ಮಾನವನ ಚರ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Reverted to revision 779198 by Bschandrasgr (talk): Reverted link spam (TW)
ಟ್ಯಾಗ್: ರದ್ದುಗೊಳಿಸಿ
೧೨೫ ನೇ ಸಾಲು: ೧೨೫ ನೇ ಸಾಲು:
[[File:Skin Microbiome20169-300.jpg|thumb|ಮಾನವ ಚರ್ಮದಮೇಲೆ ಸೂಕ್ಷ್ಮಾಣು ಜೀವಜಾಲ::ಚರ್ಮದ 20 ಪ್ರದಶಗಳಲ್ಲಿ ಗುರುತಿಸಿರುವುದು. (Skin Microbiome 2016 9-300)]]
[[File:Skin Microbiome20169-300.jpg|thumb|ಮಾನವ ಚರ್ಮದಮೇಲೆ ಸೂಕ್ಷ್ಮಾಣು ಜೀವಜಾಲ::ಚರ್ಮದ 20 ಪ್ರದಶಗಳಲ್ಲಿ ಗುರುತಿಸಿರುವುದು. (Skin Microbiome 2016 9-300)]]
*ಮಾನವ ಚರ್ಮವು ಸೂಕ್ಷ್ಮಜೀವಿಗಳ ಶ್ರೀಮಂತ ಪರಿಸರ ಅಥವಾ ತೋಟ. 19 ಬ್ಯಾಕ್ಟೀರಿಯಾದ ವರ್ಗಗಳಲ್ಲಿ (ಫೈಲ) ಸುಮಾರು 1000 ಜಾತಿಯ ಬ್ಯಾಕ್ಟೀರಿಯಾ ಗಳು ಕಂಡುಬಂದಿವೆ. ಆಕ್ಟಿನೊ ಬ್ಯಾಕ್ಟೀರಿಯಾ (51.8%), ಫರ್ಮಿಕ್ಯೂಟ್ಸ್ (24.4%), ಪ್ರೊಟೊ ಬ್ಯಾಕ್ಟೀರಿಯಾ (16.5%), ಮತ್ತು ಬ್ಯಾಕ್ಟೀರೊಯಿಡೇಟ್ಸ್ (6.3%): ಇವುಗಳಲ್ಲಿ ಕೇವಲ ನಾಲ್ಕು ಫೈಲ ಹೆಚ್ಚು ಇರುವುದು ಕಂಡು ಬರುತ್ತವೆ. ಪ್ರೊಪಿಯೊನ್ ಬ್ಯಾಕ್ಟೀರಿಯಾ ಮತ್ತು ಸ್ಟ್ಯಾಫಿಲೊಕೊಸ್ಸಿ ಜಾತಿಯವು ಮುಖ್ಯ ಜಾತಿಗಳು; ಅವು ಚರ್ಮದ ಜಿಡ್ಡಾದ ಪ್ರದೇಶಗಳಲ್ಲಿ ಹೆಚ್ಚು. ಚರ್ಮದಲ್ಲಿ ಮೂರು ಮುಖ್ಯ ಪರಿಸರಗಳಿವೆ. ತೇವ ಪ್ರದೇಶ, ಒಣಪ್ರದೇಶ, ಮತ್ತು ಜಿಡ್ಡಿನ (ಮೇದಸ್ಸಿನ) ಪ್ರದೇಶ. ಕೊರೈನೆ ಬ್ಯಾಕ್ಟೀರಿಯಾ ಜೊತೆ ಸ್ಟ್ಯಾಫಿಲೊಕೊಸ್ಸಿ ಬ್ಯಾಕ್ಟೀರಿಯಾ ಒಟ್ಟಾಗಿ ದೇಹದ ಒಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜಾತಿಗಳ ಮಿಶ್ರಣವಿದೆ ಆದರೆ ಫ್ಲೇವೊ ಬ್ಯಾಕ್ಟೀರಿಯಾ ಮತ್ತು ಬಿ-ಪ್ರೊಟೊ ಬ್ಯಾಕ್ಟೀರಿಯಾ ಪ್ರಾಬಲ್ಯವಿದೆ.
*ಮಾನವ ಚರ್ಮವು ಸೂಕ್ಷ್ಮಜೀವಿಗಳ ಶ್ರೀಮಂತ ಪರಿಸರ ಅಥವಾ ತೋಟ. 19 ಬ್ಯಾಕ್ಟೀರಿಯಾದ ವರ್ಗಗಳಲ್ಲಿ (ಫೈಲ) ಸುಮಾರು 1000 ಜಾತಿಯ ಬ್ಯಾಕ್ಟೀರಿಯಾ ಗಳು ಕಂಡುಬಂದಿವೆ. ಆಕ್ಟಿನೊ ಬ್ಯಾಕ್ಟೀರಿಯಾ (51.8%), ಫರ್ಮಿಕ್ಯೂಟ್ಸ್ (24.4%), ಪ್ರೊಟೊ ಬ್ಯಾಕ್ಟೀರಿಯಾ (16.5%), ಮತ್ತು ಬ್ಯಾಕ್ಟೀರೊಯಿಡೇಟ್ಸ್ (6.3%): ಇವುಗಳಲ್ಲಿ ಕೇವಲ ನಾಲ್ಕು ಫೈಲ ಹೆಚ್ಚು ಇರುವುದು ಕಂಡು ಬರುತ್ತವೆ. ಪ್ರೊಪಿಯೊನ್ ಬ್ಯಾಕ್ಟೀರಿಯಾ ಮತ್ತು ಸ್ಟ್ಯಾಫಿಲೊಕೊಸ್ಸಿ ಜಾತಿಯವು ಮುಖ್ಯ ಜಾತಿಗಳು; ಅವು ಚರ್ಮದ ಜಿಡ್ಡಾದ ಪ್ರದೇಶಗಳಲ್ಲಿ ಹೆಚ್ಚು. ಚರ್ಮದಲ್ಲಿ ಮೂರು ಮುಖ್ಯ ಪರಿಸರಗಳಿವೆ. ತೇವ ಪ್ರದೇಶ, ಒಣಪ್ರದೇಶ, ಮತ್ತು ಜಿಡ್ಡಿನ (ಮೇದಸ್ಸಿನ) ಪ್ರದೇಶ. ಕೊರೈನೆ ಬ್ಯಾಕ್ಟೀರಿಯಾ ಜೊತೆ ಸ್ಟ್ಯಾಫಿಲೊಕೊಸ್ಸಿ ಬ್ಯಾಕ್ಟೀರಿಯಾ ಒಟ್ಟಾಗಿ ದೇಹದ ಒಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜಾತಿಗಳ ಮಿಶ್ರಣವಿದೆ ಆದರೆ ಫ್ಲೇವೊ ಬ್ಯಾಕ್ಟೀರಿಯಾ ಮತ್ತು ಬಿ-ಪ್ರೊಟೊ ಬ್ಯಾಕ್ಟೀರಿಯಾ ಪ್ರಾಬಲ್ಯವಿದೆ.
[[image:Staphylococcus epidermidis 01.png|thumb|300px|ಸ್ಕ್ಯಾನ್ ಮಾಡಿದಾಗ ಕಂಡ ಸೂಕ್ಷ್ಮ ಅಣುಜೀವಿ : [[:en:Scanning electron microscope]] image of ''[[:en:Staphylococcus epidermidis]]'' one of roughly a thousand [[:en:bacteria]] species present on human [[:en:skin]]. Though usually not [[:en:pathogenic]], it can cause [[:en:skin infection]]s and even life-threatening illnesses in those that are [[:en:immunocompromised]].]]
[[image:Staphylococcus epidermidis 01.png|thumb|300px|ಸ್ಕ್ಯಾನ್ ಮಾಡಿದಾಗ ಮಾನವ ಚರ್ಮದ ಮೇಲೆ ಕಂಡ ಸೂಕ್ಷ್ಮ ಅಣುಜೀವಿ : [[:en:Scanning electron microscope]] image of ''[[:en:Staphylococcus epidermidis]]'' one of roughly a thousand [[:en:bacteria]] species present on human [[:en:skin]]. Though usually not [[:en:pathogenic]], it can cause [[:en:skin infection]]s and even life-threatening illnesses in those that are [[:en:immunocompromised]].]]
===ತೇವ ಸ್ಥಳಗಳಲ್ಲಿ ಪ್ರಾಬಲ್ಯ===
===ತೇವ ಸ್ಥಳಗಳಲ್ಲಿ ಪ್ರಾಬಲ್ಯ===
*ಪರಿಸರಕ್ಕೆ ಅನುಗುಣವಾಗಿ , ಜಿಡ್ಡಿನ ಅಥವಾ ಮೇದಸ್ಸಿನ (ಸೆಬಾಸಿಯಸ್) ಪ್ರದೇಶಗಳಲ್ಲಿ ಮತ್ತು ಒಣ ಪ್ರದೇಶಕ್ಕಿಂತ ತೇವ ವಾದ್ದರಿಂದ ಈ ಸೂಕ್ಷ್ಮ ಜೀವಿಗಳ ಶ್ರೀಮಂತ (ಹೆಚ್ಚಿನ)ಪ್ರದೇಶ. ಬೇರೆ ಬೇರೆ ಜಾತಿಯ ಜನರ ನಡುವೆ ಕನಿಷ್ಠ ಹೋಲಿಕೆ (ಹೋಲಿಕೆ ಇಲ್ಲದಿರುವುದು) ಇರುವುದು, ಬೆರಳುಗಳ ನಡುವೆ ಖಾಲಿ ಪ್ರದೇಶಗಳಲ್ಲಿ, ಕಾಲ್ಬೆರಳುಗಳು, ಕಂಕುಳುಗಳಲ್ಲಿ ಮತ್ತು ಹೊಕ್ಕುಳಬಳ್ಳಿಯ ಕುಳಿಯಲ್ಲಿ. ಜನ - ಜನರಲ್ಲಿ ಅತಿ ಹೆಚ್ಚಿ ನ ಹೋಲಿಕೆ ಇರುವ ಜೀವಿಗಳು, ಮೂಗಿನ ಹೊಳ್ಳೆ ಪಕ್ಕದಲ್ಲಿ ;, ಮೂಗಿನ ಹೊಳ್ಳೆಗಳು (ಮೂಗಿನ ಹೊಳ್ಳೆ ಒಳಗೆ), ಮತ್ತು ಬೆನ್ನು ಪ್ರದೇಶದಲ್ಲಿ .
*ಪರಿಸರಕ್ಕೆ ಅನುಗುಣವಾಗಿ , ಜಿಡ್ಡಿನ ಅಥವಾ ಮೇದಸ್ಸಿನ (ಸೆಬಾಸಿಯಸ್) ಪ್ರದೇಶಗಳಲ್ಲಿ ಮತ್ತು ಒಣ ಪ್ರದೇಶಕ್ಕಿಂತ ತೇವ ವಾದ್ದರಿಂದ ಈ ಸೂಕ್ಷ್ಮ ಜೀವಿಗಳ ಶ್ರೀಮಂತ (ಹೆಚ್ಚಿನ)ಪ್ರದೇಶ. ಬೇರೆ ಬೇರೆ ಜಾತಿಯ ಜನರ ನಡುವೆ ಕನಿಷ್ಠ ಹೋಲಿಕೆ (ಹೋಲಿಕೆ ಇಲ್ಲದಿರುವುದು) ಇರುವುದು, ಬೆರಳುಗಳ ನಡುವೆ ಖಾಲಿ ಪ್ರದೇಶಗಳಲ್ಲಿ, ಕಾಲ್ಬೆರಳುಗಳು, ಕಂಕುಳುಗಳಲ್ಲಿ ಮತ್ತು ಹೊಕ್ಕುಳಬಳ್ಳಿಯ ಕುಳಿಯಲ್ಲಿ. ಜನ - ಜನರಲ್ಲಿ ಅತಿ ಹೆಚ್ಚಿ ನ ಹೋಲಿಕೆ ಇರುವ ಜೀವಿಗಳು, ಮೂಗಿನ ಹೊಳ್ಳೆ ಪಕ್ಕದಲ್ಲಿ ;, ಮೂಗಿನ ಹೊಳ್ಳೆಗಳು (ಮೂಗಿನ ಹೊಳ್ಳೆ ಒಳಗೆ), ಮತ್ತು ಬೆನ್ನು ಪ್ರದೇಶದಲ್ಲಿ .

