ಭಾರತದ ಸ್ವಾತಂತ್ರ್ಯ ದಿನಾಚರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
2409:4071:4D8F:7554:4D3:D283:ECFE:98C4 (ಚರ್ಚೆ) ರ 1044807 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೩ ನೇ ಸಾಲು: ೩ ನೇ ಸಾಲು:
|type = ರಾಷ್ಟ್ರೀಯ
|type = ರಾಷ್ಟ್ರೀಯ
|longtype =ರಾಷ್ಟ್ರೀಯ
|longtype =ರಾಷ್ಟ್ರೀಯ
|image = File:India-0037 - Fjdjskj ksklickr - archer10 (Dennis).jpg
|image = File:India-0037 - Flickr - archer10 (Dennis).jpg
|caption = ಭಾರತದ ರಾಷ್ಟ್ರೀಯ ಧ್ವಜವನ್ನು ದೆಹಲಿಯ [[ಕೆಂಪು ಕೋಟೆ]] ನಲ್ಲಿ ಹಾರಿಸಲಾಯಿತು; ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳಲ್ಲಿ ಧ್ವಜಾರೋಹಣ ಸಾಮಾನ್ಯ ದೃಶ್ಯವಾಗಿದೆ.
|caption = ಭಾರತದ ರಾಷ್ಟ್ರೀಯ ಧ್ವಜವನ್ನು ದೆಹಲಿಯ [[ಕೆಂಪು ಕೋಟೆ]] ನಲ್ಲಿ ಹಾರಿಸಲಾಯಿತು; ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳಲ್ಲಿ ಧ್ವಜಾರೋಹಣ ಸಾಮಾನ್ಯ ದೃಶ್ಯವಾಗಿದೆ.
|alt = ಭಾರತದ ರಾಷ್ಟ್ರೀಯ ಧ್ವಜವು ಗುಮ್ಮಟಗಳು ಮತ್ತು ಮಿನಾರ್‌ಗಳಿಂದ ಅಲಂಕರಿಸಲ್ಪಟ್ಟ ಗೋಡೆಯ ಮೇಲೆ ಹಾರಿಸಲ್ಪಟ್ಟಿತು.
|alt = ಭಾರತದ ರಾಷ್ಟ್ರೀಯ ಧ್ವಜವು ಗುಮ್ಮಟಗಳು ಮತ್ತು ಮಿನಾರ್‌ಗಳಿಂದ ಅಲಂಕರಿಸಲ್ಪಟ್ಟ ಗೋಡೆಯ ಮೇಲೆ ಹಾರಿಸಲ್ಪಟ್ಟಿತು.

೨೧:೩೯, ೧೪ ಜುಲೈ ೨೦೨೧ ನಂತೆ ಪರಿಷ್ಕರಣೆ

ಭಾರತದ ಸ್ವಾತಂತ್ರ್ಯ ದಿನಾಚರಣೆ
ಭಾರತದ ರಾಷ್ಟ್ರೀಯ ಧ್ವಜವು ಗುಮ್ಮಟಗಳು ಮತ್ತು ಮಿನಾರ್‌ಗಳಿಂದ ಅಲಂಕರಿಸಲ್ಪಟ್ಟ ಗೋಡೆಯ ಮೇಲೆ ಹಾರಿಸಲ್ಪಟ್ಟಿತು.
ಭಾರತದ ರಾಷ್ಟ್ರೀಯ ಧ್ವಜವನ್ನು ದೆಹಲಿಯ ಕೆಂಪು ಕೋಟೆ ನಲ್ಲಿ ಹಾರಿಸಲಾಯಿತು; ಸ್ವಾತಂತ್ರ್ಯ ದಿನದಂದು ಸಾರ್ವಜನಿಕ ಮತ್ತು ಖಾಸಗಿ ಕಟ್ಟಡಗಳಲ್ಲಿ ಧ್ವಜಾರೋಹಣ ಸಾಮಾನ್ಯ ದೃಶ್ಯವಾಗಿದೆ.
ಆಚರಿಸಲಾಗುತ್ತದೆ ಭಾರತ
ರೀತಿರಾಷ್ಟ್ರೀಯ
ಮಹತ್ವಭಾರತದ ಸ್ವಾತಂತ್ರ್ಯವನ್ನು ನೆನಪಿಸುತ್ತದೆ
ಆಚರಣೆಗಳುಧ್ವಜಾರೋಹಣ , ಮೆರವಣಿಗೆ, ಪಟಾಕಿ, ದೇಶಭಕ್ತಿ ಗೀತೆಗಳು ಮತ್ತು ರಾಷ್ಟ್ರಗೀತೆ ಗಾಯನ, ಪ್ರಧಾನಿ ಮತ್ತು ರಾಷ್ಟ್ರಪತಿಗಳ ಭಾಷಣ
ದಿನಾಂಕಆಗಸ್ಟ್ 15
ಆವರ್ತನವಾರ್ಷಿಕ

ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿ ವರ್ಷ ಆಗಸ್ಟ್ ೧೫ ರಂದು ಆಚರಿಸಲಾಗುತ್ತದೆ. ಬ್ರಿಟೀಷರ ಆಡಳಿತದಿಂದ ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ |ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡಿ ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ನಾಯಕರನ್ನು ಸ್ಮರಿಸಲಾಗುತ್ತದೆ.[೧]

ಸ್ವಾತ್ರಂತ್ರ್ಯದ ಹಾದಿ

ಜವಾಹರ್ ‌ಲಾಲ್ ನೆಹರು ರವರಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ

ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್‌ಬ್ಯಾಟನ್, ಬ್ರಿಟಿ‍ಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ ರ ಅನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ,(12.15ರ) ನಂತರ [೨] ಜವಾಹರ್‌ಲಾಲ್ ನೆಹರು ಅವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ಟ್ರವನ್ನುದ್ದೇಶಿಸಿ, ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ( 'ಭಾಗ್ಯದೊಡನೆ ಒಪ್ಪಂದ' ಭಾಷಣ) ಮಾಡಿದರು.[೩][೪]

ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ..... ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ .

ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಜೂನ್ ೧೯೪೮ ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಂದರು. ಪಟೇಲರು ೫೬೫ ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ "ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ" ತಂತ್ರವನ್ನು ಉಪಯೋಗಿಸಿದರು.

ಸಂವಿಧಾನ ರಚನಾಸಭೆಯು ಸಂವಿಧಾನದ ಕರಡ ಸಭೆಯನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿ ಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ಚುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು ೧೯೫೪ರಲ್ಲಿ ಒಪ್ಪಿಸಿದ ಪಾಂಡಿಚೇರಿ . ೧೯೫೨ ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. ೬೨ ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಯಿತು .[೫]

ಸಾಹಿತ್ಯದಲ್ಲಿ ಸ್ವಾತಂತ್ರ್ಯದಿನ

ಸ್ವಾತಂತ್ರ್ಯದ ಮಾಂತ್ರಿಕ ಕ್ಷಣವನ್ನು ಕವಿ ಪ್ರದೀಪ್ ರು ಜಾಗೃತಿ (1954) ಚಿತ್ರದಲ್ಲಿ ಹೀಗೆ ಚಿತ್ರಿಸಿದ್ದಾರೆ:

ಸಂಭ್ರಮದಲ್ಲಿ ಆಚರಣೆ

ಭಾರತದ ಪ್ರಧಾನಮಂತ್ರಿ ದೆಹಲಿಯ ಕೆಂಪು ಕೋಟೆ ಯ ಐತಿಹಾಸಿಕ ಸ್ಥಳದಲ್ಲಿ ಆಗಸ್ಟ್ ೧೫ರಂದು ಭಾರತದ ಧ್ವಜದ ಆರೋಹಣವನ್ನು ನೆರವೇರಿಸುವರು

ಆಗಸ್ಟ್ 15 ಭಾರತದ ರಾಷ್ಟೀಯ ರಜಾದಿನವಾಗಿದೆ. ರಾಜಧಾನಿ ನವದೆಹಲಿ ಯಲ್ಲಿ ಬಹ್ವಂಶ ಸರಕಾರಿ ಕಚೇರಿಗಳು ವಿದ್ಯುದ್ದೀಪಗಳಿಂದ ಬೆಳಗುತ್ತವೆ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಸಮಾರಂಭಗಳು ಜರುಗುತ್ತವೆ. ದೇಶದಾದ್ಯಂತ ನಗರಗಳಲ್ಲಿ ಧ್ವಜಾರೋಹಣವನ್ನು ಆಯಾ ಕ್ಷೇತ್ರಗಳ ರಾಜಕೀಯ ಧುರೀಣರು ನೆರವೇರಿಸುತ್ತಾರೆ . ಖಾಸಗಿ ಸಂಸ್ಥೆಗಳಲ್ಲಿ ಧ್ವಜಾರೋಹಣವನ್ನು ಆಯಾ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡುತ್ತಾರೆ . ಶಾಲೆಕಾಲೇಜುಗಳು ತಮ್ಮ ಆವರಣದಲ್ಲಿ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಬಂಧುಮಿತ್ರರು ಭೋಜನಕೂಟ ಮತ್ತು ಪ್ರವಾಸಗಳಿಗೆಂದು ಸೇರುತ್ತಾರೆ. ಹೌಸಿಂಗ್ ಕಾಲನಿಗಳು , ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮನರಂಜನಾ ಕಾರ್ಯಕ್ರಮಗಳನ್ನೂ, ಸ್ಪರ್ಧೆಗಳನ್ನೂ ಏರ್ಪಡಿಸುತ್ತಾರೆ.[೬]

