ವರದರಾಜನ್ ಟಿ ಆರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವರದರಾಜನ್ ಟಿ ಆರ್‍ ಇಂದ ಪುನರ್ನಿರ್ದೇಶಿತ)

ವರದರಾಜನ್ ಟಿ ಆರ್ ರವರು ಕಲಾವಿದರು, ಸಮಾಜ ಸೇವಕರು ಹಾಗೂ ಕನ್ನಡ, ಆಂಗ್ಲ ಮತ್ತು ಹಿಂದಿಯಲ್ಲಿ ಭಾಷೆಯಲ್ಲಿ ಬರೆಯುವವರಾಗಿದ್ದಾರೆ. ಇವರು ಹಲವು ಸಾಹಿತ್ಯ ಸಮ್ಮೇಳನಗಳು ಹಾಗೂ ಆಕಾಶವಾಣಿ ಕಾರ್‍ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ನಾಟಕಕಾರರಾಗಿ ಹಲವಾರು ನಾಟಕಗಳನ್ನು ರಚಿಸಿದ್ದಾರೆ, ನಿರ್‍ಧೇಶಿಸಿದ್ದಾರೆ ಹಾಗೂ ನಟಿಸಿದ್ದಾರೆ.

ವರದರಾಜನ್ ಟಿ ಆರ್

ವಿದ್ಯಾಭ್ಯಾಸ[ಬದಲಾಯಿಸಿ]

ಬಿ.ಎಸ್ಸಿ, ಡಿಪ್ಲಮೋ (ಸಮಾಜ ಸೇವೆ), ಎಂ.ಎ (ಅರ್‍ಥಶಾಸ್ತ್ರ), ಸಿ.ಏ., ಐ.ಐ.ಬಿ., ಸಂಸ್ಕೃತ ಸಾಹಿತ್ಯ, ಹಿಂದಿ ಪ್ರಾಜ್ಞ, ರೇಕಿ ಚಿಕಿತ್ಸಾ ಪದ್ಧತಿಯಲ್ಲಿ ‘ರೇಕಿ ಮಾಸ್ಟರ್‍’ ಪದವಿ ಹಾಗೂ ‘ಟೀಚರ್‍ ಶಿಪ್’ ಪದವಿ

ವೃತ್ತಿ[ಬದಲಾಯಿಸಿ]

ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ, ವ್ಯವಸ್ಥಾಪಕರಾಗಿ ಹಾಗೂ ತನಿಖಾಧಿಕಾರಿಯಾಗಿ ೩೮ ವರ್‍ಷಗಳ ಸೇವೆ. ಅದಕ್ಕೂ ಮೊದಲು ರಾಷ್ಟ್ರೀಯ ವಿದ್ಯಾಲಯ ಬಾಲಕರ ಪ್ರೌಢಶಾಲೆಯಲ್ಲಿ ಸಂಸ್ಕೃತ ಶಿಕ್ಷಕರಾಗಿ ಸೇವೆ.

ಪ್ರವೃತ್ತಿ[ಬದಲಾಯಿಸಿ]

ಲೇಖಕರಾಗಿ ಕನ್ನಡ, ಆಂಗ್ಲ ಮತ್ತು ಹಿಂದಿ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ್ದಾರೆ.

ಸಮಾಜ ಸೇವಕರಾಗಿ ಅನಾಥಾಲಯಗಳಲ್ಲಿ, ಅಂಧರ ಶಾಲೆಗಳಲ್ಲಿ, ವೃದ್ಧಾಶ್ರಮಗಳಲ್ಲಿ, ಸರ್‍ಕಾರಿ ಹಾಗೂ ನಗರ ಸಭೆಯ ಶಾಲೆಗಳಲ್ಲಿ ಸಮಾಜ ಸೇವೆ ಮಾಡಿದ್ದಾರೆ.

ಲಯನ್ಸ್ ಕ್ಲಬ್ ಅಂತರ ರಾಷ್ಟ್ರೀಯ ಸಂಸ್ಥೆಯ ಮೂಲಕ ಸಮಾಜಸೇವೆ. ಲಯನ್ಸ್ ಕ್ಲಬ್, ಸಾರಕ್ಕಿ, ಬೆಂಗಳೂರು ಶಾಲೆಯಲ್ಲಿ ಕಾರ್‍ಯದರ್‍ಶಿಯಾಗಿ ಉಪಾಧ್ಯಕ್ಷರಾಗಿ ಸೇವೆ.

