ವಿಷಯಕ್ಕೆ ಹೋಗು

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ಪಾಲು
66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ವಿಜ್ಞಾನ ಭವನ
ಕೊಡಲ್ಪಡುವ ವಿಷಯಭಾರತೀಯ ಸಿನಿಮಾ
ಸ್ಥಳವಿಜ್ಞಾನ ಭವನ
ದೇಶಭಾರತ
ಕೊಡಿಸಲ್ಪಡುಚಲನಚಿತ್ರೋತ್ಸವಗಳ ನಿರ್ದೇಶನಾಲಯ
ಪ್ರಧಮವಾಗಿ ಕೊಡಲ್ಪಟ್ಟದ್ದು10 ಅಕ್ಟೋಬರ್ 1954 (1954-10-10)
ಕೊನೆಯದಾಗಿ ಕೊಡಲ್ಪಟ್ಟದ್ದು9 ಆಗಸ್ಟ್ 2019 (2019-08-09)
ಅಧಿಕೃತ ಜಾಲತಾಣdff.nic.in

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಭಾರತದ 'ಆಸ್ಕರ್‍'ಗೆ ಹೋಲಿಸುತ್ತಾರೆ.೧೯೫೩ ರಿಂದ ಕೊಡುತ್ತಿರುವ ಈ ಪ್ರಶಸ್ತಿ ಇಂದಿಗೂ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ರಾಷ್ಟ್ರಪ್ರಶಸ್ತಿ ಪಡೆಯುವುದು ಪ್ರತಿಯೊಬ್ಬ ಕಲಾವಿದ, ತಂತ್ರಜ್ಞಾನ ಕನಸುಗಳಲ್ಲೊಂದು ಎಂದರೆ ತಪ್ಪಾಗಲಾರದು.

ಇತಿಹಾಸ

[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ೧೯೫೪ರಲ್ಲಿ ಕೊಡಲಾಯಿತು. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದಕ್ಕಾಗಿ ದೇಶದಾದ್ಯಂತ ತಯಾರಾದ ಚಲನಚಿತ್ರಗಳನ್ನು ಗುರುತಿಸಿ ಭಾರತ ಸರ್ಕಾರ ಗೌರವಿಸುತ್ತದೆ. ೧೯೭೩ರಿಂದ ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು ಈ ಪ್ರಶಸ್ತಿ ಸಮಾರಂಭವನ್ನು ಆಯೋಜಿಸುತ್ತಿದೆ.

ಆಯ್ಕೆ ಸಮಿತಿ ಮತ್ತು ನೀತಿಗಳು

[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಮುಖವಾಗಿ ಎರಡು ಮುಖ್ಯ ವಿಭಾಗಗಳಲ್ಲಿ ನೀಡಲಾಗುತ್ತದೆ. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳು. ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು 'ಆಯ್ಕೆ ಸಮಿತಿ'ಯನ್ನು ನೇಮಕ ಮಾಡುತ್ತದೆ. ನಿರ್ದೇಶನಾಲಯವಾಗಲಿ ಅಥವಾ ಭಾರತ ಸರ್ಕಾರವಾಗಲಿ ಯಾವುದೇ ಚಲನಚಿತ್ರದ ಆಯ್ಕೆಗಾಗಿ, ಅಥವಾ ಪ್ರಶಸ್ತಿಗಾಗಿ ಪ್ರಭಾವ ಬೀರುವಂತಿಲ್ಲ. ಆಯ್ಕೆ ಸಮಿತಿಯು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತದೆ. ಪ್ರತೀ ವರ್ಷ ನೂರಕ್ಕಿಂತಲೂ ಹೆಚ್ಚಿನ ಚಲನಚಿತ್ರಗಳು ಎರಡೂ ವಿಭಾಗಗಳಲ್ಲಿ ಆಯ್ಕೆಯಾಗುತ್ತವೆ. ಪ್ರತೀ ವರ್ಷ ಬದಲಾಗುತ್ತಿರುವ ನೀತಿಗಳನ್ನು ಒಳಗೊಂಡ ದಾಖಲೆಯನ್ನು, 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿಯಮಗಳು' ಎಂದು ಕರೆಯುತ್ತಾರೆ. ಒಂದು ಚಲನಚಿತ್ರ ಅರ್ಹತೆ ಪಡೆಯಲು ಹಲವಾರು ನಿಬಂಧನೆಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ, ಚಲನಚಿತ್ರ ನಿರ್ಮಾಪಕರು ನೇರವಾಗಿ ಭಾಗಿಯಾಗಿದ್ದು, ನಿರ್ದೇಶಕ ಭಾರತೀಯನಾಗಿರಬೇಕು. ಸ್ಪರ್ಧೆಯಲ್ಲಿ ಆಯ್ಕೆಯಾಗುವ ಚಲನಚಿತ್ರ ಭಾರತದಲ್ಲಿಯೇ ನಿರ್ಮಾಣ ಮಾಡಿರಬೇಕು ಮತ್ತು ಒಂದು ವೇಳೆ ವಿದೇಶಿ ಸಹ-ನಿರ್ಮಾಣದಿಂದ ಕೂಡಿದ್ದಲ್ಲಿ ಆರು ಷರತ್ತುಗಳನ್ನು ಪೂರೈಸಿದ್ದಲ್ಲಿ ಆಯ್ಕೆಗೆ ಅರ್ಹವಾಗುತ್ತದೆ. ನಿಯಮಗಳ ಪ್ರಕಾರ, ಆಯ್ಕೆ ಸಮಿತಿಗೆ ಬರುವ ಚಲನಚಿತ್ರ 'ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್'ನಿಂದ ಜನವರಿ ೧ರಿಂದ ಡಿಸೆಂಬರ್ ೩೧ರ ಒಳಗೆ ಧ್ರಡೀಕರಣಗೊಂಡಿರಬೇಕು. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳ ವಿಭಾಗಕ್ಕೆ ಆಯ್ಕೆ ಮತ್ತು ಆಯ್ಕೆಯಾಗದ ಚಲನಚಿತ್ರಗಳ ಪಟ್ಟಿಯನ್ನು ಆಯ್ಕೆ ಸಮಿತಿಯೇ ನಿರ್ಧರಿಸುತ್ತದೆ.

ಪ್ರಶಸ್ತಿಗಳು

[ಬದಲಾಯಿಸಿ]

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ; ಪೂರ್ಣ ಪ್ರಮಾಣದ ಚಲನಚಿತ್ರ, ಕಿರುಚಿತ್ರ ಮತ್ತು ಉತ್ತಮ ಚಲನಚಿತ್ರ ಬರವಣಿಗೆ. ಎಲ್ಲಾ ಪ್ರಶಸ್ತಿಗಳು ಅದರದ್ದೇ ಆದ ಉದ್ದೇಶವನ್ನು ಹೊಂದಿದ್ದು, ಸಮಾಜಿಕ ಕಳಕಳಿ, ದೇಶದಲ್ಲಿನ ವಿವಿಧ ಪ್ರದೇಶದ ಕಲೆ ಮತ್ತು ಸಂಸ್ಕೃತಿ, ತಂತ್ರಜ್ಞಾನದ ಬಳಕೆಯನ್ನು ಹೊಂದಿದ್ದು ಭಾರತದ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಂತಿರಬೇಕು.

ಕನ್ನಡಕ್ಕೆ ಈವರೆಗೂ ಸಂದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿವರವಾದ ಪಟ್ಟಿ

[ಬದಲಾಯಿಸಿ]

(ಇಲ್ಲಿ ಕೇವಲ ಚಲನಚಿತ್ರ, ಚಲನಚಿತ್ರ ಸಾಹಿತ್ಯಗಳಿಗೆ ಸಂಬಂಧಪಟ್ಟ ಮಾಹಿತಿ ಮಾತ್ರ ಇದೆ, ಕಿರುಚಿತ್ರಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲ.)

