ಮೈಲಹಳ್ಳಿ ರೇವಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಮೈಲಹಳ್ಳಿ ರೇವಣ್ಣ ಜಾನಪದ ವಿದ್ಯಾಂಸರು, ಸಂಶೋಧಕರು, ಮಾರ್ಗದರ್ಶಕರು, ಪ್ರಾಧ್ಯಾಪಕರು, ಜನಪದ ಕಲಾವಿದರು, ಡಾ.ಬಾಬು ಜಗಜೀವನ್ ರಾಮ್ ಅಧ್ಯಯನ ಪೀಠದ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ.

ಸಂಕ್ಷಿಪ್ತ ಪರಿಚಯ[ಬದಲಾಯಿಸಿ]

ಮೈಲಹಳ್ಳಿ ರೇವಣ್ಣ ಹುಟ್ಟಿದ್ದು ೦೧.೦೬.೧೯೫೬, ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ. ತಂದೆ-ಮೈಲಹಳ್ಳಿ ನಿಂಗಪ್ಪ, ಬಯಲಾಟದ ಕಲಾವಿದರು. ತಾಯಿ ಶ್ರೀಮತಿ ಶಾಂತಮ್ಮ, ಜಾನಪದ ಕಲಾವಿದೆ. ೨೦೦೦ದ ವರ್ಷದಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು- ಇವರಿಂದ "ಜಾನಪದ ಪ್ರಶಸ್ತಿ"ಗೆ ಭಾಜನರಾಗಿದ್ದರು. ಸಹೋದರರು- ಭೀಮಪ್ಪ, ಜಯಣ್ಣ, ಪತ್ನೀ ಪದ್ಮಜ, ಮಕ್ಕಳು ದೀಪಾ, ರೂಪ, ಶಿಲ್ಪ.

ವಿದ್ಯಾಭ್ಯಾಸ[ಬದಲಾಯಿಸಿ]

ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಡಶಾಲೆಯನ್ನು ತುರುವನೂರಿನಲ್ಲಿ ಮುಗಿಸಿ, ಪಿ.ಯು.ಸಿ ಹಾಗೂ ಬಿ.ಎ ಪದವಿಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿತ್ರದುರ್ಗದಲ್ಲಿ ಮಾಡಿದ್ದಾರೆ. ಎಂ.ಎ ಕನ್ನಡ ಮತ್ತು ಪಿಎಚ್.ಡಿ ಪದವಿಗಳನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದ್ದಾರೆ. ಇವರ ಸಂಶೋಧನಾ ಮಹಾಪ್ರಬಂಧದ ಹೆಸರು " ಚಿತ್ರದುರ್ಗ ಜಿಲ್ಲೆಯ ಮಾದಾರರ ಜನಪದ ಸಾಹಿತ್ಯ". ಮಾರ್ಗದರ್ಶಕರು-ಡಾ.ಡಿ.ಕೆ.ರಾಜೇಂದ್ರ.

ವೃತ್ತಿ/ಅವಧಿ[ಬದಲಾಯಿಸಿ]

  1. ಸಂಶೋಧನಾ ಸಹಾಯಕರು, ಮೈಸೂರು ವಿಶ್ವವಿದ್ಯಾನಿಲಯ ಜಾನಪದ ವಿಭಾಗ-೧೯೮೧-೧೯೮೭ರವರೆಗೆ
  2. ಉಪನಿರ್ದೇಶಕರು- ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ-೧೯೮೭-೨೦೧೦
  3. ಪ್ರಾಧ್ಯಾಪಕರು ಹಾಗೂ ನಿರ್ದೇಶಕರು ಡಾ.ಬಾಬು ಜಗಜೀವನ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣ ಕೇಂದ್ರ-೨೦೧೦-೨೦೧೬

ಪ್ರಕಟಿತ ಕೃತಿಗಳು[ಬದಲಾಯಿಸಿ]

  1. ಅಡವಿಗುಮಾರ ಮತ್ತು ಇತರ ಕತೆಗಳು
  2. ದೀಪದ ಕೆಳಗೆ ಕತ್ತಲೆ(ಗಾದೆಗಳ ಸಂಕಲನ)
  3. ಮಾದಾರ ಸಂಸ್ಕೃತಿ ಮತ್ತು ಸಾಹಿತ್ಯ
  4. ಗಂಡು ಮೆಟ್ಟಿದ ನಾಡು (ಮಕ್ಕಳಿಗಾಗಿ)
  5. ನಮ್ಮ ಒಡಪುಗಳು (ಸಾಕ್ಷರರಿಗಾಗಿ)
  6. ಒಗಟಿನ ಕಥೆಗಳು (ಸಾಕ್ಷರರಿಗಾಗಿ)

ವಿಮರ್ಶಾತ್ಮಕ ಕೃತಿಗಳು[ಬದಲಾಯಿಸಿ]

  1. ಕವಿ ಕಾವ್ಯ ವಿಚಾರ
  2. ಜಾನಪದ ಚಾವಡಿ

ಜೀವನ ಚರಿತ್ರೆ[ಬದಲಾಯಿಸಿ]

