ರಕ್ತದ ಗುಂಪುಗಳು
ರಕ್ತದ ಗುಂಪು | |
---|---|
Recipient[1] | Donor[1] | |||||||
---|---|---|---|---|---|---|---|---|
O− | O+ | A− | A+ | B− | B+ | AB− | AB+ | |
O− | ||||||||
O+ | ||||||||
A− | ||||||||
A+ | ||||||||
B− | ||||||||
B+ | ||||||||
AB− | ||||||||
AB+ |
Table note 1. Assumes absence of atypical antibodies that would cause an incompatibility between donor and recipient blood, as is usual for blood selected by cross matching.
ರಕ್ತ
[ಬದಲಾಯಿಸಿ]- ನಾವು ಆಟವಾಡುವಾಗ ಚಿಕ್ಕ ಪುಟ್ಟ ಗಾಯಗಳಿಂದ ತ್ವಚೆಯಿಂದ ಹನಿ ರಕ್ತ ಹೊರಬಿದ್ದುದನ್ನು ಚಿಕ್ಕಮಕ್ಕಳಾಗಿದ್ದಾಗ ಅನುಭವಿಸುವದು ಸ್ವಾಭಾವಿಕ. ಅಪಘಾತಗಳಿಗೀಡಾದ ಗಾಯಾಳುಗಳ ದೇಹದಿಂದ ರಕ್ತಸ್ರಾವವಾಗುವದನ್ನು ಕಾಣುತ್ತೇವೆ. ವೈದ್ಯರು ರೋಗಿಗಳ ರಕ್ತ ತಪಾಸಣೆಗಾಗಿ ರೋಗಿಯ ರಕ್ತನಾಳದಿಂದ ಸೂಜಿ ಚುಚ್ಚಿ ಸಿರಿಂಜಿನಲ್ಲಿ ರಕ್ತ ತೆಗೆಯುvuದನ್ನು ಕೆಲವರು ಅನುಭವಿಸುತ್ತಾರೆ. ಆಸ್ಪತ್ರೆಗಳಲ್ಲಿ ಕೆಲವು ರೋಗಿಗಳಿಗೆ ವೈದ್ಯರು ರಕ್ತ ಕೊಡುವದನ್ನು ಕಾಣಬಹುದಾಗಿದೆ.
- ದೇಹದಲ್ಲಿ ರಕ್ತ ಹೇಗೆ ಹರಿದಾಡುತ್ತದೆ? ರಕ್ತದ ಬಣ್ಣ ಕೆಂಪು ಏಕೆ? ರಕ್ತದ ಸ್ವರೂಪವೇನು? ಈ ವಿಷಯಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಇರಿಸಿದೆ. ವಯಸ್ಕರ ದೇಹದಲ್ಲಿ ಸುಮಾರು ಐದು ಲೀಟರ್ ರಕ್ತವಿದ್ದು ಅದು ಅನವರತವೂ ರಕ್ತನಾಳಗಳಲ್ಲಿ ದೇಹದ ತುಂಬ ಹರಿದಾಡುತ್ತದೆ. ರಕ್ತದಲ್ಲಿ ದ್ರವ ಮತ್ತು ಘನ ಭಾಗಗಳಿವೆ. ದ್ರವ ಪದಾರ್ಥಕ್ಕೆ ಪ್ಲಾಸ್ಮಾ (plasma) ಎಂದು ಹೆಸರು.
- ನಳಿಕೆಯ ತಳದಲ್ಲಿ ಶೇಖರಣೆಯಾದ ಕೆಂಪುಬಣ್ಣದ ಭಾಗದಲ್ಲಿ ರಕ್ತದ ಜೀವಕೋಶಗಳಿವೆ. ರಕ್ತದಲ್ಲಿ ಮೂರು ಬಗೆಯ ಜೀವಕೋಶಗಳಿವೆ. ಅವುಗಳಿಗೆ (೧) ಕೆಂಪು ರಕ್ತ ಜೀವಕೋಶ ( Red Blood Cell = RBC) (೨) ಬಿಳಿಯ ರಕ್ತಜೀವಕೋಶ (White Blood Cell = Leucocyte) ಮತ್ತು (೩) ಹಲಗೆ ಕಣ (Platelet or Thrombocyte) ಎಂದು ಹೆಸರುಗಳಿವೆ. [೩] ಈ ಮೂರೂ ಬಗೆಯ ಜೀವಕೋಶಗಳು ಬರಿಗಣ್ಣಿಗೆ ಗೋಚರಿಸಲಾರವು. ಸೂಕ್ಷ್ಮದರ್ಶಕದಲ್ಲಿ ಕಾಣಲು ಸಾಧ್ಯ. ಅವುಗಳನ್ನು ತಜ್ಞರು ಪರೀಕ್ಷಿಸಿ ವಿವಿಧ ಬಗೆಯ ರೋಗನಿದಾನ ಮಾಡುತ್ತಾರೆ.
