ಮತ್ಸ್ಯಾವತಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Removing link(s) to "Mace (club)": Removing links to deleted page Mace (club). (TW)
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು: ೧ ನೇ ಸಾಲು:
{{Infobox deity<!--Wikipedia:WikiProject Hindu mythology-->
{{Infobox deity<!--Wikipedia:WikiProject Hindu mythology-->
| type = Hindu
| type = ಹಿಂದೂ
| Image =Matsya avatar.jpg
| Image =Matsya avatar.jpg
| Caption =
| Caption =

೧೨:೩೫, ೧೩ ಸೆಪ್ಟೆಂಬರ್ ೨೦೨೦ ನಂತೆ ಪರಿಷ್ಕರಣೆ

ಮತ್ಸ್ಯಾವತಾರ
ದೇವನಾಗರಿमत्स्य
ಸಂಲಗ್ನತೆAvatar of Vishnu
ಆಯುಧChakra and Mace
Matsya preparing to slay the demon.
ಚಿತ್ರ:The fish avatara of Vishnu saves Manu during the great deluge.jpg
Matsya pulling Manu's boat
Matsya pulls Manu's boat after having defeated the demon.
Matsya, Central India, 9th - 10th century. British Museum.


ಮತ್ಸ್ಯಾವತಾರ ಮೀನಿನ ರೂಪದಲ್ಲಿ ಹಿಂದೂ ದೇವತೆ ವಿಷ್ಣುವಿನ ಅವತಾರ ಮತ್ತು ಇದು ಕೂರ್ಮಾವತಾರದ ಮೊದಲು ಬರುತ್ತದೆ. ವಿಷ್ಣುವಿನ ದಶಾವತಾರ (ಹತ್ತು ಅವತಾರ)ಗಳಲ್ಲಿ ಮೊದಲನೆಯದು. ಮತ್ಸ್ಯಾವತಾರವು ಮೊದಲ ಮಾನವನಾದ ವೈವಸ್ವತ ಮನುವನ್ನು ಒಂದು ಭಾರಿ ಪ್ರಳಯದಿಂದ ಕಾಪಾಡಿದ ಜೀವಿ ಎಂದು ವಿವರಿಸಲಾಗುತ್ತದೆ. ಮತ್ಸ್ಯಾವತಾರವನ್ನು ಒಂದು ದೈತ್ಯ ಮೀನಾಗಿ ಚಿತ್ರಿಸಬಹುದು, ಅಥವಾ ಮಾನವರೂಪಿಯಾಗಿ ಒಂದು ಮೀನಿನ ಹಿಂದಿನ ಅರ್ಧಕ್ಕೆ ಸಂಪರ್ಕ ಹೊಂದಿದ ಒಂದು ಮಾನವ ಮುಂಡವಾಗಿ ಚಿತ್ರಿಸಬಹುದು.

ಶತಪಥ ಬ್ರಾಹ್ಮಣದಲ್ಲಿ ಮತ್ಸ್ಯಾವತಾರದ ಸೂಚನೆ ಸಿಗುತ್ತದೆ. ಪುರಾಣಗಳಲ್ಲಿ ಈ ಅವತಾರ ಕುರಿತಂತೆ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಪ್ರಳಯದಲ್ಲಿ ಸಿಕ್ಕಿಬಿದ್ದ ವೈವಸ್ವತ ಮನುವನ್ನು ಉದ್ಧರಿಸುವುದೇ ಈ ಅವತಾರದ ಉದ್ದೇಶ. ಪ್ರಪಂಚವೆಲ್ಲ ನೀರು ತುಂಬಿ ಎಲ್ಲವೂ ಕೊಚ್ಚಿಕೊಂಡು ಹೋಗುತ್ತಿರಲು ಮನು ವೇದಗಳನ್ನೂ ಪ್ರಾಣಿಗಳನ್ನೂ ಸಸ್ಯಗಳ ಬೀಜಗಳನ್ನೂ ಶೇಖರಿಸಿ ಅವನ್ನು ಕಾಪಾಡಬೇಕೆಂಬ ಉದ್ದೇಶದಿಂದ ಹಡಗಿನಲ್ಲಿ ರಕ್ಷಿಸಿಟ್ಟ. ವಿಷ್ಣು ಮೀನಿನ ರೂಪದಲ್ಲಿ ಬಂದು ಹಡಗನ್ನು ತನ್ನ ಕೋರೆಹಲ್ಲಿಗೆ ಕಟ್ಟುವಂತೆ ಮನುವಿಗೆ ಹೇಳಲು ಮನು ಹಾಗೆಯೇ ಮಾಡಿದ. ಪ್ರವಾಹಕ್ಕೆ ನುಚ್ಚು ನೂರಾಗುವಂತಿದ್ದ ಹಡಗಿಗೆ ರಕ್ಷಣೆ ಸಿಕ್ಕಿತು. ಆದರೆ ಹಯಗ್ರೀವನೆಂಬ ರಾಕ್ಷಸ ಬಂದು ಮನುವಿಗೆ ತಿಳಿಯದಂತೆ ವೇದಗಳನ್ನು ಅಪಹರಿಸಿ ಸಮುದ್ರತಳಕ್ಕೆ ಕೊಂಡೊಯ್ದ. ಮನು ವಿಷ್ಣುವಿಗೆ ಮೊರೆಯಿಡಲು ಮೀನಿನ ರೂಪದಲ್ಲಿದ್ದ ವಿಷ್ಣು ಹಯಗ್ರೀವನನ್ನು ಕೊಂದು ವೇದಗಳನ್ನು ತಂದು ಮನುವಿಗೆ ನೀಡಿದ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: