ಅನಿಮೇಶನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 1 langlinks, now provided by Wikidata on d:q11425; 4 langlinks remaining
೧೮೭ ನೇ ಸಾಲು: ೧೮೭ ನೇ ಸಾಲು:
[[ವರ್ಗ:ತಂತ್ರಜ್ಞಾನ]]
[[ವರ್ಗ:ತಂತ್ರಜ್ಞಾನ]]
[[ar:تحريك]]
[[ar:تحريك]]
[[hu:Animációs film]]
[[ml:അനിമേഷന്‍]]
[[ml:അനിമേഷന്‍]]
[[nl:Animatie]]
[[nl:Animatie]]

೧೦:೩೭, ೨೪ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ಪುಟಿಯುತ್ತಿರುವ ಚೆಂಡಿನ ಅನಿಮೇಶನ್‌ (ಕೆಳಗೆ) 6 ಫ್ರೇಮ್‌ಗಳನ್ನು ಒಳಗೊಂಡಿದೆ.

ಈ ಅನಿಮೇಶನ್‌ ಪ್ರತಿ ಸೆಕೆಂಡಿಗೆ 10 ಫ್ರೇಮ್‌ನಂತೆ ಚಲಿಸುತ್ತದೆ.

ಚಲನೆಯ ಭ್ರಮೆ ಸೃಷ್ಟಿಗೆ ಆಕೃತಿಯೊಂದರ ಸ್ಥಾನಗಳ ಅಥವಾ 2-D(=2ನೇ ಆಯಾಮ) ಇಲ್ಲವೇ 3-D(=3ನೇ ಆಯಾಮ) ಚಿತ್ರಗಳ ದೃಶ್ಯ ಸರಣಿಯನ್ನು ಒಂದು ಅನುಕ್ರಮದ ಮಾದರಿಯಲ್ಲಿ ಕ್ಷಿಪ್ರವಾಗಿ ಪ್ರದರ್ಶನವಾಗುವಂತೆ ಮಾಡುವುದೇ ಅನಿಮೇಶನ್‌ ಅಥವಾ ಚಿತ್ರಸಂಚಲನೆ. ಇದು ದೃಷ್ಟಿಯ ನಿರಂತರತೆಯಿಂದ ಉಂಟಾಗುವ ಚಲನೆದೃಶ್ಯದ ಭ್ರಮೆ ಹಾಗೂ ಇದನ್ನು ಅಂಸಂಖ್ಯಾತ ವಿಧಾನಗಳಲ್ಲಿ ಸೃಷ್ಟಿಸಬಹುದು ಮತ್ತು ಪ್ರದರ್ಶಿಸಲೂಬಹುದು. ಅನಿಮೇಶನ್‌ ಪ್ರದರ್ಶಿಸಲು ಹಲವು ಇತರೆ ಪದ್ಧತಿಗಳು ಅಸ್ಥಿತ್ವದಲ್ಲಿವೆ, ಅನಿಮೇಶನ್‌ ಪ್ರದರ್ಶಿಸುವ ಅತ್ಯಂತ ಸಾಮಾನ್ಯ ವಿಧಾನವೆಂದರೆ, ಚಲಿಸುವ ಚಿತ್ರ ಅಥವಾ ವಿಡಿಯೋ ಪ್ರೋಗ್ರಾಮ್‌.

ಆರಂಭಿಕ ಉದಾಹರಣೆಗಳು

ಸುಮಾರು 4000 ವರ್ಷಗಳಷ್ಟು ಪುರಾತನವಾದ ಈಜಿಪ್ಟಿನ ಶವಸಂಸ್ಕಾರದ ಕೊಠಡಿಯ ಗೋಡೆ ಕುಸ್ತಿಪಟುಗಳು ಸೆಣಸಾಡುತ್ತಿರುವುದನ್ನು ತೋರಿಸುತ್ತಿದೆ. ಇದು ಅನಿಮೇಶನ್‌ ಚಿತ್ರಗಳ ಸರಣಿಯಂತೆ ಕಂಡರೂ, ಆ ಚಿತ್ರಗಳನ್ನು ಚಲನೆಯಲ್ಲಿ ನೋಡಲು ಅಲ್ಲಿ ಯಾವುದೇ ದಾರಿಯಿಲ್ಲ. ಇದೇನೇ ಇದ್ದರೂ, ಚಲನೆಯನ್ನು ಚಿತ್ರಿಸಬೇಕೆಂಬ ಕಲಾವಿದನ ಉದ್ದೇಶವನ್ನು ಇದು ಸೂಚಿಸುತ್ತದೆ.

ಆದಿಕಾಲದಲ್ಲಿ ಚಲನೆಯನ್ನು ಹಿಡಿಯಲು ನಡೆಸಿರುವ ಪ್ರಯತ್ನಗಳನ್ನು ಪೇಲಿಯೋಲಿಥಿಕ್‌ ಗುಹಾಂತರ ಚಿತ್ರಗಳಲ್ಲಿ ಕಾಣಬಹುದು. ಇಲ್ಲಿ ಪ್ರಾಣಿಗಳನ್ನು ಹಲವು ಕಾಲುಗಳನ್ನು ಹೊಂದಿರುವಂತೆ ಹಾಗೂ ಅವುಗಳನ್ನು ತಿರುಗು-ಮುರುಗು ಸ್ಥಿತಿಯಲ್ಲಿ ಚಿತ್ರಿಸಲಾಗಿದೆ. ಇದು ಚಲನೆಯ ಅನುಭವವನ್ನು ಗ್ರಹಿಸಲು ನಡೆಸಿರುವ ಪ್ರಯತ್ನವೆಂದು ಸ್ಪಷ್ಟವಾಗಿ ಗೋಚರಿಸುತ್ತದೆ. ಇರಾನ್‌ನ ಶಾಹರ್‌-ಇ ಸೋಖ್ತಾ ಎಂಬಲ್ಲಿ 5,200 ವರ್ಷಗಳಷ್ಟು ಹಳೆಯದಾದ ಒಂದು ಮಣ್ಣಿನ ಪಾತ್ರೆ (=ಕುಡಿಕೆ) ದೊರೆತಿದ್ದು, ಇದರ ಸುತ್ತಲೂ ಮೇಕೆಯ ಐದು ಚಿತ್ರಗಳನ್ನು ಚಿತ್ರಿಸಲಾಗಿದೆ.

ಇದನ್ನು ಆರಂಭಿಕ ಕಾಲದ ಅನಿಮೇಶನ್‌ ಪ್ರಯತ್ನಕ್ಕೆ ಉದಾಹರಣೆಯೆಂದು ಪರಿಗಣಿಸಲಾಗಿದೆ.[೧] ಆದರೂ ಚಿತ್ರಗಳ ಚಲನೆ ಮತ್ತು ನಿರಂತರತೆಯನ್ನು ತೋರಿಸಲು ಯಾವುದೇ ಉಪಕರಣಗಳು ಆಗಿನ ಕಾಲದಲ್ಲಿ ಇರಲಿಲ್ಲ, ಆದ್ದರಿಂದ ಅನಿಮೇಶನ್‌ ಪದ ನೀಡುವ ನಿಜ ಅರ್ಥದಲ್ಲಿ ಇದನ್ನು ಅನಿಮೇಶನ್‌ ಎಂದು ಕರೆಯಲು ಸಾಧ್ಯವಿಲ್ಲ.[೨] ಫಿನಾಕಿಸ್ಟೋಸ್ಕೋಪ್‌, ಪ್ರಾಕ್ಸಿನೋಸ್ಕೋಪ್‌, ಇವುಗಳ ಜೊತೆಗೆ ಫ್ಲಿಪ್‌ ಬುಕ್‌ಗಳು ಆರಂಭಿಕ ಅನಿಮೇಶನ್‌ನ ಜನಪ್ರಿಯ ಸಾಧನಗಳಾಗಿದ್ದವು. ಇವುಗಳನ್ನು 1800ರ ಸುಮಾರಿಗೆ ಆವಿಷ್ಕರಿಸಲಾಗಿತ್ತು. ಚೀನಿಯರು ಝೋಟ್ರೋಪ್‌-ವಿಧಾನವನ್ನು 180ಕ್ರಿ.ಪೂ (ADಯ) ಅವಧಿಗಾಗಲೇ ರೂಪಿಸಿದ್ದರು.[೩][೪][೫][೬] ಅನುಕ್ರಮ ಚಿತ್ರ ಸರಣಿಯನ್ನು ತಾಂತ್ರಿಕ ರೀತಿಯಲ್ಲಿ ಬಳಸಿಕೊಂಡು ಈ ಪದ್ಧತಿಗಳು ಚಲನೆಯನ್ನು ಸೃಷ್ಟಿಸುತ್ತಿದ್ದವು. ಆದರೆ ಸಿನಿಮಾಟೋಗ್ರಫಿ ತಂತ್ರಜ್ಞಾನ ಉದಯವಾಗುವವರೆಗೂ ಅನಿಮೇಶನ್‌ ಹೆಚ್ಚೇನೂ ಅಭಿವೃದ್ಧಿ ಕಂಡಿರಲಿಲ್ಲ. ಹಲವಾರು ವಿಧದ ಯೋಜನೆಗಳ ಮೂಲಕ ವಿಭಿನ್ನ ಬಗೆಯ ಅನಿಮೇಶನ್‌ ತಂತ್ರಗಳನ್ನು ಒಂದೇ ಕಾಲದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಚಲನಚಿತ್ರ ಅನಿಮೇಶನ್‌ ಅಥವಾ ಚಲಿಸುವ ಚಿತ್ರಗಳನ್ನು ರಚಿಸುವ ಈ ಕಲೆಗೆ ಒಬ್ಬನೇ "ಸೃಷ್ಟಿಕರ್ತ"ನಿಲ್ಲ. ಸ್ಪೆಷಲ್‌-ಎಫೆಕ್ಟ್‌ (=ವಿಶಿಷ್ಟ ಪರಿಣಾಮದ)ಚಲಿಸುವ ಚಿತ್ರಗಳ ತಯಾರಕನಾಗಿದ್ದ ಜಾರ್ಜೆಸ್‌ ಮೆಲೀಸ್‌ ತನ್ನದೇ ತಂತ್ರಗಳ ಮೂಲಕ ಅನಿಮೇಶನ್‌ ವಿಧಾನವನ್ನು ಬಳಸಿದ ಮೊದಲ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ.

ಆತನದು ಆಕಸ್ಮಿಕ ಆವಿಷ್ಕಾರ.ದೃಶ್ಯಗಳಲ್ಲಿ ಬದಲಾವಣೆಗೆ ಕ್ಯಾಮರಾದಲ್ಲಿ ತಡೆ ಉಂಟಾಗುತ್ತಿತ್ತು.ನಂತರ ಫಿಲ್ಮ್‌ ಸುತ್ತುವಿಕೆಗೆ ಚಾಲನೆ ದೊರೆಯುತ್ತಿತ್ತು. ಇದೇ ತಂತ್ರ ಮುಂದೆ ಸ್ಪಾಪ್‌-ಮೋಷನ್‌ ಅನಿಮೇಶನ್‌(ಸ್ಥಿರ ಚಿತ್ರಚಲನೆಯ ಪದ್ದತಿ) ಎಂದು ಜನಪ್ರಿಯವಾಯಿತು. ಮೆಲೀಸ್‌ ಒಮ್ಮೆ ಬಸ್‌ ಚಾಲನಾ ಚಿತ್ರೀಕರಣದಲ್ಲಿ ತೊಡಗಿದ್ದಾಗ ಕ್ಯಾಮೆರಾ ಒಡೆದು ಹೋದ ಸಂದರ್ಭದಲ್ಲಿ ಅಕಸ್ಮಿಕವಾಗಿ ಈ ತಂತ್ರವನ್ನು ಕಂಡುಕೊಂಡಿದ್ದ. ಮೆಲೀಸ್‌ ತನ್ನ ಭಗ್ನಗೊಂಡ ಕ್ಯಾಮೆರಾವನ್ನು ಸರಿಪಡಿಸಿಕೊಂಡು ಮರು ಚಿತ್ರೀಕರಿಸಲು ಆರಂಭಿಸಿದಾಗ ಒಂದು ಶವವಾಹನ ಹಾದು ಹೋದಂತಾಯಿತು. ಇದರ ಅಂತಿಮ ಪರಿಣಾಮ ಇವನಿದ್ದ ಬಸ್ಸೇ ಶವವಾಹನವಾಗಿ ಪರಿವರ್ತನೆಯಾದಂತಾಗಿತ್ತು! ಇದೇ ಆತನಿಗೆ ಅನಿಮೇಶನನ್ ಆವಿಷ್ಕಾರಕ್ಕೆ ಸ್ಪೂರ್ತಿಯಾಯಿತು. ಆರಂಭಿಕ ವರ್ಷಗಳಲ್ಲಿ ಅನಿಮೇಶನ್‌ ಬೆಳವಣಿಗೆಗೆ ಮಹತ್ತರ ಕೊಡುಗೆ ಸಲ್ಲಿಸಲು ಕಾರಣವಾದ ಹಲವು ಘಟನೆಗಳಲ್ಲಿ ಇದೂ ಒಂದಾಗಿತ್ತು. ತೀರ ಆರಂಭ ಕಾಲದಲ್ಲಿ ಅರ್ಥರ್‌ ಮೆಲ್ಬೋರ್ನ್-ಕೂಪರ್‌ ನಿರ್ಮಿಸಿದ್ದ ಮ್ಯಾಚೆಸ್‌: ಯ್ಯಾನ್‌ ಅಪ್ಪೀಲ್ (1899) ಎಂಬ ಹೆಸರಿನ ಸ್ಥಿರ ಚಿತ್ರಣದ ಜಾಹಿರಾತು ಚಿತ್ರ ಇಂಗ್ಲಿಷ್‌ನಲ್ಲಿತ್ತು. ಇದನ್ನು ಬ್ರಿಯಾಂಟ್‌ ಅಂಡ್ ಮೇ ಎಂಬಹೆಸರಿನ ಬೆಂಕಿಪೊಟ್ಟಣ ತಯಾರಿಕಾ ಕಂಪನಿಗಾಗಿ ಕೂಪರ್‌ ನಿರ್ಮಿಸಿದ್ದರು. ಈ ಅನಿಮೇಶನ್‌, ಕಪ್ಪುಹಲಗೆಯ ಮೇಲೆ ಏಕರೂಪದ ಬೆಂಕಿಕಡ್ಡಿಗಳು ಒಟ್ಟಿಗೆ ದೇಶಪ್ರೇಮಕ್ಕಾಗಿ ಕರೆಯನ್ನು ಬರೆಯುತ್ತಿದ್ದ ಸ್ಟಾಪ್‌-ಮೋಷನ್‌(ಸ್ಥಿರ ಚಿತ್ರಣದ) ತಂತ್ರವನ್ನು ಒಳಗೊಂಡಿತ್ತು. J. ಸ್ಟುವರ್ಟ್ ಬ್ಯ್ಲಾಕ್‌ಟನ್‌ ಸ್ಟಾಪ್‌-ಮೋಷನ್‌ ಮತ್ತು ಹ್ಯಾಂಡ್‌-ಡ್ರಾನ್‌ (=ಕೈಯಿಂದ ಬಿಡಿಸಿದ ರೇಖಾ ಚಿತ್ರ) ತಂತ್ರಗಳನ್ನು ಅನಿಮೇಶನ್‌ನಲ್ಲಿ ಬಳಸಿಕೊಂಡ ಮೊದಲ ಅಮೆರಿಕನ್‌ ಚಲನಚಿತ್ರ ನಿರ್ಮಾಪಕನಾಗಿದ್ದ. ಆದರೆ ಚಲನಚಿತ್ರ ನಿರ್ಮಾಣದಲ್ಲಿ ಈ ತಂತ್ರ ಪರಿಚಯಿಸಿದ ಎಡಿಸನ್‌. 20ನೇ ಶತಮಾನದ ಉತ್ತರಾರ್ಧದಲ್ಲಿ ಈ ಪರಿಕಲ್ಪನೆಗಳನ್ನು 1900ರಲ್ಲಿ ತನ್ನ ಮೊದಲ ಹಕ್ಕುಸ್ವಾಮ್ಯದ ಚಿತ್ರದಲ್ಲಿ ಬಳಸಿ ಈ ಪರಿಕಲ್ಪನೆಗಳಿಗೆ ಹೊಸ ಆಯಾಮ ನೀಡಿದ. ಈತನ ಚಿತ್ರಗಳು ದಿ ಎನ್‌ಚಾಂಟೆಡ್‌ ಡ್ರಾಯಿಂಗ್‌ (1900) ಮತ್ತು ಹ್ಯೂಮರಸ್‌ ಪೇಸಸ್‌ ಆಫ್‌ ಫನ್ನಿ ಫೇಸಸ್‌ (1906) ಬ್ಯ್ಲಾಕ್‌ಟನ್‌ನ "ಲೈಟಿಂಗ್‌ ಆರ್ಟಿಸ್ಟ್‌" ದಿನಚರಿಯ ಚಲನಚಿತ್ರ ಆವೃತ್ತಿಗಳಾಗಿದ್ದವು. ಆರಂಭದಲ್ಲಿ ಮೆಲೀಸ್‌ ಕಪ್ಪುಹಲಗೆಮೇಲೆ ಬಿಡಿಸಿದ ಆಕೃತಿಗಳು ಚಲಿಸಿದಂತೆ ಮಾಡಲು ಮತ್ತು ತಮಗೆ ತಾವೇ ಆಕಾರ ಬದಲಿಸಿಕೊಳ್ಳಲು ಬಳಸಿದ ಸ್ಟಾಪ್‌-ಮೋಷನ್‌ ತಂತ್ರಗಳ ಪರಿವರ್ತಿತ ರೂಪಗಳಾಗಿದ್ದವು. 'ಹ್ಯೂಮರಸ್‌ ಪೇಸಸ್‌ ಆಫ್‌ ಫನ್ನಿ ಫೇಸಸ್' ಚಿತ್ರ ಅನಿಮೇಶನ್‌ ತಂತ್ರವನ್ನು ಬಳಸಿಕೊಂಡ ನೈಜ ಅನಿಮೇಟೆಡ್‌ ಚಿತ್ರವೆಂದು ಕರೆಸಿಕೊಂಡರೆ, ಬ್ಯ್ಲಾಕ್‌ಟನ್‌ ಮೊದಲ ನಿಜವಾದ ಅನಿಮೇಟರ್‌ ಎನಿಸಿಕೊಂಡರು.