- ಕೆಂಪು ರಕ್ತ ಜೀವಕೋಶಗಳು ದುಂಡಗಿನ ನಾಣ್ಯದಂತಿವೆ. ಅವುಗಳ ವ್ಯಾಸ ೭.೨ ಮೈಕ್ರಾನ್. ಒಂದು ಮೈಕ್ರಾನ ಅಂದರೆ ಒಂದು ಮಿಲಿಮೀಟರಿನ ಸಾವಿರದ ಒಂದು ಭಾಗ! ನಾಣ್ಯದಂತೆ ವೃತ್ತಾಕಾರದ ಈ ಜೀವಕೋಶಗಳು ಕಾಣುತ್ತವೆ. ಮಧ್ಯಭಾಗದಲ್ಲಿ ಎರಡೂ ಬದಿಯಿಂದ ಅದು ತಗ್ಗು ಹೊಂದಿದೆ. ಕೆಂಪು ರಕ್ತಜೀವಕೋಶದಲ್ಲಿ ಹೀಮೋಗ್ಲೋಬಿನ್ (Haemoglobin) ಎಂಬ ರಾಸಾಯನಿಕ ಪದಾರ್ಥವಿದೆ.
- ಇದರಲ್ಲಿ ಕಬ್ಬಿಣ ಮತ್ತು ಗ್ಲೋಬಿನ್ ಎಂಬ ಪ್ರೋಟೀನುಯುಕ್ತ ಪದಾರ್ಥಗಳ ಸಂಯೋಜನೆಯಾಗಿರುತ್ತದೆ. ಹೀಮೋಗ್ಲೋಬಿನ್ ಪದಾರ್ಥದಿಂದಾಗಿಯೇ ಈ ಜೀವಕೋಶಗಳಿಗೆ ಕೆಂಪು ಬಣ್ಣವಿದೆ[೪]. ಕೆಂಪು ರಕ್ತಜೀವಕೋಶಗಳಲ್ಲಿರುವ ಹೀಮೋಗ್ಲೋಬಿನ್ ಆಮ್ಲಜನಕವನ್ನು ದೇಹದ ಎಲ್ಲ ಅಂಗಾಂಗಗಳಿಗೆ ಒದಗಿಸುವ ಕಾಯ೯ಮಾಡುತ್ತದೆ.
- ಬಿಳಿಯ ರಕ್ತಜೀವಕೋಶಗಳು ಕೆಂಪು ರಕ್ತಜೀವಕೋಶಗಳಿಗಿಂತ ದೊಡ್ಡ ಗಾತ್ರ ಹೊಂದಿವೆ. ಇದರಲ್ಲಿ ನ್ಯೂಟ್ರೋಫಿಲ್ (Neutrophil), ಇಯೋಸಿನೋಫಿಲ್ (Eosionophil) ಮತ್ತು ಬೇಸೋಫಿಲ್ (Basophil) ಮತ್ತು ಲಿಂಫೋಸೈಟ್ (Lymphocyte) ಎಂಬ ವಿವಿಧ ಜೀವಕೋಶಗಳಿದ್ದು ಇವೆಲ್ಲವುಗಳನ್ನೂ ಬಿಳಿಯ ರಕ್ತಜೀವಕೋಶಗಳೆಂದು ಕರೆಯುತ್ತಾರೆ. ಇವು ಬರಿಗಣ್ಣಿಗೆ ತೋರವು. ಸೂಕ್ಷ್ಮದರ್ಶಕದಲ್ಲಿ ಇವುಗಳನ್ನು ಪರೀಕ್ಷಿಸಿ ವಿವಿಧ ರೋಗಗಳನ್ನು ಪತ್ತೆಹಚ್ಚುತ್ತಾರೆ.