  1. ಸಿದ್ದವನಳ್ಳಿ ನಿಜಲಿಂಗಪ್ಪ
  2. ಡಾ.ಜೀ.ಶಂ.ಪ

ಸಂಪಾದಿತ ಕೃತಿಗಳು[ಬದಲಾಯಿಸಿ]

  1. ಚಿತ್ರದುರ್ಗ ಸುತ್ತಿನ ಜನಪದ ಕಾವ್ಯಗಳು
  2. ಜಂಬು ನೇರ್ಲಣ್ಣು ಜಗ್ಗಿ ಬಿದ್ದಾವೆ (ಒಗಟುಗಳ ಸಂಕಲನ)
  3. ಚಿತ್ರದುರ್ಗ ಜಿಲ್ಲೆಯ ಜನಪದ ಸಾಹಿತ್ಯ
  4. ಜನಪದ ಪುರಾಣ ಕಾವ್ಯಗಳು
  5. ಜನಪದ ಸಾಮಾಜಿಕ ಕಥಾನಕಗಳು
  6. ಜನಪದ ಗಾದೆ ಮತ್ತು ಒಗಟುಗಳು

ಗ್ರಂಥ ಸಂಪಾದನೆ[ಬದಲಾಯಿಸಿ]

  1. ಭವನ ಭಿಕ್ಷಾಟನೆ
  2. ಸಿದ್ದೇಶ್ವರ ಪುರಾಣ
  3. ಹರಿವಿಲಾಸ
  4. ದೇವರಾಜ ಸಾಂಗತ್ಯ

ಇತರರೊಡನೆ ಸಂಪಾದಿಸಿದ ಕೃತಿಗಳು[ಬದಲಾಯಿಸಿ]

  1. ಜಾನಪದ ಬೆಡಗು (ಪ್ರೊ.ಸುಧಾಕರ ಸಂಸ್ಮರಣ ಕೃತಿ)
  2. ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ (ಜಾನಪದ ಸಂಪುಟ)
  3. ಜಾನಪದ (ಕನ್ನಡ ವಿಷಯ ಕೋಶ)
  4. ಮಾನವಿಕ ಕರ್ನಾಟಹ ತ್ರೈಮಾಸಿಕ ಪತ್ರಿಕೆ, ಪ್ರಸಾರಾಂಗ ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  5. ಮರಳಿ ಮನೆಗೆ ಮೈಸೂರು ವಿಶ್ವವಿದ್ಯಾನಿಲಯ

ಪ್ರಧಾನ ಸಂಪಾದಕತ್ವದಲ್ಲಿ ಬಂದ ಕೃತಿಗಳು[ಬದಲಾಯಿಸಿ]

  1. ನೆನಪು ಸಂಜೀವಿನಿ ಸಂಪುಟ-೧,೨,೩ - ೨೦೧೪
  2. ಡಾ.ಬಾಬೂ ಜಗಜೀವನರಾಮ್ ಹೋರಾಟದ ಬದುಕು-೨೦೧೪
  3. ಧೀಮಂತ ರಾಷ್ಟ್ರನಾಯಕ ಬಾಬೂ ಜಗಜೀವನರಾಮ್
  4. ಜಾತಿ ಪದ್ದತಿಯ ಸವಾಲುಗಳು

ನಿರ್ವಹಿಸಿರುವ ಜವಾಬ್ದಾರಿಗಳು[ಬದಲಾಯಿಸಿ]

ಅಧ್ಯಕ್ಷರಾಗಿ[ಬದಲಾಯಿಸಿ]

  1. ಅಧ್ಯಯನ ಮಂಡಳಿ (ಬಿ.ಓ.ಎಸ್)-ಮದ್ರಾಸ್ ವಿಶ್ವವಿದ್ಯಾನಿಲಯ ಚೆನ್ನೈ
  2. ಪರೀಕ್ಷಾ ಮಂಡಳಿ (ಬಿ.ಓ.ಇ) ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  3. ಬಾಬೂಜಿ ಅಧ್ಯಯನ ಮಂಡಳಿ -ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  4. ಸ್ನಾತಕೋತ್ತರ ಸೈಕ್ಷಣಿಕ ಉದ್ಯೋಗಿಗಳ ಸಂಘ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು

ಉಪಾಧ್ಯಕ್ಷರಾಗಿ[ಬದಲಾಯಿಸಿ]

  1. ಫ್ಯಾಮಿಲಿ ಪ್ಲಾನಿಂಗ್ ಅಸೊಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆ
  2. ಇನೋವೇಟಿವ್, ಮೈಸೂರು

ಕಾರ್ಯಾಧ್ಯಕ್ಷರು[ಬದಲಾಯಿಸಿ]

ದಸರಾ ಜನಪದೋತ್ಸವ ಸಮಿತಿ ೨೦೦೮-೨೦೧೦

ಸಂಘ-ಸಂಸ್ಥೆಗಳ ಸದಸ್ಯತ್ವ[ಬದಲಾಯಿಸಿ]

