ಯಶ್ಮಿತಾ ಬೆಳ್ಳೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂತರಾಷ್ಟೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ ಕ್ರೀಡಾತಾರೆ ಯಶ್ಮಿತಾ ಬೆಳ್ಳೂರು. ಬಂಗಾರದ ಪದಕ ಗೆದ್ದಿರುವ ತುಳುನಾಡಿನ ಹೆಮ್ಮೆಯ ಹೆಣ್ಣು ಮಗಳು.

ಜೀವನ[ಬದಲಾಯಿಸಿ]

ಬಡತನದ ಜೀವನದಲ್ಲಿಯು ಮಿಂಚಿದ ಕ್ರೀಡಾತಾರೆ ಯಶ್ಮಿತಾ. ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯತ್ತಿನ ಮಿತ್ತಜಾಲ್ ಎನ್ನುವ ಸಣ್ಣ ಊರಿನಲ್ಲಿ ಕೃಷಿ ಹಾಗು ಕೂಲಿ ಕೆಲಸಕ್ಕೆ ಹೋಗುವಂತಹ ಸುಬ್ಬಣ್ಣ ಹಾಗು ಸುಮತಿ ದಂಪತಿಗಳ ಮೂರೂ ಮಕ್ಕಳಲ್ಲಿ ಎರಡನೆಯ ಮಗಳು ಯಶ್ಮಿತಾ . ದಿನ ದಿನ ಸಂಪಾದನೆ ದಿನ ದಿನದ ಖರ್ಚಿಗೆ ಸರಿ ಹೋಗುವ ಆರ್ಥಿಕ ಪರಿಸ್ಥಿತಿಯಲ್ಲಿ ಯಶ್ಮಿತಾ ಬೆಳೆದಿರುತ್ತಾಳೆ ಆದರೆಮಲೇಶಿಯಾ ಪಂದ್ಯಾಟದಲ್ಲಿ ಭಾಗವಹಿಸುವ ಯಶ್ಮಿತಾನ ದೊಡ್ಡ ಕನಸು ನನಸಾಗಲು ಸರಕಾರವು ಸಹಾಯ ಮಾಡಿತು. ಮಲೇಶಿಯಾದ ಪ್ರವಾಸದ ದೊಡ್ಡ ಮೊತ್ತದ ಖರ್ಚಿನ್ನು ಪರಿಶಿಷ್ಟ ವರ್ಗ ವಿಭಾಗದಿಂದ ಸರಕಾರ ಮಂಜೂರು ಮಾಡಿ ಇವಳ ಸಾಧನೆಗೆ ಸಹಾಯ ಕೊಟ್ಟಿತು.[೧]

ವಿದ್ಯಾಭ್ಯಾಸ[ಬದಲಾಯಿಸಿ]

ಯಶ್ಮಿತಾ ಬೆಳ್ಳೂರು ಇವಳ ಪ್ರಾಥಮಿಕ ವಿದ್ಯಾಭ್ಯಾಸವನ್ನು ಎ. ಎಲ್. ಪಿ. ಶಾಲೆ ಬೆಳಿಂಜ ಹಾಗು ಹೈಸ್ಕೂಲ್ ವಿದ್ಯಾಭ್ಯಾಸ ಶ್ರೀ ಅನ್ನಪೂರ್ಣೇಶ್ವರಿ ಶಾಲೆ ಅಗಲ್ಪಾಡಿಯಲ್ಲಿ ಮಾಡಿರುತ್ತಾಳೆ. ದೈಹಿಕ ಶಿಕ್ಷಣ ಶಿಕ್ಷಕರಾದ ಶಶಿಕಾಂತ ಬಲ್ಲಾಲ್ ಯಶ್ಮಿತಾನ ಕ್ರೀಡಾಸಕ್ತಿಯನ್ನು ಗುರುತಿಸಿ ತರಬೇತಿ ಕೊಡುವುದರೊಂದಿಗೆ ಸಲಹೆ ಪ್ರೋತ್ಸಾಹ ಕೊಟ್ಟು ಮಾರ್ಗದರ್ಶನ ಮಾಡಿದರು.