ಎಮಿಲಿ ಕೋಹ್ಲ್‌ ಅವರಿಂದ ಫ್ಯಾಂಟಸ್ಮಾಗೋರಿ, 1908

ಮತ್ತೊಬ್ಬ ಫ್ರೆಂಚ್‌ ಕಲಾವಿದ ಇಮೈಲ್ ಕೋಹ್ಲ್‌ ವ್ಯಂಗ್ಯ ರೇಖಾ ಚಿತ್ರಗಳ ಪಟ್ಟೆಯನ್ನು ಬರೆಯುದರೊಂದಿಗೆ 1908ರಲ್ಲಿ ಫ್ಯಾಂಟಸ್ಮಾಗೋರಿ ಹೆಸರಿನ ಚಿತ್ರವನ್ನು ಸಿದ್ದಪಡಿಸಿದ.[೭] ಕಡ್ಡಿ ಆಕೃತಿ ಚಿತ್ರಗಳು ಮಾದಕ ವಸ್ತುಗಳನ್ನು ಎಂದರೆ ಮದ್ಯದ ಬಾಟಲಿಗಳನ್ನು ಹಿಡಿದುಕೊಂಡಂತೆಯೇ ಅವುಗಳನ್ನು ಹೂವಾಗಿ ಪರಿವರ್ತಿಸಿ ಚಲಿಸುವ ವಿಧಾನವನ್ನು ಈ ಚಿತ್ರ ದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿತ್ತು. ಅನಿಮೇಟರ್‌ನ ಕೈಗಳು ದೃಶ್ಯದಲ್ಲಿ ಪ್ರವೇಶಿಸುತ್ತಿದ್ದ ನೈಜ ದೃಶ್ಯಗಳ ಸನ್ನಿವೇಶಗಳೂ ಈ ಚಿತ್ರದಲ್ಲಿದ್ದವು. ಮೊದಲು ಕಾಗದದ ಮೇಲೆ ಪ್ರತಿಯೊಂದು ಛಾಯಾ ಆಕೃತಿ ಬಿಡಿಸಿ ನಂತರ ಒಂದೊಂದೂ ಚೌಕಟ್ಟನ್ನು ನೆಗೆಟಿವ್‌ ಫಿಲ್ಮ್‌ನಲ್ಲಿ ಚಿತ್ರೀಕರಿಸಿ ಈ ಚಿತ್ರಸರಣಿ ರೂಪಿಸಲಾಗಿತ್ತು. ಇದರಿಂದಾಗಿ ಚಿತ್ರ ಕಪ್ಪು ಹಲಗೆಯ ರೂಪಕ್ಕೆ ತಿರುಗಿತ್ತು . ಇದರಿಂದ ಫ್ಯಾಂಟಸ್ಮಾಗೋರಿ ಚಿತ್ರ, ಸಾಂಪ್ರದಾಯಿಕ ಶೈಲಿಯ ಕೈಯಿಂದ ಬಿಡಿಸಿದ(ಟ್ರೆಡಿಷನಲ್‌ ಅನಿಮೇಷನ್‌ (ಹ್ಯಾಂಡ್-ಡ್ರಾನ್)) ಎಂದು ಹೆಸರಾಗಿರುವ ತಂತ್ರವನ್ನು ಬಳಸಿದ ಮೊದಲ ಅನಿಮೇಟೆಡ್‌ ಚಿತ್ರ ಎಂದು ಕರೆಸಿಕೊಂಡಿತು. ಬ್ಯ್ಲಾಕ್‌ಟನ್‌ ಮತ್ತು ಕೋಹ್ಲ್‌ ಅವರ ಯಶಸ್ಸಿನ ನಂತರ, ಇತರೆ ವಿಭ್ಹಾಗದ ಹಲವು ಕಲಾವಿದರು ಅನಿಮೇಶನ್‌ನಲ್ಲಿ ಪ್ರಯೋಗ ಮಾಡಲಾರಂಭಿಸಿದರು. ಯಶಸ್ವಿ ಪತ್ರಿಕಾ ವ್ಯಂಗ ಚಿತ್ರಕಾರ ವಿನ್ಸರ್‌ ಮ್ಯಾಕ್‌ಕೆ ಇವರಲ್ಲಿ ಒಬ್ಬರು. ಚಿತ್ರದ ಒಂದೊಂದೂ ವಿವರವನ್ನು ಬಹಳ ಜಾಗರೂಕತೆಯಿಂದ ಸೇರ್ಪಡೆ ಮಾಡಿದ್ದಾರೆ ಕಲಾವಿದರ ಒಂದು ತಂಡವೇ ಇದರಲ್ಲಿ ದುಡಿದಿದೆ. ಹೀಗಾಗಿ ವಿಸ್ತೃತವಾದ ಅನಿಮೇಷನ್‌ ಅನ್ನು ಇವರು ರೂಪಿಸಿದರು. ಇದರ ಪ್ರತಿ ಚೌಕಟ್ಟನ್ನು ಕಾಗದಲ್ಲಿ ಒಡಮೂಡಿಸಲಾಗಿತ್ತು. ಇವೇ ಪಾತ್ರಗಳನ್ನು ಯಾವುದೇ ಬದಲಾವಣೆಯಿಲ್ಲದೆ ಮತ್ತೆ ಬರೆದು ಅದಕ್ಕೆ ಅನಿಮೇಶನ್‌ ರೂಪ ನೀಡಲಾಗಿತ್ತು. ಮ್ಯಾಕ್‌ಕೆನ ಹೆಚ್ಚು ಜನಪ್ರಿಯವಾದ ಚಿತ್ರಗಳಲ್ಲಿ ಲಿಟಲ್‌ ನೆಮೋ (1911), ಗರ್ಟೀ ದಿ ಡೈನೋಸಾರ್‌ (1914) ಮತ್ತು ದಿ ಸಿಂಕಿಂಗ್ ಆಫ್ ದಿ ಲೂಸಿತಾನಿಯಾ (1918) ಪ್ರಮುಖವಾದವು. ಸಾಮಾನ್ಯವಾಗಿ "ಕಾರ್ಟೂನ್ಸ್‌" ಎಂದು ಕರೆಯುವ ಅನಿಮೇಟೆಡ್‌ ಕಿರು ಚಿತ್ರಗಳ ನಿರ್ಮಾಣ 1910ರ ಅವಧಿಯಲ್ಲಿ ಸ್ವಾಯತ್ತ ಉದ್ಯಮವಾಗಿ ಬೆಳೆಯಿತು, ಇಂತಹ ತಮಾಷೆಯ ವಸ್ತುವನ್ನೊಳಗೊಂಡ ಕಿರುಚಿತ್ರಗಳು ಚಲನಚಿತ್ರ ಮಂದಿರಗಳಲ್ಲೂ ಪ್ರದರ್ಶನಗೊಳ್ಳಲು ಆರಂಭಿಸದವು. ಆರಂಭಿಕ ವರ್ಷಗಳಲ್ಲಿ ಯಶಶ್ವಿ ಅನಿಮೇಶನ್‌ ಸೃಷ್ಟಿಕರ್ತರೆಂದರೆ ಜಾನ್‌ ರಾಂಡಾಲ್ಫ್‌ ಬ್ರೆ; ಇವರು ಮತ್ತೊಬ್ಬ ಅನಿಮೇಟರ್‌ ಎರ್ಲ್‌ ಹರ್ಡ್‌ರೊಡನೆ ಸೇರಿ ಸೆಲ್‌ ಅನಿಮೇಶನ್‌ಪ್ರಕ್ರಿಯೆಗೆ ಹಕ್ಕು ಸ್ವಾಮ್ಯ ಪಡೆದರು. ದಶಕದ ಉತ್ತರಾರ್ಧದಲ್ಲಿ ಅನಿಮೇಷನ್‌ ಉದ್ಯಮ ತನ್ನ ಪ್ರಾಬಲ್ಯ ಮೆರೆಯಿತು.

