ವಿದ್ಯಾ ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿದ್ಯಾ ಮೂರ್ತಿ, ಒಬ್ಬ ಭಾರತೀಯ ಚಲನಚಿತ್ರ ನಟಿ. ಕನ್ನಡ ಭಾಷೆಯ ಕಿರುತೆರೆಯಲ್ಲಿ ನಟಿಯಾಗಿದ್ದಾರೆ. ಅವರ ಪ್ರಮುಖ ಧಾರಾವಾಹಿಗಳು : ಮಾಯಾ ಮೃಗ, ಬದುಕು, ಮುಕ್ತ ಮುಕ್ತ, ಕೃಷ್ಣ ತುಳಸಿ, ಪಾಪು ಪಾಂಡು, ಮತ್ತು ಇತ್ತೀಚಿಗೆ ಟಿ.ಏನ್.ಸೀತಾರಾಂ ನಿರ್ದೇಶಿಸುತ್ತಿರುವ ಮಗಳು ಜಾನಕಿಯಲ್ಲಿ ದೇವಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಧಾರವಾಹಿ 'ಕಲರ್ಸ್ ಸೂಪರ್ ಚಾನೆಲ್' ವತಿಯಿಂದ ಪ್ರಸಾರವಾಗುತ್ತಿದೆ. ವಿದ್ಯಾ ಮೂರ್ತಿಯವರು, ಈಗಾಗಲೇ ಸುಮಾರು ೩೫ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಸುಮಾರು ೧ ಡಝನ್ ಗೂ ಹೆಚ್ಚು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ.[೧]

ಜನನ,ವಿದ್ಯಾಭ್ಯಾಸ[ಬದಲಾಯಿಸಿ]

'ವಿದ್ಯಾರವರು', ಕೊಡಗು ಜಿಲ್ಲೆಯ ಪರ್ವತ ಧಾಮ,ಮಡಕೇರಿಯಲ್ಲಿ ಜನಿಸಿದರು. ಅವರ ತಂದೆ ಮಡಕೇರಿಯಲ್ಲಿ ನೌಕರಿಯಲ್ಲಿದ್ದರು. ತಂದೆಯವರು ಹಾಸನ ಜಿಲ್ಲೆಯ ಮಾವಿನಕೆರೆ ಗ್ರಾಮದವರು. ವಿದ್ಯಾರವರು, ಹೆರಗು ನರಸಿಂಹ ಮೂರ್ತಿಯವರನ್ನು ಮದುವೆಯಾದರು.ಈ ದಂಪತಿಗಳಿಗೆ ಒಬ್ಬ ಮಗನಿದ್ದಾನೆ. ವಿದ್ಯಾರವರ ಸೋದರ, ಜಿ.ಕೆ.ಜಗದೀಶ್ ವಿದ್ಯಾರವರಿಗೆ ಆದರ್ಶಪ್ರಾಯರು. ಜಗದೀಶ್ ಭರತನಾಟ್ಯ ಪ್ರವೀಣರಲ್ಲದೆ ನಟನಾ ಸಾಮರ್ಥ್ಯವನ್ನೂ ಹೊಂದಿದ್ದರು. ವಿದ್ಯಾ, ಕನ್ನಡ ಸಾಹಿತ್ಯದಲ್ಲಿ ಆಸಕ್ತರು. ಎಕೊನೊಮಿಕ್ಸ್, ಮತ್ತು ಮನಶ್ಯಾಸ್ತ್ರದ ವಿದ್ಯಾರ್ಥಿನಿ. ಲೇಖಕಿಯರ ಬಳಗದಲ್ಲಿ ಸಕ್ರಿಯರಾಗಿ ಕೆಲಸಮಾಡುತ್ತಿದ್ದರು. ಕವನಗಳು ಮತ್ತು ಚಿಕ್ಕ ಕಥೆಗಳ ಲೇಖಕಿಯಾಗಿದ್ದರು.

ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ[ಬದಲಾಯಿಸಿ]

ವಿದ್ಯಾರವರು ತಮ್ಮ ತಮ್ಮ ಶಾಲಾ ಕಾಲೇಜಿನ ದಿನಗಳಿಂದಲೇ ಅಭಿನಯವನ್ನು ಮಾಡುತ್ತಾ ಬಂದಿದ್ದಾರೆ. (NMKRV)ಎನ್.ಎಂ.ಕೆ.ಆರ್.ವಿ.ಕಾಲೇಜಿನ ಪ್ರಥಮ ಬ್ಯಾಚಿನ ವಿದ್ಯಾರ್ಥಿನಿಯಾಗಿದ್ದರು. ಆಗಿನ ಪ್ರಾಂಶುಪಾಲೆ ಸಿ.ಏನ್.ಮಂಗಳರವರು ವಿದ್ಯಾರವರನ್ನು ತಮ್ಮ ಕಾಲೇಜಿಗೆ ಆರಿಸಿಕೊಂಡರು. ಡಾ.ಮಂಗಳಾರವರು ಅಭಿನಯ ಕಲೆಯ ಪ್ರತಿಭೆಯ ಬಗ್ಗೆ ಕೇಳಿ ಪ್ರಭಾವಿತರಾಗಿದ್ದರು. ಆದರೆ ವಿದ್ಯಾರವರ ಪರಿವಾರದವರು ಅಭಿನಯಕಲೆಯ ಆಯ್ಕೆಯ ಬಗ್ಗೆ ಸಮ್ಮತಿ ಕೊಡಲಿಲ್ಲ. ಅದೇ ರೀತಿ ೧೯೭೮ ರಲ್ಲಿ ಮದುವೆಯಾದ ಬಳಿಕ ಅವರ ಗಂಡನ ಮನೆಯವರದೂ ಪ್ರೋತ್ಸಾಹವಿರಲಿಲ್ಲ. ಸುಮಾರು ೧೫ ವರ್ಷ ವಿದ್ಯಾಮೂರ್ತಿಯವರು ಸಿನಿಮಾರಂಗದ ಕಡೆ ತಲೆಹಾಕಲಿಲ್ಲ.[೨] ತಮ್ಮ ಪ್ರಥಮ ಕನ್ನಡ ಚಿತ್ರ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಬರೆದ ಊರ್ವಶಿ ಚಲನ ಚಿತ್ರದಲ್ಲಿ ಅಭಿನಯಿಸಿದರು.

ಮಗಳು ಜಾನಕಿ ಧಾರಾವಾಹಿಯಲ್ಲಿ[ಬದಲಾಯಿಸಿ]

ಈಗ ಕರ್ನಾಟಕದಲ್ಲಿ ಟಿ.ಎನ್.ಸೀತಾರಾಂ ರವರು ನಿರ್ದೇಶಿಸುತ್ತಿರುವ "ಮಗಳು ಜಾನಕಿ" ಸೀರಿಯಲ್ ನಲ್ಲಿ "ದೇವಕಿ" ಎಂಬ ತಾಯಿಯ ಪಾತ್ರವನ್ನು ಅಭಿನಯಿಸುತ್ತಿದ್ದಾರೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. chiloka, ವಿದ್ಯಾಮೂರ್ತಿ
  2. Along exile, but not exit from acting for Vidya. TOI, G.S.Kumar, TNN,May, 7th, 2002