ಸಾಧನೆ[ಬದಲಾಯಿಸಿ]

ಮಲೇಶಿಯಾದಲ್ಲಿ ನಡದತ ಹೆಂಗಸರ ತ್ರೊ ಬಾಲ್ ಪಂದ್ಯಾಟದಲ್ಲಿ ಪಾಕಿಸ್ತಾನದ ತಂಡವನ್ನು ಸೋಲಿಸಿ ಭಾರತದ ವಿಜಯ ಪತಾಕೆಯನ್ನು ಎತ್ತಿ ಹಿಡಿದ ತುಳುನಾಡಿನ ಕುವರಿ ಗಡಿನಾಡ ಪ್ರತಿಭೆ ಯಶ್ಮಿತಾ ಬೆಳ್ಳೂರು[೨].ವಿದ್ಯಾಭ್ಯಾಸದೊಂದಿಗೆ ಕ್ರೀಡಾಭ್ಯಾಸವನ್ನು ಮಾಡಿ ವಿದ್ಯಾರ್ಥಿ ಜೀವನದಲ್ಲಿ ಶಾಲಾ ಕ್ರೀಡಾಕೂಟದ ನಾಯಕಿಯಾಗಿ ತುಂಬಾ ಪ್ರಶಸ್ತಿಗಳನ್ನು ಪಡೆದು ತನ್ನ ಸಣ್ಣ ಪ್ರಾಯದಲ್ಲಿಯೆ ಭಾರತ ತಂಡಕ್ಕೆ ಸೇರಿ ಅಂತರಾಷ್ಟೀಯ ಮಟ್ಟದಲ್ಲಿ ಆಡಿ ಭಾರತಕ್ಕೆ ಕೀರ್ತಿಯನ್ನು ತಂದ ಗಡಿನಾಡಿನ ಹೆಮ್ಮೆಯ ಹೆಣ್ಣು ಮಗಳು ಯಶ್ಮಿತಾ [೩]

ಆಸಕ್ತಿ[ಬದಲಾಯಿಸಿ]

ಯಶ್ಮಿತ ಕ್ರೀಡಾಸಕ್ತಿಯ ಜೊತೆಗೆ ಕಥೆ ಕವಿತೆಗಳನ್ನು ಬರೆಯುವಂತಹ ಆಸಕ್ತಿ ಇರುವಂತಹ ಬಹುಮುಖ ಪ್ರತಿಭೆ. ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಶೇಕಡಾ ೮೫% ಅಂಕ ಪಡೆದು ಆಟದಲ್ಲಿ ಮಾತ್ರವಲ್ಲ ಪಾಠದಲ್ಲಿಯು ಪ್ರತಿಭಾವಂತೆ ಎನ್ನುವುದನ್ನು ತೋರಿಸಿ ಕೊಟ್ಟಿರುವ ಸಾಧಕಿ.

ಉಲ್ಲೇಖ[ಬದಲಾಯಿಸಿ]

  1. http://www.udayavani.com/english/news/mangaluru/188685/asian-junior-throwball-championship-winner%C2%A0yashmitha-gets-colorful-welcome-kasaragod%C2%A0[ಶಾಶ್ವತವಾಗಿ ಮಡಿದ ಕೊಂಡಿ]
  2. https://www.thenews.com.pk/print/175482-India-beat-Pakistan-in-Asian-Junior-Throwball-final+TheNewsInternational-Sports+
  3. http://www.udayavani.com/english/news/kasargod/181775/yashmitha-kasargod-national-team-asian-junior-throwball-championship[ಶಾಶ್ವತವಾಗಿ ಮಡಿದ ಕೊಂಡಿ]