ರಾಹುಲ್ ಗಾಂಧಿ
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ವಿಕಿಗೆ ತಕ್ಕಂತೆ ಶೈಲಿ ಬದಲಿಸಬೇಕಿದೆ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ರಾಹುಲ್ ಗಾಂಧಿ | |
| |
ಉಪಾಧ್ಯಾಕ್ಷ
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | |
---|---|
ಅಧಿಕಾರದ ಅವಧಿ ೧೯ ಜನವರಿ ೨೦೧೩ – 2017 | |
ಅಧ್ಯಕ್ಷ
ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್ | |
ಪ್ರಸಕ್ತ | |
ಅಧಿಕಾರ ವಹಿಕೆ ಸೆಪ್ಟೆಂಬರ್ ೨೫ ೨೦೦೭ | |
ಪ್ರಸಕ್ತ | |
ಅಧಿಕಾರ ವಹಿಕೆ ಸೆಪ್ಟೆಂಬರ್ ೨೫ ೨೦೦೭ | |
ಜನನ | ೧೯ ಜೂನ್ ೧೯೭೦ ನವದೆಹಲಿ , ಇಂಡಿಯಾ |
ರಾಜಕೀಯ ಪಕ್ಷ | ಭಾರತೀಯ ರಾಷ್ತ್ರೀಯ ಕಾಂಗ್ರೆಸ್ |
ರಾಹುಲ್ ಗಾಂಧಿ, [೧]೧೯ ಜೂನ್ ೧೯೭೦ ರಲ್ಲಿ ಜನಿಸಿದರು. ಅವರು ಭಾರತೀಯ ರಾಷ್ತ್ರೀಯ ಕಾಂಗ್ರೆಸ್ (೨೦೧೭) ಹಾಗೂ ಭಾರತದ ರಾಷ್ತ್ರೀಯ ವಿಧ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಶರು. ಇದರ ಜೊತೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಸತ್ತಿನ ಸದಸ್ಯರಾಗಿ ಅಮೇಥಿ ಕ್ಶೇತ್ರವನ್ನು ಒಂಭತ್ತು ವರ್ಷದಿಂದ ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ಗಾಂಧಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಸುಪುತ್ರ. ತಂದೆ ರಾಜೀವ್ ಗಾಂಧಿ ಯವರು ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ರಾಜೀವ್ ಗಾಂಧಿಯವರು ಕಾಂಗ್ರೆಸ್ ಪಕ್ಶದ ಅಧ್ಯಕ್ಶರಾಗಿದ್ದರು. ರಾಹುಲ್ ಅವರ ತಾಯಿ ಸೋನಿಯಾ ಗಾಂಧಿಯವರು ಪ್ರಸ್ತುತ ಕಾಂಗ್ರೆಸ್ ಪಕ್ಶದ ಅಧ್ಯಕ್ಶರಾಗಿದ್ದಾರೆ. ಸೋನಿಯಾ ಅವರು ಪಕ್ಷದಲ್ಲಿ ಅತ್ಯಂತ ಮುಖ್ಯ ವ್ಯಕ್ತಿಗಳು. ರಾಹುಲ್ ಗಾಂಧಿಯವರು ತಮ್ಮ ಬಾಲ್ಯವನ್ನು ನವದೆಹಲಿಯಲ್ಲಿ ಕಳೆದರು. ನವದೆಹೆಲಿಯಲ್ಲಿ ಅವರ ಅಜ್ಜಿ ಇಂದಿರಾ ಗಾಂಧಿಯವರು ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ೧೯೮೪ರಲ್ಲಿ ಶ್ರೀಮತಿ ಇಂದಿರಾ ಗಾಂಧಿಯವರ ಹತ್ಯೆಯಾದ ಮೇಲೆ ಹಲವು ಭದ್ರತಾ ಕಾರಣಗಳಿಂದಾಗಿ ರಾಹುಲ್ ಗಾಂಧಿಯವರು ನಿರಂತರವಾಗಿ ತನ್ನ ಶಾಲೆಗಳನ್ನು ಬದಲಾಯಿಸುವಂತಾಯಿತು.