೧. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

[ಬದಲಾಯಿಸಿ]
ವಿಜೇತರು
ವರ್ಷ ಪುರಸ್ಕೃತರು Reference
೧೯೯೫ ಡಾ. ರಾಜ್‌ಕುಮಾರ []

೨. ಶ್ರೇಷ್ಠ ಚಲನಚಿತ್ರ

[ಬದಲಾಯಿಸಿ]
ಪ್ರಶಸ್ತಿ ಪಡೆದ ಚಿತ್ರಗಳ ಪಟ್ಟಿ
ವರ್ಷ ಚಲನಚಿತ್ರ ನಿರ್ಮಾಪಕ(ರು) ನಿರ್ದೇಶಕ(ರು) Refs.
೧೯೭೦ ಸಂಸ್ಕಾರ ಪಟ್ಟಾಭಿರಾಮ ರೆಡ್ಡಿ ಪಟ್ಟಾಭಿರಾಮ ರೆಡ್ಡಿ []
೧೯೭೫ ಚೋಮನ ದುಡಿ ಪ್ರಜಾ ಫಿಲಂಸ್ ಬಿ. ವಿ. ಕಾರಂತ್ []
೧೯೭೭ ಘಟಶ್ರಾದ್ಧ ಸದಾನಂದ ಸುವರ್ಣ ಗಿರೀಶ್ ಕಾಸರವಳ್ಳಿ []
೧೯೮೬ ತಬರನ ಕಥೆ ಗಿರೀಶ್ ಕಾಸರವಳ್ಳಿ ಗಿರೀಶ್ ಕಾಸರವಳ್ಳಿ []
೧೯೯೭ ತಾಯಿ ಸಾಹೇಬ ಜಯಮಾಲ ಗಿರೀಶ್ ಕಾಸರವಳ್ಳಿ []
೨೦೦೧ ದ್ವೀಪ ಸೌಂದರ್ಯ ಗಿರೀಶ್ ಕಾಸರವಳ್ಳಿ []

೩. ಶ್ರೇಷ್ಠ ನಿರ್ದೇಶನ

[ಬದಲಾಯಿಸಿ]
ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಚಲನಚಿತ್ರ Ref
೧೯೭೧ ಬಿ. ವಿ. ಕಾರಂತ್ ವಂಶವೃಕ್ಷ []
ಗಿರೀಶ್ ಕಾರ್ನಾಡ್
೧೯೭೬ ಪಿ. ಲಂಕೇಶ್ ಪಲ್ಲವಿ []

೪. ಶ್ರೇಷ್ಠ ಸಂಪೂರ್ಣ ಮನರಂಜನಾ ಚಿತ್ರ

[ಬದಲಾಯಿಸಿ]
ಪುರಸ್ಕೃತ ಚಿತ್ರಗಳ ಪಟ್ಟಿ
ವರ್ಷ ಚಲನಚಿತ್ರ ನಿರ್ಮಾಪಕ(ರು) ನಿರ್ದೇಶಕ(ರು) Refs.
೧೯೮೭ ಪುಷ್ಪಕ ವಿಮಾನ  • ಸಿಂಗೀತಂ ಶ್ರೀನಿವಾಸರಾವ್
 • ಶೃಂಗಾರ್ ನಾಗರಾಜ್
ಸಿಂಗೀತಂ ಶ್ರೀನಿವಾಸರಾವ್ [೧೦]

೫. ಶ್ರೇಷ್ಠ ಮಕ್ಕಳ ಚಿತ್ರ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳ ಪಟ್ಟಿ
ವರ್ಷ ಚಲನಚಿತ್ರ ನಿರ್ಮಾಪಕ(ರು) ನಿರ್ದೇಶಕ(ರು) Refs.
೧೯೭೯ ದಂಗೆಯೆದ್ದ ಮಕ್ಕಳು ಟಿ. ಎನ್. ನರಸಿಂಹನ್ ಯು. ಎಸ್. ವಾದಿರಾಜ್
೧೯೮೯ ಜಂಬೂಸವಾರಿ ಕೆ. ಎಸ್. ಎಲ್. ಸ್ವಾಮಿ ಕೆ. ಎಸ್. ಎಲ್. ಸ್ವಾಮಿ [೧೧]
೨೦೦೬ ಕೇರ್ ಆಫ್ ಫುಟ್ಪಾತ್ ಶೈಲಜಾ ಶ್ರೀಕಾಂತ್ ಮಾಸ್ಟರ್ ಕಿಶನ್ [೧೨]
೨೦೦೯ ಪುಟಾಣಿ ಪಾರ್ಟಿ ಚಿಲ್ಡ್ರನ್ಸ್ ಫಿಲಂ ಸೊಸೈಟಿ ಆಫ್ ಇಂಡಿಯಾ ಪಿ. ಎನ್. ರಾಮಚಂದ್ರ [೧೩]
೨೦೧೦ ಹೆಜ್ಜೆಗಳು ಬಸಂತ್ ಕುಮಾರ್ ಪಾಟೀಲ್ ಪಿ. ಆರ್. ರಾಮದಾಸ್ ನಾಯ್ಡು [೧೪]
೨೦೧೮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ : ರಾಮಣ್ಣ ರೈ ರಿಷಭ್ ಶೆಟ್ಟಿ ರಿಷಭ್ ಶೆಟ್ಟಿ