೧೭:೨೫, ೧೨ ಏಪ್ರಿಲ್ ೨೦೨೧ ನಂತೆ ಪರಿಷ್ಕರಣೆ


ಚರ್ಮ:ಚಿತ್ರವಿವರ:ಎ ಹೊರಚರ್ಮ;ಬಿ ಒಳಚರ್ಮ;ಸಿ ಸಬ್‍ಕುಟಿಸ್-Subcutis / Hypodermis;ಡಿ ರಕ್ತ ಮತ್ತು ದುಗ್ಧರಸ ನಾಳಗಳು;ಇ ಸ್ಟ್ರಾಟಮ್ Germinativum;;;1.ರೋಮದ ಎಳೆ;Hair Shaft;2.Stratum corneum; 3.Pigment ಲೇಯರ್;4 .Stratum Spinosum; 5.Stratum Basale; 6.Arrector Pili ಸ್ನಾಯು; 7.Sebaceous ಗ್ರಂಥಿ; 8.ಕೇಶ ಕೋಶಕ ಯಾ ರೋಮಕೂಪ; 9.ರೋಮದ ಗಡ್ಡೆ ; ಪಾಪಿಲ್ಲಾ Papilla; 10.ನರತಂತು;ಫೈಬರ್; 11.ಬೆವರು ಗ್ರಂಥಿ; 12.Pacinian ಇಲೆಕ್ಟ್ರಾನು; 13.ಆರ್ಟರಿ -ಶುದ್ಧ ರಕ್ತನಾಳ-Artery; 14.ಮಲಿನ ರಕ್ತನಾಳ-Vein; 15.ಜ್ಞಾನ ನರ ಕುಡಿ(ಸ್ಪರ್ಶ-ಟಚ್); 16.Dermal ಪ್ಯಾಪಿಲ್ಲರಿ; 17.ಬೆವರು ರಂಧ್ರ

ಪೀಠಿಕೆ

  • ಮಾನವನ ಚರ್ಮವು ದೇಹದ ಹೊರ ಆವರಣವನ್ನು ಆವರಿಸಿದೆ. ಮಾನವರಲ್ಲಿ, ಇದು ಜೀವರಕ್ಷಣಾ (ಇಂಟೆಗ್ಯುಮೆಂಟರಿ- integumentary system) ವ್ಯವಸ್ಥೆಯ ದೊಡ್ಡ ಅಂಗವಾಗಿದೆ. ಚರ್ಮವು ಬಾಹ್ಯಕೋಶಸ್ತರೀಯ ಏಳು ಪದರಗಳ ಅಂಗಾಂಶವನ್ನು ಹೊಂದಿದೆ. ಅದು ಮೂಳೆಗಳು, ಅಸ್ಥಿರಜ್ಜುಗಳು ಮತ್ತು ಆಂತರಿಕ ಅಂಗಗಳನ್ನು ಮತ್ತು ಆಧಾರವಾಗಿರುವ ಸ್ನಾಯುಗಳನ್ನು ರಕ್ಷಿಸುವುದು. ಮಾನವನ ಚರ್ಮ ಇತರ ಸಸ್ತನಿಗಳ ಚರ್ಮವನ್ನು ಹೋಲುತ್ತದೆ. ಸುಮಾರಾಗಿ ಎಲ್ಲಾ ಮಾನವರ ಚರ್ಮವೂ ಕೂದಲು ಕಿರುಚೀಲಗಳಿಂದ ತುಂಬಿದ್ದರೂ,, ಬೋಳು ಚರ್ಮವೂ ಕಾಣಿಸಿಕೊಳ್ಳಬಹುದು. ಚರ್ಮದಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಕೂದಲುಳ್ಳ ಚರ್ಮ, ಇನ್ನೊಂದು ರೋಮರಹಿತವ ಚರ್ಮ (ಬೋಳು ಚರ್ಮ).[೧] [೨]
  • ಮಾನವ ದೇಹದಲ್ಲಿ ಅಂಗಾಂಗಳು ಜೀವಕೋಶಗಳು ನಮ್ಮ ಅರಿವಿಗೆ ಬಂದು ಅಥವಾ ಬರದೆ ಸತತ ಕೆಲಸಮಾಡುತ್ತಿರುವುದರಿಂದ ದೇಹದಲ್ಲಿ ಇಂಗಾಲಾಮ್ಲ ಯೂರಿಯಾದಂಥ ಸಸಾರಜನಕ ಅನಗತ್ಯ ಲವಣಗಳು ಮೊಲಾದ ಕಶ್ಮಲಗಳು ಉತ್ಪತ್ತಿಯಾಗುತ್ತವೆ. ಅವುಗಳುನ್ನು ಹೊರಹಾಕಲು ಮೂತ್ರಪಿಂಡ ಅಥವಾ ಕಲಿಜಗಳಂತೆ ಚರ್ಮವೂ ಕಶ್ಮಲಗಲನ್ನು ನಿವಾರಣೆಮಾಡುವ ಒಂದು ದೊಡ್ಡ ಅಂಗ. ನಾವು ನಮ್ಮ ಉಸಿರಾಟದ ಮೂಲಕ ಸುಮಾರು 900 ಗ್ರಾಂ ತೂಕದಷ್ಟು ಇಂಗಾಲಾಮ್ಲವನ್ನು ಹೊರಹಾಕಿದರೆ, ಚರ್ಮದ ಮೂಲಕ 9 ಗ್ರಾಂ ತೂಕದಷ್ಟು ಇಂಗಾಲಾಮ್ಲವನ್ನು ಹೊರಹಾಕುತ್ತೇವೆ. ಅದೇ ಚರ್ಮವು ಸ್ವಲ್ಪಮಟ್ಟಿಗೆ ಆ ಅನಿಲವನ್ನು ಹೀರಿಕೊಳ್ಳಲೂ ಬಲ್ಲದು. ನಮ್ಮ ಕಲಿಜಗಳು ವಿಸರ್ಜಿಸುವ ವೀರು, ಅಜೀವಕ ಲವಣಗಳು, ಯೂರಿಯಾ ಮೊದಲಾದ ಕಶ್ಮಲಗಳನ್ನು ಬೆವರಿನ ಮೂಲಕ ಹೊರಹಾಕುವುದು. ಮೈಯ್ಯ ಕಾವನ್ನು ಕಡೆಮೆಮಾಡಲೂ ಬೆವರು ಸಹಾಯಕ. ಗಾಲಿಗೊಡ್ಡಿದ ಬೆವರು ಆವಿಯಾದಾಗ ಚರ್ಮ/ದೇಹದ ಶಾಖ ಕಡಿಮೆಯಾಗುವುದು. ಚರ್ಮಕ್ಕೆ ಕೆಲವು ಎಣ್ಣೆಯಂಥಹ ವಸ್ತುಗಳನ್ನು ಹೀರುವ ಗುಣವೂ ಇದೆ. ಅದರೆ ಚರ್ಮದ ದೊಡ್ಡ ಕೆಲಸ ಶುದ್ಧೀಕರಣ, ಬೆವರಿನ ಮೂಲಕ ನೀರು ಮತ್ತು ಕಶ್ಮಲಗಳನ್ನು ಹೊರಹಾಕುವುದು. [೩] ಪುರುಷರ ಮುಂದೋಳಿನಲ್ಲಿ ಚರ್ಮದ ದಪ್ಪ ಸರಾಸರಿ 1. 3 ಮಿಮೀ ಇದ್ದರೆ ಅದೇ ಸ್ತ್ರೀಯರಲ್ಲಿ 1. 26 ಮಿಮೀ ಇರುವುದು. ಚರ್ಮದ ದಪ್ಪ ದೇಹದ ಬೇರೆ ಬೇರೆ ಭಾಗಗಲ್ಲಿ ಬದಲಾಗುತ್ತದೆ,

ಸಂಕ್ಷಿಪ್ತ ವಿವರಣೆ

  • ನಮ್ಮ ಚರ್ಮದ ಕೆಳಗಡೆಯಲ್ಲಿ ಅಲ್ಲಲಿ ಸ್ವೇದಗ್ರಂಥಿ ಅಥವಾ ಬೆವರಿನ ಗ್ರಂಥಿ (ಸ್ವೆಟ್ ಗ್ಲ್ಯಾಂಡ್ಸ್ –sweat glands) ಇರುವುದು. ಹವೆಯಲ್ಲಿ ಉಷ್ಣತೆ ಹೆಚ್ಚಿದಾಗ ಸ್ವೇದಗ್ರಂಥಿಯ ಚಟುವಟಿಕೆ ಹೆಚ್ಚುತ್ತದೆ. ಅದರಿಂದ ಮೈ ಬೆವರುತ್ತದೆ. ಹವಾಮಾನವನ್ನು ಅನುಸರಿಸಿ ನಮ್ಮ ಮೈಯಿಂದ 200 ರಿಂದ 500 ಘನಸೆಂಟಿಮೀಟರಿನಷ್ಟು ಬವರು ಹೊರಬರಬಹುದು (ಒಣಚರ್ಮದವರಿಗೆ ಕಡಿಮೆ). ಅಧಿಕ ಶ್ರಮದಿಂದ ನಮ್ಮ ಜೀವಕೋಶಗಳಲ್ಲಿ ಅಧಿಕ ಕಶ್ಮಲ ಉತ್ಪತ್ತಿಯಾಗುವುದು. ಆಗ ಹೆಚ್ಚು ಕಶ್ಮಲ ಬೆವರಿನ ಮೂಲಕವೇ ಹೊರಗೆ ತಳ್ಳಲ್ಪಡುತ್ತದೆ. ನಮ್ಮ ಮೆದುಳಿಗೂ ಸ್ವೇದಗ್ರಂಥಿಗಳಿಗೂ ಸಂಬಂದವಿದೆ, ಮನಸ್ಸಿನ ಗಾಬರಿ, ಉದ್ವೇಗಗಳು ಹೆಚ್ಚು ಬೆವರಲು ಮೆದುಲಿನ ಪ್ರೇರಣೆ ಕಾರಣ. ದೇಹ ರಕ್ಷಣೆಗೆ ಚರ್ಮ ತೀರಾಅಗತ್ಯ; ಹಾಗೆಯೇ ಚರ್ಮದೊಳಗೆ ಪಸರಿಸಿರುವ ಒಂದು ಜಾತಿಯ ಪುಡಿಗಳು (ಪಿಗ್ಮೆಂಟ್ಸ್ -pigments) ಸೂರ್ಯರಶ್ಮಿಯಲ್ಲಿರುವ ಹಾನಿಕಾರಕ ಶಕ್ತಿಯಕಿರಣಗಳನ್ನು ತಡೆಯುತ್ತವೆ.

ನರದ ಕುಡಿಗಳು

  • ಚರ್ಮದ ಕೆಳಗಡೆ ಅಸಂಖ್ಯ ನರದಕುಡಿಗಳಿವೆ. ಅವು ನೋವು, ಸ್ಪರ್ಶ, ಒತ್ತಡ, ಶೀತ, ಉಷ್ನಗಳನ್ನು ಮತ್ತು ವಿವಿಧ ಅನುಭವಗಳನ್ನು ತಿಳಿಸುವುವು. ಅದೇ ಅನೇಕ ಇತರೆ ಪ್ರಾಣಿಗಳ ಮತ್ತು ಜಲಚರಪ್ರಾಣಿಗಳ ಚರ್ಮ ನಮ್ಮ ಚರ್ಮದಂತೆ ಇಲ್ಲ ಆದ್ದರಿಂದ ಅದು ಹೆಚ್ಚಿನ ಶಾಖ ಬಿಸಿಲು ಅಥವಾ ಹವಾಮಾನದ ವಿಶೇಷ ವ್ಯತ್ಯಾಸ ಸಹಿಸಲಾರವು. ಹವೆಯ ಸಾಮಾನ್ಯತರ ವ್ಯತ್ಯಾಸಗಳನ್ನು ಮೈ ಚರ್ಮವು ತನ್ನ ರೋಮ ರಂದ್ರಗಳ ಸಂಕೋಚನ ವಿಕೋಚನಗಳ (ವಿಸ್ತರಣ) ಮೂಲಕವೂ ಬೆವರುವಿಕೆಯಿಂದಲೂ ನಿಯಂತ್ರಿಸುವುದು.
  • ಉಷ್ಣತೆ ಅತಿ ಹೆಚ್ಚಾದರೆ ಬೆವರು ಅತಿಯಾಗಿ ಸುರಿದು, ನಮ್ಮಶರೀರದಿಂದ ಅತಿಯಾಗಿ ಉಪ್ಪು ನೀರು ವಿಶೇಷ ನಷ್ಟವಾಗಿ ದಣಿವು ತಲೆನೋವು ತೂಕಡಿಕೆ ಉಂಟಾಗಬಹುದು. ನಮ್ಮ ಮೆದುಳಿನ ಕೇಂದ್ರ ವ್ಯವಸ್ಥೆಯೇ ಕೆಡಬಹುದು. ಅತಿ ಶೀತದಿಂದಲೂ ಅದರ ವಿರುದ್ಧ ಪರಿಣಾಮವಾಗಬಹುದು, ನಡುಕವುಂಟಾಗುವುದು.
  • ಚರ್ಮದ ತಳದಲ್ಲಿ ಸ್ವೇದಗ್ರಂಥಿಗಳಿರುವಂತೆಯೇ ತೈಲಗ್ರಂಥಿಗಳೂ (Sebaceous) ಇವೆ. ಅವು ಒಸರುವ ತೈಲ ನಮ್ಮಚರ್ಮಕ್ಕೆ ಬೇಕಾದ ಪುಟವನ್ನು (ಕಾಂತಿ) ಕೊಡುತ್ತವೆ. ಅವು ಕೊಳೆಯಿಂದ ಮುಚ್ಚಿದಾಗ ತೈಲದ ಕೋಳವೆಯ ದಾರಿ ಕಟ್ಟಿ ತೈಲ ನೊರಕ್ಕೆ ಬರಲಾರದು. ಆಗ ಬೊಕ್ಕೆ, ಕುರ (ಬೊಯಿಲ್ Boil) ಅTವಾ guLfLe (Carbunkle)ಗಳು ಏಳಬಹುದು.[೪]

ಸೋಂಕುಗಳ ರೋಗನಿರೋಧಕ

  • ಇದು ಹೊರ ಪರಿಸರದೊಂದಿಗೆ ಸಂಪರ್ಕಹೊಂದಿರುವುದರಿಂದ ಚರ್ಮವು ನಾನಾ ಸೋಂಕುಗಳ ರೋಗನಿರೋಧಕವಾಗಿ ಪ್ರಮುಖ ಪಾತ್ರವಹಿಸುತ್ತದೆ ಮತ್ತು ನೀರಿನ ಹೆಚ್ಚುವರಿ ನಷ್ಟದ ವಿರುದ್ಧ ದೇಹವನ್ನು ರಕ್ಷಿಸುವ ಪ್ರಮುಖ ಪಾತ್ರವಹಿಸುತ್ತದೆ. ಇದರ ಇತರ ಕಾರ್ಯಗಳನ್ನು ಉóಷ್ಣನಿರೋಧನ, ತಾಪಮಾನ ನಿಯಂತ್ರಣ, ಸಂವೇದನೆ, ಎ- ಜೀವಸತ್ವದ ಸಂಯೋಜನೆ ಹಾಗೂ ವಿಟಮಿನ್ ಬಿ ಧಾತು ರಕ್ಷಣೆ. ಹಾನಿಗೊಳಗಾದ ಚರ್ಮ ಗಾಯದ ಅಂಗಾಂಶ ರೂಪುಗೊಳಿಸಿ ಸರಿಪಡಿಸಲು ಪ್ರಯತ್ನ, ಆದರೂ ಇದು ಕೆಲವೊಮ್ಮೆ ಬಣ್ಣಗೆಡುವುದು ಮತ್ತು ಅಂಗಾಶವಿಕಲತೆ ಅಥವಾ ಗಂಟು ಕಾಣುವುದು. [೫]

ಅಣುಜೀವಿಗಳಿಗೆ ಆಶ್ರಯ

  • ಮಾನವರಲ್ಲಿ, ಚರ್ಮದ ವರ್ಣದ್ರವ್ಯವು ಜನಗಳ (ಜನಾಂಗಗಳ) ನಡುವೆ ಬದಲಾಗುತ್ತದೆ, ಮತ್ತು ಚರ್ಮದ ರೀತಿಯಲ್ಲೂ ಒಣ ಚರ್ಮ ಎಣ್ಣೆಯುಕ್ತ ಚರ್ಮ ಎಂಬ ವೈವಿಧ್ಯ ವ್ಯಾಪ್ತಿಯಿರುತ್ತದೆ. ಮಾನವ ಚರ್ಮದ ಮೇಲೆ, ವಿವಿಧ ಬಗೆಯ 19 ಫೈಲ (ವಂಶೀಯ) ದ ಅಂದಾಜು 1000 ಸಂಖ್ಯೆಯ ಜಾತಿಗಳ ಬ್ಯಾಕ್ಟೀರಿಯಾಗಳಿಗೆ ಸಮೃದ್ಧ ಮತ್ತು ವಿಭಿನ್ನವಾದ ಆಶ್ರಯವಾಗಿದೆ.