ಗಾಳಿಪಟಗಳ ಹಾರಾಟ

ಭಾರತದ ಅನೇಕ ಪ್ರದೇಶಗಳಲ್ಲಿ ಸ್ವಾತಂತ್ರ್ಯದಿನದಂದು ಗಾಳಿಪಟಗಳನ್ನು ಹಾರಿಸುವ ಪದ್ದತಿ ಜನಪ್ರಿಯವಾಗಿದೆ . ಅಕಾಶವು ನೂರಾರು ಬಣ್ಣ ಬಣ್ಣದ ಪಟಗಳಿಂದ ಕಂಗೊಳಿಸುವುದು. ಜನರು ಗಾಳಿಪಟಗಳನ್ನು ಹಾರಿಸುವ ಸ್ಪರ್ಧೆಗಳಲ್ಲಿ ತೊಡಗುವರು ಕಟ್ಟಡಗಳ ಬಾಲ್ಕನಿಗಳು ಮತ್ತು ಮನೆಗಳ ಮಾಳಿಗೆಗಳಿಂದ ಜನರು ಗಾಳಿಪಟಗಳನ್ನು ಬಾನಿಗೆ ಹಾರಬಿಡುವರು.ಸಂಜೆಯ ವೇಳೆ ಗಾಳಿಪಟಗಳು ಮುಗಿಲ ಮುಟ್ಟುವಂತೆ ಮೇಲೇರುತ್ತಿದ್ದಂತೆ ಮಕ್ಕಳ ಹರ್ಷೋಲ್ಲಾಸದ ಧ್ವನಿಗಳು ಎಲ್ಲೆಲ್ಲೂ ಕೇಳಬರುತ್ತವೆ .

ಬಾಹ್ಯ ಕೊಂಡಿಗಳು

ಉಲ್ಲೇಖಗಳು

  1. PTI (15 August 2013). "Manmohan first PM outside Nehru-Gandhi clan to hoist flag for 10th time" Archived 21 December 2013 ವೇಬ್ಯಾಕ್ ಮೆಷಿನ್ ನಲ್ಲಿ.. The Hindu. Retrieved 30 August 2013.
  2. https://www.linkedin.com/pulse/20140815144059-336000804-astrology-s-role-in-indian-independence-mahurat
  3. "Terror strike feared in Delhi ahead of Independence Day : MM-National, News – India Today". Indiatoday.intoday.in. 5 ಆಗಸ್ಟ್ 2015. Archived from the original on 7 ಆಗಸ್ಟ್ 2015. Retrieved 13 ಆಗಸ್ಟ್ 2015. {{cite web}}: Unknown parameter |deadurl= ignored (help)
  4. "69th Independence Day: Security Tightened at Red Fort as Terror Threat Looms Large on PM Modi". Ibtimes.co.in. 28 ಫೆಬ್ರವರಿ 2015. Archived from the original on 14 ಆಗಸ್ಟ್ 2015. Retrieved 13 ಆಗಸ್ಟ್ 2015. {{cite web}}: Unknown parameter |deadurl= ignored (help)
  5. Metcalf, B.; Metcalf, T. R. (9 October 2006). A Concise History of Modern India (2nd ed.). Cambridge University Press. ISBN 978-0-521-68225-1.
  6. Wolpert, Stanley A. (12 ಅಕ್ಟೋಬರ್ 1999). India. University of California Press. p. 204. ISBN 978-0-520-22172-7. Archived from the original on 9 ಮೇ 2013. Retrieved 20 ಜುಲೈ 2012. {{cite book}}: Unknown parameter |deadurl= ignored (help)