೬. ನಿರ್ದೇಶಕರ ಚೊಚ್ಚಲ ಶ್ರೇಷ್ಠ ಚಿತ್ರ

[ಬದಲಾಯಿಸಿ]

ಇಲ್ಲಿಯವರೆಗೂ ಈ ಪುರಸ್ಕಾರ ಕನ್ನಡಕ್ಕೆ ಸಂದಿಲ್ಲ.

೭. ಶ್ರೇಷ್ಠ ಆನಿಮೇಶನ್ ಚಿತ್ರ

[ಬದಲಾಯಿಸಿ]

ಇಲ್ಲಿಯವರೆಗೂ ಈ ಪುರಸ್ಕಾರ ಕನ್ನಡಕ್ಕೆ ಸಂದಿಲ್ಲ.

೮. ಶ್ರೇಷ್ಠ ನಟ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಚಲನಚಿತ್ರ(ಗಳು) Refs.
೧೯೭೫ ಎಂ. ವಿ. ವಾಸುದೇವ ರಾವ್ ಚೋಮನ ದುಡಿ [೧೫]
೧೯೮೬ ಚಾರುಹಾಸನ್ ತಬರನ ಕಥೆ [೧೬]
೨೦೧೪ ಸಂಚಾರಿ ವಿಜಯ್ ನಾನು ಅವನಲ್ಲ... ಅವಳು [೧೭]

೯. ಶ್ರೇಷ್ಠ ನಟಿ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಚಲನಚಿತ್ರ(ಗಳು) Refs.
೧೯೭೩ ನಂದಿನಿ ಭಕ್ತವತ್ಸಲ ಕಾಡು [೧೮][೧೯]
೨೦೦೪ ತಾರಾ ಹಸೀನಾ [೨೦]
೨೦೦೭ ಉಮಾಶ್ರೀ ಗುಲಾಬಿ ಟಾಕೀಸು [೨೧]

೧೦. ಶ್ರೇಷ್ಠ ಪೋಷಕ ನಟ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಚಲನಚಿತ್ರ(ಗಳು) Ref.
೨೦೦೦ ಎಚ್. ಜಿ. ದತ್ತಾತ್ರೇಯ ಮುನ್ನುಡಿ [೨೨]

೧೧. ಶ್ರೇಷ್ಠ ಪೋಷಕ ನಟಿ

[ಬದಲಾಯಿಸಿ]

ಇಲ್ಲಿಯವರೆಗೂ ಈ ಪುರಸ್ಕಾರ ಕನ್ನಡಕ್ಕೆ ಸಂದಿಲ್ಲ.

೧೨. ಶ್ರೇಷ್ಠ ಬಾಲ ಕಲಾವಿದ / ಬಾಲ ಕಲಾವಿದೆ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಚಲನಚಿತ್ರ(ಗಳು) Refs.
೧೯೭೩ ಜಿ. ಎಸ್. ನಟರಾಜ್ ಕಾಡು [೨೩]
೧೯೭೭ ಅಜಿತ್ ಕುಮಾರ್ ಘಟಶ್ರಾದ್ಧ []
೧೯೮೫ ಪುನೀತ್ ರಾಜ್‌ಕುಮಾರ್ ಬೆಟ್ಟದ ಹೂವು [೨೪]
೧೯೯೪ ವಿಜಯ ರಾಘವೇಂದ್ರ ಕೊಟ್ರೇಶಿ ಕನಸು [೨೫]
೧೯೯೫ ವಿಶ್ವಾಸ್ ಕ್ರೌರ್ಯ []
೨೦೧೫ ಕೆ. ಮನೋಹರ ರೈಲ್ವೆ ಚಿಲ್ಡ್ರನ್
೨೦೧೮ ಪಿ. ವಿ. ರೋಹಿತ್ ಒಂದಲ್ಲಾ ಎರಡಲ್ಲಾ