ಇತರ ಸಸ್ತನಿಗಳಲ್ಲಿ

  • ಸಸ್ತನಿಗಳ ದೇಹದಲ್ಲಿ ಚರ್ಮವು ಗ್ರಂಥಿಗಳ ಮೂಲಕ ಬೆವರನ್ನು ಹೊರದೂಡುತ್ತದೆ. ಬೆವರು, ಉಪ್ಪಿನ ನೆರವಿನಿಂದ, ಆವಿಯಾಗಿ ಅದು ಬಿಸಿಯಾದ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ. ಉಭಯಚರಗಳ ಶ್ವಾಸಕೋಶಗಳು ತುಂಬಾ ಸರಳ, ಮತ್ತು ಪೊರೆ ಚರ್ಮದವು, ಅದರಿಂದ ಅವುಗಳಲ್ಲಿ ಈ ಅಗತ್ಯ ಕ್ರಮದ ಕೊರತೆ ಇದೆ. ಇತರ ಚತುಷ್ಪಾದಿ ಪ್ರಾಣಿಗಳಲ್ಲಿ. ತೇವ ಆವಿಯಾಗಿ, ಇಂಗಾಲದ ಡೈಆಕ್ಸೈಡ್‍ನ್ನು ರಕ್ತ ದಿಂದ ವಿಮುಕ್ತಿಗೊಳಿಸಲು (ಕಾರ್ಬೋಲಿಕ್ ಆಮ್ಲ ರೂಪದಲ್ಲಿ) ಸಹಾಯ ಮಾಡುವುದು. (ಮುಳುಗಿರುವಾಗ ಯೂರಿಯಾವನ್ನು ಪ್ರಸರಣ ಮೂಲಕ ಹೊರಹಾಕುವುದು.[೧೨] [೬]

ಚರ್ಮದ ಮುಖ್ಯ ಕಾರ್ಯಗಳು

  • 1) ಶರೀರದ ಒಳಗಿರುವ ಅಂಗಾಂಶಗಳನ್ನು (ಜೀವಕೋಶಗಳನ್ನು) ದೈಹಿಕ ಆಘಾತಗಳಿಂದ ಸೂರ್ಯನಿಂದಬರುವ ನೀಲಾತಿತ/ ಅತಿನೇರಳೆ ಕಿರಣಗಳಿಂದ ರಕ್ಷಿಸುವುದು.
  • 2) ಶಾಖ, ಸ್ಪರ್ಶ, ನೋವುಗಳನ್ನು ಚರ್ಮದ ತಲದಲ್ಲಿರುವ ನರದ ಕುಡಿಗಳ ಮೂಲಕ ಗ್ರಹಿಸುತ್ತದೆ.
  • 3) ಬೆವರು ಗ್ರಂಥಿಗಳ ಸಹಾಯದಿಂದ ಹೆಚ್ಚಾದ ನೀರು, ಯೂರಿಯಾ, ಲವಣಗಳನ್ನು, ಮುಖ್ಯವಾಗಿ ಉಪ್ಪನ್ನು ವಿಸರ್ಜಿಸುತ್ತದೆ. ಹೀಗೆ ವಿಸರ್ಜನಾಂಗದ ಕೆಲಸವನ್ನು ಮಾಡುವುದು.
  • 4) ಬೆವರನ್ನು ಹೊರಹಾಕುವ ಮೂಲಕ ದೇಹದ ಉಷ್ಣಾಂಶವನ್ನು ಒಂದೇ ಸಮನಾಗಿರುವಂತೆ ಮಾಡುತ್ತದೆ,
  • 5)ಚರ್ಮವು ಮನಸ್ಸಿನ ಭಾವನೆಗಳಿಗೆ ಸ್ಪಂದಿಸಬಲ್ಲದು, ಭಯದಿಂದ ಬೆವರುವುದು, ನಾಚಿಕೆಯಿಂದ ಮುಖ ಕೆಂಪಾಗುವುದು. ಅತಿಶೋಕದ ಆಘಾತದಿಂದ ಮುಖ ಕಪ್ಪಾಗಬಹುದು. ಚರ್ಮದಲ್ಲಿ ನಡುಕವುಂಟಾಗಬಹುದು. [೧೫] [೭]

ಎಕ್‍ಕ್ರೈನ್ (ಎಕ್ಸೋಕ್ರೈನ್ ಗ್ರಂಥಿ)

  • ಎಕ್‍ಕ್ರೈನ್ ಬೆವರಿನ ಗ್ರಂಥಿಗಳು ಒಂದು ಬಗೆಯ ಬಹಿಸ್ಸ್ರಾವ ಗ್ರಂಥಿಗಳು. ಇವು ಒಂದು ವಿಧದ ನಾಳದ ಮೂಲಕ ಒಂದು ಎಪಿತೀಲಿಯಲ್ ಮೇಲ್ಮೈ ಮೇಲೆ ಬೆವರಿನ ಉತ್ಪತ್ತಿ ಮತ್ತು ಆ ಬಗೆಯ ವಸ್ತುಗಳನ್ನು ಸ್ರವಿಸುವ ಗ್ರಂಥಿಗಳು. ಅವರ ರಚನೆ, ಕಾರ್ಯ, ಸ್ರಾವಕ ಉತ್ಪನ್ನ, ವಿಸರ್ಜನೆ, ಅಂಗರಚನಾಶಾಸ್ತ್ರೀಯ ವಿತರಣೆಯ ವಿಧಾನ, ಮತ್ತು ವಿತರಣೆ ವಿವಿಧ ಪ್ರಾಣಿಗಳ ಜಾತಿಗಳಲ್ಲಿ ಬೇರೆ ಬೇರೆ ರೀತಿಯಾಗಿರುತ್ತವೆ. ಬೆವರು ಗ್ರಂಥಿಗಳ ಎರಡು ವಿಧಗಳಿವೆ:
  • ಎಕ್ಕ್ರೈನ್ ಬೆವರು ಗ್ರಂಥಿಗಳು ವಿವಿಧ ಸಾಂದ್ರತೆಯಲ್ಲಿ, ಮಾನವನ ದೇಹದ ಎಲ್ಲಾ ಭಗಗಳಲ್ಲಿ ಹರಡಿಕೊಂಡಿದೆ. ಇದರ ನೀರಿನ ಸಹಿತ ಸ್ರವಿಸುವಿಕೆಯು ದೇಹವನ್ನು ತಂಪಾಗಿಡುವುದು ಒಂದು ಪ್ರಾಥಮಿಕ ಕಾರ್ಯ.
  • ಅಪೊಕ್ರೈನ್ ಬೆವರು ಗ್ರಂಥಿಗಳು ಹೆಚ್ಚಾಗಿ ಬಗಲು ಯಾ ಕಂಕಲು ಮತ್ತು ಗುದದ ಹೊರಭಾಗದ ಪ್ರದೇಶಗಳಲ್ಲಿ ಮಾನವರಲ್ಲಿ ಸೀಮಿತವಾಗಿದೆ.[೮]

ಚರ್ಮದ ಲಕ್ಷಣ

ಚರ್ಮವು ಪ್ರಧಾನವಾಗಿ ಎರಡು ಪದರಗಳನ್ನು ಹೊಂದಿದೆ. ಹೊರಚರ್ಮ , ಒಳಚರ್ಮ. ಇದನ್ನು ವೈಜ್ಞಾನಿಕ ಅಭ್ಯಾಸಕ್ಕೆ ಇನ್ನೂ ಹೆಚ್ಚು ವಿಭಾಗ ಮಾಡಿದ್ದಾರೆ. ಸೂಕ್ಷ್ಮ ವಿಭಾಗದಲ್ಲಿ ಚರ್ಮವನ್ನು ಅನೇಕ ಪದರಗಳಾಗಿ ವಿಂಗಡಿಸಿದ್ದಾರೆ.

ಅಡ್ಡ ಕತ್ತರಿಸಿದ ಚರ್ಮ (ದೊಡ್ಡ ಪ್ರಮಾಣ)

  • ರೋಮರಹಿತ ದಪ್ಪ-ಚರ್ಮ ಮತ್ತು ರೋಮವುಳ್ಳ ತೆಳು-ಚರ್ಮಗಳ ನಕ್ಷೆಯನ್ನು ಅಕ್ಕಪಕ್ಕ ಕೊಟ್ಟಿದೆ.
Skin layers, of both hairy and hairless skin

ಚಿತ್ರದ ವಿವರ

ಚಿತ್ರದ (ನಮ್ಮ)ಎಡಭಾಗದ ವಿವರ ರೋಮರಹಿತ ದಪ್ಪ ಚರ್ಮ ♦♦♦ ಚಿತ್ರದ (ನಮ್ಮ)ಬಲಭಾಗದ ವಿವರ ರೋಮದ ತೆಳು ಚರ್ಮ
Epidermis ಹೊರಚರ್ಮ ♦♦♦ Hair Shaft ಕೂದಲ ಕುಡಿ (ಹೊರಚರ್ಮ)
Superficial arteriovenous plexus ಬಾಹ್ಯ ಅಪಧಮನಿ ಪ್ಲೆಕ್ಸಸ್ ♦♦♦ Sweat duct-opening ಬೆವರು ನಾಳ ರಂದ್ರ
papillary dermis ಒಳಚರ್ಮದ ಪ್ಯಾಪಿಲ್ಲರಿ ♦♦♦ Dermal papillae ಒಳಚರ್ಮದ ಪಾಪಿಲ್ಲೆ -ಹಾಸು
ಒಳಚರ್ಮ: Reticular Dermis ರೆಟಿಕುಲಾರ್ ಒಳಚರ್ಮ ♦♦♦ Arrector pili muscle ಪ್ರಮುಖ ಕಡ್ಡಿ ಸ್ನಾಯು
meissner’s corpuscle ಮೀಸ್ನರ್ ನ ಸಂವೇದನ ಕೋಶ ♦♦♦ sebaceuos gland ಮೇದೋ ಗ್ರಂಥಿ
sweat duct ಬೆವರು ನಾಳ ♦♦♦ Hair follicle ಕೂದಲಿನ ಕುಳಿ (ಕೂದಲ ಬುಡ)
Deep Arteriovenous plexus ಕೆಳಚರ್ಮ: ಶುದ್ಧರಕ್ತ ನಾಳ- ಹೆಣಿಗೆ ♦♦♦ eccrine sweat duct ಎಕ್‍ಕ್ರೈನ್ ಬೆವರು ಗ್ರಂಥಿ ನಾಳ
Subcutaneous fat ಸಬ್ಕ್ಯುಟೇನಿಯಸ್ ಕೊಬ್ಬು ♦♦♦ eccrine sweat gland ಎಕ್‍ಕ್ರೈನ್ (eccrine) ಬೆವರು ಗ್ರಂಥಿ
Dermal Nerve Fibres ಒಳಚರ್ಮದ ನರ ತಂತುಗಳು ♦♦♦ ಇವು ಎರಡು ಬಗೆಯ ಚರ್ಮದಲ್ಲೂ ಇವೆ
Eccrine sweat gland ಎಕ್‍ಕ್ರೈನ್ ಬೆವರು ಗ್ರಂಥಿ ♦♦♦ ಇವು ಎರಡು ಬಗೆಯ ಚರ್ಮದಲ್ಲೂ ಇವೆ
Pacinian corpuscle ಪೇಸಿನಿಯನ್ ಸೂಕ್ಷ್ಮ ಕೋಶ ♦♦♦ ಇವು ಎರಡು ಬಗೆಯ ಚರ್ಮದಲ್ಲೂ ಇವೆ

