ವಿಷಯಕ್ಕೆ ಹೋಗು

ರೋಜರ್ ಡಿ.ಕಾನ್ಬರ್ಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Roger Kornberg
ForMemRS[]
ಜನನ (1947-04-24) ೨೪ ಏಪ್ರಿಲ್ ೧೯೪೭ (ವಯಸ್ಸು ೭೭)
St. Louis, Missouri, US
ರಾಷ್ಟ್ರೀಯತೆAmerican
ಕಾರ್ಯಕ್ಷೇತ್ರStructural biology
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠ
ಮಹಾಪ್ರಬಂಧThe Diffusion of Phospholipids in Membranes (1972)
ಡಾಕ್ಟರೇಟ್ ಸಲಹೆಗಾರರುHarden M. McConnell[]
ಪ್ರಸಿದ್ಧಿಗೆ ಕಾರಣTransmission of genetic information from DNA to RNA
ಗಮನಾರ್ಹ ಪ್ರಶಸ್ತಿಗಳು
ಸಂಗಾತಿYahli Lorch
ಮಕ್ಕಳುthree[ಸೂಕ್ತ ಉಲ್ಲೇಖನ ಬೇಕು]
ಹಸ್ತಾಕ್ಷರ
ಜಾಲತಾಣ
kornberg.stanford.edu

ರೋಜರ್ ಡಿ.ಕಾನ್ಬರ್ಗ್ ಅಮೆರಿಕಾದ ಜೈವಿಕತಜ್ಞ.

ಬಾಲ್ಯ ಹಾಗೂ ವಿದ್ಯಾಭ್ಯಾಸ

[ಬದಲಾಯಿಸಿ]

ಕಾರ್ನ್ಬರ್ಗ್ ಏಪ್ರಿಲ್ ೨೪ ,೧೯೪೭ರಂದು ಅಮೆರಿಕಾದ ಮಿಸೌರಿಯಲ್ಲಿ ಜನಿಸಿದರು. ಇವರ ತಂದೆ ಆರ್ಫರ್ ಕಾರ್ನ್ಬರ್ಗ್. ಅವರು ತಮ್ಮ ಬ್ಯಾಚುಲರ್ಸ್ ಡಿಗ್ರಿಯನ್ನು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ೧೯೬೭ರಲ್ಲಿ ಪಡೆದರು. ೧೯೭೨ರಲ್ಲಿ ಕೆಮಿಕಲ್ ಫಿಸಿಕ್ಸಿನಲ್ಲಿ ಪಿಎಚ್.ಡಿ ಪಡೆದರು.[].

ವೃತ್ತಿ ಜೀವನ

[ಬದಲಾಯಿಸಿ]

೧೯೭೬ರಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ನಲ್ಲಿರುವ ಮಾಲಿಕ್ಯೂಲರ್ ಬಯೋಲಜಿ ಪ್ರಯೋಗಾಲಯದಲ್ಲಿ ಮತ್ತು ಹಾರ್ವರ್ಡ್ ಮೆಡಿಕಲ್ ಸ್ಕೂಲಿನಲ್ಲಿ ಜೈವಿಕರಸಾಯನಶಾಸ್ತ್ರದ ಸಹಾಯಕ ಪ್ರೊಫೆಸರ್ ಆಗಿ ಕೆಲಸ ಮಾಡಿದರು. ೧೯೭೮ರಲ್ಲಿ ಸ್ಟ್ಯಾನ್ಫೋರ್ಡ್ ವೈದ್ಯಕೀಯ ಶಾಲೆಯಲ್ಲಿ ಸ್ಟ್ರಕ್ಚರಲ್ ಬಯೋಲಜಿಯ ಪ್ರೊಫೆಸರ್ ಆದರು. [].

ವೈಯಕ್ತಿಕ ಜೀವನ

[ಬದಲಾಯಿಸಿ]

ಕಾರ್ನ್ಬರ್ಗ್ ಅವರು ಜೈವಿಕತಜ್ಞೆಯಾಗಿದ್ದ ಯಾಹಲಿ ಲಾರ್ಚ್ ಅವರನ್ನು ವಿವಾಹವಾದರು.