- ಬಿಳಿಯ ರಕ್ತಜೀವಕೋಶಗಳನ್ನು ದೇಶದ ರಕ್ಷಣೆಮಾಡುತ್ತಿರುವ ಸೈನಿಕರಿಗೆ ಹೋಲಿಸಬಹುದು. ಈ ಜೀವಕೋಶಗಳು ರಕ್ತದಲ್ಲಿ ಹರಿದಾಡುತ್ತಿದ್ದು ದೇಹದ ಯಾವುದೇ ಭಾಗದಲ್ಲಿ ರೋಗಜನಕ ರೋಗಾಣುಗಳು ದೇಹಸೇರಿದಾಗ ಅಲ್ಲಿ ಧಾವಿಸಿ ಆ ರೋಗಾಣುಗಳನ್ನು ತಡೆಗಟ್ಟಿ ರೋಗ ಬಾರದಂತೆ ನಮ್ಮನ್ನು ರಕ್ಷಿಸುತ್ತವೆ. ಹಲಗೆ ಕಣ (platelet) ಇವು ಅತ್ಯಂತ ಚಿಕ್ಕ ಗಾತ್ರ ಹೊಂದಿವೆ ಇವುಗಳ ಆಕಾರ ಹಲಗೆಗಳಂತೆ ಕಾಣುತ್ತದೆ . ರಕ್ತ ಸ್ರಾವವಾಗದಂತೆ ತಡೆಗಟುವುದು ಇದರ ಕೆಲಸ,
ಗಾಯವಾದಾಗ ಅಲ್ಲಿಗೆ ಧಾವಿಸಿ ರಕ್ತನಾಳಗಳಿಂದ ರಕ್ತ ಹರಿಯದಂತೆ ತಡೆಗಟ್ಟುತ್ತದೆ.
ರಕ್ತದ ಗುಂಪು
[ಬದಲಾಯಿಸಿ]- ಆರೋಗ್ಯದ ಹಿತದೃಷ್ಟಿಯಿಂದ ನಿಮ್ಮ ರಕ್ತದ ಗುಂಪು ಯಾವುದು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಏಕೆಂದರೆ ನಿಮ್ಮ ರಕ್ತ ಯಾವ ಗುಂಪಿನದು ಎಂಬುದರ ಆಧಾರದ ಮೇಲೆ ನಿಮ್ಮ ಆರೋಗ್ಯ ಹೇಗೆ? ನೀವೆಷ್ಟು ಆರೋಗ್ಯವಂತರು? ಅದರಲ್ಲೂ ನಿಮ್ಮ ಹೃದಯ ಎಷ್ಟು ಆರೋಗ್ಯಪೂರ್ಣವಾಗಿದೆ ಎಂಬುದನ್ನು ನಿರ್ಧರಿಸಬಹುದು . ಯಾರಿಗೇ ಆಗಲಿ ಕಾಯಿಲೆ ತೀವ್ರವಾಗುತ್ತಿದ್ದಂತೆ ಯಾವುದಕ್ಕೇ ಆಗಲಿ ಮೊದಲು ರಕ್ತ ಪರೀಕ್ಷೆ ಮಾಡಿಸಿಬಿಡಿ ಎನ್ನುತ್ತಾರೆ ವೈದ್ಯರು.
