ರಮಾನಂದ ಬನಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಿಂದ ಬರಹಗಾರರೂ ತಾಳಮದ್ದಳೆ ಅರ್ಥಧಾರಿಗಳೂ ಆಗಿದ್ದಾರೆ. ಮಂಜೇಶ್ವರದಲ್ಲಿ 'ಗಣರಾಜ' ಕ್ಲಿನಿಕ್ ನಡೆಸುತ್ತಿರುವ ಬನಾರಿಯವರು ಜನಾನುರಾಗಿಗಳಾಗಿದ್ದಾರೆ.

ಡಾ.ಬನಾರಿಯವರು ಯಕ್ಷಗಾನದ ಬಗ್ಗೆ ಆಸಕ್ತರಾಗಲು ಅವರ ತಂದೆಯವರಾದ ಕೀರಿಕ್ಕಾಡು ವಿಷ್ಣು ಭಟ್ಟರೇ ಕಾರಣ.ತಂದೆಯವರು ಬೇರೆಯವರಿಗೆ ತಾಳಮದ್ದಳೆ ಕಲಿಸುತ್ತಿದ್ದುದನ್ನು ನೋಡಿಯೇ ಬನಾರಿಯವರು ತಮ್ಮ ೧೬ನೇ ವಯಸ್ಸಿನಲ್ಲೇ ಕಲಿಯತೊಡಗಿದರು.ಸಾಮಾನ್ಯವಾಗಿ ಕರ್ಣ,ಅರ್ಜುನ,ರಾಮ,ಕೃಷ್ಣ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರೂ, ಕೆಲವೊಮ್ಮೆ ರಾವಣ ಮತ್ತು ಸ್ತ್ರೀ ಪಾತ್ರಗಳಾದ ಶೂರ್ಪನಖಿ,ದ್ರೌಪದಿ ಮೊದಲಾದ ಮಾತ್ರಗಳನ್ನೂ ನಿರ್ವಹಿಸಿದ್ದಿದೆ.

'ಎಳೆಯರ ಗೆಳೆಯ'- ಮಕ್ಕಳ ಕವನ ಸಂಕಲನ,'ತೊಟ್ಟಿಲು', 'ಕೊಳಲು'- ಕವನ ಸಂಕಲನ,'ಕವಿತೆಗಳೆ ಬನ್ನಿ','ಜೀವವೃಕ್ಷ','ನೋಟದೊಳಗಿನ ನೋಟ','ನಮ್ಮಿಬ್ಬರ ನಡುವೆ', 'ನೆನಪುಗಳ ನೆರಳಿನಲ್ಲಿ','ಆರೋಗ್ಯ ಗೀತೆ'- ವೈದ್ಯಕೀಯ ಕವನ ಸಂಕಲನ, 'ಗುಟುಕುಗಳು'- ಹನಿಗವನಗಳ ಸಂಕಲನ ಇವೇ ಮೊದಲಾದ ೧೫ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.'ಆರೋಗ್ಯ ಗೀತೆ' ಎಂಬ ಕವನ ಸಂಕಲನವು ೪೩ ವಿವಿಧ ಬಗೆಯ ರೋಗಗಳ ಬಗ್ಗೆ ವಿವರಣೆಯನ್ನು ನೀಡುತ್ತದೆ.[೧]

ಉಲ್ಲೇಖಗಳು[ಬದಲಾಯಿಸಿ]