ್). Retrieved 22 July 2021.
  6. "ಅಮ್ಮ ಧಾರವಾಹಿಯಲ್ಲಿ ನವೀನ್ ಎಂಬ ಪಾತ್ರದಲ್ಲಿ ಚರಿತ್" (in ಇಂಗ್ಲಿಷ್). Retrieved 22 July 2021.
  7. "charith balappa - Namma Kannada Suddi". nammakannadasuddi.com. Retrieved 22 July 2021.
  8. "'ಮುದ್ದುಲಕ್ಷ್ಮೀ' ಧಾರಾವಾಹಿ ನಟ ಚರಿತ್ ಬಾಳಪ್ಪ ಅವರ ಪತ್ನಿ ಕೂಡ ಉತ್ತಮ ಕಲಾವಿದೆ!". Vijaya Karnataka. Retrieved 21 July 2021.
  9. "All about Charith, hero of Love Lavike - Times of India". The Times of India (in ಇಂಗ್ಲಿಷ್). Retrieved 20 July 2021.
  10. "ಚರಿತ್ ಬಾಳಪ್ಪ ಸರ್ಪ ಸಂಬಂಧ ಧಾರವಾಹಿಯಲ್ಲಿ" (in ಇಂಗ್ಲಿಷ್). Retrieved 22 July 2021.
  11. "ಚರಿತ್ ಬಾಳಪ್ಪ ಇವರು ಮುದ್ದುಲಕ್ಷ್ಮಿ ಧಾರವಾಹಿಯಲ್ಲಿ ಡಾ.ಧ್ರುವಂತ್ ಪಾತ್ರದಲ್ಲಿ". Retrieved 22 July 2021.
  12. "ಚರಿತ್ ಬಾಳಪ್ಪ ರವರ ಸಂದರ್ಶನ" (in ಇಂಗ್ಲಿಷ್). Retrieved 22 July 2021.
  13. "Best actor award for Amma serial". The Times of India (in ಇಂಗ್ಲಿಷ್). Retrieved 20 July 2021.