- ಏಕೆಂದರೆ ಹಲವು ಕಾಯಿಲೆಗಳು ದೇಹವನ್ನು ವ್ಯಾಪಿಸುವುದು ಈ ರಕ್ತದ ಮೂಲಕವೇ. ಆದ್ದರಿಂದ ನಮ್ಮ ದೇಹದಲ್ಲಿ ಸಂಚರಿಸುತ್ತಿರುವ ಈ ರಕ್ತವ ಷರಾದ ಬಗ್ಗೆ ಆದ್ಯವಾಗಿ ತಿಳಿದುಕೊಳ್ಳುವುದು ಕ್ಷೇಮಕರ. ಮನುಷ್ಯನ ರಕ್ತವನ್ನು A, B, AB ಮತ್ತು O ಎಂಬುದಾಗಿ ವಿಂಗಡಿಸಲಾಗುತ್ತದೆ. ಇದನ್ನು ರಕ್ತದಲ್ಲಿರುವ ಕೆಂಪು ರಕ್ತಕಣಗಳ ಮೇಲಿರುವ ಆಂಟಿಜಿನ್ ಅಂಶಗಳನ್ನು ನೋಡಿಕೊಂಡು ವಿಂಗಡಿಸಲಾಗುತ್ತದೆ.
- ಈ ಆಂಟಿಜಿನ್ ಜೊತೆಗೆ ಇನ್ನೊಂದು rh ಆಂಟಿಜಿನ್ ಆಧಾರದ ಮೇಲೆ A+ve, A-ve, B+ve,B-ve, AB+ve, AB-ve, O-ve, O+ve ಎಂಬುದಾಗಿ ಪುನಃ ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ A+ve ಮತ್ತು O+ve ಗುಂಪುಗಳ ಹೆಚ್ಚಿನ ಜನರಲ್ಲಿ ಕಾಣಸಿಗುತ್ತದೆ. B-ve O-ve ಮುಂತಾದ ರಕ್ತದ ಗುಂಪುಗಳು ಬಹಳ ವಿರಳ. ಇಂತಹ ವ್ಯಕ್ತಿಗಳಿಗೆ ರಕ್ತವನ್ನು ಸಂಗ್ರಹಿಸಿ ನೀಡುವುದು ಬಹಳ ಕಷ್ಟದ ಕೆಲಸ.
- ಆ ಕಾರಣಕ್ಕಾಗಿಯೂ ವಿರಳ ರಕ್ತದ ಗುಂಪನ್ನು ಹೊಂದಿದ ವ್ಯಕ್ತಿಗಳನ್ನು ಗುರುತಿಸಿ ಅವರ ದೂರವಾಣಿ ಸಂಖ್ಯೆ ತೆಗೆದುಕೊಳ್ಳಲಾಗುತ್ತದೆ ಹಾಗೂ ಅಗತ್ಯವಿದ್ದಾಗ ಮಾತ್ರ ಇಂತಹ ವಿರಳ ಗುಂಪಿನ ವ್ಯಕ್ತಿಗಳಿಂದ ರಕ್ತದಾನವನ್ನು ಪಡೆಯಲಾಗುತ್ತದೆ.
1901ರಲ್ಲಿ ಕಾರ್ಲ್ ಲಾಂಡ್‍ಸ್ಪೈನರ್ ಎಂಬ ಆಸ್ಟ್ರಿಯಾ ದೇಶದ ವೈದ್ಯರು ರಕ್ತದ ಗುಂಪುಗಳ ವರ್ಗಿಕರಣವನ್ನು ನೀಡಿದರು. ಆ ಕಾರಣಕ್ಕಾಗಿಯೇ ಆತನ ಜನ್ಮ ದಿನಾಂಕ ಜೂನ್ 14ರಂದು “ವಿಶ್ವ ರಕ್ತದಾನಿಗಳ ದಿವಸ” ಎಂದು ಆಚರಿಸಲಾಗುತ್ತದೆ.
- ಅದೇ ರೀತಿ ಅಕ್ಟೋಬರ್ 1ರಂದು ‘ರಾಷ್ಟ್ರೀಯ ರಕ್ತದಾನ ದಿವಸ’ ಎಂದು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. O+ve ಮತ್ತು A+ve ರಕ್ತದ ಗುಂಪನ್ನು ಸಾಮಾನ್ಯವಾಗಿ ಮೂರು ರಕ್ತದಾನಿಗಳಲ್ಲಿ ಒಬ್ಬ ವ್ಯಕ್ತಿ ಹೊಂದಿರುವ ಸಾಧ್ಯತೆ ಇರುತ್ತದೆ. B+ve ಪ್ರತೀ 12ರಲ್ಲಿ ಒಬ್ಬರಿಗೆ,AB+ve ಪ್ರತೀ 29ರಲ್ಲಿ ಒಬ್ಬರಿಗೆ, O-ve ಮತ್ತು A-ve ಪ್ರತೀ 15ರಲ್ಲಿ ಒಬ್ಬರಿಗೆ, B-ve ರಕ್ತ ಪ್ರತೀ 67 ಜನರಲ್ಲಿ ಒಬ್ಬರಿಗೆ ಹಾಗೂ AB-ve ರಕ್ತ ಪ್ರತೀ 167 ಜನರಲ್ಲಿ ಒಬ್ಬರಿಗೆ ಇರುವ ಸಂಭವವಿರುತ್ತದೆ.