ರಾಜಕೀಯ ಜೀವನ
[ಬದಲಾಯಿಸಿ]ಮಾರ್ಚ್ ೨೦೦೪ರಲ್ಲಿ ರಾಹುಲ್ ಗಾಂಧಿಯವರು ರಾಜಕೀಯ ಪ್ರವೇಶ ಮಾಡಿದರು. ಇದು ಅವರ ಜೀವನದಲ್ಲಿ ಒಂದು ಹೊಸದಾದ ಘಟ್ಟ.. ರಾಹುಲ್ ಅವರು ತಮ್ಮ ತಂದೆಯ ಮಾಜಿ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಚುನಾವಣೆಯಲ್ಲಿ ವಿಜೇತರಾಗಿ ಲೋಕ ಸಭೆಯನ್ನು ಪ್ರವೇಶ ಮಾಡಿದರು. ಭಾರತದ ಅತ್ಯಂತ ಪ್ರಸಿದ್ಧವಾದ ರಾಜಕೀಯ ಕುಟುಂಬದಿಂದ ಬಂದ ಯುವ ಸದಸ್ಯನಾಗಿ ರಾಹುಲ್ ಅವರು ವಿದೇಶಿ ಮಾಧ್ಯಮದೊಂದಿಗೆ ಪ್ರಥಮ ಸಂದರ್ಶನದಲ್ಲಿ ಭಾರತದ ಯುವ ಜನರನ್ನು ಕಾಂಗ್ರೆಸ್ ಪಕ್ಶದ ನಡುವೆ ರಾಜಕೀಯ ಅದೃಷ್ಟ ಹೆಚ್ಚಾಗುವುದೆಂದು ಭಾವಿಸಿದರು.
ರಾಹುಲ್ ಗಾಂಧಿಯವರು ಹೆಚ್ಚಾಗಿ ದೇಶದ ರಾಜಕೀಯಯವನ್ನು ಖಂಡಿಸುತ್ತಾರೆ. ಭಾರತವನ್ನು ಜಾತಿ, ಧರ್ಮ ಮತ್ತು ಹಣದ ಸಹಾಯದಿಂದ ನಡೆಸುತ್ತಿರುವ ರಾಜಕಾರಣಿಗಳ ಬಗ್ಗೆ ರಾಹುಲ್ ಅವರು ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ಹೋರಾಡುವುದಾಗಿ ರಾಹುಲ್ ಗಾಂಧಿಯವರು ಅಭಿಪ್ರಾಯ ಪಟ್ಟಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ಸಹೋದರಿಯಾದ ಪ್ರಿಯಾಂಕಾ ಗಾಂಧಿಯವರು ೨೦೦೭ರಲ್ಲಿ ರಾಯ್ ಬರೇಲೀ ಕ್ಶೇತ್ರದ ಮರು ಚುನಾವಣೆಯಲ್ಲಿ ತಮ್ಮ ತಾಯಿಯಾದ ಸೋನಿಯಾ ಗಾಂಧಿ ಯವರ ಪರವಾಗಿ ಪ್ರಚಾರ ಪ್ರಾರಂಭಿಸಿದರು. ಇದರ ಪರಿಣಾಮದಿಂದಾಗಿ ೪೦೦೦೦೦ ಹೇಚ್ಚಿನ ಮತಗಳಿಂದ ಸೋನಿಯಾ ಗಾಂಧಿಯವರು ಚುನಾವಣೆಯನ್ನು ಗೆದ್ದರು.
೨೦೦೭ರ ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಹುಲ್ ಅವರು ಪಕ್ಷದ ಮುಖ್ಯ ವ್ಯಕ್ತಿಯಾದರು. ಕಾಂಗ್ರೆಸ್ ಪಕ್ಶವು ಆ ಚುನಾವಣೆಯಲ್ಲಿ ೨೨ ಸ್ಥಾನಗಳನ್ನು ಪಡೆದುಕೊಂಡಿತು. ರಾಹುಲ್ ಗಾಂಧಿಯವರು ೨೪ ಸೆಪ್ಟೆಂಬರ್ ೨೦೦೭ರಲ್ಲಿ ನಡೆದ ಪಕ್ಶದ ಆಡಳಿತ ಪುನರ್ ರಚನೆಯಲ್ಲಿ ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾದರು. ಅದೇ ಸಂದರ್ಭದಲ್ಲಿ ಭಾರತೀಯ ಯುವ ಕಾಂಗ್ರೆಸ್ ಮತ್ತು ಭಾರತದ ರಾಷ್ತ್ರೀಯ ವಿಧ್ಯಾರ್ಥಿಗಳ ಯೂನಿಯನ್ ಒಕ್ಕೂಟದ ಉಸ್ತುವಾರಿಯಾಗಿ ಅವರನ್ನು ಮಾಡಲಾಯಿತು.