ರಚನೆ

  • ಚರ್ಮವು ಹೊರಚರ್ಮ ಮತ್ತು ಒಳಚರ್ಮ ಎಂಬ ಎರಡು ಪದರಗಳನ್ನು ಹೊಂದಿದೆ. ಚರ್ಮವು ಮೆಸೊಡೆರ್ಮಲ್ ( mesodermal ) ಜೀವಕೋಶಗಳನ್ನು ಹೊಂದಿದೆ. ಹೊರಚರ್ಮ: ಚರ್ಮದ ತೀರಾ ಹೊರಪದರವು ನಿರ್ಜೀವ ಕೋಶಗಳಿಂದ ಆಗಿದೆ. ಕೆಳಗಿನ ಪದರ ಸಜೀವ ಕೋಶಗಳಿಂದ ಆಗಿದ್ದು, ಕಾಲಕ್ರಮೇಣ ಮೇಲಕ್ಕೆಸರಿದು ನಿರ್ಜೀವ ಕೋಶಗಳಾಗುತ್ತವೆ. ಹೊರಚರ್ಮದ ತೀರಾ ಒಳಪದರವನ್ನು ಮ್ಯಾಲ್ಫೀಜಿಯನ್ ಎನ್ನುತ್ತಾರೆ. ಇದು ಹೊಸಕೋಸಗಳನ್ನು ಉತ್ಪತ್ತಿಮಾಡಿ ಸವೆದುಹೋದ ಭಾಗಗಳನ್ನು ಸರಿಪಡಿಸುತ್ತದೆ. ಬೆಳೆಯುವ ಪದರವು ಮೆಲಾನಿನ್ ಎಂಬ ವಸ್ತುವನ್ನು ತಯಾರಿಸುತ್ತದೆ. ಮೆಲಾನಿನ್ ಎಂದು ವರ್ಣದ್ರವ್ಯಗಳ ಹೊಂದಿದೆ. ಇದು ಚರ್ಮಕ್ಕೆ ಬಣ್ಣವನ್ನು ಕೊಡುತ್ತದೆ. ಮೆಲನೊಸೈಟ್ ಗಳು ಈ ಮಲಾನಿನ್ ಗಳನ್ನು ಒದಗಿಸುವುದು. ಈ ಮಲಾನಿನ್‍ಗಳು ಬಿಸಿಲಿನಲ್ಲಿರುವ ಅಪಾಯಕಾರಿ ನೇರಳಾತೀತ (ನೀಲಾತೀತ?) ವಿಕಿರಣವನ್ನು (ಯು.ವಿ UV -ಆಲ್ಟ್ರಾವಿಯೊಲೆಟ್) ಹೀರಿಕೊಂಡು ಒಳಗಿನ ಅಂಗಾಂಶಗಳನ್ನು ನಾಶವಾಗದಂತೆ ರಕ್ಷಿಸುತ್ತದೆ.
  • ಈ ಕಿಣ್ವಗಳ (enzymes) ಜೀನ್ಗಳ ಕೊರತೆ ಇರುವ ಜನರು ಚರ್ಮ ಕ್ಯಾನ್ಸರ್ ನಿಂದ ಹೆಚ್ಚಿಗೆ ಬಳಲುತ್ತಿದ್ದಾರೆ. ದುರಸ್ತಿ ಕಿಣ್ವಗಳ ಕೊರತೆ , ಪ್ರಧಾನವಾಗಿ ಯುವಿ ಬೆಳಕಿನಕಿರಣಗಳಿಂದ ಆಗುವ ಹಾನಿಯ, ಮಾರಣಾಂತಿಕ ವಾಗಬಹುದು. ಮೆಲನೋಮವು , ತ್ವರಿತವಾಗಿ ಹರಡಲು ಕಾರಣವಾಗುತ್ತದೆ, ವಿಶೇಷವಾಗಿ ಆಕ್ರಮಣಕಾರಿ, ಮತ್ತು ಸಾಮಾನ್ಯವಾಗಿ ಮಾರಣಾಂತಿಕವಾಗಿರುತ್ತವೆ. ಮಾನವ ಚರ್ಮದ ವರ್ಣದ್ರವ್ಯವು ಎದ್ದುಕಾಣುವ ರೀತಿಯಲ್ಲಿ ಜನಗಳಿಂದ ಜನಗಳಿಗೆ (ಜನಾಂಗಗಳಲ್ಲಿ) ಬದಲಾಗುತ್ತದೆ. ಈ ಚರ್ಮದ ಬಣ್ಣದ ಆಧಾರದ ಮೇಲೆ ಜನರ (ಜನಾಂಗಗಳ) ವರ್ಗೀಕರಣಕ್ಕೆ ಕಾರಣವಾಗಿದೆ. [೯]

ಲಕ್ಷಣಗಳು

Epidermal layers:ಹೊರಚರ್ಮದ ಪದರಗಳನ್ನು ವಿವರಿಸುವ ಊತಕ ಚಿತ್ರ. ಹೊರಪದರಿನ ಕೊರ್ನಿಯಮ್ (corneum) ಚಿತ್ರದಲ್ಲಿ ಹೆಚ್ಚು ಕಾಂಪ್ಯಾಕ್ಟ್ ಕಾಣಿಸಿಕೊಳ್ಳುತ್ತದೆ, ಏಕೆಂದರೆ ವಿಭಿನ್ನ ಮಾದರಿಯ ತಯಾರಿಕೆಯದು.
  • ಚರ್ಮವು ಮಾನವ ದೇಹದಲ್ಲಿರವ ದೊಡ್ಡ ಅಂಗವಾಗಿದೆ. ವಯಸ್ಕ ಮಾನವನ, ಚರ್ಮವು ಸುಮಾರು, 1.5-2.0 ಚದರ ಮೀಟರ್ ಗಳ ಮೇಲ್ಮೈಯ ವಿಸ್ತೀರ್ಣ ಹೊಂದಿದೆ (16.1-21.5 ಚದರ ಅಡಿ.). ಚರ್ಮದ ದಪ್ಪ ದೇಹದ ಬೇರೆ ಬೇರೆ ಭಾಗಗಲ್ಲಿ ಬದಲಾಗುತ್ತದೆ, ಮತ್ತು ಪುರುಷರು ಮತ್ತು ಮಹಿಳೆಯರು ಮತ್ತು ಯುವ ಮತ್ತು ಮುದುಕರ ನಡುವೆ ವ್ಯತ್ಯಾಸವಿರುತ್ತದೆ. . ಉದಾಹರಣೆಗೆ ಪುರುಷರ ಮುಂದೋಳಿನಲ್ಲಿ ಚರ್ಮದ ದಪ್ಪ ಸರಾಸರಿ 1. 3 ಮಿಮೀ ಇದ್ದರೆ ಅದೇ ಸ್ತ್ರೀಯರಲ್ಲಿ 1. 26 ಮಿಮೀ ಇರುವುದು. ಒಂದು ಚದರ ಇಂಚಿನಷ್ಟು (6.5 ಛಿmಶಿ) ಚರ್ಮ ಸರಾಸರಿ 650 ಬೆವರು ಗ್ರಂಥಿಗಳು ಇರಯತ್ತವೆ, 20 ರಕ್ತನಾಳಗಳು, (ಲೋಮನಾಳ), ಮತ್ತು 60,000 ಮೆಲನೋಸೈಟ್, ಮತ್ತು 1,000 ಕ್ಕೂ ಹೆಚ್ಚು ನರ ತುದಿಗಳಿಂದ ಕೂಡಿವೆ. . [9] [ಉತ್ತಮ ಮೂಲ ಅಗತ್ಯವಿದೆ] ಮಾನವ ಚರ್ಮದ ಸೆಲ್ ವ್ಯಾಸದಲ್ಲಿ ಸರಾಸರಿ ಸುಮಾರು 30 ಮೈಕ್ರೋಮೀಟರ್ ಇದೆ, ಆದರೆ ಭಿನ್ನತೆಗಳಿವೆ. ವಿವಿಧ ಅಂಶಗಳನ್ನು ಅವಲಂಬಿಸಿ ಒಂದು ಚರ್ಮದ ಸೆಲ್ ಸಾಮಾನ್ಯವಾಗಿ 25-40 ಮೈಕ್ರೊಮೀಟರ್ ವರೆಗೆ (ವರ್ಗ), ಇರಬಹುದು.
  • ಚರ್ಮ ಮೂರು ಪ್ರಾಥಮಿಕ ಪದರಗಳಿಂದ ರಚಿಸಲ್ಪಟ್ಟಿದೆ: ಎಪಿಡರ್ಮಿಸ್, ಒಳಚರ್ಮ - ಡರ್ಮಿಸ್ (dermis) ಹಾಗೂ ಕೆಳಚರ್ಮ (ಹೈಪೊಡರ್ಮಿಸ್) ಎಂದೂ ಹೇಳುವರು. [೧೦][೧೧]

ಹೊರಚರ್ಮ : ಎಪಿಡರ್ಮಿಸ್

  • ಎಪಿಡರ್ಮಿಸ್, "ಎಪಿ" "ಮೇಲೆ" ಗ್ರೀಕ್ ಅರ್ಥ ಅಥವಾ "ಮೇಲೆ" ಇರುವ, ಚರ್ಮದ ಹೊರಗಿನ ಪದರ. ಇದು ದೇಹದ ಮೇಲ್ಮೈ ಮೇಲೆ ಜಲನಿರೋಧಕ, ರಕ್ಷಣಾತ್ಮಕ ಸುತ್ತು ಕೂಡ; ಸೋಂಕಿನ ಒಂದು ತಡೆಯಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು ದೇಹಕ್ಕೆ ಆಧಾರವಾಗಿರುವ ಮೂಲಪೊರೆಯ ಜೊತೆಗೆ ವಿಂಗಡಣೆಯಾದ ಸ್ಕ್ವಾಮಸ್ ಹೊರಪದರದಿಂದ ಮಾಡಲ್ಪಟ್ಟಿದೆ.
  • ಹೊರಚರ್ಮವು (ಎಪಿಡರ್ಮಿಸ್) ಯಾವುದೇ ರಕ್ತನಾಳಗಳನ್ನು ಹೊಂದಿಲ್ಲ, ಮತ್ತು ಇದರ ಆಳವಾದ ಪದರಗಳಲ್ಲಿ ಕೋಶಗಳು ಸುತ್ತುವರಿದ ಗಾಳಿಯ ಆಮ್ಲಜನಕದಿಂದ ಪೋಷಣೆಗಳ್ಳತ್ತವೆ. ಒಳಚರ್ಮದ ಹೊರ ಪದರಗಳಿಗೆ ವಿಸ್ತರಿಸಿದೆ ಸೂಕ್ಷ್ಮ ರಕ್ತನಾಳಗಳಿಂದ ಸ್ವಲ್ಪಮಟ್ಟಗೆ ಪೋಷಣೆ ಪಡೆಯುವುದು. ಹೊರಚರ್ಮದಲ್ಲಿ, (ಎಪಿಡರ್ಮಿಸ್ ನಲ್ಲಿ) ಮುಖ್ಯವಾಗಿ ಮರ್ಕೆಲ್ ಕೆರಟಿನೊಸೈಟ್ಸ್ ಮತ್ತು ಮೆಲನೋಸೈಟ್ ಎಂಬ ನಾರು ಜೀವಕೋಶಗಳ ರೀತಿಯ ಜೀವಕೋಶಗಳು ಮತ್ತು ಲ್ಯಾಂಗರಾನ್ಸ್ ಕೋಶಗಳು ಹೊರಚರ್ಮವನ್ನು ರೂಪಿಸಿವೆ. ಹೊರಚರ್ಮವನ್ನು ಇನ್ನೂ ಹೆಚ್ಚು ವಿಭಾಗ ಮಾಡಿದಾಗ ,ಅಂಗೈ ಅಂಗಾಲುಗಳಲ್ಲಿರುವ ಕೊರ್ನಿಯಂ, ಲುಸಿಡಂ, ಗ್ರನುಲೊಸಮ್ ಸ್ಪಿನೊಸುಮ್, (ಕೇವಲ ಕೈ ಮತ್ತು ಪಾದದ ತಳಕ್ಕೆ ಮಾತ್ರಾ) ಈ ಬಗೆಯ ಯವಯ ಕೋಶವಿಭಜನೆಯಿಂದ ಆಗುತ್ತವೆ. ಕೊರಚರ್ಮವು ಮತ್ತಷ್ಟು ವಿಭಾಗ ಮಾಡಿದರೆ ತೀರಾ ಹೊರಸ್ತರ (ಆರಂಭದ ಹೊರಗಿನ ಪದರವು) ವೆಂದು ವಿಭಜಿಸಬಹುದಾಗಿದೆ. ಜೀವಕೋಶಗಳು ಆರಂಭದ (mitosis at the basale layer) ಪದರದಲ್ಲಿ ಕೋಶ ವಿಭಜನೆಯ ಮೂಲಕ ರಚನೆಯಾಗುತ್ತವೆ. ಮರಿ ಜೀವಕೋಶಗಳು (ಜೀವಕೋಶ ವಿಂಗಡಣೆ ನೋಡಿ) ಅವುಗಳ ರಕ್ತದ ಮೂಲದಿಂದ ಪ್ರತ್ಯೇಕವಾದ ಕಾರಣದಿಂದ ಮರಣಹೊಂದಿ ಆಕಾರ ಮತ್ತು ಸಂಯೋಜನೆ ಬದಲಾವಣೆಯಾಗಿ ರಚನೆಯಾಗುತ್ತವೆ. . ಸೈಟೋಪ್ಲಾಸಂ ಬಿಡುಗಡೆಯಾಗುವುದು, ಮತ್ತು ಪ್ರೋಟೀನ್ ಶೃಂಗದ್ರವ್ಯ ಅದಕ್ಕೆ ಸೇರಉತ್ತದೆ. ತರುವಾಯ ಚರ್ಮದ ಮೇಲಕ್ಕೆ ಬಂದು ತಲುಪಿ, ಅಲ್ಲಿ ಸತ್ತ ಜೀವಕೋಶ ಕಳಚಿಬೀಳುವುದು. ಈ ಪ್ರಕ್ರಿಯೆಯನ್ನು "ಕೆರಟಿನೀಕರಣ" ಎಂದು ಕರೆಯಲಾಗುತ್ತದೆ. ಚರ್ಮದ ಈ ಕೆರಟಿನೀಯ ಪದರವು ಮಾಡುವ ಮುಖ್ಯ ಕೆಲಸ, ಸೋಂಕು ದೇಹಕ್ಕೆ ಸೋಂಕು ಬರದಂತೆ ನೈಸರ್ಗಿಕ ತಡೆಗೋಡೆಯಾಗಿ ಕೆಲಸಮಾಡುವುದು. ದೇಹದಲ್ಲಿ ನೀರಿನ್ನು ಉಳಿಸಲು ಇದು ಮುಖ್ಯ ಕಾರಣ ಮತ್ತು ಈ ಹೊರಚರ್ಮದ ಇತರ ಹಾನಿಕಾರಕ ರಾಸಾಯನಿಕಗಳನ್ನು ಮತ್ತು ರೋಗಕಾರಕಗಳ ಕ್ರಿಮಿಗಳನ್ನು ದೇಹದ ಒಳಗೆ ಬರದಂತೆ ತಡೆಯುವ ಹೊಣೆಯನ್ನೂ ಹೊತ್ತಿದೆ.[೧೨] [೧೩]