- ಸಾಮಾನ್ಯವಾಗಿ O-ve ರಕ್ತವನ್ನು ಯುನಿವರ್ಸಲ್ ಡೋನರ್ (UNIVERSAL DONOR) ಎಂದು ಕರೆಯಲಾಗುತ್ತದೆ. ಯಾಕೆಂದರೆ ವ್ಯಕ್ತಿಗೆ ಸರಿಹೊಂದುವ ರಕ್ತವು ದೊರಕದೇ ಇದ್ದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ O-ve ರಕ್ತವನ್ನು ರೋಗಿಗೆ ಕೊಡಲಾಗುತ್ತದೆ. ಯಾವುದೇ ರಕ್ತದ ಗುಂಪು ಹೊಂದಿರುವ ವ್ಯಕ್ತಿಗೆ O-ve ರಕ್ತವನ್ನು ಕೊಡಬಹುದು. ಆದರೆ ನಮ್ಮ ದೇಶದ ಜನಸಂಖ್ಯೆಯ ಕೇವಲ 7 ಪ್ರತಿಶತ ಜನರು ಮಾತ್ರ O-ve ರಕ್ತವನ್ನು ಹೊಂದಿರುತ್ತಾರೆ.
- ಸಾಮಾನ್ಯವಾಗಿ ತುರ್ತು ಸನ್ನಿವೇಶಗಳಲ್ಲಿ ರೋಗಿಯ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ಹಾಗೂ ನವಜಾತ ಶಿಶುಗಳಲ್ಲಿ ಈ ರೀತಿ O-ve ರಕ್ತವನ್ನು ನೀಡಬಹುದು. 35 ಪ್ರತಿಶತ ಜನರು O(+ve ಮತ್ತು -ve) ರಕ್ತದ ಗುಂಪನ್ನು ಹೊಂದಿರುತ್ತಾರೆ. ಕೇವಲ 0.4 ಪ್ರತಿಶತ ಜನರು AB ರಕ್ತದ ಗುಂಪು ಹೊಂದಿರುತ್ತಾರೆ. AB ರಕ್ತದ ಗುಂಪು ಇರುವವರನ್ನು ಯುನಿವರ್ಸಲ್ ಪ್ಲಾಸ್ಮಾ ಡೊನರ್ ಎಂದು ಕರೆಯುತ್ತಾರೆ.
- ತುರ್ತು ಸನ್ನಿವೇಶಗಳಲ್ಲಿ ಮತ್ತು ನವಜಾತ ಶಿಶುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಇದ್ದಲ್ಲಿ AB ಗುಂಪಿನ ಪ್ಲಾಸ್ಮಾವನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲರ ರಕ್ತದಲ್ಲಿಯೂ ಕೆಂಪುರಕ್ತಕಣ, ಬಿಳಿರಕ್ತಕಣ, ಪ್ಲೇಟ್‍ಲೆಟ್ ಮತ್ತು ಪ್ಲಾಸ್ಮಾ ಎಂಬ ಅಂಶಗಳು ಇರುತ್ತದೆ. ಆದರೆ ಪ್ರತಿಯೊಬ್ಬರ ರಕ್ತವು ಇತರರ ರಕ್ತಕ್ಕಿಂತ ಭಿನ್ನವಾಗಿರುತ್ತದೆ. ಮೇಲೆ ತಿಳಿಸಿದಂತೆ 8 ರೀತಿಯ ವಿಭಿನ್ನ ರಕ್ತದ ಗುಂಪುಗಳು ಇವೆ.