ತಂತ್ರಗಳು

ಸಾಂಪ್ರದಾಯಿಕ ಅನಿಮೇಶನ್

ಎಡ್ವರ್ಡ್‌ ಮೈಬ್ರಿಡ್ಜ್‌ನ 19ನೇ ಶತಮಾನದ ಪೋಟೋಗಳಿಂದ ರೋಟೋಸ್ಕೋಪಿಂಗ್ ತಂತ್ರ ಬಳಸಿ ರೂಪಿಸಿದ ಕುದರೆ, ಇದು ಟ್ರೆಡಿಷನಲ್‌ ಅನಿಮೇಶನ್‌ಗೊಂದು ಉದಾಹರಣೆ.

ಟ್ರೆಡಿಷನಲ್‌ ಅನಿಮೇಶನ್‌ (ಇದು ಸೆಲ್‌ ಅನಿಮೇಶನ್‌ ಅಥವಾ ಹ್ಯಾಂಡ್‌-ಡ್ರಾನ್‌ ಅನಿಮೇಶನ್‌ ಎಂದೂ ಕರೆಯಲ್ಪಡುತ್ತದೆ.)ರೇಖಾ ನಕ್ಸೆಗಳ ಮೂಲಕ ಚಿತ್ತ್ರಕೋಶ ರಚನೆ ಎನ್ನುವುದು 20ನೇ ಶತಮಾನದ ಬಹುತೇಕ ಅನಿಮೇಶನ್ ಚಿತ್ರಗಳಲ್ಲಿ ಬಳಸಲಾದ ತಂತ್ರಗಾರಿಕೆ .

ಟ್ರೆಡಿಷನಲ್‌ ಅನಿಮೇಶನ್‌ ಚಿತ್ರದಲ್ಲಿ ಪ್ರತಿಯೊಂದಕ್ಕೂ ಚೌಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಮೊದಲು ಕಾಗದದ ಮೇಲೆ ಬಿಡಿಸಿದ ಚಿತ್ರಗಳ ಛಾಯಾ ಚಿತ್ರ ಅಥವಾ ಛಾಯಾ ಪ್ರತಿಗಳನ್ನು ಬಳಸಲಾಗುತ್ತದೆ. ಚಲನೆಯ ಭ್ರಮೆಯನ್ನು ಉಂಟುಮಾಡಲು ಪ್ರತಿಯೊಂದೂ ಚಿತ್ರ ಬರಹವು ತನ್ನ ಹಿಂದಿನ ಫ್ರೇಮ್‌ಗಿಂತ ಸ್ವಲ್ಪ ಭಿನ್ನವಾಗಿರುತ್ತವೆ. ಅನಿಮೇಟರ್‌ಗಳು ಬಿಡಿಸಿದ ಚಿತ್ರಗಳನ್ನು ಸೆಲ್‌ ಎಂದು ಕರೆಯುವ ಪಾರದರ್ಶಕ ಅಸಿಟೇಟ್‌ ಹಾಳೆಗಳ ಮೇಲೆ ನೆರಳಚ್ಚು(ಝರಾಕ್ಸ್ )ಪ್ರತಿ ತೆಗೆಯಲಾಗುತ್ತದೆ. ನಂತರ ಚಿತ್ರಿಸಲಾದ ರೇಖೆಗಳ ಒಳಗೆ ಈಗಾಗಲೇ ನಿರ್ಧರಿಸಿರುವ ಬಣ್ಣ ಅಥವಾ ಧ್ವನಿ ತುಂಬಲಾಗುತ್ತದೆ.