೧೩. ಶ್ರೇಷ್ಠ ಸಂಗೀತ ನಿರ್ದೇಶನ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಚಲನಚಿತ್ರ(ಗಳು) Refs.
೧೯೭೬ ಬಿ. ವಿ. ಕಾರಂತ್ ಋಷ್ಯ ಶೃಂಗ [೨೬]
೧೯೭೭ ಬಿ. ವಿ. ಕಾರಂತ್ ಘಟಶ್ರಾದ್ಧ []
೧೯೮೬ ಎಂ. ಬಾಲಮುರಳಿ ಕೃಷ್ಣ ಮಧ್ವಾಚಾರ್ಯ []
೧೯೯೫ ಹಂಸಲೇಖ ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ []
೨೦೧೬ ಬಾಪು ಪದ್ಮನಾಭ ಅಲ್ಲಮ [೨೭]

೧೪. ಶ್ರೇಷ್ಠ ಹಿನ್ನೆಲೆ ಗಾಯಕ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಹಾಡು(ಗಳು) ಚಲನಚಿತ್ರ(ಗಳು) Refs.
೧೯೭೫ ಎಂ. ಬಾಲಮುರಳಿ ಕೃಷ್ಣ "ಹಿಮಾದ್ರಿಸುತೆ ಪಾಹಿಮಾಂ" ಹಂಸಗೀತೆ []
೧೯೭೮ ಶಿವಮೊಗ್ಗ ಸುಬ್ಬಣ್ಣ "ಕಾಡು ಕುದುರೆ ಓಡಿ ಬಂದಿತ್ತಾ" ಕಾಡು ಕುದುರೆ [೨೮]
೧೯೯೨ ರಾಜಕುಮಾರ್ "ನಾದಮಯ ಈ ಲೋಕವೆಲ್ಲಾ" ಜೀವನ ಚೈತ್ರ [೨೯]
೧೯೯೫ ಎಸ್. ಪಿ. ಬಾಲಸುಬ್ರಹ್ಮಣ್ಯಂ "ಉಮಂಢು ಘುಮಂಢು ಘನ ಘರಜೆ ಬದರಾ" ಸಂಗೀತ ಸಾಗರ ಗಾನಯೋಗಿ ಪಂಚಾಕ್ಷರ ಗವಾಯಿ []

೧೫. ಶ್ರೇಷ್ಠ ಹಿನ್ನೆಲೆ ಗಾಯಕಿ

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಹಾಡು(ಗಳು) ಚಲನಚಿತ್ರ(ಗಳು) Ref.
೨೦೧೮ ಬಿಂದುಮಾಲಿನಿ ನಾರಾಯಣಸ್ವಾಮಿ "ಮಾಯಾವಿ ಮನವೇ" ನಾತಿಚರಾಮಿ

೧೬. ಶ್ರೇಷ್ಠ ಸಾಹಿತ್ಯ (ಗೀತರಚನೆ)

