ಮೈಕೆಲ್ ಮಧು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಕೆಲ್‌ ಮಧು
ಜನನ
ಕರ್ನಾಟಕ, ಭಾರತ
ಮರಣ13 ಮೇ 2020(2020-05-13)[೧]
ರಾಷ್ಟ್ರೀಯತೆಭಾರತೀಯ
ಉದ್ಯೋಗಚಲನಚಿತ್ರ ನಟ [೨]


ಮೈಕೆಲ್‌ ಮಧು ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಿದ ಹಾಸ್ಯ ನಟರಾಗಿದ್ದರು .ಅವರು ಕನ್ನಡದ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ.ಕನ್ನಡ ಚಿತ್ರರಂಗದ ಹಲವು ಸ್ಟಾರ್‌ ನಟರ ಜೊತೆ ಅಭಿನಯಿಸುವ ಮೂಲಕ ಮೈಕೆಲ್‌ ಮಧು ಜನಪ್ರಿಯತೆ ಪಡೆದುಕೊಂಡಿದ್ದರು.[೩][೪]

ವೃತ್ತಿ[ಬದಲಾಯಿಸಿ]

ಮೈಕೆಲ್ ಮಧು ಎಂಭತ್ತೈದಕ್ಕೂ ಹೆಚ್ಚು ಕನ್ನಡ ಚಿತ್ರಗಳ ಭಾಗವಾಗಿದ್ದಾರೆ. ನಟ, ನಿರ್ದೇಶಕ ಕಾಶಿನಾಥ್ ಹತ್ತಿರ ಅಭಿನಯ ಅಭಿನಯ ಕಲಿತ ಅವರು. ಹೆಚ್ಚು ಭಿಕ್ಷುಕನ ಪಾತ್ರಗಳ ಹಾಸ್ಯದ ಮೂಲಕ ಜನಪ್ರಿಯರಾಗಿದ್ದವರು. ಸಿಂಗಾರಿ ಬಂಗಾರಿ ಸಿನಿಮಾದಲ್ಲಿ ಮೊದಲು ನಟಿಸಿದ ಮಧು, ಈ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಬಳಿಕ ಉಪೇಂದ್ರ ನಿರ್ದೇಶನದ ಲವ್‌ ಟ್ರೈನಿಂಗ್ ಸಿನಿಮಾದಿಂದ ಜನಪ್ರಿಯರಾದರು.ಚಲನಚಿತ್ರಗಳಲ್ಲಿ ನಟಿಸುವ ಮೊದಲು ಅವರಿಗೆ ನೃತ್ಯದಲ್ಲಿ ಆಸಕ್ತಿ ಇತ್ತು , ನೃತ್ಯ ನಿದೇಶಕರಾಗಲು ಬಯಸಿದ್ದರು .ನೃತ್ಯ ಮಾಡುತ್ತಿರುವದರಿಂದ ಅವರ ಹೆಸರಿನ ಜೊತೆ ಮೈಕೆಲ್ ಸೇರಿಕೊಂಡಿತು

ಚಿತ್ರಗಳು[ಬದಲಾಯಿಸಿ]

  • ಸೂರ್ಯವಂಶ[೫]
  • ಓಂ
  • ಶ್‌
  • ಅಶ್ವಮೇಧ
  • ಮಿನುಗು ತಾರೆ.
  • ಗಾಜನೂರು ಗಂಡು
  • ಯಮ ಲೋಕದಲ್ಲಿ ವೀರಪ್ಪನ್
  • ಸುಪ್ರಭಾತ
  • ಈ ಹೃದಯ ನಿನಗಾಗಿ
  • ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
  • ಪಾಪಿಗಳ ಲೋಕದಲ್ಲಿ.
  • ವಾಲಿ
  • ನೀಲಾಂಬರಿ
  • ತಾಯಿ ಇಲ್ಲದ ತಬ್ಬಲಿ
  • ಫಿಫ್ಟಿ ಫಿಫ್ಟಿ
  • ಪೊಲೀಸ್ ಸ್ಟೋರಿ 3

ನಿಧನ[ಬದಲಾಯಿಸಿ]

ಮಧು ಹೃದಯಾಘಾತದಿಂದ 13-05-2020 ರಂದು ನಿಧನರಾದರು.

ಉಲ್ಲೇಖಗಳು[ಬದಲಾಯಿಸಿ]

  1. "ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮೈಕೆಲ್ ಮಧು ನಿಧನ!". Vijaya Karnataka. Karnataka, India: Vijaya Karnataka. Retrieved 2020-05-13.
  2. "ಮೈಕಲ್ ಮಧು". www.prajavani.net. Retrieved 10 May 2020.
  3. "?DEVRAANE? BANNI MAJA SIGATHE!". chitratara.com. Archived from the original on 2018-06-09.
  4. "ಸ್ಯಾಂಡಲ್ವುಡ್ ಹಾಸ್ಯ ನಟ 'ಮೈಕಲ್ ಮಧು' ಇನ್ನಿಲ್ಲ". kannadaprabha.com/. Retrieved 10 May 2020.
  5. "ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಮೈಕೆಲ್ ಮಧು ನಿಧನ". vijaykarnataka.com. Retrieved 10 May 2020.