ಪಾರದರ್ಶಕ ಅಸಿಟೇಟ್ ಹಾಳೆಗಳಲ್ಲಿನ ಚಿತ್ರಕೋಶಗಳ ಛಾಯಾಗ್ರಹಣದ ನಂತರ ಅವುಗಳ ಆಕಾರಕ್ಕೆ ಹೋಲಿಕೆಯಾಗುವ ಹಿನ್ನಲೆ ವರ್ಣದ ವೇದಿಕೆಯಲ್ಲಿ ಚಿತ್ರಿಸಲಾಗುತದೆ.ಇದರಲ್ಲಿ ತಿರುಗುವ ಇಲ್ಲವೆ ಕೊಕ್ಕೆ ಆಕಾರದ ಕ್ಯಾಮರಾ ಬಳಸಿಕೊಳ್ಳಲಾಗುವುದು. ರೇಖಾ ಚಿತ್ರಗಳ ಬಳಕೆ ಟ್ರೆಡಿಷನಲ್‌ ಸೆಲ್‌ ಅನಿಮೇಶನ್‌ ಪದ್ಧತಿಯು 21ನೇ ಶತಮಾನದ ಆರಂಭದೊಂದಿಗೆ ಗತಿಸಿಹೋಯಿತು. ಇಂದಿನ ಅನಿಮೇಶನ್ ಚಿತ್ರ ಮತ್ತು ಹಿನ್ನೆಲೆಗಳನ್ನು ಪರಿಷ್ಕರಿಸಿ ಕಂಪ್ಯೂಟರ್‌ಗಳಲ್ಲಿ ದಾಖಲಿಸಲಾಗುತ್ತದೆ, ಇಲ್ಲವೇ ಉಪಕರಣಗಳ ನೆರವಿನಿಂದ ನೇರವಾಗಿ ಕಂಪ್ಯೂಟರ್‌ನಲ್ಲೇ ಚಿತ್ರ ಬಿಡಿಸಲಾಗುತ್ತದೆ. ಕ್ಯಾಮೆರಾ ಚಲನೆ ಮತ್ತು, ವಿಶೇಷ ಪ್ರಭಾವ ಒದಗಿಸಲು ಚಿತ್ರಗಳಿಗೆ ಬಣ್ಣ ತುಂಬಲು ವೈವಿಧ್ಯಮಯ(ತಂತ್ರಜ್ಞಾನ) ಸಾಫ್ಟ್‌ವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪೂರ್ಣಗೊಂಡ ಅನಿಮೇಶನ್‌ ಕೃತಿ ವಿವಿಧ ಪ್ರಕಾರದ ಮಾಧ್ಯಮಗಳಲ್ಲಿ ಮೂಡಿಬರುತ್ತದೆ, ಎಂದರೆ ಪಾರಂಪರಿಕ 35 mm ಫಿಲ್ಮ್‌ ಮತ್ತು ಹೊಸ ತಂತ್ರಜ್ಞಾನದ ಡಿಜಿಟಲ್‌ ವಿಡಿಯೋಗಳಲ್ಲಿ ಕಾಣಬರುತ್ತದೆ. ಟ್ರೆಡಿಷನಲ್‌ ಸೆಲ್‌ ಅನಿಮೇಶನ್‌ನ ಆ "ಛಾಯೆ" ಈಗಲೂ ಉಳಿದುಕೊಂಡಿದೆ. ಅಲ್ಲದೆ ಕ್ಯಾರೆಕ್ಟರ್‌ ಅನಿಮೇಟರ್‌ನ ಕೆಲಸಕಾರ್ಯ ಸುಮಾರು 70ಕ್ಕೂ ಹೆಚ್ಚು ವರ್ಷಗಳಿಂದ ಅದೇ ಸ್ವರೂಪ ಉಳಿಸಿಕೊಂಡಿದೆ. ಅಸಿಟೇಟ್ ಪಾರದರ್ಶಕ ಹಾಳೆಗಳ ಉಪಯೋಗ ಇನ್ನ ಆಚರಣೆಯಲ್ಲಿದೆ. ಕೆಲವು ಅನಿಮೇಶನ್‌ ನಿರ್ಮಾಪಕರು ಸೆಲ್‌ ಅನಿಮೇಶನ್‌ ಅನ್ನು ವಿವರಿಸಲು "ಟ್ರೇಡಿಜಿಟಲ್‌" ಎಂಬ ಪದ ಬಳಸಿದ್ದಾರೆ. ಇದರಲ್ಲಿ ಕಂಪ್ಯೂಟರ್‌ ತಂತ್ರಜ್ಞಾನದ ಅತಿ ಹೆಚ್ಚು ಬಳಕೆಯಿರುತ್ತದೆ. ಟ್ರೆಡಿಷನಲ್‌ ಅನಿಮೇಶನ್‌ ಪೀಚರ್‌ ಫಿಲ್ಮ್‌ಗಳಿಗೆ ಉದಾಹರಣೆಗಳೆಂದರೆ, ಪಿನೋಚ್ಚಿಯೋ (ಯುನೈಟೆಡ್‌ ಸ್ಟೇಟ್ಸ್‌, 1940), ಅನಿಮಲ್‌ ಫಾರ್ಮ್‌ (ಯುನೈಟೆಡ್‌ ಕಿಂಗ್‌ಡಮ್, 1954), ಮತ್ತು ಅಕಿರಾ (ಜಪಾನ್‌, 1988). ಕಂಪ್ಯೂಟರ್‌ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣಗೊಂಡ ಟ್ರೆಡಿಷನಲ್‌ ಅನಿಮೇಶನ್‌ ಫಿಲ್ಮ್‌ಗಳೆಂದರೆ, ದಿ ಲಯನ್‌ ಕಿಂಗ್ (US, 1994) ಸೆನ್‌ ಟು ಚಿಚಿರೋ ನೋ ಕಾಮಿಕಾಕುಶಿ (ಸ್ಪಿರಿಟೆಡ್‌ ಅವೇ) (ಜಪಾನ್‌, 2001), ಟ್ರೆಷರ್‌ ಪ್ಲಾನೆಟ್‌ (USA, 2002) ಮತ್ತು ಲೆಸ್‌ ಟ್ರಿಪ್ಲೆಟ್ಸ್ ಡಿ ಬೆಲ್ಲೆವಿಲ್ಲೆ (2003).

ಸೀಮಿತ ಅನಿಮೇಶನ್‌.

ಸ್ಟಾಪ್‌ ಮೋಶನ್‌ (ಸ್ಥಿರಗತಿಯಲ್ಲಿನ ಚಲನೆ)

clay animation

ಸ್ಟಾಪ್‌-ಮೋಶನ್‌ ಅನಿಮೇಶನ್‌ ಎನ್ನುವ ಪರಿಕಲ್ಪನೆ ಭೌತಿಕವಾಗಿ ವಾಸ್ತವ ಜಗತ್ತಿನ ವಸ್ತುಗಳ ಚಲನೆಯನ್ನು ವಿವರಿಸಲು ಬಳಕೆಯಾಗುತ್ತದೆ. ಇದರಲ್ಲಿ ನೈಸರ್ಗಿಕ ವಸ್ತುಗಳನ್ನು ಒಂದೊಂದೂ ಪತ್ಯೇಕ ಫ್ರೇಮ್‌ಗಳಲ್ಲಿ ಚಿತ್ರೀಕರಿಸಿ ಏಕಕಾಲದಲ್ಲಿ ಚಲಿಸುವಂತೆ ಮಾಡಿ ಚಲನೆಯ ಭ್ರಮೆಯನ್ನು ಸೃಷ್ಟಿಸುತ್ತಾರೆ. ಸ್ಟಾಪ್‌-ಮೋಶನ್ ಅನಿಮೇಶನ್‌ನಲ್ಲಿ ಹಲವು ವೈವಿಧ್ಯಗಳಿವೆ. ಅನಿಮೇಶನ್‌ ರೂಪಿಸಲು ಬಳಸಿದ ಮಾಧ್ಯಮದ ಹೆಸರೇ ಇದಕ್ಕೆ ಬಂದಿದೆ. ಈ ರೀತಿಯ ಅನಿಮೇಶನ್‌ ಚಿತ್ರಗಳನ್ನು ರೂಪಿಸಲು ವ್ಯಾಪಕವಾಗಿ ಸಾಫ್ಟ್‌ವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.ಕಾಂಪೂಟರ ಕೂಡಾ ಹೆಚ್ಚು ಬಳಕೆಯಾಗುತ್ತಿದೆ

ಅಂದರೆ ನಿರ್ಜೀವ ವಸ್ತುಗಳ ಚಲನೆ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ಬ್ರಿಕ್‌ಫಿಲ್ಮ್‌ ಆಬ್ಜೆಕ್‌ ಅನಿಮೇಶನ್‌ಗೆ ಒಂದು ಉದಾಹರಣೆ. ಇದು ಲೆಗೋ ರೀತಿಯ ಪ್ಲಾಸ್ಟಿಕ್‌ ಬೊಂಬೆಗಳ ನಿರ್ಮಾಣ ಬಳಕೆಯನ್ನು ಸಂಯೋಜಿಸುತ್ತದೆ.ಪ್ಲಾಸ್ಟಿಕ ಹಾಗು ಕಟ್ಟಡ ಬಳಕೆಯ ಇಟ್ಟಿಗೆಯಂತಹ ವಸ್ತುಗಳು ಇದರಲ್ಲಿ ರಂಗ ಸಜ್ಜಿಕೆಯನ್ನು ತಯಾರಿಸಬಹುದಾಗಿದೆ.