೨೦೦೮ರಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೋಯ್ಲಿಯವರು ಪ್ರಧಾನಿ ಮನ್ಮೋಹನ್ ಸಿಂಗ್ ಅವರು ವಿದೇಶದ ಪ್ರವಾಸದಲ್ಲಿದ್ದಾಗ ರಾಹುಲ್ ಅವರು ದೇಶದ ಮುಂದಿನ ಪ್ರಧಾನಿಯಾಗುವರು ಎಂದು ಘೋಷಣೆ ಮಾಡಿದ್ದರು. ೧೯ ಜನವರಿ ೨೦೧೩ರಂದು AICC ಪಕ್ಶದ ಸಭೆಯಲ್ಲಿ ರಾಹುಲ್ ಗಾಂಧಿಯವರ ನ್ನು ಕಾಂಗ್ರೆಸ್ ಪಕ್ಶದ ಉಪಾಧ್ಯಕ್ಶರನ್ನಾಗಿ ಮಾಡಲಾಯಿತು. ಪಕ್ಶದಲ್ಲಿ ಅವರ ಏರಿಕೆಯ ವಿವಾದ ಇಲ್ಲದೆ ಇರಲಿಲ್ಲ. ನೆಹೆರೂ-ಗಾಂಧಿ ಕುಟುಂಬದ ಸದಸ್ಯರಾಗಿರುವ ರಾಹುಲ್ ಅವರನ್ನು ಈ ಸ್ಥ್ಹಾನಕ್ಕೆ ಏರಿಸುವುದು ವಂಶೀಯ ರಾಜಕಾರಣದ ಸಂಕೇತವೆಂದು ಭಾರತೀಯ ಜನತ ಪಾರ್ಟಿ ಮತ್ತು ಆಮ್ ಆದ್ಮಿ ಪಕ್ಶದ ಸದಸ್ಯರು ಅಭಿಪ್ರಾಯ ಪಟ್ಟರು.
ಅವರು 6 ಡಿಸೆಂಬರ್ 2017 ರಿಂದ 10 ಆಗಸ್ಟ್ 2019 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಯುವ ಜನಾಂಗದ ರಾಜಕೀಯ
[ಬದಲಾಯಿಸಿ]ಸುಮಾರು ೨೦೦೭ರ ಸೆಪ್ಟೆಂಬರ್ನಲ್ಲಿ ರಾಹುಲ್ ಗಾಂಧಿಯವರು IYC, NSUI ಸಂಘಟನೆಗಳ ಉಸ್ತುವಾರಿಯಾಗಿ ಮೇಲೆ ಬಂದರು. ಈ ಕಾರಣದಿಂದ ಇವರು ಯುವ ರಾಜಕೀಯವನ್ನು ಸುಧಾರಿಸುವ ಭರವಸೆಯನ್ನು ಇಟ್ಟುಕೊಂಡಿದ್ದರು. ರಾಹುಲ್ ಗಾಂಧಿಯವರು ಮಾರ್ಗದರ್ಶನದಿಂದಾಗಿ ಎರಡು ಲಕ್ಷ ಜನರು ಇದ್ದ IYC, NSUIಗಳು ೨೦ಲಕ್ಶ ಜನರನ್ನು ಸದಸ್ಯರಾಗಿ ಪಡೆದಿತು.