ಹೋಂ ಗಾರ್‍ಡ್ಸ ಹಾಗೂ ಸಿವಿಲ್ ಡಿಫೆನ್ಸ ವಿಭಾಗದಲ್ಲಿ ತರಬೇತಿ, ಪ್ರಥಮ ಚಿಕಿತ್ಸೆ, ಅಗ್ನಿಶಾಮಕ, ಸಂಪರ್‍ಕ ಮಾಧ್ಯಮ ಸೇವೆಗಳು, ರಕ್ಷಣಾ ಸೇವೆಗಳು ಹಾಗೂ ಸ್ವಯಂ ಸೇವಕ ಸೇವೆಗಳಲ್ಲಿ ತರಬೇತಿ ಪಡೆದಿದ್ದಾರೆ.

ಕಲಾವಿದರಾಗಿ ರೇಖಾ ಚಿತ್ರಗಳನ್ನು, ಜಲವರ್‍ಣ, ತೈಲವರ್‍ಣ ಚಿತ್ರ ರಚನೆ ಮಾಡಿದ್ದಾರೆ. ಮಣ್ಣಿನಲ್ಲಿ ಗಣೇಶ, ನರಸಿಂಹ, ಆನೆ, ಹಂಸ ಮತ್ತಿತರ ಮೂರ್‍ತಿಗಳನ್ನು ತಯಾರಿಸಿದ್ದಾರೆ. ಕೊಬ್ಬರಿಯಲ್ಲಿ ಆನೆ, ಲಕ್ಷ್ಮೀ, ಗಣೇಶ ಮುಂತಾದ ಕಲಾಕೃತಿಗಳನ್ನು ರಚಿಸಿದ್ದಾರೆ.

ಹಸಿರು ಕ್ರಾಂತಿ, ಅರಣ್ಯ ಸಂರಕ್ಷಣೆ ಮತ್ತು ಗಿಡನೆಡಿ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಗಿಡನೆಡವ ಹಾಗೂ ಸಸಿಗಳ ವಿತರಣಾ ಕಾರ್‍ಯಕ್ರಮದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದಾರೆ.

"ರಾಷ್ಟ್ರೀಯ ಸಾಕ್ಷರತಾ ಮಿಷನ್"ನಲ್ಲಿ ತರಬೇತಿ ಪಡೆದು ಸಾಕ್ಷರತಾ ಪ್ರಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ನಗರಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತಾ ಕಾರ್‍ಯಕ್ರಮಗಳನ್ನು ನಡೆಸಿದ್ದಾರೆ.

ರಕ್ತದಾನಿಯಾಗಿ ಅರವತ್ತಕ್ಕೂ ಹೆಚ್ಚುಸಲ ರಕ್ತದಾನ ಮಾಡಿ ಹಲವು ರೋಗಿಗಳ ಜೀವ ಉಳಿಸಿದ್ದಾರೆ. ರಕ್ತದಾನದ ಬಗ್ಗೆ ಮನವೊಲಿಕೆ ಮತ್ತು ಶಿಕ್ಷಣ ಕಾರ್‍ಯಕ್ರಮಗಳನ್ನು ನಡೆಸಿದ್ದಾರೆ.

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಕನ್ನಡ

  • ಪಯಣ - ಕವನ ಸಂಕಲನ
  • ಹೃದಯ ಕಮಲ - ಕವನ ಸಂಕಲನ
  • ಮಿಂಚು ಮಳೆ - ಹನಿಗವನಗಳ ಸಂಕಲನ
  • ಹೂಮಳೆ - ಗೀತೆಗಳ ಸಂಕಲನ
  • ಅರಿವಿನ ನಯನ - ಕಾದಂಬರಿ
  • ತಿರುಪ್ಪಾವೈ - ಶ್ರೀ ಆಂಡಾಳ್ ದೇವಿ ವಿರಚಿತ ತಮಿಳು ಗ್ರಂಥದ ಅನುವಾದ
  • ರೇಕಿ ಚಿಕಿತ್ಸಾ ಪದ್ಧತಿ - ವಿಜ್ಞಾನ ಪಠ್ಯ ಪುಸ್ತಕ
  • ಬದರಿಯಾತ್ರೆ - ಪ್ರವಾಸ ಕಥನ
  • ಒಳ್ಳೇವ್ರು - ನಾಟಕ ಸಂಕಲನ