    • ಗ್ಯ್ರಾಫಿಕ್‌ ಅನಿಮೇಶನ್‌ ರೇಖಾಚಿತ್ರಗಳ ಅನಿಮೇಶನ್ ಪದ್ಧತಿಯಲ್ಲಿ ನೇರವಾಗಿ ಚಿತ್ರಗಳನ್ನ್ನು ಪಡೆಯಲು (ಫೊಟೊ,ಸುದ್ದಿ ಪತ್ರಿಕೆಗಳ ತುಣುಕು)ಗಳನ್ನು ಉಪಯೋಗಿಸಲಾಗುತ್ತದೆ.ಇದರ ಮೂಲಕ ಸನ್ನಿವೇಶಗಳನ್ನು ಚೌಕಟ್ಟುಗಳಲ್ಲಿ ಹಿಡಿದಿಡಲಾಗುತ್ತದೆ. ದೃಶ್ಯದಲ್ಲಿ ಚಲನೆ ಸೃಷ್ಟಿಸಲು ,ಸ್ಥಿರ ಚಿತ್ರಣ (ಸ್ಟಾಪ್ ಮೋಶನ್‌) ಕ್ಯಾಮೆರಾ ಚಲಿಸಿದಾಗ ಗ್ಯ್ರಾಫಿಕ್‌ ಸ್ಥಿರತೆಯನ್ನು ಕಾಯ್ದುಕೊಳ್ಳುತ್ತದೆ.
  • ಪಿಕ್ಸಿಲೇಶನ್ ಜೀವಂತ ಪಾತ್ರಗಳನ್ನು ಸ್ಟಾಪ್‌ ಮೋಶನ್ ತಂತ್ರದಲ್ಲಿ ಬಳಸುವುದನ್ನು ಸೂಚಿಸುತ್ತದೆ. ಇದರಿಂದ ಅದೃಶ್ಯ ಮತ್ತು ದಿಢೀರ ದರ್ಶನದ ಪರಿಣಾಮ ಹಾಗು ಅಸಂಖ್ಯಾತ ವಾಸ್ತವಿಕ ಅಂಶಗಳನ್ನು ಸೃಷ್ಟಿಸಬಹುದು. ಅಲ್ಲದೆ ಶೂನ್ಯದಿಂದ ಉದ್ಭವಿಸುವ ಮತ್ತು ಇತರೆ ಚಿತ್ರಗಳನ್ನು ಸೃಷ್ಟಿಸುವ ಅವಕಾಶಗಳನ್ನು ಇದು ನೀಡುತ್ತದೆ. ಪಿಕ್ಸಿಲೇಶನ್ ನಿರ್ಮಾಣಕ್ಕೆ ಉದಾಹರಣೆಗಳೆಂದರೆ, ದಿ ಸೀಕ್ರೆಟ್‌ ಅಡ್ವೆಂಚರ್ಸ್ ಆಫ್‌ ಟಾಮ್‌ ಥಂಬ್‌ ಮತ್ತು ಯಾಂಗ್ರಿ ಕಿಡ್‌ ಕಿರುಗಥೆಗಳು.

ಕಂಪ್ಯೂಟರ್‌ ಅನಿಮೇಷನ್‌

Joy & Heron - Animated CGI Spot by Passion Pictures
ಒಂದು ಸಣ್ಣ gif ಅನಿಮೇಶನ್‌

ಕಂಪ್ಯೂಟರ್‌ ಅನಿಮೇಶನ್‌ ವಿಭಿನ್ನ ಬಗೆಯ ತಂತ್ರಗಳನ್ನು ಒಳಗೊಂಡಿರುತ್ತದೆ. ಎಲ್ಲ ತಂತ್ರಗಳಲ್ಲಿರುವ ಏಕರೂಪದ ಅಂಶವೆಂದರೆ, ಅನಿಮೇಶನ್‌ ಇಲ್ಲಿ ಡಿಜಿಟಲ್‌ ರೂಪದಲ್ಲಿ ನಿರ್ಮಾ ಣವಾಗುತ್ತದೆ ಎನ್ನುವುದು.

2D ಅನಿಮೇಶನ್‌

2D ಅನಿಮೇಶನ್‌ನಲ್ಲಿ ಆಕೃತಿಗಳನ್ನು ಕಂಪ್ಯೂಟರ್‌ನಲ್ಲಿ 2D ಬಿಟ್‌ಮ್ಯಾಪ್‌ ಗ್ಯ್ರಾಫಿಕ್ಸ್‌ ಅಥವಾ 2D ವೆಕ್ಟರ‍್ ಗ್ಯ್ರಾಫಿಕ್ಸ್‌ ತಂತ್ರಜ್ಞಾನದ ಸಹಾಯದಿಂದ ಪರಿಷ್ಕರಿಸಿ ಸಿದ್ದಪಡಿಸುತ್ತಾರೆ. ಟ್ರೆಡಿಶನಲ್‌ ಅನಿಮೇಶನಲ್ಲಿ ಸ್ವಯಂ ಕಂಪ್ಯೂಟರೀಕೃತ ರೂಪಗಳನ್ನು ಎಂದರೆ ಟ್ವೀನಿಂಗ್‌, ಮಾರ್ಫಿಂಗ್‌, ಆನಿಯನ್‌ ಸ್ಕಿನ್ನಿಂಗ್‌ ಮತ್ತು ಪ್ರಕ್ಷಿಪ್ತ ರೋಟೋಸ್ಕೋಪಿಂಗ್‌ನಂತಹ ತಂತ್ರಗಳು ಬಳಕೆಯಾಗುತ್ತವೆ. ಉದಾಹರಣಗೆ: ಫೋಸ್ಟರ್ಸ್ ಹೋಮ್‌ ಫಾರ್‌ ಇಮೇಜಿನರಿ ಫ್ರೆಂಡ್ಸ್‌ , ಸ್ಪಾಂಗೆಬಾಬ್‌ ಸ್ಕ್ವೇರ್‌ಪ್ಯಾಂಟ್ಸ್‌(ನಿರ್ದಿಷ್ಟ ಸರಣಿಗಳು ಮಾತ್ರ) , ಡ್ಯಾನ್ನಿ ಫ್ಯಾಂಟಮ್‌ (ನಿರ್ದಿಷ್ಟ ಸಂಧರ್ಭಗಳು ಮಾತ್ರ), ದಿ ಫೇರ್‌ಲಿ ಆಡ್‌ಪೇರೆಂಟ್ಸ್ (ನಿರ್ದಿಷ್ಟ ಸರಣಿಗಳು ಮಾತ್ರ), El Tigre: The Adventures of Manny Rivera