- ಆ ಕಾರಣಕ್ಕಾಗಿಯೇ ರಕ್ತದಾನ ಮಾಡುವ ಮೊದಲ ಹಲವಾರು ಬಾರಿ ರಕ್ತವನ್ನುಪರೀಕ್ಷಿಸಿ, ಕ್ರಾಸ್‍ಮ್ಯಾಚ್ (ಹೊಂದಾಣಿಕೆ) ಮಾಡಿದ ಬಳಿಕವೇ ರಕ್ತವನ್ನು ರೋಗಿಗೆ ನೀಡಲಾಗುತ್ತದೆ. ಕೆಂಪು ರಕ್ತಕಣಗಳ ಮೇಲಿರುವ A ಮತ್ತು B ಆಧಾರದ ಮೇಲೆ ರಕ್ತದ ಗುಂಪುಗಳನ್ನು ಈ ರೀತಿ ವಿಂಗಡಿಸಲಾಗಿದೆ.
- A ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘A’ ಆಂಟಿಜಿನ್ ಮತ್ತು ಪ್ಲಾಸ್ಮಾದಲ್ಲಿ ‘B’ ಆಂಟಿಬಾಡಿ ಇರುತ್ತದೆ.
- B ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘B’ ಆಂಟಿಜಿನ್ ಮತ್ತು ಪ್ಲಾಸ್ಮಾದಲ್ಲಿ ‘A’ ಆಂಟಿಬಾಡಿ ಇರುತ್ತದೆ.
- AB ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ‘A’ ಮತ್ತು ‘B’ ಆಂಟಿಜಿನ್ ಎರಡೂ ಇರುತ್ತದೆ ಮತ್ತು ಪ್ಲಾಸ್ಮಾದಲ್ಲಿ ಯಾವುದೇ ಆಂಟಿಬಾಡಿ ಇರುವುದಿಲ್ಲ.
- O ರಕ್ತದ ಗುಂಪು: ಕೆಂಪು ರಕ್ತಕಣಗಳ ಮೇಲೆ ಯಾವುದೇ ಆಂಟಿಜಿನ್ ಇರುವುದಿಲ್ಲ. ಆದರೆ ಪ್ಲಾಸ್ಮಾದಲ್ಲಿ ‘A’ ಮತ್ತು ‘B’ ಆಂಟಿಬಾಡಿ ಇರುತ್ತದೆ.
- AB ರಕ್ತದ ಗುಂಪು ಇರುವವರಲ್ಲಿ ಯಾವುದೇ ಆಂಟಿಬಾಡಿ ಇಲ್ಲದ ಕಾರಣ AB ರಕ್ತದ ಗುಂಪಿನವರು A, B, AB ಮತ್ತು O ರಕ್ತದ ಗುಂಪಿನವರು ರಕ್ತವನ್ನು ಪಡೆಯಬಹುದು. ಆ ಕಾರಣಕ್ಕಾಗಿಯೇ ‘AB+ve’ ರಕ್ತ ಗುಂಪನ್ನು ಯನಿರ್ವಸಲ್ ರಿಸೀವರ್ ಎಂದು ಹೇಳುತ್ತಾರೆ. ಅದೇ ರೀತಿ ‘O’ ಗುಂಪಿನ ರಕ್ತದಲ್ಲಿ ಯಾವುದೇ ಆಂಟಿಜೆನ್ ಇಲ್ಲದ ಕಾರಣ ‘O’ ಗುಂಪಿನ ರಕ್ತವನ್ನು A, B, AB ಮತ್ತು O ಗುಂಪಿನವರಿಗೆ ತುರ್ತು ಪರಿಸ್ಥಿತಿಗಳಲ್ಲಿ ನೀಡಬಹುದು.