[ಬದಲಾಯಿಸಿ]
ಪ್ರಶಸ್ತಿ ಪುರಸ್ಕೃತರ ಪಟ್ಟಿ
ವರ್ಷ ಪುರಸ್ಕೃತರು ಹಾಡು(ಗಳು) ಚಲನಚಿತ್ರ(ಗಳು) Ref.
೧೯೯೧ ಕೆ. ಎಸ್. ನರಸಿಂಹಸ್ವಾಮಿ ಎಲ್ಲಾ ಹಾಡುಗಳು ಮೈಸೂರು ಮಲ್ಲಿಗೆ [೩೦]
೨೦೦೫ ಬರಗೂರು ರಾಮಚಂದ್ರಪ್ಪ "ಬರುತೇವೆ ನಾವ್ ಬರುತೇವೆ" ತಾಯಿ [೩೧]
೨೦೧೭ ಜೆ. ಎಂ. ಪ್ರಹ್ಲಾದ್ "ಮುತ್ತು ರತ್ನದ ಪ್ಯಾಟೆ" ಮಾರ್ಚ್ 22 [೩೨]
೨೦೧೮ ಮಂಸೋರೆ "ಮಾಯಾವಿ ಮನಸೇ" ನಾತಿಚರಾಮಿ [೩೩]

೧೭. ಶ್ರೇಷ್ಠ ಕಲಾ ನಿರ್ದೇಶನ

[ಬದಲಾಯಿಸಿ]

೧೮. ಶ್ರೇಷ್ಠ ಶಬ್ದಗ್ರಹಣ

[ಬದಲಾಯಿಸಿ]

೧೯. ಶ್ರೇಷ್ಠ ನೃತ್ಯ ನಿರ್ದೇಶನ

[ಬದಲಾಯಿಸಿ]

೨೦. ಶ್ರೇಷ್ಠ ಛಾಯಾಗ್ರಹಣ

[ಬದಲಾಯಿಸಿ]

೨೧. ಶ್ರೇಷ್ಠ ವಸ್ತ್ರವಿನ್ಯಾಸ

[ಬದಲಾಯಿಸಿ]

೨೨. ಶ್ರೇಷ್ಠ ಸಂಕಲನ

[ಬದಲಾಯಿಸಿ]

೨೩. ಶ್ರೇಷ್ಠ ಪ್ರಸಾಧನ

[ಬದಲಾಯಿಸಿ]

೨೪. ಶ್ರೇಷ್ಠ ಚಿತ್ರಕಥೆ

[ಬದಲಾಯಿಸಿ]

೨೫. ಶ್ರೇಷ್ಠ ಸ್ಪೆಶಲ್ ಎಫೆಕ್ಟ್ಸ್

[ಬದಲಾಯಿಸಿ]

೨೬. ವಿಶೇಷ ಜ್ಯೂರಿ ಪ್ರಶಸ್ತಿ

[ಬದಲಾಯಿಸಿ]

೨೭. ಜ್ಯೂರಿಯ ವಿಶೇಷ ಉಲ್ಲೇಖ

[ಬದಲಾಯಿಸಿ]

೨೮. ಶ್ರೇಷ್ಠ ಪರಿಸರ ಸಂರಕ್ಷಣಾ ಚಿತ್ರ

[ಬದಲಾಯಿಸಿ]

೨೯. ಶ್ರೇಷ್ಠ ಕೌಟುಂಬಿಕ ಚಿತ್ರ

[ಬದಲಾಯಿಸಿ]

೩೦. ಶ್ರೇಷ್ಠ ರಾಷ್ಟ್ರೀಯ ಏಕತಾ ಚಿತ್ರ

[ಬದಲಾಯಿಸಿ]

೩೧. ಶ್ರೇಷ್ಠ ಸಾಮಾಜಿಕ ಚಿತ್ರ

[ಬದಲಾಯಿಸಿ]

೩೨. ಶ್ರೇಷ್ಠ ಚಲನಚಿತ್ರ ಪುಸ್ತಕ

[ಬದಲಾಯಿಸಿ]

೩೩. ಶ್ರೇಷ್ಠ ಚಲನಚಿತ್ರ ವಿಮರ್ಶೆ

[ಬದಲಾಯಿಸಿ]

೩೪. ದ್ವಿತೀಯ ಶ್ರೇಷ್ಠ ಚಲನಚಿತ್ರ

[ಬದಲಾಯಿಸಿ]

(ಈ ಪ್ರಶಸ್ತಿಯನ್ನು ಈಗ ನಿಲ್ಲಿಸಲಾಗಿದೆ.)

೩೫. ಶ್ರೇಷ್ಠ ಕಥಾ ಲೇಖಕ

[ಬದಲಾಯಿಸಿ]

(ಈ ಪ್ರಶಸ್ತಿಯನ್ನು ಈಗ ನಿಲ್ಲಿಸಲಾಗಿದೆ.)