ಒಳಚರ್ಮ

ಒಳಚರ್ಮದಲ್ಲಿ ರಕ್ತ ಚಂಚಾರ (Blausen 0802 Skin DermalCirculation)
  • ಚರ್ಮದ ಒಳಪದರ ಚರ್ಮದ ಎಪಿತೀಲಿಯಲ್ ಅಂಗಾಂಶ ಒಳಗೊಂಡಿದೆ. ಅದು ಒತ್ತಡ ಮತ್ತು ಆಯಾಸ ರಕ್ಷಣೆಗೆ ದೇಹದಲ್ಲಿ ಇಟ್ಟ ಮೆತ್ತೆಗಳು. ಒಳಚರ್ಮವು ಹೊರಚರ್ಮದ (ಎಪಿಡರ್ಮಿಸ್) ಕೆಳಗೆ. ಬಿಗಿಯಾಗಿ ಒಂದು ತಳಪಾಯದ ಪದರದ (ಬೇಸ್ಮೆಂಟ್ ಮೆಂಬರೇನ್) ಮೂಲಕ ಬಿಗಿಯಾಗಿ ಅಂಟಿಕೊಂಡಿದೆ. ಇದು ಅನೇಕ ನರ ತುದಿಯ ಕುಡಿಗಳಿಂದ ಕೂಡಿದ್ದು ಸ್ಪರ್ಶ ಮತ್ತು ಶಾಖಗಳ ಅನುಭವಕೊಡಲು ಸಹಾಯಕವಾಗಿದೆ. . ಇದು ಕೂದಲು ಕಿರುಚೀಲಗಳನ್ನು, ಅಥವಾ ರೋಮದ ಗಡ್ಡೆಗಳನ್ನು, ಬೆವರು ಗ್ರಂಥಿಗಳನ್ನು, ಮೇದಸ್ಸಿನ ಗ್ರಂಥಿಗಳನ್ನು , ಅಪೊಕ್ರೈನ್ (ದುಗ್ಧರಸಗ್ರಂಥಿ) ಗ್ರಂಥಿಗಳು, ದುಗ್ಧರಸ ನಾಳಗಳು ಮತ್ತು ರಕ್ತನಾಳಗಳನ್ನು ಹೊಂದಿದೆ. ಒಳಚರ್ಮದ ರಕ್ತನಾಳಗಳು ತನ್ನ ಮೂಲಜೀವಕೋಶಗಳಿಂದ ಹೊರಚರ್ಮದ (ಎಪಿಡರ್ಮಿಸ್ ಸ್ಟ್ರಾಟಮ್) ಕೋಶಗಳಿಗೆ ಪೋಷಣೆಯನ್ನು ಕೊಡುತ್ತದೆ ಮತ್ತು ತನ್ನ ತ್ಯಾಜ್ಯ ನಿರ್ಮೂಲನೆ ಮಾಡಲು ಪ್ರೇಪಿಸುತ್ತದೆ.
  • ಒಳಚರ್ಮವನ್ನು ರಚನಾತ್ಮಕವಾಗಿ ಎರಡು ವಿಭಾಗವಾಗಿ ವಿಂಗಡಿಸಲಾಗಿದೆ: ಬಾಹ್ಯ ಪ್ರದೇಶದಲ್ಲಿ ಎಪಿಡರ್ಮಿಸ್‍ನ ಪಕ್ಕ ಹೊಂದಿಕೊಂಡಿರುವುದು, ಪ್ಯಾಪಿಲ್ಲರಿ ಭಾಗ ಮತ್ತು ಎರಡನೆಯದು ಆಳವಾದ ದಪ್ಪವಾಗಿರುವ ಪ್ರದೇಶ, (ಅನೇಕ ಲೋಮನಾಳಗಳಿಂದ ಕೂಡಿದ್ದು) ಸಂಕೀರ್ಣವಾಗಿರುವ ಪ್ರದೇಶವೆಂದು ಕರೆಯಲಾಗುತ್ತದೆ.

ಪ್ಯಾಪಿಲ್ಲರಿ ಪ್ರದೇಶ

  • ಪ್ಯಾಪಿಲ್ಲರಿ ಪ್ರದೇಶದಲ್ಲಿ ಸಡಿಲ ಸಂಯೋಜಕ (ಏರಿಯೊಲರ್ -ನಾರುಯುಕ್ತ ಅಂಗಾಂಶ) ಅಂಗಾಂಶದಿಂದ ಕೂಡಿದೆ. ಇದು ಹೊರಚರ್ಮದ (ಎಪಿಡರ್ಮಿಸ್) ಕಡೆಗೆ ವಿಸ್ತರಿಸಲು ಪಾಪಿಲ್ಲೆ ಎಂಬ ಅದರ ಸೂಕ್ಷ್ಮ ಬೆರಳಿನ ಬಗೆಯ ಸಂಯೋಯೋಜಕಗಙಳಿವೆ , ಅದರ ಸೂಕ್ಷ್ಮ ಬೆರಳಿನ ಬಗೆಯ ಲಕ್ಷಣಕ್ಕೆ ಪಾಪಿಲ್ಲೆ ಎಂದು ಹೆಸರಿಸಲಾಗಿದೆ. ಪಾಪಿಲ್ಲೆ ಚರ್ಮದ ಎರಡು ಪದರಗಳ ನಡುವೆ ಸಂಪರ್ಕ ಬಲಪಡಿಸುವ, ಎಪಿಡರ್ಮಿಸ್ ಜೊತೆ ಬಿಗಿಯಾದ ಒಂದು "ಬಂಧ" ವನ್ನು ಮೇಲ್ಮೈ ಗೆ ಒಳಚರ್ಮದಿಂದ ಒದಗಿಸುವುದು.
  • ಅಂಗೈ, ಬೆರಳುಗಳು, ಪಾದದ ಅಡಿಭಾಗ, ಮತ್ತು ಕಾಲ್ಬೆರಳುಗಳಿಗೆ ಪಾಪಿಲ್ಲೆಯು ಹೊರಚರ್ಮದ (ಎಪಿಡರ್ಮಿಸ್ ನ) ಒಳಗೆ ಚಾಚಿಕೊಂಡಿರುವ ಪಾಪಿಲ್ಲೆಯು ತನ್ನ ಪ್ರಭಾವದಿಂದ ಚರ್ಮದ ಮೇಲ್ಮೈ ನ ಬಾಹ್ಯರೇಖೆಗಳನ್ನು ರೂಪಿಸುತ್ತದೆ (ಬೆರಳಿನ ಗೆರೆ ಗುರುತು). ಗುರುತಿನ ಸಾಧನವಾಗಿ ಬಳಸಲು ಮಾಡುವ, ಈ ಬೆರಳ ಅಥವಾ ಹೆಜ್ಜೆಗುರುತುಗಳು ಆನುವಂಶಿಕವಾಗಿ ಮತ್ತು ಬಾಹ್ಯಪ್ರಭಾವದಿಂದ (ಎಪಿಜೆನೆಟಿಕಲಿ) ನಿರ್ಧರಿಸಿರುತ್ತದೆ. ಆದ್ದರಿಂದ ಇವು ಅನನ್ಯ ವ್ಯಕ್ತಿತ್ವ (ಹೋಲಿಕೆ ಇಲ್ಲದ ಗುರುತುಗಳು) ಹೊಂದಿವೆ : ಈ ಹೊರಚರ್ಮದ ಗೆರೆಗಳನ್ನು ಗುರುತಿನ ಮಾದರಿಗಳಾಗಿ (ಬೆರಳುಗುರುತು ನೋಡಿ) ಬಳಸಲು ಸಾಧ್ಯವಾಗಿದೆ. .

ರೆಟಿಕುಲಾರ್ ಪ್ರದೇಶ

ಚರ್ಮ: *ಮೇಲಿನ ಭಾಗ-ಹೊರಚರ್ಮ (Epidermis); *ಎರಡನೇ ಭಾಗ-ಒಳಚರ್ಮ (Dermis); *ಮೂರನೇ ಭಾಗ- ಚರ್ಮತಲ -ಕೆಳಚರ್ಮ:(Subcutis = hypodermis)
  • ರೆಟಿಕುಲರ್ ಎಂಬ ಸಂಕೀರ್ಣ ವಾಗಿರುವ ಚರ್ಮವು ಆಳ ಪ್ರದೇಶದಲ್ಲಿದೆ (ಪ್ಯಾಪಿಲ್ಲರಿ) ಮತ್ತು ಸಾಮಾನ್ಯವಾಗಿ ದಪ್ಪವಾಗಿರುತ್ತದೆ. ಇದು ದಟ್ಟ ಅನಿಯಮಿತ ( ಹೆಚ್ಚಿನ) ಸಂಯೋಜಕ ಅಂಗಾಂಶಗಳನ್ನು ಹೊಂದಿದೆ ಮತ್ತು ಇದು ಪೂರ್ತಿ ನೇಯ್ಗೆ ಯು ಸ್ಥಿತಿಸ್ಥಾಪಕ (ಹಿಂಜುವಿಕೆ) ಗುಣದ್ದು. ಇದ್ನು ಕೊಲಾಜೆನಸ್ ಸ್ಥಿತಿಸ್ಥಾಪಕ, ಮತ್ತು ರೆಟಿಕುಲಾರ್ ಪ್ರದೇಶ ನಾರು ತಂತುಗಳ (ಫೈಬರ್ ಗಳ) ದಟ್ಟ ಸಾಂದ್ರತೆಹೊಂದಿದ್ದು , ಅದಕ್ಕಾಗಿ ತನ್ನ ಹೆಸರನ್ನು ರೆಟಿಕುಲಾರ್ ಪ್ರದೇಶ ವೆಂದು ಪಡೆದಿದೆ. ಈ ಪ್ರೋಟೀನು ನಾರುಗಳು ಒಳಚರ್ಮಕ್ಕೆ ಶಕ್ತಿ, ವಿಸ್ತರಣಾ, ಮತ್ತು ಸ್ಥಿತಿಸ್ಥಾಪಕತ್ವದ, ಅದರ ಗುಣಗಳನ್ನು ನೀಡುತ್ತದೆ.
  • ಕೂದಲು, ಮೇದಸ್ಸಿನ ಗ್ರಂಥಿಗಳು, ಬೆವರು ಗ್ರಂಥಿಗಳು, ಗ್ರಾಹಕಗಳು, ಉಗುರುಗಳು ಮತ್ತು ರಕ್ತನಾಳಗಳ ಬೇರುಗಳು ಈ ಸಂಕೇರ್ಣವಾಗಿರುವ ಪ್ರದೇಶದಲ್ಲಿ ಇದೆ.
  • ಭೇರಿ ಶಾಯಿ (“ಟ್ಯಾಟೂ ಇಂಕ್” :Tattoo ink is held in the dermis.? ಬೆರಳುಗಳ ತುದಿಯ ಗೆರೆಗಳ ಮಧ್ಯದಲ್ಲಿಉವ ಚಿಕ್ಕ ಚಿತ್ರವಿರಬಹುದೇ?-ಭಾರತೀಯ ನಂಬುಗೆ ಪ್ರಕಾರ ಬೆರಳುಗಳ ತುದಿಯ ಗೆರೆಗಳ ಮಧ್ಯದಲ್ಲಿ ಶಂಖ, ಚಕ್ರ, ಗದೆ, ಮೂರು ಎಸಳುಗಳ ಪದ್ಮ ಇರುವುದು.) ಒಳಚರ್ಮದಲ್ಲಿ ಅಡಗಿರುತ್ತದೆ. ಗರ್ಭಧಾರಣೆಯ ಸ್ಟ್ರೆಚ್ ಗುರುತುಗಳು ಸಹ ಒಳಚರ್ಮದಲ್ಲಿ ನೆಲೆಗೊಂಡಿವೆ.(ನೋಡಿ: Reticular region)

ಚರ್ಮತಲ (Hypodermis)

  • ಚರ್ಮತಲ (ಕೆಳಚರ್ಮ -The hypodermis) ಚರ್ಮದ ಭಾಗವಲ್ಲ ಮತ್ತು ಇದು ಒಳಚರ್ಮದ ಕೆಳಗೆ ಇರುತ್ತದೆ. ಇದರ ಉದ್ದೇಶ, ಚರ್ಮಕ್ಕೆ ರಕ್ತನಾಳ ಹಾಗೂ ನರಗಳ ಸಂಬಂಧ ಕಲ್ಪಿಸುವುದು, ಹಾಗೂ ಆಧಾರವಾಗಿರುವ ಮೂಳೆ ಮತ್ತು ಸ್ನಾಯುಗಳಿಗೆ ಸಂಬಂಧ ಜೋಡಣೆ ಮಾಡುವುದು. ಇದು ಸಡಿಲವಾದ (ದರ್ಬಲ) ಬೆಸೆಯುವ ಅಂಗಾಂಶ ಹೊಂದಿದೆ. ಅವು ಕೊಬ್ಬುಳ್ಳ ಊತಕ ಅಂಗಾಂಶ ಮತ್ತು ಹಿಗ್ಗುವ (ಎಲಾಸ್ಟಿನ್) ಕೋಶಗಳನ್ನು ಒಳಗೊಂಡಿದೆ. ಇಲ್ಲಿ ಮುಖ್ಯ ಜೀವಕಣಗಳು, ನಾರು, ಮ್ಯಾಕ್ರೋಫೇಜಸ್ ಹಾಗೂ ಕೊಬ್ಬಿನಕಣಗಳು ಅಡಿಪೊಸೈಟ್ಸ್ ಇವೆ. (ಚರ್ಮತಲ ಶರೀರದ ಕೊಬ್ಬಿನಲ್ಲಿ 50%ನಷ್ಟು ಹೊಂದಿರುತ್ತದೆ) ಕೊಬ್ಬು ದೇಹಕ್ಕೆ ಮೆತ್ತೆಯ ಕವಚ (ಪ್ಯಾಡಿಂಗ್) ಮತ್ತು ರಕ್ಷಾಕವಚ (ನಿರೋಧಕ [insulation] -ಕವಚ) ಒದಗಿಸುವ ಕಾರ್ಯನಿರ್ವಹಿಸುತ್ತದೆ.