- ಅದಕ್ಕಾಗಿಯೇ O-ve ಗುಂಪಿನ ರಕ್ತದಾನಿಗಳನ್ನು ಯನಿವರ್ಸಲ್ ಡೊನರ್ (UNIVERSAL DONOR) ಎಂದು ಕರೆಯಲಾಗುತ್ತದೆ. ಅದೇ ರೀತಿ A,B ಆಂಟಿಜೆನ್ ಅಲ್ಲದೇ RH ಎಂಬ ಇನ್ನೊಂದು ಆಂಟಿಜೆನ್‍ನ ಆಧಾರದ ಮೇಲೆ Rh+ve ಮತ್ತು Rh-ve ಎಂದು ರಕ್ತವನ್ನು ವಿಂಗಡಿಸಲಾಗುತ್ತದೆ. ಸಾಮಾನ್ಯವಾಗಿ Rh-ve ರಕ್ತವನ್ನು Rh-ve ರಕ್ತದ ಗುಂಪಿನವರಿಗೆ ದಾರಾಳವಾಗಿ ನೀಡಬಹುದು. ಆದರೆ Rh+ve ಅಥವಾ Rh-ve ರಕ್ತವನ್ನು Rh+ve ಗುಂಪಿನ ಜನರಿಗೆ ಕೊಡಲೂಬಹುದು.
ಈ ಎಲ್ಲಾ ಕಾರಣಕ್ಕಾಗಿಯೇ O-ve ರಕ್ತವನ್ನು ಯನಿವರ್ಸಲ್ ಡೊನರ್ ಮತ್ತು AB ರಕ್ತವನ್ನು ಯನಿವರ್ಸಲ್ ಪ್ಲಾಸ್ಮಾ ಡೊನರ್ ಎಂದು ಕರೆಯಲಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ರಕ್ತದ ಗುಂಪಿನ ಅನುಪಾತಗಳು ಈ ಕೆಳಗಿನಂತಿವೆ:
- O+ve=39%
- O-ve=1%
- A+ve=27%
- A-ve=0.5%
- B+ve=25%
- B-ve=0.4%
- AB+ve=7%
- AB-ve=0.1%
ಮೇಲೆ ತಿಳಿಸಿದ ಕಾರಣಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ರಕ್ತದ ಗುಂಪನ್ನು ತಿಳಿದಿರಬೇಕು. ಅಪಘಾತ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ರಕ್ತದ ಗುಂಪು ತಿಳಿಯದೇ ಇದ್ದಲ್ಲಿ ರಕ್ತದ ಅವಶ್ಯಕತೆ ಒದಗಿ ಬಂದಲ್ಲಿ ಕಷ್ಟವಾಗಬಹುದು. ವಿರಳ ರಕ್ತದ ಗುಂಪನ್ನು ಹೊಂದಿರುವ ವ್ಯಕ್ತಿಗಳು ತಮ್ಮ ದೂರವಾಣಿ ಸಂಖ್ಯೆಯನ್ನು ರಕ್ತ ನಿಧಿಗಳಲ್ಲಿ ನೊಂದಾಯಿಸಿಕೊಂಡಲ್ಲಿ ಅಗತ್ಯ ಬಿದ್ದಲ್ಲಿ ತಮ್ಮ ಮತ್ತು ಇತರರ ರಕ್ತದ ಅವಶ್ಯಕತೆಗಳನ್ನು ಯಾವುದೇ ಪ್ರತಿಕೂಲ ಸನ್ನಿವೇಶಗಳಲ್ಲಿಯೂ ನಿಭಾಯಸಿಕೊಳ್ಳಬಹುದು.
ಹೊರಗಿನ ಸಂಪರ್ಕ
[ಬದಲಾಯಿಸಿ]- http://www.redcrossblood.org/learn-about-blood/blood-types
- https://www.nlm.nih.gov/medlineplus/ency/article/003345.htm
ಉಲ್ಲೇಖಗಳು
[ಬದಲಾಯಿಸಿ]- ↑ "RBC compatibility table". American National Red Cross. December 2006. Archived from the original on 2007-08-04. Retrieved 2008-ಂ7-15.
{{cite web}}
: Check date values in:|accessdate=
(help) - ↑ Blood types and compatibility bloodbook.com
- ↑ [https: //en.wikipedia.org/ wiki/Blood_ plasma "ಪ್ಲಾಸ್ಮಾ"].
{{cite web}}
: Check|url=
value (help) - ↑ "ಹೀಮೋಗ್ಲೋಬಿನ್". Archived from [https: //en.wikipedia. org/wiki/Hemoglobin the original] on 2013-08-26. Retrieved 2021-09-02.
{{cite web}}
: Check|url=
value (help)