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "43rd National Film Awards" (PDF). Directorate of Film Festivals. Archived from the original (PDF) on 3 ಮಾರ್ಚ್ 2016. Retrieved 6 ಮಾರ್ಚ್ 2012. ಉಲ್ಲೇಖ ದೋಷ: Invalid <ref> tag; name "43rdawardPDF" defined multiple times with different content
  2. "18th National Film Awards" (PDF). Directorate of Film Festivals. p. 2. Archived (PDF) from the original on 26 ಫೆಬ್ರವರಿ 2012. Retrieved 26 ಸೆಪ್ಟೆಂಬರ್ 2011.
  3. ೩.೦ ೩.೧ "23rd National Film Awards" (PDF). Directorate of Film Festivals. p. 1. Archived (PDF) from the original on 24 ಜುಲೈ 2011. Retrieved 4 ಅಕ್ಟೋಬರ್ 2011. ಉಲ್ಲೇಖ ದೋಷ: Invalid <ref> tag; name "23rdawardPDF" defined multiple times with different content
  4. ೪.೦ ೪.೧ ೪.೨ "25th National Film Awards" (PDF). Directorate of Film Festivals. p. 2,44. Archived (PDF) from the original on 19 ಜನವರಿ 2017. Retrieved 4 ಅಕ್ಟೋಬರ್ 2011. ಉಲ್ಲೇಖ ದೋಷ: Invalid <ref> tag; name "25thawardPDF" defined multiple times with different content
  5. ೫.೦ ೫.೧ "34th National Film Awards" (PDF). Directorate of Film Festivals. pp. 10–11. Archived (PDF) from the original on 29 ಅಕ್ಟೋಬರ್ 2013. Retrieved 7 ಜನವರಿ 2012. ಉಲ್ಲೇಖ ದೋಷ: Invalid <ref> tag; name "34thawardPDF" defined multiple times with different content
  6. "45th National Film Awards" (PDF). Directorate of Film Festivals. pp. 6–7. Archived (PDF) from the original on 7 ನವೆಂಬರ್ 2017. Retrieved 11 ಮಾರ್ಚ್ 2012.
  7. "49th National Film Awards" (PDF). Directorate of Film Festivals. pp. 18–19. Archived (PDF) from the original on 29 ಅಕ್ಟೋಬರ್ 2013. Retrieved 14 ಮಾರ್ಚ್ 2012.
  8. "World Theatre Ambassador Girish Karnad". International Theatre Institute. Archived from the original on 16 ಮಾರ್ಚ್ 2014. Retrieved 18 ಮೇ 2012.
  9. Dasgupta, Uma Mahadevan (30 ಜನವರಿ 2005). "Moments of epiphany". ದಿ ಹಿಂದೂ. Archived from the original on 15 ಜುಲೈ 2012. Retrieved 18 ಮೇ 2012.
  10. "35th National Film Awards" (PDF). Directorate of Film Festivals. Archived from the original (PDF) on 22 ಮಾರ್ಚ್ 2012. Retrieved 9 ಜನವರಿ 2012.
  11. "37th National Film Awards" (PDF). Directorate of Film Festivals. Archived from the original (PDF) on 2 ಅಕ್ಟೋಬರ್ 2013. Retrieved 29 ಜನವರಿ 2012.
  12. "54th National Film Awards" (PDF). Directorate of Film Festivals. Retrieved 24 ಮಾರ್ಚ್ 2012.
  13. "57th National Film Awards" (PDF). Directorate of Film Festivals. Archived from the original (PDF) on 3 ಮಾರ್ಚ್ 2016. Retrieved 28 ಮಾರ್ಚ್ 2012.
  14. "58th National Film Awards" (PDF). Directorate of Film Festivals. Archived from the original (PDF) on 7 ಮಾರ್ಚ್ 2013. Retrieved 29 ಮಾರ್ಚ್ 2012.
  15. "23rd National Film Festival (1976)" (PDF). Directorate of Film Festivals. p. 6. Archived from the original (PDF) on 26 ಮೇ 2011. Retrieved 30 ಜುಲೈ 2011.