ಚರ್ಮದ ಬಣ್ಣ

  • ಮಾನವನ ಚರ್ಮವು ಕಪ್ಪಾದ ಕಂದು ಬಣ್ಣದಿಂದ ಗುಲಾಬಿ-ಬಿಳಿ ಬಣ್ಣಗಳ ವರೆಗೆ ಚರ್ಮದ ಬಣ್ಣದ ವಿವಿಧ ಬಗೆಗಳನ್ನು ಹೊಂದಿದೆ. . ಮಾನವನ ಚರ್ಮವು ಯಾವುದೇ ಏಕ ಸಸ್ತನಿ ವರ್ಗಗಳ ಬಣ್ಣಗಳಿಂತ ಹೆಚ್ಚಿನ ವೈವಿಧ್ಯತೆಯನ್ನು ತೋರಿಸುತ್ತದೆ ಮತ್ತು ವೈವಿಧ್ಯತೆ ನೈಸರ್ಗಿಕ ಆಯ್ಕೆಯ ಪರಿಣಾಮವಾಗಿದೆ. ಮಾನವರಲ್ಲಿ ಚರ್ಮದ ವರ್ಣದ್ರವ್ಯವು ಪ್ರಾಥಮಿಕವಾಗಿ ನೇರಳಾತೀತ ವಿಕಿರಣ (ಯುವಿಆರ್), ಜೀವರಾಸಾಯನಿಕ ಪರಿಣಾಮಗಳು ನಿಯಂತ್ರಿಸುವ ಪ್ರಮಾಣವನ್ನು ಚರ್ಮ ಸೂಕ್ಷ್ಮಗ್ರಾಹಿಯಾಗಿ ತನ್ನನ್ನು ನಿಯಂತ್ರಿಸಲು ಆದ ವಿಕಸನ ಕ್ರಿಯೆ.
  • ಬೇರೆ ಬೇರೆ ಮನುಷ್ಯರಲ್ಲಿ ನಿಜವಾದ ಚರ್ಮದ ಬಣ್ಣ, ಅನೇಕ ವಸ್ತುಗಳ ಪರಿಣಾಮ ಆದರೂ ಮಾನವನ ಚರ್ಮದ ಬಣ್ಣ ನಿರ್ಧರಿಸುವ ಒಂದು ಮುಖ್ಯ ವಸ್ತು “ಬಣ್ಣದ ಮೆಲನಿನ್” ಆಗಿದೆ. ಮೆಲನಿನ್ ಎಂಬ ವಸ್ತು ಚರ್ಮದಲ್ಲಿರುವ ಮೆಲನೋಸೈಟ್ ಎಂಬ ಜೀವಕೋಶಗಳಿಂದ ಉತ್ಪಾದಿಸಲ್ಪಟ್ಟವು ಮತ್ತು ಇದು ಕಪ್ಪು ಚರ್ಮವುಳ್ಳ ಮಾನವರ ಚರ್ಮದ ಬಣ್ಣದ ಮುಖ್ಯ ಅಂಶವಾಗಿದೆ. ತೆಳು ಚರ್ಮದ ಜನರ ಚರ್ಮದ ಬಣ್ಣ ಮುಖ್ಯವಾಗಿ ಒಳಚರ್ಮದ ಅಡಿಯಲ್ಲಿ ನೀಲಿ-ಬಿಳುಪು ಸಂಯೋಜಕ ಅಂಗಾಂಶ ಮತ್ತು ಒಳಚರ್ಮದ ರಕ್ತನಾಳಗಳಲ್ಲಿ ಪರಿಚಲನೆಯಲ್ಲಿರುವ ಹಿಮೋಗ್ಲೋಬಿನ್ ನಿರ್ಧರಿಸುತ್ತದೆ. ಚರ್ಮದ ಕೆಳಗಿರುವ ಕೆಂಪು ಬಣ್ಣ ವಿಶೇಷವಾಗಿ ಎದ್ದು ಕಾಣುತ್ತದೆ. ದೈಹಿಕ ವ್ಯಾಯಾಮ ಪರಿಣಾಮವಾಗಿ ಅಥವಾ ನರಮಂಡಲದ ಉದ್ದೀಪನದಿಂದ (ಕೋಪ, ಭಯ ಗಳಲ್ಲಿ) ಅಪಧಮನಿಕೆಗಳು ಹಿಗ್ಗಿದಾಗ, ಮುಖದಲ್ಲಿ ಹೆಚ್ಚು ಕಾಣಿಸುತ್ತದೆ.

ಐದು ವಿವಿಧ ವರ್ಣದ್ರವ್ಯ ಕಣಗಳು

  • ಚರ್ಮದ ಬಣ್ಣ ನಿರ್ಧರಿಸಲು ಕನಿಷ್ಠ ಐದು ವಿವಿಧ ವರ್ಣದ್ರವ್ಯ ಕಣಗಳು ಇವೆ. ಈ ವರ್ಣದ್ರವ್ಯಗಳನ್ನು ವಿವಿಧ ಹಂತಗಳಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಇರುತ್ತವೆ.
1.ಮೆಲನಿನ್: ಇದು ಹೊರಚರ್ಮದ ತಳ ಪದರದಲ್ಲಿ ಇರುವುದು, ಅದರ ಬಣ್ಣ ಕಂದು (ಕಂದು ಕೆಂಪು) (ಬ್ರೌನ್).
2.ಕೆರೊಟಿನ್: ಇದು ಮೆಲನಿನ್ ನ್ನು ಹೋಲುತ್ತದೆ; ಅದು ಹೊರಚರ್ಮದ (ಎಪಿಡರ್ಮಿಸ್) ಉದ್ದಕ್ಕೂ ವಿಸೃತವಾಗಿ ಇರುತ್ತದೆ.
3.ಕ್ಯಾರೋಟಿನ್: ಇದರ ಬಣ್ಣವು ಕಿತ್ತಳೆ ಹಳದಿ ಬಣ್ಣ. ಇದು ಒಳಚರ್ಮದ ಪದರಿನಲ್ಲಿ ಮತ್ತು ಬಾಹ್ಯ ತಂತುಕೋಶಗಳಲ್ಲಿ ಕೊಬ್ಬಿನ ಜೀವಕೋಶಗಳಲ್ಲಿ ಇರುತ್ತದೆ.
4.ಹಿಮೋಗ್ಲೋಬಿನ್ :ಇದು ರಕ್ತದಲ್ಲಿ ಇರುವುದು ಮತ್ತು ಚರ್ಮದ ವರ್ಣದ್ರವ್ಯ ಅಲ್ಲ; ಆದರೆ ಅದು ಚರ್ಮಕ್ಕೆ ನೇರಳೆ ಬಣ್ಣ ನೀಡುತ್ತದೆ.
5.ಆಕ್ಸಿ ಹಿಮೋಗ್ಲೋಬಿನ್: ಇದು ರಕ್ತದಲ್ಲಿ ಇರುವುದು ಮತ್ತು ಚರ್ಮದ ವರ್ಣದ್ರವ್ಯ ಅಲ್ಲ. ಕೆಂಪು ಬಣ್ಣವನ್ನು ನೀಡುತ್ತದೆ.

[೧೪][೧೫][೧೬]

ಒಂದೇ ಜನಾಂಗದ ಗಂಡು - ಹೆಣ್ಣಿನ ಚರ್ಮದಲ್ಲಿ ಬಣ್ಣದ ಬೇಧ

ಒಂದೇ ಬಗೆಯ ಜನರಲ್ಲಿ ಗಮನಿಸಲಾಗಿರುವ ವಿಷಯ, ಇದು ಮಾನವರಲ್ಲಿ ವಯಸ್ಕ ಹೆಂಗಸರಲ್ಲಿ ಗಣನೀಯವಾಗಿ ಗಂಡಿಗಿಂತ ಚರ್ಮದ ವರ್ಣದ್ರವ್ಯವು ತೆಳುವಾಗಿ ಹರಡಿದೆ; ಗರ್ಭಧಾರಣೆ ಸಮಯದಲ್ಲಿ ಮತ್ತು ಹಾಲುಣಿಸುವ ಹೆಣ್ಣಿಗೆ ಹೆಚ್ಚು ಕ್ಯಾಲ್ಸಿಯಂ ಅಗತ್ಯ. ಅದಕ್ಕಾಗಿ ತನಗೆ ಅಗತ್ಯವಾದ ಹೆಚ್ಚು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡುವ ಸೂರ್ಯನ ಬಿಸಿಲಿನಿಂದ ಸಂಯೋಜಿತ ಗೊಂಳ್ಳುವ ಡಿ ಜೀವಸತ್ವ ಪಡೆಯಲು ಈ ಕ್ರಮ ಅಗತ್ಯವಿದೆ. ಈ ಕಾರಣಕ್ಕಾಗಿ ಹೆಣ್ಣು ತನ್ನ ದೇಹವು ಹೆಚ್ಚು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯವಾಗುವ ಸಲುವಾಗಿ ಚರ್ಮದಲ್ಲಿ ವರ್ಣದ್ರವ್ಯವು ತೆಳುವಾಗಿ ಹುಟ್ಟಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಇದು ಪ್ರಕೃತಿಯಲ್ಲಿ ಜೀವಿಗಳ ವಿಕಸನ ಕಾರ್ಯದ ಕ್ರಮವಿರಬಹುದು. [೧೭]

ವಯಸ್ಸಾದ ಚರ್ಮ

  • ಚರ್ಮ ವಯಸ್ಸಾದಂತೆ, ತೆಳುವಾಗುವುದು ಮತ್ತು ಸುಲಭವಾಗಿ ಹಾನಿ ಆಗುತ್ತದೆ. ಇದಕ್ಕೆ ಕಾರಣ ಮನುಷ್ಯನಿಗೆ ವಯಸ್ಸಾದಂತೆ ಸ್ವತಃ ಸರಿಪಡಿಸಲು ತೀವ್ರಗೊಳಿಸುವ ಚರ್ಮದ ಕಡಿಮೆ ಸಾಮರ್ಥ್ಯ.
  • ಇತರೆ ವಿಷಯಗಳ ನಡುವೆ, ಚರ್ಮ ವಯಸ್ಸಾದಂತೆ ಪರಿಮಾಣ ಕಡಿಮೆಯಾಗುವುದು (ವಿಸ್ತಾರದಲ್ಲಿ ಕಡಿಮೆ –ಕುಗ್ಗುವಿಕೆ) ಮತ್ತು ಸ್ಥಿತಿಸ್ಥಾಪಕತ್ವ ಇಳಿಕೆ ಗಮನಾರ್ಹವಾಗಿ ಆಗುವುದು. ಚರ್ಮಕ್ಕೆ ವಯಸ್ಸಾದಂತೆ ಹೀಗಾಗಲು ಅನೇಕ ಆಂತರಿಕ ಮತ್ತು ಬಾಹ್ಯ ಕಾರಣಗಳಿವೆ. ಉದಾಹರಣೆಗೆ, ವಯಸ್ಸಾದ ಚರ್ಮದಲ್ಲಿ ರಕ್ತದ ಹರಿವು ಕಡಿಮೆಯಾಗುವುದು ಮತ್ತು ಚರ್ಮವು ಗ್ರಂಥಿಗಳ ಕಡಿಮೆ ಚಟುವಟಿಕೆಯ ಪರಿಣಾಮದ ಫಲವಾಗಿ ಈ ದುರ್ಬಲತೆ ಪಡೆಯುತ್ತದೆ. ಹೀಗಾಗಿ ಚರ್ಮಕ್ಕೆ ತೀವ್ರ ಘಾತವಾದಲ್ಲಿ (ತೀವ್ರ ಬಿಸಿಲಿನ ಝಳದ ಸುಡುವಿಕೆ) ಚರ್ಮದ ಕ್ಯಾನ್ಸರ್ ಆಗುವ ಸಂಭವವೂ ಇದೆ.

ಮಾನವ ಚರ್ಮದ ಮೇಲೆ ಜೀವ ಜಾಲ

ಮಾನವ ಚರ್ಮದಮೇಲೆ ಸೂಕ್ಷ್ಮಾಣು ಜೀವಜಾಲ::ಚರ್ಮದ 20 ಪ್ರದಶಗಳಲ್ಲಿ ಗುರುತಿಸಿರುವುದು. (Skin Microbiome 2016 9-300)
  • ಮಾನವ ಚರ್ಮವು ಸೂಕ್ಷ್ಮಜೀವಿಗಳ ಶ್ರೀಮಂತ ಪರಿಸರ ಅಥವಾ ತೋಟ. 19 ಬ್ಯಾಕ್ಟೀರಿಯಾದ ವರ್ಗಗಳಲ್ಲಿ (ಫೈಲ) ಸುಮಾರು 1000 ಜಾತಿಯ ಬ್ಯಾಕ್ಟೀರಿಯಾ ಗಳು ಕಂಡುಬಂದಿವೆ. ಆಕ್ಟಿನೊ ಬ್ಯಾಕ್ಟೀರಿಯಾ (51.8%), ಫರ್ಮಿಕ್ಯೂಟ್ಸ್ (24.4%), ಪ್ರೊಟೊ ಬ್ಯಾಕ್ಟೀರಿಯಾ (16.5%), ಮತ್ತು ಬ್ಯಾಕ್ಟೀರೊಯಿಡೇಟ್ಸ್ (6.3%): ಇವುಗಳಲ್ಲಿ ಕೇವಲ ನಾಲ್ಕು ಫೈಲ ಹೆಚ್ಚು ಇರುವುದು ಕಂಡು ಬರುತ್ತವೆ. ಪ್ರೊಪಿಯೊನ್ ಬ್ಯಾಕ್ಟೀರಿಯಾ ಮತ್ತು ಸ್ಟ್ಯಾಫಿಲೊಕೊಸ್ಸಿ ಜಾತಿಯವು ಮುಖ್ಯ ಜಾತಿಗಳು; ಅವು ಚರ್ಮದ ಜಿಡ್ಡಾದ ಪ್ರದೇಶಗಳಲ್ಲಿ ಹೆಚ್ಚು. ಚರ್ಮದಲ್ಲಿ ಮೂರು ಮುಖ್ಯ ಪರಿಸರಗಳಿವೆ. ತೇವ ಪ್ರದೇಶ, ಒಣಪ್ರದೇಶ, ಮತ್ತು ಜಿಡ್ಡಿನ (ಮೇದಸ್ಸಿನ) ಪ್ರದೇಶ. ಕೊರೈನೆ ಬ್ಯಾಕ್ಟೀರಿಯಾ ಜೊತೆ ಸ್ಟ್ಯಾಫಿಲೊಕೊಸ್ಸಿ ಬ್ಯಾಕ್ಟೀರಿಯಾ ಒಟ್ಟಾಗಿ ದೇಹದ ಒಣ ಪ್ರದೇಶಗಳಲ್ಲಿ ಕಂಡುಬರುತ್ತವೆ. ಜಾತಿಗಳ ಮಿಶ್ರಣವಿದೆ ಆದರೆ ಫ್ಲೇವೊ ಬ್ಯಾಕ್ಟೀರಿಯಾ ಮತ್ತು ಬಿ-ಪ್ರೊಟೊ ಬ್ಯಾಕ್ಟೀರಿಯಾ ಪ್ರಾಬಲ್ಯವಿದೆ.
ಸ್ಕ್ಯಾನ್ ಮಾಡಿದಾಗ ಮಾನವ ಚರ್ಮದ ಮೇಲೆ ಕಂಡ ಸೂಕ್ಷ್ಮ ಅಣುಜೀವಿ : en:Scanning electron microscope image of en:Staphylococcus epidermidis one of roughly a thousand en:bacteria species present on human en:skin. Though usually not en:pathogenic, it can cause en:skin infections and even life-threatening illnesses in those that are en:immunocompromised.