ಸಂಶೋಧನೆಗಳು

[ಬದಲಾಯಿಸಿ]

ಕಾರ್ನ್ಬರ್ಗ್ ಅವರ ಸಂಶೋಧನಾ ಗುಂಪು ಯೂಕ್ಯಾರಿಯೋಟಿಕ್ ಲಿಪ್ಯಂತರದ ಯಾಂತ್ರಿಕ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಲವಾರು ಮೂಲಭೂತ ಸಂಶೋಧನೆಗಳನ್ನು ಮಾಡಿದ್ದಾರೆ. ೧೯೭೦ರ ದಶಕದಲ್ಲಿ ಆರನ್ ಕ್ಲುಗ್ ಮತ್ತು ಫ್ರಾನ್ಸಿಸ್ ಕ್ರಿಕ್ ಅವರೊಂದಿಗೆ ಎಮ್.ಆರ್.ಸಿ.ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕಾರ್ನ್ಬರ್ಗ್ ಅವರು ನ್ಯೂಕ್ಲಿಯೋಸೋಮ್ ಅನ್ನು ಡಿ.ಎನ್.ಎ ಪ್ಯಾಕೇಜಿಂಗ್ನ ಮೂಲ ಪ್ರೋಟೀನ್ ಸಂಕೀರ್ಣ ಎಂದು ಕಂಡುಹಿಡಿದರು.[]

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]
  • ಎಲಿ ಲಿಲ್ಲಿ ಪ್ರಶಸ್ತಿ-೧೯೮೧.
  • ಪಸಾನೋ ಫೌಂಡೇಷನ್ನಿನ ಪಸಾನೋ ಪ್ರಶಸ್ತಿ-೧೯೮೨.
  • ಸಿಬಾ-ಡ್ರ್ಯೂ ಪ್ರಶಸ್ತಿ-೧೯೯೦.
  • ಹಾರ್ವೆ ಪುರಸ್ಕಾರ-೧೯೯೭.
  • ಗೈರ್ಡನರ್ ಫೌಂಡೇಷನ್ ಇಂಟರ್ನಾಷನಲ್ ಪ್ರಶಸ್ತಿ-೨೦೦೦.
  • ಹೋಪ್ ಸಿಯ್ಲರ್ ಪ್ರಶಸ್ತಿ,ವೆಲ್ಚ್ ಪ್ರಶಸ್ತಿ-೨೦೦೧.
  • ಎಎಸ್ಬಿಎಮ್ಬಿ ಮೆರ್ಕ್ ಪ್ರಶಸ್ತಿ-೨೦೦೨.
  • ಇಎಮ್ಬಿಒದ ಸದಸ್ಯತ್ವ ಪಡೆದರು-೨೦೦೩.
  • ಜನರಲ್ ಮೋಟರ್ಸ್ ಕ್ಯಾನ್ಸರ್ ರಿಸರ್ಚ್ ಫೌಂಡೇಷನ್ನಿನ ಆಲ್ಫ್ರೆಡ್.ಪಿ.ಸ್ಲೋನ್ ಜೂನಿಯರ್ ಬಹುಮಾನ-೨೦೦೫.
  • ಪಿಟ್ಟ್ಬರ್ಗ್ ವಿಶ್ವವಿದ್ಯಾನಿಲಯದ ಡಿಕ್ಸನ್ ಪ್ರಶಸ್ತಿ,ನೊಬೆಲ್ ಪ್ರಶಸ್ತಿ-೨೦೦೬.
  • ರಾಯಲ್ ಸೊಸೈಟಿಯ ವಿದೇಶಿ ಸದಸ್ಯರಾಗಿ ಚುನಾಯಿತರಾದರು-೨೦೦೯.

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Anon (2009). "Certificate of Election EC/2009/48: Roger D. Kornberg". London: Royal Society. Archived from the original on 2017-03-21. Retrieved 2018-12-27.
  2. Kornberg, Roger David (1972). The Diffusion of Phospholipids in Membranes (PhD thesis). Stanford University. OCLC 38611465.
  3. "Roger D. Kornberg". people.embo.org.
  4. https://www.nobelprize.org/prizes/chemistry/2006/kornberg/biographical/
  5. https://www.britannica.com/biography/Roger-D-Kornberg
  6. "ಆರ್ಕೈವ್ ನಕಲು". Archived from the original on 2017-02-13. Retrieved 2018-12-25.