  1. ಕನ್ನಡ ಜಾಗೃತಿ ಸಮಿತಿ ಮತ್ತು ಕನ್ನಡ ಅಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಸರ್ಕಾರ-೨೦೧೬
  2. ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು
  3. ನಗರ ಗ್ರಂಥಾಲಯ, ಮೈಸೂರು
  4. ಗಾಂಧಿಭವನ ಅಧ್ಯಯನ ಮಂಡಳಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  5. ವಿದ್ಯಾರ್ಥಿ ಕ್ಷೇಮಪಾಲನಾ/ಪ್ರಾಧ್ಯಾಪಕರ ಕ್ಷೇಮಾಭಿವೃದ್ದಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  6. ಆಜೀವ ಸದಸ್ಯರು- ಕನ್ನಡ ಸಾಹಿತ್ಯ ಪರಿಷತ್ತು
  7. ಸಲಹಾ ಸಮಿತಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
  8. ಡಾ.ಬಾಬೂ ಜಗಜೀವನರಾಮ್ ಅಧ್ಯಯನ ಪೀಠ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  9. ಎಸ್ಸಿ, ಎಸ್ಟಿ ಸ್ಥಾಯಿ ಸಮಿತಿ ವಿಶೇಷ ಘಟಕ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  10. ಕಾರ್ಯಕಾರಿ ಸದಸ್ಯ-ಕರ್ನಾಟಕ ದಲಪದ ಪ್ರಾಧಿಕಾರ, ಮೈಸೂರು
  11. ಕಿರು ಸಂಶೋಧನಾ ಯೋಜನೆಯ ಆಯ್ಕೆ ಸಮಿತಿ, ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೊಟಗೋಡಿ, ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ
  12. ಕಿರು ಸಂಶೋಧನಾ ಯೋಜನೆಯ ಆಯ್ಕೆ ಸಮಿತಿ, ದಲಿತ ಕ್ರೈಸ್ತರು ಸಾಂಸ್ಕೃತಿಕ ಶೋಧ, ಕನ್ನಡ ಸಂಸ್ಕೃತಿ ಇಲಾಖೆ, ಬೆಂಗಳೂರು
  13. ಕಲಾನಿಕಾಯ-ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  14. ಕಾಲೇಜು ಅಭಿವೃದ್ದಿ ಮಂಡಳಿ ಸಲಹಾ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು
  15. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ- ಬೆಂಗಳೂರು ವಿಶ್ವವಿದ್ಯಾನಿಲಯ
  16. ತಾತ್ಕಾಲಿಕ ಅಧ್ಯಾಪಕರ ನೇಮಕಾತಿ ಸಮಿತಿ, ತಜ್ಞ ಸದಸ್ಯ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯ ಗೊಟಗೋಡಿ, ಶಿಗ್ಗಾವಿ ತಾಲ್ಲೂಕು, ಹಾವೇರಿ ಜಿಲ್ಲೆ
  17. ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ಬಾಬೂ ಜಗಜೀವನರಾಮ್ ಜನ್ಮ ದಿನಾಚರಣೆಯ ಸಲಹಾ ಸಮಿತಿ

ಸನ್ಮಾನ/ಪ್ರಶಸ್ತಿ/ಗೌರವಗಳು[ಬದಲಾಯಿಸಿ]

  1. ಜಾನಪದ ರಕ್ಷಕ ಪ್ರಶಸ್ತಿ-ಶ್ರೀ ಮುರುಘ ರಾಜೇಂದ್ರ ಬೃಹನ್ಮಠ ಶ್ರೀ ಶಿವಮೂರ್ತಿ ಸ್ವಾಮೀಜಿ-ಚಿತ್ರದುರ್ಗ -೧೯೯೭
  2. ಡಾ.ಅಂಬೇಡ್ಕರ್ ಫೆಲೋಶಿಫ್ ಅವಾರ್ಡ್- ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ನವದೆಹಲಿ-೧೯೯೯
  3. ಕುವೆಂಪು ಸಾಹಿತ್ಯ ರತ್ನ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾ ನಿಕೇತನ- (ರಿ)ಬೆಂಗಳೂರು-೨೦೧೪
  4. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು- ಹೋಬಳಿ ಮಟ್ಟ, ತುರುವನೂರು, ಚಿತ್ರದುರ್ಗ ಜಿಲ್ಲೆ-೨೦೧೭

ಉಲ್ಲೇಖ[ಬದಲಾಯಿಸಿ]

  1. https://kn.wikisource.org/wiki/ಮೈಸೂರು_ವಿಶ್ವವಿದ್ಯಾನಿಲಯ_ವಿಶ್ವಕೋಶ/ಮಾನವಿಕ_ಕರ್ಣಾಟಕ
  2. https://vijaykarnataka.indiatimes.com/district/mysuru/book-release-on-april-20/articleshow/46867847.cms
  3. https://www.prajavani.net/amp?params=LzIwMTQvMDUvMjkvMjMzNTg5
  4. https://karnatakasahithyaacademy.org/?page_id=1998 Archived 2019-05-22 ವೇಬ್ಯಾಕ್ ಮೆಷಿನ್ ನಲ್ಲಿ.
  5. m.varthabharati.in/article/2017_12_05/107214