ತೇವ ಸ್ಥಳಗಳಲ್ಲಿ ಪ್ರಾಬಲ್ಯ

  • ಪರಿಸರಕ್ಕೆ ಅನುಗುಣವಾಗಿ , ಜಿಡ್ಡಿನ ಅಥವಾ ಮೇದಸ್ಸಿನ (ಸೆಬಾಸಿಯಸ್) ಪ್ರದೇಶಗಳಲ್ಲಿ ಮತ್ತು ಒಣ ಪ್ರದೇಶಕ್ಕಿಂತ ತೇವ ವಾದ್ದರಿಂದ ಈ ಸೂಕ್ಷ್ಮ ಜೀವಿಗಳ ಶ್ರೀಮಂತ (ಹೆಚ್ಚಿನ)ಪ್ರದೇಶ. ಬೇರೆ ಬೇರೆ ಜಾತಿಯ ಜನರ ನಡುವೆ ಕನಿಷ್ಠ ಹೋಲಿಕೆ (ಹೋಲಿಕೆ ಇಲ್ಲದಿರುವುದು) ಇರುವುದು, ಬೆರಳುಗಳ ನಡುವೆ ಖಾಲಿ ಪ್ರದೇಶಗಳಲ್ಲಿ, ಕಾಲ್ಬೆರಳುಗಳು, ಕಂಕುಳುಗಳಲ್ಲಿ ಮತ್ತು ಹೊಕ್ಕುಳಬಳ್ಳಿಯ ಕುಳಿಯಲ್ಲಿ. ಜನ - ಜನರಲ್ಲಿ ಅತಿ ಹೆಚ್ಚಿ ನ ಹೋಲಿಕೆ ಇರುವ ಜೀವಿಗಳು, ಮೂಗಿನ ಹೊಳ್ಳೆ ಪಕ್ಕದಲ್ಲಿ ;, ಮೂಗಿನ ಹೊಳ್ಳೆಗಳು (ಮೂಗಿನ ಹೊಳ್ಳೆ ಒಳಗೆ), ಮತ್ತು ಬೆನ್ನು ಪ್ರದೇಶದಲ್ಲಿ .
  • ಮಾನವ ಚರ್ಮದ ಅತಿಸೂಕ್ಷ್ಮ ಬಯೊಮ್ (ಜೀವಿಗಳ) ಮೇಲೆ, ಮಾನವ ಚರ್ಮದ ಸಂಶೋಧಕರು ಅದರ ವೈವಿಧ್ಯತೆ ಮೇಲೆ ಪ್ರತಿಕ್ರಿಯಿಸುತ್ತಾ "ಕೂದಲುಳ್ಳ, ತೇವದಿಂದ ಕೂಡಿದ ಕಂಕುಳಿನ ಪ್ರದೇಶದಲ್ಲಿರುವ ಜೀವಾಣುಗಳ ಸಮೂಹ, ಸ್ವಲ್ಪ ದೂರದ ನಯವಾದ ಒಣ ಮುಂದೋಳುಗಳಲ್ಲಿ ಕಾಣದು. ಈ ಎರಡು ಪ್ರದೇಶದ ಪರಿಸರ ಮಳೆಕಾಡುಗಳು ಮತ್ತು ಮರುಭೂಮಿಗಳಿಗೆ ಇರುವ ಹೋಲಿಕೆಯಂತಿವೆ ಎಂದಿದ್ದಾರೆ.
  • ಎನ್ಐಎಚ್ ಮಾನವ ಚರ್ಮದ ಮೇಲಿನ ಸೂಕ್ಷ್ಮ ಅಣುಜೀವಿಗಳ ವಿಷಯ ನಿರೂಪಿಸಲು, “ಮಾನವನ ಅತಿಸೂಕ್ಷ್ಮ ಬಯೊಮ್ ಯೋಜನೆ” ಪ್ರಾರಂಭಿಸಿದೆ ಈ ಯೋಜನೆ ಚರ್ಮ ಮತ್ತು ಆರೋಗ್ಯ ಮತ್ತು ರೋಗಗಳಲ್ಲಿ ಈ ಅತಿಸೂಕ್ಷ್ಮ ಜೀವಿಗಳ (ಬಯೊಮ್) ಪಾತ್ರವನ್ನು ನಿರೂಪಿಸುವುದಾಗಿದೆ .
  • ಸ್ಟ್ಯಾಫಿಲೋಕೊಕಸ್ ಎಪಿಡರ್ಮಿಡಿಸ್ ರೀತಿಯ ಸೂಕ್ಷ್ಮಜೀವಿಗಳು ಚರ್ಮದ ಮೇಲ್ಮೈ ಯನ್ನು ವಸಾಹತುವನ್ನಾಗಿ ಮಾಡಿಕೊಂಡಿವೆ. ಚರ್ಮದ ಮೇಲಿ ಈ ಸಸ್ಯ ಜೀವಿ ಸಾಂದ್ರತೆ ಚರ್ಮದ ಪ್ರದೇಶವನ್ನು ಅವಲಂಬಿಸಿರುತ್ತದೆ. ಸೂಕ್ಷ್ಮ ಜೀವಿಗಳಿಲ್ಲದ ಶುದ್ಧ ಪ್ರದೇಶದಲ್ಲಿ, ಚರ್ಮದ ಮೇಲ್ಮೈ ಕೂದಲು ಕುಳಿ, ಕರುಳಿನತುದಿ-ಗುದದ್ವಾರ ಮತ್ತು ಮೂತ್ರಾಂಗ ರಂಧ್ರಗಳ ಆಳವಾದ ಪ್ರದೇಶಗಳಲ್ಲಿ ವಾಸಿಸುವ ಬ್ಯಾಕ್ಟೀರಿಯಗಳು ಖಾಲಿಯಿದ್ದ ಪ್ರದೇಶಕ್ಕೆ ಬಂದು ತಳವೂರುತ್ತವೆ.
  • ಹೆಚ್ಚು ಸ್ಪರ್ಶವಿಲ್ಲದ ತೇವವಿರಬಹುದಾದ ಹೊಕ್ಕಳ ಕುಳಿಯಲ್ಲಿ ಈ ಸೂಕ್ಷ್ಮಜೀವಿಗಳ ಹೆಚ್ಚಿನ ದಟ್ಟಣೆ ಕಂಡು ಬಂದಿದೆ.[೧೮]

ಶಿಲೀಂಧ್ರಗಳು

  • ರಾಷ್ಟ್ರೀಯ ಮಾನವ ಜಿನೊಮ್ ಸಂಶೋಧನಾ ಸಂಸ್ಥೆ ಬೆಥೆಸ್ಡಾ, ಮೆರಿಲ್ಯಾಂಡ್, ಒಂದು ಅಧ್ಯಯನ ಮಾಡಿ, ದೇಹದ ಮೇಲೆ 14 ವಿವಿಧ ಸ್ಥಳಗಳಲ್ಲಿ, ಮಾನವ ಚರ್ಮದ ಶಿಲೀಂಧ್ರಗಳ ಡಿಎನ್ಎ ಸಂಶೋಧನೆ ಮಾಡಿದೆ. ಕಿವಿ ಕಾಲುವೆ, ಹುಬ್ಬುಗಳ ನಡುವೆ, ತಲೆಯ ಹಿಭಾಗ, ಕಿವಿ ಹಿಂದೆ, ಹಿಮ್ಮಡಿ, ಕಾಲ್ಬೆರಳುಗಳ ಮಧ್ಯ, ಕಾಲ್ಬೆರಳುಗಳ ಉಗುರುಗಳಲ್ಲಿ, ಮುಂಗೈ, ಬೆನ್ನು, ತೊಡೆಸಂದು, ಮೂಗಿನ ಹೊಳ್ಳೆಗಳಲ್ಲಿ, ಎದೆ, ತಾಳೆ ನಡುವೆ ಮೊಣಕೈ ಕೊಕ್ಕೆಗಳಲ್ಲಿ ಶಿಲೀಂಧ್ರಗಳು ಈ ಸ್ಥಳಗಳಲ್ಲಿ ಇದ್ದವು. ಅಧ್ಯಯನದಲ್ಲಿ ಕಂಡಿರುವಂತೆ, ಶಿಲೀಂಧ್ರಗಳ ಅತಿ ಸಮೃದ್ಧ ಆವಾಸಸ್ಥಾನ ಹಿಮ್ಮಡಿ; ಇಲ್ಲಿ 80 ಜಾತಿಯ ಶಿಲೀಂಧ್ರಗಳು ಇದ್ದವು, ದೇಹದ ಆದ್ಯಂತ ಶಿಲೀಂಧ್ರಗಳ ಒಂದು ದೊಡ್ಡ ವೈವಿಧ್ಯತೆಯನ್ನು ತೋರಿದವು. ಇದಕ್ಕೆ ವಿರುದ್ಧವಾಗಿ, ಕಾಲ್ಬೆರಳುಗಳನ್ನು ನಡುವೆ 40,ಮತ್ತು ಕಾಲ್ಬೆರಳ ಉಗುರು ಸಂದಿಯಲ್ಲಿ ಸುಮಾರು 60 ಜಾತಿಗಳು ಇವೆ.[೧೯][೨೦]

ಈ ಎಲ್ಲಾ ಜೀವಿಗಳ ಒಟ್ಟು ಗಾತ್ರ ಒಂದು ಬಟಾಣಿಯ ಪ್ರಮಾಣ

  • ಚರ್ಮವು ಯೀಸ್ಟ್‍ಗಳು (ಶಿಲೀಂದ್ರಗಳು -ಅಣುಬೆ ಜಾತಿಯವು) ಬ್ಯಾಕ್ಟೀರಿಯಾ, ಸೇರಿದಂತೆ ಸೂಕ್ಷ್ಮಜೀವಿಗಳುಳ್ಳ ತನ್ನದೇ ಆದ ಪರಿಸರವನ್ನು ಹೊಂದಿದೆ ಮತ್ತು ಅದಕ್ಕೆ ಬೆಂಬಲಿಸುತ್ತದೆ. ಯಾವುದೇ ಶುದ್ಧೀಕರಣದ ಮೂಲಕ ಇವನ್ನು ತೆಗೆದುಹಾಕಲು ಸಾಧ್ಯವಿಲ್ಲ. ಮಾನವ ಚರ್ಮದ ಒಂದು ಚದರ ಇಂಚು (6.5 ಚದರ ಸೆಂ) ಮೇಲೆ ಸರಾಸರಿ 50 ದಶಲಕ್ಷ (500,000,000) ಸಂಖ್ಯೆಯ ಮೇಲೆ ವಿವಿಧ ಬಗೆಯ ಬ್ಯಾಕ್ಟೀರಿಯಾಗಳು ಇವೆ ಎಂದು ಅಂದಾಜು ಮಾಡಲಾಗಿದೆ. ಈ ಚಿತ್ರದಲ್ಲಿ ಮಾನವ ಚರ್ಮದ ಸರಾಸರಿ ಅಂದಾಜು 20 ಚದರ ಅಡಿ ಇದೆ ಎಂದು ಭಾವಸಲಾಗಿದೆ. (1.9 ಚ.ಮೀ. / 2 ಚ.ಮೀ) (ಇದು ವ್ಯಕ್ತಿಗೆ ವ್ಯಕ್ತಿಗೆ ಬದಲಾಗುತ್ತದೆ). ಆದರೂ ಜಿಡ್ಡು ಮೇಲ್ಮೈಹೊಂದಿದ, ಮುಖದ ಪ್ರತಿ ಚದರ ಇಂಚಿನಷ್ಟು (6.5 ಚ.ಸೆ.ಮೀ.) ಸ್ಥಳದಲ್ಲಿ 500 ದಶಲಕ್ಷ ಬ್ಯಾಕ್ಟೀರಿಯಾ ಇವೆ ಎಂದು ಅಂದಾಜಿಲಾಗಿದೆ. (20ಚ.ಅಡಿ x 500,000,000 = 10,000,000,000 ಎಂದರೆ ಒಂದು ಸಾವಿರ ಕೋಟಿ ಸಂಖ್ಯೆಯ ಜೀವಜಾಲವಿದೆ) ಈ ಹೆಚ್ಚಿನ ಪ್ರಮಾಣದ ಹೊರತಾಗಿಯೂ, ಚರ್ಮದ ಮೇಲ್ಮೈ ಮೇಲೆ ಕಾಣಬಹುದಾದ ಎಲ್ಲಾ ಬ್ಯಾಕ್ಟೀರಿಯಾಗಳ ಒಟ್ಟು ಸೇರಿದ ಪರಿಮಾಣ (ಪ್ರಮಾಣ) ಒಂದು ಬಟಾಣಿ ಕಾಳಿನ ಗಾತ್ರದಷ್ಟು ಮಾತ್ರಾ ಇರುವುದು. [೨೧]

