ವಿಜಯ್ ಹಜಾರೆ ಟ್ರೋಫಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ್ ಹಜಾರೆ ಟ್ರೋಫಿ
ದೇಶಗಳು ಭಾರತ
ನಿರ್ವಾಹಣೆಬಿಸಿಸಿಐ
ಫಾರ್ಮ್ಯಾಟ್List A cricket
ಮೊದಲ ಪಂದ್ಯಾವಳಿ2002–03
ಕೊನೆಯ ಪಂದ್ಯಾವಳಿ2017–18
ಟೂರ್ನಮೆಂಟ್ ರೂಪRound robin and Playoff
ತಂಡಗಳ ಸಂಖ್ಯೆ27
ಪ್ರಸ್ತುತ ಚಾಂಪಿಯನ್ಕರ್ನಾಟಕ (3rd title)
ಅತ್ಯಂತ ಯಶಸ್ವಿತಮಿಳುನಾಡು (5 titles)
ವೆಬ್ಸೈಟ್BCCI
en:2017–18 Vijay Hazare Trophy

ವಿಜಯ್ ಹಜಾರೆ ಟ್ರೋಫಿ (ರಣಜಿ ಒನ್ ಡೇ ಟ್ರೋಫಿ ) 2002-03ರಲ್ಲಿ ರಣಜಿ ಟ್ರೋಫಿ ರಾಜ್ಯ ತಂಡಗಳು ಒಳಗೊಂಡ ಸೀಮಿತ ಓವರುಗಳ ಕ್ರಿಕೆಟ್ ಸ್ಪರ್ಧೆಯಾಗಿ ಪ್ರಾರಂಭಿಸಲಾಯಿತು.ಪ್ರಸಿದ್ಧ ಭಾರತೀಯ ಕ್ರಿಕೆಟಿಗ ವಿಜಯ್‌ ಹಜಾರೆ ಅವರ ಹೆಸರನ್ನು ಇಡಲಾಗಿದೆ.ತಮಿಳುನಾಡು 5 ಬಾರಿ ಟ್ರೋಫಿಯನ್ನು ಗೆದ್ದಿದೆ.2017-18ರಲ್ಲಿ ಕರ್ನಾಟಕವು ಪ್ರಸಕ್ತ ಟ್ರೋಫಿಯ ಚಾಂಪಿಯನ್ ಆಗಿದ್ದು, ಫೈನಲ್ನಲ್ಲಿ ಸೌರಾಷ್ಟ್ರವನ್ನು ಸೋಲಿಸುವ ಮೂಲಕ 3 ನೇ ಪ್ರಶಸ್ತಿಯನ್ನು ಗೆದ್ದಿದೆ .[೧] [೨]

ಸ್ವರೂಪ[ಬದಲಾಯಿಸಿ]

27 ರಣಜಿ ತಂಡಗಳನ್ನು 5 ಝೋನಲ್ ಗುಂಪುಗಳಾಗಿ ವಿಭಜಿಸಲಾಗಿದೆ:

ವಲಯ ತಂಡ ತಂಡಗಳ ಸಂಖ್ಯೆ
ಸೆಂಟ್ರಲ್ ಮಧ್ಯ ಮಧ್ಯ ಪ್ರದೇಶ, ರೈಲ್ವೆ, , ರಾಜಸ್ಥಾನ, , ಉತ್ತರ ಪ್ರದೇಶ, ವಿದರ್ಭ 5
ಈಸ್ಟ್ ಪೂರ್ವ ಅಸ್ಸಾಂ,ಬಂಗಾಳ,ಜಾರ್ಖಂಡ್, ಒಡಿಶಾ,ತ್ರಿಪುರ 5
ನಾರ್ತ್ ಉತ್ತರ ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್,ಸರ್ವಿಸಸ್ 6
ದಕ್ಷಿಣ ಆಂಧ್ರಪ್ರದೇಶ, ಗೋವಾ, ಹೈದರಾಬಾದ್, ಕರ್ನಾಟಕ, ಕೇರಳ, ತಮಿಳುನಾಡು 6
ಪಶ್ಚಿಮ ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ, ಸೌರಾಷ್ಟ್ರ 5

ಒಮ್ಮೆ ಗುಂಪಿನಲ್ಲಿ ಪ್ರತಿ ತಂಡ ಆಡಿದ ನಂತರ, ಐದು ವಿಜೇತರು ಮತ್ತು ಅತ್ಯುತ್ತಮ ಪ್ರದರ್ಶನ ತೋರಿದ ರನ್ನರ್-ಅಪ್ ಕ್ವಾರ್ಟರ್ ಫೈನಲ್ ಹಂತಕ್ಕೆ ನೇರವಾಗಿ ಅರ್ಹತೆ ಪಡೆದರೆ, ನಾಲ್ಕು ಇತರ ರನ್ನರ್-ಅಪ್ಗಳು ಪ್ರಾಥಮಿಕ ಕ್ವಾರ್ಟರ್ ಫೈನಲ್ನಲ್ಲಿ ಆಡುತ್ತವೆ. ಪ್ರಿ-ಕ್ವಾರ್ಟರ್ ಫೈನಲ್ಸ್ನ 2 ವಿಜೇತರು ಉಳಿದ 6 ತಂಡಗಳನ್ನು ಕ್ವಾರ್ಟರ್ ಫೈನಲ್ ಹಂತದಲ್ಲಿ ಸೇರುತ್ತವೆ.

2015-16ರ ಅವಧಿಯಿಂದ, ಝೋನಲ್ ಗುಂಪುಗಳನ್ನು 7 ತಂಡಗಳ 4 ಗುಂಪುಗಳಾಗಿ ಬದಲಾಯಿಸಲಾಯಿತು. ಹಿಂದಿನ 3 ಋತುಗಳಲ್ಲಿನ ಸರಾಸರಿ ಅಂಕಗಳ ಆಧಾರದ ಮೇಲೆ ತಂಡಗಳನ್ನು ವರ್ಗೀಕರಿಸಲಾಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. "Agarwal's 90 leads Karnataka to third Vijay Hazare title in five years". ESPNcricinfo. 27 February 2018. Retrieved 27 February 2018.
  2. "ಮಾಯಾಂಕ್ ಸ್ಫೋಟಕ ಬ್ಯಾಟಿಂಗ್, ವಿಜಯ್ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ". www.kannadaprabha.com.[ಶಾಶ್ವತವಾಗಿ ಮಡಿದ ಕೊಂಡಿ]