ಇದರ ಬಗ್ಗೆ ೨೦೧೧ರಲ್ಲಿ ದಿ ಇಂಡಿಯನ್ ಎಕ್ಸ್ಪ್ರೆಸ್ ಮೂರು ವರ್ಷಗಳ ನಂತರ ಮತ್ತೊಂದು ಸಾಂಸ್ಥಿಕ ಪುನರ್ ರಚನೆಯನ್ನು ಕೊನೆಕಾಣುವುದು ಸಾಧ್ಯವಿಲ್ಲ ಎಂದು ಹೇಳಿದರು. ರಾಹುಲ್ ಅವರ ಕನಸು ಪೂರ್ತಿಯಾಗದೆ ಹೋಯ್ತು.ಪಕ್ಶದ ಹಿರಿಯರು ಕಾಂಗ್ರೆಸ್ ಪಕ್ಷ ಆಂತರಿಕ ಕಲಹವನ್ನು ಮುಂದುವರಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
೨೦೧೨ರ ವಿಧಾನಸಭಾ ಚುಣಾವಣೆಯಲ್ಲಿ
[ಬದಲಾಯಿಸಿ]ರಾಹುಲ್ ಗಾಂಧಿಯವರು ಸುಮಾರು ಎರಡು ತಿಂಗಳ ಕಾಲ ರಾಜಕೀಯವಾಗಿ ನಿರ್ಣಾಯಕ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದರು. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ೨೦೦ ಚಳುವಳಿಗಳನ್ನು ಕೈಗೊಂಡರು. ಆದರೆ ಕಾಂಗ್ರೆಸ್ ರಾಜ್ಯದ ನಾಲ್ಕನೆ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ ಪಾರ್ಟಿಯು ಆ ಚುನಾವಣೆಯಲ್ಲಿ ೨೮ ಸ್ಥಾನಗಳನ್ನು ಪದೆದುಕೊಂಡಿತು. ಹಿಂದಿನ ೨೦೦೨ರ ಚುನಾವಣೆಗೆ ಹೋಲಿಸಿದರೆ ಆರು ಸ್ಥಾನಗಳನ್ನು ಕಾಂಗ್ರೆಸ್ ಪಾರ್ಟಿಯು ಹೆಚ್ಚಾಗಿ ಪದೆದಿತ್ತು. ಅಮೇಥಿ ಲೋಕಸಭಾ ಕ್ಶೇತ್ರದ ೧೫ ಸ್ಥಾನಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ಸಾಧಿಸಿತು.
ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಚುನಾವಣೆಗೂ ದೇಶದ ಚುನಾವಣೆಗೂ ಬಹಳ ವ್ಯತ್ಯಾಸವಿದೆಯೆಂದು ರಾಹುಲ್ ಗಾಂಧಿಯವರನ್ನು ಸಮರ್ಥಿಸಿಕೊಂಡರು. ವರ್ಷದ ನಂತರ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಚುನಾವಣಾ ಪ್ರಚಾರದ ಮುಖ್ಯಸ್ಥರನ್ನಾಗಿ ಮಾಡಿರಲಿಲ್ಲ. ಈ ವಿಷಯವನ್ನು ಅವರ ವಿರೋಧಿಗಳು ಸೋಲೆಂದು ಪರಿಗಣಿಸಿ, ಸೋಲಿನ ಮುಖಭಂಗವನ್ನು ಮುಚ್ಚಿಹಾಕುವ ತಂತ್ರವೆಂದು ಕರೆದರು. ಕಾಂಗ್ರೆಸ್ ೧೮೨ಸೀಟುಗಳಲ್ಲಿ ೫೭ಸೀಟುಗಳನ್ನು ಗೆದ್ದಿತು. ಕಳೆದ ಚುನಾವಣೆಗಿಂತ ೨ ಸೀಟು ಕಡಿಮೆ ಗೆದ್ದಿತು. ನಂತರ ಬೈಪೋಲ್ನಲ್ಲಿ ಕಾಂಗ್ರೆಸ್ ಮತ್ತೆ ನಾಲ್ಕು ಸೀಟುಗಳನ್ನು ಭಾರತೀಯ ಜನತಾ ಪಾರ್ಟಿಗೆ ಬಿಟ್ಟುಕೊಟ್ಟಿತು
ರಾಷ್ಹ್ತ್ರೀಯ ಭದ್ರತೆ
[ಬದಲಾಯಿಸಿ]ರಾಹುಲ್ ಗಾಂಧಿಯವರು ರಾಷ್ಹ್ತ್ರೀಯ ಸ್ವಯಂ ಸೇವಕ ಸಂಘವನ್ನು ತಮ್ಮ ಭಾಷಣಗಳಲ್ಲಿ ಖಂಡಿಸಿದ್ದಾರೆ. ಇದೇ ರೀತಿಯಲ್ಲಿ ಅವರು STUDENT ISLAMIC MOVEMENT OF INDIAದಂತಹ ಭಯೋತ್ಪಾದಕ ಸಂಘಟನೆಗಳಿಗೆ ಸಂಘವನ್ನು ಹೋಲಿಸಿದ್ದಾರೆ. ೨೦೧೩ರ ಮುಜಫ್ಫರ್ ನಗರದ ಘಲಭೆಯ ನಂತರ, ಮಧ್ಯ ಪ್ರದೇಶದ ಇಂಡೋರ್ ಚುನಾವಣಾ ರೇಲಿಯಲ್ಲಿ ರಾಹುಲ್ ಅವರು ಪೋಲಿಸ್ ಅಧಿಕಾರಿಗಳು ತಿಳಿಸಿದಂತೆ, ಪಾಕಿಸ್ತಾನದ ISI ಏಜೆಂಟ್ ಗಳು ಅತೃಪ್ತ ಗಲಭೆ ಪೀಡಿತ ಯುವ ಜನರನ್ನು ಸೆರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.ಇದಕ್ಕೆ ಉತ್ತರವಾಗಿ ಜಿಲ್ಲಾ ಆಡಳಿತ, ಉತ್ತರ್ ಪ್ರದೇಶ್ ರಾಜ್ಯ ಸರ್ಕಾರ,ಕೇಂದ್ರ ಗೃಹ ಸಚಿವಾಲಯ,RAW ಮತ್ತು IB ಇಂತಹ ಅಭಿವೃದ್ಧಿಯನ್ನು ನಿರಾಕರಿಸಿತು. ಈ ಹೇಳಿಕೆಯಿಂದ ಕಾಂಗ್ರೆಸ್ ಮತ್ತು ರಾಹುಲ್ ಅವರಿಗೆ ವಿರೋಧ ರಾಜಕೀಯ ದಳಗಳಾದ ಭಾರತೀಯ ಜನತಾ ಪಾರ್ಟಿ, ಸಮಾಜವಾದಿ ಪಾರ್ಟಿ, ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮತ್ತು ಸಂಯುಕ್ತ ಜನತಾದಳಗಳಿಂದ ತೀವ್ರ ಟೀಕೆಗೊಳಗಾದರು. ಹಾಗೆಯೆ ಕಾಂಗ್ರೆಸ್ ಪಾರ್ಟಿಯ ಜಯರಾಮ್ ರಮೇಶ್ ರಾಹುಲ್ ಅವರ ಈ ಹೇಳಿಕೆಯನ್ನು ಖಂಡಿಸಿ, ಅವರು ಮುಸ್ಲಿಂ ಸಮುದಾಯದವರಿಗೆ ಕ್ಶಮೆಯಾಚಿಸುವ ಅಗತ್ಯವಿದೆಯೆಂದು ಹೇಳಿದರು.
ಲೋಕ್ ಪಾಲ್
[ಬದಲಾಯಿಸಿ]ರಾಹುಲ್ ಗಾಂಧಿಯವರು ಲೋಕ್ ಪಾಲ್ ಅನ್ನು ಭಾರತದ ಚುನಾವಣ ಆಯೋಗದ ಹಾಗೆ, ಸಂವಿಧಾನದ ಅಂಗವಾಗಿ ಮಾಡಬೇಕು ಮತ್ತು ಇದರ ಜವಾಬ್ದಾರಿಯನ್ನು ಸಂಸತ್ತಿಗೆ ಒಪ್ಪಿಸಬೇಕೆಂದು ಅಭಿಪ್ರಾಯ ಪಟ್ಟರು. ಅವರು " ಏಕಾಂಗಿಯಾಗಿ ಲೋಕ್ ಪಾಲ್ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯವಿಲ್ಲ " ಎಂದು ಭಾವಿಸಿದರು. ಈ ಹೇಳಿಕೆಯನ್ನು ಅವರು ೨೫ ಆಗಸ್ಟ್ ೨೦೧೧ರಂದು ಅಣ್ಣಾ ಹಝಾರೆಯವರ ಹತ್ತನೇ ದಿನದ ಉಪವಾಸದಂದು ಹೇಳಿದರು. ವಾಸ್ತವ ಸ್ಥಿತಿಯನ್ನು ಹೇಳಿದ ಅವರ ಹೇಳಿಕೆಯನ್ನು ಹಜಾರೆಯವರು ವಿರೋಧಿಸಿದರು. ಈ ಹೇಳಿಕೆಯು ಮುಂದೂಡುವ ತಂತ್ರ ಎಂದು ವಿರೋಧ ಪಕ್ಶದವರು ಮತ್ತು ಅಣ್ಣಾ ತಂಡದ ಸದಸ್ಯರು ಪರಿಗಣಿಸಿದರು. ಆದರೆ ಅವರು ೨೦೧೪ ರ ನಂತರ ಬಿಜೆಪಿ ಸರ್ಕಾರ ಬಂದ ನಂತರ ಸ್ವತಂತ್ರ ಲೋಕಪಾಲ್ ನೇಮಕದ ಕಾಯಿದೆಯ ಬಗೆಗೆ ಒತ್ತಡ ಹೇರದೆ ಮೃದು ಧೋರಣೆ ತಾಳಿದರು.