3D ಅನಿಮೇಶನ್‌

3D ಅನಿಮೇಶನ್‌ನಲ್ಲಿ ಡಿಜಿಟಲ್‌ ಆಕೃತಿಗಳನ್ನು ಮಾದರಿಗಳಂತೆ ಅನಿಮೇಟರ್‌ ಪರಿವರ್ತಿಸುತ್ತಾನೆ. ಜಾಲರಿ ಅಥವಾ ಬಲೆಯನ್ನು ನಿಯಂತ್ರಿಸಲು ಬಳಸುವ ಡಿಜಿಟಲ್‌ ಮೂಲರೂಪದ ತೆಳು ರಚನೆಗಳನ್ನು ಇಲ್ಲಿ ಒದಗಿಸಲಾಗಿರುತ್ತದೆ. ಈ ಪ್ರಕ್ರಿಯೆಯನ್ನು ರಿಗ್ಗಿಂಗ್(ಕಣ್ಕಟ್ಟು) ಎಂದು ಕರೆಯುತ್ತಾರೆ. ಇನ್ನೂ ಹಲವು ವಿಭಿನ್ನ ತಂತ್ರಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಉದಾಹರಣೆಗೆ, ಗಣಿತದ ಸಮೀಕರಣಗಳು(ಉದಾ, ಕಾಂತತ್ವ, ಪ್ರಾಯೋಗಿಕ ಅನುಕರಣೆಗಳು), ಕೃತಕವಾದ ತುಪ್ಪಳ ಅಥವಾ ಕೂದಲು, ಬೆಂಕಿ ಮತ್ತು ನೀರಿನ ಪರಿಣಾಮಗಳು ಹಾಗೂ ಚಲನೆಯನ್ನು ನಿಯಂತ್ರಿಸುವ ಈ ಎಲ್ಲ ತಂತ್ರಗಳು 3D ಡೈನಾಮಿಕ್ಸ್‌ ವರ್ಗದಲ್ಲಿ ಬರುತ್ತವೆ. ಹಲವು 3D ಅನಿಮೇಶನ್‌ಗಳು ತುಂಬ ನೈಜವಾಗಿದ್ದು ನಂಬಲರ್ಹವಾಗಿರುತ್ತವೆ. ಇತ್ತೀಚಿನ ಚಲನಚಿತ್ರಗಳಲ್ಲಿ ವಿಷುಯಲ್‌ ಎಫೆಕ್ಟ್ಸ್‌ ಅಥವ ದೃಶ್ಯ ವೈಭವವಗಳಾಗಿ ಬಳಕೆಯಾಗುತ್ತಿವೆ. ಉದಾಹರಣೆಗಳು: ಟಾಯ್‌ ಸ್ಟೋರಿ , ಶ್ರೆಕ್‌ , ಪೊಕೊಯೋ

ಪರಿಭಾಷೆಗಳು

2D ಅನಿಮೇಶನ್‌ ತಂತ್ರಗಳು ಚಿತ್ರಗಳ ಪರಿವರ್ತನೆಯ ಕಡೆ ಹೆಚ್ಚು ಗಮನ ಕೇಂದ್ರೀಕರಿಸಿದರೆ, 3D ಅನಿಮೇಶನ್‌ ತಂತ್ರಗಳು ಸಾಮಾನ್ಯವಾಗಿ ವಾಸ್ತವ ಜಗತ್ತನ್ನು ನಿರ್ಮಿಸಿ ಅದರಲ್ಲಿ ಪಾತ್ರಗಳು ಮತ್ತು ವಸ್ತುಗಳು ಚಲನೆ ಮತ್ತು ಪರಸ್ಪರ ಸಂವಹನ ನಡೆಸುವಂತೆ ಮಾಡುತ್ತವೆ. 3D ಅನಿಮೇಶನ್‌ನಲ್ಲಿ ಚಿತ್ರಗಳು ನೋಡುಗನಿಗೆ ನೈಜವಾಗಿ ಕಾಣುವಂತೆ ಸೃಷ್ಟಿಸಬಹುದು.

ಇತರೆ ಅನಿಮೇಶನ್‌ ತಂತ್ರಗಳು

  • ಡ್ರಾನ್‌ ಆನ್‌ ಫಿಲ್ಮ್‌ ಅನಿಮೇಶನ್‌ : ಈ ತಂತ್ರದಲ್ಲಿ ದೃಶ್ಯಗಳನ್ನು ದಾಖಲಿಸಿ ಫಿಲ್ಮ್‌ಸ್ಟಾಕ್‌ನಲ್ಲಿ ಬರೆದು ಚಲನಚಿತ್ರ ನಿರ್ಮಿಸುತ್ತಾರೆ. ಉದಾಹರಣೆಗೆ, ನಾರ್ಮನ್‌ ಮ್ಯಾಕ್‌ಲಾರೆನ್‌, ಲೆನ್‌ ಲೈ ಮತ್ತು ಸ್ಯ್ಟಾನ್‌ ಬ್ರೇಕೇಜ್‌ ಇವರ ನಿರ್ಮಾಣದ ಚಿತ್ರಗಳು.
  • ಪೈಂಟ್‌-ಆನ್‌ -ಗ್ಲಾಸ್‌ ಅನಿಮೇಶನ್‌ : ಗಾಜಿನ ಮೇಲೆ ಬಿಡಿಸುವ, ಬಹುಕಾಲ ಮಿರುಗುವ ಅಥವಾ ಹಸಿಯಾಗಿರುವ ತೈಲವರ್ಣ ಚಿತ್ರಗಳ ಪರಿವರ್ತನೆ ಮೂಲಕ ಅನಿಮೇಶನ್ ಚಿತ್ರಗಳ ನಿರ್ಮಿಸಲು ಈ ತಂತ್ರ ಬಳಕೆಯಾಗುತ್ತದೆ.
  • ಗುಂಡು ಸೂಜಿ ಬಳಕೆ ಮಾದರಿಯ ಅನಿಮೇಶನನಲ್ಲಿ ಚಿತ್ರಗಳನ್ನು ಪಿನ್ ಗಳ ಸಹಾಯದಿಂದ ಪರದೆಯ ಮೇಲೆ ಸೃಷ್ಟಿಸಲಾಗುತ್ತದೆ ಇದರ ಚಲನೆಯನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತದೆ. ಪರದೆಯ ಬದಿಯಿಂದ ಬೆಳಕು ಹಾಯಿಸಿದಾಗ ಪಿನ್‌ಗಳು ನೆರಳನ್ನು ಸೃಷ್ಟಿಸಿ ಚಲನೆಯ ಅನುಭವವನ್ನು ಉಂಟುಮಾಡುತ್ತವೆ. ಟ್ರೆಡಿಷನಲ್‌ ಸೆಲ್‌ ಅನಿಮೇಶನ್‌ನಲ್ಲಿ ಸೃಷ್ಟಿಸಲು ಕಷ್ಟಸಾಧ್ಯವಾದ ಅನಿಮೇಶನ್‌ ಪರಿಣಾಮಗಳ ಸರಣಿಯನ್ನು ಬಳಸಬಹುದು. ರೇಖಾ ನಕ್ಷೆಗಳಲ್ಲಿ ಸಾಂಪ್ರದಾಯಕ ಶೈಲಿಯನ್ನು ಬಳಸಿ ಜಟಿಲ ಚಿತ್ರಗಳ ರಚನೆಯನ್ನು ಸಾಧ್ಯಗೊಳಿಸಲಾಗುತ್ತದೆ.
  • ಸ್ಯಾಂಡ್ ಅನಿಮೇಶನ್‌ : ಈ ತಂತ್ರಗಾರಿಕೆಯಲ್ಲಿ ಗಾಜಿನ ಮೇಲೆ ಸಮಪ್ರಮಾಣದಲ್ಲಿ ಬೆಳಕು ಹಾಯಿಸಲಾಗುತ್ತದೆ. ಗಾಜಿನ ಆಕೃತಿಯ ಸುತ್ತ ಮರಳಿನ ಕಣಗಳ ಚಲನೆ ಗೋಚರವಾಗುವಂತೆ ಮಾಡಲಾಗುತ್ತದೆ . ಹೀಗೆ ಅನಿಮೇಶನ್‌ ಚಿತ್ರದ ಪ್ರತಿ ಚೌಕಟ್ಟುಗಳನ್ನು ಸೃಷ್ಟಿಸಲಾಗುತ್ತದೆ. ಇದರಿಂದ ಬೆಳಕಿನ ವೈದೃಶ್ಯ ಏರ್ಪಡುತ್ತದೆ. ಈ ಚಿತ್ರವನ್ನು ಅನಿಮೇಟ್‌ ಮಾಡಿದಾಗ ಆಕರ್ಷಕ ಪರಿಣಾಮಗಳು ಸೃಷ್ಟಿಯಾಗುತ್ತವೆ.
  • ಫ್ಲಿಪ್‌ ಬುಕ್‌ : ಫ್ಲಿಪ್‌ ಬುಕ್‌ (ಇದಕ್ಕೆ ಬ್ರಿಟಿಷ್‌ ಇಂಗ್ಷಿಷ್‌ನಲ್ಲಿ ಫ್ಲಿಕ್‌ ಬುಕ್ ಎಂಬ ಹೆಸರೂ ಇದೆ.)ಸರಣಿ ಚಿತ್ರಗಳ ಹೊಂದಿರುವ ಪುಸ್ತಕ. ಪುಟಗಳು ಒಂದಾದ ನಂತರ ಒಂದು ವೇಗವಾಗಿ ತೆರೆದಂತೆ ಅವು ಅನಿಮೇಟ್‌ಆದಂತೆ ಭಾಸವಾಗುತ್ತದೆ. ಅಥವ ಚಲಿಸಿದಂತಹ ಅನುಭವ ನೀಡುತ್ತವೆ.