ಸಾರಾಂಶ

ಮಾನವ ಚರ್ಮದ ವಿಸ್ತಾರ
  • ಸಾಮಾನ್ಯ ಗಾತ್ರದ ಮನುಷ್ಯನು 1. 6 ರಿಂದ 1. 8 ಚ.ಮೀ.ಗಳಷ್ಟು (ಸುಮಾರು 16 ರಿಂದ 20 ಚ,ಅಡಿ. = 4 ಅಡಿ ಅಗಲ 5 ಅಡಿ ಉದ್ದದ ಪ್ರದೇಶ) ಚರ್ಮವನ್ನು ಹೊದಿರುತ್ತಾನೆ
  • ಸತತ ಘರ್ಷಣೆಗೆ ಒಳಗಾಗುವ ಅಂಗೈ ಅಂಗಾಲು ಚರ್ಮ ದಪ್ಪವಾಗಿರುತ್ತದೆ.
ರೋಮದ ಆಯುಷ್ಯ
  • ಒಂದು ರೋಮವು 4 ವರ್ಷಗಳಷ್ಟು ಕಾಲ ಬೆಳೆಯತ್ತಾ ಇರುತ್ತದೆ. ಅದು ಉದುರಿದ ನಂತರ ಹೊಸ ರೋಮ ಉತ್ಪತ್ತಿಯಾಗುತ್ತದೆ.
  • ಚಳಿಯಾದಗ ನಡುಕ ಉಂಟಾಗುವುದು ಒಂದು ಪರಾವರ್ತಿತ ಪ್ರತಿಕ್ರಿಯೆ (ನಮ್ಮ ಅಪೇಕ್ಷೆ ಇಲ್ಲದೆ ತಾನಾಗಿ ನೆಡೆಯುವ ಕ್ರಿಯೆ). ಇದರಿಂದ ಸ್ನಾಯುಗಳಲ್ಲ ಚಲನೆಯುಂಟಾಗಿ ಹೆಚ್ಚು ಶಾಖ ಉತ್ಪತ್ತಿಯಾಗುವುದು.
.
  • ಚರ್ಮವು ಮುಖ್ಯವಾಗಿ ಎರಡು ಪದರಗಳನ್ನು ಹೊಂದಿದೆ. ಅವು ಹೊರಪದರ, ಮತ್ತು ಒಳಪದರ. ಹೊರಚರ್ಮವು ಚರ್ಮದ ಅತ್ಯಂತ ಹೊರ ಪದರ. ಸತ್ತ ಜೀವಕೋಶಗಳಿಂದ ಆಗಿದೆ. ಈ ಹೊರಪದರದ ಕೆಳಗಿನ ಒಳಪದರವು ಬೆಳೆಯುವ ಪದರ, ಅದಕ್ಕೆ ಮ್ಯಾಲ್ಫೀಜಿಯನ್ ಎನ್ನುತ್ತಾರೆ. ಈ ಬೆಳೆಯುವ ಪದರವು ಮಲಾನಿನ್ ಎಂಬ ಬಣ್ಣದ ವಸ್ತುವನ್ನು ತಯಾರಿಸುತ್ತದೆ. ಮತ್ತು ಇದು ಸೂರ್ಯನ ನೀಲಾತೀತ ಕಿರಣಗಳಿಂದೊಲಗಿನ ಅಂಗಾಂಶಗಳನ್ನು ರಕ್ಷಿಸುತ್ತದೆ.
  • ಒಳಚರ್ಮ: ಒಳಚರ್ಮವು ಸಂಯೋಜಕ ಅಂಗಾಂಶದಿಂದ ಆಗಿದೆ. ಒಳಚರ್ಮದಲ್ಲಿ ರಕ್ತನಾಳಗಳು, ಸ್ವೇದ ಅಥವಾ ಬೆವರಿನ ಗ್ರಂಥಿಗಳು, ರೋಮಕೂಪಗಳು, ತೈಲಗ್ರಂಥಿಗಳು, ಮತ್ತು ಮೇಧಸ್ಸಿನ ಕಣಗಳು ಇವೆ. ರಕ್ತನಾಳಗಳು ಚರ್ಮಕ್ಕೆ ಬೇಕಾದ ಆಹಾರ ಆಮ್ಲಜನಕವನ್ನು ಒದಗಿಸುತ್ತವೆ. ಸ್ವೇದಗ್ರಂಥಿಗಳಿಗೆ ರಕ್ತವನ್ನು ಒದಗಿಸಿದಾಗ ಯೂರಿಯಾ ಮತ್ತು ಇತರೆ ತ್ಯಾಜ್ಯಗಳನ್ನು ಹೀರಿಕೊಂಡು ಅವನ್ನು ಹೊರಹಾಕುವಂತೆ ಮಾಡುತ್ತವೆ.
  • ಬೆವರು:ಬೆವರನ್ನು ಉತ್ಪತ್ತಿ ಮಾಡುವ ಸ್ವೇದಗ್ರಂಥಿಗಳು ನುಲುಚಿಕೊಂಡಿರುವ ನಾಳಗಳು. ಇದರ ನಾಳಗಳು ಸ್ವೇದರಂದ್ರದ ಮೂಲಕ ಚರ್ಮದ ಹೊರಗೆ ತೆರೆದುಕೊಳ್ಳುತ್ತದೆ. ಈ ಗ್ರಂಥಿಗಳ ನಾಳಗಳ ಸುತ್ತಲೂ ಇರುವ ಶ್ರಾವಕ ಕೋಶಗಳು ಲೋಮನಾಳ ರಕ್ತದಿಂದ ಯೂರಿಕ್ ಆಮ್ಲ ಮತ್ತು ಉಪ್ಪು ಅಥವಾ ಸೋಡಿಯಂ ಕ್ಲೋರೈಡ್ ನಂತಹ ಲವಣಗಳನ್ನು ಹೀರಿಕೊಂಡು ಹೊರಹಾಕುತ್ತದೆ.
ಮನುಷ್ಯನ ನೀರಿನ ಅಗತ್ಯ
  • ಆರೋಗ್ಯವಂತ ದೇಹದಿಂದ ನೀರು ಹೊರಹಾಕುವಿಕೆ ನಾಲ್ಕು ವಿಧದಿಂದ ನಡೆಉವುದು. ದಿನಕ್ಕೆ:
  • 1. ಉಸಿರಾಟದಲ್ಲಿ ಹೊರಬಿಡುವ ಗಾಳಿ (ನಿಶ್ವಾಸ) 350 ಗ್ರಾಂ.
  • 2. ಮಲದ ಮೂಲಕ 150 ಗ್ರಾಂ
  • 3.ಬೆವರಿನ ಮೂಲಕ 500 ಗ್ರಾಂ.
  • 4. ಮೂತ್ರದಿಂದ 1800 ಗ್ರಾಂ
  • *ಒಟ್ಟು ಎಲ್ಲಾ ಸೇರಿ ಒಂದು ದಿನದಲ್ಲಿ 4 ಲೀಟರ್ ನೀರು ಹೊರ ಹೋಗುವುದು. ಆದ್ದರಿಂದ ಆರೋಗ್ಯವಾಗಿರಲು ಆಹಾರ ಪಾನೀಯ ಗಳಿಂದ ಒಟ್ಟು 4 ಲೀಟರಿನಷ್ಟು ನೀರನ್ನು ತೆಗೆದುಕೊಳ್ಳಬೇಕು.
.
  • ರೋಮ:ರೋಮಕೂಪವು ಹೊರಚರ್ಮದ ಬೆಳೆಯುವ ಪದರದ ಕುಣಿಯಲ್ಲಿ ಇರುತ್ತದೆ. ಈ ಪದರದ ಕೋಶಗಳು ವಿಭಜನೆಹೊಂದಿ ರೋಮವನ್ನು ಉತ್ಪತ್ತಿ ಮಾಡುತ್ತವೆ. ಕೆರಾಟನ್ ಎಂಬ ಗಡುಸಾದ ಪ್ರೊಟೀನ್‍ನೊಂದಿಗೆ ಸೇರಿ ನಿರ್ಜೀವ ರೊಮವಾಗುತ್ತದೆ. ರೋಮಕೂಪದ ಬುಡದಲ್ಲಿ ಹೊಸಕೋಶಗಳು ನಿರಂತರವಾಗಿ ಉತ್ಪತಿಯಾಗಿ ರೋಮಕ್ಕೆ ಸೇರುವುದರಿಂದ ಅದು ಬೆಳೆಯುತ್ತದೆ. ರೋಮಗಳು ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ.
  • ದೇಹದ ಉಷ್ಣಾಂಶ (36.5–37.5°C (97.7–99.5 °F): ಚರ್ಮದ ತಳದಲ್ಲಿರುವ ತೈಲಗ್ರಂಥಿಗಳು ರೋಮಕೂಪಕ್ಕೆ ತೆರೆಯುತ್ತವೆ. ಇವು ಶ್ರವಿಸುವ ತೈಲವು ಚರ್ಮ ಮತ್ತು ರೋಮಗಳನ್ನು ಮೃದುವಾಗಿಡುತ್ತವೆ. ಅಲ್ಲದೆ ಕೆಲವು ಅಣುಜೀವಿಗಳಿಗೆ ಕ್ರಮಿನಾಸಕವಾಗಿ ಕೆಲಸ ಮಾಡುವುದು. ಅದೇ ರೀತಿ ಒಳಚರ್ಮದಲ್ಲಿರುವ ಮೇದಸ್ಸಿನ ಕಣಗಳು ದೇಹದ ಉಷ್ಣಾಂಶವನ್ನು ನಿಯಂತ್ರಿಸುವುದು ಮತ್ತು ಚರ್ಮಕೆ ಮೃದುತ್ವ ಮತ್ತು ಕಾಂತಿಯನ್ನು ಕೊಡುವುದು. ದೇಹದ ಹೆಚ್ಚಾದ ಉಷ್ಣಾಂಶ ಬೆವರಿನ ಮೂಲಕವೂ, ತಂಗಾಳಿಯ ಮೂಲಕವೂ ಚರ್ಮದಿಂದ ಹೊರಹೋಗುವುದು.
  • ರಕ್ತದಲ್ಲಿನ ನೀರಿನ ಪ್ರಮಾಣ: ಚರ್ಮ ಮತ್ತು ಮೂತ್ರಜನಕಾಂಗ ಎರಡೂ ದೇಹದ ನೀರಿನ ಪ್ರಮಾಣವನ್ನು ನಿಯಂತ್ರಿಸುವುದು. ಕೆಳಮೆದುಳಿನ ಹೈಪೊಥಾಲಮಸ್ ಎಂಬ ಭಾಗ ತನ್ನಲ್ಲಿ ಹರಿಯುವ ರಕ್ತದಲ್ಲಿನ ಏರುಪೇರಾದ ನೀರಿನ ಪ್ರಮಾಣ ತಿಳಿದು ಪಿಟುಟರಿ ಗ್ರಂಥಿಗೆ ಸೂಚನೆ ಕೊಟ್ಟು ‘ನೀರುನಿಯಂತ್ರಣ ಪ್ರೇರಕದ್ರವ್ಯ’ವನ್ನು (ಆಂಟಿಡೈಯೂರಿಟಿಕ್ ಹಾರ್ಮೋನ್-ಎ.ಡಿ.ಎಚ್.) ಅಗತ್ಯ ಪ್ರಮಾಣದಲ್ಲಿ ಸ್ರವಿಸುವಂತೆ ಮಾಡುವುದು. ಈ ಪ್ರೇರಕದ್ರವ ಮೂತ್ರಪಿಂಡ ತಲುಪಿದಾಗ ಗ್ಲಾಮರಸ್ ನ ಸೋಸುವಿಕೆಯಲ್ಲಿ ಅಗತ್ಯ ಮಾರ್ಪಾಟಾಗಿ ರಕ್ತದಲ್ಲಿ ನೀರಿನ ಪ್ರಮಾಣ ಸಮತೋಲ ಪಡೆಯುವುದು ಅದೇ ರೀತಿ ಚರ್ಮದಲ್ಲೂ ಆಗುವುದು.
  • ವಾತಾವರಣದ ಉಷ್ಣಾಂಶ ಅಥವಾ ದೇಹದ ಉಷ್ಣಾಂಶ ಹೆಚ್ಚಾದಾಗ ಮೆದುಳಿನ ಹೈಪೊಥಾಲಮಸ್ ಚರ್ಮದ ರಕ್ತನಾಳಗಳು ಹಿಗ್ಗುವಂತೆ ಮಾಡುತ್ತದೆ. ಆಗ ಹೆಚ್ಚು ರಕ್ತ ಹರಿದು ಬೆವರಿನ ಉತ್ಪತ್ತಿ ಹೆಚ್ಚಿ ಸ್ವೇದರಂದ್ರದ ಮೂಲಕ ಹೊರಬರುವುದು. ಆಗ ಅದು ಗಾಳಿತಾಗಿ ಆವಿಯಾಗುತ್ತದೆ. ದೇಹದ ಉಉಷ್ಣಾಂಸವನ್ನು ಬಳಸಿಕೊಂಡು ಹಾಗೆ ಆವಿಯಾದಾಗ ದೇಹ ತಂಪಾಗುತ್ತದೆ. [೨೨]

ನೋಡಿ

ಉಲ್ಲೇಖ

  1. Handbook of General Anatomy by B. D. Chaurasia. ISBN 978-81-239-1654-5
  2. Pigmentation of Skin
  3. ಜೀವ ಜೀವನ ಪುಟ ೧೪೫,೧೪೬,೧೪೭; ಡಾ. ಶಿವರಾಮ ಕಾರಂತ
  4. ವಿಜ್ಞಾನ ಪ್ರಪಂಚ,ಭಾಗ೨ ಜೀವ ಜೀವನ ಪುಟ 278,279,280,; ಡಾ. ಶಿವರಾಮ ಕಾರಂತ
  5. Proksch, E; Brandner, JM; Jensen, JM (2008). "The skin: an indispensable barrier.". Experimental Dermatology
  6. [Janis, C.M.; Keller, J.C. (2001). "Modes of ventilation in early tetrapods: Costal aspiration as a key feature of amniotes"(PDF). Acta Palaeontologica Polonica. 46 (2): 137–170. Retrieved 11 May 2012.]
  7. ವಿಜ್ಞಾನ ಭಾಗ ೨;೯ನೇತರಗತಿ;೨೦೧೧ಕರ್ನಾಟಕ ಪಠ್ಯಪುಸ್ತಕ ಸಂಘ.
  8. The evolution of human skin coloration. Jablonski, N.G.; Chaplin (2000). "The evolution of human skin coloration". Journal of Human Evolution. 39 (1): 57–106.
  9. Maton, Anthea; Jean Hopkins; Charles William McLaughlin; Susan Johnson; Maryanna Quon Warner; David LaHart; Jill D. Wright (1893). Human Biology and Health. Englewood Cliffs, New Jersey, USA: Prentice Hall.
  10. Wilkinson, P.F. Millington, R. (2009). Skin (Digitally printed version ed.). Cambridge: Cambridge University Press. pp. 49–50.[8]
  11. KidsPostEver wondered about your skin?
  12. The cutaneous uptake of atmospheric oxygen contributes significantly to the oxygen supply of human dermis and epidermis;The Journal of Physiology. 538
  13. Stücker, M.; A. Struk; P. Altmeyer; M. Herde; H. Baumgärtl; D. W. Lübbers (2002).
  14. Muehlenbein, Michael (2010). Human Evolutionary Biology. Cambridge University Press. pp. 192–213
  15. Jablonski, N.G. (2006). Skin: a Natural History. Berkeley: University of California Press. ISBN 0520954815.
  16. Handbook of General Anatomy by B. D. Chaurasia. ISBN 978-81-239-1654-5
  17. Jablonski, N.G.; Chaplin (2000). "The evolution of human skin coloration". Journal of Human Evolution. 39(1)
  18. Human Microbiome Project
  19. Oyeka CA, Ugwu LO (2002). "Fungal flora of human toe webs". Mycoses. 45 (11–12): 488–91
  20. A diversity profile of the human skin microbiota
  21. Theodor Rosebury. Life on Man: Secker & Warburg, 1969 ISBN 0-670-42793-4(24)
  22. ಆಧಾರ:2011ರ ವಿಜ್ಞಾನ ಬಾಗ 2; 9ನೇತರಗತಿ ಪುಟ 72-73.