ಆಂಗ್ಲ

  • Reiki a system of Natural Healing
  • Tiruppavai - Translation of Tamil classic of SriAndal

ಹಿಂದಿ

  • ಸಲ್ಮಾ - ಕಾದಂಬರಿ

ಪ್ರಶಸ್ತಿ[ಬದಲಾಯಿಸಿ]

ಇವರ ಹಿಂದಿ ಕಾದಂಬರಿ "ಸಲ್ಮಾ"ಗೆ ೨೦೦೧ನೆಯ ರಾಷ್ಟ್ರ ಪ್ರಶಸ್ತಿ ದೊರಕಿದೆ.

ಹಿಂದಿ ಕಾದಂಬರಿಗೆ ವಾಜಪೇಯಿಯವರಿಂದ ಪ್ರಶಸ್ತಿ ಪಡೆಯುತ್ತಿರುವುದು

ಸಮ್ಮೇಳನಗಳು[ಬದಲಾಯಿಸಿ]

  • ೨೦೦೩ನೆಯ ಕೋಲಾರ ಜಿಲ್ಲೆಯ ಯಲ್ದೂರಿನಲ್ಲಿ ನಡೆದೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿದ್ದರು.
  • ೨೦೦೪ ಜನವರಿ ೩೦ರಂದು ಕೋಲಾರ ಜಿಲ್ಲೆಯ ರಾಯಲ್ಪಾಡುವಿನಲ್ಲಿ ನಡೆದ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  • ೨೦೦೬ರ ಡಿಸೆಂಬರದಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವಿತೆ ವಾಚಿಸಿದರು.
  • ೨೦೧೩ರಲ್ಲಿ ದೆಹಲಿಯಲ್ಲಿ ನಡೆದ ಹೊರನಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದರು.
  • ಕಳೆದ ಮೂವತ್ತು ವರ್‍ಷಗಳಲ್ಲಿ ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
  • "ಶಬ್ದ ಸಾಹಿತ್ಯ ಸಂಸ್ಥಾ" ಎಂಬ ಹಿಮದಿ ಸಾಹಿತ್ಯ ಸಂಸ್ಥೆಯಲ್ಲಿ ಕಳೆದ ೧೦ ವರ್‍ಷಗಳಿಂದ ತಿಂಗಳ ಕವಿಗೋಷ್ಠಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಹಿಂದಿ ಹಾಗೂ ಕನ್ನಡದಲ್ಲಿ ಕವಿತಾ ವಾಚನ ಮಾಡಿದ್ದಾರೆ.
  • "ಆಖಿಲ ಭಾರತ ಸಾಹಿತ್ಯ ಸಾಧಕ ಮಂಚ್" ಎಂಬ ಹಿಂದಿ ಸಾಹಿತ್ಯ ಸಂಸ್ಥೆಯ ಮೂಲಕ ತಿಂಗಳ ಕವಿಗೋಷ್ಠಿಯಲ್ಲಿ ಭಾಗವಹಿಸಿ ಕವನ ವಾಚನ ಮಾಡುತ್ತಿದ್ದಾರೆ.

ಆಕಾಶವಾಣಿ ಕಾರ್‍ಯಕ್ರಮಗಳು[ಬದಲಾಯಿಸಿ]

ಆಕಾಸವಾಣಿ ಬೆಂಗಳೂರು ಕೇಂದ್ರದ ಮೂಲಕ, ಹಲವು "ಚಿಂತನ" ಕಾರ್‍ಯಕ್ರಮಗಳನ್ನೂ ಕೆಲವು ಕೃಷಿ ಹಾಗೂ ಸಾಕ್ಷರತೆ ಬಗ್ಗೆ ಭಾಷಣಗಳನ್ನು ಮಾಡಿದ್ದಾರೆ. ಬಾನುಲಿ ನಾಟಕಗಳನ್ನು ನಿರ್‍ದೇಶಿಸಿದ್ದಾರೆ ಹಾಗೂ ನಟಿಸಿದ್ದಾರೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

ಚಿಲುಮೆ ಅಂತರ್ಜಾಲ ತಾಣದಲ್ಲಿರುವ ವರದರಾಜನ್'ರ ಬರಹಗಳು