ಇವನ್ನು ಸಾಮಾನ್ಯವಾಗಿ ಮಕ್ಕಳಿಗಾಗಿ ಸಚಿತ್ರ ಪುಸ್ತಕಗಳಾಗಿ ಬಳಸುತ್ತಾರೆ. ಇವುಗಳನ್ನು ವಯಸ್ಕರೂ ಗಮನಿಸಬಹುದು. ಇಲ್ಲಿ ಚಿತ್ರಗಳಿಗೆ ಬದಲಾಗಿ ಪೋಟೋ ಅಥವಾ ಛಾಯಾಚಿತ್ರಗಳಿರುತ್ತವೆ. ಫ್ಲಿಪ್‌ ಬುಕ್‌ಗಳು ಪ್ರತ್ಯೇಕ ಪುಸ್ತಕಗಳಲ್ಲ, ಒಂದು ಸಾಮಾನ್ಯ ಪುಸ್ತಕ ಅಥವಾ ನಿಯತಕಾಲಿಕದಲ್ಲೂ ಇದನ್ನೊಂದು ವಿಶೇಷವೆಂಬಂತೆ ಪುಟದ ಮೂಲೆಗಳಲ್ಲಿ ಬಳಸಬಹುದು. ಡಿಜಿಟಲ್‌ ವಿಡಿಯೋಗಳನ್ನು ಅಭಿರುಚಿಗೆ ತಕ್ಕಂತೆ ಫ್ಲಿಪ್‌ ಬುಕ್‌ಗಳಾಗಿ ಪರಿವರ್ತಿಸಲು ಹಲವು ಸಾಫ್ಟ್‌ವೇ‌ರ್‌ ಮತ್ತು ವೆಬ್‌ಸೈಟ್‌ಗಳು ಲಭ್ಯವಿವೆ.

ಇತರೆ ತಂತ್ರಗಳು ಮತ್ತು ಅಳವಡಿಕೆಗಳು

ಇದನ್ನೂ ನೋಡಿರಿ

ಆಕರಗಳು

  1. CHTHO ಪ್ರೊಡ್ಯೂಸಸ್‌ ಡಾಕುಮೆಂಟರಿ ಆನ್‌ ವರ್ಲ್ಡ್ಸ್ ಓಲ್ಡೆಸ್ಟ್‌ ಅನಿಮೇಶನ್‌ . ಟೆಹ್ರಾನ್ ಟೈಮ್ಸ್‌ . 04-03-2008.
  2. ದಿ ವಿಷಯಲ್‌ ಲಿಂಗ್ವಿಸ್ಟ್‌: ಬರ್ನ್ಟ್ ಸಿಟಿ ಅನಿಮೇಶನ್‌ VL
  3. Ronan, Colin A (1985). The Shorter Science and Civilisation in China: Volume 2. Cambridge University Press. ISBN 0-521-31536-0. {{cite book}}: Unknown parameter |coauthors= ignored (|author= suggested) (help)
  4. Dulac, Nicolas (2004). "Heads or Tails: The Emergence of a New Cultural Series, from the Phenakisticope to the Cinematograph". Invisible Culture: A Journal for Visual Culture. The University of Rochester. Retrieved 2006-05-13. {{cite web}}: Unknown parameter |coauthors= ignored (|author= suggested) (help)
  5. ಹಿಸ್ಟರಿ ಆಫ್‌ ಮೀಡಿಯಾ , ಮಿನ್ನೆಸೋಟ ವಿಶ್ವವಿದ್ಯಾಲಯ, ಮೇ 13 2006ರಂದು ಪ್ರವೇಶಿಸಲಾಗಿದೆ.
  6. "Zoetrope". Laura Hayes and John Howard Wileman Exhibit of Optical Toys. The North Carolina School of Science and Mathematics. 2005. Retrieved 2006-05-13.
  7. ಡೈಲಿಮೋಷನ್‌ - ಫ್ಯಾಂಟಸ್ಮಾಗೋರಿ - ಯೂನೆ ವಿಡಿಯೋ ಸಿನೆಮಾ
  • ಬಾಲ್, R., ಬೆಕ್‌, J., ಡಿಮಾಟ್‌ R., ಡೆನೆರೋಫ್‌, H., ಜೆರ್‌ಸ್ಟೀನ್, D., ಗ್ಲ್ಯಾಡ್‌ಸ್ಟೋನ್‌, F., ನಾಟ್‌, T., ಲೀಲ್‌, A., ಮೇಸ್ತ್ರಿ, G., ಮ್ಯಾಲೋರಿ, M., ಮೇಯರ್‌ಸನ್‌, M., ಮ್ಯಾಕ್‌ಕ್ಯ್ರಾಕೆನ್‌, H., ಮ್ಯಾಕ್‌ಗ್ವೈರ್‌, D., ನಾಜೆಲ್, J., ಪ್ಯಾಟರ್ನ್, F., ಪಾಯಿಂಟರ್‌, R., ವೆಬ್‌, P., ರಾಬಿನ್‌ಸನ್‌, C., ರ್ಯಾನ್‌, W., ಸ್ಕಾಟ್‌, K., ಸಿಂಡರ್‌, A. & ವೆಬ್‌, G. (2004) ಅನಿಮೇಶನ್‌ ಕಲೆ: ಪೆನ್ಸಿಲ್‌ನಿಂದ ಪಿಕ್ಸೆಲ್‌ವರೆಗೆ, ಕಾರ್ಟೂನ್‌ ಇತಿಹಾಸ, ಅನೀಮ್‌ & CGI . ಫುಲ್‌ಹ್ಯಾಮ್‌ ಲಂಡನ್‌ .: ಫ್ಲೇಮ್‌ ಥ್ರೀ ಪಬ್ಲಿಷಿಂಗ್‌. ISBN 1-84451-140-5
  • ಕ್ಯ್ರಾಫ್ಟನ್‌, ಡೊನಾಲ್ಡ್‌ (1982). ಬಿಫೋರ‍್ ಮಿಕ್ಕಿ . ಕೇಂಬ್ರಿಡ್ಜ್‌, ಮಸ್ಸಾಚುಸೆಟ್ಸ್‌.: ದಿ MIT ಪ್ರೆಸ್‌. ISBN 0-262-03083-7
  • ಸೋಲೋಮನ್‌, ಚಾರ್ಲ್ಸ್ (1989). ಎನ್‌ಚಾಂಟೆಡ್‌ ಡ್ರಾಯಿಂಗ್ಸ್‌: ದಿ ಹಿಸ್ಟರಿ ಆಫ್‌ ಅನಿಮೇಶನ್‌ . ನ್ಯೂಯಾರ್ಕ್‌.: ರ್ಯಾಂಡಮ್‌ ಹೌಸ್‌, ಇಂಕ್. ISBN 0-394-54684-9

ಹೆಚ್ಚಿನ ಓದಿಗಾಗಿ

ಹೊರಗಿನ ಕೊಂಡಿಗಳು