  16. "34th National Film Awards 1987". Directorate of Film Festivals. p. 24. Archived from the original on 5 ಫೆಬ್ರವರಿ 2017. Retrieved 16 ಆಗಸ್ಟ್ 2013.
  17. "62nd National Awards: Kangana Ranaut wins Best Actress for 'Queen', Vijay wins Best Actor for 'Nanu Avanalla Avalu'". ಟೈಮ್ಸ್ ಆಫ್ ಇಂಡಿಯ. 24 ಮಾರ್ಚ್ 2015. Archived from the original on 24 ಮಾರ್ಚ್ 2015. Retrieved 24 ಮಾರ್ಚ್ 2015.
  18. ಉಲ್ಲೇಖ ದೋಷ: Invalid <ref> tag; no text was provided for refs named 1974NFA
  19. Purohit, Vinayak (1988). Arts of transitional India twentieth century. Popular Prakashan. p. 1136. ISBN 978-0-86132-138-4. Retrieved 1 ಡಿಸೆಂಬರ್ 2012.
  20. "52nd National Film Awards – 2005". Directorate of Film Festivals. p. 31. Archived from the original (PDF) on 5 ಮೇ 2014. Retrieved 13 ಜನವರಿ 2013.
  21. "55th National Film Awards – 2007". Directorate of Film Festivals. p. 34. Archived from the original (PDF) on 2 ಅಕ್ಟೋಬರ್ 2013. Retrieved 1 ಡಿಸೆಂಬರ್ 2012.
  22. "48th National Film Awards" (PDF). Directorate of Film Festivals. pp. 44–45. Archived (PDF) from the original on 29 ಅಕ್ಟೋಬರ್ 2013. Retrieved 13 ಮಾರ್ಚ್ 2012.
  23. "21st National Film Awards" (PDF). Directorate of Film Festivals. Archived from the original (PDF) on 4 ಏಪ್ರಿಲ್ 2012. Retrieved 29 ಸೆಪ್ಟೆಂಬರ್ 2011.
  24. "33rd National Film Awards" (PDF). Directorate of Film Festivals. Archived from the original (PDF) on 21 ಸೆಪ್ಟೆಂಬರ್ 2013. Retrieved 7 ಜನವರಿ 2012.
  25. "42nd National Film Awards" (PDF). Directorate of Film Festivals. Retrieved 5 ಮಾರ್ಚ್ 2012.
  26. Murali, Janaki (6 ಸೆಪ್ಟೆಂಬರ್ 2002). "Trust plans all round tribute to B.V. Karanth". ದಿ ಹಿಂದೂ. Bangalore. Retrieved 4 ಜುಲೈ 2012.
  27. "64th National Film Awards" (PDF) (Press release). Directorate of Film Festivals. Archived from the original (PDF) on 6 ಜೂನ್ 2017. Retrieved 7 ಏಪ್ರಿಲ್ 2017.
  28. "26th National Film Awards" (PDF). Directorate of Film Festivals. Archived from the original (PDF) on 24 ಏಪ್ರಿಲ್ 2012. Retrieved 4 ಅಕ್ಟೋಬರ್ 2011.
  29. "40th National Film Awards" (PDF). Directorate of Film Festivals. Archived from the original (PDF) on 9 ಮಾರ್ಚ್ 2016. Retrieved 2 ಮಾರ್ಚ್ 2012.
  30. "39th National Film Awards" (PDF). Directorate of Film Festivals. Archived from the original (PDF) on 15 ಡಿಸೆಂಬರ್ 2017. Retrieved 27 ಫೆಬ್ರವರಿ 2012.
  31. "53rd National Film Awards" (PDF). Directorate of Film Festivals. Archived from the original (PDF) on 15 ಡಿಸೆಂಬರ್ 2017. Retrieved 19 ಮಾರ್ಚ್ 2012.
  32. "65th National Film Awards: Full winners list". The New Indian Express. 13 ಏಪ್ರಿಲ್ 2018.
  33. "66th National Film Awards" (PDF). Directorate of Film Festivals. Retrieved 9 ಆಗಸ್ಟ್ 2019.